ಮೊದಲನೆಯದಾಗಿ, ದೊಡ್ಡ ಪಾತ್ರೆಯಲ್ಲಿ 6 ಕಪ್ ನೀರು, 1 ಟೀಸ್ಪೂನ್ ಎಣ್ಣೆ ಮತ್ತು ½ ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
ನೀರನ್ನು ಕುದಿಸಿ.
ಈಗ, ಬಾಸ್ಮತಿ ಅಕ್ಕಿಯನ್ನು ಸೇರಿಸಿ (20 ನಿಮಿಷ ನೆನೆಸಿದ). ನೀರು ಚೆನ್ನಾಗಿ ಸೋಸುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ನೆನೆಸಿದ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ.
ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷ ಅಥವಾ ಅಕ್ಕಿ ಸಂಪೂರ್ಣವಾಗಿ ಬೇಯುವವರೆಗೆ ಕುದಿಸಿ.
ಅಡುಗೆ ಪ್ರಕ್ರಿಯೆಯನ್ನು ನಿಲ್ಲಿಸಲು ಅಕ್ಕಿಯನ್ನು ಸೋಸಿ ತೆಗೆದು, ಅದಕ್ಕೆ1 ಕಪ್ ತಣ್ಣೀರು ಸುರಿಯಿರಿ. ಸಂಪೂರ್ಣವಾಗಿ ತಂಪಾಗಲು ಬಿಡಿ.
ಈಗ ದೊಡ್ಡ ಕಡಾಯಿಯಲ್ಲಿ 4 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 250 ಗ್ರಾಂ ಅಣಬೆಗಳನ್ನು ಹಾಕಿ.
ಎಣ್ಣೆಯನ್ನು ಏಕರೂಪವಾಗಿ ಎಲ್ಲಾ ಅಣಬೆಗಳಿಗೆ ಲೇಪಿಸುವಂತೆ, 2 ನಿಮಿಷಗಳ ಕಾಲ ಬೆರೆಸಿ ಫ್ರೈ ಮಾಡಿ,.
ಸಿಮ್ಮೆರ್ ನಲ್ಲಿಟ್ಟು, 3 ನಿಮಿಷ ಅಥವಾ ಅಣಬೆಗಳನ್ನು ಚೆನ್ನಾಗಿ ಬೇಯುವವರೆಗೆ ಬೇಯಿಸಿ,.
ಅಣಬೆಗಳನ್ನು ಜಾಸ್ತಿ ಬೇಯಿಸದೆ, ಪಕ್ಕಕ್ಕೆ ಇರಿಸಿ.
ಅದೇ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ 1 ಮೆಣಸಿನಕಾಯಿ, 3 ಬೆಳ್ಳುಳ್ಳಿ ಸೇರಿಸಿ.
ಈಗ ½ ಈರುಳ್ಳಿ, 2 ಟೀಸ್ಪೂನ್ ಸ್ಪ್ರಿಂಗ್ ಈರುಳ್ಳಿ ಸೇರಿಸಿ, ಹೆಚ್ಚಿನ ಉರಿಯಲ್ಲಿ ಸಾಟ್ ಮಾಡಿ.
½ ಕ್ಯಾರೆಟ್, 5 ಬೀನ್ಸ್, ½ ಕ್ಯಾಪ್ಸಿಕಂ ಸೇರಿಸಿ, ಹೆಚ್ಚಿನ ಜ್ವಾಲೆಯ ಮೇಲೆ ಫ್ರೈ ಮಾಡಿ.
ತರಕಾರಿಗಳನ್ನು ಜಾಸ್ತಿ ಬೇಯಿಸಬೇಡಿ.
ಈಗ ಹುರಿದ ಅಣಬೆಗಳು ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ.
ಮಧ್ಯದಲ್ಲಿ ಜಾಗವನ್ನು ಮಾಡಿ, 2 ಟೀಸ್ಪೂನ್ ಸೋಯಾ ಸಾಸ್ ಮತ್ತು 1 ಟೀಸ್ಪೂನ್ ವಿನೆಗರ್ ಸೇರಿಸಿ.
ಚೆನ್ನಾಗಿ ಸೇರಿಸಿ, ಹೆಚ್ಚಿನ ಜ್ವಾಲೆಯ ಮೇಲೆ ಫ್ರೈ ಮಾಡಿ.
ಬೇಯಿಸಿದ ಅನ್ನ, 1 ಟೀಸ್ಪೂನ್ ಕಾಳು ಮೆಣಸು ಪುಡಿ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
ಅನ್ನ ಮುರಿಯದೆ ನಿಧಾನವಾಗಿ ಮಿಶ್ರಣ ಮಾಡಿ.
ಅಂತಿಮವಾಗಿ, ಸ್ಪ್ರಿಂಗ್ ಈರುಳ್ಳಿಯಿಂದ ಅಲಂಕರಿಸಿದ ಮಶ್ರೂಮ್ ಫ್ರೈಡ್ ರೈಸ್ ಅನ್ನು ಆನಂದಿಸಿ.