ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 2 ಮೆಣಸಿನಕಾಯಿ ಮತ್ತು 3 ಬೆಳ್ಳುಳ್ಳಿ ಹಾಕಿ.
ಈಗ 2 ಟೀಸ್ಪೂನ್ ಸ್ಪ್ರಿಂಗ್ ಈರುಳ್ಳಿ, ಹಾಗೂ ½ ಈರುಳ್ಳಿ ಸೇರಿಸಿ ಚೆನ್ನಾಗಿ ಸಾಟ್ ಮಾಡಿ.
ನಂತರ, 1 ಕ್ಯಾರೆಟ್, ½ ಕಪ್ ಎಲೆಕೋಸು, ½ ಕ್ಯಾಪ್ಸಿಕಂ ಮತ್ತು 5 ಬೀನ್ಸ್ ಸೇರಿಸಿ.
3 ನಿಮಿಷಗಳ ಕಾಲ ಅಥವಾ ತರಕಾರಿಗಳು ಸ್ವಲ್ಪ ಕುಗ್ಗುವವರೆಗೆ ಫ್ರೈ ಮಾಡಿ.
ಈಗ 2 ಟೀಸ್ಪೂನ್ ವೀಬಾ ಚಿಲ್ಲಿ ಗಾರ್ಲಿಕ್ ಸಾಸ್ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
ಸಾಸ್ ಚೆನ್ನಾಗಿ ಸಂಯೋಜಿಸುವವರೆಗೆ ಫ್ರೈ ಮಾಡಿ.
4 ಕಪ್ ಬೇಯಿಸಿದ ಅನ್ನ ಸೇರಿಸಿ, ಸಾಸ್ ಚೆನ್ನಾಗಿ ಲೇಪನವಾಗುವವರೆಗೆ ನಿಧಾನವಾಗಿ ಮಿಶ್ರಣ ಮಾಡಿ.
ಅಂತೆಯೇ, 2 ಟೀಸ್ಪೂನ್ ಸ್ಪ್ರಿಂಗ್ ಈರುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಅಂತಿಮವಾಗಿ, ಗೋಬಿ ಮಂಚೂರಿಯನ್ ಗ್ರೇವಿಯೊಂದಿಗೆ ಚಿಲ್ಲಿ ಗಾರ್ಲಿಕ್ ಫ್ರೈಡ್ ರೈಸ್ ಅನ್ನು ಆನಂದಿಸಿ.