Go Back
+ servings
dalgona coffee recipe
Print Pin
No ratings yet

ಡಾಲ್ಗೋನ ಕಾಫಿ ರೆಸಿಪಿ | dalgona coffee | ಡಾಲ್ಗೋನ ಕಾಫಿ 2 ಮಾರ್ಗಗಳು

ಸುಲಭ ಡಾಲ್ಗೊನಾ ಕಾಫಿ ಪಾಕವಿಧಾನ | ಡಾಲ್ಗೊನಾ ಕಾಫಿ 2 ಮಾರ್ಗಗಳು
ಕೋರ್ಸ್ ಪಾನೀಯ
ಪಾಕಪದ್ಧತಿ ಅಂತಾರಾಷ್ಟ್ರೀಯ
ಕೀವರ್ಡ್ ಡಾಲ್ಗೋನ ಕಾಫಿ ರೆಸಿಪಿ
ತಯಾರಿ ಸಮಯ 2 minutes
ಬೀಟಿಂಗ್ ಸಮಯ 8 minutes
ಒಟ್ಟು ಸಮಯ 10 minutes
ಸೇವೆಗಳು 2 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಡಾಲ್ಗೋನ ಕಾಫಿ ಮಿಶ್ರಣಕ್ಕಾಗಿ:

  • ¼ ಕಪ್ ಇನ್ಸ್ಟಂಟ್ ಕಾಫಿ ಪುಡಿ
  • ¼ ಕಪ್ ಸಕ್ಕರೆ
  • 3 ಟೇಬಲ್ಸ್ಪೂನ್ ನೀರು
  • 1 ಟೀಸ್ಪೂನ್ ಕೋಕೋ ಪೌಡರ್ ಚಾಕೊಲೇಟ್ ಪರಿಮಳಕ್ಕಾಗಿ

ಸೇವೆಗಾಗಿ:

  • ಕೆಲವು ಐಸ್ ಕ್ಯೂಬ್ ಗಳು
  • 2 ಕಪ್ ಹಾಲು ತಣ್ಣಗಿರುವುದು

ಸೂಚನೆಗಳು

ಡಾಲ್ಗೋನ ಮಿಶ್ರಣ ತಯಾರಿಕೆ:

  • ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ ¼ ಕಪ್ ಇನ್ಸ್ಟಂಟ್ ಕಾಫಿ ಪುಡಿ ಮತ್ತು ¼ ಕಪ್ ಸಕ್ಕರೆ ತೆಗೆದುಕೊಳ್ಳಿ.
  • ಈಗ, 3 ಟೀಸ್ಪೂನ್ ಬಿಸಿನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  • ಈಗ ಬೀಟರ್ ಅಥವಾ ವಿಪ್ಪರ್ ಬಳಸಿ, ಕಡಿಮೆ ವೇಗದಲ್ಲಿ ಬೀಟ್ ಮಾಡಿ.
  • ಒಂದೇ ದಿಕ್ಕಿನಲ್ಲಿ ಬೀಟ್ ಮಾಡಲು ಖಚಿತಪಡಿಸಿಕೊಳ್ಳಿ, ಇದರಿಂದ ಗಾಳಿಯು ಚೆನ್ನಾಗಿ ಸಂಯೋಜಿಸುತ್ತದೆ.
  • ಮಿಶ್ರಣವು ಹಗುರವಾಗುವವರೆಗೆ ಹಾಗೂ ದಪ್ಪವಾಗುವವರೆಗೆ ಬೀಟ್ ಮಾಡುವುದನ್ನು ಮುಂದುವರಿಸಿ.
  • 7-8 ನಿಮಿಷಗಳ ನಂತರ ಮಿಶ್ರಣವು ಕೆನೆ ಬಣ್ಣಕ್ಕೆ ತಿರುಗಿ ನಯವಾದ ರೇಷ್ಮೆಯಂತಹ ವಿನ್ಯಾಸವನ್ನು ಹೊಂದುತ್ತದೆ.
  • ಅಂತಿಮವಾಗಿ, ಡಾಲ್ಗೋನಾ ಮಿಶ್ರಣವು ಸಿದ್ಧವಾಗಿದೆ, ಪಕ್ಕಕ್ಕೆ ಇರಿಸಿ.

ಡಾಲ್ಗೊನಾ ಕಾಫಿ ತಯಾರಿಕೆ:

  • ದೊಡ್ಡ ಗಾಜಿನಲ್ಲಿ ಕೆಲವು ಐಸ್ ಕ್ಯೂಬ್ ಗಳನ್ನು ಸೇರಿಸಿ.
  • 1 ಕಪ್ ಶೀತಲವಾಗಿರುವ ಹಾಲನ್ನು ಸುರಿಯಿರಿ, ¾ ಗ್ಲಾಸ್ ತುಂಬಿಸಿರಿ.
  • ತಯಾರಾದ 2 ಟೀಸ್ಪೂನ್ ಡಾಲ್ಗೋನ ಮಿಶ್ರಣವನ್ನು ನಿಧಾನವಾಗಿ ಹಾಕಿ.
  • ಏಕರೂಪವಾಗಿ ಹರಡಿ ಇದರಿಂದ ಅದು ಸಂಪೂರ್ಣ ಗಾಜನ್ನು ಆವರಿಸುತ್ತದೆ.
  • ಅಂತಿಮವಾಗಿ, ಕಾಫಿ ಪುಡಿಯನ್ನು ಸಿಂಪಡಿಸಿ ಮತ್ತು ಡಾಲ್ಗೋನಾ ಕಾಫಿ ಆನಂದಿಸಲು ಸಿದ್ಧವಾಗಿದೆ.

ಡಾಲ್ಗೋನ ಚೊಕೊ ಕಾಫಿ ತಯಾರಿಕೆ:

  • ಮೊದಲನೆಯದಾಗಿ, ಸಣ್ಣ ಬಟ್ಟಲಿನಲ್ಲಿ 2 ಟೀಸ್ಪೂನ್ ತಯಾರಿಸಿದ ಡಾಲ್ಗೋನ ಮಿಶ್ರಣವನ್ನು ತೆಗೆದುಕೊಳ್ಳಿ.
  • ಒಂದು ಚಮಚ ಕೋಕೋ ಪೌಡರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಮಿಶ್ರಣವು ನಯವಾದ ಮತ್ತು ರೇಷ್ಮೆಯಾಗುವವರೆಗೆ ಮಿಶ್ರಣ ಮಾಡಿ. ಪಕ್ಕಕ್ಕೆ ಇರಿಸಿ.
  • ದೊಡ್ಡ ಗಾಜಿನಲ್ಲಿ ಕೆಲವು ಐಸ್ ಕ್ಯೂಬ್ ಗಳನ್ನು ಸೇರಿಸಿ.
  • 1 ಕಪ್ ಶೀತಲವಾಗಿರುವ ಹಾಲನ್ನು ಸುರಿಯಿರಿ, ¾ ಗ್ಲಾಸ್ ತುಂಬಿಸಿರಿ.
  • ತಯಾರಾದ ಡಾಲ್ಗೋನ ಕೋಕೋ ಮಿಶ್ರಣವನ್ನು 2 ಟೀಸ್ಪೂನ್ ನಿಧಾನವಾಗಿ ಹಾಕಿರಿ.
  • ಏಕರೂಪವಾಗಿ ಹರಡಿ, ಇದರಿಂದ ಅದು ಸಂಪೂರ್ಣ ಗಾಜನ್ನು ಆವರಿಸುತ್ತದೆ.
  • ಅಂತಿಮವಾಗಿ, ಕೋಕೋ ಪೌಡರ್ ಸಿಂಪಡಿಸಿ ಮತ್ತು ಡಾಲ್ಗೊನಾ ಚಾಕೊಲೇಟ್ ಕಾಫಿ ಆನಂದಿಸಲು ಸಿದ್ಧವಾಗಿದೆ.