ಮೊದಲನೆಯದಾಗಿ, ದೊಡ್ಡ ಮಿಶ್ರಣ ಬಟ್ಟಲಿನಲ್ಲಿ 1 ಕಪ್ ಬೆಚ್ಚಗಿನ ಹಾಲು ತೆಗೆದುಕೊಳ್ಳಿ. ನೀವು ವೇಗನ್ ಆಗಿದ್ದರೆ ಬೆಚ್ಚಗಿನ ನೀರಿನಿಂದ ಬದಲಾಯಿಸಿ.
2 ಟೇಬಲ್ಸ್ಪೂನ್ ಸಕ್ಕರೆ ಮತ್ತು ½ ಟೀಸ್ಪೂನ್ ಒಣ ಯೀಸ್ಟ್ ಸೇರಿಸಿ. ಚೆನ್ನಾಗಿ ಬೆರೆಸಿ.
ವಿಶ್ರಮಿಸಲು ಬಿಡಿ ಮತ್ತು ಯೀಸ್ಟ್ ಅನ್ನು ಸಕ್ರಿಯಗೊಳಿಸಲು ಅನುಮತಿಸಿ.
ಮತ್ತಷ್ಟು 3 ಕಪ್ ಗೋಧಿ ಹಿಟ್ಟು, 1 ಟೀಸ್ಪೂನ್ ಉಪ್ಪು ಮತ್ತು 2 ಟೇಬಲ್ಸ್ಪೂನ್ ಎಣ್ಣೆಯನ್ನು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
ಹೆಚ್ಚುವರಿಯಾಗಿ, ½ ಕಪ್ ನೀರು ಸೇರಿಸಿ ಮತ್ತು 5 ನಿಮಿಷ ನಾದಿಕೊಳ್ಳಿ.
ಹಿಟ್ಟನ್ನು ಸಮತಟ್ಟಾದ ಮೇಲ್ಮೈಯಲ್ಲಿ ತೆಗೆದುಕೊಂಡು ಅಂಟದಂತೆ ತಡೆಯಲು ಸ್ವಲ್ಪ ಗೋಧಿ ಹಿಟ್ಟನ್ನು ಸಿಂಪಡಿಸಿ.
ಲೈಟ್ ಮತ್ತು ಛೀವಿ ಆಗುವವರೆಗೆ ಹಿಟ್ಟು ನಾದುವುದನ್ನು ಮುಂದುವರಿಸಿ. ಹಿಟ್ಟನ್ನು ಮಡಚಿ ಚೆನ್ನಾಗಿ ಟಕ್ ಮಾಡಿ.
ಬೆರೆಸಿದ ಹಿಟ್ಟನ್ನು ಗ್ರೀಸ್ ಮಾಡಿದ ಬಟ್ಟಲಿನಲ್ಲಿ ಇರಿಸಿ. ಕ್ಲಿಂಗ್ ರಾಪ್ ಅಥವಾ ತೇವವಾದ ಬಟ್ಟೆಯಿಂದ ಮುಚ್ಚಿ 2 ಗಂಟೆಗಳ ಕಾಲ ವಿಶ್ರಮಿಸಲು ಬಿಡಿ.
2 ಗಂಟೆಗಳ ನಂತರ, ಹಿಟ್ಟಿನ ಗಾತ್ರವು ದ್ವಿಗುಣಗೊಳ್ಳುತ್ತದೆ.
ಹಿಟ್ಟನ್ನು ಹೊರಗೆ ತೆಗೆದುಕೊಂಡು ಮೂಲೆಗಳಿಂದ ಮಡಿಸುವ ಮೂಲಕ ಬೆರೆಸಿಕೊಳ್ಳಿ.
ಸಿಲಿಂಡರಾಕಾರದ ಆಕಾರಕ್ಕೆ ಸುತ್ತಿಕೊಳ್ಳಿ ಮತ್ತು ಸ್ವಲ್ಪ ಚಪ್ಪಟೆ ಮಾಡಿ.
ಹಿಟ್ಟನ್ನು ಮಡಚಿ ಬಿಗಿಯಾಗಿ ಸುತ್ತಿಕೊಳ್ಳಿ.
ಹಿಟ್ಟನ್ನು ಗ್ರೀಸ್ ಮಾಡಿದ ಬ್ರೆಡ್ ಲೋಫ್ ಪ್ಯಾನ್‌ಗೆ ಇರಿಸಿ ಮತ್ತು ಎಲ್ಲಾ ಕಡೆಯಿಂದ ಒತ್ತಿರಿ. ನಾನು ಸ್ಮಿತ್ + ನೊಬೆಲ್ - 21x11cm ನಿಂದ ಬ್ರೆಡ್ ಲೋಫ್ ಪ್ಯಾನ್ ಅನ್ನು ಬಳಸಿದ್ದೇನೆ
ಮುಚ್ಚಿ ಮತ್ತು 30 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ ಅಥವಾ ಹಿಟ್ಟನ್ನು ಲೋಫ್ ಪ್ಯಾನ್‌ಗಿಂತ ಒಂದು ಇಂಚು ಏರಿಕೆಯಾಗುವವರೆಗೆ.
ಬೇಯಿಸುವಾಗ ಗೋಲ್ಡನ್ ಬ್ರೌನ್ ಬಣ್ಣವನ್ನು ಪಡೆಯಲು ಬ್ರೆಡ್ ಹಿಟ್ಟನ್ನು ಹಾಲಿನೊಂದಿಗೆ ಬ್ರಷ್ ಮಾಡಿ.
ಬ್ರೆಡ್ ಲೋಫ್ ಪ್ಯಾನ್ ಅನ್ನು ಪ್ರಿ ಹೀಟೆಡ್ ಓವೆನ್ ನಲ್ಲಿ ಇರಿಸಿ ಮತ್ತು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 30 ನಿಮಿಷಗಳ ಕಾಲ ಬೇಕ್ ಮಾಡಿ.
ಮೃದು ಮತ್ತು ಹೊಳೆಯುವ ಕ್ರಸ್ಟ್ ಆಗಿ ಮಾಡಲು ಬ್ರೆಡ್ ಮೇಲೆ ಒಂದು ಟೀಸ್ಪೂನ್ ಬೆಣ್ಣೆಯನ್ನು ಉಜ್ಜಿಕೊಳ್ಳಿ.
ಪ್ಯಾನ್‌ನಿಂದ ತಕ್ಷಣ ಕೂಲಿಂಗ್ ರ್ಯಾಕ್ ಗೆ ತೆಗೆದುಹಾಕಿ. ಕತ್ತರಿಸುವ ಮೊದಲು ಕನಿಷ್ಠ10 ನಿಮಿಷಗಳಾದರೂ ಅದನ್ನು ತಣ್ಣಗಾಗಲು ಬಿಡಿ.
ಅಂತಿಮವಾಗಿ, ಸಂಪೂರ್ಣ ಗೋಧಿ ಬ್ರೆಡ್ ಅಥವಾ ಅಟ್ಟಾ ಬ್ರೆಡ್ ಅನ್ನು ಜಾಮ್‌ನೊಂದಿಗೆ ಬಡಿಸಿ ಅಥವಾ ಸ್ಯಾಂಡ್‌ವಿಚ್ ಮಾಡಿ.