ಮೊದಲಿಗೆ, ದೊಡ್ಡ ಪಾತ್ರದಲ್ಲಿ 1 ಕಪ್ ನೀರು, 2 ಟೊಮೆಟೊ, 2 ಬೆಳ್ಳುಳ್ಳಿ ಮತ್ತು 1 ಇಂಚಿನ ಶುಂಠಿ ತೆಗೆದುಕೊಳ್ಳಿ.
2 ಏಲಕ್ಕಿ, 4 ಲವಂಗಗಳು, 15 ಗೋಡಂಬಿ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
10 ನಿಮಿಷಗಳ ಕಾಲ ಅಥವಾ ಟೊಮೆಟೊಗಳು ಮೃದು ಮತ್ತು ಮೆತ್ತಗೆ ಆಗುವವವರೆಗೆ ಮುಚ್ಚಿ ಕುದಿಸಿ.
ಮಿಶ್ರಣವನ್ನು ಸಂಪೂರ್ಣವಾಗಿ ತಂಪಾಗಿಸಿ ಮತ್ತು ಪ್ಯೂರೀ ತಯಾರಿಸಲು ರುಬ್ಬಿಕೊಳ್ಳಿ. ಪಕ್ಕಕ್ಕೆ ಇರಿಸಿ.
ಈಗ ದೊಡ್ಡ ಕಡೈ ನಲ್ಲಿ 2 ಟೀಸ್ಪೂನ್ ಬೆಣ್ಣೆ ಮತ್ತು 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ.
1 ಬೇ ಎಲೆ, 1 ಇಂಚಿನ ದಾಲ್ಚಿನ್ನಿ, 1 ಮೆಣಸಿನ ಕಾಯಿ ಮತ್ತು 1 ಟೀಸ್ಪೂನ್ ಕಸೂರಿ ಮೇಥಿ ಸೇರಿಸಿ ಮರಿಮಳ ಬರುವವರೆಗೆ ಸಾಟ್ ಮಾಡಿ.
ಇದಲ್ಲದೆ, 1 ಈರುಳ್ಳಿ ಸೇರಿಸಿ ಈರುಳ್ಳಿ ಗೋಲ್ಡನ್ ಬ್ರೌನ್ ಗೆ ತಿರುಗುವವರೆಗೂ ಸಾಟ್ ಮಾಡಿ.
ಜ್ವಾಲೆ ಕಡಿಮೆ ಇಟ್ಟು ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಕೊತ್ತಂಬರಿ ಪೌಡರ್ ಮತ್ತು ½ ಟೀಸ್ಪೂನ್ ಜೀರಾ ಪೌಡರ್ ಸೇರಿಸಿ. ಮಸಾಲೆಗಳು ಪರಿಮಳ ಬರುವ ತನಕ ಸಾಟ್ ಮಾಡಿ.
ತಯಾರಾದ ಟೊಮೆಟೊ ಪ್ಯೂರೀ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಮುಚ್ಚಿ 10 ನಿಮಿಷ ಬೇಯಿಸಿ, ಸುಟ್ಟುಹೋಗದಂತೆ ತಡೆಗಟ್ಟಲು ಕೈ ಆಡಿಸುತ್ತಾ ಇರಿ. ಮಸಾಲಾ ಪೇಸ್ಟ್ನಿಂದ ಎಣ್ಣೆ ಬಿಡುಗಡೆ ಆಗುವವರೆಗೂ ಕುಕ್ ಮಾಡಿ.
1 ಕಪ್ ನೀರು, ¼ ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿರುವಂತೆ ಸ್ಥಿರತೆ ಹೊಂದಿಸಿ.
ಇದಲ್ಲದೆ, 15 ಘನಗಳು ಪನೀರ್ ಮತ್ತು 2 ಟೇಬಲ್ಸ್ಪೂನ್ ತುರಿದ ಪನೀರ್ ಸೇರಿಸಿ. ಚೆನ್ನಾಗಿ ಬೆರೆಸಿ.
ಮುಚ್ಚಿ 5 ನಿಮಿಷಗಳ ಕಾಲ ಅಥವಾ ಪನೀರ್ ಪರಿಮಳವನ್ನು ಹೀರಿಕೊಳ್ಳುವವರೆಗೆ ಸಿಮ್ಮರ್ ನಲ್ಲಿಡಿ.
ಜ್ವಾಲೆಯನ್ನು ಆಫ್ ಮಾಡಿ ಮತ್ತು 2 ಟೇಬಲ್ಸ್ಪೂನ್ ಕೆನೆ ಸೇರಿಸಿ. ಕೆನೆ ಚೆನ್ನಾಗಿ ಸಂಯೋಜಿಸಲ್ಪಡುವ ತನಕ ಮಿಶ್ರಣ ಮಾಡಿ.
ಹೆಚ್ಚುವರಿಯಾಗಿ, ¼ ಟೀಸ್ಪೂನ್ ಗರಂ ಮಸಾಲಾ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
ಅಂತಿಮವಾಗಿ, ರೋಟಿ / ಚಪಾತಿಯೊಂದಿಗೆ ಪನೀರ್ ಲಬಾಬ್ದಾರ್ ಅನ್ನು ಆನಂದಿಸಿ.