Go Back
+ servings
panko breadcrumbs
Print Pin
5 from 14 votes

ಮನೆಯಲ್ಲಿ ಬ್ರೆಡ್ ಕ್ರಂಬ್ಸ್ ರೆಸಿಪಿ | homemade bread crumbs in kannada

ಸುಲಭ ಮನೆಯಲ್ಲಿ ಬ್ರೆಡ್ ಕ್ರಂಬ್ಸ್ ರೆಸಿಪಿ | ಪ್ಯಾಂಕೋ ಬ್ರೆಡ್ ಕ್ರಂಬ್ಸ್
ಕೋರ್ಸ್ ಅಡುಗೆ ಸಲಹೆಗಳು
ಪಾಕಪದ್ಧತಿ ಭಾರತೀಯ
ಕೀವರ್ಡ್ ಮನೆಯಲ್ಲಿ ಬ್ರೆಡ್ ಕ್ರಂಬ್ಸ್ ರೆಸಿಪಿ
ತಯಾರಿ ಸಮಯ 5 minutes
ಅಡುಗೆ ಸಮಯ 5 minutes
ಒಟ್ಟು ಸಮಯ 10 minutes
ಸೇವೆಗಳು 1 ಬಾಕ್ಸ್
ಲೇಖಕ HEBBARS KITCHEN

ಪದಾರ್ಥಗಳು

  • 4 ಸ್ಲೈಸ್ ಬ್ರೆಡ್ (ಬಿಳಿ ಅಥವಾ ಕಂದು)
  • 6 ರಸ್ಕ್
  • 1 ಕಪ್ ಕಾರ್ನ್ ಫ್ಲೇಕ್ಸ್
  • 1 ಮ್ಯಾಗಿ ನೂಡಲ್ಸ್

ಸೂಚನೆಗಳು

ಬ್ರೆಡ್ ಉಪಯೋಗಿಸಿ ಬ್ರೆಡ್ ಕ್ರಂಬ್ಸ್ ಮಾಡುವುದು ಹೇಗೆ:

  • ಮೊದಲಿಗೆ, ಫುಡ್ ಪ್ರೊಸೆಸ್ಸರ್ ನಲ್ಲಿ 4 ಬ್ರೆಡ್ನ ಸ್ಲೈಸ್ ಗಳನ್ನೂ ತೆಗೆದುಕೊಳ್ಳಿ. ನೀವು ಉಳಿದ ಬಿಳಿ ಅಥವಾ ಕಂದು ಬ್ರೆಡ್ ಅನ್ನು ಬಳಸಬಹುದು.
  • ಫುಡ್ ಪ್ರೊಸೆಸರ್ನಲ್ಲಿ ರುಬ್ಬಲು ಸಹಾಯ ಮಾಡುವಂತೆ ತುಣುಕುಗಳಾಗಿ ಕತ್ತರಿಸಿ.
  • ಅದನ್ನು ಒರಟಾದ ವಿನ್ಯಾಸಕ್ಕೆ ಪೌಡರ್ ಮಾಡಿಕೊಳ್ಳಿ. ನೀವು ಮಿಕ್ಸಿಯನ್ನು ಬಳಸುತ್ತಿದ್ದರೆ, ಪೇಸ್ಟ್ ಆಗುವುದನ್ನು ತಪ್ಪಿಸಲು ಪಲ್ಸ್ ಮಾಡಿ ರುಬ್ಬಿಕೊಳ್ಳಿ.
  • ಪ್ಯಾನ್ ಗೆ ಕ್ರಂಬ್ಸ್ ಅನ್ನು ವರ್ಗಾಯಿಸಿ, ಕಡಿಮೆ ಜ್ವಾಲೆಯ ಮೇಲೆ ರೋಸ್ಟ್ ಮಾಡಿ
  • ಬ್ರೆಡ್ ಕ್ರಂಬ್ಸ್ ಗಳನ್ನು ಗರಿಗರಿಯಾಗುವ ತನಕ ರೋಸ್ಟ್ ಮಾಡಿ. ಇದು ಬ್ರೆಡ್ ಕ್ರಂಬ್ಸ್ ಅನ್ನು ತುಂಬಾ ದಿನ ಉಳಿಯಲು ಸಹಾಯ ಮಾಡುತ್ತದೆ.
  • ಸಂಪೂರ್ಣವಾಗಿ ತಣ್ಣಗಾಗಿಸಿ, ಮತ್ತು ಅಂತಿಮವಾಗಿ, ಬ್ರೆಡ್ನಿಂದ ತಯಾರಿಸಲಾದ ಬ್ರೆಡ್ ಕ್ರಂಬ್ಸ್ ಸಿದ್ಧವಾಗಿದೆ. ಗಾಳಿಯಾಡದ ಡಬ್ಬದಲ್ಲಿ ಇದನ್ನು ಒಂದು ವಾರದವರೆಗೆ ಸಂಗ್ರಹಿಸಬಹುದು.

ರಸ್ಕ್ ಬಳಸಿ ಬ್ರೆಡ್ ಕ್ರಂಬ್ಸ್ ಹೇಗೆ ತಯಾರಿಸುವುದು:

  • ಮೊದಲಿಗೆ, ಫುಡ್ ಪ್ರೊಸೆಸ್ಸರ್ ನಲ್ಲಿ 6 ರಸ್ಕ್ ಗಳನ್ನು ತುಂಡರಿಸಿ ತೆಗೆದುಕೊಳ್ಳಿ.
  • ಅದನ್ನು ಒರಟಾದ ವಿನ್ಯಾಸಕ್ಕೆ ಪೌಡರ್ ಮಾಡಿಕೊಳ್ಳಿ. ನೀವು ಮಿಕ್ಸಿಯನ್ನು ಬಳಸುತ್ತಿದ್ದರೆ, ಪೇಸ್ಟ್ ಆಗುವುದನ್ನು ತಪ್ಪಿಸಲು ಪಲ್ಸ್ ಮಾಡಿ ರುಬ್ಬಿಕೊಳ್ಳಿ.
  • ಅಂತಿಮವಾಗಿ, ರಸ್ಕ್ನಿಂದ ತಯಾರಿಸಲಾದ ರಸ್ಕ್ ಕ್ರಂಬ್ಸ್ ಸಿದ್ಧವಾಗಿದೆ. ಗಾಳಿಯಾಡದ ಡಬ್ಬದಲ್ಲಿ ಇದನ್ನು ಒಂದು ತಿಂಗಳವರೆಗೆ ಸಂಗ್ರಹಿಸಬಹುದು.

ಕಾರ್ನ್ ಫ್ಲೇಕ್ಸ್ ಬಳಸಿ ಬ್ರೆಡ್ ಕ್ರಂಬ್ಸ್ ತಯಾರಿಸುವುದು ಹೇಗೆ:

  • ಮೊದಲಿಗೆ, ಫುಡ್ ಪ್ರೋಸೆಸ್ಸರ್ ನಲ್ಲಿ 1 ಕಪ್ ಕಾರ್ನ್ ಫ್ಲೇಕ್ಸ್ ತೆಗೆದುಕೊಳ್ಳಿ.
  • ಅದನ್ನು ಒರಟಾದ ವಿನ್ಯಾಸಕ್ಕೆ ಪೌಡರ್ ಮಾಡಿಕೊಳ್ಳಿ. ನೀವು ಮಿಕ್ಸಿಯನ್ನು ಬಳಸುತ್ತಿದ್ದರೆ, ಪೇಸ್ಟ್ ಆಗುವುದನ್ನು ತಪ್ಪಿಸಲು ಪಲ್ಸ್ ಮಾಡಿ ರುಬ್ಬಿಕೊಳ್ಳಿ.
  • ಅಂತಿಮವಾಗಿ, ಕಾರ್ನ್ ಫ್ಲೇಕ್ಸ್ ಗಳಿಂದ ತಯಾರಿಸಲಾದ ಕಾರ್ನ್ ಫ್ಲೇಕ್ಸ್ ಕ್ರಂಬ್ಸ್ ಸಿದ್ಧವಾಗಿದೆ. ಗಾಳಿಯಾಡದ ಡಬ್ಬದಲ್ಲಿ ನೀವು ಇದನ್ನು ಒಂದು ತಿಂಗಳವರೆಗೆ ಸಂಗ್ರಹಿಸಬಹುದು.

ಮ್ಯಾಗಿ ಬಳಸಿಕೊಂಡು ಬ್ರೆಡ್ ಕ್ರಂಬ್ಸ್ ತಯಾರಿಸುವುದು ಹೇಗೆ:

  • ಮೊದಲಿಗೆ, ಫುಡ್ ಪ್ರೊಸೆಸ್ಸರ್ ನಲ್ಲಿ 1 ಪ್ಯಾಕ್ ಮ್ಯಾಗಿ ತೆಗೆದುಕೊಳ್ಳಿ.
  • ಅದನ್ನು ಒರಟಾದ ವಿನ್ಯಾಸಕ್ಕೆ ಪೌಡರ್ ಮಾಡಿಕೊಳ್ಳಿ. ನೀವು ಮಿಕ್ಸಿಯನ್ನು ಬಳಸುತ್ತಿದ್ದರೆ, ಪೇಸ್ಟ್ ಆಗುವುದನ್ನು ತಪ್ಪಿಸಲು ಪಲ್ಸ್ ಮಾಡಿ ರುಬ್ಬಿಕೊಳ್ಳಿ.
  • ಅಂತಿಮವಾಗಿ, ಮ್ಯಾಗಿಯಿಂದ ತಯಾರಿಸಲಾದ ಮ್ಯಾಗಿ ಕ್ರಂಬ್ಸ್ ಸಿದ್ಧವಾಗಿದೆ. ಗಾಳಿಯಾಡದ ಡಬ್ಬದಲ್ಲಿ ಇದನ್ನು ಒಂದು ತಿಂಗಳವರೆಗೆ ಸಂಗ್ರಹಿಸಬಹುದು.