Go Back
+ servings
Meetha Pani, Jeera Pani, Lahsun Pani, Imli ka Pani
Print Pin
No ratings yet

6 ವಿಧದ ಪಾನಿ - ಪಾನಿ ಪುರಿಗೆ | 6 Types of Pani for Pani Puri in kannada

ಸುಲಭ 6 ವಿಧದ ಪಾನಿ - ಪಾನಿ ಪುರಿ ಪಾಕವಿಧಾನಕ್ಕಾಗಿ | ಮೀಠಾ ಪಾನಿ, ಜೀರಾ ಪಾನಿ, ಲಹ್ಸುನ್ ಪಾನಿ, ಇಮ್ಲಿ ಕಾ ಪಾನಿ
ಕೋರ್ಸ್ ಚಾಟ್
ಪಾಕಪದ್ಧತಿ ಭಾರತೀಯ ರಸ್ತೆ ಆಹಾರ
ಕೀವರ್ಡ್ 6 ವಿಧದ ಪಾನಿ - ಪಾನಿ ಪುರಿಗೆ
ತಯಾರಿ ಸಮಯ 5 minutes
ಅಡುಗೆ ಸಮಯ 10 minutes
ಒಟ್ಟು ಸಮಯ 15 minutes
ಸೇವೆಗಳು 6 ಸೇವೆಗಳು
ಲೇಖಕ HEBBARS KITCHEN

ಪದಾರ್ಥಗಳು

ಲಹ್ಸುನ್ ಪಾನಿಗಾಗಿ:

  • 8 ಎಸಳು ಬೆಳ್ಳುಳ್ಳಿ
  • 1 ಟೇಬಲ್ಸ್ಪೂನ್ ಮೆಣಸಿನ ಪುಡಿ
  • 1 ಟೀಸ್ಪೂನ್ ಚಾಟ್ ಮಸಾಲಾ
  • ½ ಟೀಸ್ಪೂನ್ ಜೀರಿಗೆ ಪುಡಿ
  • ½ ಟೀಸ್ಪೂನ್ ಕಾಲಾ ನಮಕ್
  • ½ ಟೀಸ್ಪೂನ್ ಉಪ್ಪು
  • ½ ನಿಂಬೆಹಣ್ಣು
  • 4 ಕಪ್ ನೀರು

ತೀಖಾ ಪಾನಿಗಾಗಿ:

  • 1 ಕಪ್ ಕೊತ್ತಂಬರಿ ಸೊಪ್ಪು
  • ½ ಕಪ್ ಪುದೀನ
  • 1 ಇಂಚು ಶುಂಠಿ
  • 2 ಮೆಣಸಿನಕಾಯಿ
  • ¼ ಕಪ್ ಹುಣಿಸೇಹಣ್ಣಿನ ತಿರುಳು
  • 1 ಟೀಸ್ಪೂನ್ ಚಾಟ್ ಮಸಾಲಾ
  • ½ ಟೀಸ್ಪೂನ್ ಜೀರಿಗೆ ಪುಡಿ
  • ಚಿಟಿಕೆ ಹಿಂಗ್
  • ½ ಟೀಸ್ಪೂನ್ ಉಪ್ಪು
  • 4 ಕಪ್ ನೀರು

ಜೀರಾ ಪಾನಿಗಾಗಿ:

  • 2 ಟೇಬಲ್ಸ್ಪೂನ್ ಜೀರಿಗೆ
  • ½ ಟೀಸ್ಪೂನ್ ಕಾಳು ಮೆಣಸು
  • 1 ಟೀಸ್ಪೂನ್ ಚಾಟ್ ಮಸಾಲಾ
  • 3 ಟೇಬಲ್ಸ್ಪೂನ್ ಪುದೀನ
  • 1 ಮೆಣಸಿನಕಾಯಿ
  • ½ ನಿಂಬೆಹಣ್ಣು
  • 4 ಕಪ್ ನೀರು

ಹಿಂಗ್ ಪಾನಿಗಾಗಿ:

  • ¾ ಟೀಸ್ಪೂನ್ ಹಿಂಗ್
  • ¼ ಕಪ್ ಹುಣಿಸೇಹಣ್ಣಿನ ತಿರುಳು
  • 1 ಟೀಸ್ಪೂನ್ ಬೆಲ್ಲ
  • ½ ಟೀಸ್ಪೂನ್ ಕಾಲಾ ನಮಕ್
  • 1 ಟೀಸ್ಪೂನ್ ಚಾಟ್ ಮಸಾಲಾ
  • ½ ಟೀಸ್ಪೂನ್ ಮೆಣಸಿನ ಪುಡಿ
  • ½ ಟೀಸ್ಪೂನ್ ಉಪ್ಪು
  • 4 ಕಪ್ ನೀರು

ಆಮ್ಚೂರ್ ಪಾನಿಗೆ:

  • 2 ಟೇಬಲ್ಸ್ಪೂನ್ ಆಮ್ಚೂರ್
  • ½ ಕಪ್ ಕೊತ್ತಂಬರಿ ಸೊಪ್ಪು
  • 1 ಮೆಣಸಿನಕಾಯಿ
  • 1 ಟೀಸ್ಪೂನ್ ಚಾಟ್ ಮಸಾಲಾ
  • ½ ಟೀಸ್ಪೂನ್ ಕಾಲಾ ನಮಕ್
  • ½ ಟೀಸ್ಪೂನ್ ಉಪ್ಪು
  • 4 ಕಪ್ ನೀರು

ಮೀಠಾ ಪಾನಿಗಾಗಿ:

  • ಕಪ್ ಹುಣಿಸೇಹಣ್ಣಿನ ತಿರುಳು
  • 1 ಟೇಬಲ್ಸ್ಪೂನ್ ಬೆಲ್ಲ
  • 1 ಟೀಸ್ಪೂನ್ ಚಾಟ್ ಮಸಾಲಾ
  • ½ ಟೀಸ್ಪೂನ್ ಜೀರಿಗೆ ಪುಡಿ
  • ½ ಟೀಸ್ಪೂನ್ ಮೆಣಸಿನ ಪುಡಿ
  • ½ ಟೀಸ್ಪೂನ್ ಕಾಲಾ ನಮಕ್
  • ½ ಟೀಸ್ಪೂನ್ ಉಪ್ಪು
  • ಚಿಟಿಕೆ ಹಿಂಗ್
  • 4 ಕಪ್ ನೀರು

ಸೂಚನೆಗಳು

ಲಹ್ಸುನ್ ಪಾನಿ ಮಾಡುವುದು ಹೇಗೆ:

  • ಮೊದಲಿಗೆ, ಒಂದು ಮಿಕ್ಸರ್ ಜಾರ್ ನಲ್ಲಿ 8 ಎಸಳು ಬೆಳ್ಳುಳ್ಳಿ, 1 ಟೇಬಲ್ಸ್ಪೂನ್ ಮೆಣಸಿನ ಪುಡಿ, 1 ಟೀಸ್ಪೂನ್ ಚಾಟ್ ಮಸಾಲಾ, ½ ಟೀಸ್ಪೂನ್ ಜೀರಿಗೆ ಪುಡಿ ಮತ್ತು ½ ಟೀಸ್ಪೂನ್ ಕಾಲಾ ನಮಕ್ ತೆಗೆದುಕೊಳ್ಳಿ.
  • ಅಲ್ಲದೆ, ½ ಟೀಸ್ಪೂನ್ ಉಪ್ಪು ಮತ್ತು ½ ನಿಂಬೆಹಣ್ಣನ್ನು ಸೇರಿಸಿ.
  • ಅಗತ್ಯವಿರುವಷ್ಟು ನೀರನ್ನು ಸೇರಿಸಿ ನಯವಾದ ಪೇಸ್ಟ್ ಗೆ ರುಬ್ಬಿಕೊಳ್ಳಿ.
  • ಬೆಳ್ಳುಳ್ಳಿ ಪೇಸ್ಟ್ ಅನ್ನು ಬೌಲ್ ಗೆ ವರ್ಗಾಯಿಸಿ ಮತ್ತು 4 ಕಪ್ ನೀರನ್ನು ಸೇರಿಸಿ.
  • ಅಂತಿಮವಾಗಿ, ಲಹ್ಸುನ್ ಪಾನಿ ಪುರಿ ಪುರಿಯೊಂದಿಗೆ ಆನಂದಿಸಲು ಸಿದ್ಧವಾಗಿದೆ.

ತೀಖಾ ಪಾನಿ ಮಾಡುವುದು ಹೇಗೆ:

  • ಮೊದಲಿಗೆ, ಮಿಕ್ಸರ್ ಜಾರ್ ನಲ್ಲಿ 1 ಕಪ್ ಕೊತ್ತಂಬರಿ ಸೊಪ್ಪು, ½ ಕಪ್ ಪುದೀನ, 1 ಇಂಚು ಶುಂಠಿ ಮತ್ತು 2 ಮೆಣಸಿನಕಾಯಿಯನ್ನು ತೆಗೆದುಕೊಳ್ಳಿ.
  • ಅಲ್ಲದೆ, ¼ ಕಪ್ ಹುಣಿಸೇಹಣ್ಣಿನ ತಿರುಳು, 1 ಟೀಸ್ಪೂನ್ ಚಾಟ್ ಮಸಾಲಾ, ½ ಟೀಸ್ಪೂನ್ ಜೀರಿಗೆ ಪುಡಿ, ಚಿಟಿಕೆ ಹಿಂಗ್ ಮತ್ತು ½ ಟೀಸ್ಪೂನ್ ಉಪ್ಪನ್ನು ಸೇರಿಸಿ.
  • ಅಗತ್ಯವಿರುವಷ್ಟು ನೀರನ್ನು ಸೇರಿಸಿ ನಯವಾದ ಪೇಸ್ಟ್ ಗೆ ರುಬ್ಬಿಕೊಳ್ಳಿ.
  • ಹಸಿರು ಪೇಸ್ಟ್ ಅನ್ನು ಬೌಲ್ ಗೆ ವರ್ಗಾಯಿಸಿ ಮತ್ತು 4 ಕಪ್ ನೀರನ್ನು ಸೇರಿಸಿ.
  • ಅಂತಿಮವಾಗಿ, ತೀಖಾ ಪಾನಿ ಪುರಿ ಪುರಿಯೊಂದಿಗೆ ಆನಂದಿಸಲು ಸಿದ್ಧವಾಗಿದೆ.

ಜೀರಾ ಪಾನಿ ಮಾಡುವುದು ಹೇಗೆ:

  • ಮೊದಲಿಗೆ, ಒಂದು ಬಾಣಲೆಯಲ್ಲಿ 2 ಟೇಬಲ್ಸ್ಪೂನ್ ಜೀರಿಗೆಯನ್ನು ತೆಗೆದುಕೊಂಡು ಕಡಿಮೆ ಉರಿಯಲ್ಲಿ ಹುರಿಯಿರಿ.
  • ಜೀರಿಗೆಯು ಸುವಾಸನೆಯುಕ್ತವಾಗುವವರೆಗೆ ಹುರಿಯಿರಿ.
  • ಸಂಪೂರ್ಣವಾಗಿ ತಣ್ಣಗಾಗಿಸಿ, ಮತ್ತು ಮಿಕ್ಸರ್ ಜಾರ್ ಗೆ ವರ್ಗಾಯಿಸಿ.
  • ½ ಟೀಸ್ಪೂನ್ ಕಾಳು ಮೆಣಸು, 1 ಟೀಸ್ಪೂನ್ ಚಾಟ್ ಮಸಾಲಾ, 3 ಟೇಬಲ್ಸ್ಪೂನ್ ಪುದೀನ, 1 ಮೆಣಸಿನಕಾಯಿ ಮತ್ತು ½ ನಿಂಬೆಹಣ್ಣನ್ನು ಸೇರಿಸಿ.
  • ಅಗತ್ಯವಿರುವಷ್ಟು ನೀರನ್ನು ಸೇರಿಸಿ ನಯವಾದ ಪೇಸ್ಟ್ ಗೆ ರುಬ್ಬಿಕೊಳ್ಳಿ.
  • ಜೀರಿಗೆ ಪೇಸ್ಟ್ ಅನ್ನು ಬೌಲ್ ಗೆ ವರ್ಗಾಯಿಸಿ ಮತ್ತು 4 ಕಪ್ ನೀರನ್ನು ಸೇರಿಸಿ.
  • ಅಂತಿಮವಾಗಿ, ಜೀರಾ ಪಾನಿ ಪುರಿ ಪುರಿಯೊಂದಿಗೆ ಆನಂದಿಸಲು ಸಿದ್ಧವಾಗಿದೆ.

ಹಿಂಗ್ ಪಾನಿ ಮಾಡುವುದು ಹೇಗೆ:

  • ಮೊದಲಿಗೆ, ಒಂದು ದೊಡ್ಡ ಬಟ್ಟಲಿನಲ್ಲಿ ¾ ಟೀಸ್ಪೂನ್ ಹಿಂಗ್, ½ ಕಪ್ ಹುಣಿಸೇಹಣ್ಣಿನ ತಿರುಳು ಮತ್ತು 1 ಟೀಸ್ಪೂನ್ ಬೆಲ್ಲವನ್ನು ತೆಗೆದುಕೊಳ್ಳಿ.
  • ½ ಟೀಸ್ಪೂನ್ ಕಾಲಾ ನಮಕ್, 1 ಟೀಸ್ಪೂನ್ ಚಾಟ್ ಮಸಾಲಾ, ½ ಟೀಸ್ಪೂನ್ ಮೆಣಸಿನ ಪುಡಿ ಮತ್ತು ½ ಟೀಸ್ಪೂನ್ ಉಪ್ಪನ್ನು ಸೇರಿಸಿ.
  • ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಚೆನ್ನಾಗಿ ಮಿಶ್ರಣ ಮಾಡಿ.
  • 4 ಕಪ್ ನೀರನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
  • ಅಂತಿಮವಾಗಿ, ಹಿಂಗ್ ಪಾನಿ ಪುರಿ ಪುರಿಯೊಂದಿಗೆ ಆನಂದಿಸಲು ಸಿದ್ಧವಾಗಿದೆ.

ಆಮ್ಚೂರ್ ಪಾನಿ ಮಾಡುವುದು ಹೇಗೆ:

  • ಮೊದಲಿಗೆ, ಮಿಕ್ಸರ್ ಜಾರ್ ನಲ್ಲಿ  2 ಟೇಬಲ್ಸ್ಪೂನ್ ಆಮ್ಚೂರ್ ತೆಗೆದುಕೊಳ್ಳಿ.
  • ½ ಕಪ್ ಕೊತ್ತಂಬರಿ ಸೊಪ್ಪು, 1 ಮೆಣಸಿನಕಾಯಿ, 1 ಟೀಸ್ಪೂನ್ ಚಾಟ್ ಮಸಾಲಾ, ½ ಟೀಸ್ಪೂನ್ ಕಾಲಾ ನಮಕ್ ಮತ್ತು ½ ಟೀಸ್ಪೂನ್ ಉಪ್ಪನ್ನು ಸೇರಿಸಿ.
  • ಅಗತ್ಯವಿರುವಷ್ಟು ನೀರನ್ನು ಸೇರಿಸಿ ನಯವಾದ ಪೇಸ್ಟ್ ಗೆ ರುಬ್ಬಿಕೊಳ್ಳಿ.
  • ಹಸಿರು ಪೇಸ್ಟ್ ಅನ್ನು ಬೌಲ್ ಗೆ ವರ್ಗಾಯಿಸಿ ಮತ್ತು 4 ಕಪ್ ನೀರನ್ನು ಸೇರಿಸಿ.
  • ಅಂತಿಮವಾಗಿ, ಆಮ್ಚೂರ್ ಪಾನಿ ಪುರಿ ಪುರಿಯೊಂದಿಗೆ ಆನಂದಿಸಲು ಸಿದ್ಧವಾಗಿದೆ.

ಮೀಠಾ ಪಾನಿ ಮಾಡುವುದು ಹೇಗೆ:

  • ಮೊದಲಿಗೆ, ಒಂದು ಬೌಲ್ ನಲ್ಲಿ 1½ ಕಪ್ ಹುಣಿಸೇಹಣ್ಣಿನ ತಿರುಳು, 1 ಟೇಬಲ್ಸ್ಪೂನ್ ಬೆಲ್ಲವನ್ನು ತೆಗೆದುಕೊಳ್ಳಿ.
  • 1 ಟೀಸ್ಪೂನ್ ಚಾಟ್ ಮಸಾಲಾ, ½ ಟೀಸ್ಪೂನ್ ಜೀರಿಗೆ ಪುಡಿ, ½ ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಕಾಲಾ ನಮಕ್, ½ ಟೀಸ್ಪೂನ್ ಉಪ್ಪು ಮತ್ತು ಚಿಟಿಕೆ ಹಿಂಗ್ ಸೇರಿಸಿ.
  • 4 ಕಪ್ ನೀರನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
  • ಅಂತಿಮವಾಗಿ, ಮೀಠಾ ಪಾನಿ ಪುರಿ ಪುರಿಯೊಂದಿಗೆ ಆನಂದಿಸಲು ಸಿದ್ಧವಾಗಿದೆ.