- ಮೊದಲನೆಯದಾಗಿ, ಬಾಣಲೆಯಲ್ಲಿ 4 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ 15 ಫ್ಲೋರೆಟ್ಸ್ ಗೋಬಿಯನ್ನು ಸೇರಿಸಿ. 
- ಮಧ್ಯಮ ಉರಿಯಲ್ಲಿ ಫ್ರೈ ಮಾಡಿ, ಅವು ಗೋಲ್ಡನ್ ಬ್ರೌನ್ ಆಗುವವರೆಗೆ. 
- ಗೋಬಿಯನ್ನು ತೆಗೆದು ಮತ್ತು ಪಕ್ಕಕ್ಕೆ ಇರಿಸಿ. 
- ಅದೇ ಎಣ್ಣೆಯಲ್ಲಿ 2 ಆಲೂಗಡ್ಡೆ ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. 
- ಆಲೂಗಡ್ಡೆ ಗೋಲ್ಡನ್ ಮತ್ತು ಕ್ರಿಪ್ ಆಗುವವರೆಗೆ ಫ್ರೈ ಮಾಡಿ. 
- ಆಲೂವನ್ನು ತೆಗೆದು ಮತ್ತು ಪಕ್ಕಕ್ಕೆ ಇರಿಸಿ. 
- ದೊಡ್ಡ ಕಡಾಯಿಯಲ್ಲಿ, 3 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ ಮತ್ತು 1 ಟೀಸ್ಪೂನ್ ಜೀರಿಗೆ ಮತ್ತು 1 ಟೀಸ್ಪೂನ್ ಕಸೂರಿ ಮೆಥಿ ಆರೊಮ್ಯಾಟಿಕ್ ಆಗುವವರೆಗೆ ಫ಼್ರೈ ಮಾಡಿ. 
- ಮುಂದೆ, 1 ಈರುಳ್ಳಿ ಸೇರಿಸಿ ಚೆನ್ನಾಗಿ ಸಾಟ್ ಮಾಡಿ. 
- ಈಗ 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಮೆಣಸಿನಕಾಯಿ ಸೇರಿಸಿ ಮತ್ತು ಒಂದು ನಿಮಿಷ ಬೇಯಿಸಿ. 
- ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಕೊತ್ತಂಬರಿ ಪುಡಿ, ¼ ಟೀಸ್ಪೂನ್ ಜೀರಿಗೆ ಪುಡಿ ಮತ್ತು ¾ ಟೀಸ್ಪೂನ್ ಉಪ್ಪು ಸೇರಿಸಿ. 
- ಮಸಾಲೆಗಳು ಆರೊಮ್ಯಾಟಿಕ್ ಆಗುವವರೆಗೆ ಕಡಿಮೆ ಜ್ವಾಲೆಯಲ್ಲಿ ಹುರಿಯಿರಿ. 
- ಮತ್ತಷ್ಟು, 1 ಟೊಮೆಟೊ ಸೇರಿಸಿ ಮತ್ತು ಟೊಮ್ಯಾಟೊ ಮೃದು ಮತ್ತು ಮೆತ್ತಗಾಗುವವರೆಗೆ ಸಾಟ್ ಮಾಡಿ. 
- ಈಗ ಹುರಿದ ಆಲೂ ಮತ್ತು ಗೋಬಿ ಸೇರಿಸಿ. 
- ಅವುಗಳನ್ನು ಮುರಿಯದೆ ನಿಧಾನವಾಗಿ ಮಿಶ್ರಣ ಮಾಡಿ. ನೀವು ಗ್ರೇವಿಯನ್ನು ಬಯಸಿದರೆ, ನಂತರ ½ ಕಪ್ ನೀರನ್ನು ಸೇರಿಸಿ. 
- ಇದಲ್ಲದೆ, ½ ಟೀಸ್ಪೂನ್ ಆಮ್ಚೂರ್, ¼ ಟೀಸ್ಪೂನ್ ಗರಂ ಮಸಾಲ ಮತ್ತು 2 ಟೀಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಬೆರೆಸಿ. 
- ಅಂತಿಮವಾಗಿ, ಆಲೂ ಗೋಬಿ ಡ್ರೈ ರೆಸಿಪಿ ರೊಟ್ಟಿ ಅಥವಾ ಅನ್ನದೊಂದಿಗೆ ಬಡಿಸಲು ಸಿದ್ಧವಾಗಿದೆ.