ರವಾ ಧೋಕ್ಲಾ ರೆಸಿಪಿ | rava dhokla in kannada | ಇನ್ಸ್ಟಂಟ್ ಸೂಜಿ ಧೋಕ್ಲಾ

0

ರವಾ ಧೋಕ್ಲಾ ಪಾಕವಿಧಾನ | ಇನ್ಸ್ಟಂಟ್ ಸೂಜಿ ಧೋಕ್ಲಾ ಪಾಕವಿಧಾನ | ರವೆ ಧೋಕ್ಲಾದ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಧೋಕ್ಲಾ ಎಂಬುವುದು ಗುಜರಾತಿ ಪಾಕಪದ್ಧತಿಯ ಸಸ್ಯಾಹಾರಿ ಲಘು ಉಪಹಾರವಾಗಿದೆ. ಧೋಕ್ಲಾ ಪಾಕವಿಧಾನಗಳನ್ನು ಸಾಮಾನ್ಯವಾಗಿ ಉಪಾಹಾರ, ಮೇನ್ ಕೋರ್ಸ್ ಮತ್ತು ಸಂಜೆ ತಿಂಡಿಗಳಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ಧೋಕ್ಲಾ ಪಾಕವಿಧಾನವನ್ನು ಬೇಸನ್ ಅಥವಾ ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಆದರೆ ಈ ಪಾಕವಿಧಾನವು ರವಾ ಅಥವಾ ರವೆಯಿಂದ ತಯಾರಿಸಲಾಗಿದೆ.
ರವಾ ಧೋಕ್ಲಾ ಪಾಕವಿಧಾನ

ರವಾ ಧೋಕ್ಲಾ ಪಾಕವಿಧಾನ | ಇನ್ಸ್ಟಂಟ್ ಸೂಜಿ ಧೋಕ್ಲಾ ಪಾಕವಿಧಾನ | ರವೆ ಧೋಕ್ಲಾದ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಮೂಲತಃ ಧೋಕ್ಲಾ ಪಾಕವಿಧಾನಗಳನ್ನು ಫರ್ಮೆಂಟೇಶನ್ ಮಡಿದ ಬ್ಯಾಟರ್‌ನಿಂದ ಬೇಸನ್ ಅಥವಾ ಅಕ್ಕಿ ಹಿಟ್ಟಿನೊಂದಿಗೆ ತಯಾರಿಸಲಾಗುತ್ತದೆ. ರವಾ ಧೋಕ್ಲಾದ ತ್ವರಿತ ಆವೃತ್ತಿಯಾದ ಈ ಪಾಕವಿಧಾನಕ್ಕೆ ಇನೋ ಸೇರಿಸಲಾಗಿದೆ, ಇದು ಫರ್ಮೆಂಟೇಶನ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ.

ನಾನು ಈಗಾಗಲೇ ಸಾಂಪ್ರದಾಯಿಕ ಖಮನ್ ಧೋಕ್ಲಾ ಪಾಕವಿಧಾನವನ್ನು ಹಂಚಿಕೊಂಡಿದ್ದೇನೆ. ಆದರೆ ರವಾ ಧೋಕ್ಲಾ ಪಾಕವಿಧಾನದ ಪರ್ಯಾಯ ಆವೃತ್ತಿಯನ್ನು ಹಂಚಿಕೊಳ್ಳಲು ನಾನು ಯಾವಾಗಲೂ ಅಂದುಕೊಳ್ಳುತ್ತಿದೆನು. ಖಮನ್ ಧೋಕ್ಲಾಕ್ಕೆ ಹೋಲಿಸಿದರೆ ರವೆ ಧೋಕ್ಲಾ ಹೆಚ್ಚು ಆರೋಗ್ಯಕರ ಮತ್ತು ರುಚಿಯಾಗಿದೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ನಾನು ಬೇಸನ್ ಧೋಕ್ಲಾವನ್ನು ತಿನ್ನುವಾಗಲೆಲ್ಲಾ, ಉತ್ತಮ ರುಚಿಯಿದ್ದರೂ ಸ್ವಲ್ಪ ನಿಧಾನ ಜೀರ್ಣವಾಗುತಿತ್ತು. ಕಡಲೆ ಹಿಟ್ಟಿನಿಂದಾಗಿ ನಿಮ್ಮ ಹೊಟ್ಟೆಯು ಅಸಮಾಧಾನಗೊಳಿಸಬಹುದು. ಆದ್ದರಿಂದ ನಾನು ಯಾವಾಗಲೂ ದಕ್ಷಿಣ ಭಾರತದ ರವೆ ಇಡ್ಲಿ ಪಾಕವಿಧಾನಕ್ಕೆ ಹೋಲುವ ರವೆ ಧೋಕ್ಲಾವನ್ನು ತಯಾರಿಸುತ್ತೇನೆ.

ಇನ್ಸ್ಟಂಟ್ ಸೂಜಿ ಧೋಕ್ಲಾ ಪಾಕವಿಧಾನ ಇದಲ್ಲದೆ, ರವೆ ಧೋಕ್ಲಾ ಪಾಕವಿಧಾನಕ್ಕಾಗಿ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನುನೀಡಲು ಬಯಸುತ್ತೇನೆ. ಮೊದಲನೆಯದಾಗಿ, ಯಾವುದೇ ಧೋಕ್ಲಾ ಪಾಕವಿಧಾನಕ್ಕೆ ಅರಿಶಿನ ಪುಡಿ + ಬೇಕಿಂಗ್ ಏಜೆಂಟ್ ಬಳಸುವುದನ್ನು ತಪ್ಪಿಸಿ. ಈ ಸಂಯೋಜನೆಯಿಂದಾಗಿ ಧೋಕ್ಲಾವು ಕೆಂಪು ಬಣ್ಣಕ್ಕೆ ತಿರುಗಬಹುದು. ಎರಡನೆಯದಾಗಿ, ಈ ಪಾಕವಿಧಾನಕ್ಕಾಗಿ ನಾನು ಇನೊವನ್ನು ಬೇಕಿಂಗ್ ಏಜೆಂಟ್ ಆಗಿ ಬಳಸಿದ್ದೇನೆ. ಪರ್ಯಾಯವಾಗಿ ಅಡಿಗೆ ಸೋಡಾವನ್ನು ಬೇಕಿಂಗ್ ಏಜೆಂಟ್ ಆಗಿ ಬಳಸಬಹುದು ಆದರೆ ಅದನ್ನು ಮಕ್ಕಳಿಗೆ ನೀಡುವುದನ್ನು ತಪ್ಪಿಸಿ. ಕೊನೆಯದಾಗಿ, ನಾನು ಸೂಜಿ ಧೋಕ್ಲಾವನ್ನು ತೆಂಗಿನ ತುರಿಯಿಂದ ಅಲಂಕರಿಸಿಲ್ಲ ಮತ್ತು ನೀವು ಬಯಸಿದರೆ ಅದನ್ನು ಸೇರಿಸಲು ನಿಮಗೆ ಸ್ವಾಗತವಿದೆ.


ಅಂತಿಮವಾಗಿ, ನನ್ನ ಇತರ ವಿವರವಾದ ಬೆಳಗಿನ ಉಪಾಹಾರ ಪಾಕವಿಧಾನಗಳ ಸಂಗ್ರಹಕ್ಕೆ ಭೇಟಿ ನೀಡಲು ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ಖಂಡ್ವಿ, ಮಿಸಲ್ ಪಾವ್, ಪಾವ್ ಭಾಜಿ, ದಾಬೇಲಿ, ಜಲೇಬಿ, ವಡಾ ಪಾವ್, ಪೋಹಾ ಇಡ್ಲಿ, ಮೇಥಿ ಕಾ ಥೆಪ್ಲಾ ಮತ್ತು ಸೇವ್ ಟೊಮೆಟೊ ನು ಶಾಕ್ ರೆಸಿಪಿ ಒಳಗೊಂಡಿದೆ. ಹೆಚ್ಚುವರಿಯಾಗಿ ನನ್ನ ಇತರ ಪಾಕವಿಧಾನಗಳ ಸಂಗ್ರಹ ಮಂಡಳಿಗೆ ಭೇಟಿ ನೀಡಿ,

ರವಾ ಧೋಕ್ಲಾ ಅಥವಾ ಇನ್ಸ್ಟಂಟ್ ಸೂಜಿ ಧೋಕ್ಲಾ ವೀಡಿಯೊ ಪಾಕವಿಧಾನ:

ರವಾ ಧೋಕ್ಲಾಅಥವಾ ಇನ್ಸ್ಟಂಟ್ ಸೂಜಿ ಧೋಕ್ಲಾ ಪಾಕವಿಧಾನ ಕಾರ್ಡ್:

ರವಾ ಧೋಕ್ಲಾ ರೆಸಿಪಿ | rava dhokla in kannada | ಇನ್ಸ್ಟಂಟ್ ಸೂಜಿ ಧೋಕ್ಲಾ

HEBBARS KITCHEN
ಸುಲಭ ರವಾ ಧೋಕ್ಲಾ ಪಾಕವಿಧಾನ | ಇನ್ಸ್ಟಂಟ್ ಸೂಜಿ ಧೋಕ್ಲಾ
No ratings yet
Prep Time 30 mins
Cook Time 12 mins
Total Time 42 mins
Course ಬೆಳಗಿನ ಉಪಾಹಾರ
Cuisine ಭಾರತೀಯ
Servings 21 ತುಂಡುಗಳು


Ingredients
 

ರವೆ ಧೋಕ್ಲಾಕ್ಕಾಗಿ:

 • 1 ಕಪ್ ರವೆ / ಬಾಂಬೆ ರವಾ / ಸೂಜಿ
 • 1 ಕಪ್ ದಪ್ಪ ಮೊಸರು (ಸ್ವಲ್ಪ ಹುಳಿ)
 • ½ ಟೀಸ್ಪೂನ್ ಸಕ್ಕರೆ
 • 1 ಟೀಸ್ಪೂನ್ ಶುಂಠಿ (ತುರಿದ)
 • 1 ಟೀಸ್ಪೂನ್ ಮೆಣಸಿನಕಾಯಿ ಪೇಸ್ಟ್
 • 2 ಟೀಸ್ಪೂನ್ ಎಣ್ಣೆ
 • ರುಚಿಗೆ ಉಪ್ಪು
 • ¼ ಕಪ್ ನೀರು (ಅಥವಾ ಅಗತ್ಯವಿರುವಂತೆ)
 • 1 ಟೀಸ್ಪೂನ್ ಇನೊ ಅಥವಾ ¾ ಅಡಿಗೆ ಸೋಡಾ

ಒಗ್ಗರಣೆಗಾಗಿ:

 • 2 ಟೀಸ್ಪೂನ್ ಎಣ್ಣೆ
 • 1 ಟೀಸ್ಪೂನ್ ಸಾಸಿವೆ
 • ½ ಟೀಸ್ಪೂನ್ ಜೀರಿಗೆ
 • ½ ಟೀಸ್ಪೂನ್ ಎಳ್ಳು
 • ಪಿಂಚ್ ಆಫ್ ಹಿಂಗ್
 • ಕೆಲವು ಕರಿಬೇವಿನ ಎಲೆಗಳು
 • 2 ಹಸಿರು ಮೆಣಸಿನಕಾಯಿ (ಸೀಳಿದ)
 • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)

Instructions
 

 • ಮೊದಲನೆಯದಾಗಿ, ದೊಡ್ಡ ಬೌಲ್ ನಲ್ಲಿ ರವೆ ತೆಗೆದುಕೊಳ್ಳಿ.
 • 1 ಕಪ್ ದಪ್ಪ ಮೊಸರು ಕೂಡ ಸೇರಿಸಿ. ಪರ್ಯಾಯವಾಗಿ ಮಜ್ಜಿಗೆಯನ್ನು ಸೇರಿಸಿ, ಆದರೆ ಅಗತ್ಯವಿರುವಂತೆ ಸೇರಿಸಲು ಖಚಿತಪಡಿಸಿಕೊಳ್ಳಿ.
 • ಹೆಚ್ಚುವರಿಯಾಗಿ ಸಕ್ಕರೆ, ಶುಂಠಿ, ಮೆಣಸಿನಕಾಯಿ ಪೇಸ್ಟ್ ಮತ್ತು ಉಪ್ಪು ಸೇರಿಸಿ.
 • ದಪ್ಪ ಬ್ಯಾಟರ್ ರೂಪಿಸಲು ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಹೆಚ್ಚುವರಿ ಮೊಸರು ಸೇರಿಸಿ.
 • 30 ನಿಮಿಷಗಳ ಕಾಲ ಅಥವಾ ರವೆ ತೇವಾಂಶವನ್ನು ಹೀರಿಕೊಳ್ಳುವವರೆಗೆ ವಿಶ್ರಮಿಸಲು ಬಿಡಿ.
 • ಮತ್ತಷ್ಟು ಅಗತ್ಯವಿರುವಂತೆ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 • ಧೋಕ್ಲಾವನ್ನು ಇಡ್ಲಿ ಬ್ಯಾಟರ್ ನ ಸ್ಥಿರತೆಗೆ ಪಡೆಯಿರಿ.
 • ಈಗ ಇನೋ ಸೇರಿಸಿ. ನೀವು ಪರ್ಯಾಯವಾಗಿ ಒಂದು ಪಿಂಚ್ ಅಡಿಗೆ ಸೋಡಾವನ್ನು ಬಳಸಬಹುದು.
 • ಬ್ಯಾಟರ್ ನೊರೆಯಾಗುವವರೆಗೆ ನಿಧಾನವಾಗಿ ಮಿಶ್ರಣ ಮಾಡಿ.
 • ಗ್ರೀಸ್ ಮಾಡಿದ ತಟ್ಟೆಗೆ ವರ್ಗಾಯಿಸಿ.
 • ಮತ್ತು ಅದರಲ್ಲಿರುವ ಯಾವುದೇ ಗಾಳಿಯ ಗುಳ್ಳೆಗಳನ್ನು ತೆಗೆದುಹಾಕಲು ಎರಡು ಬಾರಿ ಟ್ಯಾಪ್ ಮಾಡಿ.
 •  ತಕ್ಷಣ 12 ನಿಮಿಷಗಳ ಕಾಲ ಅಥವಾ ಧೋಕ್ಲಾ ಸಂಪೂರ್ಣವಾಗಿ ಬೇಯಿಸುವವರೆಗೆ ಮಧ್ಯಮ ಜ್ವಾಲೆಯ ಮೇಲ್ಲಿಟ್ಟು ಸ್ಟೀಮ್ ಮಾಡಿ.
 • ಈಗ ಧೋಕ್ಲಾವನ್ನು 5 ನಿಮಿಷಗಳ ಕಾಲ ತಣ್ಣಗಾಗಿಸಿ ನಂತರ ಅದನ್ನು ತೆಗೆಯಿರಿ.
 • ಎಣ್ಣೆಯನ್ನು ಬಿಸಿ ಮಾಡುವ ಮೂಲಕ ಒಗ್ಗರಣೆಯನ್ನು ತಯಾರಿಸಿ.
 • ಸಾಸಿವೆ, ಜೀರಾ, ಎಳ್ಳು ಮತ್ತು ಹಿಂಗ್ ಸೇರಿಸಿ.
 • ನಂತರ, ಕರಿಬೇವಿನ ಎಲೆಗಳು ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ.
 • ಸ್ವಲ್ಪ ಸಮಯದವರೆಗೆ ಸಾಟ್ ಮಾಡಿ ಮತ್ತು ಒಗ್ಗರಣೆಯನ್ನು ಧೋಕ್ಲಾ ಮೇಲೆ ಹರಡಿ.
 • ಕೊತ್ತಂಬರಿ ಸೊಪ್ಪನ್ನು ಸಹ ಸಿಂಪಡಿಸಿ.
 • ಧೋಕ್ಲಾವನ್ನು ನಿಮಗೆ ಬೇಕಾಗುವ ಆಕಾರಕ್ಕೆ ತುಂಡರಿಸಿ.
 • ಅಂತಿಮವಾಗಿ, ಹಸಿರು ಚಟ್ನಿಯೊಂದಿಗೆ ಮೃದು ಮತ್ತು ಸ್ಪಾಂಜಿ ರವೆ ಧೋಕ್ಲಾವನ್ನು ಬಡಿಸಿ.


Tried this recipe?Click a picture and mention @hebbars.kitchen or tag #hebbarskitchen! us in Instagram or Twitter

Subscribe to our Youtube ChannelClick here to subscribe our Youtube Channel and stay updated with our latest video recipes

ಹಂತ ಹಂತದ ಫೋಟೋದೊಂದಿಗೆ ಇನ್ಸ್ಟಂಟ್ ರವೆ ಧೋಕ್ಲಾವನ್ನು ಹೇಗೆ ಮಾಡುವುದು:

 1. ಮೊದಲನೆಯದಾಗಿ, ದೊಡ್ಡ ಬೌಲ್ ನಲ್ಲಿ ರವೆ ತೆಗೆದುಕೊಳ್ಳಿ.
 2. 1 ಕಪ್ ದಪ್ಪ ಮೊಸರು ಕೂಡ ಸೇರಿಸಿ. ಪರ್ಯಾಯವಾಗಿ ಮಜ್ಜಿಗೆಯನ್ನು ಸೇರಿಸಿ, ಆದರೆ ಅಗತ್ಯವಿರುವಂತೆ ಸೇರಿಸಲು ಖಚಿತಪಡಿಸಿಕೊಳ್ಳಿ.
 3. ಹೆಚ್ಚುವರಿಯಾಗಿ ಸಕ್ಕರೆ, ಶುಂಠಿ, ಮೆಣಸಿನಕಾಯಿ ಪೇಸ್ಟ್ ಮತ್ತು ಉಪ್ಪು ಸೇರಿಸಿ.
 4. ದಪ್ಪ ಬ್ಯಾಟರ್ ರೂಪಿಸಲು ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಹೆಚ್ಚುವರಿ ಮೊಸರು ಸೇರಿಸಿ.
 5. 30 ನಿಮಿಷಗಳ ಕಾಲ ಅಥವಾ ರವೆ ತೇವಾಂಶವನ್ನು ಹೀರಿಕೊಳ್ಳುವವರೆಗೆ ವಿಶ್ರಮಿಸಲು ಬಿಡಿ.
 6. ಮತ್ತಷ್ಟು ಅಗತ್ಯವಿರುವಂತೆ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 7. ಧೋಕ್ಲಾವನ್ನು ಇಡ್ಲಿ ಬ್ಯಾಟರ್ ನ ಸ್ಥಿರತೆಗೆ ಪಡೆಯಿರಿ.

 8. ಈಗ ಇನೋ ಸೇರಿಸಿ. ನೀವು ಪರ್ಯಾಯವಾಗಿ ಒಂದು ಪಿಂಚ್ ಅಡಿಗೆ ಸೋಡಾವನ್ನು ಬಳಸಬಹುದು.
 9. ಬ್ಯಾಟರ್ ನೊರೆಯಾಗುವವರೆಗೆ ನಿಧಾನವಾಗಿ ಮಿಶ್ರಣ ಮಾಡಿ.
 10. ಗ್ರೀಸ್ ಮಾಡಿದ ತಟ್ಟೆಗೆ ವರ್ಗಾಯಿಸಿ.
 11. ಮತ್ತು ಅದರಲ್ಲಿರುವ ಯಾವುದೇ ಗಾಳಿಯ ಗುಳ್ಳೆಗಳನ್ನು ತೆಗೆದುಹಾಕಲು ಎರಡು ಬಾರಿ ಟ್ಯಾಪ್ ಮಾಡಿ.
 12.  ತಕ್ಷಣ 12 ನಿಮಿಷಗಳ ಕಾಲ ಅಥವಾ ಧೋಕ್ಲಾ ಸಂಪೂರ್ಣವಾಗಿ ಬೇಯಿಸುವವರೆಗೆ ಮಧ್ಯಮ ಜ್ವಾಲೆಯ ಮೇಲ್ಲಿಟ್ಟು ಸ್ಟೀಮ್ ಮಾಡಿ.
 13. ಈಗ ಧೋಕ್ಲಾವನ್ನು 5 ನಿಮಿಷಗಳ ಕಾಲ ತಣ್ಣಗಾಗಿಸಿ ನಂತರ ಅದನ್ನು ತೆಗೆಯಿರಿ.
 14. ಎಣ್ಣೆಯನ್ನು ಬಿಸಿ ಮಾಡುವ ಮೂಲಕ ಒಗ್ಗರಣೆಯನ್ನು ತಯಾರಿಸಿ.
 15. ಸಾಸಿವೆ, ಜೀರಾ, ಎಳ್ಳು ಮತ್ತು ಹಿಂಗ್ ಸೇರಿಸಿ.
 16. ನಂತರ, ಕರಿಬೇವಿನ ಎಲೆಗಳು ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ.
 17. ಸ್ವಲ್ಪ ಸಮಯದವರೆಗೆ ಸಾಟ್ ಮಾಡಿ ಮತ್ತು ಒಗ್ಗರಣೆಯನ್ನು ಧೋಕ್ಲಾ ಮೇಲೆ ಹರಡಿ.
 18. ಕೊತ್ತಂಬರಿ ಸೊಪ್ಪನ್ನು ಸಹ ಸಿಂಪಡಿಸಿ.
 19. ಧೋಕ್ಲಾವನ್ನು ನಿಮಗೆ ಬೇಕಾಗುವ ಆಕಾರಕ್ಕೆ ತುಂಡರಿಸಿ.
 20. ಅಂತಿಮವಾಗಿ, ಹಸಿರು ಚಟ್ನಿಯೊಂದಿಗೆ ಮೃದು ಮತ್ತು ಸ್ಪಾಂಜಿ ರವೆ ಧೋಕ್ಲಾವನ್ನು ಬಡಿಸಿ.
  ರವಾ ಧೋಕ್ಲಾ ಪಾಕವಿಧಾನ

ಟಿಪ್ಪಣಿಗಳು:

 • ಮೊದಲನೆಯದಾಗಿ, ಉತ್ತಮ ರುಚಿ ಮತ್ತು ವಿನ್ಯಾಸಕ್ಕಾಗಿ ಸ್ವಲ್ಪ ಹುಳಿ ಮೊಸರು ಬಳಸಿ.
 • ಹಾಗೆಯೇ, ಖಮನ್ ಧೋಕ್ಲಾವನ್ನು ಹೋಲುವ ವಿನ್ಯಾಸವನ್ನು ತಯಾರಿಸಲು ಅರಿಶಿನವನ್ನು ಸೇರಿಸಿ.
 • ಇನೋ ಬದಲಿಗೆ, ಅಡಿಗೆ ಸೋಡಾ ಬಳಸಿ. ಆದರೆ, ಇನೊ ಹಣ್ಣಿನ ಉಪ್ಪು ಹೆಚ್ಚು ಆರೋಗ್ಯಕರವಾಗಿರುತ್ತದೆ.
 • ಅಂತಿಮವಾಗಿ, ರವೆ  ಧೋಕ್ಲಾ ಸ್ವಲ್ಪ ಮಸಾಲೆಯುಕ್ತವಾಗಿದ್ದಾಗ ಉತ್ತಮ ರುಚಿ ನೀಡುತ್ತದೆ.