ಗರಂ ಮಸಾಲಾ ಪಾಕವಿಧಾನ | ಗರಂ ಮಸಾಲೆ ಪುಡಿ। ಮನೆಯಲ್ಲಿ ಗರಂ ಮಸಾಲೆ ಮಿಶ್ರಣ ಹೇಗೆ ತಯಾರಿಸುವುದು ಎಂಬುವುದರ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಒಂದು ಅನನ್ಯ ಮತ್ತು ಸುವಾಸನೆಯ ಮಸಾಲೆ ಮಿಶ್ರಣ ಪುಡಿಯು, ಸಂಪೂರ್ಣ ಮಸಾಲೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದು ಹೆಚ್ಚಿನ ಭಾರತೀಯ ಪಾಕವಿಧಾನಗಳಲ್ಲಿ ಬಳಸುವ ಪರಿಮಳವನ್ನು ಹೆಚ್ಚಿಸುವ ಅತ್ಯಗತ್ಯ ಮ್ಯಾಜಿಕ್ ಮಸಾಲೆ ಪುಡಿಯಾಗಿದೆ. ಭಾರತದ ಪ್ರತಿಯೊಂದು ರಾಜ್ಯದಲ್ಲಿ ಈ ಮಸಾಲೆ ಪುಡಿಗೆ ತನ್ನದೇ ಆದ ವಿಶಿಷ್ಟ ಪಾಕವಿಧಾನವನ್ನು ಹೊಂದಿದೆ, ಆದರೆ ನಾನು ತಯಾರಿಸಿದ ಈ ಪಾಕವಿಧಾನವು ಎಂಟಿಆರ್ ಗರಂ ಮಸಾಲೆಯಿಂದ ಸ್ಫೂರ್ತಿ ಪಡೆದಿದೆ.
ನಾನು ಯಾವಾಗಲೂ ಮನೆಯಲ್ಲಿ ತಯಾರಿಸಿದ ಪಾಕವಿಧಾನಗಳ ಅಪಾರ ಅಭಿಮಾನಿಯಾಗಿದ್ದೇನೆ. ರುಚಿ, ಶುಚಿ ಮತ್ತು ಪರಿಮಳವೇ ಇದಕ್ಕೆ ಮುಖ್ಯ ಕಾರಣವಾಗಿದೆ. ಉದಾಹರಣೆಗೆ, ನೀವು ಕಿರಾಣಿ ಅಂಗಡಿಯಿಂದ ರೆಡಿ ಗರಂ ಮಸಾಲಾ ಮಿಶ್ರಣವನ್ನು ಖರೀದಿಸಲು ಬಯಸಿದರೆ, ಅನೇಕ ಆಯ್ಕೆಗಳಿವೆ. ಆರಂಭದಲ್ಲಿ, ನಾನು ಕೂಡ ಅಂಗಡಿಯಿಂದ ಖರೀದಿಸುತ್ತಿದ್ದೆನು. ಆದರೆ ಎಂಟಿಆರ್ ಬ್ರಾಂಡ್ ಮಸಾಲೆ ಮಿಶ್ರಣವನ್ನು ಹೊರತುಪಡಿಸಿ (ಪ್ರಚಾರದ ಪೋಸ್ಟ್ ಅಲ್ಲ) ಹೆಚ್ಚಿನ ಬ್ರಾಂಡ್‌ಗಳೊಂದಿಗೆ ಎಂದಿಗೂ ಸಂತೋಷವಾಗಿರಲಿಲ್ಲ. ಆದರೆ ದುರದೃಷ್ಟವಶಾತ್, ನಾನಿರುವ ಸ್ಥಳದಲ್ಲಿ ಎಂಟಿಆರ್ ಬ್ರ್ಯಾಂಡ್‌ಗಳ ಮಸಾಲೆ ಮಿಶ್ರಣವು ನನಗೆ ದೊರಕುವುದಿಲ್ಲ. ಆದ್ದರಿಂದ ಅದರ ಪ್ಯಾಕೆಟ್ ಮೇಲೆ ತೋರಿಸಿದ ಪದಾರ್ಥಗಳಿಂದ ಗರಂ ಮಸಾಲೆ ಪುಡಿಯನ್ನು ತಯಾರಿಸಲು ನಾನು ಯೋಚಿಸಿದೆ. ಇದರ ಫಲಿತಾಂಶದ ಬಗ್ಗೆ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಹಾಗಾಗಿ ಮತ್ತೆ ನಾನು ಅಂಗಡಿಯಿಂದ ಖರೀದಿಸಲು ಹೋಗಲಿಲ್ಲ. ಇದನ್ನು ತಯಾರಿಸುವಾಗ ಯಾವುದೇ ಸಂರಕ್ಷಕ ರಾಸಾಯನಿಕವನ್ನು ಬಳಸಿಲ್ಲ. ಹಾಗಾಗಿ ಇದು ದೀರ್ಘ ಕಾಲ ಉಳಿಯುದಿಲ್ಲ. ಆದರೆ ನೀವು ಅದನ್ನು ಆಗಾಗ್ಗೆ ತಯಾರಿಸಿ ಅಗತ್ಯವಿದ್ದಾಗ ತಾಜಾ ಮಸಾಲೆ ಬಳಸಬಹುದು.
ಇದಲ್ಲದೆ, ಮನೆಯಲ್ಲಿ ತಯಾರಿಸಿದ ಗರಂ ಮಸಾಲೆ ಮಿಶ್ರಣಕ್ಕೆ ಇನ್ನೂ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ಸೇರಿಸಲು ನಾನು ಬಯಸುತ್ತೇನೆ. ಮೊದಲನೆಯದಾಗಿ, ನಾನು ಮೊದಲೇ ವಿವರಿಸುತ್ತಿದ್ದಂತೆ, ಈ ಮಸಾಲೆ ಮಿಶ್ರಣವನ್ನು ತಯಾರಿಸಲು ಅಸಂಖ್ಯಾತ ಮಾರ್ಗಗಳಿವೆ. ನಾನು ಮಾಡಿದ ಈ ಮಸಾಲೆ ಪುಡಿಯು ಎಂಟಿಆರ್ ಬ್ರಾಂಡ್‌ನಿಂದ ಸ್ಫೂರ್ತಿ ಪಡೆದಿದೆ. ಎರಡನೆಯದಾಗಿ, ನಾನು ಕನಿಷ್ಟ ಮಸಾಲೆಗಳನ್ನು ಬಳಸಿದ್ದೇನೆ ಎಂದು ಅನಿಸಿಕೆ. ಕೆಲವು ಸಾಂಪ್ರದಾಯಿಕ ಪಾಕವಿಧಾನಗಳಲ್ಲಿ ಅನೇಕ ಇತರ ಮಸಾಲೆಗಳು ಸೇರಿವೆ, ಆದ್ದರಿಂದ ನನ್ನ ಪಾಕವಿಧಾನ ಕಾರ್ಡ್‌ನಲ್ಲಿ ಕೆಳಗೆ ತಿಳಿಸಲಾದ ಮಸಾಲೆಗಳನ್ನು ಹೊಂದಿಲ್ಲದಿದ್ದರೆ, ಇದನ್ನು ಮಾಡದಿರಿ. ಕೊನೆಯದಾಗಿ, ಇದನ್ನು ತಯಾರಿಸುವಾಗ ಕೆಂಪು ಮೆಣಸಿನಕಾಯಿಗಳು ಅಥವಾ ಬ್ಯಾಡ್ಗಿ ಮೆಣಸಿನಕಾಯಿಗಳನ್ನು ಚಳಿಗಾಲ ಮತ್ತು ಬಡೇ ಸೋಂಪುಗಳನ್ನು ಬೇಸಿಗೆಯಲ್ಲಿ ಬಳಸಬೇಕು ಎಂಬ ನಂಬಿಕೆ ಇದೆ. ಆದಾಗ್ಯೂ, ಇದರಲ್ಲಿ ನಾನು ಎರಡರ ಸಂಯೋಜನೆಯನ್ನೂ ಬಳಸಿದ್ದೇನೆ.
ಅಂತಿಮವಾಗಿ, ಗರಂ ಮಸಾಲೆ ಪಾಕವಿಧಾನದ ಈ ಪೋಸ್ಟ್‌ನೊಂದಿಗೆ ನನ್ನ ಇತರ ಮಸಾಲ ಪಾಕವಿಧಾನಗಳು ಪಾಕವಿಧಾನಗಳ ಸಂಗ್ರಹ ಪರಿಶೀಲಿಸುವಂತೆ ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ನನ್ನ ಇತರ ಸಂಬಂಧಿತ ಪಾಕವಿಧಾನಗಳಾದ ಗರಂ ಮಸಾಲ, ಚನಾ ಮಸಾಲ ಪುಡಿ, ಬಿರಿಯಾನಿ ಮಸಾಲ, ಪಾವ್ ಭಾಜಿ ಮಸಾಲ, ಬಿಸಿ ಬೇಳೆ ಬಾತ್ ಮಸಾಲ ಪುಡಿ, ಬಾಂಬೆ ಸ್ಯಾಂಡ್‌ವಿಚ್ ಮಸಾಲ, ವಾಂಗಿ ಭಾತ್ ಮಸಾಲ ಪುಡಿ, ಸಾಂಬಾರ್ ಪುಡಿ, ಪಿಜ್ಜಾ ಸಾಸ್, ಸಾರು ಪುಡಿ. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಸಂಬಂಧಿತ ವರ್ಗಗಳನ್ನು ನಮೂದಿಸಲು ಬಯಸುತ್ತೇನೆ,
ಗರಂ ಮಸಾಲಾ ವೀಡಿಯೊ ಪಾಕವಿಧಾನ:
ಗರಂ ಮಸಾಲಾ ಪಾಕವಿಧಾನ ಕಾರ್ಡ್:
ಗರಂ ಮಸಾಲಾ ರೆಸಿಪಿ | garam masala in kannada | ಗರಂ ಮಸಾಲೆ ಪುಡಿ
ಪದಾರ್ಥಗಳು
- ¾ ಕಪ್ ಕೊತ್ತಂಬರಿ ಬೀಜ / ಧನಿಯಾ
- ½ ಕಪ್ ಜೀರಿಗೆ / ಜೀರಾ
- 1 ಟೀಸ್ಪೂನ್ ಓಮ ಕಾಳು
- 2 ಟೇಬಲ್ಸ್ಪೂನ್ ಒಳ್ಳೆ ಮೆಣಸು / ಪೆಪ್ಪರ್
- 3 ಒಣಗಿದ ಕೆಂಪು ಮೆಣಸಿನಕಾಯ
- 5 ಸ್ಟಾರ್ ಸೋಂಪು / ಚಕ್ರ ಫೂಲ್
- 3 ಇಂಚಿನ ದಾಲ್ಚಿನ್ನಿ
- 2 ಮಾಸ್ / ಜಾವಿತ್ರಿ
- 5 ಕಪ್ ಪು ಏಲಕ್ಕಿ
- 2 ಜಾಯಿಕಾಯಿ / ಜೈಫಲ್
- 3 ಟೀಸ್ಪೂನ್ ಏಲಕ್ಕಿ / ಎಲಾಚಿ
- 1 ಟೇಬಲ್ಸ್ಪೂನ್ ಲವಂಗ
- 2 ಟೀಸ್ಪೂನ್ ಫೆನ್ನೆಲ್ / ಬಡೇ ಸೋಂಪು
- 5 ಬೇ ಎಲೆ / ತೇಜ್ ಪತ್ತಾ
- 1 ಟೀಸ್ಪೂನ್ ಶುಂಠಿ ಪುಡಿ
ಸೂಚನೆಗಳು
- ಮೊದಲನೆಯದಾಗಿ, ಬಾಣಲೆಯಲ್ಲಿ ¾ ಕಪ್ ಕೊತ್ತಂಬರಿ ಬೀಜ ತೆಗೆದುಕೊಂಡು ಕಡಿಮೆ ಉರಿಯಲ್ಲಿ ಹುರಿಯಿರಿ.
- ಮಸಾಲೆಗಳು ಪರಿಮಳ ಬರುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
- ಅದೇ ಬಾಣಲೆಯಲ್ಲಿ ½ ಕಪ್ ಜೀರಿಗೆ, 1 ಟೀಸ್ಪೂನ್ ಓಮ ಕಾಳು ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ.
- ಪರಿಮಳ ಬರುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
- ಹಾಗೆಯೇ, 2 ಟೀಸ್ಪೂನ್ ಒಳ್ಳೆ ಮೆಣಸು ಮತ್ತು 3 ಒಣಗಿದ ಕೆಂಪು ಮೆಣಸಿನಕಾಯಿ ತೆಗೆದುಕೊಳ್ಳಿ.
- ಮೆಣಸಿನಕಾಯಿ ಗರಿಗರಿಯಾಗುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
- ಈಗ 5 ಸ್ಟಾರ್ ಸೋಂಪು, 3 ಇಂಚಿನ ದಾಲ್ಚಿನ್ನಿ, 2 ಮೆಸ್, 5 ಕಪ್ಪು ಏಲಕ್ಕಿ, 2 ಜಾಯಿಕಾಯಿ, 3 ಟೀಸ್ಪೂನ್ ಏಲಕ್ಕಿ, 1 ಟೀಸ್ಪೂನ್ ಲವಂಗ, 2 ಟೀಸ್ಪೂನ್ ಬಡೇ ಸೋಂಪು ಮತ್ತು 5 ಬೇ ಎಲೆ ಸೇರಿಸಿ.
- ಎಲ್ಲಾ ಮಸಾಲೆಗಳು ಸುಡದೆ ಪರಿಮಳ ಬರುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
- ಎಲ್ಲಾ ಮಸಾಲೆಗಳನ್ನು ತಣ್ಣಗಾಗಿಸಿ ಮಿಕ್ಸಿಗೆ ವರ್ಗಾಯಿಸಿ.
- ಈಗ ಮಿಕ್ಸರ್ ಗೆ 1 ಟೀಸ್ಪೂನ್ ಶುಂಠಿ ಪುಡಿಯನ್ನು ಸೇರಿಸಿ, ಒರಟಾದ ಪುಡಿಯನ್ನಾಗಿ ರುಬ್ಬಿಕೊಳ್ಳಿ.
- ಅಂತಿಮವಾಗಿ, ಗರಂ ಮಸಾಲ ಸಿದ್ಧವಾಗಿದೆ. ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ ಮತ್ತು ಮೇಲೋಗರಗಳಿಗೆ ಅಗತ್ಯವಿರುವಂತೆ ಬಳಸಿ.
ಹಂತ ಹಂತದ ಫೋಟೋದೊಂದಿಗೆ ಗರಂ ಮಸಾಲವನ್ನು ಹೇಗೆ ತಯಾರಿಸುವುದು:

ಟಿಪ್ಪಣಿಗಳು:
- ಮೊದಲನೆಯದಾಗಿ, ಎಲ್ಲಾ ಮಸಾಲೆಗಳು ಪರಿಮಳ ಬರುವವವರೆಗೆ ಕಡಿಮೆ ಉರಿಯಲ್ಲಿ ಹುರಿಯಲು ಖಚಿತಪಡಿಸಿಕೊಳ್ಳಿ.
- ಎಲ್ಲಾ ಮಸಾಲೆಗಳನ್ನು ಪ್ರತ್ಯೇಕವಾಗಿ ಹುರಿಯಿರಿ, ಇಲ್ಲದಿದ್ದರೆ ಅದು ಸುಡಬಹುದು.
- ಹಾಗೆಯೇ, ನಿಮ್ಮ ಆಯ್ಕೆಯ ಪ್ರಕಾರ ನೀವು ಮಸಾಲೆಗಳನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
- ಅಂತಿಮವಾಗಿ, ಗರಂ ಮಸಾಲಾ ಪಾಕವಿಧಾನ ತಾಜಾ ಮಸಾಲೆಗಳೊಂದಿಗೆ ತಯಾರಿಸಿ ಚೆನ್ನಾಗಿ ಹುರಿದಾಗ ತಿಂಗಳುಗಳವರೆಗೆ ಉತ್ತಮವಾಗಿರುತ್ತದೆ.