ಕಾಜುನ್ ಪೊಟಾಟೋ ರೆಸಿಪಿ | cajun potato in kannada

0

ಕಾಜುನ್ ಪೊಟಾಟೋ ಪಾಕವಿಧಾನ | ಕಾಜುನ್ ಮಸಾಲೆ ಆಲೂಗಡ್ಡೆ | ಬಾರ್ಬೆಕ್ಯೂ ನೇಷನ್ ಶೈಲಿಯ ಕಾಜುನ್ ಪೊಟಾಟೋದ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಈ ಸ್ಟಾರ್ಟರ್ ಪಾಕವಿಧಾನವು ಕ್ರೀಮಿ ಮತ್ತು ಟೇಸ್ಟಿ ಆಗಿದ್ದು, ಹಿಸುಕಿದ ಆಲೂಗಡ್ಡೆಗೆ ಕ್ರೀಮಿ ಮೇಯನೇಸ್ ಸಾಸ್‌ ಬೆರೆಸಿ ತಯಾರಿಸಲಾಗುತ್ತದೆ. ಮೂಲತಃ ಇದು ಸಸ್ಯಾಹಾರಿಗಳಿಗೆ, ಜನಪ್ರಿಯ ಮಾಂಸ ಆಧಾರಿತ ಕಾಜುನ್ ಪಾಕವಿಧಾನದ, ವಿಸ್ತರಣೆಯಾಗಿದೆ. ಇದು ಮೇನ್ ಕೋರ್ಸ್‌ಗೆ ಸ್ವಲ್ಪ ಮುಂಚಿತವಾಗಿ ತಿನ್ನಲಾಗಿತ್ತದೆ, ಹಾಗೂ ಬಾರ್ಬೆಕ್ಯೂ ನೇಷನ್ ನ ಜನಪ್ರಿಯ ಸ್ಟಾರ್ಟರ್‌ಗಳಲ್ಲಿ ಒಂದಾಗಿದೆ.
ಕಾಜುನ್ ಪೊಟಾಟೋ ಪಾಕವಿಧಾನ

ಕಾಜುನ್ ಪೊಟಾಟೋ ಪಾಕವಿಧಾನ | ಕಾಜುನ್ ಮಸಾಲೆ ಆಲೂಗಡ್ಡೆ | ಬಾರ್ಬೆಕ್ಯೂ ನೇಷನ್ ಶೈಲಿಯ ಕಾಜುನ್ ಪೊಟಾಟೋ ದ ಹಂತ ಹಂತವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಆಲೂಗೆಡ್ಡೆ ಆಧಾರಿತ ಭಕ್ಷ್ಯಗಳು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯವಾಗಿವೆ ಮತ್ತು ಇದನ್ನು ಊಟಕ್ಕೆ ಸ್ವಲ್ಪ ಮುಂಚಿತವಾಗಿ ಸ್ನಾಕ್ಸ್ ಅಥವಾ ಸ್ಟಾರ್ಟರ್ ಆಗಿ ನೀಡಲಾಗುತ್ತದೆ. ಇವು ಸಾಮಾನ್ಯವಾಗಿ ವಿನ್ಯಾಸದಲ್ಲಿ ಗರಿಗರಿಯಾಗಿ ಅಥವಾ ಕುರುಕುಲಾಗಿ ಮತ್ತು ಮಸಾಲೆಯುಕ್ತ ಅಥವಾ ಕಟುವಾದ ಸಾಸ್‌ನೊಂದಿಗೆ ನೀಡಲಾಗುತ್ತದೆ. ಆದಾಗ್ಯೂ, ಕ್ರೀಮಿ ಸಾಸ್‌ನಿಂದ ಮಾಡಿದ ಕಾಜುನ್ ಪೊಟಾಟೋ ಪಾಕವಿಧಾನದಂತಹ ಇತರ ವ್ಯತ್ಯಾಸಗಳಿವೆ.

ಆಲೂಗೆಡ್ಡೆ ಆಧಾರಿತ ತಿಂಡಿಗಳು ನನ್ನ ಸಾರ್ವಕಾಲಿಕ ಅಚ್ಚುಮೆಚ್ಚಿನವು. ಇದು ನನ್ನ ಮಧ್ಯಾಹ್ನದ ಊಟಕ್ಕೆ, ಸಂಜೆ ತಿಂಡಿಗೆ ಅಥವಾ ರಾತ್ರಿಯ ಭೋಜನಕ್ಕೆ ಕಡ್ಡಾಯವಾಗಿ ತಿನಿಸಾಗಿದೆ. ವಿಶೇಷವಾಗಿ ಆಲೂ ಫ್ರೈ ಜೊತೆ ಸಾರು ಅನ್ನ ಸಂಯೋಜನೆಯು ಶುದ್ಧ ಸ್ವರ್ಗವಾಗಿದೆ. ಆಲೂಗಡ್ಡೆ ಮೇಲಿನ ನನ್ನ ಪ್ರೀತಿ ಕೇವಲ ಗರಿಗರಿಯಾದ ತಿಂಡಿಗಳಿಗೆ ಸೀಮಿತವಾಗಿಲ್ಲ. ನಾನು ಪ್ಯಾನ್‌ಕೇಕ್, ಹ್ಯಾಶ್‌ಬ್ರೌನ್‌ಗಳು ಮತ್ತು ಬಾರ್ಬೆಕ್ಯೂ ನೇಷನ್ ನ ಕ್ರೀಮಿ ಕಾಜುನ್ ಆಲೂಗೆಡ್ಡೆ ಪಾಕವಿಧಾನದಂತಹ ಇತರ ರೂಪಾಂತರಗಳನ್ನು ಇಷ್ಟಪಡುತ್ತೇನೆ. ಹೇಗಾದರೂ, ಬಾರ್ಬೆಕ್ಯೂ ನೇಷನ್ ಶೈಲಿಯ ಕಾಜುನ್ ಆಲೂಗಡ್ಡೆಗಳೊಂದಿಗೆ, ಅದರಲ್ಲಿರುವ ಆಲೂಗಡ್ಡೆಗಿಂತ ನಾನು ಸಾಸ್ಅನ್ನು ಇಷ್ಟಪಡುತ್ತೇನೆ. ವಾಸ್ತವವಾಗಿ, ಮಯೊ, ಚಿಲ್ಲಿ ಸಾಸ್ ಮತ್ತು ಇತರ ಮಸಾಲೆಗಳ ಮಿಶ್ರಣವು ನಾಲಿಗೆಯನ್ನು ನೀರೂರಿಸುವಂತೆ ಮಾಡುತ್ತದೆ. ಇತರ ಹುರಿದ ತಿಂಡಿಗಳಿಗೆ ನೀವು ಇದೇ ಕಾಜುನ್ ಸಾಸ್ ಅನ್ನು ಬಳಸಬಹುದು.

ಕಾಜುನ್ ಮಸಾಲೆ ಆಲೂಗಡ್ಡೆಇದಲ್ಲದೆ, ಕಾಜುನ್ ಪೊಟಾಟೋ ಪಾಕವಿಧಾನಕ್ಕೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ಹೈಲೈಟ್ ಮಾಡಲು ನಾನು ಬಯಸುತ್ತೇನೆ. ಮೊದಲನೆಯದಾಗಿ, ಈ ಪಾಕವಿಧಾನಕ್ಕಾಗಿ ಸಣ್ಣ ಆಲೂಗಡ್ಡೆ ಅಥವಾ ಬೇಬಿ ಪೊಟಾಟೋ ಬಳಸಲು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ. ದೊಡ್ಡ ಆಲೂಗಡ್ಡೆ ಬಳಸುವುದನ್ನು ತಪ್ಪಿಸಿ, ಆದರೆ ನಮಗೆ ಅದು ದೊರಕದಿದ್ದರೆ, ಸಣ್ಣ ಗಾತ್ರದ ಒಂದನ್ನು ಬಳಸಿ ಮತ್ತು ಅದನ್ನು ಬೇಬಿ ಪೊಟಾಟೋ ಗಾತ್ರಕ್ಕೆ ಡೈಸ್ ಮಾಡಿ. ಎರಡನೆಯದಾಗಿ, ನಾನು 1 ಚಮಚ ಚಿಲ್ಲಿ ಸಾಸ್ ಸೇರಿಸುವ ಮೂಲಕ ಮಧ್ಯಮ ಮಸಾಲೆಯುಕ್ತ ಕಾಜುನ್ ಸಾಸ್ ಅನ್ನು ತಯಾರಿಸಿದ್ದೇನೆ. ಅದನ್ನು ಇನ್ನೂ ಸ್ಪೈಸಿಯರ್ ಮಾಡಲು ನೀವು ಇನ್ನೊಂದನ್ನು ಸೇರಿಸಬಹುದು. ಕೊನೆಯದಾಗಿ, ಸಾಸ್ ಕ್ರೀಮಿಯರ್ ಹಾಗೂ ಮಧ್ಯಮ ದಪ್ಪದ ಸ್ಥಿರತೆಯನ್ನು ಹೊಂದಲು ಸಾಕಷ್ಟು ಪ್ರಮಾಣದ ಹಾಲನ್ನು ಸೇರಿಸಿ. ನೀವು ಹಾಲಿಗೆ ಪರ್ಯಾಯವಾಗಿ ಅಡುಗೆ ಕ್ರೀಮ್ ಅನ್ನು ಕೂಡ ಸೇರಿಸಬಹುದು.

ಅಂತಿಮವಾಗಿ, ಕಾಜುನ್ ಪೊಟಾಟೋ ಪಾಕವಿಧಾನದ ಈ ಪೋಸ್ಟ್ನೊಂದಿಗೆ ನನ್ನ ಇತರ ತಿಂಡಿಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸಲು ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ನನ್ನ ಇತರ ಸಂಬಂಧಿತ ಪಾಕವಿಧಾನಗಳಾದ ಆಲೂಗೆಡ್ಡೆ ಚಿಪ್ಸ್, ಆಲೂಗೆಡ್ಡೆ ಲಾಲಿಪಾಪ್, ಆಲೂ ಕೆ ಕಬಾಬ್, ಆಲೂ ಪನೀರ್ ಟಿಕ್ಕಿ, ಬಟಾಟಾ ವಡಾ, ಬ್ರೆಡ್ ಬಾಲ್, ಆಲೂ ಟಿಕ್ಕಿ, ಆಲೂ ಮಂಚೂರಿಯನ್, ಪೊಟಾಟೋ ಬೈಟ್ಸ್, ಪಾಲಕ್ ಕಟ್ಲೆಟ್ ಅನ್ನು ಒಳಗೊಂಡಿದೆ. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಸಂಬಂಧಿತ ಪಾಕವಿಧಾನ ವಿಭಾಗಗಳನ್ನು ಸೇರಿಸಲು ಬಯಸುತ್ತೇನೆ,

ಕಾಜುನ್ ಪೊಟಾಟೋ ವೀಡಿಯೊ ಪಾಕವಿಧಾನ:

Must Read:

ಕಾಜುನ್ ಮಸಾಲೆ ಆಲೂಗೆಡ್ಡೆ ಪಾಕವಿಧಾನ ಕಾರ್ಡ್:

cajun potato recipe

ಕಾಜುನ್ ಪೊಟಾಟೋ ರೆಸಿಪಿ | cajun potato in kannada

No ratings yet
ತಯಾರಿ ಸಮಯ: 10 minutes
ಅಡುಗೆ ಸಮಯ: 20 minutes
ಒಟ್ಟು ಸಮಯ : 30 minutes
ಸೇವೆಗಳು: 3 ಸೇವೆಗಳು
AUTHOR: HEBBARS KITCHEN
ಕೋರ್ಸ್: ಅಪೇಟೈಸರ್, ಸ್ಟಾರ್ಟರ್ಸ್
ಪಾಕಪದ್ಧತಿ: ಅಂತಾರಾಷ್ಟ್ರೀಯ
ಕೀವರ್ಡ್: ಕಾಜುನ್ ಪೊಟಾಟೋ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಕಾಜುನ್ ಪೊಟಾಟೋ ಪಾಕವಿಧಾನ

ಪದಾರ್ಥಗಳು

ಪ್ರೆಷರ್ ಕುಕ್ ಮಾಡಲು:

  • 15 ಬೇಬಿ ಆಲೂಗಡ್ಡೆ
  • ½ ಟೀಸ್ಪೂನ್ ಉಪ್ಪು
  • ನೀರು, ಬೇಯಿಸಲು

ಗರಿಗರಿಯಾದ ಆಲೂಗಡ್ಡೆಗಾಗಿ:

  • ¼ ಕಪ್ ಕಾರ್ನ್ ಫ್ಲೋರ್
  • ¼ ಕಪ್ ಮೈದಾ
  • ½ ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್
  • ½ ಟೀಸ್ಪೂನ್ ಮಿಕ್ಸೆಡ್ ಹೆರ್ಬ್ಸ್
  • ¼ ಟೀಸ್ಪೂನ್ ಬಿಳಿ ಮೆಣಸು ಪುಡಿ / ಬಿಳಿ ಪೆಪ್ಪರ್
  • ½ ಟೀಸ್ಪೂನ್ ಉಪ್ಪು
  • ½ ಕಪ್ ನೀರು
  • ಎಣ್ಣೆ, ಹುರಿಯಲು

ಕಾಜುನ್ ಸಾಸ್ಗಾಗಿ:

  • ¾ ಕಪ್ ಮಯೋನೀಸ್, ಮೊಟ್ಟೆಯಿಲ್ಲದ
  • ½ ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್
  • ½ ಟೀಸ್ಪೂನ್ ಮಿಕ್ಸೆಡ್ ಹೆರ್ಬ್ಸ್
  • ¼ ಟೀಸ್ಪೂನ್ ಬಿಳಿ ಮೆಣಸು ಪುಡಿ / ಬಿಳಿ ಪೆಪ್ಪರ್
  • ½ ಟೀಸ್ಪೂನ್ ಬೆಳ್ಳುಳ್ಳಿ ಪುಡಿ
  • ½ ಟೀಸ್ಪೂನ್ ಕೆಂಪು ಮೆಣಸಿನ ಪುಡಿ
  • ½ ಟೀಸ್ಪೂನ್ ಈರುಳ್ಳಿ ಪುಡಿ
  • ½ ಟೀಸ್ಪೂನ್ ಉಪ್ಪು
  • 1 ಟೀಸ್ಪೂನ್ ಚಿಲ್ಲಿ ಸಾಸ್
  • 3 ಟೇಬಲ್ಸ್ಪೂನ್ ಹಾಲು

ಇತರ ಪದಾರ್ಥಗಳು:

  • 1 ಟೀಸ್ಪೂನ್ ಈರುಳ್ಳಿ, ಸಣ್ಣಗೆ ಕತ್ತರಿಸಿದ
  • 1 ಟೀಸ್ಪೂನ್ ಕೊತ್ತಂಬರಿ ಸೊಪ್ಪು, ಸಣ್ಣಗೆ ಕತ್ತರಿಸಿದ

ಸೂಚನೆಗಳು

  • ಮೊದಲನೆಯದಾಗಿ ಕುಕ್ಕರ್ ನಲ್ಲಿ, 15 ಬೇಬಿ ಪೊಟಾಟೋ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
  • 2 ಸೀಟಿ ಅಥವಾ ಆಲೂಗಡ್ಡೆ 90% ಬೇಯುವವವರೆಗೆ ಬೇಯಿಸಿ.
  • ಆಲೂಗಡ್ಡೆ ತೆಗೆದು, ಒತ್ತಿ ಸ್ವಲ್ಪ ಚಪ್ಪಟೆ ಮಾಡಿ. ನಂತರ ಪಕ್ಕಕ್ಕೆ ಇರಿಸಿ.
  • ಸಣ್ಣ ಬಟ್ಟಲಿನಲ್ಲಿ ¼ ಕಪ್ ಕಾರ್ನ್ ಫ್ಲೋರ್, ¼ ಕಪ್ ಮೈದಾ, ½ ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್, ½ ಟೀಸ್ಪೂನ್ ಮಿಕ್ಸೆಡ್ ಹೆರ್ಬ್ಸ್, ¼ ಟೀಸ್ಪೂನ್ ಬಿಳಿ ಮೆಣಸು ಪುಡಿ ಮತ್ತು ½ ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
  • ½ ಕಪ್ ನೀರನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮೃದುವಾದ ಉಂಡೆ ರಹಿತ ಬ್ಯಾಟರ್ ಅನ್ನು ರೂಪಿಸಿ.
  • ಈಗ ಬೇಯಿಸಿದ ಆಲೂಗಡ್ಡೆಯನ್ನು ಸ್ಲರಿ ಲೇಪನಕ್ಕೆ ಏಕರೂಪವಾಗಿ ಅದ್ದಿ.
  • ಮಧ್ಯಮ ಉರಿಯಲ್ಲಿ ಆಲೂಗಡ್ಡೆಯನ್ನು ಶ್ಯಾಲೋ ಫ್ರೈ ಮಾಡಿ. ಆಲೂಗಡ್ಡೆ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಎರಡೂ ಬದಿ ಫ್ರೈ ಮಾಡಿ.
  • ಬೆಣ್ಣೆಯ ಫ್ಲೇವರ್ ಹೊಂದಲು ½ ಟೀಸ್ಪೂನ್ ಬೆಣ್ಣೆ ಸೇರಿಸಿ ಫ್ರೈ ಮಾಡಿ, ನಂತರ ಪಕ್ಕಕ್ಕೆ ಇರಿಸಿ.
  • ಈಗ ಸಣ್ಣ ಬಟ್ಟಲಿನಲ್ಲಿ ¾ ಕಪ್ ಮಯೋ, ½ ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್ ಮತ್ತು ½ ಟೀಸ್ಪೂನ್ ಮಿಕ್ಸೆಡ್ ಹೆರ್ಬ್ಸ್ ತೆಗೆದುಕೊಳ್ಳಿ.
  • ¼ ಟೀಸ್ಪೂನ್ ಬಿಳಿ ಮೆಣಸು ಪುಡಿ, ½ ಟೀಸ್ಪೂನ್ ಬೆಳ್ಳುಳ್ಳಿ ಪುಡಿ, ½ ಟೀಸ್ಪೂನ್ ಕೆಂಪುಮೆಣಸು ಪುಡಿ, ½ ಟೀಸ್ಪೂನ್ ಈರುಳ್ಳಿ ಪುಡಿ, ½ ಟೀಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ಚಿಲ್ಲಿ ಸಾಸ್ ಸೇರಿಸಿ.
  • ನಯವಾದ ಪೇಸ್ಟ್ ಗೆ, ಚೆನ್ನಾಗಿ ಮಿಶ್ರಣ ಮಾಡಿ.
  • ಈಗ 3 ಟೀಸ್ಪೂನ್ ಹಾಲು ಅಥವಾ ಅಗತ್ಯವಿರುವಂತೆ ಸೇರಿಸಿ ಮತ್ತು ಮೃದುವಾದ ಹರಿಯುವ ಸ್ಥಿರತೆಯ ಸಾಸ್ ತಯಾರಿಸಿ.
  • ಸೇವಿಸಲು, ಒಂದು ತಟ್ಟೆಯಲ್ಲಿ ಹುರಿದ ಆಲೂಗಡ್ಡೆಯ ನಡುವೆ ಸ್ವಲ್ಪ ಅಂತರವನ್ನು ಮಾಡಿರಿ.
  • ಅದರ ಮೇಲೆ ಉದಾರವಾದ ಕಾಜುನ್ ಸಾಸ್ ಸುರಿಯಿರಿ.
  • ಕೆಂಪುಮೆಣಸು ಪುಡಿ, 1 ಟೀಸ್ಪೂನ್ ಈರುಳ್ಳಿ ಮತ್ತು 1 ಟೀಸ್ಪೂನ್ ಕೊತ್ತಂಬರಿ ಸೊಪ್ಪು ಸಿಂಪಡಿಸಿ.
  • ಅಂತಿಮವಾಗಿ, ಕಾಜುನ್ ಆಲೂಗಡ್ಡೆ ಆನಂದಿಸಲು ಸಿದ್ಧವಾಗಿದೆ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಕಾಜುನ್ ಪೊಟಾಟೋ ತಯಾರಿಸುವುದು ಹೇಗೆ:

  1. ಮೊದಲನೆಯದಾಗಿ ಕುಕ್ಕರ್ ನಲ್ಲಿ, 15 ಬೇಬಿ ಪೊಟಾಟೋ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
  2. 2 ಸೀಟಿ ಅಥವಾ ಆಲೂಗಡ್ಡೆ 90% ಬೇಯುವವವರೆಗೆ ಬೇಯಿಸಿ.
  3. ಆಲೂಗಡ್ಡೆ ತೆಗೆದು, ಒತ್ತಿ ಸ್ವಲ್ಪ ಚಪ್ಪಟೆ ಮಾಡಿ. ನಂತರ ಪಕ್ಕಕ್ಕೆ ಇರಿಸಿ.
  4. ಸಣ್ಣ ಬಟ್ಟಲಿನಲ್ಲಿ ¼ ಕಪ್ ಕಾರ್ನ್ ಫ್ಲೋರ್, ¼ ಕಪ್ ಮೈದಾ, ½ ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್, ½ ಟೀಸ್ಪೂನ್ ಮಿಕ್ಸೆಡ್ ಹೆರ್ಬ್ಸ್, ¼ ಟೀಸ್ಪೂನ್ ಬಿಳಿ ಮೆಣಸು ಪುಡಿ ಮತ್ತು ½ ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
  5. ½ ಕಪ್ ನೀರನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮೃದುವಾದ ಉಂಡೆ ರಹಿತ ಬ್ಯಾಟರ್ ಅನ್ನು ರೂಪಿಸಿ.
  6. ಈಗ ಬೇಯಿಸಿದ ಆಲೂಗಡ್ಡೆಯನ್ನು ಸ್ಲರಿ ಲೇಪನಕ್ಕೆ ಏಕರೂಪವಾಗಿ ಅದ್ದಿ.
  7. ಮಧ್ಯಮ ಉರಿಯಲ್ಲಿ ಆಲೂಗಡ್ಡೆಯನ್ನು ಶ್ಯಾಲೋ ಫ್ರೈ ಮಾಡಿ. ಆಲೂಗಡ್ಡೆ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಎರಡೂ ಬದಿ ಫ್ರೈ ಮಾಡಿ.
  8. ಬೆಣ್ಣೆಯ ಫ್ಲೇವರ್ ಹೊಂದಲು ½ ಟೀಸ್ಪೂನ್ ಬೆಣ್ಣೆ ಸೇರಿಸಿ ಫ್ರೈ ಮಾಡಿ, ನಂತರ ಪಕ್ಕಕ್ಕೆ ಇರಿಸಿ.
  9. ಈಗ ಸಣ್ಣ ಬಟ್ಟಲಿನಲ್ಲಿ ¾ ಕಪ್ ಮಯೋ, ½ ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್ ಮತ್ತು ½ ಟೀಸ್ಪೂನ್ ಮಿಕ್ಸೆಡ್ ಹೆರ್ಬ್ಸ್ ತೆಗೆದುಕೊಳ್ಳಿ.
  10. ¼ ಟೀಸ್ಪೂನ್ ಬಿಳಿ ಮೆಣಸು ಪುಡಿ, ½ ಟೀಸ್ಪೂನ್ ಬೆಳ್ಳುಳ್ಳಿ ಪುಡಿ, ½ ಟೀಸ್ಪೂನ್ ಕೆಂಪುಮೆಣಸು ಪುಡಿ, ½ ಟೀಸ್ಪೂನ್ ಈರುಳ್ಳಿ ಪುಡಿ, ½ ಟೀಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ಚಿಲ್ಲಿ ಸಾಸ್ ಸೇರಿಸಿ.
  11. ನಯವಾದ ಪೇಸ್ಟ್ ಗೆ, ಚೆನ್ನಾಗಿ ಮಿಶ್ರಣ ಮಾಡಿ.
  12. ಈಗ 3 ಟೀಸ್ಪೂನ್ ಹಾಲು ಅಥವಾ ಅಗತ್ಯವಿರುವಂತೆ ಸೇರಿಸಿ ಮತ್ತು ಮೃದುವಾದ ಹರಿಯುವ ಸ್ಥಿರತೆಯ ಸಾಸ್ ತಯಾರಿಸಿ.
  13. ಸೇವಿಸಲು, ಒಂದು ತಟ್ಟೆಯಲ್ಲಿ ಹುರಿದ ಆಲೂಗಡ್ಡೆಯ ನಡುವೆ ಸ್ವಲ್ಪ ಅಂತರವನ್ನು ಮಾಡಿರಿ.
  14. ಅದರ ಮೇಲೆ ಉದಾರವಾದ ಕಾಜುನ್ ಸಾಸ್ ಸುರಿಯಿರಿ.
  15. ಕೆಂಪುಮೆಣಸು ಪುಡಿ, 1 ಟೀಸ್ಪೂನ್ ಈರುಳ್ಳಿ ಮತ್ತು 1 ಟೀಸ್ಪೂನ್ ಕೊತ್ತಂಬರಿ ಸೊಪ್ಪು ಸಿಂಪಡಿಸಿ.
  16. ಅಂತಿಮವಾಗಿ, ಕಾಜುನ್ ಪೊಟಾಟೋ ಆನಂದಿಸಲು ಸಿದ್ಧವಾಗಿದೆ.
    ಕಾಜುನ್ ಪೊಟಾಟೋ ಪಾಕವಿಧಾನ

ಟಿಪ್ಪಣಿಗಳು:

  • ಮೊದಲನೆಯದಾಗಿ, ಸಣ್ಣ ಗಾತ್ರದ ಆಲೂಗಡ್ಡೆಗಳನ್ನು ಆಯ್ಕೆ ಮಾಡಲು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಅದು ಚೆನ್ನಾಗಿ ಆಗುವುದಿಲ್ಲ.
  • ಮೆಣಸಿನಕಾಯಿ ಪ್ರಮಾಣವನ್ನು ನಿಮ್ಮ ಮಸಾಲೆ ಮಟ್ಟಕ್ಕೆ ಹೊಂದಿಸಿ.
  • ಹಾಗೆಯೇ, ನಿಮ್ಮ ಬಳಿ ಈರುಳ್ಳಿ ಪುಡಿ ಮತ್ತು ಬೆಳ್ಳುಳ್ಳಿ ಪುಡಿಯು ಇಲ್ಲದಿದ್ದರೆ, ನೀವು ಸಣ್ಣಗೆ ಕತ್ತರಿಸಿದ ತಾಜಾ ಪದಾರ್ಥಗಳನ್ನು ಬಳಸಬಹುದು.
  • ಅಂತಿಮವಾಗಿ, ಸ್ವಲ್ಪ ಮಸಾಲೆಯುಕ್ತ ಮತ್ತು ಕ್ರೀಮಿಯಾಗಿ ತಯಾರಿಸಿದಾಗ ಕಾಜುನ್ ಪೊಟಾಟೋ ಪಾಕವಿಧಾನ ಉತ್ತಮ ರುಚಿ ನೀಡುತ್ತದೆ.