ಕಾರ್ನ್ ಕಟ್ಲೆಟ್ ರೆಸಿಪಿ | corn cutlet in kannada | ಕಾರ್ನ್ ಕಬಾಬ್

0

ಕಾರ್ನ್ ಕಟ್ಲೆಟ್ ಪಾಕವಿಧಾನ | ಕ್ರಿಸ್ಪಿ ಕಾರ್ನ್ ಕಬಾಬ್ | ಗರಿಗರಿಯಾದ ಕಾರ್ನ್ ಕಬಾಬ್ ನ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಮೂಲಭೂತವಾಗಿ ಎಣ್ಣೆಯಲ್ಲಿ ಹುರಿದ ಕಬಾಬ್ ಪಾಕವಿಧಾನವಾಗಿದ್ದು ಮುಖ್ಯವಾಗಿ ಕಾರ್ನ್ ಕರ್ನೆಲ್ಸ್ ಅನ್ನು ಇತರ ತರಕಾರಿಗಳೊಂದಿಗೆ ಬೆರೆಸುವ ಮೂಲಕ ತಯಾರಿಸಲಾಗುತ್ತದೆ. ಇದು ಒಂದು ಪರಿಪೂರ್ಣ ಮತ್ತು ಬಾಯಲ್ಲಿ ನೀರೂರಿಸುವ ಸ್ನ್ಯಾಕ್ ಅಥವಾ ಅಪ್ಪೆಟೈಝೆರ್ ಆಗಿದ್ದು, ಸೈಡ್ಸ್ ನಂತೆ ಅಥವಾ ಸಂಜೆಯ ತಿಂಡಿಯಾಗಿ ಸಹ ಸವಿಯಬಹುದು. ಕಾರ್ನ್ ಕಟ್ಲೆಟ್ ರೆಸಿಪಿ

ಕಾರ್ನ್ ಕಟ್ಲೆಟ್ ಪಾಕವಿಧಾನ | ಕ್ರಿಸ್ಪಿ ಕಾರ್ನ್ ಕಬಾಬ್ | ಗರಿಗರಿಯಾದ ಕಾರ್ನ್ ಕಬಾಬ್ ನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಯಾವುದೇ ಇತರ ತರಕಾರಿ ಕಬಾಬ್ ಪಾಕವಿಧಾನ ಅಥವಾ ಕಟ್ಲೆಟ್ ಪಾಕವಿಧಾನದ ಹಾಗೆ, ತುರಿದ ಆಲೂಗಡ್ಡೆಯು ಈ ಪಾಕವಿಧಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕಾರ್ನ್ ಕರ್ನಲ್ಗಳು ಈ ಕಬಾಬ್ ಪಾಕವಿಧಾನಕ್ಕೆ ಉತ್ತಮ ಫ್ಲೇವರ್ ಮತ್ತು ರುಚಿಯನ್ನು ಸೇರಿಸುತ್ತದೆ. ಇದಲ್ಲದೆ ಈ ಪಾಕವಿಧಾನದಲ್ಲಿನ ಕಬಾಬ್ಗಳನ್ನು, ಕಟ್ಲೆಟ್ ನ ಹಾಗೆ ಎಣ್ಣೆಯಲ್ಲಿ ಹುರಿಯಲ್ಪಟ್ಟಿವೆ ಮತ್ತು ಯಾವುದೇ ಸಾಂಪ್ರದಾಯಿಕ ಕಬಾಬ್ ಪಾಕವಿಧಾನದಂತೆ ಗ್ರಿಲ್ ಮಾಡಿಲ್ಲ.

ನಾನು ಈಗಾಗಲೇ ಬೇಯಿಸಿದ ಆಲೂಗಡ್ಡೆ ಮತ್ತು ಇತರ ಮಿಶ್ರಣ ತರಕಾರಿಗಳಿಂದ ತಯಾರಿಸಲ್ಪಟ್ಟ ಸರಳ ವೆಜ್ ಕಟ್ಲೆಟ್ ಪಾಕವಿಧಾನವನ್ನು ಪೋಸ್ಟ್ ಮಾಡಿದ್ದೇನೆ. ಈ ಕಾರ್ನ್ ಕಟ್ಲೆಟ್ ಪಾಕವಿಧಾನದಲ್ಲಿ ನಾನು ಅದೇ ಕಾರ್ಯವಿಧಾನ ಮತ್ತು ಬೈಂಡಿಂಗ್ ಏಜೆಂಟ್ ಅನ್ನು ಅನುಸರಿಸಿದ್ದೇನೆ, ಆದರೆ ಈ ಪಾಕವಿಧಾನದಲ್ಲಿ ಬೇಯಿಸಿದ ಮತ್ತು ಹಿಸುಕಿದ ಆಲೂಗಡ್ಡೆಗಳೊಂದಿಗೆ ಸಿಹಿ ಕಾರ್ನ್ ಕರ್ನಲ್ಗಳು ಸಹ ಪ್ರಮುಖ ಪಾತ್ರ ವಹಿಸುತ್ತದೆ. ಆಲೂಗಡ್ಡೆಯನ್ನು ಬೇಯಿಸಿದ ನಂತರ, ನಾನು ಅದನ್ನು ಡ್ರೈ ಆಗಿ ಇಟ್ಟಿದ್ದೇನೆ, ಇಲ್ಲದಿದ್ದರೆ ಕಟ್ಲೆಟ್ ಹಿಟ್ಟು ತೇವಾಂಶದಿಂದ ಕೂಡಿದ್ದು ಅದಕ್ಕೆ ಆಕಾರ ನೀಡಲು ಮತ್ತು ಎಣ್ಣೆಯಲ್ಲಿ ಹುರಿಯಲು ಕಷ್ಟವಾಗುತ್ತದೆ. ಹಾಗಾಗಿ ನಿಮ್ಮ ಕಟ್ಲೆಟ್ಗಳನ್ನು ಹುರಿಯುವಾಗ ಬೇರೆ ಬೇರೆಯಾದರೆ, ಅದರೊಳಗೆ ತೇವಾಂಶವಿದೆ ಎಂದು ಅರ್ಥ. ಇದನ್ನು ಮತ್ತಷ್ಟು ಒಣಗಲು ಬ್ರೆಡ್ ಕ್ರಂಬ್ಸ್ ಗಳನ್ನು ಸೇರಿಸಿ.

ಕಾರ್ನ್ ಕಬಾಬ್ ಇದಲ್ಲದೆ ಗರಿಗರಿಯಾದ ಕಾರ್ನ್ ಕಬಾಬ್ ಗೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲಿಗೆ, ಈ ಕಾರ್ನ್ ಕಟ್ಲೆಟ್ ಪಾಕವಿಧಾನದಲ್ಲಿ ಎಲ್ಲಾ ತರಕಾರಿಗಳಿಗೆ ನಾನು ಕಾರ್ನ್ ಫ್ಲೋರ್ ಅನ್ನು ಬೈಂಡಿಂಗ್ ಏಜೆಂಟ್ ಆಗಿ ಬಳಸಿದ್ದೇನೆ. ಪರ್ಯಾಯವಾಗಿ, ಅಕ್ಕಿ ಹಿಟ್ಟು ಬಳಸುವುದರಿಂದ ಸಹ ಈ ಕಬಾಬ್ ಅನ್ನು ಇನ್ನಷ್ಟು ಗರಿಗರಿಯಾಗುವಂತೆ ಮಾಡುತ್ತದೆ. ಎರಡನೆಯದಾಗಿ, ಕಬಾಬ್ ಗೆ ನಿಮ್ಮ ಆಯ್ಕೆಯ ಯಾವುದೇ ಆಕಾರಗಳನ್ನು ನೀಡಬಹುದು. ಸೀಕ್ ಕಬಾಬ್ ನ ಹಾಗೆ ಕಡ್ಡಿಗೆ ಸುತ್ತಿಸಿಕೊಳ್ಳಬಹುದು ಮತ್ತು ನಂತರ ಎಣ್ಣೆಯಲ್ಲಿ ಹುರಿಯಬಹುದು. ಕೊನೆಯದಾಗಿ, ಕಬಾಬ್ ಅನ್ನು ಯಾವಾಗಲೂ ಮಧ್ಯಮದಿಂದ ಕಡಿಮೆ ಜ್ವಾಲೆಯಲ್ಲಿ ಹುರಿಯಬೇಕು. ಹೆಚ್ಚಿನ ಶಾಖದಲ್ಲಿ ಅವುಗಳನ್ನು ಎಣ್ಣೆಯಲ್ಲಿ ಫ್ರೈ ಮಾಡಬೇಡಿ, ಏಕೆಂದರೆ ಕಬಾಬ್ ಎಣ್ಣೆಯಲ್ಲಿ ಮುರಿಯಬಹುದು.

ಅಂತಿಮವಾಗಿ, ನನ್ನ ಬ್ಲಾಗ್ನಿಂದ ನನ್ನ ಇತರ ತಿಂಡಿಗಳು ಪಾಕವಿಧಾನಗಳ ಸಂಗ್ರಹವನ್ನು ನಾನು ಹೈಲೈಟ್ ಮಾಡಲು ಬಯಸುತ್ತೇನೆ. ಇದು ಮುಖ್ಯವಾಗಿ ಒಳಗೊಂಡಿದೆ, ಬಟಾಣಿ ಕಚೋರಿ, ಕಾಕ್ಟೈಲ್ ಸಮೋಸಾ, ವೆಜ್ ಪಫ್, ನಿಪ್ಪಟ್ಟು, ರವಾ ಧೋಕ್ಲಾ, ಅಚಾರಿ ಪನೀರ್ ಟಿಕ್ಕಾ, ದಹಿ ಕೆ ಕಬಾಬ್, ಬೇಕ್ ಮಾಡಿದ ಪಾವ್ ಮತ್ತು ಚಿಲ್ಲಿ ಚೀಸ್ ಟೋಸ್ಟ್ ರೆಸಿಪಿ. ಇದರ ಜೊತೆಗೆ ನನ್ನ ಇತರ ಪಾಕವಿಧಾನ ಸಂಗ್ರಹವನ್ನು ಭೇಟಿ ಮಾಡಿ,

ಕ್ರಿಸ್ಪಿ ಕಾರ್ನ್ ಕಟ್ಲೆಟ್ ವೀಡಿಯೊ ಪಾಕವಿಧಾನ:

Must Read:

ಗರಿಗರಿಯಾದ ಕಾರ್ನ್ ಕಬಾಬ್ ಪಾಕವಿಧಾನ ಕಾರ್ಡ್:

corn kabab recipe

ಕಾರ್ನ್ ಕಟ್ಲೆಟ್ ರೆಸಿಪಿ | corn cutlet in kannada | ಕಾರ್ನ್ ಕಬಾಬ್

No ratings yet
ತಯಾರಿ ಸಮಯ: 10 minutes
ಅಡುಗೆ ಸಮಯ: 20 minutes
ಒಟ್ಟು ಸಮಯ : 30 minutes
ಸೇವೆಗಳು: 10 ಸೇವೆಗಳು
AUTHOR: HEBBARS KITCHEN
ಕೋರ್ಸ್: ತಿಂಡಿಗಳು
ಪಾಕಪದ್ಧತಿ: ಭಾರತೀಯ
ಕೀವರ್ಡ್: ಕಾರ್ನ್ ಕಟ್ಲೆಟ್ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಕಾರ್ನ್ ಕಟ್ಲೆಟ್ ಪಾಕವಿಧಾನ | ಕ್ರಿಸ್ಪಿ ಕಾರ್ನ್ ಕಬಾಬ್ | ಗರಿಗರಿಯಾದ ಕಾರ್ನ್ ಕಬಾಬ್

ಪದಾರ್ಥಗಳು

  • 1 ಕಪ್ + 2 ಟೇಬಲ್ಸ್ಪೂನ್ ಕಾರ್ನ್ (ತಾಜಾ / ಫ್ರೋಝನ್)
  • 2 ಆಲೂಗಡ್ಡೆ (ಬೇಯಿಸಿದ ಮತ್ತು ಹಿಸುಕಿದ)
  • ½ ಈರುಳ್ಳಿ (ಸಣ್ಣಗೆ ಕತ್ತರಿಸಿದ)
  • ¼ ಕ್ಯಾಪ್ಸಿಕಂ (ಸಣ್ಣಗೆ ಕತ್ತರಿಸಿದ)
  • 1 ಹಸಿರು ಮೆಣಸಿನಕಾಯಿ (ಸಣ್ಣಗೆ ಕತ್ತರಿಸಿದ)
  • ½ ಟೀಸ್ಪೂನ್ ಶುಂಠಿ ಪೇಸ್ಟ್
  • ½ ಟೀಸ್ಪೂನ್ ಕಾಶ್ಮೀರಿ ಮೆಣಸಿನ ಪುಡಿ
  • ರುಚಿಗೆ ತಕ್ಕಷ್ಟು ಉಪ್ಪು
  • ¼ ಟೀಸ್ಪೂನ್ ಅರಿಶಿನ ಪೌಡರ್
  • ½ ಟೀಸ್ಪೂನ್ ಗರಂ ಮಸಾಲಾ ಪೌಡರ್
  • 1 ಟೇಬಲ್ಸ್ಪೂನ್ ಕಡಲೆ ಹಿಟ್ಟು (ಹುರಿದ)
  • ½ ಟೀಸ್ಪೂನ್ ಚಾಟ್ ಮಸಾಲಾ
  • ¼ ಕಪ್ ಬ್ರೆಡ್ ಕ್ರಂಬ್ಸ್
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)
  • 1 ಟೇಬಲ್ಸ್ಪೂನ್ ಕಾರ್ನ್ ಹಿಟ್ಟು
  • ¼ ಟೀಸ್ಪೂನ್ ಪೆಪ್ಪರ್ (ಪುಡಿಮಾಡಿದ)
  • 1 ಟೇಬಲ್ಸ್ಪೂನ್ ನಿಂಬೆ ರಸ
  • ಎಣ್ಣೆ (ಹುರಿಯಲು)

ಸೂಚನೆಗಳು

  • ಮೊದಲಿಗೆ, ಸಣ್ಣ ಬ್ಲೆಂಡರ್ನಲ್ಲಿ ಬೇಯಿಸಿದ ಕಾರ್ನ್ ಅನ್ನು ತೆಗೆದುಕೊಳ್ಳಿ. ಕಾರ್ನ್ ತಾಜಾವಾಗಿದ್ದರೆ ಬೇಯಿಸುವುದನ್ನು ಖಚಿತಪಡಿಸಿಕೊಳ್ಳಿ.
  • ಯಾವುದೇ ನೀರನ್ನು ಸೇರಿಸದೆಯೇ ಒರಟಾದ ಪೇಸ್ಟ್ಗೆ ರುಬ್ಬಿಕೊಳ್ಳಿ.
  • ಪೇಸ್ಟ್ ಅನ್ನು ದೊಡ್ಡ ಮಿಶ್ರಣ ಬಟ್ಟಲಿಗೆ ವರ್ಗಾಯಿಸಿ.
  • ಬೇಯಿಸಿದ ಮತ್ತು ಹಿಸುಕಿದ ಆಲೂಗಡ್ಡೆ ಸೇರಿಸಿ.
  • ಹೆಚ್ಚುವರಿಯಾಗಿ ಈರುಳ್ಳಿ, ಕ್ಯಾಪ್ಸಿಕಂ, ಮೆಣಸಿನಕಾಯಿ ಮತ್ತು ಶುಂಠಿ ಪೇಸ್ಟ್ ಸೇರಿಸಿ.
  • ಇದಲ್ಲದೆ ½ ಟೀಸ್ಪೂನ್ ಮೆಣಸಿನ ಪುಡಿ, ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಗರಂ ಮಸಾಲಾ ಪೌಡರ್, ½ ಟೀಸ್ಪೂನ್ ಚಾಟ್ ಮಸಾಲಾ ಮತ್ತು ಉಪ್ಪು ಸೇರಿಸಿ.
  • ¼ ಕಪ್ ಬ್ರೆಡ್ ಕ್ರಂಬ್ಸ್ ಅನ್ನು ಸಹ ಸೇರಿಸಿ. ಅಥವಾ ತಾಜಾ ಬ್ರೆಡ್ ಅನ್ನು ಸೇರಿಸಿ ಹಿಸುಕಿ.
  • 1 ಟೇಬಲ್ಸ್ಪೂನ್ ಹುರಿದ ಬೇಸನ್ / ಕಡಲೆ ಹಿಟ್ಟು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
  • 1 ಟೇಬಲ್ಸ್ಪೂನ್ ಕಾರ್ನ್ ಹಿಟ್ಟು, 2 ಟೇಬಲ್ಸ್ಪೂನ್ ಬೇಯಿಸಿದ ಕಾರ್ನ್ ಮತ್ತು ಕರಿ ಮೆಣಸು ಪುಡಿ ಸೇರಿಸಿ.
  • ನಿಂಬೆ ರಸವನ್ನು ಸಹ ಸೇರಿಸಿ.
  • ಹಿಟ್ಟನ್ನು ರೂಪಿಸಲು ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಿ.
  • ಹೆಚ್ಚು ತೇವಾಂಶ ಇದ್ದರೆ ಹೆಚ್ಚು ಬ್ರೆಡ್ ಕ್ರಂಬ್ಸ್ ಸೇರಿಸಿ.
  • ನಾನ್ ಸ್ಟಿಕಿ ಹಿಟ್ಟನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ.
  • ಇದಲ್ಲದೆ, ಎಣ್ಣೆಯಿಂದ ಕೈಗಳನ್ನು ಗ್ರೀಸ್ ಮಾಡಿ ಬುಲೆಟ್ ಆಕಾರದ ಕಬಾಬ್ಗಳನ್ನು ರಚಿಸಿ. ಗ್ರೀಸ್ ಮಾಡುವುದರಿಂದ  ಹಿಟ್ಟು ಕೈಯಲ್ಲಿ ಅಂಟದಂತೆ ಸಾಹಾಯ ಮಾಡುತ್ತದೆ.
  • ಅವುಗಳನ್ನು ಬಿಸಿ ಎಣ್ಣೆಯಲ್ಲಿ ಬಿಡಿ. ಪರ್ಯಾಯವಾಗಿ, ನೀವು ಆಹಾರ ಜಾಗೃತರಾಗಿದ್ದರೆ ಅವುಗಳನ್ನು ಬೇಕ್ ಅಥವಾ ಪ್ಯಾನ್ ಫ್ರೈ ಮಾಡಬಹುದು.
  • ಕಬಾಬ್ಗಳನ್ನು ಮುರಿಯದೆ ಸಾಂದರ್ಭಿಕವಾಗಿ ಬೆರೆಸಿ.
  • ಮಧ್ಯಮ ಜ್ವಾಲೆಯ ಮೇಲೆ ಗೋಲ್ಡನ್ ಬ್ರೌನ್ ಆಗುವ ತನಕ ಹುರಿಯಿರಿ.
  • ಅಂತಿಮವಾಗಿ, ಟೊಮೆಟೊ ಸಾಸ್ ಮತ್ತು ಈರುಳ್ಳಿಯ ಕೆಲವು ಸ್ಲೈಸ್ ಗಳಿಂದ ಅಲಂಕರಿಸಿದ ಗರಿಗರಿಯಾದ ಕಾರ್ನ್ ಕಟ್ಲೆಟ್ ಅನ್ನು ಸರ್ವ್ ಮಾಡಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಕಾರ್ನ್ ಕಟ್ಲೆಟ್ ಹೇಗೆ ಮಾಡುವುದು:

  1. ಮೊದಲಿಗೆ, ಸಣ್ಣ ಬ್ಲೆಂಡರ್ನಲ್ಲಿ ಬೇಯಿಸಿದ ಕಾರ್ನ್ ಅನ್ನು ತೆಗೆದುಕೊಳ್ಳಿ. ಕಾರ್ನ್ ತಾಜಾವಾಗಿದ್ದರೆ ಬೇಯಿಸುವುದನ್ನು ಖಚಿತಪಡಿಸಿಕೊಳ್ಳಿ.
  2. ಯಾವುದೇ ನೀರನ್ನು ಸೇರಿಸದೆಯೇ ಒರಟಾದ ಪೇಸ್ಟ್ಗೆ ರುಬ್ಬಿಕೊಳ್ಳಿ.
  3. ಪೇಸ್ಟ್ ಅನ್ನು ದೊಡ್ಡ ಮಿಶ್ರಣ ಬಟ್ಟಲಿಗೆ ವರ್ಗಾಯಿಸಿ.
  4. ಬೇಯಿಸಿದ ಮತ್ತು ಹಿಸುಕಿದ ಆಲೂಗಡ್ಡೆ ಸೇರಿಸಿ.
  5. ಹೆಚ್ಚುವರಿಯಾಗಿ ಈರುಳ್ಳಿ, ಕ್ಯಾಪ್ಸಿಕಂ, ಮೆಣಸಿನಕಾಯಿ ಮತ್ತು ಶುಂಠಿ ಪೇಸ್ಟ್ ಸೇರಿಸಿ.
  6. ಇದಲ್ಲದೆ ½ ಟೀಸ್ಪೂನ್ ಮೆಣಸಿನ ಪುಡಿ, ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಗರಂ ಮಸಾಲಾ ಪೌಡರ್, ½ ಟೀಸ್ಪೂನ್ ಚಾಟ್ ಮಸಾಲಾ ಮತ್ತು ಉಪ್ಪು ಸೇರಿಸಿ.
  7. ¼ ಕಪ್ ಬ್ರೆಡ್ ಕ್ರಂಬ್ಸ್ ಅನ್ನು ಸಹ ಸೇರಿಸಿ. ಅಥವಾ ತಾಜಾ ಬ್ರೆಡ್ ಅನ್ನು ಸೇರಿಸಿ ಹಿಸುಕಿ.
  8. 1 ಟೇಬಲ್ಸ್ಪೂನ್ ಹುರಿದ ಬೇಸನ್ / ಕಡಲೆ ಹಿಟ್ಟು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
  9. 1 ಟೇಬಲ್ಸ್ಪೂನ್ ಕಾರ್ನ್ ಹಿಟ್ಟು, 2 ಟೇಬಲ್ಸ್ಪೂನ್ ಬೇಯಿಸಿದ ಕಾರ್ನ್ ಮತ್ತು ಕರಿ ಮೆಣಸು ಪುಡಿ ಸೇರಿಸಿ.
  10. ನಿಂಬೆ ರಸವನ್ನು ಸಹ ಸೇರಿಸಿ.
  11. ಹಿಟ್ಟನ್ನು ರೂಪಿಸಲು ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಿ.
  12. ಹೆಚ್ಚು ತೇವಾಂಶ ಇದ್ದರೆ ಹೆಚ್ಚು ಬ್ರೆಡ್ ಕ್ರಂಬ್ಸ್ ಸೇರಿಸಿ.
  13. ನಾನ್ ಸ್ಟಿಕಿ ಹಿಟ್ಟನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ.
  14. ಇದಲ್ಲದೆ, ಎಣ್ಣೆಯಿಂದ ಕೈಗಳನ್ನು ಗ್ರೀಸ್ ಮಾಡಿ ಬುಲೆಟ್ ಆಕಾರದ ಕಬಾಬ್ಗಳನ್ನು ರಚಿಸಿ. ಗ್ರೀಸ್ ಮಾಡುವುದರಿಂದ  ಹಿಟ್ಟು ಕೈಯಲ್ಲಿ ಅಂಟದಂತೆ ಸಹಾಯ ಮಾಡುತ್ತದೆ.
  15. ಅವುಗಳನ್ನು ಬಿಸಿ ಎಣ್ಣೆಯಲ್ಲಿ ಬಿಡಿ. ಪರ್ಯಾಯವಾಗಿ, ನೀವು ಆಹಾರ ಜಾಗೃತರಾಗಿದ್ದರೆ ಅವುಗಳನ್ನು ಬೇಕ್ ಅಥವಾ ಪ್ಯಾನ್ ಫ್ರೈ ಮಾಡಬಹುದು.
  16. ಕಬಾಬ್ಗಳನ್ನು ಮುರಿಯದೆ ಸಾಂದರ್ಭಿಕವಾಗಿ ಬೆರೆಸಿ.
  17. ಮಧ್ಯಮ ಜ್ವಾಲೆಯ ಮೇಲೆ ಗೋಲ್ಡನ್ ಬ್ರೌನ್ ಆಗುವ ತನಕ ಹುರಿಯಿರಿ.
  18. ಅಂತಿಮವಾಗಿ, ಟೊಮೆಟೊ ಸಾಸ್ ಮತ್ತು ಈರುಳ್ಳಿಯ ಕೆಲವು ಸ್ಲೈಸ್ ಗಳಿಂದ ಅಲಂಕರಿಸಿದ ಗರಿಗರಿಯಾದ ಕಾರ್ನ್ ಕಟ್ಲೆಟ್ ಅನ್ನು ಸರ್ವ್ ಮಾಡಿ.

ಟಿಪ್ಪಣಿಗಳು:

  • ಮೊದಲಿಗೆ, ಇದನ್ನು ಹೆಚ್ಚು ಪೌಷ್ಟಿಕಗೊಳಿಸಲು ನಿಮ್ಮ ಆಯ್ಕೆಯ ಯಾವುದೇ ತರಕಾರಿಗಳನ್ನು ಸೇರಿಸಿ.
  • ಅಲ್ಲದೆ, ಹುರಿಯುವ ಮೊದಲು 15 ನಿಮಿಷಗಳ ಕಾಲ ಹಿಟ್ಟನ್ನು ಫ್ರಿಡ್ಜ್ ನಲ್ಲಿಡಿ, ಇದು ಕಬಾಬ್ ಎಣ್ಣೆಯಲ್ಲಿ ಮುರಿಯುವುದನ್ನು ತಪ್ಪಿಸುತ್ತದೆ.
  • ಹೆಚ್ಚುವರಿಯಾಗಿ, ನಿಮಗೆ ಖಾರ ಕಬಾಬ್ ಇಷ್ಟವಿಲ್ಲದಿದ್ದರೆ ಹಸಿರು ಮೆಣಸಿನಕಾಯಿಯ ಪ್ರಮಾಣವನ್ನು ಕಡಿಮೆ ಮಾಡಿ.
  • ಅಂತಿಮವಾಗಿ, ಗರಿಗರಿಯಾದ ಕಾರ್ನ್ ಕಟ್ಲೆಟ್ ಅನ್ನು ಎಣ್ಣೆಯಲ್ಲಿ ಹುರಿದಾಗ ಕ್ರಿಸ್ಪಿಯಾಗಿ ಒಳ್ಳೆ ರುಚಿ ನೀಡುತ್ತದೆ.