ಫಿಲ್ಟರ್ ಕಾಫಿ ಪಾಕವಿಧಾನ | ಫಿಲ್ಟರ್ ಕಾಪಿ ಪಾಕವಿಧಾನ | ದಕ್ಷಿಣ ಭಾರತೀಯ ಫಿಲ್ಟರ್ ಕಾಫಿಯ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ವಿಶೇಷವಾದ ಕಾಫಿ ಪುಡಿಯಿಂದ ತಯಾರಿಸಿದ ಈ ಜನಪ್ರಿಯ ಕಾಫಿಯು, ವಿಶಿಷ್ಟವಾದ ದಕ್ಷಿಣ ಭಾರತದ ರೂಪಾಂತರವಾಗಿದೆ. ಇದು ಮೂಲತಃ ಅದರ ಬಲವಾದ ರುಚಿ ಮತ್ತು ಸುವಾಸನೆಗೆ ಹೆಸರುವಾಸಿಯಾಗಿದೆ. ದಕ್ಷಿಣ ಭಾರತದಲ್ಲಿ, ಇದನ್ನು ಸಾಮಾನ್ಯವಾಗಿ ಬೆಳಗಿನ ಉಪಾಹಾರದೊಂದಿಗೆ ಅಥವಾ ಹಾಗೆಯೇ ನೀಡಲಾಗುತ್ತದೆ. ಆದರೆ ದಿನದ ಯಾವುದೇ ಹೊತ್ತಿನಲ್ಲಿ, ಇದನ್ನು ನೀಡಬಹುದು.
ನಾನೊಬ್ಬಳು ಕಾಫಿಯ ದೊಡ್ಡ ಅಭಿಮಾನಿ. ವಿಶೇಷವಾಗಿ ಆಸ್ಟ್ರೇಲಿಯಾಗೆ ಬಂದ ನಂತರ, ಮುಖ್ಯವಾಗಿ ಇಲ್ಲಿ ಲಭ್ಯವಿರುವ ಕಾಫಿ ವ್ಯತ್ಯಾಸಗಳ ವ್ಯಾಪ್ತಿಯಿಂದಾಗಿ ಕಾಫಿಯ ಮೇಲಿನ ನನ್ನ ಪ್ರೀತಿ ಮತ್ತಷ್ಟು ಹೆಚ್ಚಾಗಿದೆ. ನನ್ನ ಕೆಲಸದ ಮೇಜಿನ ಪಕ್ಕದಲ್ಲಿ ನಾನು ನೆಸ್ಪ್ರೆಸ್ ಕಾಫಿ ಮಷೀನ್ ಅನ್ನು ಇಟ್ಟುಕೊಂಡಿದ್ದೇನೆ, ಮತ್ತು ನಾನು ಅದನ್ನು ಹೆಚ್ಚಾಗಿ ಕುಡಿಯುತ್ತೇನೆ. ಈ ಆಯ್ಕೆಗಳ ನಂತರವೂ, ನಾನು ಪ್ರತಿದಿನ ಒಂದು ಡೋಸೇಜ್ ಆದರೂ ಫಿಲ್ಟರ್ ಕಾಪಿಯನ್ನು ಕುಡಿಯುತ್ತೇನೆ ಎಂದು ಖಚಿತಪಡಿಸಿಕೊಳ್ಳುತ್ತೇನೆ. ಇದು ಸಾಮಾನ್ಯವಾಗಿ ನಾನು ಬೆಳಿಗ್ಗೆ ಮಾಡುವ ಮೊದಲ ಕೆಲಸ. ಬೆಳಿಗ್ಗಿನ ಪೇಯದ ವಿಷಯದಲ್ಲಿ, ನನ್ನ ಪತಿ ಸಂಪೂರ್ಣವಾಗಿ ನನ್ನ ವಿರುದ್ಧವಾಗಿದ್ದಾರೆ. ಅವರಿಗೆ ಬೆಳಗಿನ ಉಪಾಹಾರದೊಂದಿಗೆ ಕೇವಲ ಒಂದು ಕಪ್ ಚಹಾ (ಮೇಲಾಗಿ ಮಸಾಲಾ ಚಾಯ್) ಬೇಕು. ಅದು ಅವರ ಇಡೀ ದಿನಕ್ಕೆ ಸಾಕಾಗುತ್ತದೆ. ನಾವು ಒಂದೇ ಸ್ಥಳದಿಂದ ಬಂದಿದ್ದರೂ ಸಹ, ಆಹಾರ ಮತ್ತು ಪಾನೀಯದ ವಿಷಯದಲ್ಲಿ ನಮಗೆ ವಿಭಿನ್ನ ರುಚಿ ಮತ್ತು ಆಯ್ಕೆ ಇದೆ.
ದಕ್ಷಿಣ ಭಾರತದ ಕಾಪಿಗೆ ಇನ್ನೂ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ಸೇರಿಸಲು ನಾನು ಬಯಸುತ್ತೇನೆ. ಮೊದಲನೆಯದಾಗಿ, ಈ ಪಾಕವಿಧಾನಕ್ಕೆ ಕಾಫಿ ಪುಡಿ ಮುಖ್ಯ ಮತ್ತು ವಿಶಿಷ್ಟವಾದ ಅಂಶವಾಗಿದೆ. ಈ ಪಾಕವಿಧಾನಕ್ಕಾಗಿ ನಾವು ಇನ್ಸ್ಟಂಟ್ ಅಥವಾ ನುಣ್ಣಗಿರುವ ಕಾಫಿ ಪುಡಿಯನ್ನು ಬಳಸವಂತಿಲ್ಲ. ನೀವು ಕಾಫಿ ಬೀಜಗಳನ್ನು ಕಾಫಿ ಗ್ರೌಂಡಿಂಗ್ ಮಷೀನ್ ನಿಂದ ಪುಡಿ ಮಾಡಿಕೊಳ್ಳಬಹುದು, ಮತ್ತು ಅದನ್ನು ಈ ಪಾಕವಿಧಾನಕ್ಕಾಗಿ ಬಳಸಬಹುದು. ಎರಡನೆಯದಾಗಿ, ಬಿಸಿನೀರನ್ನು ಸೇರಿಸಿದ ನಂತರ, ಅದು ಕನಿಷ್ಠ 30 ನಿಮಿಷಗಳ ಕಾಲ ವಿಶ್ರಮಿಸಬೇಕು. ನೀವು ಇದನ್ನು ರಾತ್ರಿ ತಯಾರಿಸಿ, ಮುಂಜಾನೆ ಬಳಸಿದರೆ ಇನ್ನೂ ಉತ್ತಮ. ಕೊನೆಯದಾಗಿ, ನಿಮ್ಮ ರುಚಿಗೆ ಅನುಗುಣವಾಗಿ ನೀವು ಕಾಫಿ ಪುಡಿ ಪ್ರಮಾಣ ಮತ್ತು ಬಿಸಿ ನೀರನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಉದಾಹರಣೆಗೆ, ನಿಮಗೆ ಸ್ಟ್ರಾಂಗ್ ಕಾಫಿ ಅಗತ್ಯವಿದ್ದರೆ, ಈ ಪಾಕವಿಧಾನ ಪೋಸ್ಟ್‌ನಲ್ಲಿ ನಾನು ತೋರಿಸಿದ ಮೇಲೆ ನೀವು 1 ಟೀಸ್ಪೂನ್ ಹೆಚ್ಚುವರಿಯಾಗಿ ಸೇರಿಸಬಹುದು.
ಅಂತಿಮವಾಗಿ, ಫಿಲ್ಟರ್ ಕಾಪಿ ಪಾಕವಿಧಾನದ ಈ ಪೋಸ್ಟ್‌ನೊಂದಿಗೆ ನನ್ನ ಇತರ ವಿವರವಾದ ಪಾನೀಯಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸುವಂತೆ ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ನನ್ನ ಇತರ ಪಾಕವಿಧಾನಗಳಾದ ಸಾಬುದಾನ ಫಲೂಡಾ, ಇಮ್ಯುನಿಟಿ ಬೂಸ್ಟರ್ ಡ್ರಿಂಕ್ಸ್, ಆವಕಾಡೊ ಸ್ಮುದಿ, ಡಲ್ಗೊನಾ ಕಾಫಿ, ಆಮ್ ಪನ್ನಾ, ಕಶಾಯ, ಅರಿಶಿನ ಹಾಲು, ಹಾಟ್ ಚಾಕೊಲೇಟ್, ಕ್ಯಾಫಚಿನೊ, ಶುಂಠಿ ಚಹಾವನ್ನು ಒಳಗೊಂಡಿದೆ. ಇದಲ್ಲದೆ, ನನ್ನ ಇತರ ಪಾಕವಿಧಾನಗಳ ವಿಭಾಗಗಳನ್ನು ಸಹ ನಾನು ನಮೂದಿಸಲು ಬಯಸುತ್ತೇನೆ,
ಫಿಲ್ಟರ್ ಕಾಫಿ ವೀಡಿಯೊ ಪಾಕವಿಧಾನ:
ಫಿಲ್ಟರ್ ಕಾಫಿ ಪಾಕವಿಧಾನ ಕಾರ್ಡ್:
ಫಿಲ್ಟರ್ ಕಾಫಿ ರೆಸಿಪಿ | filter coffee in kannada | ಫಿಲ್ಟರ್ ಕಾಪಿ
ಪದಾರ್ಥಗಳು
ಕಷಾಯಕ್ಕಾಗಿ:
- 1½ ಕಪ್ ನೀರು
- 3 ಟೇಬಲ್ಸ್ಪೂನ್ ಕಾಫಿ ಪುಡಿ
ಕಾಫಿಗಾಗಿ:
- 1½ ಕಪ್ ಹಾಲು
- 4 ಟೀಸ್ಪೂನ್ ಸಕ್ಕರೆ
ಸೂಚನೆಗಳು
- ಮೊದಲನೆಯದಾಗಿ, 5-6 ಸರ್ವ್‌ಗಳ ಕಾಫಿ ಫಿಲ್ಟರ್ ತೆಗೆದುಕೊಳ್ಳಿ. ಇದು 2 ಸಿಲಿಂಡರಾಕಾರದ ಕಂಟೇನರ್ ಅನ್ನು ಹೊಂದಿರುತ್ತದೆ (ಕುದಿಸಿದ ಕಾಫಿ ಕಷಾಯವನ್ನು ಸಂಗ್ರಹಿಸಲು ಕೆಳಭಾಗ ಮತ್ತು ಕಾಫಿ ಪುಡಿಯನ್ನು ಸೇರಿಸಲು ರಂದ್ರ ರಂಧ್ರಗಳನ್ನು ಹೊಂದಿರುವ ಮೊದಲನೆಯದು), ಒತ್ತುವ ಡಿಸ್ಕ್ ಮತ್ತು ಮುಚ್ಚಳ ಮುಚ್ಚಲು.
- ರಂಧ್ರಗಳ ಕಂಟೇನರ್ ನಲ್ಲಿ 3 ಟೀಸ್ಪೂನ್ ಫಿಲ್ಟರ್ ಕಾಫಿ ಪುಡಿ ಸೇರಿಸಿ. ಸ್ಟ್ರಾಂಗ್ ಕಾಫಿಗಾಗಿ ಹೆಚ್ಚು ಕಾಫಿ ಪುಡಿಯನ್ನು ಸೇರಿಸಿ.
- ಒತ್ತುವ ಡಿಸ್ಕ್ ನಿಂದ ಬಿಗಿಯಾಗಿ ಒತ್ತಿರಿ.
- 1½ ಕಪ್ ನೀರನ್ನು ಕುದಿಸಿ ಮತ್ತು ಮೇಲಿನ ಕಂಟೇನರ್ ಗೆ ನಿಧಾನವಾಗಿ ಸುರಿಯಿರಿ.
- ಮುಚ್ಚಳವನ್ನು ಮುಚ್ಚಿ, ತೊಂದರೆಯಾಗದಂತೆ 30 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.
- 30 ನಿಮಿಷಗಳ ನಂತರ, ಡಿಕಾಕ್ಷನ್ ಕೆಳಗಿನ ಕಂಟೇನರ್ ನಲ್ಲಿ ಸಂಗ್ರಹಿಸಲ್ಪಡುತ್ತದೆ.
- ಡಿಕಾಕ್ಷನ್ ಅನ್ನು ಲೋಟೆಗೆ ಸುರಿಯಿರಿ. ಡಿಕಾಕ್ಷನ್ ನ ಪ್ರಮಾಣವನ್ನು ನಿಮ್ಮ ಆಯ್ಕೆಯ ಮೇರೆಗೆ ಹೊಂದಿಸಿ.
- 1 ಟೀಸ್ಪೂನ್ ಅಥವಾ ನಿಮ್ಮ ಸಿಹಿಯ ಮೇರೆಗೆ ಸಕ್ಕರೆಯನ್ನು ಸೇರಿಸಿ.
- ಕೆನೆ ಬೇರ್ಪಡಿಸಿ ಬಿಸಿ ಕುದಿಯುವ ಹಾಲನ್ನು ಸುರಿಯಿರಿ. ನಿಮ್ಮ ಆಯ್ಕೆಯ ಮೇರೆಗೆ ಹಾಲಿನ ಪ್ರಮಾಣವನ್ನು ಹೊಂದಿಸಿ.
- ಸಕ್ಕರೆಯನ್ನು ಕರಗಿಸಲು, ನೀವು ಸಾಂಪ್ರದಾಯಕ ಪದ್ಧತಿಗಳಾದ ದವಾರಾ ಅಥವಾ ದಬಾರಾವನ್ನು ಬಳಸಬಹುದು. ಇಲ್ಲದಿದ್ದರೆ, ನೀವು ಇನ್ನೊಂದು ಲೋಟೆಯನ್ನು ಸಹ ಬಳಸಬಹುದು.
- ನಯವಾದ ಫಿಲ್ಟರ್ ಕಾಫಿ ಪಡೆಯಲು 2 ಬಾರಿ ಮಿಶ್ರಣ ಮಾಡಿ. ಹೆಚ್ಚು ಮಿಶ್ರಣ ಮಾಡಿದರೆ ಕಾಫಿ ತಣ್ಣಗಾಗಬಹುದು.
- ಅಂತಿಮವಾಗಿ, ದಕ್ಷಿಣ ಭಾರತದ ಫಿಲ್ಟರ್ ಕಾಫಿಯನ್ನು ಟಂಬ್ಲರ್ ಮತ್ತು ದಬಾರಾ / ದವಾರಾದಲ್ಲಿ ತಕ್ಷಣ ಬಡಿಸಿ.
ಹಂತ ಹಂತದ ಫೋಟೋದೊಂದಿಗೆ ಫಿಲ್ಟರ್ ಕಾಪಿ ತಯಾರಿಸುವುದು ಹೇಗೆ:
- ಮೊದಲನೆಯದಾಗಿ, 5-6 ಸರ್ವ್‌ಗಳ ಕಾಫಿ ಫಿಲ್ಟರ್ ತೆಗೆದುಕೊಳ್ಳಿ. ಇದು 2 ಸಿಲಿಂಡರಾಕಾರದ ಕಂಟೇನರ್ ಅನ್ನು ಹೊಂದಿರುತ್ತದೆ (ಕುದಿಸಿದ ಕಾಫಿ ಕಷಾಯವನ್ನು ಸಂಗ್ರಹಿಸಲು ಕೆಳಭಾಗ ಮತ್ತು ಕಾಫಿ ಪುಡಿಯನ್ನು ಸೇರಿಸಲು ರಂದ್ರ ರಂಧ್ರಗಳನ್ನು ಹೊಂದಿರುವ ಮೊದಲನೆಯದು), ಒತ್ತುವ ಡಿಸ್ಕ್ ಮತ್ತು ಮುಚ್ಚಳ ಮುಚ್ಚಲು.
- ರಂಧ್ರಗಳ ಕಂಟೇನರ್ ನಲ್ಲಿ 3 ಟೀಸ್ಪೂನ್ ಕಾಪಿ ಪುಡಿ ಸೇರಿಸಿ. ಸ್ಟ್ರಾಂಗ್ ಕಾಫಿಗಾಗಿ ಹೆಚ್ಚು ಕಾಫಿ ಪುಡಿಯನ್ನು ಸೇರಿಸಿ.
- ಒತ್ತುವ ಡಿಸ್ಕ್ ನಿಂದ ಬಿಗಿಯಾಗಿ ಒತ್ತಿರಿ.
- 1½ ಕಪ್ ನೀರನ್ನು ಕುದಿಸಿ ಮತ್ತು ಮೇಲಿನ ಕಂಟೇನರ್ ಗೆ ನಿಧಾನವಾಗಿ ಸುರಿಯಿರಿ.
- ಮುಚ್ಚಳವನ್ನು ಮುಚ್ಚಿ, ತೊಂದರೆಯಾಗದಂತೆ 30 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.
- 30 ನಿಮಿಷಗಳ ನಂತರ, ಡಿಕಾಕ್ಷನ್ ಕೆಳಗಿನ ಕಂಟೇನರ್ ನಲ್ಲಿ ಸಂಗ್ರಹಿಸಲ್ಪಡುತ್ತದೆ.
- ಡಿಕಾಕ್ಷನ್ ಅನ್ನು ಲೋಟೆಗೆ ಸುರಿಯಿರಿ. ಡಿಕಾಕ್ಷನ್ ನ ಪ್ರಮಾಣವನ್ನು ನಿಮ್ಮ ಆಯ್ಕೆಯ ಮೇರೆಗೆ ಹೊಂದಿಸಿ.
- 1 ಟೀಸ್ಪೂನ್ ಅಥವಾ ನಿಮ್ಮ ಸಿಹಿಯ ಮೇರೆಗೆ ಸಕ್ಕರೆಯನ್ನು ಸೇರಿಸಿ.
- ಕೆನೆ ಬೇರ್ಪಡಿಸಿ ಬಿಸಿ ಕುದಿಯುವ ಹಾಲನ್ನು ಸುರಿಯಿರಿ. ನಿಮ್ಮ ಆಯ್ಕೆಯ ಮೇರೆಗೆ ಹಾಲಿನ ಪ್ರಮಾಣವನ್ನು ಹೊಂದಿಸಿ.
- ಸಕ್ಕರೆಯನ್ನು ಕರಗಿಸಲು, ನೀವು ಸಾಂಪ್ರದಾಯಕ ಪದ್ಧತಿಗಳಾದ ದವಾರಾ ಅಥವಾ ದಬಾರಾವನ್ನು ಬಳಸಬಹುದು. ಇಲ್ಲದಿದ್ದರೆ, ನೀವು ಇನ್ನೊಂದು ಲೋಟೆಯನ್ನು ಸಹ ಬಳಸಬಹುದು.
- ನಯವಾದ ಕಾಫಿ ಪಡೆಯಲು 2 ಬಾರಿ ಮಿಶ್ರಣ ಮಾಡಿ. ಹೆಚ್ಚು ಮಿಶ್ರಣ ಮಾಡಿದರೆ ಕಾಫಿ ತಣ್ಣಗಾಗಬಹುದು.
- ಅಂತಿಮವಾಗಿ, ದಕ್ಷಿಣ ಭಾರತದ ಫಿಲ್ಟರ್ ಕಾಪಿಯನ್ನು ಟಂಬ್ಲರ್ ಮತ್ತು ದಬಾರಾ / ದವಾರಾದಲ್ಲಿ ತಕ್ಷಣ ಬಡಿಸಿ.
ಟಿಪ್ಪಣಿಗಳು:
- ಮೊದಲನೆಯದಾಗಿ, ಫಿಲ್ಟರ್ ಕಾಪಿಯನ್ನು ತಯಾರಿಸಲು ತುಂಬಾ ಬಿಸಿ ಹಾಲು ಮತ್ತು ಬಿಸಿ ನೀರನ್ನು ಬಳಸಿ.
- ನೀವು ಬಯಸುವ ಸ್ಟ್ರಾಂಗ್ ಮೇರೆಗೆ ಹಾಲು ಮತ್ತು ಕಾಫಿ ಪುಡಿಯ ಪ್ರಮಾಣವನ್ನು ಹೊಂದಿಸಿ.
- ಹಾಗೆಯೇ, ನೀವು ಎರಡನೇ ಬಾರಿಗೆ ಡಿಕಾಕ್ಷನ್ ತಯಾರಿಸಲು ಕಾಫಿ ಪುಡಿಯನ್ನು ಮರುಬಳಕೆ ಮಾಡಬಹುದು, ಆದಾಗ್ಯೂ, ಕಾಫಿ ಲೈಟ್ ಇರಬಹುದು.
- ಅಂತಿಮವಾಗಿ, ದಪ್ಪ ಹಾಲಿನೊಂದಿಗೆ ತಯಾರಿಸಿದಾಗ ಮದ್ರಾಸ್ ಫಿಲ್ಟರ್ ಕಾಫಿ, ಡಿಗ್ರಿ ಕಾಫಿ ಅಥವಾ ದಕ್ಷಿಣ ಭಾರತೀಯ ಫಿಲ್ಟರ್ ಕಾಫಿ ಉತ್ತಮ ರುಚಿ ನೀಡುತ್ತದೆ.