ಮ್ಯಾಕರೋನಿ ಕುರ್ಕುರೆ | macaroni kurkure in kannada | ಪಾಸ್ತಾ ಕುರ್ಕುರೆ

0

ಮ್ಯಾಕರೋನಿ ಕುರ್ಕುರೆ ಪಾಕವಿಧಾನ | ಕ್ರಿಸ್ಪಿ ಮ್ಯಾಕರೋನಿ ಸ್ನ್ಯಾಕ್ | ಪಾಸ್ತಾ ಕುರ್ಕುರೆಯ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಪಾಸ್ತಾ ಚಿಪ್ಪುಗಳು ಮತ್ತು ಭಾರತೀಯ ಮಸಾಲೆಗಳ ಮಿಶ್ರಣದಿಂದ ಮಾಡಲ್ಪಟ್ಟ ನವೀನ ಮತ್ತು ಸಮ್ಮಿಳನ ಪಾಕವಿಧಾನಗಳಲ್ಲಿ ಒಂದಾಗಿದೆ. ಇದನ್ನು ತಿನ್ನಲು ಕೇವಲ ಟೇಸ್ಟಿ ಆಗಿರದೆ, ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಸರಳ ಮತ್ತು ಸುಲಭವಾದ ಸ್ನ್ಯಾಕ್ ಕೂಡಾ ಆಗಿದೆ. ಈ ಸ್ನ್ಯಾಕ್ ತಯಾರಿಸಲು ಅಸಂಖ್ಯಾತ ಮಾರ್ಗಗಳಿವೆ, ಆದರೆ ನಾನು ಮ್ಯಾಕರೋನಿ ತಿಂಡಿಗಳ 2 ಜನಪ್ರಿಯ ವಿಧಾನಗಳನ್ನು ಒಳಗೊಳ್ಳಲು ಪ್ರಯತ್ನಿಸಿದೆನು.
ಮ್ಯಾಕರೋನಿ ಕುರ್ಕುರೆ ಪಾಕವಿಧಾನ

ಮ್ಯಾಕರೋನಿ ಕುರ್ಕುರೆ ಪಾಕವಿಧಾನ | ಕ್ರಿಸ್ಪಿ ಮ್ಯಾಕರೋನಿ ಸ್ನ್ಯಾಕ್ | ಪಾಸ್ತಾ ಕುರ್ಕುರೆಯ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಕುರ್ಕುರೆ ಪಾಕವಿಧಾನವು ಭಾರತದಾದ್ಯಂತ ಜನಪ್ರಿಯ ಸ್ನ್ಯಾಕ್ ಪಾಕವಿಧಾನವಾಗಿದ್ದು, ಇದನ್ನು ಪೆಪ್ಸಿಕೋ ಕಂಪನಿ ಪರಿಚಯಿಸಿತು. ಆರಂಭದಲ್ಲಿ, ಕೇವಲ ಅಕ್ಕಿ ಹಿಟ್ಟನ್ನು ಅಳವಡಿಸಿಕೊಂಡಿತು, ಆದರೆ ಈಗ ಇತರ ಅನೇಕ ಪದಾರ್ಥಗಳು ಮತ್ತು ಹಿಟ್ಟುನ್ನು ಪ್ರಯೋಗಿಸಿದೆ. ಅಂತಹ ನವೀನ ಮತ್ತು ಫ್ಯೂಷನ್ ಪಾಕವಿಧಾನವು ಮ್ಯಾಕರೋನಿ ಕುರ್ಕುರೆ ಪಾಕವಿಧಾನವಾಗಿದ್ದು ಅದರ ಗರಿಗರಿತನ ಮತ್ತು ಕ್ರಂಚಿತನಕ್ಕೆ ಹೆಸರುವಾಸಿಯಾಗಿದೆ.

ನಾನು ಯಾವಾಗಲೂ ಕುರುಕುಲಾದ ಸ್ನ್ಯಾಕ್ ಪಾಕವಿಧಾನಗಳ ದೊಡ್ಡ ಅಭಿಮಾನಿಯಾಗಿದ್ದೇನೆ ಆದರೆ, ಒಂದೇ ರೀತಿಯ ಸ್ನ್ಯಾಕ್ ನೋಡಿ ಬೇಸರಗೊಂಡಿದ್ದೇನೆ. ನಾನು ಯಾವಾಗಲೂ ಅನನ್ಯ ಮತ್ತು ನವೀನ ತಿಂಡಿಗಳನ್ನು ಬಯಸುತ್ತೇನೆ. ಪಾಸ್ತಾ ಆಧಾರಿತ ಕುರ್ಕುರೆಯು ಅಂತಹ ಒಂದು ಅನನ್ಯ ಸ್ನ್ಯಾಕ್. ಇದು ಸರಳ ತಿನಿಸುಗಳಲ್ಲಿ ಒಂದಾಗಿದೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಯಾವುದೇ ಬೆರೆಸುವುದು ಮತ್ತು ರೋಲಿಂಗ್ ಮಾಡುವುದು ಇರದೇ ಸುಲಭವಾಗಿ ಲಭ್ಯವಿರುವ ಪಾಸ್ತಾ ಚಿಪ್ಪುಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ನೀವು ಈ ಪಾಕವಿಧಾನಕ್ಕೆ ಮನೆಯಲ್ಲಿ ತಯಾರಿಸಿದ ಪಾಸ್ತಾ ಚಿಪ್ಪುಗಳನ್ನು ಬಳಸಬಹುದು, ಆದರೆ ಅಂಗಡಿಯಿಂದ ಖರೀದಿಸಿದ ಪಾಸ್ತಾ ಬಳಸಲು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ. ಮೂಲಭೂತವಾಗಿ, ನೀವು ಅದನ್ನು ಕುದಿಸಿ, ಇದು ಗರಿಗರಿ ಮತ್ತು ಕುರುಕುಲಾಗುವ ತನಕ ಆಳವಾಗಿ ಫ್ರೈ ಮಾಡಿ ಮಸಾಲೆಗಳೊಂದಿಗೆ ಕೋಟ್ ಮಾಡಬೇಕಾಗುತ್ತದೆ. ಒಮ್ಮೆ ಇದು ಆಳವಾದ ಹುರಿದ ನಂತರ, ಬೇರೆ ಬೇರೆ ರೂಪಾಂತರಕ್ಕೆ ಅನುಗುಣವಾಗಿ ಮಸಾಲೆಗಳನ್ನು ಬಳಸಬಹುದು.

ಕ್ರಿಸ್ಪಿ ಮ್ಯಾಕಾರೋನಿ ಸ್ನ್ಯಾಕ್ ಇದಲ್ಲದೆ, ಮ್ಯಾಕರೋನಿ ಕುರ್ಕುರೆ ಪಾಕವಿಧಾನಕ್ಕೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲಿಗೆ, ನಾನು ಡರಮ್ ಗೋಧಿಯಿಂದ ಮಾಡಲ್ಪಟ್ಟ ಕಿರಿದಾದ ಪಾಸ್ತಾ ಟ್ಯೂಬ್ಗಳನ್ನು ಬಳಸಿದ್ದೇನೆ, ಆದರೆ ನೀವು ಇದನ್ನು ಇತರ ವಿಧದ ಪಾಸ್ತಾಗಳೊಂದಿಗೆ ತಯಾರಿಸಬಹುದು. ನೀವು ಪೆನ್ನೆ ಪಾಸ್ತಾ, ರಿಗಾಟೋನಿ, ಫ್ಯೂಸಿಲ್ಲಿ ಮತ್ತು ರವಿಯೋಲಿ ಪಾಸ್ತಾ ಚಿಪ್ಪುಗಳನ್ನು ಬಳಸಬಹುದು. ಎರಡನೆಯದಾಗಿ, ಈ ಚಿಪ್ಪುಗಳನ್ನು ಆಳವಾಗಿ ಹುರಿದಾಗ, ಮಧ್ಯಮದಿಂದ ಕಡಿಮೆ ಬಿಸಿ ಎಣ್ಣೆಯಲ್ಲಿ ಹುರಿಯಲು ಖಚಿತಪಡಿಸಿಕೊಳ್ಳಿ. ಇದು ಕ್ರಮೇಣವಾಗಿ ಫ್ರೈ ಮಾಡಬೇಕು, ಇದು ಸಮವಾಗಿ ಬೆಂದು ಅದನ್ನು ಗರಿಗರಿ ಮತ್ತು ಕುರುಕುಲಾಗುವಂತೆ ಮಾಡುತ್ತದೆ. ಕೊನೆಯದಾಗಿ, ಈ ಚಿಪ್ಪುಗಳು ಎರಡು ವಾರಗಳವರೆಗೆ ಸುಲಭವಾಗಿ ಇರುತ್ತವೆ. ಸಾಮಾನ್ಯವಾಗಿ, ಗಾಳಿಯಾಡದ ಕಂಟೇನರ್ನಲ್ಲಿ ಸಂಗ್ರಹಿಸಿದಾಗ ಇದರ ಶೆಲ್ಫ್ ಜೀವನವು ಸುಧಾರಿಸುತ್ತದೆ.

ಅಂತಿಮವಾಗಿ, ಮ್ಯಾಕರೋನಿ ಕುರ್ಕುರೆ ಪಾಕವಿಧಾನದ ಈ ಪೋಸ್ಟ್ನೊಂದಿಗೆ ನನ್ನ ಇತರ ಸಂಬಂಧಿತ ತಿಂಡಿಗಳು ಪಾಕವಿಧಾನಗಳ ಸಂಗ್ರಹವನ್ನು ಪರೀಕ್ಷಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಕುರ್ಕುರೆ, ಮಜ್ಜಿಗೆ ವಡಾ, ಪೋಹಾ ಫಿಂಗರ್ಸ್, ಕುರ್ಕುರಿ ಭಿಂಡಿ, ಗೋಬಿ 65, ವರ್ಕಿ ಪುರಿ, ಬ್ರೆಡ್ ವಡಾ, ಬೇಬಿ ಕಾರ್ನ್ ಚಿಲ್ಲಿ, ಪನೀರ್ ಪಕೋರಾ, ಮದ್ದೂರ್ ವಡಾ. ಇದು ಮುಖ್ಯವಾಗಿ ನನ್ನ ಇತರ ಸಂಬಂಧಿತ ಪಾಕವಿಧಾನಗಳನ್ನು ಒಳಗೊಂಡಿದೆ. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಸಂಬಂಧಿತ ಪಾಕವಿಧಾನ ವಿಭಾಗಗಳನ್ನು ಹೇಳಲು ಇಷ್ಟಪಡುತ್ತೇನೆ,

ಮ್ಯಾಕರೋನಿ ಕುರ್ಕುರೆ ವಿಡಿಯೋ ಪಾಕವಿಧಾನ:

Must Read:

Must Read:

ಕ್ರಿಸ್ಪಿ ಮ್ಯಾಕರೋನಿ ಸ್ನ್ಯಾಕ್ ಪಾಕವಿಧಾನ ಕಾರ್ಡ್:

crispy macaroni snack

ಮ್ಯಾಕರೋನಿ ಕುರ್ಕುರೆ | macaroni kurkure in kannada | ಪಾಸ್ತಾ ಕುರ್ಕುರೆ

5 from 14 votes
ತಯಾರಿ ಸಮಯ: 10 minutes
ಅಡುಗೆ ಸಮಯ: 30 minutes
ಒಟ್ಟು ಸಮಯ : 40 minutes
Servings: 2 ಕಪ್
AUTHOR: HEBBARS KITCHEN
Course: ತಿಂಡಿಗಳು
Cuisine: ಭಾರತೀಯ ರಸ್ತೆ ಆಹಾರ
Keyword: ಮ್ಯಾಕರೋನಿ ಕುರ್ಕುರೆ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಮ್ಯಾಕರೋನಿ ಕುರ್ಕುರೆ ಪಾಕವಿಧಾನ | ಕ್ರಿಸ್ಪಿ ಮ್ಯಾಕರೋನಿ ಸ್ನ್ಯಾಕ್ | ಪಾಸ್ತಾ ಕುರ್ಕುರೆ

ಪದಾರ್ಥಗಳು

ಗರಿಗರಿಯಾದ ಕುರ್ಕುರೆಗಾಗಿ:

  • ನೀರು
  • 1 ಟೀಸ್ಪೂನ್ ಉಪ್ಪು
  • 2 ಟೀಸ್ಪೂನ್ ಎಣ್ಣೆ
  • 2 ಕಪ್ ಮ್ಯಾಕರೋನಿ ಪಾಸ್ತಾ
  • ¼ ಕಪ್ ಮೈದಾ
  • ½ ಕಪ್ ಕಾರ್ನ್ ಹಿಟ್ಟು
  • ಎಣ್ಣೆ (ಹುರಿಯಲು)

ತಂದೂರಿ ಫ್ಫ್ಲೇವರ್ ಗಾಗಿ:

  • 1 ಟೀಸ್ಪೂನ್ ಮೆಣಸಿನ ಪುಡಿ
  • ½ ಟೀಸ್ಪೂನ್ ಜೀರಾ ಪೌಡರ್
  • ½ ಟೀಸ್ಪೂನ್ ಕೊತ್ತಂಬರಿ ಪೌಡರ್
  • ½ ಟೀಸ್ಪೂನ್ ಗರಂ ಮಸಾಲಾ
  • 1 ಟೀಸ್ಪೂನ್ ಕಸೂರಿ ಮೇಥಿ (ಪುಡಿಮಾಡಿದ)
  • ¼ ಟೀಸ್ಪೂನ್ ಉಪ್ಪು

ಚಟ್ಪಟಾ ಚಾಟ್ ಫ್ಫ್ಲೇವರ್ ಗಾಗಿ:

  • 1 ಟೀಸ್ಪೂನ್ ಚಾಟ್ ಮಸಾಲಾ
  • ¼ ಟೀಸ್ಪೂನ್ ಪೆಪ್ಪರ್ ಪೌಡರ್
  • ¼ ಟೀಸ್ಪೂನ್ ಉಪ್ಪು

ಸೂಚನೆಗಳು

  • ಮೊದಲಿಗೆ, ದೊಡ್ಡ ಪಾತ್ರದಲ್ಲಿ ಸಾಕಷ್ಟು ನೀರು ತೆಗೆದುಕೊಳ್ಳಿ.
  • 1 ಟೀಸ್ಪೂನ್ ಉಪ್ಪು, 2 ಟೀಸ್ಪೂನ್ ಎಣ್ಣೆ ಸೇರಿಸಿ ಕುದಿಸಿ.
  • ನೀರು ಕುದಿದ ನಂತರ, 2 ಕಪ್ ಮ್ಯಾಕರೋನಿ ಪಾಸ್ತಾ ಸೇರಿಸಿ. ನಿಮ್ಮ ಆಯ್ಕೆಯ ಯಾವುದೇ ಆಕಾರವನ್ನು ನೀವು ಬಳಸಬಹುದು.
  • 7 ನಿಮಿಷಗಳ ಕಾಲ ಕುದಿಸಿ, ಅಥವಾ ಅಡುಗೆ ಸಮಯವನ್ನು ತಿಳಿಯಲು ಪ್ಯಾಕೇಜ್ ಸೂಚನೆಗಳನ್ನು ಪರಿಶೀಲಿಸಿ.
  • ಪಾಸ್ತಾ ಅಲ್ ಡಂಟೆ ತಿರುಗಿದಾಗ, ನೀರನ್ನು ಹರಿಸಿ.
  • ಪಾಸ್ತಾ ಇನ್ನೂ ಬೇಯುವುದರಿಂದ ತಡೆಯಲು ತಣ್ಣನೆಯ ನೀರಿನಿಂದ ತೊಳೆಯಿರಿ.
  • ಬೇಯಿಸಿದ ಪಾಸ್ತಾವನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಮತ್ತು ¼ ಕಪ್ ಮೈದಾ ಮತ್ತು ½ ಕಪ್ ಕಾರ್ನ್ ಹಿಟ್ಟು ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಅಗತ್ಯವಿರುವಂತೆ ಹಿಟ್ಟು ಸೇರಿಸಿ ಪಾಸ್ತಾವನ್ನು ಚೆನ್ನಾಗಿ ಹಿಟ್ಟಿನೊಂದಿಗೆ ಕೋಟ್ ಮಾಡಿ.
  • ಬಿಸಿ ಎಣ್ಣೆಯಲ್ಲಿ ಆಳವಾದ ಹುರಿಯಿರಿ, ಜ್ವಾಲೆಯು ಕಡಿಮೆ ಮಧ್ಯಮಕ್ಕೆ ಇಟ್ಟುಕೊಳ್ಳಿ.
  • ಪಾಸ್ಟಾ ಗೋಲ್ಡನ್ ಮತ್ತು ಗರಿಗರಿಯಾಗುವ ತನಕ ನಡುವೆ ಕೈ ಆಡಿಸುತ್ತಾ ಇರಿ. ಗರಿಗರಿಯಾದ ಕುರ್ಕುರೆಯನ್ನು ಪಡೆಯಲು ಕನಿಷ್ಠ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
  • ಹೆಚ್ಚುವರಿ ಎಣ್ಣೆಯನ್ನು ತೊಡೆದುಹಾಕಲು ಅಡಿಗೆ ಟವಲ್ ಮೇಲೆ ಹರಿಸಿ.

ತಂದೂರಿ ಫ್ಲೇವರ್ ಕುರ್ಕುರೆ ಹೇಗೆ ಮಾಡುವುದು:

  • ದೊಡ್ಡ ಬಟ್ಟಲಿನಲ್ಲಿ ಹುರಿದ ಪಾಸ್ತಾ ತೆಗೆದುಕೊಳ್ಳಿ. 1 ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಕೊತ್ತಂಬರಿ ಪೌಡರ್, ½ ಟೀಸ್ಪೂನ್ ಗರಮ್ ಮಸಾಲಾ, 1 ಟೀಸ್ಪೂನ್ ಕಸೂರಿ ಮೇಥಿ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
  • ಎಲ್ಲಾ ಮಸಾಲೆಗಳು ಲೇಪಿತವಾಗಿವೆ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  • ಅಂತಿಮವಾಗಿ, ಸಂಜೆ ಚಾಯ್ ಜೊತೆ ತಂದೂರಿ ಫ್ಲೇವರ್ ಕುರ್ಕುರೆ ಪಾಸ್ತಾವನ್ನು ಆನಂದಿಸಿ.

ಚಟ್ಪಟಾ ಚಾಟ್ ಫ್ಲೇವರ್ ಹೇಗೆ ಮಾಡುವುದು:

  • ದೊಡ್ಡ ಬಟ್ಟಲಿನಲ್ಲಿ ಹುರಿದ ಪಾಸ್ತಾ ತೆಗೆದುಕೊಳ್ಳಿ. 1 ಟೀಸ್ಪೂನ್ ಚಾಟ್ ಮಸಾಲಾ, ¼ ಟೀಸ್ಪೂನ್ ಪೆಪ್ಪರ್ ಪೌಡರ್ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
  • ಎಲ್ಲಾ ಮಸಾಲೆಗಳು ಲೇಪಿತವಾಗಿವೆ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  • ಅಂತಿಮವಾಗಿ, ಚಟ್ಪಟಾ ಚಾಟ್ ಫ್ಲೇವರ್ ಕುರ್ಕುರೆ ಪಾಸ್ತಾವನ್ನು ಸಂಜೆ ಚಾಯ್ ಜೊತೆ ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಮ್ಯಾಕರೋನಿ ಕುರ್ಕುರೆ ಹೇಗೆ ಮಾಡುವುದು:

  1. ಮೊದಲಿಗೆ, ದೊಡ್ಡ ಪಾತ್ರದಲ್ಲಿ ಸಾಕಷ್ಟು ನೀರು ತೆಗೆದುಕೊಳ್ಳಿ.
  2. 1 ಟೀಸ್ಪೂನ್ ಉಪ್ಪು, 2 ಟೀಸ್ಪೂನ್ ಎಣ್ಣೆ ಸೇರಿಸಿ ಕುದಿಸಿ.
  3. ನೀರು ಕುದಿದ ನಂತರ, 2 ಕಪ್ ಮ್ಯಾಕರೋನಿ ಪಾಸ್ತಾ ಸೇರಿಸಿ. ನಿಮ್ಮ ಆಯ್ಕೆಯ ಯಾವುದೇ ಆಕಾರವನ್ನು ನೀವು ಬಳಸಬಹುದು.
  4. 7 ನಿಮಿಷಗಳ ಕಾಲ ಕುದಿಸಿ, ಅಥವಾ ಅಡುಗೆ ಸಮಯವನ್ನು ತಿಳಿಯಲು ಪ್ಯಾಕೇಜ್ ಸೂಚನೆಗಳನ್ನು ಪರಿಶೀಲಿಸಿ.
  5. ಪಾಸ್ತಾ ಅಲ್ ಡಂಟೆ ತಿರುಗಿದಾಗ, ನೀರನ್ನು ಹರಿಸಿ.
  6. ಪಾಸ್ತಾ ಇನ್ನೂ ಬೇಯುವುದರಿಂದ ತಡೆಯಲು ತಣ್ಣನೆಯ ನೀರಿನಿಂದ ತೊಳೆಯಿರಿ.
  7. ಬೇಯಿಸಿದ ಪಾಸ್ತಾವನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಮತ್ತು ¼ ಕಪ್ ಮೈದಾ ಮತ್ತು ½ ಕಪ್ ಕಾರ್ನ್ ಹಿಟ್ಟು ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  8. ಅಗತ್ಯವಿರುವಂತೆ ಹಿಟ್ಟು ಸೇರಿಸಿ ಪಾಸ್ತಾವನ್ನು ಚೆನ್ನಾಗಿ ಹಿಟ್ಟಿನೊಂದಿಗೆ ಕೋಟ್ ಮಾಡಿ.
  9. ಬಿಸಿ ಎಣ್ಣೆಯಲ್ಲಿ ಆಳವಾದ ಹುರಿಯಿರಿ, ಜ್ವಾಲೆಯು ಕಡಿಮೆ ಮಧ್ಯಮಕ್ಕೆ ಇಟ್ಟುಕೊಳ್ಳಿ.
  10. ಪಾಸ್ಟಾ ಗೋಲ್ಡನ್ ಮತ್ತು ಗರಿಗರಿಯಾಗುವ ತನಕ ನಡುವೆ ಕೈ ಆಡಿಸುತ್ತಾ ಇರಿ. ಗರಿಗರಿಯಾದ ಕುರ್ಕುರೆಯನ್ನು ಪಡೆಯಲು ಕನಿಷ್ಠ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
  11. ಹೆಚ್ಚುವರಿ ಎಣ್ಣೆಯನ್ನು ತೊಡೆದುಹಾಕಲು ಅಡಿಗೆ ಟವಲ್ ಮೇಲೆ ಹರಿಸಿ.
    ಮ್ಯಾಕರೋನಿ ಕುರ್ಕುರೆ ಪಾಕವಿಧಾನ

ತಂದೂರಿ ಫ್ಲೇವರ್ ಕುರ್ಕುರೆ ಹೇಗೆ ಮಾಡುವುದು:

  1. ದೊಡ್ಡ ಬಟ್ಟಲಿನಲ್ಲಿ ಹುರಿದ ಪಾಸ್ತಾ ತೆಗೆದುಕೊಳ್ಳಿ. 1 ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಕೊತ್ತಂಬರಿ ಪೌಡರ್, ½ ಟೀಸ್ಪೂನ್ ಗರಮ್ ಮಸಾಲಾ, 1 ಟೀಸ್ಪೂನ್ ಕಸೂರಿ ಮೇಥಿ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
  2. ಎಲ್ಲಾ ಮಸಾಲೆಗಳು ಲೇಪಿತವಾಗಿವೆ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  3. ಅಂತಿಮವಾಗಿ, ಸಂಜೆ ಚಾಯ್ ಜೊತೆ ತಂದೂರಿ ಫ್ಲೇವರ್ ಕುರ್ಕುರೆ ಪಾಸ್ತಾವನ್ನು ಆನಂದಿಸಿ.

ಚಟ್ಪಟಾ ಚಾಟ್ ಫ್ಲೇವರ್ ಹೇಗೆ ಮಾಡುವುದು:

  1. ದೊಡ್ಡ ಬಟ್ಟಲಿನಲ್ಲಿ ಹುರಿದ ಪಾಸ್ತಾ ತೆಗೆದುಕೊಳ್ಳಿ. 1 ಟೀಸ್ಪೂನ್ ಚಾಟ್ ಮಸಾಲಾ, ¼ ಟೀಸ್ಪೂನ್ ಪೆಪ್ಪರ್ ಪೌಡರ್ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
  2. ಎಲ್ಲಾ ಮಸಾಲೆಗಳು ಲೇಪಿತವಾಗಿವೆ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  3. ಅಂತಿಮವಾಗಿ, ಚಟ್ಪಟಾ ಚಾಟ್ ಫ್ಲೇವರ್ ಕುರ್ಕುರೆ ಪಾಸ್ತಾವನ್ನು ಸಂಜೆ ಚಾಯ್ ಜೊತೆ ಆನಂದಿಸಿ.

ಟಿಪ್ಪಣಿಗಳು:

  • ಮೊದಲಿಗೆ, ಪಾಸ್ತಾವನ್ನು ಜಾಸ್ತಿ ಬೇಯಿಸದಿರಿ, ಏಕೆಂದರೆ ಪಾಸ್ತಾ ಮೆತ್ತಗಾಗಿ ಆಕಾರವನ್ನು ಹಿಡಿದಿಟ್ಟುಕೊಳ್ಳುವುದಿಲ್ಲ.
  • ಅಲ್ಲದೆ, ನಿಮ್ಮ ಆಯ್ಕೆಯ ಹಾಗೆ ಹುರಿದ ಪಾಸ್ತಾಗೆ ಫ್ಲೇವರ್ ಮಾಡಬಹುದು. ನೀವು ಮಿಂಟ್ ಪುಡಿ, ಈರುಳ್ಳಿ ಪುಡಿ ಅಥವಾ ಬೆಳ್ಳುಳ್ಳಿ ಪುಡಿಯನ್ನು ಸೇರಿಸಬಹುದು.
  • ಹೆಚ್ಚುವರಿಯಾಗಿ, ಕಡಿಮೆ ಜ್ವಾಲೆಯಲ್ಲಿ ಆಳವಾಗಿ ಹುರಿದಾಗ ಕುರ್ಕುರೆ ದೀರ್ಘಕಾಲದವರೆಗೆ ಉಳಿಯುವುತ್ತದೆ.
  • ಅಂತಿಮವಾಗಿ, ಪಾಸ್ತಾ ಕುರ್ಕುರೆ ಸ್ವಲ್ಪ ಮಸಾಲೆಯುಕ್ತವಾಗಿ ತಯಾರಿಸಿದಾಗ ಉತ್ತಮ ರುಚಿ ನೀಡುತ್ತದೆ.
5 from 14 votes (14 ratings without comment)