ಸೆಜ್ವಾನ್ ಪನೀರ್ ಪಾಕವಿಧಾನ | ಸೆಜ್ವಾನ್ ಚಿಲ್ಲಿ ಪನೀರ್ ನ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಸರಳ ಮತ್ತು ಸುಲಭವಾದ ಇಂಡೋ ಚೈನೀಸ್ ರೆಸಿಪಿಗಳು ಪನೀರ್ ಮತ್ತು ಸೆಜ್ವಾನ್ ಸಾಸ್‌ನಿಂದ ತಯಾರಿಸಲ್ಪಟ್ಟಿದೆ. ಇದು ಭಾರತದಾದ್ಯಂತ ಜನಪ್ರಿಯ ಭಾರತೀಯ ರಸ್ತೆ ಬೀದಿ ಆಹಾರವಾಗಿದೆ ಮತ್ತು ಇದನ್ನು ಲಘು ಉಪಹಾರ ಅಥವಾ ಪಾರ್ಟಿಗಳಿಗೆ ತಯಾರಿಸುತ್ತಾರೆ. ಇದನ್ನು ಸ್ಟಾರ್ಟರ್ ಆಗಿ ತಿನ್ನಬಹುದು. ಹಾಗೆಯೇ, ಇದನ್ನು ವೆಜ್ ಫ್ರೈಡ್ ರೈಸ್ ಅಥವಾ ವೆಜ್ ನೂಡಲ್ಸ್ ರೆಸಿಪಿಗೆ ಸೈಡ್ ಡಿಶ್ ಆಗಿ ಬಡಿಸಿದಾಗ ಇದು ತುಂಬಾ ರುಚಿಯಾಗಿರುತ್ತದೆ.
ಈ ಪಾಕವಿಧಾನ ನನ್ನ ಹಿಂದಿನ ಡ್ರೈ ಚಿಲ್ಲಿ ಪನೀರ್‌ಗೆ ಹೋಲುತ್ತದೆ. ವಾಸ್ತವವಾಗಿ, ಆ ಪಾಕವಿಧಾನವು ಇದಕ್ಕೆ ವಿಸ್ತಾರವಾಗಿದೆ ಎಂದು ನಾನು ಹೇಳುತ್ತೇನೆ. ನಾನು ವೈಯಕ್ತಿಕವಾಗಿ ಈ ಬದಲಾವಣೆಯನ್ನು ಇಷ್ಟಪಡುತ್ತೇನೆ, ಯಾಕೆಂದರೆ, ಇದರಲ್ಲಿ ಸೆಜ್ವಾನ್ ಸಾಸ್‌ನ ಹೆಚ್ಚುವರಿ ರುಚಿಯು ಹೊಂದಿರುತ್ತದೆ. ಇದಲ್ಲದೆ, ಇದು ಇತರ ಇಂಡೋ ಚೈನೀಸ್ ಪಾಕವಿಧಾನಗಳಿಗೆ ಸೈಡ್ ಡಿಶ್ ಆಗಿ ಬಳಸಬಹುದು. ನೀವು ನನ್ನನ್ನು ಕೇಳಿದರೆ ವೆಜ್ ಫ್ರೈಡ್ ರೈಸ್ ಮತ್ತು ಸೆಜ್ವಾನ್ ಪನೀರ್‌ಗಳ ಸಂಯೋಜನೆಯೇ ನನಗೆ ಪ್ರಿಯವಾದದ್ದು. ಇದನ್ನು, ಗ್ರೇವಿಯಾಗಿಸಲು ಕಾರ್ನ್‌ಫ್ಲೋರ್ ಸ್ಲರಿಯನ್ನು ಸೇರಿಸುವ ಮೂಲಕ ನೀವು ಈ ಪಾಕವಿಧಾನವನ್ನು ವಿಸ್ತರಿಸಬಹುದು. ಇದು ಖಂಡಿತವಾಗಿಯೂ ಇಂಡೋ ಚೈನೀಸ್ ಪಾಕವಿಧಾನಗಳಿಗೆ ಸೂಕ್ತವಾದ ಸೈಡ್ ಡಿಶ್ ಆಗಿದೆ.
ಈ ಪಾಕವಿಧಾನ ಅತ್ಯಂತ ಸರಳವಾಗಿದೆ. ಆದರೂ ನಾನು ಅದಕ್ಕೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ಸೇರಿಸಲು ಬಯಸುತ್ತೇನೆ. ಮೊದಲನೆಯದಾಗಿ, ಮೃದುವಾಗಿ, ತೇವಾಂಶವುಳ್ಳ ಮತ್ತು ತಾಜಾವಾಗಿರುವ ಈ ಪಾಕವಿಧಾನಕ್ಕಾಗಿ ನಾನು ಮನೆಯಲ್ಲಿ ತಯಾರಿಸಿದ ಪನೀರ್ ಅನ್ನು ಬಳಸಿದ್ದೇನೆ. ನೀವು ಅಂಗಡಿಯಿಂದ ಖರೀದಿಸಿದ ಪನೀರ್ ಅನ್ನು ಸಹ ಬಳಸಬಹುದು, ಆದರೆ ಅದು ಮೃದು ಮತ್ತು ತೇವವಾಗಿದೇಯಾ ಎಂದು ಖಚಿತಪಡಿಸಿಕೊಳ್ಳಿ. ಎರಡನೆಯದಾಗಿ, ಪಾಕವಿಧಾನವನ್ನು ಹೆಚ್ಚಿನ ಜ್ವಾಲೆಯಲ್ಲಿ ಟಾಸ್ ಮಾಡಬೇಕು. ಇಲ್ಲಿ ಸೇರಿಸಿದ ತರಕಾರಿಗಳು ಬೇಯುತ್ತವೆ, ಆದರೂ ಅದು ಕ್ರಿಸ್ಪಿ ಆಗಿ ತನ್ನ ವಿನ್ಯಾಸವನ್ನು ಉಳಿಸಿಕೊಳ್ಳುತ್ತವೆ. ಕೊನೆಯದಾಗಿ, ನಾನು ಮನೆಯಲ್ಲಿ ತಯಾರಿಸಿದ ಮಧ್ಯಮ ಖಾರ ಉಳ್ಳ ಸೆಜ್ವಾನ್ ಸಾಸ್ ಅನ್ನು ಬಳಸಿದ್ದೇನೆ. ನೀವು ಅಂಗಡಿಯಲ್ಲಿ ಖರೀದಿಸಿದ ಸಾಸ್ ಅನ್ನು ಬಳಸುತ್ತಿದ್ದರೆ, ಅದನ್ನು ನಿಮ್ಮ ಆದ್ಯತೆಯ ಪ್ರಕಾರ, ಅದರ ಖಾರದ ಅನುಗುಣವಾಗಿ ಸೇರಿಸಿ.
ಅಂತಿಮವಾಗಿ, ಈ ಪಾಕವಿಧಾನದ ಪೋಸ್ಟ್‌ನೊಂದಿಗೆ ನನ್ನ ಇತರ ಅಪೆಟೈಸರ್ ಪಾಕವಿಧಾನಗಳ ಸಂಗ್ರಹಕ್ಕೆ ಭೇಟಿ ನೀಡಲು ನಾನು ವಿನಂತಿಸುತ್ತೇನೆ. ಇದು ಪನೀರ್ ಮಂಚೂರಿಯನ್, ಚಿಲ್ಲಿ ಪನೀರ್, ಮಶ್ರೂಮ್ 65, ಗೋಬಿ 65, ಗೋಬಿ ಮಂಚೂರಿಯನ್, ಗೋಬಿ ಚಿಲ್ಲಿ ಮತ್ತು ವೆಜ್ ಕ್ರಿಸ್ಪಿ ಪಾಕವಿಧಾನಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ನನ್ನ ಇತರ ಪಾಕವಿಧಾನಗಳ ಸಂಗ್ರಹಕ್ಕೆ ಭೇಟಿ ನೀಡಿ,
ಪನೀರ್ ಸೆಜ್ವಾನ್ ವೀಡಿಯೊ ಪಾಕವಿಧಾನ:
ಸೆಜ್ವಾನ್ ಪನೀರ್ ಗಾಗಿ ಪಾಕವಿಧಾನ ಕಾರ್ಡ್:
ಸೆಜ್ವಾನ್ ಪನೀರ್ ರೆಸಿಪಿ | schezwan paneer in kannada | ಪನೀರ್ ಸೆಜ್ವಾನ್
ಪದಾರ್ಥಗಳು
ಹುರಿಯುವ ಪನೀರ್ಗಾಗಿ:
- ½ ಕಪ್ ಮೈದಾ
- ¼ ಕಪ್ ಕಾರ್ನ್ ಫ್ಲೋರ್
- ¼ ಟೀಸ್ಪೂನ್ ಕಾಳು ಮೆಣಸು / ಪೆಪ್ಪರ್
- ½ ಟೀಸ್ಪೂನ್ ಸೆಜ್ವಾನ್ ಸಾಸ್
- ¼ ಟೀಸ್ಪೂನ್ ಉಪ್ಪು
- ½ ಕಪ್ ನೀರು
- 11 ತುಂಡು ಪನೀರ್ / ಕಾಟೇಜ್ ಚೀಸ್
- ಎಣ್ಣೆ, ಹುರಿಯಲು
ಇತರ ಪದಾರ್ಥಗಳು:
- 3 ಟೀಸ್ಪೂನ್ ಎಣ್ಣೆ
- 2 ಬೆಳ್ಳುಳ್ಳಿ, ಸಣ್ಣಗೆ ಕತ್ತರಿಸಿದ
- 1 ಇಂಚಿನ ಶುಂಠಿ, ಸಣ್ಣಗೆ ಕತ್ತರಿಸಿದ
- 1 ಚಿಲ್ಲಿ, ಸೀಳಿದ
- 4 ಟೇಬಲ್ಸ್ಪೂನ್ ಸ್ಪ್ರಿಂಗ್ ಈರುಳ್ಳಿ, ಸಣ್ಣಗೆ ಕತ್ತರಿಸಿದ
- ¼ ಈರುಳ್ಳಿ, ಸಣ್ಣಗೆ ಕತ್ತರಿಸಿದ
- ¼ ಕ್ಯಾಪ್ಸಿಕಂ, ಹೋಳು
- 2 ಟೇಬಲ್ಸ್ಪೂನ್ ಸೆಜ್ವಾನ್ ಸಾಸ್
- 1 ಟೇಬಲ್ಸ್ಪೂನ್ ವಿನೆಗರ್
- 1 ಟೇಬಲ್ಸ್ಪೂನ್ ಸೋಯಾ ಸಾಸ್
- ¼ ಟೀಸ್ಪೂನ್ ಸಕ್ಕರೆ
- ¼ ಟೀಸ್ಪೂನ್ ಉಪ್ಪು
ಸೂಚನೆಗಳು
- ಮೊದಲನೆಯದಾಗಿ, ½ ಕಪ್ ಮೈದಾ ಮತ್ತು ¼ ಕಪ್ ಕಾರ್ನ್ ಫ್ಲೋರ್ ತೆಗೆದುಕೊಂಡು ಬ್ಯಾಟರ್ ತಯಾರಿಸಿ.
- ¼ ಟೀಸ್ಪೂನ್ ಪೆಪ್ಪರ್, ½ ಟೀಸ್ಪೂನ್ ಸೆಜ್ವಾನ್ ಸಾಸ್ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
- ½ ಕಪ್ ನೀರನ್ನು ಸೇರಿಸಿ ಉಂಡೆ ಮುಕ್ತ ನಯವಾದ ಬ್ಯಾಟರ್ ತಯಾರಿಸಿ.
- 11 ಪನೀರ್ ತುಂಡುಗಳನ್ನು ಸೇರಿಸಿ ಮತ್ತು ಸಂಪೂರ್ಣವಾಗಿ ಅದ್ದಿ.
- ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಆರೋಗ್ಯಕರ ಆಯ್ಕೆಗಾಗಿ ನೀವು ಶೇಲ್ಲೋ ಫ್ರೈ ಸಹ ಮಾಡಬಹುದು.
- ಅವುಗಳು ಚಿನ್ನದ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಅಂತಿಮವಾಗಿ, ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಅಡಿಗೆ ಟವೆಲ್ ಮೇಲೆ ಹುರಿದ ಪನೀರ್ ಅನ್ನು ತೆಗೆಯಿರಿ. ನಂತರ ಪಕ್ಕಕ್ಕೆ ಇರಿಸಿ.
ಪನೀರ್ ಸೆಜ್ವಾನ್ ಪಾಕವಿಧಾನ:
- ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 2 ಬೆಳ್ಳುಳ್ಳಿ, 1 ಇಂಚು ಶುಂಠಿ ಮತ್ತು 1 ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಜ್ವಾಲೆ ಹೆಚ್ಚಾಗಿಯೇ ಇರಲಿ.
- ಹೆಚ್ಚಿನ ಜ್ವಾಲೆಯ ಮೇಲೆ ¼ ಈರುಳ್ಳಿ ಮತ್ತು 2 ಟೀಸ್ಪೂನ್ ಸ್ಪ್ರಿಂಗ್ ಈರುಳ್ಳಿ ಹಾಕಿ.
- ಈಗ ¼ ಕ್ಯಾಪ್ಸಿಕಂ ಸೇರಿಸಿ, ಅವುಗಳು ಸ್ವಲ್ಪ ಬಣ್ಣವನ್ನು ಬದಲಾಯಿಸುವವರೆಗೆ ಸಾಟ್ ಮಾಡುವುದನ್ನು ಮುಂದುವರಿಸಿ.
- ಹೆಚ್ಚುವರಿಯಾಗಿ 2 ಟೀಸ್ಪೂನ್ ಸೆಜ್ವಾನ್ ಸಾಸ್, 1 ಟೀಸ್ಪೂನ್ ವಿನೆಗರ್, 1 ಟೀಸ್ಪೂನ್ ಸೋಯಾ ಸಾಸ್, ¼ ಟೀಸ್ಪೂನ್ ಸಕ್ಕರೆ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
- ಚೆನ್ನಾಗಿ ಮಿಶ್ರಣ ಮಾಡಿ ಒಂದು ನಿಮಿಷ ಬೇಯಿಸಿ.
- ಕಾರ್ನ್ ಫ್ಲೋರ್ ಸ್ಲರ್ರಿ ಸೇರಿಸಿ. ಕಾರ್ನ ಫ್ಲೋರ್ ಸ್ಲರಿ ತಯಾರಿಸಲು 2 ಟೀಸ್ಪೂನ್ ಕಾರ್ನ್ ಫ್ಲೋರ್ ಅನ್ನು ¼ ಕಪ್ ನೀರಿನೊಂದಿಗೆ ಬೆರೆಸಿ.
- ಗ್ರೇವಿ ಸ್ವಲ್ಪ ದಪ್ಪವಾಗುವವರೆಗೆ ಮತ್ತು ಹೊಳಪು ಬರುವವರೆಗೆ ಉತ್ತಮ ಮಿಶ್ರಣವನ್ನು ನೀಡಿ.
- ಇದಕ್ಕೆ, ಹುರಿದ ಪನೀರ್ ಸೇರಿಸಿ.
- ಸಾಸ್ ಚೆನ್ನಾಗಿ ಎಲ್ಲ ಪನೀರ್ ಗಳಿಗೂ ಲೇಪಿತವಾಗಿದೆಯಾ ಎಂದು ಖಚಿತಪಡಿಸಿಕೊಂಡು ನಿಧಾನವಾಗಿ ಮಿಶ್ರಣ ಮಾಡಿ.
- ಅಂತಿಮವಾಗಿ, ಸೆಜ್ವಾನ್ ಪನೀರ್ ಅನ್ನು ಸರ್ವಿಂಗ್ ಬೌಲ್‌ಗೆ ವರ್ಗಾಯಿಸಿ ಮತ್ತು ಕತ್ತರಿಸಿದ ಸ್ಪ್ರಿಂಗ್ ಈರುಳ್ಳಿಯನ್ನು ಅಲಂಕರಿಸಿ. ಫ್ರೈಡ್ ರೈಸ್ ನೊಂದಿಗೆ ಬಡಿಸಿ.
ಹಂತ ಹಂತದ ಫೋಟೋದೊಂದಿಗೆ ಸೆಜ್ವಾನ್ ಪನೀರ್ ಹೇಗೆ ಮಾಡುವುದು:

ಟಿಪ್ಪಣಿಗಳು:
- ಮೊದಲನೆಯದಾಗಿ, ನಿಮ್ಮ ಆದ್ಯತೆಯ ಆಕಾರಕ್ಕೆ ಪನೀರ್ ತುಂಡುಗಳನ್ನು ಕತ್ತರಿಸಿ.
- ಸೆಜ್ವಾನ್ ಸಾಸ್ ನ ಪ್ರಮಾಣವನ್ನು ಕಡಿಮೆ ಮಾಡಬಹುದು ಮತ್ತು ನಿಮಗೆ ತುಂಬಾ ಮಸಾಲೆಯುಕ್ತವಾಗಬೇಕಾಗಿದ್ದರೆ, ಟೊಮೆಟೊ ಸಾಸ್ ಅನ್ನು ಸೇರಿಸಿ.
- ಕಾರ್ನ್‌ಫ್ಲೋರ್ ಸ್ಲರಿಯನ್ನು ಹೆಚ್ಚಿಸುವ ಮೂಲಕ ಗ್ರೇವಿಯ ಸ್ಥಿರತೆಯನ್ನು ಹೊಂದಿಸಿ.
- ಅಂತಿಮವಾಗಿ, ಬಿಸಿ ಮತ್ತು ಗರಿಗರಿಯಾಗಿ ಸವಿದಾಗ ಉತ್ತಮ ರುಚಿ ನೀಡುತ್ತದೆ.