ಪೊಟಾಟೋ ಚಿಪ್ಸ್ ಪಾಕವಿಧಾನ | ಆಲೂಗೆಡ್ಡೆ ಚಿಪ್ಸ್ | ಆಲೂ ಚಿಪ್ಸ್ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ತೆಳ್ಳಗೆ ಹೆಚ್ಚಿದ ಆಲೂಗಡ್ಡೆಗಳಿಂದ ಮಾಡಿದ ಸುಲಭ ಮತ್ತು ಗರಿಗರಿಯಾದ ಪಾಕವಿಧಾನ. ಇದು ಬಹುಶಃ ಜಗತ್ತಿನ ಎಲ್ಲ ವಯೋಮಾನದವರಲ್ಲಿ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ. ಇದನ್ನು ಅತ್ಯಂತ ಕಡಿಮೆ ಪದಾರ್ಥಗಳಿಂದ ತಯಾರಿಸಲಾಗುತ್ತದೆ ಮತ್ತು ವಿಭಿನ್ನ ಪರಿಮಳ ಮತ್ತು ವಿಶಿಷ್ಟ ಮಸಾಲೆಗಳೊಂದಿಗೆ ಮಾಡಲ್ಪಡುತ್ತದೆ, ಆದರೆ ಈ ಪಾಕವಿಧಾನ ಮೆಣಸಿನ ಹುಡಿ ರುಚಿಯ ಆಲೂ ಚಿಪ್ಸ್ ಬಗ್ಗೆ ವಿವರಿಸುತ್ತದೆ.
ಚಿಪ್ಸ್ ಪಾಕವಿಧಾನವನ್ನು ಇಷ್ಟಪಡದವರು ಯಾರೂ ಇಲ್ಲ ಎಂದು ನಾನು ಭಾವಿಸುತ್ತೇನೆ. ನಾವೆಲ್ಲರೂ ಅದನ್ನು ಇಷ್ಟಪಡುತ್ತೇವೆ. ಕಿರಾಣಿ ಅಂಗಡಿಯಿಂದ ಖರೀದಿಸಲು ಬಯಸುತ್ತೇವೆ. ಇದಕ್ಕೆ ಮುಖ್ಯ ಕಾರಣವೆಂದರೆ ಇದು ಕಷ್ಟಕರವಾದವಾದ ಪಾಕವಿಧಾನಗಳಲ್ಲಿ ಒಂದಾಗಿದೆ ಎಂದು ಭಾವಿಸುತ್ತೇವೆ. ಇತರ ಸಾಮಾನ್ಯ ಊಹೆಯೆಂದರೆ, ಅದನ್ನು ತಯಾರಿಸಲು ಅತ್ಯಾಧುನಿಕ ಉಪಕರಣಗಳು ಬೇಕಾಗಬಹುದು ಎಂದು. ಆದರೆ ನನ್ನನ್ನು ನಂಬಿ, ಇದು ಒಂದು ಸರಳ ಮತ್ತು ಸುಲಭವಾದ ಪಾಕವಿಧಾನಗಳಲ್ಲಿ ಒಂದಾಗಿದೆ. ಈ ಪಾಕವಿಧಾನದ ಏಕೈಕ ಮುಖ್ಯ ಭಾಗವೆಂದರೆ ಆಲೂಗಡ್ಡೆ ಬಳಕೆ. ಮೂಲತಃ ನೀವು ಆಲೂಗಡ್ಡೆಯನ್ನು ಚೆನ್ನಾಗಿ ಆರಿಸಬೇಕಾಗುತ್ತದೆ. ಅದರಲ್ಲಿ ಹೆಚ್ಚು ಗಂಜಿ ಮತ್ತು ಕಡಿಮೆ ನೀರಿನ ಅಂಶವು ಹೊಂದಿರಬೇಕಾಗುತ್ತದೆ. ಸಾಮಾನ್ಯವಾಗಿ, ಕೆಂಪು ಆಲೂಗಡ್ಡೆ ಎಲ್ಲಾ ಹುರಿದ ತಿಂಡಿಗಳಿಗೆ ಒಳ್ಳೆಯದು. ನಿರ್ದಿಷ್ಟವಾಗಿ, ನೀವು ಕಿಪ್ ಫ್ಲರ್ ಆಲೂಗಡ್ಡೆ, ಡಚ್ ಕ್ರೀಮ್ ಮತ್ತು ಕೆಂಪು ರಾಯಲ್ ಆಲೂಗಡ್ಡೆಗಳನ್ನು ಆಲೂಗಡ್ಡೆ ಚಿಪ್ಸ್, ಆಲೂಗಡ್ಡೆ ಫ್ರೈಸ್ ಮತ್ತು ಆಲೂಗೆಡ್ಡೆ ವೆಡ್ಜ್ಸ್ ಪಾಕವಿಧಾನಕ್ಕೆ ಸೂಕ್ತವಾಗಿದೆ.
ಇದಲ್ಲದೆ, ಆಲೂಗಡ್ಡೆ ಚಿಪ್ಸ್ ಪಾಕವಿಧಾನಕ್ಕೆ ಇನ್ನೂ ಕೆಲವು ಸುಲಭ ಮತ್ತು ಪ್ರಮುಖ ಸಲಹೆಗಳನ್ನು ಸೇರಿಸಲು ನಾನು ಬಯಸುತ್ತೇನೆ. ಮೊದಲನೆಯದಾಗಿ, ನಾನು ಮೊದಲೇ ವಿವರಿಸುತ್ತಿದ್ದಂತೆ, ಆಲೂಗಡ್ಡೆಯಲ್ಲಿ ಗಂಜಿಯು ಸಮೃದ್ಧವಾಗಿರುವುದನ್ನು ನೀವು ಆರಿಸಬೇಕಾಗುತ್ತದೆ. ಆದರೆ ಈ ಪಾಕವಿಧಾನದಲ್ಲಿ ಇದು ನಮಗೆ ಅಗತ್ಯವಿಲ್ಲ, ಆದ್ದರಿಂದ ಹೆಚ್ಚುವರಿ ಗಂಜಿಯನ್ನು ತೆಗೆದುಹಾಕಲು ನೀವು ತೆಳ್ಳಗೆ ಹೆಚ್ಚಿದ ಆಲೂಗಡ್ಡೆಗಳನ್ನು ತಣ್ಣೀರಿನಲ್ಲಿ ಮುಳುಗಿಸಿಡಬೇಕು. ಎರಡನೆಯದಾಗಿ, ಎಣ್ಣೆಯಲ್ಲಿ ಹುರಿಯುವಾಗ ನೀವು ಜಾಗರೂಕರಾಗಿರಬೇಕು. ಎಣ್ಣೆ ಬಿಸಿಯಾಗಿರಬೇಕು ಮತ್ತು ಹುರಿಯುವಿಕೆಯು ಮಧ್ಯಮ ಜ್ವಾಲೆಯಲ್ಲಿ ಆಗಬೇಕು. ಅದನ್ನು ಒಮ್ಮೆ ಹುರಿದ ನಂತರ, ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಪೇಪರ್ ಟವೆಲ್ ಅಥವಾ ಟಿಶ್ಯೂ ಪೇಪರ್ ಅನ್ನು ಬಳಸಬೇಡಿ. ಕರಿದ ಚಿಪ್‌ಗಳನ್ನು ಇರಿಸಲು ಜರಡಿ ಬಳಸಿ, ಇದರಿಂದ ಗಾಳಿಯು ಎರಡೂ ಬದಿಗಳಲ್ಲಿ ಹೋಗುತ್ತದೆ. ಕೊನೆಯದಾಗಿ, ದೀರ್ಘಾವಧಿಯ ಬಳಕೆಗಾಗಿ ಇವುಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ. ಇದು ಒಂದು ವಾರದವರೆಗೆ ಇರುತ್ತದೆ ಮತ್ತು ಸಂರಕ್ಷಕಗಳನ್ನು ಸೇರಿಸದ ಕಾರಣ ಅದು ನಿಧಾನವಾಗಿ ಮೆದು ಆಗಲೂಬಹುದು.
ಅಂತಿಮವಾಗಿ, ಪೊಟಾಟೋ ಚಿಪ್ಸ್ ಪಾಕವಿಧಾನದ ಈ ಪೋಸ್ಟ್ನೊಂದಿಗೆ ನನ್ನ ಇತರ ತಿಂಡಿಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸಲು ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ನನ್ನ ಇತರ ಆಲೂಗಡ್ಡೆ ಸಂಬಂಧಿತ ಪಾಕವಿಧಾನಗಳಾದ ಆಲೂಗೆಡ್ಡೆ ಲಾಲಿಪಾಪ್, ಆಲೂ ಕೆ ಕಬಾಬ್, ಆಲೂ ಪನೀರ್ ಟಿಕ್ಕಿ, ಬಟಾಟಾ ವಡಾ, ಬ್ರೆಡ್ ಬಾಲ್, ಆಲೂ ಟಿಕ್ಕಿ, ಆಲೂ ಮಂಚೂರಿಯನ್, ಆಲೂಗಡ್ಡೆ ಬೈಟ್ಸ್, ಪಾಲಕ್ ಕಟ್ಲೆಟ್, ಬ್ರೆಡ್ ರೋಲ್ ಅನ್ನು ಒಳಗೊಂಡಿದೆ. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಪಾಕವಿಧಾನ ವಿಭಾಗಗಳನ್ನು ಹೈಲೈಟ್ ಮಾಡಲು ಬಯಸುತ್ತೇನೆ,
ಆಲೂಗೆಡ್ಡೆ ಚಿಪ್ಸ್ ವೀಡಿಯೊ ಪಾಕವಿಧಾನ:
ಪೊಟಾಟೋ ಚಿಪ್ಸ್ ಪಾಕವಿಧಾನ ಕಾರ್ಡ್:
ಪೊಟಾಟೋ ಚಿಪ್ಸ್ ರೆಸಿಪಿ | potato chips in kannada | ಆಲೂಗೆಡ್ಡೆ ಚಿಪ್ಸ್
ಪದಾರ್ಥಗಳು
- 3 ಆಲೂಗಡ್ಡೆ, ದೊಡ್ಡದು
- 4 ಕಪ್ ತಣ್ಣಗಿರುವ ನೀರು, ತೊಳೆಯಲು
- 1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
- ½ ಟೀಸ್ಪೂನ್ ಉಪ್ಪು
- ಎಣ್ಣೆ, ಹುರಿಯಲು
ಸೂಚನೆಗಳು
- ಮೊದಲನೆಯದಾಗಿ, ದೊಡ್ಡ ಆಲೂಗಡ್ಡೆಯ ಸಿಪ್ಪೆ ತೆಗೆಯಿರಿ. ಒಳ್ಳೆಯ ಸ್ಲೈಸ್ಗಳನ್ನು ಪಡೆಯಲು ದೊಡ್ಡ ಆಲೂಗಡ್ಡೆ ಬಳಸಲು ಖಚಿತಪಡಿಸಿಕೊಳ್ಳಿ.
- ಆಲೂಗಡ್ಡೆಯನ್ನು ಸಾಧ್ಯವಾದಷ್ಟು ತೆಳ್ಳಗೆ ಕತ್ತರಿಸಿ.
- ಈಗ ಆಲೂಗೆಡ್ಡೆ ಸ್ಲೈಸ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿ ತಣ್ಣಗಾದ ನೀರನ್ನು ಸೇರಿಸಿ.
- ಚೆನ್ನಾಗಿ ತೊಳೆಯಿರಿ ಮತ್ತು ಕಿಚನ್ ಟವೆಲ್ ಮೇಲೆ ಹರಡಿ.
- ಹೆಚ್ಚುವರಿ ನೀರನ್ನು ಉಜ್ಜಿಕೊಳ್ಳಿ. ಇದು ಎಣ್ಣೆ ಮೈಮೇಲೆ ಹಾರುವುದನ್ನು ತಡೆಯಲು ಸಹಾಯ ಮಾಡುತ್ತದೆ.
- ಕತ್ತರಿಸಿದ ಆಲೂಗಡ್ಡೆಯನ್ನು ಬಿಸಿ ಎಣ್ಣೆಯಲ್ಲಿ ಬಿಡಿ. ತುಂಬಾ ಸ್ಲೈಸ್ಗಳನ್ನು ಒಂದೇ ಸಲ ಹಾಕಬೇಡಿ.
- ಆಗಾಗ ಕೈ ಆಡಿಸುತ್ತಾ ಮಧ್ಯಮ ಉರಿಯಲ್ಲಿ ಹುರಿಯಿರಿ.
- ಚಿಪ್ಸ್ ಗರಿಗರಿಯಾಗುವವರೆಗೆ ಫ್ರೈ ಮಾಡಿ.
- ಕೋಲಾಂಡರ್ ನಿಂದ ಹೆಚ್ಚುವರಿ ಎಣ್ಣೆಯನ್ನು ಸೋಸಿರಿ. ಅಡುಗೆ ಕಾಗದದ ಮೇಲೆ ಹಾಕಬೇಡಿ ಏಕೆಂದರೆ ಇದರಿಂದ ಚಿಪ್ಸ್ ಮೆತ್ತಗಾಗಬಹುದು.
- ಈಗ 1 ಟೀಸ್ಪೂನ್ ಮೆಣಸಿನ ಪುಡಿ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
- ಎಲ್ಲಾ ಮಸಾಲೆಗಳನ್ನು ಲೇಪಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ ಹಾಗೂ ಚೆನ್ನಾಗಿ ಟಾಸ್ ಮಾಡಿ ಮಿಶ್ರಣ ಮಾಡಿ.
- ಅಂತಿಮವಾಗಿ, ಆಲೂಗೆಡ್ಡೆ ಚಿಪ್ಸ್ ಪಾಕವಿಧಾನವನ್ನು ಆನಂದಿಸಿ ಹಾಗೂ ಒಂದು ವಾರದವರೆಗೆ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಬಹುದು.
ಹಂತ ಹಂತದ ಫೋಟೋದೊಂದಿಗೆ ಪೊಟಾಟೋ ಚಿಪ್ಸ್ ಹೇಗೆ ತಯಾರಿಸುವುದು:

ಟಿಪ್ಪಣಿಗಳು:
- ಮೊದಲನೆಯದಾಗಿ, ಗರಿಗರಿಯಾದ ಚಿಪ್ಸ್ ಪಡೆಯಲು ತಾಜಾ ಆಲೂಗಡ್ಡೆ ಬಳಸುವುದನ್ನು ಖಚಿತಪಡಿಸಿಕೊಳ್ಳಿ.
- ಅಲ್ಲದೆ, ನಿಮ್ಮ ಆಯ್ಕೆಯ ಮಸಾಲೆಗಳನ್ನು ರುಚಿಯ ತಕ್ಕ ಹಾಗೆ ಆಲೂ ಚಿಪ್ಸ್ಗಗಳಿಗೆ ಸೇರಿಸಬಹುದು.
- ನಿಮ್ಮ ಬಳಿ ಸ್ಲೈಸರ್ ಇಲ್ಲವಾದರೆ ನೀವು ಚಾಕುವನ್ನು ಬಳಸಿ ತೆಳ್ಳಗೆ ಕತ್ತರಿಸಬಹುದು.
- ಅಂತಿಮವಾಗಿ, ಗರಿಗರಿಯಾಗಿ ಪೊಟಾಟೋ ಚಿಪ್ಸ್ ಬಡಿಸಿದಾಗ ಉತ್ತಮ ರುಚಿ ನೀಡುತ್ತದೆ.