ಇಡ್ಲಿ ರೆಸಿಪಿ – ಸ್ಟ್ಯಾಂಡ್ ಮತ್ತು ಕುಕ್ಕರ್ ಇಲ್ಲದೆ | ಬಾಳೆ ಎಲೆ ಕಪ್ ನಲ್ಲಿ ಕಡುಬುವಿನ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಉದ್ದಿನ ಬೇಳೆ ಮತ್ತು ಇಡ್ಲಿ ರವಾ ಸಂಯೋಜನೆಯೊಂದಿಗೆ ತಯಾರಿಸಿದ ಸರಳ ಮತ್ತು ಸುಲಭವಾದ ದಕ್ಷಿಣ ಭಾರತೀಯ ಉಪಹಾರ ಪಾಕವಿಧಾನ. ಇದು ಒಂದು ಅನನ್ಯ ಪಾಕವಿಧಾನವಾಗಿದೆ, ಯಾಕೆಂದರೆ ಇಡ್ಲಿಯನ್ನು ಸಾಂಪ್ರದಾಯಿಕವಾಗಿ ಇಡ್ಲಿ ಸ್ಟ್ಯಾಂಡ್ನೊಂದಿಗೆ ಹಾಗೂ ಇಡ್ಲಿ ಕುಕ್ಕರ್ನೊಂದಿಗೆ ತಯಾರಿಸಲ್ಪಡುತ್ತದೆ. ಈ ಮೃದುವಾದ ಇಡ್ಲಿಯು, ಹೆಚ್ಚುವರಿ ಸುವಾಸನೆ ಮತ್ತು ಪರಿಮಳವನ್ನು ಇಷ್ಟ ಪಡುವವರು ಅಥವಾ ಇಡ್ಲಿ ಸ್ಟಾಂಡ್ ಇಲ್ಲದವರಿಗೆ ಸೂಕ್ತವಾಗಿದೆ.
ಆರೋಗ್ಯಕರ ಉಪಹಾರ ಪಾಕವಿಧಾನಗಳು ಯಾವಾಗಲೂ ಎಲ್ಲರಿಗೂ ಪ್ರಮುಖ ಊಟಗಳಲ್ಲಿ ಒಂದಾಗಿದೆ. ನಾವು ಕನಿಷ್ಟ ಪದಾರ್ಥಗಳೊಂದಿಗೆ ತ್ವರಿತ, ಸುಲಭವಾಗಿರುವುದನ್ನು ಹುಡುಕುತ್ತೇವೆ. ದಕ್ಷಿಣ ಭಾರತೀಯ ಉಪಹಾರ ಪಾಕವಿಧಾನಗಳು ಅತ್ಯಂತ ಆರೋಗ್ಯಕರವಾಗಿವೆ ಮತ್ತು ಅವುಗಳನ್ನು ತಯಾರಿಸಲು ಕೆಲವೇ ಪದಾರ್ಥಗಳು ಸಾಕಾಗುತ್ತವೆ. ಆದರೂ ಅದನ್ನು ಫ್ರೈ ಅಥವಾ ಸ್ಟೀಮ್ ಮಾಡಲು ಅಗತ್ಯವಿರುವ ಉದ್ದೇಶ-ಆಧಾರಿತ ಸಲಕರಣೆಗಳು, ಸ್ವಲ್ಪ ಸಂಕೀರ್ಣತೆಯನ್ನುಂಟು ಮಾಡುತ್ತವೆ. ಹಾಗೆಯೇ ಇಡ್ಲಿ ಪಾಕವಿಧಾನಗಳು ಸಹ ಈ ಸಂಕೀರ್ಣತೆಗೆ ಒಳಪಟ್ಟಿವೆ. ಅಗತ್ಯವಿರುವ ಪದಾರ್ಥಗಳು ಕೇವಲ 2 ವಸ್ತು. ಅದು ಅಕ್ಕಿ ಮತ್ತು ಉದ್ದಿನ ಬೇಳೆ, ಆದರೆ ಇಡ್ಲಿ ಸ್ಟೀಮರ್ ಮತ್ತು ಅಚ್ಚಿನ ಅಗತ್ಯವಿರುತ್ತದೆ. ಈ ಸಂಕೀರ್ಣತೆಯನ್ನು ಪರಿಹರಿಸಲು, ನಾನು ಬಾಳೆ ಎಲೆ ಕಪ್ಗಳಲ್ಲಿ ಇಡ್ಲಿಯನ್ನು ತಯಾರಿಸುವ ಈ ಪಾಕವಿಧಾನವನ್ನು ಪೋಸ್ಟ್ ಮಾಡುತ್ತಿದ್ದೇನೆ. ಇದಲ್ಲದೆ, ಈ ಇಡ್ಲಿ ಕಪ್ಗಳನ್ನು ನಂತರ ಅಡುಗೆ ಪ್ಯಾನ್ನಲ್ಲಿ ಸ್ಟೀಮ್ ನಲ್ಲಿ ಬೇಯಿಲಾಗುತ್ತದೆ, ಇದು ಅದೇ ಮೃದು ಮತ್ತು ತೇವಾಂಶದ ಇಡ್ಲಿಯನ್ನು ನೀಡುತ್ತದೆ.
ಇದಲ್ಲದೆ, ಬಾಳೆ ಎಲೆ ಕಪ್ ನಲ್ಲಿ ಇಡ್ಲಿ ಪಾಕವಿಧಾನಕ್ಕೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲಿಗೆ, ಇಡ್ಲಿ ರವಾ ಮತ್ತು ಉದ್ದಿನ ಬೇಳೆ ಸಂಯೋಜನೆಯು ಯಾವುದೇ ಇಡ್ಲಿಗಾಗಿ ಆದರ್ಶ ಮತ್ತು ಸುಲಭವಾದ ಸಂಯೋಜನೆಯಾಗಿದೆ ಮತ್ತು ಆದ್ದರಿಂದ ನಾನು ಇದನ್ನು ಆಯ್ಕೆ ಮಾಡಿದ್ದೇನೆ. ನೀವು ಸಾಂಪ್ರದಾಯಿಕ ಇಡ್ಲಿ ಅಕ್ಕಿ ಮತ್ತು ಉದ್ದಿನ ಬೇಳೆ ಸಂಯೋಜನೆಯನ್ನು ಸಹ ಬಳಸಬಹುದು. ಎರಡನೆಯದಾಗಿ, ಬಾಳೆ ಎಲೆಯು ಇಡ್ಲಿ ಅಚ್ಚಿಗೆ ಪರ್ಯಾಯವಾಗಿ ಬಳಸುವ ಸೂಕ್ತವಾದ ಆಯ್ಕೆಯಾಗಿದೆ ಮತ್ತು ಇಡ್ಲಿ ಬ್ಯಾಟರ್ ಅನ್ನು ಹಿಡಿದಿಡಲು ಕಪ್ಗಳನ್ನು ತಯಾರಿಸಬೇಕಾಗುತ್ತದೆ. ಆದರೂ ಹಲಸಿನ ಎಲೆಗಳು, ತೇಗದ ಮರದ ಎಲೆಗಳಂತಹ ಇತರ ಎಲೆಗಳನ್ನು ಸಹ ನೀವು ಬಳಸಬಹುದು. ಕೊನೆಯದಾಗಿ, ಇಡ್ಲಿ ಮೌಲ್ಡ್ ಗೆ ಹೋಲಿಸಿದರೆ ಇದು ಸ್ವಲ್ಪ ದಪ್ಪವಾಗಿರುತ್ತದೆ. ಹಾಗಾಗಿ ಮಧ್ಯದಲ್ಲಿ ಬೆಂದಿದೆಯಾ ಎಂದು ನೋಡಲು ನೀವು ಕಡ್ಡಿಯನ್ನು ಇರಿಸಿ ನೋಡಬೇಕಾಗಬಹುದು.
ಅಂತಿಮವಾಗಿ, ಇಡ್ಲಿ ಸ್ಟ್ಯಾಂಡ್ ಇಲ್ಲದೆ ಇಡ್ಲಿಯನ್ನು ಹೇಗೆ ಮಾಡಬೇಕೆಂಬುದರ ಈ ಪೋಸ್ಟ್ನೊಂದಿಗೆ ನನ್ನ ಇತರ ಸಂಬಂಧಿತ ದಕ್ಷಿಣ ಭಾರತೀಯ ಇಡ್ಲಿ ಪಾಕವಿಧಾನಗಳು ಪಾಕವಿಧಾನಗಳ ಸಂಗ್ರಹವನ್ನು ಪರೀಕ್ಷಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ನನ್ನ ಇತರ ಸಂಬಂಧಿತ ಪಾಕವಿಧಾನಗಳನ್ನು ಗೋಲಿ ಇಡ್ಲಿ, ಉಳಿದ ಅನ್ನದಿಂದ ಇಡ್ಲಿ, ಸ್ಟಫ್ಡ್ ಇಡ್ಲಿ, ಪೋಹಾ ಇಡ್ಲಿ, ಆಲೂ ಇಡ್ಲಿ, ರವಾ ಇಡ್ಲಿ, ಇಡ್ಲಿ, ಸೌತೆಕಾಯಿ ಇಡ್ಲಿ, ಇಡ್ಲಿ ಧೋಕ್ಲಾ, ಇಡ್ಲಿ ಬ್ಯಾಟರ್. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಸಂಬಂಧಿತ ಪಾಕವಿಧಾನ ವಿಭಾಗಗಳನ್ನು ಹೇಳಲು ಇಷ್ಟಪಡುತ್ತೇನೆ,
ಸ್ಟ್ಯಾಂಡ್ ಮತ್ತು ಕುಕ್ಕರ್ ಇಲ್ಲದೆ ಇಡ್ಲಿ ವೀಡಿಯೊ ರೆಸಿಪಿ:
ಬಾಳೆ ಎಲೆ ಕಪ್ ನಲ್ಲಿ ಕಡುಬು ಪಾಕವಿಧಾನ ಕಾರ್ಡ್:
ಇಡ್ಲಿ ರೆಸಿಪಿ - ಸ್ಟ್ಯಾಂಡ್ ಮತ್ತು ಕುಕ್ಕರ್ ಇಲ್ಲದೆ | idli without idli stand & cooker
ಪದಾರ್ಥಗಳು
- 1 ಕಪ್ ಉದ್ದಿನ ಬೇಳೆ
- 2 ಕಪ್ ಅಕ್ಕಿ ರವಾ / ಇಡ್ಲಿ ರವಾ
- 1 ಟೀಸ್ಪೂನ್ ಉಪ್ಪು
- ಬಾಳೆ ಎಲೆಗಳು (ಕಪ್ಗಳನ್ನು ತಯಾರಿಸಲು)
ಸೂಚನೆಗಳು
- ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 1 ಕಪ್ ಉದ್ದಿನ ಬೇಳೆ ತೆಗೆದುಕೊಂಡು ಚೆನ್ನಾಗಿ ನೆನೆಸಿ.
- 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
- 4 ಗಂಟೆಗಳ ಕಾಲ ನೆನೆಸಿದ ನಂತರ, ಬೇಳೆಯನ್ನು ಮಿಕ್ಸಿ ಜಾರ್ಗೆ ವರ್ಗಾಯಿಸಿ. ನೀವು ಪರ್ಯಾಯವಾಗಿ ಗ್ರೈಂಡರ್ನಲ್ಲಿ ಗ್ರೈಂಡ್ ಮಾಡಬಹುದು.
- ಅಗತ್ಯವಿರುವಂತೆ ನೀರನ್ನು ಸೇರಿಸುವ ಮೂಲಕ ಮೃದುವಾದ ಮತ್ತು ನಯವಾದ ಬ್ಯಾಟರ್ಗೆ ರುಬ್ಬಿಕೊಳ್ಳಿ.
- ದೊಡ್ಡ ಬಟ್ಟಲಿನಲ್ಲಿ ಬ್ಯಾಟರ್ ಅನ್ನು ವರ್ಗಾಯಿಸಿ.
- ಈಗ ಮತ್ತೊಂದು ಬಟ್ಟಲಿನಲ್ಲಿ 2 ಕಪ್ ಅಕ್ಕಿ ರವಾ ತೆಗೆದುಕೊಂಡು ಒಂದೆರಡು ಬಾರಿ ತೊಳೆಯಿರಿ.
- ರವಾದಿಂದ ನೀರನ್ನು ಹಿಸುಕಿ, ಅದನ್ನು ಉದ್ದಿನ ಬೇಳೆ ಬ್ಯಾಟರ್ ಬೌಲ್ಗೆ ವರ್ಗಾಯಿಸಿ.
- ನಿಮ್ಮ ಕೈಗಳಿಂದ ಚೆನ್ನಾಗಿ ಮಿಶ್ರಣ ಮಾಡಿ. ಇದು ಫರ್ಮೆಂಟೇಶನ್ ಗೆ ಸಹಾಯ ಮಾಡುತ್ತದೆ.
- ಈಗ ಫೆರ್ಮೆಂಟ್ ಆಗಲು 8 ಗಂಟೆಗಳ ಕಾಲ ಬೆಚ್ಚಗಿನ ಸ್ಥಳದಲ್ಲಿ ಮುಚ್ಚಿಡಿ.
- 8 ಗಂಟೆಗಳ ನಂತರ, ಬ್ಯಾಟರ್ ಚೆನ್ನಾಗಿ ಫರ್ಮೆಂಟ್ ಆಗುತ್ತದೆ. ನಂತರ ನಿಧಾನವಾಗಿ ಮಿಶ್ರಣ ಮಾಡಿ.
- 1 ಟೀಸ್ಪೂನ್ ಉಪ್ಪು ಸೇರಿಸಿ ಮತ್ತು ಮಿಶ್ರಣವು ಉಪ್ಪಿನೊಂದಿಗೆ ಚೆನ್ನಾಗಿ ಸಂಯೋಜಿಸಲ್ಪಟ್ಟಿದೆ ಎಂದು ಖಚಿತಪಡಿಸಿಕೊಳ್ಳಿ.
- ಈಗ ಬಾಳೆ ಎಲೆಯಿಂದ ಕಪ್ಗಳನ್ನು ತಯಾರಿಸಲು, ಬಾಳೆ ಎಲೆಯನ್ನು ದುಂಡಗಿನ ಆಕಾರಕ್ಕೆ ಕತ್ತರಿಸಿ.
- ಮತ್ತು ಸ್ಟೇಪ್ಲರ್ ಬಳಸಿ, ಅದನ್ನು ಕಪ್ ನ ಹಾಗೆ ರೂಪಿಸವಂತೆ 4 ಬದಿಗಳಲ್ಲಿ ಪಿನ್ ಮಾಡಿ.
- ಸ್ಟೀಮರ್ನಲ್ಲಿ ಕಪ್ ಇರಿಸಿ ಮತ್ತು ಬ್ಯಾಟರ್ ಅನ್ನು ಅಚ್ಚಿಗೆ ಸುರಿಯಿರಿ.
- ಮುಚ್ಚಿ 20 ನಿಮಿಷಗಳ ಕಾಲ ಅಥವಾ ಇಡ್ಲಿ ಚೆನ್ನಾಗಿ ಬೇಯುವವರೆಗೆ ಬೇಯಿಸಿ.
- ಅಂತಿಮವಾಗಿ, ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಮೃದುವಾದ ಇಡ್ಲಿಯನ್ನು ಆನಂದಿಸಿ.
ಹಂತ ಹಂತದ ಫೋಟೋದೊಂದಿಗೆ ಸ್ಟ್ಯಾಂಡ್ ಮತ್ತು ಕುಕ್ಕರ್ ಇಲ್ಲದೆ ಇಡ್ಲಿ ರೆಸಿಪಿ ಮಾಡುವುದು ಹೇಗೆ:

ಟಿಪ್ಪಣಿಗಳು:
- ಮೊದಲಿಗೆ, ಹಿಟ್ಟು ಚೆನ್ನಾಗಿ ರುಬ್ಬುವುದನ್ನು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಇಡ್ಲಿ ಮೃದುವಾಗಿರುವುದಿಲ್ಲ.
- ಅಲ್ಲದೆ, ನೀವು ಅಕ್ಕಿ ರವಾಗೆ ಪರ್ಯಾಯವಾಗಿ ಹುಡುಕುತ್ತಿದ್ದರೆ, ನೀವು 2 ಕಪ್ ಅಕ್ಕಿಯನ್ನು ಒರಟಾದ ಪೇಸ್ಟ್ಗೆ ರುಬ್ಬಿ ಉದ್ದಿನ ಬೇಳೆ ಬ್ಯಾಟರ್ನೊಂದಿಗೆ ಮಿಶ್ರಣ ಮಾಡಬಹುದು.
- ಹೆಚ್ಚುವರಿಯಾಗಿ, ನಾನು ಬಾಳೆ ಎಲೆಗಳಲ್ಲಿ ಬೇಯಿಸಿದ್ದೇನೆ, ನೀವು ಇಡ್ಲಿ ಪ್ಲೇಟ್ ನಲ್ಲಿ ಸ್ಟೀಮ್ ಮಾಡಬಹುದು.
- ಅಂತಿಮವಾಗಿ, ಇನ್ನೂ ಮೃದುವಾದ ಇಡ್ಲಿ ತಯಾರಿಸಲು, ನೀವು ಅರ್ಧ ಕಪ್ ಪೋಹಾವನ್ನು ರುಬ್ಬುವಾಗ ಸೇರಿಸಬಹುದು.