ಸುಟ್ಟ ಈರುಳ್ಳಿ ಚಟ್ನಿ ರೆಸಿಪಿ | burnt onion chutney in kannada

0

ಸುಟ್ಟ ಈರುಳ್ಳಿ ಚಟ್ನಿ ಪಾಕವಿಧಾನ | ದೋಸೆ ಮತ್ತು ಇಡ್ಲಿಗಾಗಿ ಹುರಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಚಟ್ನಿಯ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಹುರಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಗಳೊಂದಿಗೆ ತಯಾರಿಸಲಾದ ಸುಲಭ ಮತ್ತು ಸರಳವಾದ ಕಾಂಡಿಮೆಂಟ್ ಪಾಕವಿಧಾನ. ಇದು ಕೇವಲ ಬೆಳಿಗ್ಗೆ ಉಪಹಾರಕ್ಕೆ ಸೀಮಿತವಾಗಿರದೆ, ಮಧ್ಯಾಹ್ನ ಊಟ ಮತ್ತು ರಾತ್ರಿ ಭೋಜನಕ್ಕೆ ಸಹ ಸೈಡ್ಸ್ ನಂತೆ ನೀಡಲಾಗುತ್ತದೆ. ಈ ಚಟ್ನಿ ಕೇವಲ ಈರುಳ್ಳಿ ಮತ್ತು ಸಂಪೂರ್ಣ ಬೆಳ್ಳುಳ್ಳಿಯೊಂದಿಗೆ ತಯಾರಿಸಲಾಗುತ್ತದೆ ಆದರೆ ಹೆಚ್ಚುವರಿ ತೆಂಗಿನ ಟೊಪ್ಪಿನ್ಗ್ಸ್ ನೊಂದಿಗೆ ಸಹ ತಯಾರಿಸಬಹುದು. ಸುಟ್ಟ ಈರುಳ್ಳಿ ಚಟ್ನಿ ಪಾಕವಿಧಾನ

ಸುಟ್ಟ ಈರುಳ್ಳಿ ಚಟ್ನಿ ಪಾಕವಿಧಾನ | ದೋಸೆ ಮತ್ತು ಇಡ್ಲಿಗಾಗಿ ಹುರಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಚಟ್ನಿಯ ಹಂತ ಹಂತದ  ಫೋಟೋ ಮತ್ತು ವೀಡಿಯೋ ಪಾಕವಿಧಾನ. ಹುರಿದ ಅಥವಾ ಸುಟ್ಟ ತರಕಾರಿ ಮೇಲೋಗರಗಳು ಮತ್ತು ಕಾಂಡಿಮೆಂಟ್ಸ್ ಗಳು ಭಾರತೀಯ ತಿನಿಸು ಪ್ರೇಮಿಗಳೊಂದಿಗೆ ಜನಪ್ರಿಯ ಆಯ್ಕೆಯಾಗಿದೆ. ಇವುಗಳನ್ನು ಸಾಮಾನ್ಯವಾಗಿ ಜ್ವಾಲೆಯ ಮೇಲೆ ಸುಡುವ ಮೂಲಕ ತಯಾರಿಸಲಾಗುತ್ತದೆ ಮತ್ತು ಹೆಚ್ಚುವರಿ ಮಸಾಲೆ ಟೊಪ್ಪಿನ್ಗ್ಸ್ ಗಳೊಂದಿಗೆ ಅದನ್ನು ಬೆರೆಸಲ್ಪಡುತ್ತದೆ. ಅಂತಹ ಮತ್ತು ಸುಲಭವಾದ ಸರಳ ಗ್ರಾಮ ಶೈಲಿಯ ಚಟ್ನಿ ಪಾಕವಿಧಾನವು, ಹುರಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಚಟ್ನಿಯಾಗಿದ್ದು ಅದರ ಪರಿಮಳ ಮತ್ತು ರುಚಿಗೆ ಹೆಸರುವಾಸಿಯಾಗಿದೆ.

ಚಟ್ನಿಯ ಈ ಸೂತ್ರವು ಸುಟ್ಟ ಟೊಮೆಟೊ ಪಚಡಿಯ ನನ್ನ ಹಿಂದಿನ ಪೋಸ್ಟ್ನಿಂದ ಸ್ಫೂರ್ತಿಯಾಗಿದೆ. ಈ ಪಾಕವಿಧಾನವು ಹಾಗೆಯೇ ಇದೆ, ಆದರೆ ಬೇರೆ ಬೇರೆ ಮಸಾಲೆಗಳು ಮತ್ತು ಗಿಡಮೂಲಿಕೆಗಳೊಂದಿಗೆ ತಯಾರಿಸಲಾಗುತ್ತದೆ. ವಿಶೇಷವಾಗಿ, ಈ ಸೂತ್ರದಲ್ಲಿ ನಾನು ಮಸೂರ, ಹುಣಿಸೇಹಣ್ಣು ಮತ್ತು ಕೆಂಪು ಮೆಣಸಿನಕಾಯಿಗಳಂತಹ ಸಾಂಪ್ರದಾಯಿಕ ಚಟ್ನಿ ಪದಾರ್ಥಗಳನ್ನು ಬಳಸಿದ್ದೇನೆ, ಇದು ಸ್ಥಿರತೆಯನ್ನು ಹೊಂದಿಸುವುದು ಮಾತ್ರವಲ್ಲದೆ, ಬಣ್ಣವನ್ನು ಸಹ ನೀಡುತ್ತದೆ. ನಾನು ತೆಂಗಿನಕಾಯಿ ಎಂಬ ಮೂಲಭೂತ ಘಟಕಾಂಶವನ್ನು ಬಿಟ್ಟುಬಿಟ್ಟಿದ್ದೇನೆ, ಹಾಗಾಗಿ ಇದು ತುಂಬಾ ದಿನ ಉಳಿಯುತ್ತದೆ, ನೀವು ಇದನ್ನು ಸೇರಿಸಬಹುದು, ಇದು ಪ್ರಮಾಣ ಮತ್ತು ಪರಿಮಳವನ್ನು ಸಹ ಸುಧಾರಿಸುತ್ತದೆ. ಬಹುಶಃ, ತೆಂಗಿನಕಾಯಿ ಸೇರಿಸಿದರೆ ನೀವು ಅದನ್ನು 1-2 ದಿನಗಳಲ್ಲಿ ಮುಗಿಸಬೇಕಾಗಬಹುದು.

ದೋಸೆ ಮತ್ತು ಇಡ್ಲಿಗಾಗಿ ಹುರಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಚಟ್ನಿ ಇದಲ್ಲದೆ, ಸುಟ್ಟ ಈರುಳ್ಳಿ ಚಟ್ನಿ ಪಾಕವಿಧಾನಕ್ಕೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲಿಗೆ, ಈ ಪಾಕವಿಧಾನಕ್ಕಾಗಿ ನಾನು ಸಣ್ಣ ಈರುಳ್ಳಿ ಅಥವಾ ಶಾಲೋಟ್ಸ್ ಗಳನ್ನು ಬಳಸಿದ್ದೇನೆ. ಕೆಂಪು ಈರುಳ್ಳಿ ಅಥವಾ ಬಿಳಿ ಈರುಳ್ಳಿಗಳಿಗೆ ಹೋಲಿಸಿದರೆ ಇದು ಕಡಿಮೆ ಮಸಾಲೆಯುಕ್ತವಾಗಿದೆ. ಎರಡನೆಯದಾಗಿ, ನಾನು ಎಣ್ಣೆ ಜೊತೆ, ಸಾಸಿವೆ ಮತ್ತು ಕರಿ ಬೇವಿನ ಎಲೆಗಳನ್ನು ಒಗ್ಗರಣೆ ಹಾಕಿದ್ದೇನೆ, ಯಾಕೆಂದರೆ ಇದು ಈರುಳ್ಳಿ ಮತ್ತು ಬೆಳ್ಳುಳ್ಳಿ ಪೇಸ್ಟ್ ನ ಹಸಿ ಪರಿಮಳವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಮಸಾಲೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಚಟ್ನಿಗೆ ಹೆಚ್ಚು ಪರಿಮಳವನ್ನು ಸಹ ಸೇರಿಸುತ್ತದೆ. ಕೊನೆಯದಾಗಿ, ಈ ಚಟ್ನಿಯು ಒಣ ಗಾಳಿಯಾಡದ ಡಬ್ಬದಲ್ಲಿ ಅಥವಾ ರೆಫ್ರಿಜಿರೇಟರ್ನಲ್ಲಿ ಸಂರಕ್ಷಿಸಿದರೆ ತುಂಬಾ ದಿನ ಉಳಿಯುತ್ತದೆ.

ಅಂತಿಮವಾಗಿ, ಸುಟ್ಟ ಈರುಳ್ಳಿ ಚಟ್ನಿ ಪಾಕವಿಧಾನದ ಈ ಪೋಸ್ಟ್ನೊಂದಿಗೆ ನನ್ನ ಇತರ ಸಂಬಂಧಿತ ಚಟ್ನಿಗಳು ಪಾಕವಿಧಾನಗಳ ಸಂಗ್ರಹಗಳನ್ನು ಭೇಟಿ ಮಾಡಿ. ಇದು ಮುಖ್ಯವಾಗಿ ನನ್ನ ಇತರ ಸಂಬಂಧಿತ ಪಾಕವಿಧಾನಗಳನ್ನು, ವಡಾ ಪಾವ್ ಚಟ್ನಿ, ಮಾವಿನಕಾಯಿ ಚಟ್ನಿ 2 ವಿಧ, ಶುಂಠಿ ಚಟ್ನಿ, ಹೋಟೆಲ್ ಸ್ಟೈಲ್ ಚಟ್ನಿ, ಟೊಮೆಟೊ ಬೆಳ್ಳುಳ್ಳಿ ಚಟ್ನಿ, ಇಡ್ಲಿ ಮತ್ತು ದೋಸೆಗೆ ತೆಂಗಿನಕಾಯಿ ಹಾಕದೇ ಚಟ್ನಿ, ಕರೇಲಾ, ಪಪ್ಪಾಯಾ, ಹೀರೆಕಾಯಿ. ಇವುಗಳಿಗೆ ಮತ್ತಷ್ಟು ನಾನು ಕೆಲವು ಹೆಚ್ಚು ಹೆಚ್ಚುವರಿ ಪಾಕವಿಧಾನ ವಿಭಾಗಗಳನ್ನು ಸೇರಿಸಲು ಇಷ್ಟಪಡುತ್ತೇನೆ,

ಸುಟ್ಟ ಈರುಳ್ಳಿ ಚಟ್ನಿ ವೀಡಿಯೊ ಪಾಕವಿಧಾನ:

Must Read:

ಇಡ್ಲಿ ಮತ್ತು ದೋಸೆಗಾಗಿ ಹುರಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಚಟ್ನಿ ಪಾಕವಿಧಾನ ಕಾರ್ಡ್:

burnt onion chutney recipe

ಸುಟ್ಟ ಈರುಳ್ಳಿ ಚಟ್ನಿ ರೆಸಿಪಿ | burnt onion chutney in kannada

5 from 14 votes
ತಯಾರಿ ಸಮಯ: 10 minutes
ಅಡುಗೆ ಸಮಯ: 30 minutes
ಒಟ್ಟು ಸಮಯ : 40 minutes
ಸೇವೆಗಳು: 4 ಸೇವೆಗಳು
AUTHOR: HEBBARS KITCHEN
ಕೋರ್ಸ್: ಚಟ್ನಿ
ಪಾಕಪದ್ಧತಿ: ದಕ್ಷಿಣ ಭಾರತೀಯ
ಕೀವರ್ಡ್: ಸುಟ್ಟ ಈರುಳ್ಳಿ ಚಟ್ನಿ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಸುಟ್ಟ ಈರುಳ್ಳಿ ಚಟ್ನಿ ಪಾಕವಿಧಾನ | ದೋಸೆ ಮತ್ತು ಇಡ್ಲಿಗಾಗಿ ಹುರಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಚಟ್ನಿ

ಪದಾರ್ಥಗಳು

ರೋಸ್ಟಿಂಗ್ಗಾಗಿ:

  • 10 ಸಣ್ಣ ಈರುಳ್ಳಿ
  • 1 ಪಾಡ್ ಬೆಳ್ಳುಳ್ಳಿ

ರುಬ್ಬಲು:

  • 2 ಟೀಸ್ಪೂನ್ ಎಣ್ಣೆ
  • 1 ಟೇಬಲ್ಸ್ಪೂನ್ ಉದ್ದಿನ ಬೇಳೆ
  • 1 ಟೇಬಲ್ಸ್ಪೂನ್ ಕಡ್ಲೆ ಬೇಳೆ
  • 1 ಟೀಸ್ಪೂನ್ ಕೊತ್ತಂಬರಿ ಬೀಜಗಳು
  • 4 ಒಣಗಿದ ಕೆಂಪು ಮೆಣಸಿನಕಾಯಿ
  • ಕೆಲವು ಕರಿ ಬೇವಿನ ಎಲೆಗಳು
  • ಸಣ್ಣ ತುಂಡು ಹುಣಿಸೇಹಣ್ಣು
  • ½ ಟೀಸ್ಪೂನ್ ಉಪ್ಪು
  • ¾ ಕಪ್ ನೀರು (ರುಬ್ಬಲು)

ಒಗ್ಗರಣೆಗಾಗಿ:

  • 2 ಟೇಬಲ್ಸ್ಪೂನ್ ಎಣ್ಣೆ
  • 1 ಟೀಸ್ಪೂನ್ ಸಾಸಿವೆ
  • 1 ಟೀಸ್ಪೂನ್ ಉದ್ದಿನ ಬೇಳೆ
  • 1 ಒಣಗಿದ ಕೆಂಪು ಮೆಣಸಿನಕಾಯಿ
  • ಕೆಲವು ಕರಿ ಬೇವಿನ ಎಲೆಗಳು
  • ಪಿಂಚ್ ಹಿಂಗ್
  • ¼ ಟೀಸ್ಪೂನ್ ಅರಿಶಿನ
  • 1 ಟೀಸ್ಪೂನ್ ಮೆಣಸಿನ ಪುಡಿ
  • ½ ಕಪ್ ನೀರು

ಸೂಚನೆಗಳು

  • ಮೊದಲಿಗೆ, ಮೆಶ್ ಇರಿಸಿ (ಫುಲ್ಕಾ ತಯಾರಿಸಲು ಬಳಸಲಾಗುತ್ತದೆ), 10 ಸಣ್ಣ ಈರುಳ್ಳಿ ಮತ್ತು 1 ಪಾಡ್ ಬೆಳ್ಳುಳ್ಳಿಯನ್ನು ಹುರಿಯಿರಿ.
  • ಮಧ್ಯಮ ಜ್ವಾಲೆಯ ಮೇಲೆ ಸುಡಲು ಇಡಿ, ತಿರುಗಿಸಿ ಎಲ್ಲಾ ಕಡೆಗಳನ್ನು ಹುರಿಯಲು ಖಚಿತಪಡಿಸಿಕೊಳ್ಳಿ.
  • ಈರುಳ್ಳಿಗಳು ಮತ್ತು ಬೆಳ್ಳುಳ್ಳಿ ಒಳಗಿನಿಂದ ಮೃದುವಾಗುವ ತನಕ ಬೇಯಿಸಿ.
  • ಸಂಪೂರ್ಣವಾಗಿ ತಂಪಾಗಿಸಿ ಮತ್ತು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸಿಪ್ಪೆಯನ್ನು ತೆಗೆಯಿರಿ. ಮಿಕ್ಸಿ ಜಾರ್ಗೆ ವರ್ಗಾಯಿಸಿ ಪಕ್ಕಕ್ಕೆ ಇರಿಸಿ.
  • ಪ್ಯಾನ್ ನಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ. 1 ಟೇಬಲ್ಸ್ಪೂನ್ ಉದ್ದಿನ ಬೇಳೆ, 1 ಟೇಬಲ್ಸ್ಪೂನ್ ಕಡ್ಲೆ ಬೇಳೆ, ಮತ್ತು 1 ಟೀಸ್ಪೂನ್ ಕೊತ್ತಂಬರಿ ಬೀಜಗಳನ್ನು ಸೇರಿಸಿ.
  • 4 ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿ ಬೇವಿನ ಎಲೆಗಳನ್ನು ಸೇರಿಸಿ. ಮೆಣಸು ಪಫ್ ಅಪ್ ಆಗುವ ತನಕ  ಮತ್ತು ಬೇಳೆ ಗೋಲ್ಡನ್ ಬ್ರೌನ್ ಆಗುವ ತನಕ ಹುರಿಯಿರಿ.
  • ಸಂಪೂರ್ಣವಾಗಿ ತಂಪಾಗಿಸಿ ಮಿಕ್ಸರ್ ಜಾರ್ಗೆ ವರ್ಗಾಯಿಸಿ.
  • ಹೆಚ್ಚುವರಿಯಾಗಿ, ಹುಣಿಸೇಹಣ್ಣು, ½ ಟೀಸ್ಪೂನ್ ಉಪ್ಪು ಮತ್ತು ½ ಕಪ್ ನೀರನ್ನು ಸೇರಿಸಿ.
  • ಅಗತ್ಯವಿದ್ದರೆ ಇನ್ನೂ ನೀರನ್ನು ಸೇರಿಸುವ ಮೂಲಕ ಗ್ರೈಂಡ್ ಮಾಡಿ.
  • ಈಗ ಒಗ್ಗರಣೆ ತಯಾರಿಸಲು, 2 ಟೇಬಲ್ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ. 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದಿನ ಬೇಳೆ, 1 ಒಣಗಿದ ಕೆಂಪು ಮೆಣಸಿನಕಾಯಿ, ಕೆಲವು ಕರಿ ಬೇವಿನ ಎಲೆಗಳು ಮತ್ತು ಪಿಂಚ್ ಹಿಂಗ್ ಸೇರಿಸಿ.
  • ಜ್ವಾಲೆಯ ಕಡಿಮೆ ಇಟ್ಟು, ¼ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಮೆಣಸಿನ ಪುಡಿ ಸೇರಿಸಿ.
  • ಮಸಾಲೆಗಳನ್ನು ಸುಡುದೆ, ಒಂದು ನಿಮಿಷ ಹುರಿಯಿರಿ.
  • ತಯಾರಾದ ಈರುಳ್ಳಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಸುರಿಯಿರಿ ಮತ್ತು ಎಣ್ಣೆ ಬೇರ್ಪಡಿಸುವವರೆಗೂ ಬೇಯಿಸಿ.
  • ಇದಲ್ಲದೆ, ½ ಕಪ್ ನೀರು ಸೇರಿಸಿ ಮತ್ತು ಅಗತ್ಯವಿರುವ ಸ್ಥಿರತೆಯನ್ನು ಹೊಂದಿಸಿ.
  • ಎಣ್ಣೆಯು ಚಟ್ನಿಯಿಂದ ಬೇರ್ಪಡಿಸುವವರೆಗೂ ಕುಕ್ ಮಾಡಿ.
  • ಅಂತಿಮವಾಗಿ, ಸುಟ್ಟ ಈರುಳ್ಳಿ-ಬೆಳ್ಳುಳ್ಳಿ ಚಟ್ನಿ ಆನಂದಿಸಿ ಅಥವಾ ಫ್ರಿಡ್ಜ್ ನಲ್ಲಿಟ್ಟು ಒಂದು ವಾರದವರೆಗೆ ಸೇವಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಸುಟ್ಟ ಈರುಳ್ಳಿ ಚಟ್ನಿ ಹೇಗೆ ಮಾಡುವುದು:

  1. ಮೊದಲಿಗೆ, ಮೆಶ್ ಇರಿಸಿ (ಫುಲ್ಕಾ ತಯಾರಿಸಲು ಬಳಸಲಾಗುತ್ತದೆ), 10 ಸಣ್ಣ ಈರುಳ್ಳಿ ಮತ್ತು 1 ಪಾಡ್ ಬೆಳ್ಳುಳ್ಳಿಯನ್ನು ಹುರಿಯಿರಿ.
  2. ಮಧ್ಯಮ ಜ್ವಾಲೆಯ ಮೇಲೆ ಸುಡಲು ಇಡಿ, ತಿರುಗಿಸಿ ಎಲ್ಲಾ ಕಡೆಗಳನ್ನು ಹುರಿಯಲು ಖಚಿತಪಡಿಸಿಕೊಳ್ಳಿ.
  3. ಈರುಳ್ಳಿಗಳು ಮತ್ತು ಬೆಳ್ಳುಳ್ಳಿ ಒಳಗಿನಿಂದ ಮೃದುವಾಗುವ ತನಕ ಬೇಯಿಸಿ.
  4. ಸಂಪೂರ್ಣವಾಗಿ ತಂಪಾಗಿಸಿ ಮತ್ತು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸಿಪ್ಪೆಯನ್ನು ತೆಗೆಯಿರಿ. ಮಿಕ್ಸಿ ಜಾರ್ಗೆ ವರ್ಗಾಯಿಸಿ ಪಕ್ಕಕ್ಕೆ ಇರಿಸಿ.
  5. ಪ್ಯಾನ್ ನಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ. 1 ಟೇಬಲ್ಸ್ಪೂನ್ ಉದ್ದಿನ ಬೇಳೆ, 1 ಟೇಬಲ್ಸ್ಪೂನ್ ಕಡ್ಲೆ ಬೇಳೆ, ಮತ್ತು 1 ಟೀಸ್ಪೂನ್ ಕೊತ್ತಂಬರಿ ಬೀಜಗಳನ್ನು ಸೇರಿಸಿ.
  6. 4 ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿ ಬೇವಿನ ಎಲೆಗಳನ್ನು ಸೇರಿಸಿ. ಮೆಣಸು ಪಫ್ ಅಪ್ ಆಗುವ ತನಕ  ಮತ್ತು ಬೇಳೆ ಗೋಲ್ಡನ್ ಬ್ರೌನ್ ಆಗುವ ತನಕ ಹುರಿಯಿರಿ.
  7. ಸಂಪೂರ್ಣವಾಗಿ ತಂಪಾಗಿಸಿ ಮಿಕ್ಸರ್ ಜಾರ್ಗೆ ವರ್ಗಾಯಿಸಿ.
  8. ಹೆಚ್ಚುವರಿಯಾಗಿ, ಹುಣಿಸೇಹಣ್ಣು, ½ ಟೀಸ್ಪೂನ್ ಉಪ್ಪು ಮತ್ತು ½ ಕಪ್ ನೀರನ್ನು ಸೇರಿಸಿ.
  9. ಅಗತ್ಯವಿದ್ದರೆ ಇನ್ನೂ ನೀರನ್ನು ಸೇರಿಸುವ ಮೂಲಕ ಗ್ರೈಂಡ್ ಮಾಡಿ.
  10. ಈಗ ಒಗ್ಗರಣೆ ತಯಾರಿಸಲು, 2 ಟೇಬಲ್ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ. 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದಿನ ಬೇಳೆ, 1 ಒಣಗಿದ ಕೆಂಪು ಮೆಣಸಿನಕಾಯಿ, ಕೆಲವು ಕರಿ ಬೇವಿನ ಎಲೆಗಳು ಮತ್ತು ಪಿಂಚ್ ಹಿಂಗ್ ಸೇರಿಸಿ.
  11. ಜ್ವಾಲೆಯ ಕಡಿಮೆ ಇಟ್ಟು, ¼ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಮೆಣಸಿನ ಪುಡಿ ಸೇರಿಸಿ.
  12. ಮಸಾಲೆಗಳನ್ನು ಸುಡುದೆ, ಒಂದು ನಿಮಿಷ ಹುರಿಯಿರಿ.
  13. ತಯಾರಾದ ಈರುಳ್ಳಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಸುರಿಯಿರಿ ಮತ್ತು ಎಣ್ಣೆ ಬೇರ್ಪಡಿಸುವವರೆಗೂ ಬೇಯಿಸಿ.
  14. ಇದಲ್ಲದೆ, ½ ಕಪ್ ನೀರು ಸೇರಿಸಿ ಮತ್ತು ಅಗತ್ಯವಿರುವ ಸ್ಥಿರತೆಯನ್ನು ಹೊಂದಿಸಿ.
  15. ಎಣ್ಣೆಯು ಚಟ್ನಿಯಿಂದ ಬೇರ್ಪಡಿಸುವವರೆಗೂ ಕುಕ್ ಮಾಡಿ.
  16. ಅಂತಿಮವಾಗಿ, ಸುಟ್ಟ ಈರುಳ್ಳಿ-ಬೆಳ್ಳುಳ್ಳಿ ಚಟ್ನಿ ಆನಂದಿಸಿ ಅಥವಾ ಫ್ರಿಡ್ಜ್ ನಲ್ಲಿಟ್ಟು ಒಂದು ವಾರದವರೆಗೆ ಸೇವಿಸಿ.
    ಸುಟ್ಟ ಈರುಳ್ಳಿ ಚಟ್ನಿ ಪಾಕವಿಧಾನ

ಟಿಪ್ಪಣಿಗಳು:

  • ಮೊದಲಿಗೆ, ಸಣ್ಣ ಈರುಳ್ಳಿ ಬಳಸಿ, ಇದು ಏಕರೂಪವಾಗಿ ಬೇಯಲು ಸಹಾಯ ಮಾಡುತ್ತದೆ.
  • ಅಲ್ಲದೆ, ನೀವು ತಾಜಾ ಮೆಣಸಿನಕಾಯಿಗೆ ಪ್ರವೇಶವನ್ನು ಹೊಂದಿದ್ದರೆ, ಅದನ್ನು ಸಹ ಬರ್ನ್ ಮಾಡಬಹುದು ಮತ್ತು ಒಣಗಿದ ಕೆಂಪು ಮೆಣಸಿನಕಾಯಿ ಸ್ಕಿಪ್ ಮಾಡಬಹುದು.
  • ಹೆಚ್ಚುವರಿಯಾಗಿ, ಒಗ್ಗರಣೆಗೆ ಉದಾರವಾದ ಎಣ್ಣೆಯನ್ನು ಸೇರಿಸುವುದರಿಂದ ಗ್ರಾಮ ಶೈಲಿಯ ಚಟ್ನಿಯು ತುಂಬಾ ದಿನ ಉಳಿಯುತ್ತದೆ.
  • ಅಂತಿಮವಾಗಿ, ಸುಟ್ಟ ಈರುಳ್ಳಿ-ಬೆಳ್ಳುಳ್ಳಿ ಚಟ್ನಿ ಪಾಕವಿಧಾನವು ಇಡ್ಲಿ, ದೋಸೆ, ಅನ್ನ ಮತ್ತು ರೋಟಿಯೊಂದಿಗೆ ಉತ್ತಮವಾಗಿರುತ್ತದೆ.
5 from 14 votes (14 ratings without comment)