ಆಟೆ ಕಾ ನಾಷ್ಟಾ ರೆಸಿಪಿ | aate ka nasta in kannada | ಗೋಧಿ ಹಿಟ್ಟಿನ ಸ್ನ್ಯಾಕ್

0

ಆಟೆ ಕಾ ನಾಷ್ಟಾ ಪಾಕವಿಧಾನ | ಗೇಹು ಕೆ ಆಟೆ ಕಾ ಚಟ್ಪಟಾ ನಾಷ್ಟಾ | ಗೋಧಿ ಹಿಟ್ಟಿನ ಸ್ನ್ಯಾಕ್ ನ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಗೋಧಿ ಹಿಟ್ಟು ಮತ್ತು ಮಸಾಲೆಯುಕ್ತ ಈರುಳ್ಳಿ ಸ್ಟಫಿಂಗ್ ನೊಂದಿಗೆ ತಯಾರಿಸಿದ ಸರಳ ಮತ್ತು ಸುಲಭವಾದ ಸ್ನ್ಯಾಕ್ ಪಾಕವಿಧಾನಗಳಲ್ಲಿ ಒಂದಾಗಿದೆ. ಇದು ಒಂದು ಪರಾಟ ಪಾಕವಿಧಾನದ ವೈಶಿಷ್ಟ್ಯಗಳನ್ನು ಮತ್ತು ಗುಣಲಕ್ಷಣಗಳನ್ನು ಹೊಂದಿದೆ, ಆದರೂ ಇದರ ಸ್ಟಫಿಂಗ್ ಅನನ್ಯವಾಗಿದೆ. ಇದನ್ನು ಸುಲಭವಾಗಿ ಸಂಜೆ ತಿಂಡಿಗಳಾಗಿ ಸೇವೆ ಸಲ್ಲಿಸಬಹುದು, ಆದರೆ ಅದಕ್ಕೆ ಮಾತ್ರ ಸೀಮಿತವಾಗಿರದೇ, ನಮ್ಮ ದೈನಂದಿನ ಊಟ ಅಥವಾ ಭೋಜನದ ಭಾಗವಾಗಿರಬಹುದು ಮತ್ತು ಯಾವುದೇ ಹೆಚ್ಚುವರಿ ಸೈಡ್ಸ್ ನ ಅಗತ್ಯವಿಲ್ಲ.
ಆಟೆ ಕಾ ನಾಷ್ಟಾ ಪಾಕವಿಧಾನ

ಆಟೆ ಕಾ ನಾಷ್ಟಾ ಪಾಕವಿಧಾನ | ಗೇಹು ಕೆ ಆಟೆ ಕಾ ಚಟ್ಪಟಾ ನಾಷ್ಟಾ | ಗೋಧಿ ಹಿಟ್ಟಿನ ಸ್ನ್ಯಾಕ್ ನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಸ್ನ್ಯಾಕ್ಸ್ ಅಥವಾ ನಾಷ್ಟಾ ಪಾಕವಿಧಾನಗಳು ಬೇಡಿಕೆಯಲ್ಲಿರುವ ಪಾಕವಿಧಾನಗಳಲ್ಲಿ ಒಂದಾಗಿದೆ ಮತ್ತು ನಮ್ಮಲ್ಲಿ ಬಹುಪಾಲು ಜನರಿಗೆ ಅತ್ಯಗತ್ಯವಾಗಿದೆ. ಆದರೆ ಈ ಹೆಚ್ಚಿನ ಸ್ನ್ಯಾಕ್ ಪಾಕವಿಧಾನಗಳು ಎಣ್ಣೆಯಲ್ಲಿ ಹುರಿದ ಅಥವಾ ಹೆಚ್ಚು ಕ್ಯಾಲೊರಿಗಳನ್ನು ಹೊಂದಿರಬಹುದು ಮತ್ತು ಅಂತಿಮವಾಗಿ ಎಲ್ಲಾ ವಯಸ್ಸಿನ ಗುಂಪುಗಳಿಗೆ ಅನಾರೋಗ್ಯಕರ ಅಥವಾ ಸೂಕ್ತವಲ್ಲ. ಇನ್ನೂ ಕೆಲವು ಆರೋಗ್ಯಕರ ಸ್ನ್ಯಾಕ್ ಪಾಕವಿಧಾನಗಳು ಇವೆ ಮತ್ತು ಆಟೆ ಕಾ ನಾಷ್ಟಾ ಸರಳ ಈರುಳ್ಳಿ ಮತ್ತು ಹರ್ಬ್ಸ್ ನ ಸ್ಟಫಿಂಗ್ ನೊಂದಿಗೆ ತಯಾರಿಸಿದ ಅಂತಹ ಒಂದು ಸುಲಭ ಮತ್ತು ಸರಳ ತಿಂಡಿಯಾಗಿದೆ.

ನಾನು ಈಗ ಕೆಲವು ತಿಂಡಿ ಪಾಕವಿಧಾನಗಳನ್ನು ಪೋಸ್ಟ್ ಮಾಡಿದ್ದೇನೆ, ಆದರೆ ಆರೋಗ್ಯಕರ, ಹೊಟ್ಟೆಯನ್ನು ಭರ್ತಿ ಮಾಡುವ ಮತ್ತು ಟೇಸ್ಟಿ ಸ್ನ್ಯಾಕ್ ನ ವಿನಂತಿಯನ್ನು ಪಡೆಯುತ್ತಿದ್ದೇನೆ. ನನ್ನ ಹೆಚ್ಚಿನ ಸ್ನ್ಯಾಕ್ ಪೋಸ್ಟ್ಗಳು ಎಣ್ಣೆಯಲ್ಲಿ ಹುರಿದ ಅಥವಾ ಹೆಚ್ಚುವರಿ ಕ್ಯಾಲೊರಿಗಳನ್ನು ಹೊಂದಿರಬಹುದು, ಆದರೆ ನಾನು ಕೆಲವು ಆರೋಗ್ಯಕರ ಸ್ನ್ಯಾಕ್ ಅನ್ನು ಕೂಡ ಪೋಸ್ಟ್ ಮಾಡಿದ್ದೇನೆ. ಅದೇ ಸಂಪ್ರದಾಯವನ್ನು ಮುಂದುವರೆಸುತ್ತಾ, ಇಂದು ನಾನು ಗೋಧಿ ಹಿಟ್ಟು ಮತ್ತು ಸರಳ ಈರುಳ್ಳಿ ಸ್ಟಫಿಂಗ್ ನೊಂದಿಗೆ ಮಾಡಿದ ಮತ್ತೊಂದು ಆರೋಗ್ಯಕರ ಸಂಜೆ ತಿಂಡಿ ಪಾಕವಿಧಾನವನ್ನು ಪೋಸ್ಟ್ ಮಾಡುತ್ತಿದ್ದೇನೆ. ಈ ಪಾಕವಿಧಾನವು ಯಾವುದೇ ತರಕಾರಿ ಪರಾಟ ಪಾಕವಿಧಾನಕ್ಕೆ ಹೋಲುತ್ತದೆ, ಆದರೆ ಇದಕ್ಕೆ ಒಂದು ಟ್ವಿಸ್ಟ್ ಇದೆ. ಈ ಸೂತ್ರವು ಸಾಂಪ್ರದಾಯಿಕ ಪರಾಟದಂತೆ ಟ್ವಿಸ್ಟ್  ಮಾಡಿ ಸ್ಟಫ್ ಮಾಡುವ ಸಂಕೀರ್ಣ ಪ್ರಕ್ರಿಯೆಯನ್ನು ಒಳಗೊಂಡಿಲ್ಲ. ಸ್ಟಫಿಂಗ್ ಅನ್ನು ತೆಳ್ಳಗೆ ರೋಲ್ ಮಾಡಿದ ಹಿಟ್ಟಿನ ಮೇಲೆ ಇರಿಸಲಾಗುತ್ತದೆ ಮತ್ತು ನಂತರ ಸ್ಟಫಿಂಫ್ ನ ದಪ್ಪ ಹಾಳೆಗಳನ್ನು ರೂಪಿಸಲು ಪೇಸ್ಟ್ರಿ ಹಾಗೆ ಮಡಿಚಲಾಗುತ್ತದೆ. ಆದ್ದರಿಂದ ಈ ಸ್ಟಫ್ಡ್ ನಾಷ್ಟಾವನ್ನು ಯಾರೂ ಸಹ ತಯಾರಿಸಬಹುದು. ಹಾಗಾಗಿ ನಿಮ್ಮ ಮುಂದಿನ ಊಟ ಮತ್ತು ಭೋಜನಕ್ಕೆ ಇದನ್ನು ಪ್ರಯತ್ನಿಸಲು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ.

ಗೇಹು ಕೆ ಆಟೆ ಕಾ ಚಟ್ಪಟಾ ನಾಷ್ಟಾ ಇದಲ್ಲದೆ, ಆಟೆ ಕಾ ನಾಷ್ಟಾ ಪಾಕವಿಧಾನಕ್ಕೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲಿಗೆ, ಈ ಪಾಕವಿಧಾನವನ್ನು ಮುಖ್ಯವಾಗಿ ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಆದರೆ ಇದನ್ನು ಗೋಧಿ ಹಿಟ್ಟು ಮತ್ತು ಮೈದಾದ ಸಂಯೋಜನೆಯಿಂದ ಅಥವಾ ಬರೇ ಮೈದಾದಿಂದ ತಯಾರಿಸಬಹುದು. ನೀವು ಇದನ್ನು ಮೈದಾದೊಂದಿಗೆ ಮಾಡಿದರೆ ಇದು ಉತ್ತಮವಾಗಿ ರುಚಿಯನ್ನು ನೀಡುತ್ತದೆ. ಎರಡನೆಯದಾಗಿ, ನಿಮ್ಮ ಆಯ್ಕೆಯ ಪ್ರಕಾರ ನೀವು ಸುಲಭವಾಗಿ ಬೇರೆ ಸ್ಟಫಿಂಗ್ ಅನ್ನು ಪ್ರಯೋಗಿಸಬಹುದು. ಸರಳ ಈರುಳ್ಳಿ ಮತ್ತು ಹರ್ಬ್ಸ್ ನ ಸ್ಟಫಿಂಗ್ ಅನ್ನು ನಾನು ಇಷ್ಟಪಟ್ಟಿದ್ದೇನೆ, ಆದರೆ ನೀವು ಆಲೂ, ಗೋಬಿ, ಅಥವಾ ಯಾವುದೇ ಸ್ಟಫಿಂಗ್ ಅನ್ನು ಆಯ್ಕೆ ಮಾಡಬಹುದು. ಕೊನೆಯದಾಗಿ, ಸ್ಟಫಿಂಗ್ಗಾಗಿ ಈರುಳ್ಳಿ, ಹರ್ಬ್ಸ್ ನ ಮೇಲೆ ನೀವು ಚೀಸ್ ತುರಿಯನ್ನು ಸೇರಿಸಬಹುದು. ನೀವು ಚೀಸ್ ಸೇರಿಸಿದರೆ ಅದು ಗೋಜ್ಲೆಮ್ ರೆಸಿಪಿಗೆ ಹೋಲುತ್ತದೆ.

ಅಂತಿಮವಾಗಿ, ಆಟೆ ಕಾ ನಾಷ್ಟಾ ಪಾಕವಿಧಾನದ ಈ ಪೋಸ್ಟ್ನೊಂದಿಗೆ ನನ್ನ ಇತರ ಸಂಬಂಧಿತ ತಿಂಡಿಗಳು ಪಾಕವಿಧಾನಗಳ ಸಂಗ್ರಹವನ್ನು ಪರೀಕ್ಷಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ಆಲೂ ಲಚ್ಛಾ ಪಕೋರಾ, ಗೋಬಿ ಪೆಪ್ಪರ್ ಫ್ರೈ, ಆಲೂಗಡ್ಡೆ ಮುರುಕು, ಕ್ರಿಸ್ಪಿ ವೆಜ್, ಮ್ಯಾಕರೋನಿ ಕುರ್ಕುರೆ, ಈರುಳ್ಳಿ ಸಮೋಸಾ, ರೈಲ್ವೆ ಕಟ್ಲೆಟ್, ಆಲೂ ಪಾಪ್ಡಿ, ರೋಟಿ ಟ್ಯಾಕೋಗಳು, ಪಾಲಕ್ ಪತ್ರಾಗಳಂತಹ ನನ್ನ ಇತರ ಸಂಬಂಧಿತ ಪಾಕವಿಧಾನಗಳನ್ನು ಒಳಗೊಂಡಿದೆ. ಇವುಗಳಿಗೆ ಮತ್ತಷ್ಟು ನಾನು ಕೆಲವು ಸಂಬಂಧಿತ ಪಾಕವಿಧಾನಗಳ ವಿಭಾಗಗಳನ್ನು ಸೇರಿಸಲು ಇಷ್ಟಪಡುತ್ತೇನೆ,

ಆಟೆ ಕಾ ನಾಷ್ಟಾ ವೀಡಿಯೊ ಪಾಕವಿಧಾನ:

Must Read:

ಗೋಧಿ ಹಿಟ್ಟಿನ ಸ್ನ್ಯಾಕ್ ಪಾಕವಿಧಾನ ಕಾರ್ಡ್:

aate ka nasta recipe

ಆಟೆ ಕಾ ನಾಷ್ಟಾ ರೆಸಿಪಿ | aate ka nasta in kannada | ಗೋಧಿ ಹಿಟ್ಟಿನ ಸ್ನ್ಯಾಕ್

No ratings yet
ತಯಾರಿ ಸಮಯ: 10 minutes
ಅಡುಗೆ ಸಮಯ: 30 minutes
ಒಟ್ಟು ಸಮಯ : 40 minutes
ಸೇವೆಗಳು: 6 ಸೇವೆಗಳು
AUTHOR: HEBBARS KITCHEN
ಕೋರ್ಸ್: ತಿಂಡಿಗಳು, ಬೆಳಗಿನ ಉಪಾಹಾರ
ಪಾಕಪದ್ಧತಿ: ಉತ್ತರ ಭಾರತೀಯ
ಕೀವರ್ಡ್: ಆಟೆ ಕಾ ನಾಷ್ಟಾ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಆಟೆ ಕಾ ನಾಷ್ಟಾ ಪಾಕವಿಧಾನ | ಗೇಹು ಕೆ ಆಟೆ ಕಾ ಚಟ್ಪಟಾ ನಾಷ್ಟಾ | ಗೋಧಿ ಹಿಟ್ಟಿನ ಸ್ನ್ಯಾಕ್

ಪದಾರ್ಥಗಳು

ಹಿಟ್ಟಿಗಾಗಿ:

 • 3 ಕಪ್ ಗೋಧಿ ಹಿಟ್ಟು
 • ½ ಟೀಸ್ಪೂನ್ ಉಪ್ಪು
 • ನೀರು (ಬೆರೆಸಲು)
 • 1 ಟೀಸ್ಪೂನ್ ಎಣ್ಣೆ (ಗ್ರೀಸ್ ಮಾಡಲು)

ಈರುಳ್ಳಿ ಸ್ಟಫಿಂಗ್ ಗಾಗಿ:

 • 2 ಈರುಳ್ಳಿ (ಸಣ್ಣಗೆ ಕತ್ತರಿಸಿದ)
 • 3 ಮೆಣಸಿನಕಾಯಿ (ಸಣ್ಣಗೆ ಕತ್ತರಿಸಿದ)
 • 2 ಬೆಳ್ಳುಳ್ಳಿ (ಸಣ್ಣಗೆ ಕತ್ತರಿಸಿದ)
 • 3 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)
 • 3 ಟೇಬಲ್ಸ್ಪೂನ್ ಮಿಂಟ್ (ಸಣ್ಣಗೆ ಕತ್ತರಿಸಿದ)
 • ¼ ಟೀಸ್ಪೂನ್ ಜೀರಾ ಪೌಡರ್
 • ½ ಟೀಸ್ಪೂನ್ ಗರಂ ಮಸಾಲಾ
 • ¼ ಟೀಸ್ಪೂನ್ ಉಪ್ಪು

ಸೂಚನೆಗಳು

ಈರುಳ್ಳಿ ಸ್ಟಫಿಂಗ್ ಅನ್ನು ಹೇಗೆ ತಯಾರಿಸವುದು:

 • ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 2 ಈರುಳ್ಳಿ, 3 ಮೆಣಸಿನಕಾಯಿ, 2 ಬೆಳ್ಳುಳ್ಳಿ ತೆಗೆದುಕೊಳ್ಳಿ.
 • 3 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು, 3 ಟೇಬಲ್ಸ್ಪೂನ್ ಮಿಂಟ್ ಸೇರಿಸಿ.
 • ಹೆಚ್ಚುವರಿಯಾಗಿ, ¼ ಟೀಸ್ಪೂನ್ ಜೀರಿಗೆ ಪುಡಿ, ½ ಟೀಸ್ಪೂನ್ ಗರಂ ಮಸಾಲಾ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ. ಎಲ್ಲಾ ಮಸಾಲೆಗಳನ್ನು ಚೆನ್ನಾಗಿ ಸಂಯೋಜಿಸಿ.

ಹಿಟ್ಟು ತಯಾರಿಸುವುದು ಮತ್ತು ರೋಲ್ ಮಾಡುವುದು ಹೇಗೆ:

 • ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 3 ಕಪ್ ಗೋಧಿ ಹಿಟ್ಟು, ½ ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 • ನೀರನ್ನು ಸೇರಿಸಿ ಮೃದುವಾದ ಹಿಟ್ಟನ್ನು ರೂಪಿಸಿ. ಹಿಟ್ಟನ್ನು ಟಕ್ ಮಾಡಿ, 1 ಟೀಸ್ಪೂನ್ ಎಣ್ಣೆಯಿಂದ ಗ್ರೀಸ್ ಮಾಡಿ.
 • ಮುಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ.
 • 20 ನಿಮಿಷಗಳ ನಂತರ, ಹಿಟ್ಟನ್ನು ನಾದಿಕೊಳ್ಳಿ.
 • ಚೆಂಡು ಗಾತ್ರದ ಹಿಟ್ಟನ್ನು ತೆಗೆದು ಆಕಾರ ಮಾಡಿ.
 • ಗೋಧಿ ಹಿಟ್ಟನ್ನು ಡಸ್ಟ್ ಮಾಡಿ ತೆಳುವಾಗಿ ರೋಲ್ ಮಾಡಿ.
 • ಸಾಧ್ಯವಾದಷ್ಟು ತೆಳುವಾಗಿ ಲಟ್ಟಿಸಿರಿ.
 • ಈಗ 1 ಟೀಸ್ಪೂನ್ ಎಣ್ಣೆಯನ್ನು ಏಕರೂಪವಾಗಿ ಹರಡಿ. ಇದು ರೋಟಿಯನ್ನು ಫ್ಲೇಕಿಯಾಗಿ ಮಾಡಲು ಸಹಾಯ ಮಾಡುತ್ತದೆ.
 • ಸಿದ್ಧಪಡಿಸಿದ ಈರುಳ್ಳಿ ಸ್ಟಫಿಂಗ್ ಅನ್ನು ಇರಿಸಿ.
 • 2 ಕಡೆಯಿಂದ ಅರ್ಧಕ್ಕೆ ಮುಚ್ಚಿ ಮತ್ತು ಚೌಕಕ್ಕೆ ಫೋಲ್ಡ್ ಮಾಡಿ. ಪದರಗಳನ್ನು ಪ್ರತ್ಯೇಕವಾಗಿ ಪಡೆಯಲು ಎಣ್ಣೆಯನ್ನು ಹರಡಲು ಖಚಿತಪಡಿಸಿಕೊಳ್ಳಿ.
 • ಈಗ ಬಿಸಿ ಎಣ್ಣೆಯಲ್ಲಿ ಶಾಲ್ಲೋ ಫ್ರೈ ಮಾಡಿ, ಮಧ್ಯಮ ಜ್ವಾಲೆಯಲ್ಲಿರಿಸಿ.
 • ಫ್ಲಿಪ್ ಮಾಡಿ ಎರಡೂ ಬದಿಗಳು ಚೆನ್ನಾಗಿ ಬೇಯುವವರೆಗೂ ಫ್ರೈ ಮಾಡಿ.
 • ರೋಟಿ ಗೋಲ್ಡನ್ ಬ್ರೌನ್ ಮತ್ತು ಹೊರಗೆ ಗರಿಗರಿಯಾಗಿ ತಿರುಗುವವರೆಗೂ ಕುಕ್ ಮಾಡಿ.
 • ಅಂತಿಮವಾಗಿ, ಅರ್ಧ ಕತ್ತರಿಸಿ ಮತ್ತು ಹಸಿರು ಚಟ್ನಿಯೊಂದಿಗೆ ಆಟೆ ಕಾ ನಾಷ್ಟಾ ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಆಟೆ ಕಾ ನಾಷ್ಟಾ ಮಾಡುವುದು ಹೇಗೆ:

ಈರುಳ್ಳಿ ಸ್ಟಫಿಂಗ್ ಅನ್ನು ಹೇಗೆ ತಯಾರಿಸವುದು:

 1. ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 2 ಈರುಳ್ಳಿ, 3 ಮೆಣಸಿನಕಾಯಿ, 2 ಬೆಳ್ಳುಳ್ಳಿ ತೆಗೆದುಕೊಳ್ಳಿ.
 2. 3 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು, 3 ಟೇಬಲ್ಸ್ಪೂನ್ ಮಿಂಟ್ ಸೇರಿಸಿ.
 3. ಹೆಚ್ಚುವರಿಯಾಗಿ, ¼ ಟೀಸ್ಪೂನ್ ಜೀರಿಗೆ ಪುಡಿ, ½ ಟೀಸ್ಪೂನ್ ಗರಂ ಮಸಾಲಾ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ. ಎಲ್ಲಾ ಮಸಾಲೆಗಳನ್ನು ಚೆನ್ನಾಗಿ ಸಂಯೋಜಿಸಿ.
  ಆಟೆ ಕಾ ನಾಷ್ಟಾ ಪಾಕವಿಧಾನ

ಹಿಟ್ಟು ತಯಾರಿಸುವುದು ಮತ್ತು ರೋಲ್ ಮಾಡುವುದು ಹೇಗೆ:

 1. ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 3 ಕಪ್ ಗೋಧಿ ಹಿಟ್ಟು, ½ ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 2. ನೀರನ್ನು ಸೇರಿಸಿ ಮೃದುವಾದ ಹಿಟ್ಟನ್ನು ರೂಪಿಸಿ. ಹಿಟ್ಟನ್ನು ಟಕ್ ಮಾಡಿ, 1 ಟೀಸ್ಪೂನ್ ಎಣ್ಣೆಯಿಂದ ಗ್ರೀಸ್ ಮಾಡಿ.
 3. ಮುಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ.
 4. 20 ನಿಮಿಷಗಳ ನಂತರ, ಹಿಟ್ಟನ್ನು ನಾದಿಕೊಳ್ಳಿ.
 5. ಚೆಂಡು ಗಾತ್ರದ ಹಿಟ್ಟನ್ನು ತೆಗೆದು ಆಕಾರ ಮಾಡಿ.
 6. ಗೋಧಿ ಹಿಟ್ಟನ್ನು ಡಸ್ಟ್ ಮಾಡಿ ತೆಳುವಾಗಿ ರೋಲ್ ಮಾಡಿ.
 7. ಸಾಧ್ಯವಾದಷ್ಟು ತೆಳುವಾಗಿ ಲಟ್ಟಿಸಿರಿ.
 8. ಈಗ 1 ಟೀಸ್ಪೂನ್ ಎಣ್ಣೆಯನ್ನು ಏಕರೂಪವಾಗಿ ಹರಡಿ. ಇದು ರೋಟಿಯನ್ನು ಫ್ಲೇಕಿಯಾಗಿ ಮಾಡಲು ಸಹಾಯ ಮಾಡುತ್ತದೆ.
 9. ಸಿದ್ಧಪಡಿಸಿದ ಈರುಳ್ಳಿ ಸ್ಟಫಿಂಗ್ ಅನ್ನು ಇರಿಸಿ.
 10. 2 ಕಡೆಯಿಂದ ಅರ್ಧಕ್ಕೆ ಮುಚ್ಚಿ ಮತ್ತು ಚೌಕಕ್ಕೆ ಫೋಲ್ಡ್ ಮಾಡಿ. ಪದರಗಳನ್ನು ಪ್ರತ್ಯೇಕವಾಗಿ ಪಡೆಯಲು ಎಣ್ಣೆಯನ್ನು ಹರಡಲು ಖಚಿತಪಡಿಸಿಕೊಳ್ಳಿ.
 11. ಈಗ ಬಿಸಿ ಎಣ್ಣೆಯಲ್ಲಿ ಶಾಲ್ಲೋ ಫ್ರೈ ಮಾಡಿ, ಮಧ್ಯಮ ಜ್ವಾಲೆಯಲ್ಲಿರಿಸಿ.
  ಆಟೆ ಕಾ ನಾಷ್ಟಾ ಪಾಕವಿಧಾನ
 12. ಫ್ಲಿಪ್ ಮಾಡಿ ಎರಡೂ ಬದಿಗಳು ಚೆನ್ನಾಗಿ ಬೇಯುವವರೆಗೂ ಫ್ರೈ ಮಾಡಿ.
  ಆಟೆ ಕಾ ನಾಷ್ಟಾ ಪಾಕವಿಧಾನ
 13. ರೋಟಿ ಗೋಲ್ಡನ್ ಬ್ರೌನ್ ಮತ್ತು ಹೊರಗೆ ಗರಿಗರಿಯಾಗಿ ತಿರುಗುವವರೆಗೂ ಕುಕ್ ಮಾಡಿ.
  ಆಟೆ ಕಾ ನಾಷ್ಟಾ ಪಾಕವಿಧಾನ
 14. ಅಂತಿಮವಾಗಿ, ಅರ್ಧ ಕತ್ತರಿಸಿ ಮತ್ತು ಹಸಿರು ಚಟ್ನಿಯೊಂದಿಗೆ ಆಟೆ ಕಾ ನಾಷ್ಟಾ ಆನಂದಿಸಿ.
  ಆಟೆ ಕಾ ನಾಷ್ಟಾ ಪಾಕವಿಧಾನ

ಟಿಪ್ಪಣಿಗಳು:

 • ಮೊದಲಿಗೆ, ಹಿಟ್ಟನ್ನು ನಿಜವಾಗಿಯೂ ತೆಳ್ಳಗೆ ಲಟ್ಟಿಸುವುದನ್ನು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಬೇಯಿಸುವುದು ಕಷ್ಟವಾಗುತ್ತದೆ.
 • ಅಲ್ಲದೆ, ಗೋಧಿಯ ಸ್ಥಳದಲ್ಲಿ ನೀವು ಮೈದಾವನ್ನು ಬಳಸುತ್ತಿದ್ದರೆ ನಾಷ್ಟಾವು ಗರಿಗರಿ ಮತ್ತು ಟೇಸ್ಟಿ ಆಗಿರುತ್ತದೆ.
 • ಹೆಚ್ಚುವರಿಯಾಗಿ, ನಿಮ್ಮ ಆಯ್ಕೆಯ ಸ್ಟಫಿಂಗ್ ನೊಂದಿಗೆ ನೀವು ಸ್ಟಫ್ ಮಾಡಬಹುದು.
 • ಅಂತಿಮವಾಗಿ, ಆಟೆ ಕಾ ನಾಷ್ಟಾ ಬಿಸಿ ಬಿಸಿ ಸವಿದಾಗ ಉತ್ತಮ ರುಚಿ ನೀಡುತ್ತದೆ ಮತ್ತು ಊಟದ ಪೆಟ್ಟಿಗೆಗೆ ಸಹ ಪ್ಯಾಕ್ ಮಾಡಬಹುದು.