ಇನ್ಸ್ಟಂಟ್ ಅಕ್ಕಿ ಚಕ್ಲಿ ರೆಸಿಪಿ | instant chakli in kannada | ದಿಢೀರ್ ಚಕ್ಕುಲಿ

0

ಇನ್ಸ್ಟಂಟ್ ಅಕ್ಕಿ ಚಕ್ಲಿ ಪಾಕವಿಧಾನ | ದಿಢೀರ್ ಚಕ್ಕುಲಿ ಪಾಕವಿಧಾನ | ಇನ್ಸ್ಟಂಟ್ ಮುರುಕ್ಕು ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಅಕ್ಕಿ ಹಿಟ್ಟು ಮತ್ತು ಮೈದಾದಿಂದ ಮಾಡಿದ ಸರಳ ಮತ್ತು ಸುಲಭವಾದ ಚಕ್ಕುಲಿ ಪಾಕವಿಧಾನವಾಗಿದೆ. ಇದು ಸಾಂಪ್ರದಾಯಿಕ ಅಕ್ಕಿ ಮತ್ತು ಉದ್ದು ಬೇಳೆ ಆಧಾರಿತ ಚಕ್ಕುಲಿ ಪಾಕವಿಧಾನಕ್ಕೆ ತ್ವರಿತ ಮತ್ತು ಸುಲಭವಾದ ವಿಧಾನ. ಇದು ನಿಮ್ಮ ಮುಂದಿನ ಹಬ್ಬದ ಆಚರಣೆಗಳಿಗೆ, ವಿಶೇಷವಾಗಿ ಕೃಷ್ಣ ಜನ್ಮಾಷ್ಟಮಿಗಾಗಿ ಹಾಗೂ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಲು ಅತಿ ಕಮ್ಮಿ ಸಮಯದಲ್ಲಿ ಈ ಹಿಟ್ ತಿಂಡಿಯನ್ನು ಮಾಡಬಹುದು.ಇನ್ಸ್ಟಂಟ್  ಅಕ್ಕಿ ಚಕ್ಲಿ ಪಾಕವಿಧಾನ

ಇನ್ಸ್ಟಂಟ್ ಚಕ್ಲಿ ಪಾಕವಿಧಾನ | ದಿಢೀರ್ ಚಕ್ಕುಲಿ ಪಾಕವಿಧಾನ | ಇನ್ಸ್ಟಂಟ್ ಮುರುಕ್ಕು ಹಂತ ಹಂತವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಚಕ್ಲಿ ಅಥವಾ ಮುರುಕ್ಕು ಪಾಕವಿಧಾನಗಳು ಭಾರತೀಯ ಹಬ್ಬಗಳಲ್ಲಿ ತಯಾರಿಸುವ ಸಾಮಾನ್ಯ ಮತ್ತು ಜನಪ್ರಿಯ ತಿಂಡಿ ಪಾಕವಿಧಾನಗಳಲ್ಲಿ ಒಂದಾಗಿದೆ. ಇದನ್ನು ಸಾಮಾನ್ಯವಾಗಿ ಅಕ್ಕಿ ಮತ್ತು ಉದ್ದು ಬೇಳೆಯೊಂದಿಗೆ ತಯಾರಿಸಲಾಗುತ್ತದೆ, ಇದು ದೀರ್ಘ ಮತ್ತು ಕಷ್ಟದ ಪ್ರಕ್ರಿಯೆಯಾಗಿದೆ. ಇದನ್ನು ಸರಳಗೊಳಿಸಲು, ಹಲವಾರು ಸುಲಭ ಪಾಕವಿಧಾನಗಳಿವೆ ಹಾಗೆಯೆ ಇನ್ಸ್ಟಂಟ್ ಅಕ್ಕಿ ಚಕ್ಲಿ ಅಂತಹ ಒಂದು ವಿಧಾನ.

ನಾನು ಇನ್ಸ್ಟಂಟ್ ಪಾಕವಿಧಾನಗಳ ದೊಡ್ಡ ಅಭಿಮಾನಿ. ಇನ್ಸ್ಟಂಟ್ ಪಾಕವಿಧಾನದ ಫಲಿತಾಂಶವು ಸಾಂಪ್ರದಾಯಕ ಪಾಕವಿಧಾನಕ್ಕೆ ಸಮನಾಗಿದ್ದರೆ ನಾನು ಸಾಮಾನ್ಯವಾಗಿ ದೀರ್ಘ ಮತ್ತು ಕಷ್ಟದ ಈ ಸಾಂಪ್ರದಾಯಿಕ ಪಾಕವಿಧಾನಗಳನ್ನು ತಪ್ಪಿಸುತ್ತೇನೆ. ಈ ಪೋಸ್ಟ್ನಲ್ಲಿ, ನಾನು ಅಕ್ಕಿ ಹಿಟ್ಟು ಮತ್ತು ಮೈದಾ ಹಿಟ್ಟಿನ್ನು ಉಪಯೋಗಿಸಿಕೊಂಡು ಮಾಡಿದ ಇನ್ಸ್ಟಂಟ್  ಮುರುಕು ತೋರಿಸಿದ್ದೇನೆ. ಅತ್ಯಂತ ಮೃದು ಮತ್ತು ಟೇಸ್ಟಿ ಮಾಡಲು ನಾನು ಇದಕ್ಕೆ ಬೆಣ್ಣೆಯನ್ನು ಸೇರಿಸಿದ್ದೇನೆ. ಅದನ್ನು ನಾನು ಸಾಂಪ್ರದಾಯಿಕ ಚಕ್ಕುಲಿಯೊಂದಿಗೆ ಹೋಲಿಸಿದಾಗ, ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆಸಿ ಚಕ್ಕುಲಿ ತಯಾರಿ ಮಾಡಲು ಸುಲಭವಾಗಿ ಒಂದೆರಡು ಗಂಟೆ ತೆಗೆದುಕೊಳ್ಳಬಹುದು. ಆದರೆ ಇಲ್ಲಿ ನಾನು ಹಿಟ್ಟನ್ನು ಬೆರೆಸಿ, ನಾದಿ ಹಾಗೂ ಎಣ್ಣೆಯಲ್ಲಿ ಹುರಿಯುವುದು ಸೇರಿದಂತೆ ಈ ಚಕ್ಕುಲಿ ಮಾಡಲು ಕೇವಲ 30 ನಿಮಿಷಗಳನ್ನು ತೆಗೆದುಕೊಂಡಿದ್ದೇನೆ. ನೀವು ಅದನ್ನು ಮೃದು ಬೆಣ್ಣೆ ಮುರುಕ್ಕುವಿನೊಂದಿಗೆ ಮತ್ತು ಸಾಂಪ್ರದಾಯಿಕ ಚಕ್ಲಿಯೊಂದಿಗೆ ಸುಲಭವಾಗಿ ಹೋಲಿಸಬಹುದು.

ದಿಢೀರ್  ಚಕ್ಕುಲಿ ಪಾಕವಿಧಾನಇದಲ್ಲದೆ, ಇನ್ಸ್ಟಂಟ್ ಅಕ್ಕಿ ಚಕ್ಲಿ ಪಾಕವಿಧಾನಕ್ಕೆ ಇನ್ನೂ ಕೆಲವು ಪ್ರಮುಖ ಸಲಹೆಗಳು ಮತ್ತು ವ್ಯತ್ಯಾಸಗಳನ್ನು ಹೈಲೈಟ್ ಮಾಡಲು ನಾನು ಬಯಸುತ್ತೇನೆ. ಮೊದಲನೆಯದಾಗಿ, ಉತ್ತಮವಾದ ನುಣ್ಣಗೆ ಅಕ್ಕಿ ಹಿಟ್ಟನ್ನು ಬಳಸಲು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ. ಒರಟಾದ ಅಕ್ಕಿಹಿಟ್ಟಿನ ಪುಡಿಯನ್ನು ಬಳಸುವುದರಿಂದ ಚಕ್ಕುಲಿಯನ್ನು ರೂಪಿಸಲು ನಿಮಗೆ ಸಾಧ್ಯವಾಗದಿರಬಹುದು. ಎರಡನೆಯದಾಗಿ, ಈ ಚಕ್ಲಿಗಳನ್ನು ರೂಪಿಸಲು ನಾನು ನಕ್ಷತ್ರಾಕಾರದ ಮುರುಕ್ಕು ಮೇಕರ್ ನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಪ್ರಕಾರ ನೀವು ಇತರ ಆಕಾರಗಳನ್ನು ಬಳಸಬಹುದು. ಕೊನೆಯದಾಗಿ, ದೀರ್ಘ ಕಾಲ ಇಡುವುದಕ್ಕೆ ಇವುಗಳನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ. ಅದರ ಗರಿಗರಿಯನ್ನು ಕಳೆದುಕೊಳ್ಳದೆ ಅದು 1-2 ವಾರಗಳವರೆಗೆ ಸುಲಭವಾಗಿ ಉಳಿಯುತ್ತದೆ.

ಅಂತಿಮವಾಗಿ, ಇನ್ಸ್ಟಂಟ್ ಅಕ್ಕಿ ಚಕ್ಲಿ ಪಾಕವಿಧಾನದ ಈ ಪೋಸ್ಟ್‌ನೊಂದಿಗೆ ನನ್ನ ಇತರ ವಿವರವಾದ ತಿಂಡಿಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸುವಂತೆ ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ನನ್ನ ಇತರ ವಿವರವಾದ ಪಾಕವಿಧಾನಗಳಾದ ಬ್ರೆಡ್ ಮೆದು ವಡಾ, ಪಿಜ್ಜಾ ಬ್ರೆಡ್, ಬ್ರೆಡ್ ಧೋಕ್ಲಾ, ಇನ್ಸ್ಟಂಟ್ ಚಕ್ಲಿ, ಬ್ರೆಡ್ ವಡಾ, ರವೆ ಧೋಕ್ಲಾ, ಮೈಕ್ರೊವೇವ್‌ನಲ್ಲಿ ಧೋಕ್ಲಾ, ಧೋಕ್ಲಾ, ರವೆ ಪಕೋಡ, ರವೆ ವಡಾ. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಪಾಕವಿಧಾನ ವಿಭಾಗಗಳನ್ನು ಹೈಲೈಟ್ ಮಾಡಲು ಬಯಸುತ್ತೇನೆ,

ಇನ್ಸ್ಟಂಟ್ ಚಕ್ಲಿ ವೀಡಿಯೊ ಪಾಕವಿಧಾನ:

Must Read:

ದಿಢೀರ್ ಚಕ್ಕುಲಿ ಪಾಕವಿಧಾನ ಕಾರ್ಡ್:

instant murukku

ಇನ್ಸ್ಟಂಟ್ ಅಕ್ಕಿ ಚಕ್ಲಿ ರೆಸಿಪಿ | instant chakli in kannada | ದಿಢೀರ್ ಚಕ್ಕುಲಿ

5 from 21 votes
ತಯಾರಿ ಸಮಯ: 10 minutes
ಅಡುಗೆ ಸಮಯ: 20 minutes
ಒಟ್ಟು ಸಮಯ : 30 minutes
ಸೇವೆಗಳು: 30 ಚಕ್ಲಿ
AUTHOR: HEBBARS KITCHEN
ಕೋರ್ಸ್: ತಿಂಡಿಗಳು
ಪಾಕಪದ್ಧತಿ: ಭಾರತೀಯ
ಕೀವರ್ಡ್: ಇನ್ಸ್ಟಂಟ್ ಅಕ್ಕಿ ಚಕ್ಲಿ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಇನ್ಸ್ಟಂಟ್ ಅಕ್ಕಿ ಚಕ್ಲಿ ಪಾಕವಿಧಾನ | ದಿಢೀರ್ ಚಕ್ಕುಲಿ

ಪದಾರ್ಥಗಳು

  • 2 ಕಪ್ ಅಕ್ಕಿ ಹಿಟ್ಟು, ಉತ್ತಮ ಮಟ್ಟದ
  • 1 ಕಪ್ ಮೈದಾ
  • 1 ಟೀಸ್ಪೂನ್ ಉಪ್ಪು
  • 2 ಟೇಬಲ್ಸ್ಪೂನ್ ಬೆಣ್ಣೆ
  • ½ ಟೀಸ್ಪೂನ್ ಅರಿಶಿನ
  • 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
  • 2 ಟೇಬಲ್ಸ್ಪೂನ್ ಎಳ್ಳು
  • 1 ಚಿಟಕೆ ಇಂಗು
  • 1 ಟೀಸ್ಪೂನ್ ಉಪ್ಪು
  • ನೀರು, ಬೆರೆಸಲು
  • ಎಣ್ಣೆ, ಹುರಿಯಲು

ಸೂಚನೆಗಳು

  • ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 2 ಕಪ್ ಅಕ್ಕಿ ಹಿಟ್ಟು, 1 ಕಪ್ ಮೈದಾ ಮತ್ತು 1 ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
  • ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 2 ಟೀಸ್ಪೂನ್ ಎಳ್ಳು, ಹಾಗೂ ಚಿಟಕೆ ಇಂಗನ್ನು ಸೇರಿಸಿ.
  • ಎಲ್ಲವೂ ಚೆನ್ನಾಗಿ ಮಿಶ್ರಣವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ
  • ಈಗ 2 ಟೀಸ್ಪೂನ್ ಬೆಣ್ಣೆಯನ್ನು ಸೇರಿಸಿ, ಹಿಟ್ಟನ್ನು ಬೆಣ್ಣೆಯೊಂದಿಗೆ ಚೆನ್ನಾಗಿ ಸಂಯೋಜಿಸುವವರೆಗೆ ಮಿಶ್ರಣ ಮಾಡಿ.
  • ನಿಧಾನವಾಗಿ ನೀರನ್ನು ಸೇರಿಸಿ ಮತ್ತು ಹಿಟ್ಟನ್ನು ಬೆರೆಸಲು ಪ್ರಾರಂಭಿಸಿ.
  • ಅಗತ್ಯವಿರುವಂತೆ ನೀರನ್ನು ಸೇರಿಸಿ ನಯವಾದ ಮತ್ತು ಮೃದುವಾದ ಹಿಟ್ಟಾಗಿ ಮಾಡಿಕೊಳ್ಳಿ.
  • ಈಗ ಚಕ್ಕುಲಿ ತಯಾರಿಸಲು ಸ್ಟಾರ್ ಮೌಲ್ಡ್ ತೆಗೆದುಕೊಳ್ಳಿ.
  • ಸ್ವಲ್ಪ ಎಣ್ಣೆಯಿಂದ ಚಕ್ಲಿ ಮೇಕರ್ ನ್ನು ಗ್ರೀಸ್ ಮಾಡಿ. ಇದು ಹಿಟ್ಟನ್ನು ಅಚ್ಚಿಗೆ ಅಂಟದಂತೆ ತಡೆಯುತ್ತದೆ.
  • ಇದಲ್ಲದೆ, ಹಿಟ್ಟಿನಿಂದ ಸಿಲಿಂಡರ್ ಆಕಾರವನ್ನು ಮಾಡಿ ಹಿಟ್ಟನ್ನು ಚಕ್ಕುಲಿ ಮೇಕರ್ ಒಳಗೆ ಇರಿಸಿ.
  • ಮುಚ್ಚಳವನ್ನು ಬಿಗಿಗೊಳಿಸಿ ಮತ್ತು ಚಕ್ಲಿ ತಯಾರಿಸಲು ಪ್ರಾರಂಭಿಸಿ. ಒದ್ದೆಯಾದ ಬಟ್ಟೆ ಅಥವಾ ಬೆಣ್ಣೆ ಕಾಗದದ ಮೇಲೆ ಒತ್ತುವ ಮೂಲಕ ಸಣ್ಣ ಸುರುಳಿಯಾಕಾರದ ಚಕ್ಲಿಗಳನ್ನು ಮಾಡಿ.
  • ಎಣ್ಣೆಯಲ್ಲಿ ಹುರಿಯುವಾಗ ಅದು ಬಿಡಿಸದಂತೆ ತುದಿಗಳನ್ನು ಮುಚ್ಚಿ.
  •  ಒಂದೊಂದೇ ಮುರುಕ್ಕು ತೆಗೆದುಕೊಂಡು ಅದನ್ನು ಬಿಸಿ ಎಣ್ಣೆಯಲ್ಲಿ ಬಿಡಿ.
  • ಮುರುಕ್ಕುವನ್ನು ತಿರುಗಿಸಿ ಮತ್ತು ಮಧ್ಯಮ ಉರಿಯಲ್ಲಿ ಎರಡೂ ಕಡೆಯಿಂದ ಗರಿಗರಿಯಾಗುವವರೆಗೆ ಹುರಿಯಿರಿ.
  • ಇದಲ್ಲದೆ, ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಟಿಶ್ಯೂ ಕಾಗದದ ಮೇಲೆ ಹಾಕಿ.
  • ಅಂತಿಮವಾಗಿ, ಒಮ್ಮೆ ತಣ್ಣಗಾದ ನಂತರ 2 ವಾರಗಳ ಕಾಲ ಗಾಳಿಯಾಡದ ಪಾತ್ರೆಯಲ್ಲಿ ಇನ್ಸ್ಟಂಟ್ ಅಕ್ಕಿ ಚಕ್ಲಿಯನ್ನು ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಇನ್ಸ್ಟಂಟ್ ಅಕ್ಕಿ ಚಕ್ಲಿಯನ್ನು ಹೇಗೆ ಮಾಡುವುದು:

  1. ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 2 ಕಪ್ ಅಕ್ಕಿ ಹಿಟ್ಟು, 1 ಕಪ್ ಮೈದಾ ಮತ್ತು 1 ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
  2. ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 2 ಟೀಸ್ಪೂನ್ ಎಳ್ಳು, ಹಾಗೂ ಚಿಟಕೆ ಇಂಗನ್ನು ಸೇರಿಸಿ.
  3. ಎಲ್ಲವೂ ಚೆನ್ನಾಗಿ ಮಿಶ್ರಣವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ
  4. ಈಗ 2 ಟೀಸ್ಪೂನ್ ಬೆಣ್ಣೆಯನ್ನು ಸೇರಿಸಿ, ಹಿಟ್ಟನ್ನು ಬೆಣ್ಣೆಯೊಂದಿಗೆ ಚೆನ್ನಾಗಿ ಸಂಯೋಜಿಸುವವರೆಗೆ ಮಿಶ್ರಣ ಮಾಡಿ.
  5. ನಿಧಾನವಾಗಿ ನೀರನ್ನು ಸೇರಿಸಿ ಮತ್ತು ಹಿಟ್ಟನ್ನು ಬೆರೆಸಲು ಪ್ರಾರಂಭಿಸಿ.
  6. ಅಗತ್ಯವಿರುವಂತೆ ನೀರನ್ನು ಸೇರಿಸಿ ನಯವಾದ ಮತ್ತು ಮೃದುವಾದ ಹಿಟ್ಟಾಗಿ ಮಾಡಿಕೊಳ್ಳಿ.
  7. ಈಗ ಚಕ್ಕುಲಿ ತಯಾರಿಸಲು ಸ್ಟಾರ್ ಮೌಲ್ಡ್ ತೆಗೆದುಕೊಳ್ಳಿ.
  8. ಸ್ವಲ್ಪ ಎಣ್ಣೆಯಿಂದ ಚಕ್ಲಿ ಮೇಕರ್ ನ್ನು ಗ್ರೀಸ್ ಮಾಡಿ. ಇದು ಹಿಟ್ಟನ್ನು ಅಚ್ಚಿಗೆ ಅಂಟದಂತೆ ತಡೆಯುತ್ತದೆ.
  9. ಇದಲ್ಲದೆ, ಹಿಟ್ಟಿನಿಂದ ಸಿಲಿಂಡರ್ ಆಕಾರವನ್ನು ಮಾಡಿ ಹಿಟ್ಟನ್ನು ಚಕ್ಕುಲಿ ಮೇಕರ್ ಒಳಗೆ ಇರಿಸಿ.
  10. ಮುಚ್ಚಳವನ್ನು ಬಿಗಿಗೊಳಿಸಿ ಮತ್ತು ಚಕ್ಲಿ ತಯಾರಿಸಲು ಪ್ರಾರಂಭಿಸಿ. ಒದ್ದೆಯಾದ ಬಟ್ಟೆ ಅಥವಾ ಬೆಣ್ಣೆ ಕಾಗದದ ಮೇಲೆ ಒತ್ತುವ ಮೂಲಕ ಸಣ್ಣ ಸುರುಳಿಯಾಕಾರದ ಚಕ್ಲಿಗಳನ್ನು ಮಾಡಿ.
  11. ಎಣ್ಣೆಯಲ್ಲಿ ಹುರಿಯುವಾಗ ಅದು ಬಿಡಿಸದಂತೆ ತುದಿಗಳನ್ನು ಮುಚ್ಚಿ.
  12.  ಒಂದೊಂದೇ ಮುರುಕ್ಕು ತೆಗೆದುಕೊಂಡು ಅದನ್ನು ಬಿಸಿ ಎಣ್ಣೆಯಲ್ಲಿ ಬಿಡಿ.
  13. ಮುರುಕ್ಕುವನ್ನು ತಿರುಗಿಸಿ ಮತ್ತು ಮಧ್ಯಮ ಉರಿಯಲ್ಲಿ ಎರಡೂ ಕಡೆಯಿಂದ ಗರಿಗರಿಯಾಗುವವರೆಗೆ ಹುರಿಯಿರಿ.
  14. ಇದಲ್ಲದೆ, ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಟಿಶ್ಯೂ ಕಾಗದದ ಮೇಲೆ ಹಾಕಿ.
  15. ಅಂತಿಮವಾಗಿ, ಒಮ್ಮೆ ತಣ್ಣಗಾದ ನಂತರ 2 ವಾರಗಳ ಕಾಲ ಗಾಳಿಯಾಡದ ಪಾತ್ರೆಯಲ್ಲಿ ಇನ್ಸ್ಟಂಟ್ ಅಕ್ಕಿ ಚಕ್ಲಿಯನ್ನು ಆನಂದಿಸಿ.
    ಇನ್ಸ್ಟಂಟ್  ಅಕ್ಕಿ ಚಕ್ಲಿ ಪಾಕವಿಧಾನ

ಟಿಪ್ಪಣಿಗಳು:

  • ಮೊದಲನೆಯದಾಗಿ, ಕಡಿಮೆ ಮತ್ತು ಮಧ್ಯಮ ಜ್ವಾಲೆಯಲ್ಲಿ ಹುರಿಯಲು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಚಕ್ಲಿ ಕುರುಕಲು ಆಗುವುದಿಲ್ಲ.
  • ಹುರಿಯುವಾಗ ಒಟ್ಟಿಗೆ ತುಂಬಾ ಮುರುಕುವನ್ನು ಎಣ್ಣೆಗೆ ಬಿಡಬೇಡಿ, ಏಕೆಂದರೆ ಅದು ತಿರುಗಿಸಿದಾಗ ಮುರಿಯಬಹುದು.
  • ಹ್ಹಗೆಯೇ, ಪರಿಮಳದಲ್ಲಿನ ವ್ಯತ್ಯಾಸಕ್ಕಾಗಿ ನೀವು ಎಳ್ಳನ್ನು ಜೀರಿಗೆಯೊಂದಿಗೆ ಬದಲಾಯಿಸಬಹುದು.
  • ಅಂತಿಮವಾಗಿ, ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿದಾಗ ಇನ್ಸ್ಟಂಟ್ ಅಕ್ಕಿ ಚಕ್ಲಿ ಪಾಕವಿಧಾನ 2 ವಾರಗಳವರೆಗೆ ಉತ್ತಮವಾಗಿರುತ್ತದೆ.