ಕಾಜು ಪಿಸ್ತಾ ರೋಲ್ ಪಾಕವಿಧಾನ | ಗೋಡಂಬಿ ಪಿಸ್ತಾ ರೋಲ್ | ಕಾಜು ಕತ್ಲಿ ಪಿಸ್ತಾ ರೋಲ್ ನ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಇದು ಗೋಡಂಬಿ ಮತ್ತು ಪಿಸ್ತಾಗಳ ಪದರಗಳಿಂದ ಮಾಡಿದ ಸುಲಭ ಮತ್ತು ಸರಳ ಭಾರತೀಯ ಸಿಹಿ ಪಾಕವಿಧಾನ. ಇದು ಮೂಲತಃ ಜನಪ್ರಿಯ ಕಾಜು ಕತ್ಲಿ ಪಾಕವಿಧಾನದ ವಿಸ್ತರಣೆಯಾಗಿದ್ದು ಪಿಸ್ತಾಗಳ ಟೊಪ್ಪಿನ್ಗ್ಸ್ ಅನ್ನು ಹಾಕಲಾಗಿದೆ. ಇದೊಂದು ಬೇಯಿಸದ ಸಿಹಿ ಪಾಕವಿಧಾನವಾಗಿದೆ, ಹಾಗಾಗಿ ಇದನ್ನು ಯಾವುದೇ ಸಂದರ್ಭಕ್ಕೂ ತಯಾರಿಸಿ, ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೀಡಬಹುದು.
ಈ ಪಾಕವಿಧಾನದಲ್ಲಿ, ನಾನು ಗೋಡಂಬಿ ಪಿಸ್ತಾ ರೋಲ್ ತಯಾರಿಸಲು ಒಂದು ಅನನ್ಯ ಮತ್ತು ವಿಭಿನ್ನ ಮಾರ್ಗವನ್ನು ತೋರಿಸಿದ್ದೇನೆ. ಸಾಂಪ್ರದಾಯಿಕವಾಗಿ, ಇದನ್ನು ಸಿಲಿಂಡರಾಕಾರದ ಆಕಾರದಲ್ಲಿ ಕಾಜು ರೋಲ್ನೊಂದಿಗೆ ಪಿಸ್ತಾ ಸ್ಟಫಿಂಗ್ನೊಂದಿಗೆ ತಯಾರಿಸಲಾಗುತ್ತದೆ. ಕಾಜು ಆಧಾರಿತ ರೋಲ್ ಅನ್ನು ಒಂದು ಸ್ಟ್ರಿಂಗ್ ಸಕ್ಕರೆ ಪಾಕದಿಂದ ತಯಾರಿಸಲಾಗುತ್ತದೆ, ಇದು ಪಾಕವಿಧಾನವನ್ನು ಕಷ್ಟಗೊಳಿಸುತ್ತದೆ. ಈ ಪಾಕವಿಧಾನದಲ್ಲಿ, ಯಾವುದೇ ಅಡುಗೆಯ ಹಂತವಿಲ್ಲ, ಹಾಗಾಗಿ ಇದು ಅಡುಗೆ ಇಲ್ಲದ ಸಿಹಿ ಪಾಕವಿಧಾನವಾಗಿದೆ. ಇಲ್ಲಿ ನಾನು ಸಕ್ಕರೆ ಮತ್ತು ಹಾಲಿನ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಗೋಡಂಬಿ ಮತ್ತು ಪಿಸ್ತಾ ಹಿಟ್ಟನ್ನು ತಯಾರಿಸಿದ್ದೇನೆ ಮತ್ತು ಸ್ವಿಸ್ ರೋಲ್ನಂತೆ ಇದೆರಡರನ್ನು ಒಂದರ ಮೇಲೊಂದು ಇಟ್ಟು ಈ ಪಾಕವಿಧಾನವನ್ನು ತಯಾರಿಸಿದ್ದೇನೆ. ಅಂತೆಯೇ, ಸಕ್ಕರೆ ಪುಡಿಯನ್ನು ನೇರವಾಗಿ ಗೋಡಂಬಿ ಪುಡಿಗೆ ಬೆರೆಸುವುದರಿಂದ ಒಂದು ಅನಾನುಕೂಲವಿದೆ. ಅದೇನೆಂದರೆ ಇದು ಗಟ್ಟಿಯಾಗದೆ, ಅಂತಿಮ ಫಲಿತಾಂಶವು ಚೀವಿ ಆಗಬಹುದು. ಆದರೆ ಅಡುಗೆ ಪ್ರಕ್ರಿಯೆಗೆ ಹೋಲಿಸಿದಾಗ, ಈ ಪಾಕವಿಧಾನವನ್ನು ಪ್ರಯತ್ನಿಸುವುದು ಯೋಗ್ಯವೆನಿಸುತ್ತದೆ.
ಇದಲ್ಲದೆ, ಗೋಡಂಬಿ ಪಿಸ್ತಾ ರೋಲ್ ಪಾಕವಿಧಾನಕ್ಕೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ಸೇರಿಸಲು ನಾನು ಬಯಸುತ್ತೇನೆ. ಮೊದಲನೆಯದಾಗಿ, ಈ ಪಾಕವಿಧಾನಕ್ಕೆ ಉತ್ತಮ-ಗುಣಮಟ್ಟದ ಹಾಲಿನ ಪುಡಿಯನ್ನು ಬಳಸಲು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ. ಇಲ್ಲದಿದ್ದರೆ, ಅದು ಮೃದು ಮತ್ತು ಕ್ರೀಮಿಯಾಗದೆ ಅದನ್ನು ರೂಪಿಸಲು ಕೂಡ ಕಷ್ಟವಾಗಬಹುದು. ಎರಡನೆಯದಾಗಿ, ಈ ಪಾಕವಿಧಾನದಲ್ಲಿ, ನಾನು ಗೋಡಂಬಿ ಮತ್ತು ಪಿಸ್ತಾಗಳನ್ನು ಮಾತ್ರ ತೋರಿಸಿದ್ದೇನೆ. ನೀವು ಬಾದಾಮಿ ಮತ್ತು ವಾಲ್ನಸ್ಟ್ಸ್ ನಂತಹ ಇತರ ಒಣ ಹಣ್ಣುಗಳಿಗೆ ಈ ಪಾಕವಿಧಾನವನ್ನು ಸುಲಭವಾಗಿ ವಿಸ್ತರಿಸಬಹುದು. ಕೊನೆಯದಾಗಿ, ಸಿಹಿಯನ್ನು ಕತ್ತರಿಸುವ ಮೊದಲು, ನೀವು ಇದನ್ನು ಕನಿಷ್ಠ 10 ನಿಮಿಷಗಳ ಕಾಲ ಫ್ರೀಜ್ ಮಾಡಬೇಕಾಗುತ್ತದೆ. ಇದು ಆಕಾರವನ್ನು ಹೊಂದಿಸಲು ಸಹಾಯ ಮಾಡುತ್ತದೆ.
ಅಂತಿಮವಾಗಿ, ಗೋಡಂಬಿ ಪಿಸ್ತಾ ರೋಲ್ ಪಾಕವಿಧಾನದ ಈ ಪೋಸ್ಟ್‌ನೊಂದಿಗೆ ನನ್ನ ಇತರ ವಿವರವಾದ ಭಾರತೀಯ ಸಿಹಿತಿಂಡಿಗಳು ಪಾಕವಿಧಾನಗಳ ಸಂಗ್ರಹ ಗಳನ್ನು ಪರೀಕ್ಷಿಸಲು ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ನನ್ನ ಇತರ ವಿವರವಾದ ಪಾಕವಿಧಾನಗಳಾದ ಡ್ರೈ ಫ್ರೂಟ್ ಚಿಕ್ಕಿ, ಕಾಜು ಕತ್ಲಿ, ಕಾಜು ಪಿಸ್ತಾ ರೋಲ್, ಕಾಜು ಬರ್ಫಿ, ಪಿಸ್ತಾ ಬಾದಮ್ ಬರ್ಫಿ, ಕುಲ್ಫಿ, ಬಾದಮ್ ಬರ್ಫಿ. ಇದಲ್ಲದೆ, ಇವುಗಳಿಗೆ, ನನ್ನ ಇತರ ಪಾಕವಿಧಾನ ವಿಭಾಗಗಳನ್ನು ಸಹ ಹೈಲೈಟ್ ಮಾಡಲು ನಾನು ಬಯಸುತ್ತೇನೆ,
ಕಾಜು ಪಿಸ್ತಾ ರೋಲ್ ವಿಡಿಯೋ ಪಾಕವಿಧಾನ:
ಗೋಡಂಬಿ ಪಿಸ್ತಾ ರೋಲ್ ಪಾಕವಿಧಾನ ಕಾರ್ಡ್:
ಕಾಜು ಪಿಸ್ತಾ ರೋಲ್ ರೆಸಿಪಿ | kaju pista roll in kannada
ಪದಾರ್ಥಗಳು
ಗೋಡಂಬಿ ಪದರಕ್ಕಾಗಿ:
- 1 ಕಪ್ ಗೋಡಂಬಿ
- 1 ಕಪ್ ಹಾಲಿನ ಪುಡಿ, ಸಿಹಿ ಇಲ್ಲದ್ದು
- 1 ಕಪ್ ಸಕ್ಕರೆ, ಪುಡಿ ಮಾಡಿದ
- ¼ ಟೀಸ್ಪೂನ್ ಏಲಕ್ಕಿ ಪುಡಿ
- 2 ಟೇಬಲ್ಸ್ಪೂನ್ ತುಪ್ಪ / ಬೆಣ್ಣೆ
- ¼ ಕಪ್ ಹಾಲು
ಪಿಸ್ತಾ ಪದರಕ್ಕಾಗಿ:
- 1 ಕಪ್ ಪಿಸ್ತಾ
- 1 ಕಪ್ ಹಾಲಿನ ಪುಡಿ, ಸಿಹಿ ಇಲ್ಲದ್ದು
- 1 ಕಪ್ ಸಕ್ಕರೆ, ಪುಡಿ ಮಾಡಿದ
- ¼ ಟೀಸ್ಪೂನ್ ಏಲಕ್ಕಿ ಪುಡಿ
- 2 ಟೇಬಲ್ಸ್ಪೂನ್ ತುಪ್ಪ / ಬೆಣ್ಣೆ
- ಕೆಲವು ಹನಿಗಳು ಹಸಿರು ಆಹಾರ ಬಣ್ಣ, (ಬೇಕಾದರೆ ಮಾತ್ರ)
- ¼ ಕಪ್ ಹಾಲು
ಸೂಚನೆಗಳು
- ಮೊದಲನೆಯದಾಗಿ, 1 ಕಪ್ ಗೋಡಂಬಿಯನ್ನು ಪಲ್ಸ್ ಮಾಡಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
- ಗೋಡಂಬಿ ಪುಡಿಯನ್ನು ದೊಡ್ಡ ಬಟ್ಟಲಿನಲ್ಲಿ ಜರಡಿ, ದೊಡ್ಡ ಗೋಡಂಬಿ ತುಣುಕುಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ.
- 1 ಕಪ್ ಹಾಲಿನ ಪುಡಿ, 1 ಕಪ್ ಸಕ್ಕರೆ ಪುಡಿ ಮತ್ತು ¼ ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ.
- ಎಲ್ಲವನ್ನೂ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಈಗ 2 ಟೀಸ್ಪೂನ್ ತುಪ್ಪ ಸೇರಿಸಿ, ಮಿಶ್ರಣವು ತೇವವಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ¼ ಕಪ್ ಹಾಲು ಸೇರಿಸಿ, ಹಿಟ್ಟನ್ನು ಬೆರೆಸಲು ಪ್ರಾರಂಭಿಸಿ.
- ಅಗತ್ಯವಿದ್ದರೆ ಇನ್ನೂ ಸ್ವಲ್ಪ ಹಾಲು ಸೇರಿಸಿ ಮೃದುವಾದ ಹಿಟ್ಟನ್ನಾಗಿ ಬೆರೆಸಿಕೊಳ್ಳಿ. ಪಕ್ಕಕ್ಕೆ ಇರಿಸಿ.
- ಪಿಸ್ತಾ ಹಿಟ್ಟನ್ನು ತಯಾರಿಸಲು, 1 ಕಪ್ ಪಿಸ್ತಾವನ್ನು ಪಲ್ಸ್ ಮಾಡಿ ನುಣ್ಣಗೆ ಪುಡಿ ಮಾಡಿ.
- ಪುಡಿಯನ್ನು ದೊಡ್ಡ ಬಟ್ಟಲಿನಲ್ಲಿ ಜರಡಿ.
- 1 ಕಪ್ ಹಾಲಿನ ಪುಡಿ, 1 ಕಪ್ ಸಕ್ಕರೆ ಪುಡಿ ಮತ್ತು ¼ ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ.
- ಎಲ್ಲವನ್ನೂ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಈಗ 2 ಟೀಸ್ಪೂನ್ ತುಪ್ಪ, ಕೆಲವು ಹನಿ ಹಸಿರು ಆಹಾರ ಬಣ್ಣವನ್ನು ಸೇರಿಸಿ ಮಿಶ್ರಣವು ತೇವವಾಗುವವರೆಗೆ ಮಿಶ್ರಣ ಮಾಡಿ.
- ನಂತರ, ¼ ಕಪ್ ಹಾಲು ಸೇರಿಸಿ ಹಿಟ್ಟನ್ನು ಬೆರೆಸಲು ಪ್ರಾರಂಭಿಸಿ.
- ಅಗತ್ಯವಿದ್ದರೆ ಇನ್ನೂ ಸ್ವಲ್ಪ ಹಾಲು ಸೇರಿಸಿ ಮೃದುವಾದ ಹಿಟ್ಟನ್ನಾಗಿ ಮಾಡಿಕೊಳ್ಳಿ.
- ಬೆಣ್ಣೆ ಕಾಗದವನ್ನು ಇರಿಸಿ, ಅದರ ಮೇಲೆ ಪಿಸ್ತಾ ಹಿಟ್ಟನ್ನು ತೆಳುವಾಗಿ ಲಟ್ಟಿಸಿ.
- ಗೋಡಂಬಿ ಹಿಟ್ಟನ್ನು ಕೂಡ ತೆಳುವಾಗಿ ಲಟ್ಟಿಸಿಕೊಳ್ಳಿ.
- ಈಗ ಗೋಡಂಬಿ ಪದರದ ಮೇಲೆ ಪಿಸ್ತಾ ಪದರವನ್ನು ಇರಿಸಿ.
- ಪದರಗಳು ಒಂದರ ಮೇಲೊಂದು ಸರಿಯಾಗಿ ಇದೆಯಾ ಎಂದು ಖಚಿತಪಡಿಸಿ, ಸುತ್ತಿಕೊಳ್ಳಿ.
- ಪ್ಲಾಸ್ಟಿಕ್ ನಿಂದ ಬಿಗಿಯಾಗಿ ಸುತ್ತಿ, 10 ನಿಮಿಷಗಳ ಕಾಲ ಫ್ರೀಜ್ ಮಾಡಿ.
- ಈಗ ನಿಮ್ಮ ಆದ್ಯತೆಗೆ ಅನುಗುಣವಾಗಿ ದಪ್ಪ ಅಥವಾ ಸಪೂರವಾಗಿ ಕತ್ತರಿಸಿ.
- ಅಂತಿಮವಾಗಿ, ಕಾಜು ಪಿಸ್ತಾ ರೋಲ್ ಒಂದು ವಾರ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿ ಆನಂದಿಸಿ.
ಹಂತ ಹಂತದ ಫೋಟೋದೊಂದಿಗೆ ಕಾಜು ಪಿಸ್ತಾ ರೋಲ್ ಮಾಡುವುದು ಹೇಗೆ:

- ಅಂತಿಮವಾಗಿ, ಗೋಡಂಬಿ ಪಿಸ್ತಾ ರೋಲ್ ಒಂದು ವಾರ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿ ಆನಂದಿಸಿ.
ಟಿಪ್ಪಣಿಗಳು:
- ಮೊದಲನೆಯದಾಗಿ, ಗೋಡಂಬಿ ಮತ್ತು ಪಿಸ್ತಾವನ್ನು ಪಲ್ಸ್ ಮಾಡಿ ಪುಡಿ ಮಾಡಲು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಬೀಜಗಳು ಎಣ್ಣೆಯನ್ನು ಬಿಡುತ್ತವೆ.
- ಹಾಗೆಯೇ, ನಿಧಾನವಾಗಿ ಹಾಲನ್ನು ಸೇರಿಸುತ್ತ ಬನ್ನಿ, ಇಲ್ಲದಿದ್ದರೆ ಹಿಟ್ಟು ಜಿಗುಟಾಗಬಹುದು.
- ಸಿಹಿಯನ್ನು ಅವಲಂಬಿಸಿ ಸಕ್ಕರೆಯನ್ನು ಹೊಂದಿಸಿ.
- ಅಂತಿಮವಾಗಿ, ತಾಜಾ ಗೋಡಂಬಿ ಮತ್ತು ಪಿಸ್ತಾಗಳೊಂದಿಗೆ ತಯಾರಿಸಿದಾಗ ಗೋಡಂಬಿ ಪಿಸ್ತಾ ರೋಲ್ ರೆಸಿಪಿ ಉತ್ತಮ ರುಚಿ ನೀಡುತ್ತದೆ.