ಗೀ ರೈಸ್ ಪಾಕವಿಧಾನ | ನೈ ಚೊರು ಪಾಕವಿಧಾನ | ತುಪ್ಪ ಬಾತ್ ನ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಇದು ಬಾಸ್ಮತಿ ರೈಸ್ ಮತ್ತು ದೇಸಿ ತುಪ್ಪದೊಂದಿಗೆ ತಯಾರಿಸಿದ ಜನಪ್ರಿಯ ಮತ್ತು ಫ್ಲೇವರ್ ಉಳ್ಳ ದಕ್ಷಿಣ ಭಾರತದ ರೈಸ್ ಪಾಕವಿಧಾನ. ಇದು ವಿಶೇಷವಾದ ಆಚರಣೆಗಳು ಮತ್ತು ಹಬ್ಬದ ಸಂದರ್ಭಗಳಲ್ಲಿ ತಯಾರಿಸಿದ ಜನಪ್ರಿಯ ರೈಸ್ ಪಾಕವಿಧಾನವಾಗಿದೆ. ಇದು ರುಚಿಯಾಗಿದ್ದರೂ ಸಹ, ಇದಕ್ಕೆ ಬಡಿಸಲು ಸೈಡ್ ಡಿಶ್ ಬೇಕಾಗುತ್ತದೆ ಮತ್ತು ಹೆಚ್ಚಾಗಿ ಇದನ್ನು ಕುರ್ಮಾ ಕರಿ ಅಥವಾ ಗ್ರೇವಿಯೊಂದಿಗೆ ನೀಡಲಾಗುತ್ತದೆ.
ನಾನು ಇಲ್ಲಿಯವರೆಗೆ ಹಲವಾರು ರೈಸ್ ಪಾಕವಿಧಾನಗಳನ್ನು ಪೋಸ್ಟ್ ಮಾಡಿದ್ದೇನೆ, ಆದರೆ ಗೀ ರೈಸ್ ಪಾಕವಿಧಾನದ ಈ ಪಾಕವಿಧಾನ ಸುಲಭ ಮತ್ತು ಫ್ಲೇವರ್ ಉಳ್ಳ ಪಾಕವಿಧಾನವಾಗಿದೆ. ವಾಸ್ತವವಾಗಿ, ಇದನ್ನು 2 ರೀತಿಯಲ್ಲಿ ಮಾಡಬಹುದು. ಬೇಯಿಸದ ಅಕ್ಕಿಯನ್ನು ತುಪ್ಪ ಮತ್ತು ಈರುಳ್ಳಿಯೊಂದಿಗೆ ಹಾಕಿ ಅದನ್ನು ಬೇಯುವವರೆಗೆ ಕುದಿಸುವುದು. ನಾನು ಈ ವಿಧಾನಕ್ಕೆ ಆದ್ಯತೆ ನೀಡುತ್ತೇನೆ, ಆದರೆ ಇತರ ಆಯ್ಕೆಯು ಸಹ ಸಾಕಷ್ಟು ಜನಪ್ರಿಯವಾಗಿದೆ. ಬೇಯಿಸಿದ ಅನ್ನವನ್ನು ತುಪ್ಪದೊಂದಿಗೆ ಹುರಿಯುವುದು ಎರಡನೇ ಅತ್ಯಂತ ಜನಪ್ರಿಯ ವಿಧಾನವಾಗಿದೆ. ಈ ಪಾಕವಿಧಾನ ಇಂಡೋ ಚೈನೀಸ್ ಫ್ರೈಡ್ ರೈಸ್ಗೆ ಹೋಲುತ್ತದೆ, ಆದರೆ ಅದನ್ನು ಮನೆಯಲ್ಲಿ ತಯಾರಿಸಿದ ದೇಸಿ ತುಪ್ಪದೊಂದಿಗೆ ಬೇಯಿಸಲಾಗುತ್ತದೆ. ನೀವು ಉಳಿದಿರುವ ಅನ್ನವನ್ನು ಮುಗಿಸಲು ಬಯಸಿದರೆ ಇದು ಸೂಕ್ತವಾಗಿದೆ. ಹೀಗೆ, ನಾನು ನನ್ನ ಗಂಡನ ಊಟದ ಡಬ್ಬವನ್ನು ಉಳಿದಿರುವ ಮೇಲೋಗರಗಳೊಂದಿಗೆ ನೀಡಲು, ಇದನ್ನು ತಯಾರಿಸುತ್ತೇನೆ.
ಗೀ ರೈಸ್ ಪಾಕವಿಧಾನಕ್ಕಾಗಿ ಕೆಲವು ಸುಲಭ ಮತ್ತು ಪ್ರಮುಖ ಸಲಹೆಗಳನ್ನುನೀಡಲು ಬಯಸುತ್ತೇನೆ. ಮೊದಲನೆಯದಾಗಿ, ಈ ಪಾಕವಿಧಾನಕ್ಕಾಗಿ, ಸೋನಾ ಮಸೂರಿ ಮತ್ತು ಇತರ ಯಾವುದೇ ಅಕ್ಕಿಯ ಬದಲಿಗೆ, ಬಾಸ್ಮತಿ ಅಕ್ಕಿಯನ್ನು ಬಳಸಲು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ. ಬಾಸ್ಮತಿ ಅಕ್ಕಿ ಜಿಗುಟಾಗದ ಉದ್ದದ ಧಾನ್ಯವನ್ನು ನೀಡುತ್ತದೆ, ಇದು ಹಬ್ಬದ ಸಮಯಗಳ್ಲಲೂ ಸೂಕ್ತವಾಗಿದೆ. ಎರಡನೆಯದಾಗಿ, ಕುರ್ಮಾ ಅಥವಾ ಯಾವುದೇ ತೆಂಗಿನಕಾಯಿ ಆಧಾರಿತ ಮಸಾಲೆಯುಕ್ತ ಮೇಲೋಗರದೊಂದಿಗೆ ಬಡಿಸಿದಾಗ ಈ ಪಾಕವಿಧಾನ ಉತ್ತಮ ರುಚಿ ನೀಡುತ್ತದೆ. ಆದರೆ ನಿಮಗೆ ಯಾವುದೇ ಮಸಾಲೆಯುಕ್ತ ದಾಲ್ ಆಧಾರಿತ ಮೇಲೋಗರಗಳೊಂದಿಗೆ ಸಹ ನೀಡಬಹುದು. ಕೊನೆಯದಾಗಿ, ತುರಿದ ತೆಂಗಿನಕಾಯಿ ಅಥವಾ ಫ್ರೋಜನ್ ತರಕಾರಿಗಳನ್ನು ಸೇರಿಸುವ ಮೂಲಕ ಈ ಪಾಕವಿಧಾನವನ್ನು ಇನ್ನಷ್ಟು ವಿಸ್ತರಿಸಬಹುದು. ನೀವು ಇದಕ್ಕೆ ಹಸಿರು ಬಟಾಣಿ, ಸ್ವೀಟ್ ಕಾರ್ನ್, ಸಣ್ಣಗೆ ಕತ್ತರಿಸಿದ ಬೀನ್ಸ್ ಮತ್ತು ಬ್ರೊಕೋಲಿಯೊಂದಿಗೆ ಪ್ರಯೋಗಿಸಬಹುದು.
ಅಂತಿಮವಾಗಿ, ಗೀ ರೈಸ್ ಪಾಕವಿಧಾನದ ಈ ಪೋಸ್ಟ್ನೊಂದಿಗೆ ನನ್ನ ಇತರ ಭಾರತೀಯ ಅನ್ನದ ಪಾಕವಿಧಾನಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸಲು ನಾನು ವಿನಂತಿಸುತ್ತೇನೆ. ಇದರಲ್ಲಿ ಕ್ಯಾರೆಟ್ ರೈಸ್, ಪಾಲಕ್ ರೈಸ್, ಮಶ್ರೂಮ್ ರೈಸ್, ಬೀಟ್ರೂಟ್ ರೈಸ್, ಜೀರಾ ರೈಸ್, ತಹರಿ ರೈಸ್, ಮೆಕ್ಸಿಕನ್ ರೈಸ್, ಮಸಾಲಾ ರೈಸ್ ಮತ್ತು ಟೊಮೆಟೊ ರೈಸ್ ರೆಸಿಪಿ ಮುಂತಾದ ಪಾಕವಿಧಾನಗಳು ಸೇರಿವೆ. ಹೆಚ್ಚುವರಿಯಾಗಿ, ನನ್ನ ಇತರ ಪಾಕವಿಧಾನಗಳ ಸಂಗ್ರಹಕ್ಕೆ ಭೇಟಿ ನೀಡಿ,
ಗೀ ರೈಸ್ ವಿಡಿಯೋ ಪಾಕವಿಧಾನ:
ನೈ ಚೊರು ಪಾಕವಿಧಾನ ಕಾರ್ಡ್:
ಗೀ ರೈಸ್ ರೆಸಿಪಿ | ghee rice in kannada | ನೈ ಚೊರು | ತುಪ್ಪ ಬಾತ್
ಪದಾರ್ಥಗಳು
- 1 ಟೇಬಲ್ಸ್ಪೂನ್ ತುಪ್ಪ
- 8 ಗೋಡಂಬಿ, ಅರ್ಧಭಾಗ
- 2 ಟೇಬಲ್ಸ್ಪೂನ್ ಒಣದ್ರಾಕ್ಷಿ
- 1 ಬೇ ಎಲೆ
- 1 ಇಂಚಿನ ದಾಲ್ಚಿನ್ನಿ
- 2 ಬೀಜಕೋಶ ಏಲಕ್ಕಿ
- 5 ಲವಂಗ
- ½ ಟೀಸ್ಪೂನ್ ಕಾಳು ಮೆಣಸು
- ½ ಈರುಳ್ಳಿ, ಹೋಳು
- 1 ಮೆಣಸಿನಕಾಯಿ, ಸೀಳಿದ
- 1 ಕಪ್ ಬಾಸ್ಮತಿ ಅಕ್ಕಿ, ನೆನೆಸಿದ
- 2 ಕಪ್ ನೀರು
- 1 ಟೀಸ್ಪೂನ್ ನಿಂಬೆ ರಸ
- 1 ಟೀಸ್ಪೂನ್ ಉಪ್ಪು
ಸೂಚನೆಗಳು
- ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 1 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ 8 ಗೋಡಂಬಿ ಮತ್ತು 2 ಟೀಸ್ಪೂನ್ ಒಣದ್ರಾಕ್ಷಿ ಹುರಿಯಿರಿ.
- ಗೋಡಂಬಿಯನ್ನು ಗೋಲ್ಡನ್ ಬ್ರೌನ್ ಗೆ ಹುರಿದು ಪಕ್ಕಕ್ಕೆ ಇರಿಸಿ.
- ಈಗ ಅದೇ ಕಡೈನಲ್ಲಿ 1 ಬೇ ಎಲೆ, 1 ಇಂಚಿನ ದಾಲ್ಚಿನ್ನಿ, 2 ಪಾಡ್ಸ್ ಏಲಕ್ಕಿ, 5 ಲವಂಗ ಮತ್ತು ½ ಟೀಸ್ಪೂನ್ ಕಾಳು ಮೆಣಸು ಹಾಕಿ.
- ½ ಈರುಳ್ಳಿ, 1 ಮೆಣಸಿನಕಾಯಿ ಸೇರಿಸಿ ಮತ್ತು ಈರುಳ್ಳಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.
- ಈಗ 1 ಕಪ್ ಬಾಸ್ಮತಿ ಅಕ್ಕಿ (20 ನಿಮಿಷ ನೆನೆಸಿ) ಸೇರಿಸಿ ಮತ್ತು ಅಕ್ಕಿ ಧಾನ್ಯಗಳನ್ನು ಮುರಿಯದೆ 1 ನಿಮಿಷ ಹುರಿಯಿರಿ.
- ಈಗ, 2 ಕಪ್ ನೀರು, 1 ಟೀಸ್ಪೂನ್ ನಿಂಬೆ ರಸ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ.
- ಚೆನ್ನಾಗಿ ಬೆರೆಸಿ ಮತ್ತು ನೀರನ್ನು ಕುದಿಸಿ.
- ಮುಚ್ಚಿ, 20 ನಿಮಿಷಗಳ ಕಾಲ ಸಿಮ್ಮೆರ್ ನಲ್ಲಿಡಿ ಅಥವಾ 2 ಸೀಟಿಗಳಿಗೆ ಪ್ರೆಶರ್ ಕುಕ್ ಮಾಡಿ.
- 20 ನಿಮಿಷಗಳ ನಂತರ, ಅಕ್ಕಿ ಧಾನ್ಯಗಳನ್ನು ಮುರಿಯದೆ ನಿಧಾನವಾಗಿ ಮಿಶ್ರಣ ಮಾಡಿ.
- ಹುರಿದ ಬೀಜಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಅಂತಿಮವಾಗಿ, ಕುರ್ಮಾ ಜೊತೆ ಗೀ ರೈಸ್ ಅನ್ನು ಆನಂದಿಸಿ.
ಹಂತ ಹಂತದ ಫೋಟೋದೊಂದಿಗೆ ಗೀ ರೈಸ್ ಮಾಡುವುದು ಹೇಗೆ:

ಟಿಪ್ಪಣಿಗಳು:
- ಮೊದಲನೆಯದಾಗಿ, ದೊಡ್ಡ ಧಾನ್ಯದ ಅಕ್ಕಿಗಾಗಿ ಉತ್ತಮ ಗುಣಮಟ್ಟದ ಬಾಸ್ಮತಿ ಅಕ್ಕಿಯನ್ನು ಬಳಸಿ.
- ಒಳ್ಳೆ ಫ್ಲೇವರ್ ನ ರೈಸ್ ಪಡೆಯಲು, ಮನೆಯಲ್ಲಿ ತಯಾರಿಸಿದ ತಾಜಾ ತುಪ್ಪವನ್ನು ಬಳಸಿ.
- ಹಾಗೆಯೇ, ನೀವು ಕುಕ್ಕರ್ನಲ್ಲಿ ಬೇಯಿಸಲು ಬಯಸಿದರೆ 2 ಸೀಟಿಗಳಿಗೆ ಪ್ರೆಶರ್ ಕುಕ್ ಮಾಡಿ.
- ಅಂತಿಮವಾಗಿ, ಗೀ ರೈಸ್ ಪಾಕವಿಧಾನ ಬಿಸಿಯಾಗಿ ಬಡಿಸಿದಾಗ ಉತ್ತಮ ರುಚಿ ನೀಡುತ್ತದೆ.