ಬಾಳೆಹಣ್ಣಿನ ಅಪ್ಪಮ್ | banana appam in kannada | ಬನಾನಾ ಪನಿಯರಮ್

0

ಬಾಳೆಹಣ್ಣಿನ ಅಪ್ಪಮ್ ಪಾಕವಿಧಾನ | ಬನಾನಾ ಪನಿಯರಮ್ | ಬಾಳೆಹಣ್ಣಿನ ಮುಳ್ಕ ಅಥವಾ ಅಪ್ಪಾದ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಸಿಹಿ ಮತ್ತು ಖಾರದ ರುಚಿ ಎರಡರ ಸಂಯೋಜನೆ ಇರುವ ಒಂದು ಅನನ್ಯ ಸ್ನ್ಯಾಕ್ ಪಾಕವಿಧಾನ. ಈ ಪಾಕವಿಧಾನ ಮುಖ್ಯವಾಗಿ ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ ಆದರೆ ಇದು ಬಹಳ ವಿಶೇಷ ಸಾಮಾಗ್ರಿಯನ್ನು ಹೊಂದಿದೆ, ಅದುವೇ ಬಾಳೆಹಣ್ಣು. ಇದು ಸಿಹಿ ರುಚಿ ಮತ್ತು ಅನನ್ಯ ಪರಿಮಳವನ್ನು ನೀಡುತ್ತದೆ.ಬಾಳೆಹಣ್ಣಿನ ಅಪ್ಪಮ್ ರೆಸಿಪಿ

ಬಾಳೆಹಣ್ಣಿನ ಅಪ್ಪಮ್ ಪಾಕವಿಧಾನ | ಬನಾನಾ ಪನಿಯರಮ್ | ಬಾಳೆಹಣ್ಣಿನ ಮುಳ್ಕ ಅಥವಾ ಅಪ್ಪಾದ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಅಪ್ಪಮ್ ಅಥವಾ ಮುಳ್ಕ ಪಾಕವಿಧಾನವು ಸಾಮಾನ್ಯವಾಗಿ ಸಿಹಿ ಮತ್ತು ಖಾರದ ಸ್ನ್ಯಾಕ್ ಪಾಕವಿಧಾನವಾಗಿದೆ. ಇದು ಸಾಮಾನ್ಯವಾಗಿ ಗೋಧಿ ಹಿಟ್ಟು ಮತ್ತು ಕಾಲೋಚಿತ ಹಣ್ಣಿನ ಆಯ್ಕೆಯೊಂದಿಗೆ ತಯಾರಿಸಲಾಗುತ್ತದೆ. ಈ ಪಾಕವಿಧಾನಕ್ಕಾಗಿ ಅಸಂಖ್ಯಾತ ಹಣ್ಣುಗಳನ್ನು ಬಳಸಬಹುದು, ಆದರೆ ಬಾಳೆಹಣ್ಣು ಆಧಾರಿತ ಪನಿಯರಮ್ ಎಲ್ಲಾ ಋತುವಿನಲ್ಲಿ ಜನಪ್ರಿಯವಾಗಿದೆ. ಇದು ಹಬ್ಬದಲ್ಲಿ ಜನಪ್ರಿಯ ತಿಂಡಿಯಾಗಿದ್ದರೂ, ಉಳಿದ ಬಾಳೆಹಣ್ಣುಗಳೊಂದಿಗೆ ಸಂಜೆಯ ತಿಂಡಿ ಸಹ ಆಗಬಹುದು.

ನಾನು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದೇನೆ ಮತ್ತು ನನ್ನ ಊರಿನಲ್ಲಿ ತಯಾರಿಸುವ ಹಲವಾರು ಪಾಕವಿಧಾನಗಳನ್ನು ನಾನು ಇಲ್ಲಿ ಆಗಾಗ ನೆನೆಪಿಸಿಕೊಳ್ಳುತ್ತೇನೆ. ವಿಶೇಷವಾಗಿ ನಾನು ಉಷ್ಣವಲಯದ ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ತಯಾರಿಸಲಾದ ಪಾಕವಿಧಾನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಉದಾಹರಣೆಗೆ, ನಾನು ಜ್ಯಾಕ್ಫ್ರೂಟ್ ಆಧಾರಿತ ಇಡ್ಲಿ ಅಥವಾ ಅಪ್ಪಾ / ಮುಳ್ಕ ತಿನ್ನದೇ ಬಹಳ ಸಮಯವಾಗಿದೆ. ಆದರೆ ಅದೃಷ್ಟವಶಾತ್ ನಾನು ಬನಾನಾ ಅಪ್ಪಮ್ ಪಾಕವಿಧಾನವನ್ನು ಇಲ್ಲಿ ಆನಂದಿಸಬಹುದು. ನಾನು ವೈಯಕ್ತಿಕವಾಗಿ ಜಾಕ್ಫ್ರೂಟ್ ಆಧಾರಿತ ಅಪ್ಪವನ್ನು ಇಷ್ಟ ಪಡುತ್ತೇನೆ, ಆದರೆ ಬಾಳೆಹಣ್ಣು ಅಪ್ಪಾ ಸಹ ಅದರಂತೆಯೇ ರುಚಿಯಾಗಿರುತ್ತದೆ. ಈ ದಕ್ಷಿಣ ಭಾರತೀಯ ಭಕ್ಷ್ಯವನ್ನು ಸಾಮಾನ್ಯವಾಗಿ ಹಬ್ಬಕ್ಕೆ ಸ್ನ್ಯಾಕ್ ನಂತೆ ತಯಾರಿಸಲಾಗುತ್ತದೆ.

ಬನಾನಾ ಪನಿಯರಮ್ಇದಲ್ಲದೆ, ಬಾಳೆಹಣ್ಣಿನ ಅಪ್ಪಮ್ ರೆಸಿಪಿಗಾಗಿ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲಿಗೆ, ಈ ಪಾಕವಿಧಾನಕ್ಕಾಗಿ ಹಣ್ಣಾದ ಬಾಳೆಹಣ್ಣು ಬಳಸಲು ನಾನು ಯಾವಾಗಲೂ ಶಿಫಾರಸು ಮಾಡುತ್ತೇನೆ. ಕಚ್ಚಾ ಅಥವಾ ಸ್ವಲ್ಪ ಹಣ್ಣಾದ ಬಾಳೆಹಣ್ಣುಗಳು ಈ ಅಪ್ಪಾ ರೆಸಿಪಿಗೆ ಅದೇ ಪ್ರಮಾಣದ ಪರಿಮಳವನ್ನು ನೀಡುವುದಿಲ್ಲ. ಎರಡನೆಯದಾಗಿ, ನಾನು ವೈಯಕ್ತಿಕವಾಗಿ ಕಡಿಮೆ ಸಿಹಿ ಹೊಂದಿರುವ ಪಾಕವಿಧಾನವನ್ನು ಇಷ್ಟಪಡುತ್ತೇನೆ, ಆದ್ದರಿಂದ ಕೇವಲ ಕಾಲು ಕಪ್ ಬೆಲ್ಲವನ್ನು ಸೇರಿಸಿದೆ. ಹೇಗಾದರೂ, ನಿಮ್ಮ ಬಾಳೆಹಣ್ಣುಗಳು ಕಡಿಮೆ ಸಿಹಿ ಎಂದು ಪರಿಗಣಿಸಿದರೆ ನೀವು ಹೆಚ್ಚುವರಿ ಬೆಲ್ಲ ಅಥವಾ ಸಕ್ಕರೆ ಸೇರಿಸಬಹುದು. ಕೊನೆಯದಾಗಿ, ಈ ವಿಶಿಷ್ಟ ಪಾಕವಿಧಾನವು ಬಿಸಿ ಎಣ್ಣೆಯಲ್ಲಿ ಸಣ್ಣ ಡಂಪ್ಲಿಂಗ್ ಅನ್ನು ಹುರಿಯುಲಾಗುತ್ತದೆ, ಆದರೆ ಪರ್ಯಾಯವಾಗಿ, ನೀವು ಪನಿಯರಮ್ ಪ್ಯಾನ್ ಅಥವಾ ಅಪ್ಪೆ ಪ್ಯಾನ್ ಅನ್ನು ಕೂಡಾ ಬಳಸಬಹುದು.

ಅಂತಿಮವಾಗಿ, ಬಾಳೆಹಣ್ಣಿನ ಅಪ್ಪಮ್ ರೆಸಿಪಿಯ ಈ ಪಾಕವಿಧಾನದ ಪೋಸ್ಟ್ನೊಂದಿಗೆ ನನ್ನ ಇತರ ವ್ರತ ನವರಾತ್ರಿ ಹಬ್ಬದ ಅಡುಗೆಗಳು ಪಾಕವಿಧಾನಗಳ ಸಂಗ್ರಹವನ್ನು ಹೈಲೈಟ್ ಮಾಡಲು ನಾನು ಬಯಸುತ್ತೇನೆ. ಇದು ಸೂಜಿ ಕಾ ಹಲ್ವಾ, ಪುಳಿಯೋಧರೈ, ರವಾ ಕೇಸರಿ, ಗುಜಿಯಾ, ದಹಿ ಆಲೂ, ಸಾಬುದಾನಾ ಟಿಕ್ಕಿ, ಅವಲಕ್ಕಿ ಬಿಸಿ ಬೇಳೆ ಭಾತ್, ಭಾಕರ್ವಾಡಿ, ಮೂಂಗ್ ದಾಲ್ ಹಲ್ವಾ ಮತ್ತು ಸಾಬುದಾನಾ ತಾಳಿಪೀಟ್ ರೆಸಿಪಿ ನಂತಹ ಪಾಕವಿಧಾನಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ನನ್ನ ಇತರ ರೀತಿಯ ಪಾಕವಿಧಾನಗಳ ಸಂಗ್ರಹಣೆಯನ್ನು ಭೇಟಿ ಮಾಡಿ,

ಬಾಳೆಹಣ್ಣಿನ ಅಪ್ಪಮ್ ವೀಡಿಯೊ ಪಾಕವಿಧಾನ:

Must Read:

ಬನಾನಾ ಪನಿಯರಮ್ ಪಾಕವಿಧಾನ ಕಾರ್ಡ್:

banana appam recipe

ಬಾಳೆಹಣ್ಣಿನ ಅಪ್ಪಮ್ | banana appam in kannada | ಬನಾನಾ ಪನಿಯರಮ್

No ratings yet
ತಯಾರಿ ಸಮಯ: 5 minutes
ಅಡುಗೆ ಸಮಯ: 10 minutes
ಒಟ್ಟು ಸಮಯ : 15 minutes
ಸೇವೆಗಳು: 14 ಸೇವೆಗಳು
AUTHOR: HEBBARS KITCHEN
ಕೋರ್ಸ್: ತಿಂಡಿಗಳು
ಪಾಕಪದ್ಧತಿ: ದಕ್ಷಿಣ ಭಾರತೀಯ
ಕೀವರ್ಡ್: ಬಾಳೆಹಣ್ಣಿನ ಅಪ್ಪಮ್
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಬಾಳೆಹಣ್ಣಿನ ಅಪ್ಪಮ್ ಪಾಕವಿಧಾನ | ಬನಾನಾ ಪನಿಯರಮ್ | ಬಾಳೆಹಣ್ಣಿನ ಮುಳ್ಕ ಅಥವಾ ಅಪ್ಪಾ

ಪದಾರ್ಥಗಳು

  • 3 ಬಾಳೆಹಣ್ಣು (ಹಣ್ಣಾದ)
  • ¼ ಕಪ್ ಬೆಲ್ಲ
  • 1 ಕಪ್ ಗೋಧಿ ಹಿಟ್ಟು
  • ¼ ಟೀಸ್ಪೂನ್ ಏಲಕ್ಕಿ ಪುಡಿ
  • ಚಿಟಿಕೆ ಉಪ್ಪು
  • ಎಣ್ಣೆ (ಹುರಿಯಲು)

ಸೂಚನೆಗಳು

  • ಮೊದಲಿಗೆ, 3 ಬಾಳೆಹಣ್ಣುಗಳ ಸಿಪ್ಪೆ ತೆಗೆದು ಅವುಗಳನ್ನು ತುಂಡುಗಳಾಗಿ ಕತ್ತರಿಸಿ. ಚೆನ್ನಾಗಿ ಹಣ್ಣಾದ ಬಾಳೆಹಣ್ಣುಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.
  • ಯಾವುದೇ ಉಂಡೆಗಳನ್ನು ಹೊಂದಿಲ್ಲವೆಂದು ಖಚಿತಪಡಿಸಿಕೊಂಡು ಫೋರ್ಕ್ನ ಸಹಾಯದಿಂದ ಅವುಗಳನ್ನು ಮ್ಯಾಶ್ ಮಾಡಿ.
  • ಸಹ ¼ ಕಪ್ ಬೆಲ್ಲ ಸೇರಿಸಿ ಮತ್ತು ಬೆಲ್ಲ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ.
  • ಈಗ 1 ಕಪ್ ಗೋಧಿ ಹಿಟ್ಟು, ¼ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು ಚಿಟಿಕೆ ಉಪ್ಪು ಸೇರಿಸಿ.
  • ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಸಂಯೋಜಿಸಿ ಮಿಶ್ರಣ ಮಾಡಿ.
  • ದಪ್ಪ ಕೇಕ್ ಬ್ಯಾಟರ್ ಸ್ಥಿರತೆಯನ್ನು ರೂಪಿಸಲು ಹೆಚ್ಚು ಬಾಳೆಹಣ್ಣು ಪ್ಯೂರಿ ಅಥವಾ ನೀರನ್ನು ಸೇರಿಸಿ.
  • ಈಗ ನೀರಿನಲ್ಲಿ ನಿಮ್ಮ ಕೈಯನ್ನು ಅದ್ದಿ, ಅವುಗಳನ್ನು ಒಂದೊಂದಾಗಿ ಬಿಸಿ ಎಣ್ಣೆಗೆ ಬಿಡಲು ಪ್ರಾರಂಭಿಸಿ.
  • ಜ್ವಾಲೆಯನ್ನು ಕಡಿಮೆಯಿಂದ ಮಧ್ಯಮಕ್ಕೆ ಇಟ್ಟು ಸಾಂದರ್ಭಿಕವಾಗಿ ಬೆರೆಸಿ.
  • ಅದು ಡಾರ್ಕ್ ಗೋಲ್ಡನ್ ಬ್ರೌನ್ ಆಗುವ ತನಕ ಫ್ರೈ ಮಾಡಿ.
  • ಎಣ್ಣೆಯನ್ನು ಹೀರಿಕೊಳ್ಳಲು ಟಿಶ್ಯೂ ಪೇಪರ್ ಮೇಲೆ ಅಪ್ಪಮ್ ಅನ್ನು ಹರಿಸಿ.
  • ಅಂತಿಮವಾಗಿ, ಬಾಳೆಹಣ್ಣಿನ ಅಪ್ಪಮ್ ಅಥವಾ ಬಾಳೆಹಣ್ಣು ಮುಳ್ಕವನ್ನು ತಾಜಾ ತುಪ್ಪದೊಂದಿಗೆ ಟಾಪ್ ಮಾಡಿ ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಬಾಳೆಹಣ್ಣಿನ ಅಪ್ಪಮ್ ಹೇಗೆ ಮಾಡುವುದು:

  1. ಮೊದಲಿಗೆ, 3 ಬಾಳೆಹಣ್ಣುಗಳ ಸಿಪ್ಪೆ ತೆಗೆದು ಅವುಗಳನ್ನು ತುಂಡುಗಳಾಗಿ ಕತ್ತರಿಸಿ. ಚೆನ್ನಾಗಿ ಹಣ್ಣಾದ ಬಾಳೆಹಣ್ಣುಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.
  2. ಯಾವುದೇ ಉಂಡೆಗಳನ್ನು ಹೊಂದಿಲ್ಲವೆಂದು ಖಚಿತಪಡಿಸಿಕೊಂಡು ಫೋರ್ಕ್ನ ಸಹಾಯದಿಂದ ಅವುಗಳನ್ನು ಮ್ಯಾಶ್ ಮಾಡಿ.
  3. ಸಹ ¼ ಕಪ್ ಬೆಲ್ಲ ಸೇರಿಸಿ ಮತ್ತು ಬೆಲ್ಲ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ.
  4. ಈಗ 1 ಕಪ್ ಗೋಧಿ ಹಿಟ್ಟು, ¼ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು ಚಿಟಿಕೆ ಉಪ್ಪು ಸೇರಿಸಿ.
  5. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಸಂಯೋಜಿಸಿ ಮಿಶ್ರಣ ಮಾಡಿ.
  6. ದಪ್ಪ ಕೇಕ್ ಬ್ಯಾಟರ್ ಸ್ಥಿರತೆಯನ್ನು ರೂಪಿಸಲು ಹೆಚ್ಚು ಬಾಳೆಹಣ್ಣು ಪ್ಯೂರಿ ಅಥವಾ ನೀರನ್ನು ಸೇರಿಸಿ.
  7. ಈಗ ನೀರಿನಲ್ಲಿ ನಿಮ್ಮ ಕೈಯನ್ನು ಅದ್ದಿ, ಅವುಗಳನ್ನು ಒಂದೊಂದಾಗಿ ಬಿಸಿ ಎಣ್ಣೆಗೆ ಬಿಡಲು ಪ್ರಾರಂಭಿಸಿ.
  8. ಜ್ವಾಲೆಯನ್ನು ಕಡಿಮೆಯಿಂದ ಮಧ್ಯಮಕ್ಕೆ ಇಟ್ಟು ಸಾಂದರ್ಭಿಕವಾಗಿ ಬೆರೆಸಿ.
  9. ಅದು ಡಾರ್ಕ್ ಗೋಲ್ಡನ್ ಬ್ರೌನ್ ಆಗುವ ತನಕ ಫ್ರೈ ಮಾಡಿ.
  10. ಎಣ್ಣೆಯನ್ನು ಹೀರಿಕೊಳ್ಳಲು ಟಿಶ್ಯೂ ಪೇಪರ್ ಮೇಲೆ ಅಪ್ಪಮ್ ಅನ್ನು ಹರಿಸಿ.
  11. ಅಂತಿಮವಾಗಿ, ಬಾಳೆಹಣ್ಣಿನ ಅಪ್ಪಮ್ ಅಥವಾ ಬಾಳೆಹಣ್ಣು ಮುಳ್ಕವನ್ನು ತಾಜಾ ತುಪ್ಪದೊಂದಿಗೆ ಟಾಪ್ ಮಾಡಿ ಆನಂದಿಸಿ.
    ಬಾಳೆಹಣ್ಣಿನ ಅಪ್ಪಮ್ ರೆಸಿಪಿ

ಟಿಪ್ಪಣಿಗಳು:

  • ಮೊದಲಿಗೆ, ಹೆಚ್ಚು ಪರಿಮಳಕ್ಕಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಬಳಸಿ.
  • ಅಲ್ಲದೆ, ಬ್ಯಾಟರ್ ತಯಾರಿಸುವಾಗ ನೀರು ಸೇರಿಸುವುದನ್ನು ತಪ್ಪಿಸಿ, ಹೀಗೆ ಮಾಡಿದರೆ ಅಪ್ಪಮ್ ನ ಫ್ಲೇವರ್ ಕಳೆದು ಹೋಗುತ್ತದೆ.
  • ಇದಲ್ಲದೆ, ನೀವು ಎಣ್ಣೆಯಲ್ಲಿ ಹುರಿಯುವ ಬದಲು, ಅಪ್ಪಮ್ ಅನ್ನು ಪರ್ಯಾಯವಾಗಿ ಪ್ಯಾನ್ ನಲ್ಲಿ ಫ್ರೈ ಮಾಡಬಹುದು.
  • ಅಂತಿಮವಾಗಿ, ಬ್ಯಾಟರ್ ಗೆ ಸೋಡಾದ ಒಂದು ಚಿಟಿಕೆ ಸೇರಿಸುವುದರಿಂದ, ಬಾಳೆಹಣ್ಣಿನ ಅಪ್ಪಮ್ ಅಥವಾ ಬಾಳೆಹಣ್ಣು ಮುಳ್ಕವನ್ನು ಹೆಚ್ಚು ಮೃದು ಪ್ಲಫಿ ಆಗಲು ಸಹಾಯ ಮಾಡುತ್ತದೆ.