ಬಾಳೆ ಹೂವು ರೆಸಿಪಿಗಳು | banana flower recipes in kannada

0

ಬಾಳೆ ಹೂವು ಪಾಕವಿಧಾನಗಳು | ಬನಾನಾ ಫ್ಲವರ್ ಪಾಕವಿಧಾನಗಳು | ಬಾಳೆ ಗೊನೆಯ ಹೂವನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬುವುದರ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ವಜ್ಹೈಪೋ ಅಥವಾ ವಲೈಪೂ ನಿಂದ ಮಾಡಿದ ಸುಲಭ ಮತ್ತು ಆರೋಗ್ಯಕರ ಭಾರತೀಯ ಪಾಕವಿಧಾನಗಳು ಇದಾಗಿವೆ. ಮೂಲತಃ ನಾನು ಬಾಳೆ ಹೂವಿನಿಂದ ಮೂರು ಪಾಕವಿಧಾನಗಳನ್ನು ಪ್ರಯತ್ನಿಸಿದೆ, ಅವು ಯಾವುದೆಂದರೆ, ಬಾಳೆ ಹೂವಿನ ಚಟ್ನಿ, ಬಾಳೆ ಹೂವೀನ ಪಲ್ಯ ಮತ್ತು ಬಾಳೆ ಹೂವಿನ ಚಿಪ್ಸ್. ನೀವು ಈ ಎಲ್ಲಾ ಪಾಕವಿಧಾನಗಳನ್ನು ಒಂದೇ ಹೂವಿನೊಂದಿಗೆ ಸುಲಭವಾಗಿ ತಯಾರಿಸಿ ನಿಮ್ಮ ಕುಟುಂಬದವರಿಗೆ ಆಹಾರವಾಗಿ ನೀಡಬಹುದು. ಮತ್ತು ಬೇರೆ ಯಾವುದೇ ಪಾಕವಿಧಾನಗಳನ್ನು ನೀವು ನೋಡಬೇಕಾಗಿಲ್ಲ.ಬಾಳೆ ಹೂ ಪಾಕವಿಧಾನಗಳು

ಬಾಳೆ ಹೂವು ಪಾಕವಿಧಾನಗಳು | ಬನಾನಾ ಫ್ಲವರ್ ಪಾಕವಿಧಾನಗಳು | ಬಾಳೆ ಹೂವನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬುವುದರ ಹಂತ ಹಂತವಾಗಿ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಭಾರತೀಯ ಪಾಕಪದ್ಧತಿಯು ಸ್ಥಳೀಯವಾಗಿ ಬೆಳೆಸಿ ಮತ್ತು ಲಭ್ಯವಿರುವ ಎಲ್ಲಾ ಉಷ್ಣವಲಯದ ಹಣ್ಣುಗಳ ಬಳಕೆಗೆ ಹೆಸರುವಾಸಿಯಾಗಿದೆ. ವಾಸ್ತವವಾಗಿ, ಯಾವುದನ್ನೂ ನಾವು ಉಪಯೋಗಕ್ಕೆ ಬರುವುದಿಲ್ಲವೆಂದು ಅಂದುಕೊಳ್ಳುತ್ತೇವೋ, ಅವುಗಳಿಂದ ರುಚಿಕರವಾದ ಪಾಕವಿಧಾನಗಳನ್ನು ತಯಾರಿಸುತ್ತೇವೆ. ಬಾಳೆ ಹೂವನ್ನು ಬಳಸಿ ತಯಾರಿಸಿದಂತಹ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಪಾಕವಿಧಾನವೆಂದರೆ ಅದು ಬಾಳೆ ಹೂವಿನ ಚಟ್ನಿ, ಬಾಳೆ ಹೂವಿನ ಚಿಪ್ಸ್ ಮತ್ತು ಬಾಳೆ ಹೂವಿನ ಪಲ್ಯ.

ನನ್ನ ಓದುಗರು ಏನು ಇಷ್ಟಪಡುತ್ತಾರೆ ಎಂಬುದನ್ನು ನೋಡಲು ನಾನು ನನ್ನ ಫೇಸ್‌ಬುಕ್ ವೀಡಿಯೊಗಳಲ್ಲಿ ಸಾಕಷ್ಟು ವೋಟ್ ಹಾಗೂ ಸಮೀಕ್ಷೆಗಳನ್ನು ಮಾಡುತ್ತಿರುತ್ತೇನೆ. ಉದಾಹರಣೆಗೆ, ಅವರು ಹಾಲು ಆಧಾರಿತ ಪಾಕವಿಧಾನಗಳನ್ನು ಇಷ್ಟಪಡುತ್ತಾರೆಯೇ? ಅವರು ಇನ್ಸ್ಟಂಟ್ ಪಾಕವಿಧಾನಗಳನ್ನು ಇಷ್ಟಪಡುತ್ತಾರೆಯೇ? ಅಥವಾ ಅವರು ಸಾಂಪ್ರದಾಯಿಕ ಪಾಕವಿಧಾನಗಳನ್ನು ಇಷ್ಟಪಡುತ್ತಾರೆಯೇ ಎಂದು. ಇದರ ಫಲಿತಾಂಶದೊಂದಿಗೆ ನಿಜವಾಗಿಯೂ ನನಗೆ ಆಶ್ಚರ್ಯ ಹಾಗೂ ಸಂತಸವಾಗಿತ್ತು. ಫಲಿತಾಂಶವು ಸಾಂಪ್ರದಾಯಿಕ ಪಾಕವಿಧಾನಗಳ ಪರವಾಗಿತ್ತು. ಆದ್ದರಿಂದ ಅವರಿಗೆಲ್ಲ ಭರವಸೆ ನೀಡಿದಂತೆ ನಾನು ಬಾಳೆ ಹೂವನ್ನು ಬಳಸಿಕೊಂಡು ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಪಾಕವಿಧಾನಗಳಲ್ಲಿ ಒಂದಾಗಿರುವ ಈ ಪೋಸ್ಟ್ ಅನ್ನು ಮಾಡುತ್ತಿದ್ದೇನೆ. ಮೂಲತಃ, ಆರಂಭದಲ್ಲಿ, ಯಾವುದೇ ಬಾಳೆ ಹೂವಿನ ಪಾಕವಿಧಾನವನ್ನು ತಯಾರಿಸಲು ಅಗತ್ಯವಾದ ಬಾಳೆ ಹೂವನ್ನು ಹೇಗೆ ಸ್ವಚ್ಚಗೊಳಿಸಬೇಕು ಎಂದು ನಾನು ತೋರಿಸಿದ್ದೇನೆ. ಅದನ್ನು ಸ್ವಚ್ಚಗೊಳಿಸಿದ ನಂತರ, ಬಾಳೆ ಹೂ ಚಟ್ನಿ ಅಥವಾ ಪೂಂಬೆ ಚಟ್ನಿ, ಬಾಳೆ ಹೂವಿನ ಪಲ್ಯ ಮತ್ತು ಬಾಳೆ ಹೂವಿನ ಚಿಪ್ಸ್ ಅನ್ನು ಹೇಗೆ ತಯಾರಿಸಬೇಕೆಂದು ನಾನು ತೋರಿಸಿದ್ದೇನೆ.

ಬನಾನಾ ಫ್ಲವರ್  ಪಾಕವಿಧಾನಗಳುನಾನು ಬಾಳೆಹೂವಿನ ಈ ಪಾಕವಿಧಾನವನ್ನು ಪ್ರಾರಂಭಿಸುವ ಮೊದಲು, ಕೆಲವು ಸುಲಭ ಮತ್ತು ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲನೆಯದಾಗಿ, ನೀವು 1-2 ಪದರಗಳನ್ನು ಅಥವಾ ಎಲೆಗಳನ್ನು ತೆಗೆದು ಅದನ್ನು ತ್ಯಜಿಸಬೇಕಾಗಬಹುದು. ಅದು ಹಾನಿಗೊಳಗಾಗಬಹುದು ಅಥವಾ ಮಾಗಿರಬಹುದು. ನಾವು ಚಟ್ನಿಗಾಗಿ ಒಳಗಿನ ಸಿಪ್ಪೆ ಅಥವಾ ಪದರವನ್ನು ಬಳಸಬೇಕಾಗುತ್ತದೆ. ಎರಡನೆಯದಾಗಿ, ಒಮ್ಮೆ ತೆಗೆದ ಬಾಳೆ ಹೂವುಗಳನ್ನು, ಮಜ್ಜಿಗೆಯಲ್ಲಿ ಸಂಗ್ರಹಿಸಬೇಕು. ಇದು ಹೂಗೊಂಚಲುಗಳ ಬಣ್ಣವನ್ನು ಹಿಡಿದಿಡಲು ಮತ್ತು ಮಕರಂದವನ್ನು ಹೊರಹಾಕದಂತೆ ತಡೆಯಲು ಸಹಾಯ ಮಾಡುತ್ತದೆ. ಕೊನೆಯದಾಗಿ, ಈ ಪಾಕವಿಧಾನದಲ್ಲಿ, ನಾನು ಬಾಳೆ ಹೂವಿನಿಂದ ಕೇವಲ 3 ಬಗೆಯ ಪಾಕವಿಧಾನಗಳನ್ನು ತೋರಿಸಿದ್ದೇನೆ. ಆದರೆ ಬಾಳೆ ಹೂವಿನಿಂದ ಅಸಂಖ್ಯಾತ ಆರೋಗ್ಯಕರ ಪಾಕವಿಧಾನಗಳಿವೆ. ನೀವು ವಾಜೈಪೂ ವಡಾ, ಬಾಳೆ ಹೂವಿನ ಒಣ ಸಬ್ಜಿ, ಮತ್ತು ವಲೈಪೂ ಸಾಂಬಾರ್ ಅನ್ನು ಸಹ ತಯಾರಿಸಬಹುದು.

ಅಂತಿಮವಾಗಿ, ಬಾಳೆ ಹೂವಿನ ಪಾಕವಿಧಾನಗಳ ಈ ಪೋಸ್ಟ್‌ನೊಂದಿಗೆ ನನ್ನ ಇತರ ಅಡುಗೆ ಸಲಹೆಗಳು ತಂತ್ರಗಳು ವಿಧಾನಗಳು ಪಾಕವಿಧಾನಗಳ ಸಂಗ್ರಹಗಳನ್ನು ಪರಿಶೀಲಿಸಲು ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ನನ್ನ ಇತರ ವಿವರವಾದ ಪಾಕವಿಧಾನಗಳಾದ, ಮಿಲ್ಕ್‌ಮೇಡ್, 30 ನಿಮಿಷಗಳಲ್ಲಿ ಚೀಸ್, ಡಯೆಟರಿ ಸಪ್ಲಿಮೆಂಟ್ಸ್: ನೀವು ತಿಳಿದುಕೊಳ್ಳಬೇಕಾದದ್ದು, ಕೆನೆಯಿಂದ ಬೆಣ್ಣೆ, ತುಪ್ಪ, ಮಜ್ಜಿಗೆ ಮತ್ತು ವಿಪ್ಪ್ಡ್  ಕ್ರೀಮ್ ತಯಾರಿಸುವುದು, ಬಾದಮ್ ಪೌಡರ್, ಆಮ್ ಪಾಪಾಡ್, ಅಡುಗೆ ಮನೆಯಲ್ಲಿ ನೀವು ಯಾವ 5 ತಪ್ಪುಗಳನ್ನು ಮಾಡುತ್ತಿದ್ದೀರಿ ಹಾಗೂ ಅದನ್ನು ಹೇಗೆ ಸರಿಪಡಿಸುವುದು, ಕಬ್ಬಿಣದ ಕಲ್ಲು / ಬಾಣಲೆ ಪ್ಯಾನ್ ಅನ್ನು ಹೇಗೆ ಸ್ವಚ್ಚ ಗೊಳಿಸುವುದು ಮತ್ತು ಕಾಪಾಡುವುದು, ಮನೆಯಲ್ಲಿ ಪನೀರ್ ತಯಾರಿಸುವುದು ಹೇಗೆ, ಪುದೀನ ಎಲೆಯ ಪ್ರಮುಖ 6 ಆರೋಗ್ಯ ಪ್ರಯೋಜನಗಳು. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಸಂಬಂಧಿತ ಪಾಕವಿಧಾನ ವಿಭಾಗಗಳನ್ನು ನಮೂದಿಸಲು ಬಯಸುತ್ತೇನೆ,

ಬಾಳೆ ಹೂವು ಗಳ ವೀಡಿಯೊ ಪಾಕವಿಧಾನಗಳು:

Must Read:

ಬಾಳೆ ಹೂವು ಗಳ ಪಾಕವಿಧಾನ ಕಾರ್ಡ್:

banana flower recipes

ಬಾಳೆ ಹೂವು ರೆಸಿಪಿಗಳು | banana flower recipes in kannada

5 from 14 votes
ತಯಾರಿ ಸಮಯ: 30 minutes
ಅಡುಗೆ ಸಮಯ: 1 hour
ಒಟ್ಟು ಸಮಯ : 1 hour 30 minutes
ಸೇವೆಗಳು: 4 ಸೇವೆಗಳು
AUTHOR: HEBBARS KITCHEN
ಕೋರ್ಸ್: ಊಟ
ಪಾಕಪದ್ಧತಿ: ದಕ್ಷಿಣ ಭಾರತೀಯ
ಕೀವರ್ಡ್: ಬಾಳೆ ಹೂವು ರೆಸಿಪಿಗಳು
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಬಾಳೆ ಹೂವು ಪಾಕವಿಧಾನಗಳು

ಪದಾರ್ಥಗಳು

 • 1 ಬಾಳೆ ಹೂ / ಬಾಳೆ ಹೂವು

ಪದರಗಳನ್ನು ಬೇಯಿಸಲು

 • ನೀರು
 • ½ ಟೀಸ್ಪೂನ್ ಅರಿಶಿನ
 • 1 ಟೀಸ್ಪೂನ್ ಉಪ್ಪು

ಚಟ್ನಿಗಾಗಿ:

 • 3 ಟೀಸ್ಪೂನ್ ಎಣ್ಣೆ
 • 2 ಟೇಬಲ್ಸ್ಪೂನ್ ಕಡ್ಲೆ ಬೇಳೆ
 • 2 ಟೇಬಲ್ಸ್ಪೂನ್ ಉದ್ದಿನ ಬೇಳೆ 
 • 3 ಒಣಗಿದ ಕೆಂಪು ಮೆಣಸಿನಕಾಯಿ
 • 1 ಕಪ್ ತೆಂಗಿನಕಾಯಿ, ತುರಿದ
 • ಸಣ್ಣ ಚೆಂಡು ಗಾತ್ರದ ಹುಣಸೆಹಣ್ಣು
 • 2 ಟೀಸ್ಪೂನ್ ಬೆಲ್ಲ
 • 1 ಟೀಸ್ಪೂನ್ ಉಪ್ಪು

ಹೂವುಗಳ ಬಣ್ಣ ಹಿಡಿದಿಡಲು:

 • ಕಪ್ ಮೊಸರು
 • 3 ಕಪ್ ನೀರು

ಬಾಳೆ ಹೂವುಗಳ ಚಿಪ್ಸ್ಗಾಗಿ:

 • ½ ಕಪ್ ಮೈದಾ
 • ½ ಕಪ್ ಕಾರ್ನ್ ಫ್ಲೋರ್
 • ½ ಟೀಸ್ಪೂನ್ ಅರಿಶಿನ
 • 1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
 • ½ ಟೀಸ್ಪೂನ್ ಗರಂ ಮಸಾಲ
 • ¼ ಟೀಸ್ಪೂನ್ ಒಳ್ಳೆ ಮೆಣಸು ಪುಡಿ
 • ½ ಟೀಸ್ಪೂನ್ ಚಾಟ್ ಮಸಾಲ
 • 1 ಟೀಸ್ಪೂನ್ ಶುಂಠಿ ಪೇಸ್ಟ್
 • ½ ಟೀಸ್ಪೂನ್ ಉಪ್ಪು
 • ¾ ಕಪ್ ನೀರು
 • ಎಣ್ಣೆ, ಹುರಿಯಲು

ಬಾಳೆ ಹೂವಿನ ಹೃದಯ ಭಾಗ ಕುದಿಸಲು:

 • ನೀರು
 • ½ ಟೀಸ್ಪೂನ್ ಅರಿಶಿನ
 • 1 ಟೀಸ್ಪೂನ್ ಉಪ್ಪು

ಪಲ್ಯಗಾಗಿ:

 • 2 ಟೇಬಲ್ಸ್ಪೂನ್ ಎಣ್ಣೆ
 • 1 ಟೀಸ್ಪೂನ್ ಸಾಸಿವೆ
 • 1 ಟೀಸ್ಪೂನ್ ಕಡ್ಲೆ ಬೇಳೆ
 • 1 ಟೀಸ್ಪೂನ್ ಉದ್ದು ಬೇಳೆ
 • ಕೆಲವು ಕರಿಬೇವಿನ ಎಲೆಗಳು
 • 1 ಈರುಳ್ಳಿ, ಸ ಣ್ಣಗೆ ಕತ್ತರಿಸಿ
 • 2 ಮೆಣಸಿನಕಾಯಿ, ಸೀಳಿದ
 • 2 ಬೆಳ್ಳುಳ್ಳಿ, ಪುಡಿಮಾಡಿದ
 • 1 ಇಂಚಿನ ಶುಂಠಿ, ಸಣ್ಣಗೆ ಕತ್ತರಿಸಿದ
 • ½ ಟೀಸ್ಪೂನ್ ಉಪ್ಪು
 • 2 ಟೇಬಲ್ಸ್ಪೂನ್ ತೆಂಗಿನಕಾಯಿ, ತುರಿದ
 • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು, ಸಣ್ಣಗೆ ಕತ್ತರಿಸಿದ
 • 2 ಟೇಬಲ್ಸ್ಪೂನ್ ನಿಂಬೆ ರಸ

ಸೂಚನೆಗಳು

 • ಮೊದಲನೆಯದಾಗಿ, ದಳಗಳನ್ನು ಬಿಡಿಸಿ ಹೂವುಗಳನ್ನು ಸಂಗ್ರಹಿಸಿ.
 • ಈಗ ಸ್ವಚ್ಚ್ಚಗೊಳಿಸಿ, ಹೂಗೊಂಚಲುಗಳು, ಪದರಗಳು ಮತ್ತು ಹೃದಯ ಭಾಗ (ಕೊಚ್ಚಿ) ಬೇರೆ ಮಾಡಿ ಪಕ್ಕಕ್ಕೆ ಇರಿಸಿ.

ಚಟ್ನಿ ತಯಾರಿಕೆ:

 • ಮೊದಲನೆಯದಾಗಿ, ದೊಡ್ಡ ಪಾತ್ರೆಯಲ್ಲಿ ನೀರು, ½ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
 • ಕತ್ತರಿಸಿದ ಪದರಗಳನ್ನು ಸೇರಿಸಿ 5 ನಿಮಿಷಗಳ ಕಾಲ ಕುದಿಸಿ.
 • ನೀರು ಸೋಸಿ ಪಕ್ಕಕ್ಕೆ ಇರಿಸಿ.
 • ಬಾಣಲೆಯಲ್ಲಿ 3 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 2 ಟೀಸ್ಪೂನ್ ಕಡ್ಲೆ ಬೇಳೆ, 2 ಟೀಸ್ಪೂನ್ ಉದ್ದು ಬೇಳೆ, 3 ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ.
 • ಪರಿಮಳ ಬರುವವರೆಗೆ ಕಡಿಮೆ ಜ್ವಾಲೆಯಲ್ಲಿ ಹುರಿಯಿರಿ.
 • ಸಂಪೂರ್ಣವಾಗಿ ತಣ್ಣಗಾಗಿಸಿ, ಮಿಕ್ಸರ್ ಗೆ ವರ್ಗಾಯಿಸಿ.
 • 1 ಕಪ್ ತೆಂಗಿನಕಾಯಿ, ಸಣ್ಣ ಚೆಂಡು ಗಾತ್ರದ ಹುಣಸೆಹಣ್ಣು, 2 ಟೀಸ್ಪೂನ್ ಬೆಲ್ಲ ಮತ್ತು 1 ಟೀಸ್ಪೂನ್ ಉಪ್ಪಿನೊಂದಿಗೆ ಬೇಯಿಸಿದ ಪದರಗಳನ್ನು ಸೇರಿಸಿ.
 • ಅಗತ್ಯವಿರುವಂತೆ ನೀರನ್ನು ಸೇರಿಸಿ ನುಣ್ಣಗೆ ಮಿಶ್ರಣ ಮಾಡಿ.
 • ಒಗ್ಗರಣೆ ಸೇರಿಸಿ. ಬಾಳೆ ಹೂವಿನ ಚಟ್ನಿ ಅಥವಾ ಪೂಂಬೆ ಚಟ್ನಿ ಬಿಸಿ ಅನ್ನದೊಂದಿಗೆ ಆನಂದಿಸಲು ಸಿದ್ಧವಾಗಿದೆ.

ಚಿಪ್ಸ್ ತಯಾರಿಕೆ:

 • ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ ¼ ಕಪ್ ಮೊಸರು ಮತ್ತು 3 ಕಪ್ ನೀರು ತೆಗೆದುಕೊಳ್ಳಿ.
 • ಚೆನ್ನಾಗಿ ಬೀಟ್ ಮಾಡಿ.
 • ಸ್ವಚ್ಚಗೊಳಿಸಿದ ಫ್ಲೋರೆಟ್‌ಗಳನ್ನು 10 ನಿಮಿಷಗಳ ಕಾಲ ನೆನೆಸಿಡಿ.
 • ನೀರನ್ನು ಸೋಸಿ ಪಕ್ಕಕ್ಕೆ ಇರಿಸಿ.
 • ದೊಡ್ಡ ಬಟ್ಟಲಿನಲ್ಲಿ ½ ಕಪ್ ಮೈದಾ, ½ ಕಪ್ ಕಾರ್ನ್ ಫ್ಲೋರ್ ತೆಗೆದುಕೊಳ್ಳಿ.
 • ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಗರಂ ಮಸಾಲ, ¼ ಟೀಸ್ಪೂನ್ ಪೆಪ್ಪರ್ ಪೌಡರ್, ½ ಟೀಸ್ಪೂನ್ ಚಾಟ್ ಮಸಾಲ, 1 ಟೀಸ್ಪೂನ್ ಶುಂಠಿ ಪೇಸ್ಟ್ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
 • ¾ ಕಪ್ ನೀರು ಸೇರಿಸಿ ದಪ್ಪ ಬ್ಯಾಟರ್ ತಯಾರಿಸಿ.
 • ಈಗ ಫ್ಲೋರೆಟ್ಸ್ ಗಳನ್ನು ಸೇರಿಸಿ ಒಂದೇ ರೀತಿಯಾಗಿ ಕೋಟ್ ಮಾಡಿ.
 • ಬಿಸಿ ಎಣ್ಣೆಯಲ್ಲಿ ಹುರಿಯಿರಿ.
 • ಒಮ್ಮೆ ಚಿಪ್ಸ್ ಕಂದು ಬಣ್ಣ ಬರುವವರೆಗೆ ಅಥವಾ ಗರಿಗರಿಯಾಗುವವರೆಗೆ ಹುರಿದು ಅಡಿಗೆ ಕಾಗದದ ಮೇಲೆ ತೆಗೆಯಿರಿ.
 • ಅಂತಿಮವಾಗಿ, ಬಾಳೆ ಹೂವಿನ ಚಿಪ್ಸ್ ಅನ್ನು ತಕ್ಷಣ ಆನಂದಿಸಿ.

ಬಾಳೆ ಹೂವಿನ ಪಲ್ಯ ತಯಾರಿಕೆ:

 • ಮೊದಲನೆಯದಾಗಿ, ದೊಡ್ಡ ಪಾತ್ರೆಯಲ್ಲಿ ನೀರು, ½ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
 • ಕತ್ತರಿಸಿದ ಬಾಳೆ ಹೂವನ್ನು ಸೇರಿಸಿ 10 ನಿಮಿಷ ಚೆನ್ನಾಗಿ ಕುದಿಸಿ.
 • ನೀರು ಸೋಸಿ ಪಕ್ಕಕ್ಕೆ ಇರಿಸಿ.
 • ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಕಡ್ಲೆ ಬೇಳೆ, 1 ಟೀಸ್ಪೂನ್ ಉದ್ದು ಬೇಳೆ, ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ.
 • ಇದಕ್ಕೆ 1 ಈರುಳ್ಳಿ, 2 ಮೆಣಸಿನಕಾಯಿ, 2 ಬೆಳ್ಳುಳ್ಳಿ, 1 ಇಂಚು ಶುಂಠಿ ಸೇರಿಸಿ.
 • ಬೇಯಿಸಿದ ಬಾಳೆ ಹೂವನ್ನು ಸೇರಿಸಿ, ½ ಟೀಸ್ಪೂನ್ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
 • ಮುಚ್ಚಳ ಮುಚ್ಚಿ 5-10 ನಿಮಿಷಗಳ ಕಾಲ ಅಥವಾ ಎಲ್ಲವೂ ಚೆನ್ನಾಗಿ ಬೇಯುವವರೆಗೆ ಸಣ್ಣ ಜ್ವಾಲೆಯಲ್ಲಿಡಿ.
 • ಈಗ 2 ಟೀಸ್ಪೂನ್ ತೆಂಗಿನಕಾಯಿ, 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು ಮತ್ತು 2 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
 • ಅಂತಿಮವಾಗಿ, ಬಾಳೆ ಹೂವಿನ ಪಲ್ಯವನ್ನು ಬಿಸಿ ಅನ್ನದ ಜೊತೆಗೆ ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಬಾಳೆ ಹೂವು ಪಾಕವಿಧಾನಗಳನ್ನು ಹೇಗೆ ಮಾಡುವುದು:

 1. ಮೊದಲನೆಯದಾಗಿ, ದಳಗಳನ್ನು ಬಿಡಿಸಿ ಹೂವುಗಳನ್ನು ಸಂಗ್ರಹಿಸಿ.
 2. ಈಗ ಸ್ವಚ್ಚ್ಚಗೊಳಿಸಿ, ಹೂಗೊಂಚಲುಗಳು, ಪದರಗಳು ಮತ್ತು ಹೃದಯ ಭಾಗ (ಕೊಚ್ಚಿ) ಬೇರೆ ಮಾಡಿ ಪಕ್ಕಕ್ಕೆ ಇರಿಸಿ.
  ಬಾಳೆ ಹೂ ಪಾಕವಿಧಾನಗಳು

ಚಟ್ನಿ ತಯಾರಿಕೆ:

 1. ಮೊದಲನೆಯದಾಗಿ, ದೊಡ್ಡ ಪಾತ್ರೆಯಲ್ಲಿ ನೀರು, ½ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
 2. ಕತ್ತರಿಸಿದ ಪದರಗಳನ್ನು ಸೇರಿಸಿ 5 ನಿಮಿಷಗಳ ಕಾಲ ಕುದಿಸಿ.
 3. ನೀರು ಸೋಸಿ ಪಕ್ಕಕ್ಕೆ ಇರಿಸಿ.
 4. ಬಾಣಲೆಯಲ್ಲಿ 3 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 2 ಟೀಸ್ಪೂನ್ ಕಡ್ಲೆ ಬೇಳೆ, 2 ಟೀಸ್ಪೂನ್ ಉದ್ದು ಬೇಳೆ, 3 ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ.
 5. ಪರಿಮಳ ಬರುವವರೆಗೆ ಕಡಿಮೆ ಜ್ವಾಲೆಯಲ್ಲಿ ಹುರಿಯಿರಿ.
 6. ಸಂಪೂರ್ಣವಾಗಿ ತಣ್ಣಗಾಗಿಸಿ, ಮಿಕ್ಸರ್ ಗೆ ವರ್ಗಾಯಿಸಿ.
 7. 1 ಕಪ್ ತೆಂಗಿನಕಾಯಿ, ಸಣ್ಣ ಚೆಂಡು ಗಾತ್ರದ ಹುಣಸೆಹಣ್ಣು, 2 ಟೀಸ್ಪೂನ್ ಬೆಲ್ಲ ಮತ್ತು 1 ಟೀಸ್ಪೂನ್ ಉಪ್ಪಿನೊಂದಿಗೆ ಬೇಯಿಸಿದ ಪದರಗಳನ್ನು ಸೇರಿಸಿ.
  ಬಾಳೆ ಹೂ ಪಾಕವಿಧಾನಗಳು
 8. ಅಗತ್ಯವಿರುವಂತೆ ನೀರನ್ನು ಸೇರಿಸಿ ನುಣ್ಣಗೆ ಮಿಶ್ರಣ ಮಾಡಿ.
  ಬಾಳೆ ಹೂ ಪಾಕವಿಧಾನಗಳು
 9. ಒಗ್ಗರಣೆ ಸೇರಿಸಿ. ಬಾಳೆ ಹೂವಿನ ಚಟ್ನಿ ಅಥವಾ ಪೂಂಬೆ ಚಟ್ನಿ ಬಿಸಿ ಅನ್ನದೊಂದಿಗೆ ಆನಂದಿಸಲು ಸಿದ್ಧವಾಗಿದೆ.
  ಬಾಳೆ ಹೂ ಪಾಕವಿಧಾನಗಳು

ಚಿಪ್ಸ್ ತಯಾರಿಕೆ:

 1. ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ ¼ ಕಪ್ ಮೊಸರು ಮತ್ತು 3 ಕಪ್ ನೀರು ತೆಗೆದುಕೊಳ್ಳಿ.
 2. ಚೆನ್ನಾಗಿ ಬೀಟ್ ಮಾಡಿ.
 3. ಸ್ವಚ್ಚಗೊಳಿಸಿದ ಫ್ಲೋರೆಟ್‌ಗಳನ್ನು 10 ನಿಮಿಷಗಳ ಕಾಲ ನೆನೆಸಿಡಿ.
 4. ನೀರನ್ನು ಸೋಸಿ ಪಕ್ಕಕ್ಕೆ ಇರಿಸಿ.
 5. ದೊಡ್ಡ ಬಟ್ಟಲಿನಲ್ಲಿ ½ ಕಪ್ ಮೈದಾ, ½ ಕಪ್ ಕಾರ್ನ್ ಫ್ಲೋರ್ ತೆಗೆದುಕೊಳ್ಳಿ.
 6. ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಗರಂ ಮಸಾಲ, ¼ ಟೀಸ್ಪೂನ್ ಪೆಪ್ಪರ್ ಪೌಡರ್, ½ ಟೀಸ್ಪೂನ್ ಚಾಟ್ ಮಸಾಲ, 1 ಟೀಸ್ಪೂನ್ ಶುಂಠಿ ಪೇಸ್ಟ್ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
 7. ¾ ಕಪ್ ನೀರು ಸೇರಿಸಿ ದಪ್ಪ ಬ್ಯಾಟರ್ ತಯಾರಿಸಿ.
 8. ಈಗ ಫ್ಲೋರೆಟ್ಸ್ ಗಳನ್ನು ಸೇರಿಸಿ ಒಂದೇ ರೀತಿಯಾಗಿ ಕೋಟ್ ಮಾಡಿ.
 9. ಬಿಸಿ ಎಣ್ಣೆಯಲ್ಲಿ ಹುರಿಯಿರಿ.
 10. ಒಮ್ಮೆ ಚಿಪ್ಸ್ ಕಂದು ಬಣ್ಣ ಬರುವವರೆಗೆ ಅಥವಾ ಗರಿಗರಿಯಾಗುವವರೆಗೆ ಹುರಿದು ಅಡಿಗೆ ಕಾಗದದ ಮೇಲೆ ತೆಗೆಯಿರಿ.
 11. ಅಂತಿಮವಾಗಿ, ಬಾಳೆ ಹೂವಿನ ಚಿಪ್ಸ್ ಅನ್ನು ತಕ್ಷಣ ಆನಂದಿಸಿ.

  ಬಾಳೆ ಹೂವಿನ ಪಲ್ಯ ತಯಾರಿಕೆ:

 1. ಮೊದಲನೆಯದಾಗಿ, ದೊಡ್ಡ ಪಾತ್ರೆಯಲ್ಲಿ ನೀರು, ½ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
 2. ಕತ್ತರಿಸಿದ ಬಾಳೆ ಹೂವನ್ನು ಸೇರಿಸಿ 10 ನಿಮಿಷ ಚೆನ್ನಾಗಿ ಕುದಿಸಿ.
 3. ನೀರು ಸೋಸಿ ಪಕ್ಕಕ್ಕೆ ಇರಿಸಿ.
 4. ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಕಡ್ಲೆ ಬೇಳೆ, 1 ಟೀಸ್ಪೂನ್ ಉದ್ದು ಬೇಳೆ, ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ.
 5. ಇದಕ್ಕೆ 1 ಈರುಳ್ಳಿ, 2 ಮೆಣಸಿನಕಾಯಿ, 2 ಬೆಳ್ಳುಳ್ಳಿ, 1 ಇಂಚು ಶುಂಠಿ ಸೇರಿಸಿ.
 6. ಬೇಯಿಸಿದ ಬಾಳೆ ಹೂವನ್ನು ಸೇರಿಸಿ, ½ ಟೀಸ್ಪೂನ್ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
 7. ಮುಚ್ಚಳ ಮುಚ್ಚಿ 5-10 ನಿಮಿಷಗಳ ಕಾಲ ಅಥವಾ ಎಲ್ಲವೂ ಚೆನ್ನಾಗಿ ಬೇಯುವವರೆಗೆ ಸಣ್ಣ ಜ್ವಾಲೆಯಲ್ಲಿಡಿ.
 8. ಈಗ 2 ಟೀಸ್ಪೂನ್ ತೆಂಗಿನಕಾಯಿ, 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು ಮತ್ತು 2 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
 9. ಅಂತಿಮವಾಗಿ, ಬಾಳೆ ಹೂವಿನ ಪಲ್ಯವನ್ನು ಬಿಸಿ ಅನ್ನದ ಜೊತೆಗೆ ಆನಂದಿಸಿ.

ಟಿಪ್ಪಣಿಗಳು:

 • ಮೊದಲನೆಯದಾಗಿ, ಬಾಳೆ ಹೂವು ಜಿಗುಟಾದಂತೆ, ಕತ್ತರಿಸುವ ಮೊದಲು ಎಣ್ಣೆಯನ್ನು ಗ್ರೀಸ್ ಮಾಡಲು ಖಚಿತಪಡಿಸಿಕೊಳ್ಳಿ.
 • ಅರಿಶಿನ ನೀರಿನಲ್ಲಿ ಕುದಿಸುವುದರಿಂದ ಜಿಗುಟುತನವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
 • ಹಾಗೆಯೇ, ನಿಮ್ಮ ಆದ್ಯತೆಗೆ ಅನುಗುಣವಾಗಿ ಮೆಣಸಿನಕಾಯಿ ಮತ್ತು ಬೆಲ್ಲದ ಪ್ರಮಾಣವನ್ನು ಹೊಂದಿಸಿ.
 • ಅಂತಿಮವಾಗಿ, ಬಾಳೆ ಹೂವಿನ ಪಾಕವಿಧಾನಗಳು ಸ್ವಲ್ಪ ಮಸಾಲೆಯುಕ್ತವಾಗಿ ತಯಾರಿಸಿದಾಗ ಉತ್ತಮ ರುಚಿ ನೀಡುತ್ತದೆ.
5 from 14 votes (14 ratings without comment)