ಮಟರ್ ಕಚೋರಿ ಪಾಕವಿಧಾನ | ಪೀಸ್ ಕಚೋರಿ | ಬಟಾಣಿ ಕಚೋರಿಯ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಇದು ಮಸಾಲೆಯುಕ್ತ ಡೀಪ್ ಫ್ರೈಡ್ ಸ್ನ್ಯಾಕ್ ರೆಸಿಪಿಯಾಗಿದ್ದು, ಉತ್ತರ ಭಾರತೀಯ ಪಾಕಪದ್ಧತಿಯಲ್ಲಿ ವಿಶೇಷವಾಗಿ ಡೆಲ್ಹಿ, ರಾಜಸ್ಥಾನ್, ಗುಜರಾತ್ ಮತ್ತು ಕೋಟಾದಲ್ಲಿ ಜನಪ್ರಿಯವಾಗಿದೆ. ಕಚೋರಿಗಳು ರಾಜಸ್ಥಾನ ಅಥವಾ ಉತ್ತರ ಪ್ರದೇಶದಿಂದ ಹುಟ್ಟಿಕೊಂಡಿವೆ ಮತ್ತು ಸಮೋಸಾವನ್ನು ಭಾರತೀಯ ಪಾಕಪದ್ಧತಿಗೆ ಪರಿಚಯಿಸುವವರೆಗೂ, ಕಚೋರಿಯು ಬಹಳ ಜನಪ್ರಿಯವಾದ ಲಘು ಪಾಕವಿಧಾನವಾಗಿತ್ತು ಎಂದು ನಂಬಲಾಗಿದೆ.
ಹೆಸರು ಬೇಳೆ ಮತ್ತು ಇತರ ಮಸಾಲೆ ಸ್ಟಫಿಂಗ್ ನಿಂದ ತಯಾರಿಸಲಾದ ಖಾಸ್ತಾ ಕಚೋರಿ ಪಾಕವಿಧಾನವನ್ನು ನಾನು ಈಗಾಗಲೇ ಹಂಚಿಕೊಂಡಿದ್ದೇನೆ. ಆದರೆ ಅದಕ್ಕೆ ಹೋಲಿಸಿದರೆ ಬಟಾಣಿ ಕಚೋರಿಯು ಹೆಚ್ಚು ಸರಳ ಮತ್ತು ಹೆಚ್ಚು ರುಚಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಇದಲ್ಲದೆ ಮಟರ್ ಕಚೋರಿಯು ಇನ್ನೂ ಹೆಚ್ಚು ಚಪ್ಪಟೆ ಮತ್ತು ಲೇಯರ್ಡ್ ಎಂದು ನಾನು ಭಾವಿಸುತ್ತೇನೆ. ನಾನು ಹೆಚ್ಚು ಸಮಯ ನಾದಿರುವುದರಿಂದ ಕೂಡ ಇರಬಹುದು. ಅಥವಾ ಹೆಸರು ಬೇಳೆಗೆ ಹೋಲಿಸಿದರೆ ಹಸಿರು ಬಟಾಣಿಗಳು ಹೆಚ್ಚು ಜ್ಯೂಸಿ ಆಗಿರುತ್ತದೆ ಮತ್ತು ತೇವಾಂಶವನ್ನು ಹೊಂದಿರುತ್ತದೆ. ಇದೂ ಒಂದು ಕಾರಣ ಇರಬಹುದು.
ಮಟರ್ ಕಚೋರಿ ಪಾಕವಿಧಾನಕ್ಕಾಗಿ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನುನೀಡಲು ಬಯಸುತ್ತೇನೆ. ಸಾಮಾನ್ಯವಾಗಿ ರೆಸ್ಟೋರೆಂಟ್‌ನಲ್ಲಿ ಅಥವಾ ಬೀದಿ ಬದಿ ಆಹಾರ ವ್ಯಾಪಾರಿಗಳು ತಯಾರಿಸುವ ಕಚೋರಿಗಳು ಫ್ಲಫಿ ಯಾಗಿರುತ್ತೇವೆ ಏಕೆಂದರೆ ಅವರು ಹಿಟ್ಟನ ಜೊತೆಗೆ ಬೇಕಿಂಗ್ ಪೌಡರ್ ಅನ್ನು ಸೇರಿಸುತ್ತಾರೆ. ನಾನು ಈ ಪಾಕವಿಧಾನದಲ್ಲಿ ಸೇರಿಸಿಲ್ಲ, ಆದರೆ ನೀವು ಇದರಲ್ಲಿ ಒಂದು ಪಿಂಚ್ ಸೇರಿಸಬಹುದು. ಎರಡನೆಯದಾಗಿ, ಮಟರ್ ಕಚೋರಿಯನ್ನು ಸಮೋಸದ ಹಾಗೇ ಕಡಿಮೆ ಜ್ವಾಲೆಯಲ್ಲಿ ಆಳವಾಗಿ ಹುರಿಯಬೇಕು. ಇಲ್ಲದಿದ್ದರೆ ಕಚೋರಿಗಳು ಚಪ್ಪಟೆಯಾಗಿ ಗರಿಗರಿಯಾಗುವುದಿಲ್ಲ. ಕೊನೆಯದಾಗಿ, ನೀವು ಈ ಕಚೋರಿಗಳನ್ನು ಆಲೂಗೆಡ್ಡೆ ಮೇಲೋಗರದೊಂದಿಗೆ ಅಥವಾ ಮಾವಿನ ಉಪ್ಪಿನಕಾಯಿಯೊಂದಿಗೆ ಬಡಿಸಬಹುದು. ನಾನು ವೈಯಕ್ತಿಕವಾಗಿ ಸಿಹಿ ಮತ್ತು ಖಾರ ಟೊಮೆಟೊ ಕೆಚಪ್ ಸಾಸ್‌ನೊಂದಿಗೆ ಇಷ್ಟಪಡುತ್ತೇನೆ.
ಅಂತಿಮವಾಗಿ, ಈ ಪೋಸ್ಟ್‌ನೊಂದಿಗೆ ನನ್ನ ಇತರ ತಿಂಡಿಗಳು ಪಾಕವಿಧಾನಗಳ ಸಂಗ್ರಹವನ್ನು ಹೈಲೈಟ್ ಮಾಡಲು ನಾನು ಬಯಸುತ್ತೇನೆ. ಇದರಲ್ಲಿ ಮುಖ್ಯವಾಗಿ ಈರುಳ್ಳಿ ಸಮೋಸಾ, ನಿಪ್ಪಟ್ಟು, ಸೀಖ್ ಕಬಾಬ್, ಮೈಸೂರು ಬೋಂಡಾ, ರವಾ ವಡಾ, ವೆಜ್ ಫ್ರಾಂಕೀ ರೆಸಿಪಿ, ಖಾಂಡ್ವಿ, ಹರಾ ಭರಾ ಕಬಾಬ್, ಬ್ರೆಡ್ ಪಿಜ್ಜಾ ಮತ್ತು ಬೆಳ್ಳುಳ್ಳಿ ಬ್ರೆಡ್ ರೆಸಿಪಿ ಸೇರಿವೆ. ಹೆಚ್ಚುವರಿಯಾಗಿ ನನ್ನ ಇತರ ಪಾಕವಿಧಾನಗಳ ಸಂಗ್ರಹ ಮಂಡಳಿಗೆ ಭೇಟಿ ನೀಡಿ,
ಮಟರ್ ಕಚೋರಿ ಅಥವಾ ಬಟಾಣಿ ಕಚೋರಿ ಪಾಕವಿಧಾನ:
ಮಟರ್ ಕಚೋರಿ ಅಥವಾ ಬಟಾಣಿ ಕಚೋರಿಗಾಗಿ ಪಾಕವಿಧಾನ ಕಾರ್ಡ್:
ಮಟರ್ ಕಚೋರಿ ರೆಸಿಪಿ | matar kachori in kannada | ಬಟಾಣಿ ಕಚೋರಿ
ಪದಾರ್ಥಗಳು
ಕಚೋರಿ ಹಿಟ್ಟಿಗೆ:
- 1 ಕಪ್ ಮೈದಾ
- 1 ಟೀಸ್ಪೂನ್ ರವೆ / ಸೂಜಿ
- ರುಚಿಗೆ ಉಪ್ಪು
- 3 ಟೇಬಲ್ಸ್ಪೂನ್ ಎಣ್ಣೆ / ತುಪ್ಪ
- ನೀರು, ಹಿಟ್ಟನ್ನು ಬೆರೆಸಲು
- ಎಣ್ಣೆ, ಹುರಿಯಲು
ಸ್ಟಫಿಂಗ್ ಗಾಗಿ:
- 1 ಕಪ್ ಬಟಾಣಿ / ಮಟರ್, ತಾಜಾ / ಫ್ರೋಜನ್
- 2 ಟೀಸ್ಪೂನ್ ಎಣ್ಣೆ
- 1 ಇಂಚು ಶುಂಠಿ
- 1 ಹಸಿರು ಮೆಣಸಿನಕಾಯಿ
- ½ ಟೀಸ್ಪೂನ್ ಜೀರಿಗೆ
- ¼ ಟೀಸ್ಪೂನ್ ಅರಿಶಿನ
- ರುಚಿಗೆ ಉಪ್ಪು
- ½ ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
- ½ ಟೀಸ್ಪೂನ್ ಕೊತ್ತಂಬರಿ ಪುಡಿ
- ಪಿಂಚ್ ಆಫ್ ಹಿಂಗ್
- ¼ ಟೀಸ್ಪೂನ್ ಗರಂ ಮಸಾಲ ಪುಡಿ
- ¼ ಟೀಸ್ಪೂನ್ ಆಮ್ಚೂರ್ ಪುಡಿ / ಒಣ ಮಾವಿನ ಪುಡಿ
- 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು, ಸಣ್ಣಗೆ ಕತ್ತರಿಸಿದ
- ¼ ಟೀಸ್ಪೂನ್ ಫೆನ್ನೆಲ್ / ಬಡೇ ಸೋಂಪು, ಪುಡಿಮಾಡಲಾಗಿದೆ
ಸೂಚನೆಗಳು
ಮಟರ್ ಕಚೋರಿಯ ಸ್ಟಫಿಂಗ್ ಪಾಕವಿಧಾನ:
- ಮೊದಲನೆಯದಾಗಿ, ಸಣ್ಣ ಬ್ಲೆಂಡರ್ನಲ್ಲಿ 1 ಕಪ್ ಬೇಯಿಸಿದ / ಫ್ರೋಜನ್ ಬಟಾಣಿ ತೆಗೆದುಕೊಳ್ಳಿ.
- ಶುಂಠಿ ಮತ್ತು ಮೆಣಸಿನಕಾಯಿ ಕೂಡ ಸೇರಿಸಿ.
- ಯಾವುದೇ ನೀರನ್ನು ಸೇರಿಸದೆ ಒರಟಾದ ಪೇಸ್ಟ್ಗೆ ಮಿಶ್ರಣ ಮಾಡಿ. ಪಕ್ಕಕ್ಕೆ ಇರಿಸಿ.
- ಈಗ ದೊಡ್ಡ ಕಡೈನಲ್ಲಿ ಎಣ್ಣೆ ಬಿಸಿಮಾಡಿಕೊಳ್ಳಿ.
- ಜೀರಿಗೆ ಸೇರಿಸಿ ಪರಿಮಳ ಬರುವವರೆಗೆ ಹುರಿಯಿರಿ.
- ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಕೆಂಪು ಮೆಣಸಿನ ಪುಡಿ, ½ ಟೀಸ್ಪೂನ್ ಕೊತ್ತಂಬರಿ ಪುಡಿ, ¼ ಟೀಸ್ಪೂನ್ ಗರಂ ಮಸಾಲ ಪುಡಿ, ¼ ಟೀಸ್ಪೂನ್ ಆಮ್ಚೂರ್ ಪುಡಿ, ¼ ಟೀಸ್ಪೂನ್ ಫೆನ್ನೆಲ್ ಮತ್ತು ಪಿಂಚ್ ಆಫ್ ಹಿಂಗ್ ಅನ್ನು ಸೇರಿಸಿ.
- ಪರಿಮಳ ಬರುವವರೆಗೆ ಕಡಿಮೆ ಜ್ವಾಲೆಯಲ್ಲಿ ಫ್ರೈ ಮಾಡಿ.
- ಈಗ ಬಟಾಣಿ ಪೇಸ್ಟ್ ಸೇರಿಸಿ.
- ಮತ್ತು 2 ನಿಮಿಷಗಳ ಕಾಲ ಸಾಟ್ ಮಾಡಿ.
- ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಸಹ ಸೇರಿಸಿ.
- ಅಂತಿಮ ಮಿಶ್ರಣವನ್ನು ನೀಡಿ, ಪಕ್ಕಕ್ಕೆ ಇರಿಸಿ.
ಮಟರ್ ಕಚೋರಿ ಹಿಟ್ಟಿನ ಪಾಕವಿಧಾನ:
- ಮೊದಲನೆಯದಾಗಿ, ದೊಡ್ಡ ಬೌಲ್ ನಲ್ಲಿ 1 ಕಪ್ ಮೈದಾ ಸೇರಿಸಿ.
- ಈಗ ಅದಕ್ಕೆ ರವೆ ಸೇರಿಸಿ. ರವೆಯನ್ನು ಸೇರಿಸುವುದರಿಂದ ಕಚೋರಿಯು ಗರಿಗರಿಯಾಗುವಂತೆ ಮಾಡುತ್ತದೆ.
- ಇದಲ್ಲದೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- 3 ಟೀಸ್ಪೂನ್ ಎಣ್ಣೆ ಅಥವಾ ತುಪ್ಪವನ್ನು ಸಹ ಸೇರಿಸಿ. ತುಪ್ಪವನ್ನು ಸೇರಿಸುವುದರಿಂದ ಕಚೋರಿ ಹೆಚ್ಚು ರುಚಿಯಾಗಿರುತ್ತದೆ.
- ಹಿಟ್ಟನ್ನು ಎಣ್ಣೆಯಿಂದ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ, ನೀರನ್ನು ಸ್ವಲ್ಪ ಸೇರಿಸಿ ಬೆರೆಸಿಕೊಳ್ಳಿ.
- ನೀವು ನಯವಾದ ಮತ್ತು ಮೃದುವಾದ ಹಿಟ್ಟನ್ನು ರೂಪಿಸುವವರೆಗೆ ಚೆನ್ನಾಗಿ ಬೆರೆಸಿಕೊಳ್ಳಿ.
- ಹಾಗೆಯೇ, ತೇವವಾದ ಬಟ್ಟೆಯಿಂದ ಮುಚ್ಚಿ, 15 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
ಬಟಾಣಿ ಕಚೋರಿ ತಯಾರಿಕೆಯ ಪಾಕವಿಧಾನ:
- ಈಗ ಸಣ್ಣ ನಿಂಬೆ ಗಾತ್ರದ ಚೆಂಡನ್ನು ತೆಗೆದು ಚಪ್ಪಟೆ ಮಾಡಿ.
- ಈಗ 1 ಟೀಸ್ಪೂನ್ ತಯಾರಾದ ಮಟರ್ ಸ್ಟಫಿಂಗ್ ಅನ್ನು ಮಧ್ಯದಲ್ಲಿ ಇರಿಸಿ.
- ಅಂಚುಗಳನ್ನು ಒಟ್ಟಿಗೆ ತಂದು ಬಂಡಲ್ ಅನ್ನು ರಚಿಸಿ.
- ಒತ್ತಿ, ಚಪ್ಪಟೆ ಮಾಡಿ ಮೇಲ್ಭಾಗವನ್ನು ಮುಚ್ಚಿ.
- ಇದಲ್ಲದೆ, ಅಂಚುಗಳನ್ನು ನಿಧಾನವಾಗಿ ಪೂರಿಯ ಅಳತೆಗೆ ಒತ್ತಿ ಚಪ್ಪಟೆ ಮಾಡಿ.
- ಎಣ್ಣೆ ಮಧ್ಯಮ ಬಿಸಿಯಾಗಿರುವಾಗ, ಒಂದು ಕಚೋರಿ ಸೇರಿಸಿ.
- ಒಂದು ನಿಮಿಷ ಅಥವಾ ಅವು ತೇಲುವವರೆಗೂ ಅದನ್ನು ಮುಟ್ಟಬೇಡಿ. ನಂತರ ಚಮಚದೊಂದಿಗೆ ಒತ್ತಿರಿ. ಕಚೋರಿಯನ್ನು ತಿರುಗಿಸಿ, ಚಿನ್ನದ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಅಂತಿಮವಾಗಿ, ಮಟರ್ ಕಚೋರಿಯನ್ನು ಹಾಗೆಯೇ ಅಥವಾ ಹಸಿರು ಚಟ್ನಿ ಮತ್ತು ಹುರಿದ ಮೆಣಸಿನಕಾಯಿಯೊಂದಿಗೆ ಬಡಿಸಿ.
ಹಂತ ಹಂತದ ಫೋಟೋದೊಂದಿಗೆ ಮಟರ್ ಕಚೋರಿ ಮಾಡುವುದು ಹೇಗೆ:

ಟಿಪ್ಪಣಿಗಳು:
- ಮೊದಲನೆಯದಾಗಿ, ಮಧ್ಯಮ ಜ್ವಾಲೆಯ ಮೇಲೆ ಕಚೋರಿಗಳನ್ನು ಫ್ರೈ ಮಾಡಿ, ಇಲ್ಲದಿದ್ದರೆ ಅವುಗಳು ಗರಿಗರಿಯಾಗುವುದಿಲ್ಲ.
- ಇದಲ್ಲದೆ, ಕಚೋರಿಯನ್ನು ಚಪ್ಪಟೆ ಮಾಡಲು ನೀವು ರೋಲಿಂಗ್ ಪಿನ್ ಅನ್ನು ಬಳಸಬಹುದು.
- ಹಾಗೆಯೇ, ನಿಮ್ಮ ಆದ್ಯತೆಗೆ ಅನುಗುಣವಾಗಿ ಸ್ಟಫಿಂಗ್ ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.
- ಮೇಲಾಗಿ, ಹಿಟ್ಟನ್ನು ಬೆರೆಸುವಾಗ ಎಣ್ಣೆಯನ್ನು ಸೇರಿಸಿದರೆ, ಕಾಚೋರಿಗಳು ಚೆನ್ನಾಗಿ ಆಗುತ್ತವೆ.
- ಅಂತಿಮವಾಗಿ, ನೀವು ಮಟರ್ ಕಚೋರಿಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ, ಮಟರ್ ಕಚೋರಿ ಚಾಟ್ ತಯಾರಿಸಬಹುದು.