ವರ್ಮಿಸೆಲ್ಲಿ ಕಸ್ಟರ್ಡ್ ರೆಸಿಪಿ | vermicelli custard in kannada

0

ವರ್ಮಿಸೆಲ್ಲಿ ಕಸ್ಟರ್ಡ್ ಪಾಕವಿಧಾನ | ಸೆಮಿಯಾ ಕಸ್ಟರ್ಡ್ ಫಲೂಡಾ | ಸೇವಾಯ್ ಕಸ್ಟರ್ಡ್ನ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಕಸ್ಟರ್ಡ್ ಪೌಡರ್ ಮತ್ತು ವರ್ಮಿಸೆಲ್ಲಿಯಿಂದ ಮಾಡಿದ ಆಸಕ್ತಿದಾಯಕ ಮತ್ತು ಟೇಸ್ಟಿ ಸಿಹಿ ಪಾಕವಿಧಾನವಾಗಿದೆ. ಮೂಲತಃ ಇದು ಸಾಂಪ್ರದಾಯಿಕ ಹಾಲು ಆಧಾರಿತ ಸೆಮಿಯಾ ಖೀರ್‌ ಗೆ ಹಣ್ಣು ಆಧಾರಿತ ಕಸ್ಟರ್ಡ್ ಪಾಕವಿಧಾನದ ಸಮ್ಮಿಳನವಾಗಿದೆ. ಇದು ಟೇಸ್ಟಿ ಮತ್ತು ಕೆನೆಯುಕ್ತ ಸಿಹಿ ಪಾಕವಿಧಾನವಾಗಿದ್ದು, ಇದನ್ನು ಯಾವುದೇ ರೀತಿಯ ಸಂದರ್ಭ ಮತ್ತು ಆಚರಣೆಗಳಿಗೆ ಸುಲಭವಾಗಿ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಬಹುದು.ವರ್ಮಿಸೆಲ್ಲಿ ಕಸ್ಟರ್ಡ್ ಪಾಕವಿಧಾನ

ವರ್ಮಿಸೆಲ್ಲಿ ಕಸ್ಟರ್ಡ್ ಪಾಕವಿಧಾನ | ಸೇಮಿಯಾ ಕಸ್ಟರ್ಡ್ ಫಲೂಡಾ | ಸೆವಾಯಿ ಕಸ್ಟರ್ಡ್ನ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಕಸ್ಟರ್ಡ್ ಆಧಾರಿತ ಪಾಕವಿಧಾನಗಳು ಭಾರತದಾದ್ಯಂತ ಬಹಳ ಸಾಮಾನ್ಯವಾಗಿದೆ ಮತ್ತು ಇದನ್ನು ಅಸಂಖ್ಯಾತ ಸಂದರ್ಭಗಳಿಗೆ ಮತ್ತು ಕಾರಣಗಳಿಗಾಗಿ ತಯಾರಿಸಲಾಗುತ್ತದೆ. ಇದು ಭಾರತೀಯರ ರುಚಿಗಳನ್ನು ಪೂರೈಸಲು ಮತ್ತು ಹೊಂದಿಸಲು ವಿವಿಧ ರೀತಿಯ ರೂಪಾಂತರಕ್ಕೆ ಹೋಗಿದೆ. ಅಂತಹ ಒಂದು ಸುಲಭ ವ್ಯತ್ಯಾಸದ ಕಸ್ಟರ್ಡ್ ಸಿಹಿ ಪಾಕವಿಧಾನವೆಂದರೆ ಅದು ವರ್ಮಿಸೆಲ್ಲಿ ಕಸ್ಟರ್ಡ್ ಪಾಕವಿಧಾನ. ಇದು ಕೆನೆಯುಕ್ತ ಮತ್ತು ವಿಭಿನ್ನ ರುಚಿಗೆ ಅತ್ಯಂತ  ಹೆಸರುವಾಸಿಯಾಗಿದೆ.

ನಾನು ಕಸ್ಟರ್ಡ್ ಪಾಕವಿಧಾನದ ಅಪಾರ ಅಭಿಮಾನಿಯಾಗಿದ್ದೇನೆ ಮತ್ತು ಹಬ್ಬಗಳ ಆಚರಣೆಗಾಗಿ ನಾನು ಯಾವಾಗಲೂ ವಿವಿಧ ರೀತಿಯ ಕಸ್ಟರ್ಡ್ ಸಿಹಿತಿಂಡಿಗಳನ್ನು ತಯಾರಿಸುತ್ತೇನೆ. ಅತ್ಯಂತ ಸಾಮಾನ್ಯವಾದ ಈ ಫ್ರೂಟ್ ಕಸ್ಟರ್ಡ್ ಗೆ ವಿವಿಧ ರೀತಿಯ ಸೀಸನಲ್ ಹಣ್ಣುಗಳನ್ನು ಸೇರಿಸುವ ಮೂಲಕ ನಾನು ಇದನ್ನು ತಯಾರಿಸುತ್ತೇನೆ. ಹಣ್ಣು ಆಧಾರಿತ ಕಸ್ಟರ್ಡ್ ಜೊತೆಗೆ, ನಾನು ಕಸ್ಟರ್ಡ್ ಹಲ್ವಾ, ಚಾಕೊಲೇಟ್ ಮೌಸ್ಸ್, ಕ್ಯಾರಮೆಲ್ ಕಸ್ಟರ್ಡ್, ಕೇಕ್ ಮತ್ತು ಪಾಪ್ಸಿಕಲ್ನೊಂದಿಗೆ ಕೂಡ ಇದನ್ನು ಪ್ರಯತ್ನಿಸಿದೆ. ಅದೇ ಸಂಪ್ರದಾಯವನ್ನು ಮುಂದುವರೆಸುತ್ತಾ, ನಾನು ಇನ್ನೂ ಒಂದು ಕಸ್ಟರ್ಡ್ ವ್ಯತ್ಯಾಸ ಪಾಕವಿಧಾನದೊಂದಿಗೆ ಬಂದಿದ್ದೇನೆ. ಇಲ್ಲಿ ಸರಳ ಸೆಮಿಯಾ ಖೀರ್ ಅನ್ನು ಕೆನೆಯುಕ್ತ ಕಸ್ಟರ್ಡ್ ಹಾಲಿನೊಂದಿಗೆ ಬೆರೆಸಲಾಗುತ್ತದೆ. ಇದಲ್ಲದೆ, ನಾನು ಇದನ್ನು ಫಲೂಡಾ ರೀತಿಯಲ್ಲಿ ಜೋಡಿಸಿದ್ದೇನೆ, ಇದು ಇನ್ನಷ್ಟು ರುಚಿಯನ್ನಾಗಿಸುತ್ತದೆ. ನೀವು ವರ್ಮಿಸೆಲ್ಲಿ ಮತ್ತು ಕಸ್ಟರ್ಡ್ ಅನ್ನು ಬೆರೆಸಿ ಕೂಡ ಇದನ್ನು ಬಡಿಸಬಹುದು, ಆದರೆ ಇವುಗಳನ್ನು ಲೇಯರ್ ಮಾಡುವ ಮೂಲಕ ಇದು ತುಂಬಾ ಆಕರ್ಷಕವಾಗಿರುತ್ತದೆ.

ಸೇಮಿಯಾ ಕಸ್ಟರ್ಡ್ ಫಲೂಡಾನಾನು ಈ ವರ್ಮಿಸೆಲ್ಲಿ ಕಸ್ಟರ್ಡ್ ಪಾಕವಿಧಾನಕ್ಕೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನುನೀಡಲು ಬಯಸುತ್ತೇನೆ. ಮೊದಲನೆಯದಾಗಿ, ಯಾವುದೇ ಸೆಮಿಯಾ ಆಧಾರಿತ ಸಿಹಿ ಪಾಕವಿಧಾನಕ್ಕಾಗಿ ಹುರಿದ ವರ್ಮಿಸೆಲ್ಲಿಯನ್ನು ಬಳಸಲು ನಾನು ಯಾವಾಗಲೂ ಶಿಫಾರಸು ಮಾಡುತ್ತೇವೆ. ನೀವು ಈ ಸಿಹಿತಿಂಡಿಗೆ ಕೂಡ ಇದೇ ರೀತಿ ಬಳಸಬೇಕು. ನಿಮ್ಮ ಸ್ಥಳೀಯ ಕಿರಾಣಿ ಅಂಗಡಿಯಿಂದ ಹುರಿದ ವರ್ಮಿಸೆಲ್ಲಿಯನ್ನು ನೀವು ಪಡೆದು ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು. ಎರಡನೆಯದಾಗಿ, ಇದನ್ನು ತಣ್ಣಗೆ ಅಥವಾ ಬಿಸಿಯಾಗಿ ನೀಡಬಹುದು. ಆದರೆ ನನ್ನ ವೈಯಕ್ತಿಕ ಆದ್ಯತೆಯೆಂದರೆ ಅದನ್ನು ತಣ್ಣಗಾಗಿಸುವುದು. ಅದು ವಿಶ್ರಾಂತಿ ಪಡೆಯುವಾಗ, ದಪ್ಪವಾಗುತ್ತದೆ ಮತ್ತು ಹೆಚ್ಚು ಕೆನೆಯುಕ್ತವಾಗುತ್ತದೆ. ಕೊನೆಯದಾಗಿ, ಈ ಪಾಕವಿಧಾನಕ್ಕಾಗಿ ನೀವು ಯಾವುದೇ ರೀತಿಯ ಹಣ್ಣುಗಳನ್ನು ಸೇರಿಸಬಹುದು. ಆದಾಗ್ಯೂ, ಟ್ರಾಪಿಕಲ್ ಹಣ್ಣಿನ ಆಯ್ಕೆಯ ಮೂಲಕ ಈ ಮಿಶ್ರಣವನ್ನು ಹೆಚ್ಚು ವರ್ಣರಂಜಿತವನ್ನಾಗಿ ಮಾಡಬಹುದು.

ಅಂತಿಮವಾಗಿ, ವರ್ಮಿಸೆಲ್ಲಿ ಕಸ್ಟರ್ಡ್ ಪಾಕವಿಧಾನದ ಈ ಪೋಸ್ಟ್‌ನೊಂದಿಗೆ ನನ್ನ ಇತರ ಭೋಜನ ನಂತರದ ಸಿಹಿ ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸುವಂತೆ ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ನನ್ನ ಇತರ ವಿವರವಾದ ಪಾಕವಿಧಾನಗಳಾದ ಪ್ರನ್ಹರಾ, ಬಟರ್‌ಸ್ಕಾಚ್ ಐಸ್‌ಕ್ರೀಮ್, ಬಾಳೆಹಣ್ಣಿನ ಐಸ್ ಕ್ರೀಮ್, ರಸ್‌ಗುಲ್ಲಾ, ಚಾಕೊಲೇಟ್ ಕುಲ್ಫಿ, ಶ್ರೀಖಂಡ್, ಭಪಾ ದೋಯಿ, ಮಾವಿನ ಮೌಸ್ಸ್, ಮಾವಿನ ಮಸ್ತಾನಿ, ಮಾವಿನ ಜೆಲ್ಲಿ. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಸಂಬಂಧಿತ ಪಾಕವಿಧಾನ ವಿಭಾಗಗಳನ್ನು ಹೈಲೈಟ್ ಮಾಡಲು ಬಯಸುತ್ತೇನೆ,

ವರ್ಮಿಸೆಲ್ಲಿ ಕಸ್ಟರ್ಡ್ ವೀಡಿಯೊ ಪಾಕವಿಧಾನ:

Must Read:

ಸೆಮಿಯಾ ಕಸ್ಟರ್ಡ್ ಫಲೂಡಾ ಪಾಕವಿಧಾನ ಕಾರ್ಡ್:

semiya custard falooda

ವರ್ಮಿಸೆಲ್ಲಿ ಕಸ್ಟರ್ಡ್ ರೆಸಿಪಿ | vermicelli custard in kannada

No ratings yet
ತಯಾರಿ ಸಮಯ: 10 minutes
ಅಡುಗೆ ಸಮಯ: 20 minutes
ಒಟ್ಟು ಸಮಯ : 30 minutes
ಸೇವೆಗಳು: 4 ಸೇವೆಗಳು
AUTHOR: HEBBARS KITCHEN
ಕೋರ್ಸ್: ಸಿಹಿ
ಪಾಕಪದ್ಧತಿ: ಭಾರತೀಯ
ಕೀವರ್ಡ್: ವರ್ಮಿಸೆಲ್ಲಿ ಕಸ್ಟರ್ಡ್ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ವರ್ಮಿಸೆಲ್ಲಿ ಕಸ್ಟರ್ಡ್ ಪಾಕವಿಧಾನ

ಪದಾರ್ಥಗಳು

ಸೇಮಿಯಾ ಕಸ್ಟರ್ಡ್ಗಾಗಿ:

  • ½ ಟೀಸ್ಪೂನ್ ತುಪ್ಪ
  • ½ ಕಪ್ ವರ್ಮಿಸೆಲ್ಲಿ / ಸೇಮಿಯಾ
  • 4 ಕಪ್ ಹಾಲು, ಪೂರ್ಣ ಕೆನೆಯುಕ್ತ
  • ¼ ಟೀಸ್ಪೂನ್ ಕೇಸರ್ / ಕೇಸರಿ
  • ¼ ಕಪ್ ಸಕ್ಕರೆ
  • 2 ಟೇಬಲ್ಸ್ಪೂನ್ ಕಸ್ಟರ್ಡ್ ಪುಡಿ, ವೆನಿಲ್ಲಾ
  • ½ ಕಪ್ ಹಾಲು

ಸರ್ವ್ ಮಾಡಲು (1 ಗ್ಲಾಸ್):

  • 2 ಟೇಬಲ್ಸ್ಪೂನ್ ಸಬ್ಜಾ
  • 2 ಟೇಬಲ್ಸ್ಪೂನ್ ದಾಳಿಂಬೆ
  • 5 ದ್ರಾಕ್ಷಿ, ಕತ್ತರಿಸಿದ
  • 2 ಟೇಬಲ್ಸ್ಪೂನ್ ಮಾವು, ಕತ್ತರಿಸಿದ
  • 2 ಟೇಬಲ್ಸ್ಪೂನ್ ಸೇಬು, ಕತ್ತರಿಸಿದ
  • 2 ಟೇಬಲ್ಸ್ಪೂನ್ ಬೀಜಗಳು, ಕತ್ತರಿಸಿದ
  • 2 ಟೇಬಲ್ಸ್ಪೂನ್ ಟುಟ್ಟಿ ಫ್ರುಟ್ಟಿ
  • 1 ಚೆರ್ರಿ

ಸೂಚನೆಗಳು

  • ಮೊದಲನೆಯದಾಗಿ, ಬಾಣಲೆಯಲ್ಲಿ ½ ಟೀಸ್ಪೂನ್ ತುಪ್ಪದ ಜೊತೆ ½ ಕಪ್ ವರ್ಮಿಸೆಲ್ಲಿ ಹುರಿಯಿರಿ.
  • ಸೇಮಿಯಾ ಗೋಲ್ಡನ್ ಬ್ರೌನ್ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
  • ದೊಡ್ಡ ಕಡಾಯಿಯಲ್ಲಿ, 4 ಕಪ್ ಹಾಲು ಮತ್ತು ¼ ಟೀಸ್ಪೂನ್ ಕೇಸರಿ ಸೇರಿಸಿ ಬಿಸಿ ಮಾಡಿ.
  • ಚೆನ್ನಾಗಿ ಬೆರೆಸಿ ಹಾಲನ್ನು ಕುದಿಸಿ.
  • ಹುರಿದ ಸೇಮಿಯಾವನ್ನು ಹಾಲಿನಲ್ಲಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಈಗ ¼ ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • 7 ನಿಮಿಷ ಅಥವಾ ಸೇಮಿಯಾ ಸಂಪೂರ್ಣವಾಗಿ ಬೇಯಿಸುವವರೆಗೆ ಕುದಿಸಿ.
  • ಸಣ್ಣ ಬಟ್ಟಲಿನಲ್ಲಿ 2 ಟೀಸ್ಪೂನ್ ಕಸ್ಟರ್ಡ್ ಪೌಡರ್ ಮತ್ತು ½ ಕಪ್ ಹಾಲು ತೆಗೆದುಕೊಳ್ಳಿ.
  • ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  • ಅದನ್ನು ಕಡಾಯಿ ಗೆ ಸುರಿಯಿರಿ ಮತ್ತು ನಿರಂತರವಾಗಿ ಬೆರೆಸಿರಿ.
  • ಹಾಲು ದಪ್ಪವಾಗುವವರೆಗೆ ಮತ್ತು ಕೆನೆಯುಕ್ತ ವಾಗುವವವರೆಗೆ ಚೆನ್ನಾಗಿ ಬೇಯಿಸಿ.
  • ಕಸ್ಟರ್ಡ್ ಸೆಮಿಯಾವನ್ನು ದೊಡ್ಡ ಬಟ್ಟಲಿನಲ್ಲಿ ವರ್ಗಾಯಿಸಿ.
  • ಸಂಪೂರ್ಣವಾಗಿ ತಣ್ಣಗಾಗಿಸಿ, ಹಾಗೂ 2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ.
  • ಸರ್ವ್ ಮಾಡಲು, ಎತ್ತರದ ಗಾಜಿನ ಲೋಟೆಯನ್ನು ತೆಗೆದುಕೊಂಡು 2 ಟೀಸ್ಪೂನ್ ಸಬ್ಜಾ ಸೇರಿಸಿ. ಸಬ್ಜಾ ತಯಾರಿಸಲು, ಸಬ್ಜಾ ಬೀಜಗಳನ್ನು ನೀರಿನಲ್ಲಿ 15 ನಿಮಿಷಗಳ ಕಾಲ ಅಥವಾ ಅದು ಉಬ್ಬುವವರೆಗೆ ನೆನೆಸಿಡಿ.
  • ¼ ಕಪ್ ತಣ್ಣಗಾಗಿರುವ ವರ್ಮಿಸೆಲ್ಲಿ ಕಸ್ಟರ್ಡ್ ಸೇರಿಸಿ.
  • ಈಗ 2 ಟೀಸ್ಪೂನ್ ದಾಳಿಂಬೆ, 5 ದ್ರಾಕ್ಷಿ, 2 ಟೀಸ್ಪೂನ್ ಮಾವು ಮತ್ತು 2 ಟೀಸ್ಪೂನ್ ಸೇಬನ್ನು ಹಾಕಿ.
  • ಮತ್ತಷ್ಟು, ¼ ಕಪ್ ತಣ್ಣಗಾಗಿರುವ ವರ್ಮಿಸೆಲ್ಲಿ ಕಸ್ಟರ್ಡ್ ಅನ್ನು ಸುರಿಯಿರಿ.
  • 2 ಟೀಸ್ಪೂನ್ ಬೀಜಗಳು ಮತ್ತು 2 ಟೀಸ್ಪೂನ್ ಟುಟ್ಟಿ ಫ್ರೂಟಿಯೊಂದಿಗೆ ಟೊಪ್ಪಿನ್ಗ್ಸ್ ಮಾಡಿ.
  • ಅಂತಿಮವಾಗಿ, ಚೆರ್ರಿ ಜೊತೆ ಅಲಂಕರಿಸಿ ವರ್ಮಿಸೆಲ್ಲಿ ಕಸ್ಟರ್ಡ್ ಅನ್ನು ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ವರ್ಮಿಸೆಲ್ಲಿ ಕಸ್ಟರ್ಡ್  ಹೇಗೆ ಮಾಡುವುದು:

  1. ಮೊದಲನೆಯದಾಗಿ, ಬಾಣಲೆಯಲ್ಲಿ ½ ಟೀಸ್ಪೂನ್ ತುಪ್ಪದ ಜೊತೆ ½ ಕಪ್ ವರ್ಮಿಸೆಲ್ಲಿ ಹುರಿಯಿರಿ.
  2. ಸೇಮಿಯಾ ಗೋಲ್ಡನ್ ಬ್ರೌನ್ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
  3. ದೊಡ್ಡ ಕಡಾಯಿಯಲ್ಲಿ, 4 ಕಪ್ ಹಾಲು ಮತ್ತು ¼ ಟೀಸ್ಪೂನ್ ಕೇಸರಿ ಸೇರಿಸಿ ಬಿಸಿ ಮಾಡಿ.
  4. ಚೆನ್ನಾಗಿ ಬೆರೆಸಿ ಹಾಲನ್ನು ಕುದಿಸಿ.
  5. ಹುರಿದ ಸೇಮಿಯಾವನ್ನು ಹಾಲಿನಲ್ಲಿ ಸೇರಿಸಿ ಚೆನ್ನಾಗಿ ಬೆರೆಸಿ.
  6. ಈಗ ¼ ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  7. 7 ನಿಮಿಷ ಅಥವಾ ಸೇಮಿಯಾ ಸಂಪೂರ್ಣವಾಗಿ ಬೇಯಿಸುವವರೆಗೆ ಕುದಿಸಿ.
  8. ಸಣ್ಣ ಬಟ್ಟಲಿನಲ್ಲಿ 2 ಟೀಸ್ಪೂನ್ ಕಸ್ಟರ್ಡ್ ಪೌಡರ್ ಮತ್ತು ½ ಕಪ್ ಹಾಲು ತೆಗೆದುಕೊಳ್ಳಿ.
  9. ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  10. ಅದನ್ನು ಕಡಾಯಿ ಗೆ ಸುರಿಯಿರಿ ಮತ್ತು ನಿರಂತರವಾಗಿ ಬೆರೆಸಿರಿ.
  11. ಹಾಲು ದಪ್ಪವಾಗುವವರೆಗೆ ಮತ್ತು ಕೆನೆಯುಕ್ತ ವಾಗುವವವರೆಗೆ ಚೆನ್ನಾಗಿ ಬೇಯಿಸಿ.
  12. ಕಸ್ಟರ್ಡ್ ಸೆಮಿಯಾವನ್ನು ದೊಡ್ಡ ಬಟ್ಟಲಿನಲ್ಲಿ ವರ್ಗಾಯಿಸಿ.
  13. ಸಂಪೂರ್ಣವಾಗಿ ತಣ್ಣಗಾಗಿಸಿ, ಹಾಗೂ 2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ.
  14. ಸರ್ವ್ ಮಾಡಲು, ಎತ್ತರದ ಗಾಜಿನ ಲೋಟೆಯನ್ನು ತೆಗೆದುಕೊಂಡು 2 ಟೀಸ್ಪೂನ್ ಸಬ್ಜಾ ಸೇರಿಸಿ. ಸಬ್ಜಾ ತಯಾರಿಸಲು, ಸಬ್ಜಾ ಬೀಜಗಳನ್ನು ನೀರಿನಲ್ಲಿ 15 ನಿಮಿಷಗಳ ಕಾಲ ಅಥವಾ ಅದು ಉಬ್ಬುವವರೆಗೆ ನೆನೆಸಿಡಿ.
  15. ¼ ಕಪ್ ತಣ್ಣಗಾಗಿರುವ ವರ್ಮಿಸೆಲ್ಲಿ ಕಸ್ಟರ್ಡ್ ಸೇರಿಸಿ.
  16. ಈಗ 2 ಟೀಸ್ಪೂನ್ ದಾಳಿಂಬೆ, 5 ದ್ರಾಕ್ಷಿ, 2 ಟೀಸ್ಪೂನ್ ಮಾವು ಮತ್ತು 2 ಟೀಸ್ಪೂನ್ ಸೇಬನ್ನು ಹಾಕಿ.
  17. ಮತ್ತಷ್ಟು, ¼ ಕಪ್ ತಣ್ಣಗಾಗಿರುವ ವರ್ಮಿಸೆಲ್ಲಿ ಕಸ್ಟರ್ಡ್ ಅನ್ನು ಸುರಿಯಿರಿ.
  18. 2 ಟೀಸ್ಪೂನ್ ಬೀಜಗಳು ಮತ್ತು 2 ಟೀಸ್ಪೂನ್ ಟುಟ್ಟಿ ಫ್ರೂಟಿಯೊಂದಿಗೆ ಟೊಪ್ಪಿನ್ಗ್ಸ್ ಮಾಡಿ.
  19. ಅಂತಿಮವಾಗಿ, ಚೆರ್ರಿ ಜೊತೆ ಅಲಂಕರಿಸಿ ವರ್ಮಿಸೆಲ್ಲಿ ಕಸ್ಟರ್ಡ್ ಅನ್ನು ಆನಂದಿಸಿ.
    ವರ್ಮಿಸೆಲ್ಲಿ ಕಸ್ಟರ್ಡ್ ಪಾಕವಿಧಾನ

ಟಿಪ್ಪಣಿಗಳು:

  • ಮೊದಲನೆಯದಾಗಿ, ಕಸ್ಟರ್ಡ್ ರುಚಿಯಾಗಿರಲು ನಿಮ್ಮ ಆಯ್ಕೆಯ ಒಣ ಹಣ್ಣುಗಳನ್ನು ಸೇರಿಸಿ.
  • ಹಾಗೆಯೇ, ನಿಮ್ಮ ಆಯ್ಕೆ ಹಾಗೂ ರುಚಿಗೆ ತಕ್ಕಂತೆ ಕಸ್ಟರ್ಡ್ ಪುಡಿಯನ್ನು ನೀವು ಬಳಸಬಹುದು.
  • ನೀವು ಎಲ್ಲಾ ಬೀಜಗಳು ಮತ್ತು ಹಣ್ಣುಗಳನ್ನು ಮುಂಚಿತವಾಗಿಯೇ ಬೆರಸಿ ಬಡಿಸಬಹುದು. ಆದಾಗ್ಯೂ, ಗಾಜಿನಲ್ಲಿ ಜೋಡಿಸುವುದು ಹೆಚ್ಚು ಆಕರ್ಷಕವನ್ನಾಗಿಸುತ್ತದೆ.
  • ಅಂತಿಮವಾಗಿ, ತಣ್ಣಗೆ ಬಡಿಸಿದಾಗ ವರ್ಮಿಸೆಲ್ಲಿ ಕಸ್ಟರ್ಡ್ / ಸೇಮಿಯಾ ಕಸ್ಟರ್ಡ್ ರೆಸಿಪಿ ಉತ್ತಮ ರುಚಿ ನೀಡುತ್ತದೆ.