ಕಾಶ್ಮೀರಿ ದಮ್ ಆಲೂ ರೆಸಿಪಿ | ಅಧಿಕೃತ ಕಾಶ್ಮೀರಿ ದಮ್ ಆಲೂ ಹೇಗೆ ಮಾಡುವುದು ಎಂಬುವುದರ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಇದು ಮಸಾಲೆಯುಕ್ತ ಮತ್ತು ಸುವಾಸನೆಯ ಸಣ್ಣ ಅಥವಾ ಬೇಬಿ ಆಲೂಗೆಡ್ಡೆಯೊಂದಿಗೆ ತಯಾರಿಸಿದ ಖಾದ್ಯವಾಗಿದ್ದು, ಸಾಂಪ್ರದಾಯಿಕ ಕಾಶ್ಮೀರಿ ಪಂಡಿತ್ ಪಾಕಪದ್ಧತಿಯಿಂದ ಬಂದಿದೆ. ದಮ್ ಆಲೂ ರೆಸಿಪಿ ಭಾರತದಾದ್ಯಂತ ಜನಪ್ರಿಯ ಮೇಲೋಗರವಾಗಿದ್ದು, ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಹಲವಾರು ವಿಭಿನ್ನ ಆವೃತ್ತಿಗಳನ್ನು ಹೊಂದಿದೆ. ಆದರೆ ಈ ಪಾಕವಿಧಾನ ಕಾಶ್ಮೀರ ಕಣಿವೆಯಲ್ಲಿ ನಿರ್ದಿಷ್ಟವಾಗಿದೆ ಮತ್ತು ಸ್ಥಳೀಯವಾಗಿ ಲಭ್ಯವಿರುವ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ.
ಈ ಪಾಕವಿಧಾನವನ್ನು ನನ್ನ ಓದುಗರೊಬ್ಬರಾದ ‘ರುಬೈ ಸೋನಿ’ ಎಂಬುವವರು ಹಂಚಿಕೊಂಡಿದ್ದಾರೆ. ಅವರು ಕಾಶ್ಮೀರ ಮೂಲದವರು. ಕಾಶ್ಮೀರಿ ದಮ್ ಆಲೂವಿನ ಸಮಗ್ರ ಪಾಕವಿಧಾನ ಮತ್ತು ಅನೇಕ ಮುಖ್ಯವಾಗಿ ಬೇಬಿ ಆಲೂಗಡ್ಡೆಯ ಸರಿಯಾದ ಗಾತ್ರವನ್ನು ಆಯ್ಕೆ ಮಾಡಲು ನನಗೆ ಮಾರ್ಗದರ್ಶನ ಮತ್ತು ಸಹಾಯ ಮಾಡಿದ್ದಕ್ಕಾಗಿ ಅವರಿಗೆ ಅನೇಕ ಧನ್ಯವಾದಗಳು. ವಾಸ್ತವವಾಗಿ, ನಾನು ಈಗಾಗಲೇ ದಮ್ ಆಲೂವಿನ ಪಂಜಾಬಿ ಶೈಲಿಯ ಪಾಕಪದ್ಧತಿಯಿಂದ ಪಡೆದ ಮತ್ತೊಂದು ಆವೃತ್ತಿಯನ್ನು ಹಂಚಿಕೊಂಡಿದ್ದೇನೆ. ಈ ಪಾಕವಿಧಾನ ಅದಕ್ಕೆ ಸಾಕಷ್ಟು ಹೋಲುತ್ತದೆ, ಆದರೆ ಗಮನಾರ್ಹ ವ್ಯತ್ಯಾಸದೊಂದಿಗೆ ಸ್ವಲ್ಪ ಭಿನ್ನವಾಗಿದೆ. ವಿಶೇಷವಾಗಿ ಗೋಡಂಬಿ ಅಥವಾ ಟೊಮೆಟೊ ಬಳಕೆಯನ್ನು ಕಶ್ಮೀರ ಕಣಿವೆಯ ಸ್ಥಳೀಯವಲ್ಲದ ಕಾರಣ ಕಟ್ಟುನಿಟ್ಟಾಗಿ ಅದನ್ನು ನಿಷೇಧಿಸಲಾಗಿದೆ. ಈ ಮೇಲೋಗರದ ಬೇಸ್ ಅನ್ನು ಮುಖ್ಯವಾಗಿ ಮೊಸರಿನೊಂದಿಗೆ ತಯಾರಿಸಲಾಗುತ್ತದೆ. ಕಾಶ್ಮೀರಿ ಪಾಕಪದ್ಧತಿಯಲ್ಲಿ ಬಳಸುವ ಇತರ ಮುಖ್ಯ ಮಸಾಲೆ ಫೆನ್ನೆಲ್ ಬಳಕೆಯಾಗಿದೆ, ಇದು ಈ ಪಾಕವಿಧಾನದಲ್ಲೂ ಸಹ ಇದೆ.
ಕಾಶ್ಮೀರಿ ದಮ್ ಆಲೂ ರೆಸಿಪಿಗೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲನೆಯದಾಗಿ, ಅಧಿಕೃತ ದಮ್ ಆಲೂಗೆ, ಆಲೂಗಡ್ಡೆಯ ಗಾತ್ರವು ಬಹಳ ಮುಖ್ಯವಾಗಿದೆ. ಬೇಬಿ ಆಲೂಗಡ್ಡೆ ತುಂಬಾ ಚಿಕ್ಕದಲ್ಲ ಮತ್ತು ಖಂಡಿತವಾಗಿಯೂ ಸಾಮಾನ್ಯ ಆಲೂಗಡ್ಡೆಯ ಗಾತ್ರವಲ್ಲ ಎಂದು ಖಚಿತಪಡಿಸಿಕೊಳ್ಳಿ. ಎರಡನೆಯದಾಗಿ, ನಾನು 1 ಟೀಸ್ಪೂನ್ ಕಾಶ್ಮೀರಿ ಮೆಣಸಿನ ಪುಡಿಯನ್ನು ಸೇರಿಸಿದ್ದೇನೆ ಅದು ಮಧ್ಯಮ ಅಥವಾ ಕಡಿಮೆ ಮಸಾಲೆ ಹೊಂದುವವರಿಗೆ ಜಾಸ್ತಿ ಆಗಬಹುದು. ಆದ್ದರಿಂದ ನೀವು ಇದನ್ನು ಕಡಿಮೆ ಮಾಡಬಹುದು. ಉದಾಹರಣೆಗೆ, ¾ ಟೀಸ್ಪೂನ್ ಅಥವಾ ಅದಕ್ಕೆ ಅನುಗುಣವಾಗಿ ನಿಮ್ಮ ರುಚಿ ಅಥವಾ ಆದ್ಯತೆಯ ಪ್ರಕಾರ ಹೊಂದಿಸಬಹುದು. ಕೊನೆಯದಾಗಿ, ನಿಮಗೆ ಅಗತ್ಯವಿರುವ ಗಾತ್ರದೊಂದಿಗೆ ಬೇಬಿ ಆಲೂಗಡ್ಡೆಯನ್ನು ಕೊಂಡುಕೊಳ್ಳಲು ಸಾಧ್ಯವಾಗದಿದ್ದರೆ, ನೀವು ಸಾಮಾನ್ಯ ಆಲೂಗಡ್ಡೆಯನ್ನು ಅರ್ಧದಷ್ಟು ಕತ್ತರಿಸಬಹುದು ಮತ್ತು ಈ ಪಾಕವಿಧಾನಕ್ಕೂ ಸಹ ಅದನ್ನೇ ಬಳಸಬಹುದು.
ಅಂತಿಮವಾಗಿ, ಕಾಶ್ಮೀರಿ ದಮ್ ಆಲೂ ಪಾಕವಿಧಾನದ ಈ ಪೋಸ್ಟ್‌ನೊಂದಿಗೆ ನನ್ನ ಇತರ ಭಾರತೀಯ ಕರಿ ಮೇಲೋಗರ ಸಬ್ಜಿ ಪಾಕವಿಧಾನಗಳ ಸಂಗ್ರಹವನ್ನು ಹೈಲೈಟ್ ಮಾಡಲು ನಾನು ಬಯಸುತ್ತೇನೆ. ಇದರಲ್ಲಿ ಪಂಜಾಬಿ ದಮ್ ಆಲೂ, ಆಲೂ ಗೋಬಿ ಮಸಾಲಾ, ಆಲೂ ಜೀರಾ ಡ್ರೈ, ಮಿಕ್ಸ್ ವೆಜ್ ಸಬ್ಜಿ, ದಹಿ ಆಲೂ, ಈರುಳ್ಳಿ ಇಲ್ಲದೆ ಆಲೂ ಕರಿ, ಆಲೂ ಮಟರ್ ಮತ್ತು ಆಲೂ ಪಾಲಕ್ ರೆಸಿಪಿ ಮುಂತಾದ ಪಾಕವಿಧಾನಗಳು ಸೇರಿವೆ. ಮುಂದೆ, ನನ್ನ ಇತರ ಸಂಬಂಧಿತ ಪಾಕವಿಧಾನಗಳ ಸಂಗ್ರಹಕ್ಕೆ ಭೇಟಿ ನೀಡಿ,
ಕಾಶ್ಮೀರಿ ದಮ್ ಆಲೂ ವಿಡಿಯೋ ಪಾಕವಿಧಾನ:
ಕಾಶ್ಮೀರಿ ದಮ್ ಆಲೂ ಪಾಕವಿಧಾನ ಕಾರ್ಡ್:
ಕಾಶ್ಮೀರಿ ದಮ್ ಆಲೂ ರೆಸಿಪಿ | kashmiri dum aloo in kannada
ಪದಾರ್ಥಗಳು
ಪ್ರೆಷರ್ ಕುಕ್ ಗಾಗಿ:
- 10 ಬೇಬಿ ಆಲೂಗಡ್ಡೆ / ಆಲೂ
- 1 ಕಪ್ ನೀರು
- ಎಣ್ಣೆ, ಹುರಿಯಲು
ಮೇಲೋಗರಕ್ಕಾಗಿ:
- 2 ಟೇಬಲ್ಸ್ಪೂನ್ ಎಣ್ಣೆ
- ½ ಟೀಸ್ಪೂನ್ ಜೀರಿಗೆ / ಜೀರಾ
- 1 ಇಂಚಿನ ದಾಲ್ಚಿನ್ನಿ
- 2 ಕಪ್ಪು ಏಲಕ್ಕಿ
- 2 ಏಲಕ್ಕಿ
- 5 ಲವಂಗ
- ಚಿಟಿಕೆ ಹಿಂಗ್
- 1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
- 1 ಕಪ್ ನೀರು
- ¾ ಕಪ್ ಮೊಸರು, ವಿಸ್ಕ್ ಮಾಡಿದ
- 1 ಟೀಸ್ಪೂನ್ ಶುಂಠಿ ಪುಡಿ
- 2 ಟೀಸ್ಪೂನ್ ಫೆನ್ನೆಲ್ ಪೌಡರ್ / ಸೋಂಪು ಪೌಡರ್
- ½ ಟೀಸ್ಪೂನ್ ಉಪ್ಪು
- ¼ ಟೀಸ್ಪೂನ್ ಗರಂ ಮಸಾಲ
ಸೂಚನೆಗಳು
- ಮೊದಲನೆಯದಾಗಿ ಪ್ರೆಶರ್ ಕುಕ್ಕರ್‌ನಲ್ಲಿ 10 ಬೇಬಿ ಆಲೂಗಡ್ಡೆ ಮತ್ತು 1 ಕಪ್ ನೀರನ್ನು ತೆಗೆದುಕೊಳ್ಳಿ.
- 1 ಶಿಳ್ಳೆ ಅಥವಾ ಆಲೂಗಡ್ಡೆ ಅರ್ಧ ಬೇಯುವವರೆಗೆ ಪ್ರೆಷರ್ ಕುಕ್ ಮಾಡಿ.
- ಪ್ರೆಷರ್ ಹೋದ ನಂತರ, ಆಲೂಗಡ್ಡೆಯ ಚರ್ಮವನ್ನು ತೆಗೆಯಿರಿ.
- ಆಲೂಗಡ್ಡೆಯನ್ನು ನಿಧಾನವಾಗಿ ಫೋರ್ಕ್ ನೊಂದಿಗೆ ಇರಿಯಿರಿ, ಮಸಾಲಾವನ್ನು ಎಳೆದುಕೊಳ್ಳಲು ಇದು ಸಹಾಯ ಮಾಡುತ್ತದೆ.
- ಆಲೂಗಡ್ಡೆಯನ್ನು ಬಿಸಿ ಎಣ್ಣೆಯಲ್ಲಿ ಹುರಿಯಿರಿ. ಪರ್ಯಾಯವಾಗಿ, ಆಲೂ ಗರಿಗರಿಯಾದ ಹೊರ ಪದರವನ್ನು ಪಡೆಯುವವರೆಗೆ ಬೇಕ್ ಅಥವಾ ಏರ್ ಫ್ರೈ ಮಾಡಿ.
- ಸಾಂದರ್ಭಿಕವಾಗಿ ಬೆರೆಸಿ ಮತ್ತು ಅವು ಚಿನ್ನದ ಬಣ್ಣ ಮತ್ತು ಗರಿಗರಿಯಾಗುವವರೆಗೆ ಹುರಿಯಿರಿ.
- ಕಿಚನ್ ಟವೆಲ್ ಮೇಲೆ ಆಲೂಗಡ್ಡೆಯನ್ನು ಹರಿಸಿ, ಪಕ್ಕಕ್ಕೆ ಇರಿಸಿ.
- ಕಡಾಯಿಯಲ್ಲಿ 2 ಟೇಬಲ್ಸ್ಪೂನ್ ಎಣ್ಣೆ ಬಿಸಿ ಮಾಡಿ. ½ ಟೀಸ್ಪೂನ್ ಜೀರಿಗೆ, 1 ಇಂಚಿನ ದಾಲ್ಚಿನ್ನಿ, 2 ಕಪ್ಪು ಏಲಕ್ಕಿ, 2 ಏಲಕ್ಕಿ, 5 ಲವಂಗ ಮತ್ತು ಚಿಟಿಕೆ ಹಿಂಗ್ ಹಾಕಿ ಸಾಟ್ ಮಾಡಿ.
- ಜ್ವಾಲೆಯನ್ನು ಆಫ್ ಮಾಡಿ ಮತ್ತು 1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಸೇರಿಸಿ. ಮಸಾಲೆ ಸುಡದಹಾಗೆ ಸ್ವಲ್ಪ ಸಾಟ್ ಮಾಡಿ.
- ಈಗ, ½ ಕಪ್ ನೀರು ಮತ್ತು ¾ ಕಪ್ ಮೊಸರು ಸೇರಿಸಿ.
- ಮೊಸರು ನೀರು ಬೇರೆ ಆಗದೆ ಚೆನ್ನಾಗಿ ಸಂಯೋಜಿಸುವವರೆಗೆ ಮಿಶ್ರಣ ಮಾಡಿ.
- ಈಗ 1 ಟೀಸ್ಪೂನ್ ಶುಂಠಿ ಪುಡಿ, 2 ಟೀಸ್ಪೂನ್ ಫೆನ್ನೆಲ್ ಪೌಡರ್ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
- ಮಸಾಲೆಗಳನ್ನು ಚೆನ್ನಾಗಿ ಬೆರೆಸಲಾಗಿದೆಯಾ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
- ಹುರಿದ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- 1 ಕಪ್ ನೀರು ಸೇರಿಸಿ, ಸ್ಥಿರತೆಯನ್ನು ಹೊಂದಿಸಿ.
- ಸಾಂದರ್ಭಿಕವಾಗಿ ಕೈ ಆಡಿಸುತ್ತಾ, 30 ನಿಮಿಷಗಳ ಕಾಲ ಮುಚ್ಚಿ ಸಿಮ್ಮರ್ ನಲ್ಲಿಡಿ.
- 30 ನಿಮಿಷಗಳ ನಂತರ, ಮೇಲೋಗರವು ಎಣ್ಣೆಯನ್ನು ಬೇರ್ಪಡಿಸಿ ದಪ್ಪವಾಗಿಸುತ್ತದೆ.
- ಈಗ ¼ ಟೀಸ್ಪೂನ್ ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಅಂತಿಮವಾಗಿ, ರೋಟಿ / ಅನ್ನದೊಂದಿಗೆ ಕಾಶ್ಮೀರಿ ದಮ್ ಆಲೂ ಬಡಿಸಿ.
ಹಂತ ಹಂತದ ಫೋಟೋದೊಂದಿಗೆ ಕಾಶ್ಮೀರಿ ದಮ್ ಆಲೂ ಮಾಡುವುದು ಹೇಗೆ:

- ಅಂತಿಮವಾಗಿ, ರೋಟಿ / ಅನ್ನದೊಂದಿಗೆ ದಮ್ ಆಲೂ ಬಡಿಸಿ.
ಟಿಪ್ಪಣಿಗಳು:
- ಮೊದಲನೆಯದಾಗಿ, ಕರಿಯನ್ನು ಸ್ಪೈಸಿಯರ್ ಮಾಡಲು ಹೆಚ್ಚು ಮೆಣಸಿನ ಪುಡಿ ಸೇರಿಸಿ.
- ಗ್ರೇವಿ ಹೊಂದಲು, ಮೊಸರು ಪ್ರಮಾಣವನ್ನು ಹೆಚ್ಚಿಸಿ.
- ಹಾಗೆಯೇ, ಮೇಲೋಗರವನ್ನು ಕಡಿಮೆ ಎಣ್ಣೆಯುಕ್ತವಾಗಿಡಲು ಆಲೂಗಡ್ಡೆಯನ್ನು ಬೇಕ್ ಮಾಡಿ.
- ಅಂತಿಮವಾಗಿ, ಆಲೂಗೆಡ್ಡೆ ಎಲ್ಲಾ ಮಸಾಲವನ್ನು ಹೀರಿಕೊಳ್ಳುವುದರಿಂದ ಕಾಶ್ಮೀರಿ ದಮ್ ಆಲೂ ರೆಸಿಪಿ ಮರುದಿನ ತುಂಬಾ ರುಚಿಯಾಗಿರುತ್ತದೆ.