ಮಧ್ಯಾಹ್ನ ಊಟದ ಥಾಲಿ ರೆಸಿಪಿ | lunch thali in kannada | ಮೆಸ್ ವಾಲಿ ಥಾಲಿ

0

ಮಧ್ಯಾಹ್ನ ಊಟದ ಥಾಲಿ ಪಾಕವಿಧಾನ | ಮೆಸ್ ವಾಲಿ ಥಾಲಿ | 30 ನಿಮಿಷಗಳಲ್ಲಿ ಥಾಲಿ ಊಟದ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಸುಲಭ ಮತ್ತು ಸರಳವಾದ ವೆಜ್ ಥಾಲಿ ಅಥವಾ ಜನಪ್ರಿಯ ಮೆಸ್ ಥಾಲಿ ಪಾಕವಿಧಾನವಾಗಿದ್ದು 30 ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು. ಇದು ಮೂಲತಃ ವಿವಿಧ ಭಕ್ಷ್ಯಗಳನ್ನು ಜೋಡಿಸಿ ಗೋಳಾಕಾರದ ತಟ್ಟೆಯಲ್ಲಿ ಸೇವಿಸುವ ಸಂಪೂರ್ಣ ಭಾರತೀಯ ಊಟವಾಗಿದೆ. ಇದನ್ನು ಸಾಮಾನ್ಯವಾಗಿ ಮಧ್ಯಾಹ್ನ ಊಟದ ಸಮಯದಲ್ಲಿ ನೀಡಲಾಗುತ್ತದೆ ಆದರೆ ರಾತ್ರಿಯ ಭೋಜನಕ್ಕೆ ಹಾಗೆಯೇ ಅಥವಾ ಸ್ವಲ್ಪ ಬದಲಾವಣೆ ಮಾಡಿಕೊಂಡು ಸವಿಯಬಹುದು.
ಲಂಚ್ ಥಾಲಿ ರೆಸಿಪಿ

ಮಧ್ಯಾಹ್ನ ಊಟದ ಥಾಲಿ ಪಾಕವಿಧಾನ | ಮೆಸ್ ವಾಲಿ ಥಾಲಿ | 30 ನಿಮಿಷಗಳಲ್ಲಿ ಥಾಲಿ ಊಟದ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಭಾರತದ ಪ್ರತಿಯೊಂದು ರಾಜ್ಯ ಮತ್ತು ಪ್ರದೇಶವು ಆಹಾರದ ಒಂದು ಭಾಗವನ್ನು ತಯಾರಿಸುವ ಮತ್ತು ಪ್ಲ್ಯಾಟರ್ನಲ್ಲಿ ನೀಡುವ ತನ್ನದೇ ಆದ ಮಾರ್ಗವನ್ನು ಹೊಂದಿದೆ. ಈ ಪ್ಲ್ಯಾಟರ್ ಅಸಂಖ್ಯಾತ ಭಕ್ಷ್ಯಗಳೊಂದಿಗೆ ಜೋಡಿಸಲ್ಪಟ್ಟಿದ್ದರೂ ಸಹ, ಇದರ ಪ್ರಸ್ತುತಿಯ ಕಾರಣದಿಂದಾಗಿ ಇದನ್ನು ಥಾಲಿ ಎಂದು ಕರೆಯಲಾಗುತ್ತದೆ. ಥಾಲಿ ಪಾಕವಿಧಾನವನ್ನು ಜೋಡಿಸುವ ಮತ್ತು ಸರ್ವ್ ಮಾಡುವ ಒಂದು ವಿಧಾನವನ್ನು ಮೆಸ್ ವಾಲಿ ಥಾಲಿ ಎಂದು ಕರೆಯಲಾಗುತ್ತದೆ ಅಥವಾ ಊಟದ ಕಾಂಬೊ ಥಾಲಿ ರೆಸಿಪಿ ಎಂದು ಸಹ ಕರೆಯಲಾಗುತ್ತದೆ.

ತ್ವರಿತ ಮತ್ತು ಸುಲಭವಾದ ಥಾಲಿ ಪಾಕವಿಧಾನಗಳನ್ನು ಮಾಡಲು ನಾನು ಯಾವಾಗಲೂ ಸಾಕಷ್ಟು ವಿನಂತಿಗಳನ್ನು ಪಡೆಯುತ್ತಿದ್ದೆ. ಇದರ ಜೋಡಣೆಯ ಕಾರಣದಿಂದಾಗಿ ನಾನು ಈ ಪಾಕವಿಧಾನವನ್ನು ಮೆಸ್ ವಾಲಿ ಥಾಲಿ ಎಂದು ತೋರಿಸಿದ್ದರೂ ಸಹ, ಇದನ್ನು ಬಹಳ ಪರಿಣಾಮಕಾರಿಯಾಗಿ ತಯಾರಿಸಿದ್ದೇನೆ. ಮೊದಲಿಗೆ ದಾಲ್ ಮತ್ತು ಜೀರಾ ರೈಸ್. ಈ ಎರಡನ್ನೂ ಕುಕ್ಕರ್ ನಲ್ಲಿ ಬೇಯಿಸುವುದರಿಂದ ಸಾಕಷ್ಟು ಸಮಯವನ್ನು ಉಳಿಸಬಹದು. ಇದಲ್ಲದೆ, ನಾನು ವೊಕ್ನಲ್ಲಿ ಜೀರಾ ರೈಸ್ ಅನ್ನು ಟಾಸ್ ಮಾಡಲಿಲ್ಲ ಮತ್ತು ಜೀರಾ ಮತ್ತು ತುಪ್ಪವನ್ನು ನೀರಿನೊಂದಿಗೆ ಬೆರೆಸಿದ್ದೇನೆ. ನಂತರ, ಈರುಳ್ಳಿ ಮತ್ತು ಟೊಮೆಟೊ ಬೇಸ್, ಪನೀರ್ ಗ್ರೇವಿ, ಆಲೂ ಗೋಬಿ. ದಾಲ್ ಅನ್ನು ಒಮ್ಮೆ ತಯಾರಿಸಿದ್ದೇನೆ ಮತ್ತು ಈ ಎಲ್ಲಾ ಪಾಕವಿಧಾನಗಳಿಗೆ ಅದನ್ನೇ ಬಳಸಿದ್ದೇನೆ. ಇದು ಸಮಯವನ್ನು ಉಳಿಸುತ್ತದೆ ಮತ್ತು ಇದು ಎಲ್ಲಾ ಕರಿಗಳಿಗೆ ಸ್ಥಿರವಾದ ರುಚಿ ಮತ್ತು ಪರಿಮಳವನ್ನು ನೀಡಲು ಸಹಾಯ ಮಾಡುತ್ತದೆ. ಇದಲ್ಲದೆ, ನಾನು ಪೂರ್ವ ನಿರ್ಮಿತ ಹಿಟ್ಟನ್ನು ಬಳಸಿಕೊಂಡು ಚಪಾತಿಯನ್ನು ತಯಾರಿಸಿದ್ದೇನೆ ಮತ್ತು ರಾಯಿತಗಾಗಿ, ಯಾವುದೇ ಹೆಚ್ಚುವರಿ ಹಂತವನ್ನು ಬಳಸದೆ ತಾಜಾ ಮೊಸರಿನ ಜೊತೆಗೆ ಬೂನ್ದಿಯನ್ನು ಬೆರೆಸಿದ್ದೇನೆ.

ಮೆಸ್ ವಾಲಿ ಥಾಲಿ ರೆಸಿಪಿ ಇದಲ್ಲದೆ, ಮಧ್ಯಾಹ್ನ ಊಟದ ಥಾಲಿ ರೆಸಿಪಿಗೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲಿಗೆ, ಕುಕ್ಕರ್ ನಲ್ಲಿ, ನಾನು ಬೇಳೆ ಮತ್ತು ಅನ್ನವನ್ನು ಬೇಯಿಸಿದ್ದೇನೆ, ಆದರೆ ಇದನ್ನು ಇತರ ತರಕಾರಿಗಳಿಗೆ ಸಹ ವಿಸ್ತರಿಸಬಹುದು. ವಿಶೇಷವಾಗಿ, ನೀವು ಆಲೂಗಡ್ಡೆ ಅಥವಾ ಕ್ಯಾರೆಟ್ ಆಧಾರಿತ ಗ್ರೇವಿಯನ್ನು ತಯಾರಿಸುತ್ತಿದ್ದರೆ, ಸ್ವಲ್ಪ ಸಮಯವನ್ನು ಉಳಿಸಲು ಪ್ರೆಷರ್ ಕುಕ್ಕರ್ ನಲ್ಲಿ ಇದನ್ನು ಬೇಯಿಸಬಹುದು. ಎರಡನೆಯದಾಗಿ, ನಾನು 2-3 ಸರ್ವ್ಗಳಿಗೆ ರೈಸ್ ಮತ್ತು ದಾಲ್ ನ ಪ್ರಮಾಣವನ್ನು ಹೊಂದಿಸಿದ್ದೇನೆ ಮತ್ತು ನಿಮ್ಮ ಕುಕ್ಕರ್ ಗಾತ್ರಕ್ಕೆ ಅನುಗುಣವಾಗಿ ಹೆಚ್ಚಿನ ಸರ್ವ್ ಗಳಿಗಾಗಿ ನೀವು ಇದನ್ನು ಹೆಚ್ಚಿಸಬಹುದು. ಕೊನೆಯದಾಗಿ, ಅಡುಗೆ ಸಮಯವನ್ನು ಹೆಚ್ಚಿಸುವ ಕಾರಣದಿಂದಾಗಿ ನಾನು ಯಾವುದೇ ಸಿಹಿತಿಂಡಿಗಳನ್ನು ತಯಾರಿಸಲಿಲ್ಲ. ಆದರೆ ನೀವು ಯಾವುದೇ ಉಳಿದ ಸಿಹಿತಿಂಡಿಗಳನ್ನು ಹೊಂದಿದ್ದರೆ, ಇದನ್ನು ಪ್ರೀಮಿಯಂ ಥಾಲಿ ಮಾಡಲು ಅದನ್ನು ಬಳಸಬಹುದು.

ಅಂತಿಮವಾಗಿ, ಮಧ್ಯಾಹ್ನ ಊಟದ ಥಾಲಿ ಪಾಕವಿಧಾನದ ಈ ಪೋಸ್ಟ್ನೊಂದಿಗೆ ನನ್ನ ಇತರ ಸಂಬಂಧಿತ ಮಧ್ಯಾಹ್ನಾದ ಊಟ ಕಲ್ಪನೆಗಳು ಅಥವಾ ಥಾಲಿ ಪಾಕವಿಧಾನಗಳ ಸಂಗ್ರಹವನ್ನು ಪರೀಕ್ಷಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ಸಾಂಬಾರ್ ರೈಸ್, ಖಿಚ್ಡಿ, ಮಟರ್ ಪನೀರ್, ವೆಜ್ ಫ್ರೈಡ್ ರೈಸ್, ದೇವಸ್ಥಾನ ಶೈಲಿ ಸಾಂಬಾರ್, ಉತ್ತರ ಭಾರತೀಯ ಥಾಲಿ, ವೆಂಡಕ್ಕೈ ಮೋರ್ ಕುಲಂಬು, ಪುದಿನಾ ರೈಸ್, ಫಡಾ ನೀ ಖಿಚ್ಡಿ, ಉಳ್ಳಿ ಥೀಯಲ್ ಒಳಗೊಂಡಿವೆ. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಸಂಬಂಧಿತ ಪಾಕವಿಧಾನ ವಿಭಾಗಗಳನ್ನು ನಮೂದಿಸಲು ಇಷ್ಟಪಡುತ್ತೇನೆ,

ಮಧ್ಯಾಹ್ನ ಊಟದ ಥಾಲಿ ವೀಡಿಯೊ ಪಾಕವಿಧಾನ:

Must Read:

ಮಧ್ಯಾಹ್ನ ಊಟದ ಥಾಲಿ ಪಾಕವಿಧಾನ ಕಾರ್ಡ್:

mess wali thali recipe

ಮಧ್ಯಾಹ್ನ ಊಟದ ಥಾಲಿ ರೆಸಿಪಿ | lunch thali in kannada | ಮೆಸ್ ವಾಲಿ ಥಾಲಿ

No ratings yet
ತಯಾರಿ ಸಮಯ: 10 minutes
ಅಡುಗೆ ಸಮಯ: 30 minutes
ಒಟ್ಟು ಸಮಯ : 40 minutes
ಸೇವೆಗಳು: 3 ಸೇವೆಗಳು
AUTHOR: HEBBARS KITCHEN
ಕೋರ್ಸ್: ಥಾಲಿ
ಪಾಕಪದ್ಧತಿ: ಉತ್ತರ ಭಾರತೀಯ
ಕೀವರ್ಡ್: ಮಧ್ಯಾಹ್ನ ಊಟದ ಥಾಲಿ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಮಧ್ಯಾಹ್ನ ಊಟದ ಥಾಲಿ ಪಾಕವಿಧಾನ | ಮೆಸ್ ವಾಲಿ ಥಾಲಿ | 30 ನಿಮಿಷಗಳಲ್ಲಿ ಥಾಲಿ ಊಟ

ಪದಾರ್ಥಗಳು

ಮೂಂಗ್ ದಾಲ್ ತಡ್ಕಾಗಾಗಿ:

 • ½ ಕಪ್ ಹೆಸರು ಬೇಳೆ
 • ¼ ಟೀಸ್ಪೂನ್ ಅರಿಶಿನ
 • ½ ಟೀಸ್ಪೂನ್ ತುಪ್ಪ
 • 1 ಕಪ್ ನೀರು
 • ½ ಟೀಸ್ಪೂನ್ ಉಪ್ಪು
 • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)

ಜೀರಾ ರೈಸ್ಗಾಗಿ:

 • ½ ಕಪ್ ಬಾಸ್ಮತಿ ರೈಸ್
 • 1 ಟೀಸ್ಪೂನ್ ಜೀರಿಗೆ
 • ¼ ಟೀಸ್ಪೂನ್ ಉಪ್ಪು
 • ½ ಟೀಸ್ಪೂನ್ ತುಪ್ಪ
 • 1 ಕಪ್ ನೀರು

ಈರುಳ್ಳಿ ಟೊಮೆಟೊ ಬೇಸ್ಗಾಗಿ:

 • 2 ಟೇಬಲ್ಸ್ಪೂನ್ ಎಣ್ಣೆ
 • 1 ಟೀಸ್ಪೂನ್ ಜೀರಿಗೆ
 • 1 ಟೀಸ್ಪೂನ್ ಕಸೂರಿ ಮೇಥಿ
 • 2 ಈರುಳ್ಳಿ (ಸಣ್ಣಗೆ ಕತ್ತರಿಸಿದ)
 • 1 ಟೇಬಲ್ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
 • ½ ಟೀಸ್ಪೂನ್ ಅರಿಶಿನ
 • 1 ಟೀಸ್ಪೂನ್ ಮೆಣಸಿನ ಪುಡಿ
 • 1 ಟೀಸ್ಪೂನ್ ಕೊತ್ತಂಬರಿ ಪುಡಿ
 • ½ ಟೀಸ್ಪೂನ್ ಜೀರಾ ಪೌಡರ್
 • 3 ಟೊಮೆಟೊ (ಸಣ್ಣಗೆ ಕತ್ತರಿಸಿದ)

ಮಟರ್ ಪನೀರ್:

 • 1 ಕಪ್ ನೀರು
 • ½ ಟೀಸ್ಪೂನ್ ಉಪ್ಪು
 • ½ ಕಪ್ ಮಟರ್ / ಬಟಾಣಿ 
 • 10 ಪನೀರ್ ತುಂಡುಗಳು (ಘನ)
 • ¼ ಟೀಸ್ಪೂನ್ ಗರಂ ಮಸಾಲಾ
 • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)

ಆಲೂ ಗೋಬಿ ಸಬ್ಜಿಗಾಗಿ:

 • 3 ಟೀಸ್ಪೂನ್ ಎಣ್ಣೆ
 • 2 ಆಲೂಗಡ್ಡೆ (ಸಿಪ್ಪೆ ತೆಗೆದ ಮತ್ತು ಘನ)
 • 1 ಕಪ್ ಹೂಕೋಸು / ಗೋಬಿ (ಫ್ಲೋರೆಟ್ಸ್)
 • ¼ ಟೀಸ್ಪೂನ್ ಅರಿಶಿನ
 • ½ ಟೀಸ್ಪೂನ್ ಉಪ್ಪು
 • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)

ಸೂಚನೆಗಳು

ಕುಕ್ಕರ್ ನಲ್ಲಿ ಜೀರಾ ರೈಸ್ ಮಾಡುವುದು ಹೇಗೆ:

 • ಮೊದಲಿಗೆ, ಒಂದು ಬಟ್ಟಲಿನಲ್ಲಿ ½ ಕಪ್ ಬಾಸ್ಮತಿ ಅಕ್ಕಿ, 1 ಟೀಸ್ಪೂನ್ ಜೀರಿಗೆ, ¼ ಟೀಸ್ಪೂನ್ ಉಪ್ಪು, ½ ಟೀಸ್ಪೂನ್ ತುಪ್ಪ ಮತ್ತು 1 ಕಪ್ ನೀರು ತೆಗೆದುಕೊಳ್ಳಿ.
 • ಜೀರಾ ರೈಸ್ ಜೊತೆಗೆ, ಬೇಳೆಯನ್ನು ಬೇಯಿಸಬಹುದು. ಬೇಳೆಯನ್ನು ಬೇಯಿಸಲು, ಕುಕ್ಕರ್ನಲ್ಲಿ ½ ಕಪ್ ಹೆಸರು ಬೇಳೆ ತೆಗೆದುಕೊಳ್ಳಿ.
 • ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ತುಪ್ಪ, 1 ಕಪ್ ನೀರು ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
 • ಒಂದು ಸ್ಟಾಂಡ್ ಇರಿಸಿ ಜೀರಾ ರೈಸ್ ನ ಬೌಲ್ ಅನ್ನು ಇರಿಸಿ.
 • ಮುಚ್ಚಿ ಮಧ್ಯಮ ಜ್ವಾಲೆಯ ಮೇಲೆ 2 ಸೀಟಿಗಳಿಗೆ ಪ್ರೆಷರ್ ಕುಕ್ ಮಾಡಿ.
 • ಅಂತಿಮವಾಗಿ, ಜೀರಾ ರೈಸ್ ಪೂರೈಸಲು ಸಿದ್ಧವಾಗಿದೆ.

ಈರುಳ್ಳಿ ಟೊಮೆಟೊ ಬೇಸ್ ಹೇಗೆ ಮಾಡುವುದು:

 • ಮೊದಲಿಗೆ, ದೊಡ್ಡ ಕಡೈ ನಲ್ಲಿ 2 ಟೇಬಲ್ಸ್ಪೂನ್ ಎಣ್ಣೆ ಬಿಸಿ ಮಾಡಿ. 1 ಟೀಸ್ಪೂನ್ ಜೀರಿಗೆ, 1 ಟೀಸ್ಪೂನ್ ಕಸೂರಿ ಮೇಥಿ ಸೇರಿಸಿ ಮತ್ತು ಮಸಾಲೆಗಳು ಪರಿಮಳ ಬರುವವರೆಗೂ ಸಾಟ್ ಮಾಡಿ.
 • ಈಗ 2 ಈರುಳ್ಳಿ, 1 ಟೇಬಲ್ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಈರುಳ್ಳಿ ಗೋಲ್ಡನ್ ಬ್ರೌನ್ ತಿರುಗುವ ತನಕ ಸಾಟ್ ಮಾಡಿ.
 • ಜ್ವಾಲೆಯನ್ನು ಕಡಿಮೆ ಇಟ್ಟು, ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, 1 ಟೀಸ್ಪೂನ್ ಕೊತ್ತಂಬರಿ ಪುಡಿ, ½ ಟೀಸ್ಪೂನ್ ಜೀರಾ ಪುಡಿ ಸೇರಿಸಿ.
 • ಮಸಾಲೆಗಳು ಪರಿಮಳ ಬರುವ ತನಕ ಸಾಟ್ ಮಾಡಿ.
 • ಈಗ, 3 ಟೊಮೆಟೊ ಸೇರಿಸಿ ಮತ್ತು ಟೊಮೆಟೊ ಮೃದು ಮತ್ತು ಮೆತ್ತಗೆ ತಿರುಗುವ ತನಕ ಮತ್ತು ಸಾಟ್ ಮಾಡಿ.
 • ಈರುಳ್ಳಿ ಟೊಮೆಟೊ ಬೇಸ್ ಅನ್ನು 3 ಭಾಗಗಳಾಗಿ (2: 1: 1 ಅನುಪಾತದಲ್ಲಿ)  ವಿಭಜಿಸಿ. ಇದನ್ನು ಮಟರ್ ಪನೀರ್, ದಾಲ್ ಮತ್ತು ಆಲೂ ಜೀರಾ ಮಾಡಲು ಬಳಸಲಾಗುತ್ತದೆ.

ಮೂಂಗ್ ದಾಲ್ ಫ್ರೈ ಹೇಗೆ ಮಾಡುವುದು:

 • ಬೇಯಿಸಿದ ದಾಲ್ ಗೆ, ಈರುಳ್ಳಿ ಟೊಮೆಟೊ ಬೇಸ್ನ 1 ಭಾಗವನ್ನು ಸೇರಿಸಿ.
 • ½ ಟೀಸ್ಪೂನ್ ಉಪ್ಪು ಮತ್ತು 1 ಕಪ್ ನೀರು ಸೇರಿಸಿ. ಅಗತ್ಯವಿರುವಂತೆ ನೀರನ್ನು ಸೇರಿಸಿ ಸ್ಥಿರತೆಯನ್ನು ಸರಿಹೊಂದಿಸಿ.
 • ಒಂದು ನಿಮಿಷ ಅಥವಾ ಸುವಾಸನೆಗಳನ್ನು ಚೆನ್ನಾಗಿ ಹೀರಿಕೊಳ್ಳುವವರೆಗೆ ಕುದಿಸಿ.
 • ಈಗ 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ.
 • ಅಂತಿಮವಾಗಿ, ರೋಟಿ ಅಥವಾ ಜೀರಾ ರೈಸ್ನೊಂದಿಗೆ ಮೂಂಗ್ ದಾಲ್ ಫ್ರೈ ಆನಂದಿಸಿ.

ಆಲೂ ಗೋಬಿ ಡ್ರೈ ಸಬ್ಜಿಯನ್ನು ಹೇಗೆ ಮಾಡುವುದು:

 • ಮೊದಲಿಗೆ, ಕಡೈ ನಲ್ಲಿ 3 ಟೇಬಲ್ಸ್ಪೂನ್ ಎಣ್ಣೆ ಬಿಸಿ ಮಾಡಿ. ಮಧ್ಯಮ ಜ್ವಾಲೆಯ ಮೇಲೆ 2 ಆಲೂಗಡ್ಡೆಯನ್ನುಸಾಟ್ ಮಾಡಿ.
 • ಆಲೂಗಡ್ಡೆ ಸ್ವಲ್ಪ ಗೋಲ್ಡನ್ ಬ್ರೌನ್ ಆಗುವ ತನಕ ಸಾಟ್ ಮಾಡಿ.
 • 1 ಕಪ್ ಹೂಕೋಸು, ¼ ಟೀಸ್ಪೂನ್ ಅರಿಶಿನ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
 • ತರಕಾರಿಗಳು ಅರ್ಧದಷ್ಟು ಬೇಯುವ ತನಕ ಒಂದು ನಿಮಿಷದವರೆಗೆ ಸಾಟ್ ಮಾಡಿ.
 • ತಯಾರಾದ ಈರುಳ್ಳಿ ಟೊಮೆಟೊ ಬೇಸ್ನ1 ಭಾಗವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
 • ಮತ್ತಷ್ಟು 2 ಟೇಬಲ್ಸ್ಪೂನ್ ನೀರು ಸೇರಿಸಿ, ಮುಚ್ಚಿ 5 ನಿಮಿಷಗಳ ಕಾಲ ಸಿಮ್ಮರ್ ನಲ್ಲಿಡಿ.
 • ಅಥವಾ ಆಲೂ ಮತ್ತು ಗೋಬಿ ಬೇಯುವ ತನಕ ಚೆನ್ನಾಗಿ ಬೇಯಿಸಿ. ಅಂತಿಮವಾಗಿ, ಆಲೂ ಗೋಬಿ ಸಬ್ಜಿಯನ್ನು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿ ಸವಿಯಿರಿ.

ಮಟರ್ ಪನೀರ್ ಹೇಗೆ ಮಾಡುವುದು:

 • ಮೊದಲಿಗೆ, ತಯಾರಿಸಿದ ಈರುಳ್ಳಿ ಟೊಮೆಟೊ ಬೇಸ್ ಗೆ 1 ಕಪ್ ನೀರು ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
 • ಅಗತ್ಯವಿರುವಂತೆ ನೀರನ್ನು ಸೇರಿಸಿ ಸ್ಥಿರತೆಯನ್ನು ಸರಿಹೊಂದಿಸಿ.
 • ಇದಲ್ಲದೆ, ½ ಕಪ್ ಬಟಾಣಿ ಮತ್ತು 10 ತುಂಡು ಪನೀರ್ ಸೇರಿಸಿ. ನಿಧಾನವಾಗಿ ಮಿಶ್ರಣ ಮಾಡಿ.
 • ಮುಚ್ಚಿ 5 ನಿಮಿಷಗಳ ಕಾಲ ಅಥವಾ ಸುವಾಸನೆಗಳನ್ನು ಚೆನ್ನಾಗಿ ಹೀರಿಕೊಳ್ಳುವವರೆಗೆ ಸಿಮ್ಮರ್ ನಲ್ಲಿಡಿ.
 • ಸಹ, ¼ ಟೀಸ್ಪೂನ್ ಗರಂ ಮಸಾಲಾ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
 • ಅಂತಿಮವಾಗಿ, ರೋಟಿ ಅಥವಾ ಜೀರಾ ರೈಸ್ ಜೊತೆ ಮಟರ್ ಪನೀರ್ ಪಾಕವಿಧಾನ ಆನಂದಿಸಿ.

ಉತ್ತರ ಭಾರತೀಯ ಮೆಸ್ ಥಾಲಿಯನ್ನು ಹೇಗೆ ಜೋಡಿಸುವುದು:

 • ಮೊದಲಿಗೆ, ದೊಡ್ಡ ಥಾಲಿ ಪ್ಲೇಟ್ನಲ್ಲಿ, ತಯಾರಾದ ಆಲೂ ಗೋಬಿ, ಮಟರ್ ಪನೀರ್ ಮತ್ತು ಮೂಂಗ್ ದಾಲ್ ಫ್ರೈ ಸೇರಿಸಿ.
 • ಅಲ್ಲದೆ, ಜೀರಾ ರೈಸ್, ರೋಟಿ, ಸಲಾಡ್, ಉಪ್ಪಿನಕಾಯಿ ಮತ್ತು ಪಾಪಡ್ ಅನ್ನು ಇರಿಸಿ.
 • ಅಂತಿಮವಾಗಿ, ಬೂನ್ದಿ ರಾಯಿತಾ ಜೊತೆ ಉತ್ತರ ಭಾರತೀಯ ಮೆಸ್ ಥಾಲಿ ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಮಧ್ಯಾಹ್ನ ಊಟದ ಥಾಲಿ ಹೇಗೆ ಮಾಡುವುದು:

ಕುಕ್ಕರ್ ನಲ್ಲಿ ಜೀರಾ ರೈಸ್ ಮಾಡುವುದು ಹೇಗೆ:

 1. ಮೊದಲಿಗೆ, ಒಂದು ಬಟ್ಟಲಿನಲ್ಲಿ ½ ಕಪ್ ಬಾಸ್ಮತಿ ಅಕ್ಕಿ, 1 ಟೀಸ್ಪೂನ್ ಜೀರಿಗೆ, ¼ ಟೀಸ್ಪೂನ್ ಉಪ್ಪು, ½ ಟೀಸ್ಪೂನ್ ತುಪ್ಪ ಮತ್ತು 1 ಕಪ್ ನೀರು ತೆಗೆದುಕೊಳ್ಳಿ.
 2. ಜೀರಾ ರೈಸ್ ಜೊತೆಗೆ, ಬೇಳೆಯನ್ನು ಬೇಯಿಸಬಹುದು. ಬೇಳೆಯನ್ನು ಬೇಯಿಸಲು, ಕುಕ್ಕರ್ನಲ್ಲಿ ½ ಕಪ್ಹೆಸರು ಬೇಳೆ ತೆಗೆದುಕೊಳ್ಳಿ.
 3. ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ತುಪ್ಪ, 1 ಕಪ್ ನೀರು ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
 4. ಒಂದು ಸ್ಟಾಂಡ್ ಇರಿಸಿ ಜೀರಾ ರೈಸ್ ನ ಬೌಲ್ ಅನ್ನು ಇರಿಸಿ.
 5. ಮುಚ್ಚಿ ಮಧ್ಯಮ ಜ್ವಾಲೆಯ ಮೇಲೆ 2 ಸೀಟಿಗಳಿಗೆ ಪ್ರೆಷರ್ ಕುಕ್ ಮಾಡಿ.
 6. ಅಂತಿಮವಾಗಿ, ಜೀರಾ ರೈಸ್ ಪೂರೈಸಲು ಸಿದ್ಧವಾಗಿದೆ.
  ಲಂಚ್ ಥಾಲಿ ರೆಸಿಪಿ

ಈರುಳ್ಳಿ ಟೊಮೆಟೊ ಬೇಸ್ ಹೇಗೆ ಮಾಡುವುದು:

 1. ಮೊದಲಿಗೆ, ದೊಡ್ಡ ಕಡೈ ನಲ್ಲಿ 2 ಟೇಬಲ್ಸ್ಪೂನ್ ಎಣ್ಣೆ ಬಿಸಿ ಮಾಡಿ. 1 ಟೀಸ್ಪೂನ್ ಜೀರಿಗೆ, 1 ಟೀಸ್ಪೂನ್ ಕಸೂರಿ ಮೇಥಿ ಸೇರಿಸಿ ಮತ್ತು ಮಸಾಲೆಗಳು ಪರಿಮಳ ಬರುವವರೆಗೂ ಸಾಟ್ ಮಾಡಿ.
 2. ಈಗ 2 ಈರುಳ್ಳಿ, 1 ಟೇಬಲ್ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಈರುಳ್ಳಿ ಗೋಲ್ಡನ್ ಬ್ರೌನ್ ತಿರುಗುವ ತನಕ ಸಾಟ್ ಮಾಡಿ.
 3. ಜ್ವಾಲೆಯನ್ನು ಕಡಿಮೆ ಇಟ್ಟು, ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, 1 ಟೀಸ್ಪೂನ್ ಕೊತ್ತಂಬರಿ ಪುಡಿ, ½ ಟೀಸ್ಪೂನ್ ಜೀರಾ ಪುಡಿ ಸೇರಿಸಿ.
 4. ಮಸಾಲೆಗಳು ಪರಿಮಳ ಬರುವ ತನಕ ಸಾಟ್ ಮಾಡಿ.
 5. ಈಗ, 3 ಟೊಮೆಟೊ ಸೇರಿಸಿ ಮತ್ತು ಟೊಮೆಟೊ ಮೃದು ಮತ್ತು ಮೆತ್ತಗೆ ತಿರುಗುವ ತನಕ ಮತ್ತು ಸಾಟ್ ಮಾಡಿ.
 6. ಈರುಳ್ಳಿ ಟೊಮೆಟೊ ಬೇಸ್ ಅನ್ನು 3 ಭಾಗಗಳಾಗಿ (2: 1: 1 ಅನುಪಾತದಲ್ಲಿ) ವಿಭಜಿಸಿ. ಇದನ್ನು ಮಟರ್ ಪನೀರ್, ದಾಲ್ ಮತ್ತು ಆಲೂ ಜೀರಾ ಮಾಡಲು ಬಳಸಲಾಗುತ್ತದೆ.

ಮೂಂಗ್ ದಾಲ್ ಫ್ರೈ ಹೇಗೆ ಮಾಡುವುದು:

 1. ಬೇಯಿಸಿದ ದಾಲ್ ಗೆ, ಈರುಳ್ಳಿ ಟೊಮೆಟೊ ಬೇಸ್ನ 1 ಭಾಗವನ್ನು ಸೇರಿಸಿ.
 2. ½ ಟೀಸ್ಪೂನ್ ಉಪ್ಪು ಮತ್ತು 1 ಕಪ್ ನೀರು ಸೇರಿಸಿ. ಅಗತ್ಯವಿರುವಂತೆ ನೀರನ್ನು ಸೇರಿಸಿ ಸ್ಥಿರತೆಯನ್ನು ಸರಿಹೊಂದಿಸಿ.
 3. ಒಂದು ನಿಮಿಷ ಅಥವಾ ಸುವಾಸನೆಗಳನ್ನು ಚೆನ್ನಾಗಿ ಹೀರಿಕೊಳ್ಳುವವರೆಗೆ ಕುದಿಸಿ.
 4. ಈಗ 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ.
 5. ಅಂತಿಮವಾಗಿ, ರೋಟಿ ಅಥವಾ ಜೀರಾ ರೈಸ್ನೊಂದಿಗೆ ಮೂಂಗ್ ದಾಲ್ ಫ್ರೈ ಆನಂದಿಸಿ.

ಆಲೂ ಗೋಬಿ ಡ್ರೈ ಸಬ್ಜಿಯನ್ನು ಹೇಗೆ ಮಾಡುವುದು:

 1. ಮೊದಲಿಗೆ, ಕಡೈ ನಲ್ಲಿ 3 ಟೇಬಲ್ಸ್ಪೂನ್ ಎಣ್ಣೆ ಬಿಸಿ ಮಾಡಿ. ಮಧ್ಯಮ ಜ್ವಾಲೆಯ ಮೇಲೆ 2 ಆಲೂಗಡ್ಡೆಯನ್ನು ಸಾಟ್ ಮಾಡಿ.
 2. ಆಲೂಗಡ್ಡೆ ಸ್ವಲ್ಪ ಗೋಲ್ಡನ್ ಬ್ರೌನ್ ಆಗುವ ತನಕ ಸಾಟ್ ಮಾಡಿ.
 3. 1 ಕಪ್ ಹೂಕೋಸು, ¼ ಟೀಸ್ಪೂನ್ ಅರಿಶಿನ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
 4. ತರಕಾರಿಗಳು ಅರ್ಧದಷ್ಟು ಬೇಯುವ ತನಕ ಒಂದು ನಿಮಿಷದವರೆಗೆ ಸಾಟ್ ಮಾಡಿ.
 5. ತಯಾರಾದ ಈರುಳ್ಳಿ ಟೊಮೆಟೊ ಬೇಸ್ನ 1 ಭಾಗವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
 6. ಮತ್ತಷ್ಟು 2 ಟೇಬಲ್ಸ್ಪೂನ್ ನೀರು ಸೇರಿಸಿ, ಮುಚ್ಚಿ 5 ನಿಮಿಷಗಳ ಕಾಲ ಸಿಮ್ಮರ್ ನಲ್ಲಿಡಿ.
 7. ಅಥವಾ ಆಲೂ ಮತ್ತು ಗೋಬಿ ಬೇಯುವ ತನಕ ಚೆನ್ನಾಗಿ ಬೇಯಿಸಿ. ಅಂತಿಮವಾಗಿ, ಆಲೂ ಗೋಬಿ ಸಬ್ಜಿಯನ್ನು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿ ಸವಿಯಿರಿ.

ಮಟರ್ ಪನೀರ್ ಹೇಗೆ ಮಾಡುವುದು:

 1. ಮೊದಲಿಗೆ, ತಯಾರಿಸಿದ ಈರುಳ್ಳಿ ಟೊಮೆಟೊ ಬೇಸ್ ಗೆ 1 ಕಪ್ ನೀರು ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
 2. ಅಗತ್ಯವಿರುವಂತೆ ನೀರನ್ನು ಸೇರಿಸಿ ಸ್ಥಿರತೆಯನ್ನು ಸರಿಹೊಂದಿಸಿ.
 3. ಇದಲ್ಲದೆ, ½ ಕಪ್ ಬಟಾಣಿ ಮತ್ತು 10 ತುಂಡು ಪನೀರ್ ಸೇರಿಸಿ. ನಿಧಾನವಾಗಿ ಮಿಶ್ರಣ ಮಾಡಿ.
 4. ಮುಚ್ಚಿ 5 ನಿಮಿಷಗಳ ಕಾಲ ಅಥವಾ ಸುವಾಸನೆಗಳನ್ನು ಚೆನ್ನಾಗಿ ಹೀರಿಕೊಳ್ಳುವವರೆಗೆ ಸಿಮ್ಮರ್ ನಲ್ಲಿಡಿ.
 5. ಸಹ, ¼ ಟೀಸ್ಪೂನ್ ಗರಂ ಮಸಾಲಾ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
 6. ಅಂತಿಮವಾಗಿ, ರೋಟಿ ಅಥವಾ ಜೀರಾ ರೈಸ್ ಜೊತೆ ಮಟರ್ ಪನೀರ್ ಪಾಕವಿಧಾನ ಆನಂದಿಸಿ.

ಉತ್ತರ ಭಾರತೀಯ ಮೆಸ್ ಥಾಲಿಯನ್ನು ಹೇಗೆ ಜೋಡಿಸುವುದು:

 1. ಮೊದಲಿಗೆ, ದೊಡ್ಡ ಥಾಲಿ ಪ್ಲೇಟ್ನಲ್ಲಿ, ತಯಾರಾದ ಆಲೂ ಗೋಬಿ, ಮಟರ್ ಪನೀರ್ ಮತ್ತು ಮೂಂಗ್ ದಾಲ್ ಫ್ರೈ ಸೇರಿಸಿ.
 2. ಅಲ್ಲದೆ, ಜೀರಾ ರೈಸ್, ರೋಟಿ, ಸಲಾಡ್, ಉಪ್ಪಿನಕಾಯಿ ಮತ್ತು ಪಾಪಡ್ ಅನ್ನು ಇರಿಸಿ.
 3. ಅಂತಿಮವಾಗಿ, ಬೂನ್ದಿ ರಾಯಿತಾ ಜೊತೆ ಉತ್ತರ ಭಾರತೀಯ ಮೆಸ್ ಥಾಲಿ ಆನಂದಿಸಿ.

ಟಿಪ್ಪಣಿಗಳು:

 • ಮೊದಲಿಗೆ, ತಯಾರಿ ಸಮಾನವಾಗಿ ಮಾಡಿದಾಗ ಇಡೀ ಥಾಲಿ ಸುಮಾರು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
 • ಅಲ್ಲದೆ, ಈರುಳ್ಳಿ ಟೊಮೆಟೊ ಬೇಸ್ ತಯಾರಿಸುವುದರಿಂದ 3 ತಿನಿಸುಗಳನ್ನು ತ್ವರಿತವಾಗಿ ಮಾಡಲು ಸಹಾಯ ಮಾಡುತ್ತದೆ.
 • ಹೆಚ್ಚುವರಿಯಾಗಿ, ನೀವು ಮಸಾಲೆ ಥಾಲಿಯನ್ನು ಹುಡುಕುತ್ತಿದ್ದರೆ, ಹಸಿರು ಮೆಣಸಿನಕಾಯಿಗಳನ್ನು ಭಕ್ಷ್ಯಗಳಿಗೆ ಸೇರಿಸಿ.
 • ಅಂತಿಮವಾಗಿ, ಉತ್ತರ ಭಾರತೀಯ ಮೆಸ್ ಥಾಲಿ ಪಾಕವಿಧಾನವು ಬಿಸಿಯಾಗಿ ಸರ್ವ್ ಮಾಡಿದಾಗ ಉತ್ತಮವಾಗಿರುತ್ತದೆ.