ರವೆ ಕೇಕ್ ರೆಸಿಪಿ | rava cake in kannada | ಕುಕ್ಕರ್ ನಲ್ಲಿ ರವಾ ಕೇಕ್

0

ರವೆ ಕೇಕ್ ಪಾಕವಿಧಾನ | ಕುಕ್ಕರ್ ನಲ್ಲಿ ರವಾ ಕೇಕ್ | ಪ್ಯಾನ್ ನಲ್ಲಿ ಮೊಟ್ಟೆಯಿಲ್ಲದ ಸೂಜಿ ಕಾ ಕೇಕ್ ನ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಟುಟಿ ಫ್ರೂಟಿ ಟೊಪ್ಪಿನ್ಗ್ಸ್ ಹಾಗೂ ಚಿರೋಟಿ ರವೆಯೊಂದಿಗೆ ತಯಾರಿಸಿದ ಸುಲಭ ಮತ್ತು ಸರಳ ಚಹಾ ಸಮಯದ ಕೇಕ್ ಪಾಕವಿಧಾನ. ಇತರ ಅಲಂಕಾರಿಕ ಕೇಕ್ಗಳಿಗೆ ಹೋಲಿಸಿದರೆ ಯಾವುದೇ ಅಲಂಕಾರಿಕ ಪದಾರ್ಥಗಳು ಮತ್ತು ಐಸಿಂಗ್ ಅನ್ನು ಹೊಂದಿರದ ಕಾರಣ ಇದು ಆದರ್ಶ ಸ್ನ್ಯಾಕ್ ಆಗಿದೆ. ಇದಲ್ಲದೆ, ಈ ಕೇಕ್ ಅನ್ನು ಮೊಟ್ಟೆ ಇಲ್ಲದೆ ಒಲೆ ಮೇಲೆ ಪ್ಯಾನ್ ನಲ್ಲಿ ತಯಾರಿಸಲಾಗುತ್ತದೆ ಮತ್ತು ಆದ್ದರಿಂದ ಎಲ್ಲರೂ ಇದನ್ನು ಸವಿಯಬಹುದು.
ರವೆ ಕೇಕ್ ರೆಸಿಪಿ

ರವೆ ಕೇಕ್ ಪಾಕವಿಧಾನ | ಕುಕ್ಕರ್ ನಲ್ಲಿ ರವಾ ಕೇಕ್ | ಪ್ಯಾನ್ ನಲ್ಲಿ ಮೊಟ್ಟೆಯಿಲ್ಲದ ಸೂಜಿ ಕಾ ಕೇಕ್ ನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಅಗತ್ಯ ವಿನ್ಯಾಸವನ್ನು ಪಡೆಯಲು ಕೇಕ್ ಪಾಕವಿಧಾನಗಳನ್ನು ಸಾಂಪ್ರದಾಯಿಕವಾಗಿ ಮೈದಾದಿಂದ ತಯಾರಿಸಲಾಗುತ್ತದೆ. ಇದಲ್ಲದೆ, ಈ ಕೇಕ್ಗಳನ್ನು ತಯಾರಿಸಲು ಓವೆನ್ ನಲ್ಲಿ ಬೇಕ್ ಮಾಡಲಾಗುತ್ತದೆ ಮತ್ತು ಇದು ಎಲ್ಲರ ಮನೆಯಲ್ಲಿ ಲಭ್ಯವಿಲ್ಲದಿರಬಹುದು. ಆದ್ದರಿಂದ ಈ ಸೂಜಿ ಕೇಕ್ ಗೆ ಹಲವು ಮಾರ್ಪಾಡುಗಳಿವೆ ಮತ್ತು ಮೊಟ್ಟೆ ಇಲ್ಲದೆ ಪ್ಯಾನ್ ನಲ್ಲಿ ಕೇಕ್ ತಯಾರಿಸವುದು ಅಂತಹ ಒಂದು ಮಾರ್ಪಾಡು.

ನಾನು ರವಾ ಅಥವಾ ಸೂಜಿ ಆಧಾರಿತ ಸಿಹಿತಿಂಡಿಗಳು ಮತ್ತು ಸ್ನ್ಯಾಕ್ ನ ದೊಡ್ಡ ಅಭಿಮಾನಿಯಾಗಿದ್ದೇನೆ. ನಾನು ನನ್ನ ಬ್ಲಾಗ್ನಲ್ಲಿ ಈಗಾಗಲೇ ಅನೇಕ ಪಾಕವಿಧಾನವನ್ನು ಪೋಸ್ಟ್ ಮಾಡಿದ್ದೇನೆ ಮತ್ತು ಮುಂದೆ ಕೂಡ ಹಾಗೆಯೇ ಮಾಡುತ್ತೇನೆ. ರವಾ ಅಥವಾ ಸೂಜಿ ಕೇಕ್ನ ಈ ಪಾಕವಿಧಾನ ಬಹಳ ವಿಶೇಷವಾಗಿದೆ. ಇದು ರವೆ ಹಲ್ವಾ ಮತ್ತು ಬ್ರೆಡ್ ಪಾಕವಿಧಾನದ ಸಂಯೋಜನೆಯಾಗಿದೆ. ಇಲ್ಲಿ ರುಚಿಯು ಹಲ್ವಾನಂತಿದೆ ಆದರೆ ವಿನ್ಯಾಸ ಬ್ರೆಡ್ ನ ಹಾಗೆ ಇದೆ. ಇದಲ್ಲದೆ, ಟುಟಿ ಫ್ರೂಟಿಯ ಟೊಪ್ಪಿನ್ಗ್ಸ್, ಇದನ್ನು ಇನ್ನಷ್ಟು ಆಸಕ್ತಿದಾಯಕವಾಗಿ ಮಾಡುತ್ತದೆ. ಆದ್ದರಿಂದ ನಾನು ಈ ಪಾಕವಿಧಾನವನ್ನು ಟೂಟಿ ಫ್ರೂಟಿ ರವಾ ಕೇಕ್ ಅಥವಾ ಟೀ ಟೈಮ್ ಕೇಕ್ ಎಂದು ಕರೆಯುತ್ತೇನೆ. ಸಿಹಿಯ ಪ್ರಮಾಣವು ಐಸಿಂಗ್ ಆಧಾರಿತ ಕೇಕ್ಗೆ ಹೋಲಿಸಿದರೆ ಸೌಮ್ಯವಾಗಿರುತ್ತದೆ ಮತ್ತು ನಿಮ್ಮ ಆಯ್ಕೆಯ ಪಾನೀಯದೊಂದಿಗೆ ಸಿಹಿ ತಿಂಡಿಯಾಗಿ ಸುಲಭವಾಗಿ ನೀಡಬಹುದು. ಹೆಚ್ಚುವರಿಯಾಗಿ, ನೀವು ಇದನ್ನು ಒಂದು ವಾರಕ್ಕೆ ಸಂಗ್ರಹಿಸಬಹುದು ಮತ್ತು ನಿಮಗೆ ಅಗತ್ಯವಿರುವಾಗ ಸರ್ವ್ ಮಾಡಬಹದು.

ಕುಕ್ಕರ್ನಲ್ಲಿ ರವಾ ಕೇಕ್ ಇದಲ್ಲದೆ, ರವೆ ಕೇಕ್ ಪಾಕವಿಧಾನಕ್ಕೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ಸೇರಿಸಲು ಬಯಸುತ್ತೇನೆ. ಮೊದಲಿಗೆ, ಈ ಪಾಕವಿಧಾನವನ್ನು ಕೋರ್ಸ್ ರವೆಯೊಂದಿಗೆ ಕೂಡ ಮಾಡಬಹುದಾಗಿದೆ, ಆದರೆ ನಾನು ಈ ಸೂತ್ರಕ್ಕಾಗಿ ಸಣ್ಣ ರವೆ ಅಥವಾ ಚಿರೋಟಿ ರವೆಯನ್ನು ಬಳಸಿದ್ದೇನೆ. ಮೂಲಭೂತವಾಗಿ, ಸಣ್ಣ ರವೆ ಬಳಸಿದರೆ ಹೆಚ್ಚು ಕಷ್ಟವಿಲ್ಲದೇ ಅದನ್ನು ಬ್ಲೆಂಡ್ ಮಾಡಿ ಪುಡಿ ಮಾಡಬಹದು. ಎರಡನೆಯದಾಗಿ, ರವಾ ಕೇಕ್ ಅನ್ನು ಯಾವುದೇ ಹೆಚ್ಚುವರಿ ಟೊಪ್ಪಿನ್ಗ್ಸ್ ಇಲ್ಲದೆ ತಯಾರಿಸಬಹುದು. ಆದರೆ ನಾನು ವೈಯಕ್ತಿಕವಾಗಿ ನಡು ನಡುವೆ ಕ್ರಂಚ್ ಬೈಟ್ ಇರಲು ಬಯಸುತ್ತೇನೆ ಮತ್ತು ಆದ್ದರಿಂದ ಟುಟಿ ಫ್ರೂಟಿ, ಒಣ ಹಣ್ಣುಗಳು, ಒಣದ್ರಾಕ್ಷಿ ಅಥವಾ ಯಾವುದೇ ಹಣ್ಣಿನ ತುಣುಕುಗಳು ಸೂಕ್ತ ಆಯ್ಕೆಯಾಗಿದೆ. ಕೊನೆಯದಾಗಿ, ಮೈದಾ ಆಧರಿತ ಟೀ ಟೈಮ್ ಕೇಕ್ ಮಾಡಲು ನೀವು ಇದೇ ಹಂತಗಳನ್ನು ಮತ್ತು ವಿಧಾನವನ್ನು ಅನುಸರಿಸಬಹುದು. ಅಲ್ಲದೆ, ನೀವು ಓವೆನ್ ಹೊಂದಿದ್ದರೆ 40-45 ನಿಮಿಷಗಳ ಕಾಲ 180 ಡಿಗ್ರೀ ಯಲ್ಲಿ ಪ್ರಿ ಹೀಟೆಡ್ ಓವೆನ್ ನಲ್ಲಿ ಬೇಕ್ ಮಾಡಬಹುದು.

ಅಂತಿಮವಾಗಿ, ರವೆ ಕೇಕ್ ಪಾಕವಿಧಾನದ ಈ ಪೋಸ್ಟ್ನೊಂದಿಗೆ ನನ್ನ ಇತರ ಮೊಟ್ಟೆಯಿಲ್ಲದ-ಕೇಕ್ ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಮುಖ್ಯವಾಗಿ ಬೆಣ್ಣೆ ಕೇಕ್, ಓರಿಯೊ ಚಾಕೊಲೇಟ್ ಕೇಕ್, ಕ್ರಿಸ್ಮಸ್ ಕೇಕ್, ಮಿರರ್ ಗ್ಲೇಜ್ ಚಾಕೊಲೇಟ್ ಕಪ್ಕೇಕ್, ಕಟೋರಿಯಲ್ಲಿ ಚಾಕೊಲೇಟ್ ಕಪ್ಕೇಕ್, ಕಡೈನಲ್ಲಿ ಪಾರ್ಲೇ-ಜಿ ಬಿಸ್ಕತ್ತುಗಳು, ಬೇಕ್ ಮಾಡದೇ ಸ್ವಿಸ್ ರೋಲ್, ಕುಕ್ಕರ್ ನಲ್ಲಿ ತೇವವಾದ ಚಾಕೊಲೇಟ್ ಕೇಕ್, ಪ್ರೆಷರ್ ಕುಕ್ಕರ್ ನಲ್ಲಿ ಮಗ್ ಕೇಕ್, ಮಾವು ಕೇಕ್ ಸೇರಿವೆ. ಇವುಗಳಿಗೆ ಮತ್ತಷ್ಟು ನಾನು ಕೆಲವು ಪಾಕವಿಧಾನ ವಿಭಾಗಗಳನ್ನು ಸೇರಿಸಲು ಇಷ್ಟಪಡುತ್ತೇನೆ,

ರವೆ ಕೇಕ್ ವೀಡಿಯೊ ಪಾಕವಿಧಾನ:

Must Read:

ಕುಕ್ಕರ್ ನಲ್ಲಿ ರವಾ ಕೇಕ್ ಪಾಕವಿಧಾನ ಕಾರ್ಡ್:

suji cake recipe in cooker

ರವೆ ಕೇಕ್ ರೆಸಿಪಿ | rava cake in kannada | ಕುಕ್ಕರ್ ನಲ್ಲಿ ರವಾ ಕೇಕ್

No ratings yet
ತಯಾರಿ ಸಮಯ: 10 minutes
ಅಡುಗೆ ಸಮಯ: 20 minutes
ನೆನೆಸುವ ಸಮಯ: 20 minutes
ಒಟ್ಟು ಸಮಯ : 50 minutes
ಸೇವೆಗಳು: 20 ಸೇವೆಗಳು
AUTHOR: HEBBARS KITCHEN
ಕೋರ್ಸ್: ಬೆಳಗಿನ ಉಪಾಹಾರ
ಪಾಕಪದ್ಧತಿ: ಭಾರತೀಯ
ಕೀವರ್ಡ್: ರವೆ ಕೇಕ್ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ರವೆ ಕೇಕ್ ಪಾಕವಿಧಾನ | ಕುಕ್ಕರ್ ನಲ್ಲಿ ರವಾ ಕೇಕ್ | ಪ್ಯಾನ್ ನಲ್ಲಿ ಮೊಟ್ಟೆಯಿಲ್ಲದ ಸೂಜಿ ಕಾ ಕೇಕ್

ಪದಾರ್ಥಗಳು

 • 2 ಕಪ್ ರವಾ (ಫೈನ್)
 • ½ ಕಪ್ ಎಣ್ಣೆ
 • ½ ಕಪ್ ಮೊಸರು
 • 1 ಕಪ್ ಸಕ್ಕರೆ
 • ಕಪ್ ಹಾಲು
 • ¼ ಟೀಸ್ಪೂನ್ ಉಪ್ಪು
 • ¾ ಟೀಸ್ಪೂನ್ ಬೇಕಿಂಗ್ ಪೌಡರ್
 • ¼ ಟೀಸ್ಪೂನ್ ಬೇಕಿಂಗ್ ಸೋಡಾ
 • ½ ಟೀಸ್ಪೂನ್ ಏಲಕ್ಕಿ ಪೌಡರ್
 • ¼ ಕಪ್ ಹಾಲು
 • ¼ ಕಪ್ ಕೆಂಪು ಟೂಟಿ ಫ್ರೂಟಿ
 • ¼ ಕಪ್ ಹಳದಿ ಟೂಟಿ ಫ್ರೂಟಿ

ಸೂಚನೆಗಳು

 • ಮೊದಲಿಗೆ, ಮಿಕ್ಸಿ ಜಾರ್ ನಲ್ಲಿ 2 ಕಪ್ ರವಾ ತೆಗೆದುಕೊಳ್ಳಿ. ಬ್ಲೆಂಡ್ ಮಾಡಿ ನುಣ್ಣಗೆ ಪುಡಿಮಾಡಿ, ಪಕ್ಕಕ್ಕೆ ಇರಿಸಿ.
 • ದೊಡ್ಡ ಬಟ್ಟಲಿನಲ್ಲಿ ½ ಕಪ್ ಎಣ್ಣೆ, ½ ಕಪ್ ಮೊಸರು ಮತ್ತು 1 ಕಪ್ ಸಕ್ಕರೆ ತೆಗೆದುಕೊಳ್ಳಿ.
 • ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ವಿಸ್ಕ್ ಮಾಡಿ ಮಿಶ್ರಣ ಮಾಡಿ.
 • ಈಗ 1 ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 • ನಂತರ ಪುಡಿ ಮಾಡಿದ ರವಾ, ¼ ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 • ಎಲ್ಲವೂ ಚೆನ್ನಾಗಿ ಸಂಯೋಜಿಸುವ ತನಕ ಮಿಶ್ರಣ ಮಾಡಿ.
 • ಮುಚ್ಚಿ 10 ನಿಮಿಷಗಳ ಕಾಲ ಅಥವಾ ರವಾ ಚೆನ್ನಾಗಿ ನೆನೆಯುವ ತನಕ ಹಾಗೆಯೇ ಬಿಡಿ.
 • ಏತನ್ಮಧ್ಯೆ, ಪ್ಯಾನ್ ಅನ್ನು ಎಣ್ಣೆಯಿಂದ ಗ್ರೀಸ್ ಮಾಡಿ, ಬೇಕಿಂಗ್ ಪೇಪರ್ ಅನ್ನು ಇರಿಸಿಕೊಳ್ಳಿ.
 • ಬ್ಯಾಟರ್ 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟ ನಂತರ, ರವಾ ಚೆನ್ನಾಗಿ ಹೀರಿಕೊಂಡಿದೆಯಾ ಎಂದು ಖಚಿತಪಡಿಸಿಕೊಳ್ಳಿ.
 • ¾ ಟೀಸ್ಪೂನ್ ಬೇಕಿಂಗ್ ಪೌಡರ್, ¼ ಟೀಸ್ಪೂನ್ ಬೇಕಿಂಗ್ ಸೋಡಾ, ½ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು ¼ ಕಪ್ ಹಾಲು ಸೇರಿಸಿ. ಚೆನ್ನಾಗಿ ಬೆರೆಸಿ.
 • ಈಗ ¼ ಕಪ್ ಕೆಂಪು ಟೂಟಿ ಫ್ರೂಟಿ, ¼ ಕಪ್ ಹಳದಿ ಟೂಟಿ ಫ್ರೂಟಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 • ಬ್ಯಾಟರ್ ಅನ್ನು ಪ್ಯಾನ್ ಗೆ ವರ್ಗಾಯಿಸಿ.
 • ಕೆಲವು ಟೂಟಿ ಫ್ರೂಟಿಯೊಂದಿಗೆ ಟಾಪ್ ಮಾಡಿ. ಈಗ ಪ್ಯಾನ್ ಅನ್ನು ಬರ್ನರ್ನಲ್ಲಿ ಇರಿಸಿ, ಜ್ವಾಲೆ ಕಡಿಮೆ ಇಟ್ಟುಕೊಳ್ಳಿ. ಪ್ಯಾನ್ ಅನ್ನು ಮುಚ್ಚಿ ಮತ್ತು ರಂಧ್ರವನ್ನು ಹಿಟ್ಟಿನೊಂದಿಗೆ ಸೀಲ್ ಮಾಡಿ.
 • 60 ನಿಮಿಷಗಳ ಕಾಲ ಅಥವಾ ಕೇಕ್ ಚೆನ್ನಾಗಿ ಬೇಯುವವರೆಗೆ ಸಿಮ್ಮರ್ ನಲ್ಲಿಡಿ. ಪರ್ಯಾಯವಾಗಿ, ಓವೆನ್ ಬಳಸುತ್ತಿದ್ದರೆ, 180 ಡಿಗ್ರಿ ಸೆಲ್ಸಿಯಸ್ನಲ್ಲಿ 45 ನಿಮಿಷಗಳ ಕಾಲ ಬೇಕ್ ಮಾಡಿ.
 • ಒಂದು ಸ್ಕೀವರ್ ಅನ್ನು ಸೇರಿಸಿ ಮತ್ತು ಕೇಕ್ ಸಂಪೂರ್ಣವಾಗಿ ಬೆಂದಿದೆಯಾ ಎಂದು ಪರಿಶೀಲಿಸಿ.
 • ಅಂತಿಮವಾಗಿ, ಟೂಟಿ ಫ್ರೂಟಿ ರವಾ ಕೇಕ್ ಅನ್ನು ತೆಗೆದು ನಿಮ್ಮ ಆಯ್ಕೆಯ ಗಾತ್ರಕ್ಕೆ ಕತ್ತರಿಸಿ ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ರವೆ ಕೇಕ್ ಹೇಗೆ ಮಾಡುವುದು:

 1. ಮೊದಲಿಗೆ, ಮಿಕ್ಸಿ ಜಾರ್ ನಲ್ಲಿ 2 ಕಪ್ ರವಾ ತೆಗೆದುಕೊಳ್ಳಿ. ಬ್ಲೆಂಡ್ ಮಾಡಿ ನುಣ್ಣಗೆ ಪುಡಿಮಾಡಿ, ಪಕ್ಕಕ್ಕೆ ಇರಿಸಿ.
 2. ದೊಡ್ಡ ಬಟ್ಟಲಿನಲ್ಲಿ ½ ಕಪ್ ಎಣ್ಣೆ, ½ ಕಪ್ ಮೊಸರು ಮತ್ತು 1 ಕಪ್ ಸಕ್ಕರೆ ತೆಗೆದುಕೊಳ್ಳಿ.
 3. ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ವಿಸ್ಕ್ ಮಾಡಿ ಮಿಶ್ರಣ ಮಾಡಿ.
 4. ಈಗ 1 ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 5. ನಂತರ ಪುಡಿ ಮಾಡಿದ ರವಾ, ¼ ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 6. ಎಲ್ಲವೂ ಚೆನ್ನಾಗಿ ಸಂಯೋಜಿಸುವ ತನಕ ಮಿಶ್ರಣ ಮಾಡಿ.
 7. ಮುಚ್ಚಿ 10 ನಿಮಿಷಗಳ ಕಾಲ ಅಥವಾ ರವಾ ಚೆನ್ನಾಗಿ ನೆನೆಯುವ ತನಕ ಹಾಗೆಯೇ ಬಿಡಿ.
 8. ಏತನ್ಮಧ್ಯೆ, ಪ್ಯಾನ್ ಅನ್ನು ಎಣ್ಣೆಯಿಂದ ಗ್ರೀಸ್ ಮಾಡಿ, ಬೇಕಿಂಗ್ ಪೇಪರ್ ಅನ್ನು ಇರಿಸಿಕೊಳ್ಳಿ.
 9. ಬ್ಯಾಟರ್ 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟ ನಂತರ, ರವಾ ಚೆನ್ನಾಗಿ ಹೀರಿಕೊಂಡಿದೆಯಾ ಎಂದು ಖಚಿತಪಡಿಸಿಕೊಳ್ಳಿ.
 10. ¾ ಟೀಸ್ಪೂನ್ ಬೇಕಿಂಗ್ ಪೌಡರ್, ¼ ಟೀಸ್ಪೂನ್ ಬೇಕಿಂಗ್ ಸೋಡಾ, ½ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು ¼ ಕಪ್ ಹಾಲು ಸೇರಿಸಿ. ಚೆನ್ನಾಗಿ ಬೆರೆಸಿ.
 11. ಈಗ ¼ ಕಪ್ ಕೆಂಪು ಟೂಟಿ ಫ್ರೂಟಿ, ¼ ಕಪ್ ಹಳದಿ ಟೂಟಿ ಫ್ರೂಟಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 12. ಬ್ಯಾಟರ್ ಅನ್ನು ಪ್ಯಾನ್ ಗೆ ವರ್ಗಾಯಿಸಿ.
 13. ಕೆಲವು ಟೂಟಿ ಫ್ರೂಟಿಯೊಂದಿಗೆ ಟಾಪ್ ಮಾಡಿ. ಈಗ ಪ್ಯಾನ್ ಅನ್ನು ಬರ್ನರ್ನಲ್ಲಿ ಇರಿಸಿ, ಜ್ವಾಲೆ ಕಡಿಮೆ ಇಟ್ಟುಕೊಳ್ಳಿ. ಪ್ಯಾನ್ ಅನ್ನು ಮುಚ್ಚಿ ಮತ್ತು ರಂಧ್ರವನ್ನು ಹಿಟ್ಟಿನೊಂದಿಗೆ ಸೀಲ್ ಮಾಡಿ.
 14. 60 ನಿಮಿಷಗಳ ಕಾಲ ಅಥವಾ ಕೇಕ್ ಚೆನ್ನಾಗಿ ಬೇಯುವವರೆಗೆ ಸಿಮ್ಮರ್ ನಲ್ಲಿಡಿ. ಪರ್ಯಾಯವಾಗಿ, ಓವೆನ್  ಬಳಸುತ್ತಿದ್ದರೆ, 180 ಡಿಗ್ರಿ ಸೆಲ್ಸಿಯಸ್ನಲ್ಲಿ 45 ನಿಮಿಷಗಳ ಕಾಲ ಬೇಕ್ ಮಾಡಿ.
 15. ಒಂದು ಸ್ಕೀವರ್ ಅನ್ನು ಸೇರಿಸಿ ಮತ್ತು ಕೇಕ್ ಸಂಪೂರ್ಣವಾಗಿ ಬೆಂದಿದೆಯಾ ಎಂದು ಪರಿಶೀಲಿಸಿ.
 16. ಅಂತಿಮವಾಗಿ, ಟೂಟಿ ಫ್ರೂಟಿ ರವಾ ಕೇಕ್ ಅನ್ನು ತೆಗೆದು ನಿಮ್ಮ ಆಯ್ಕೆಯ ಗಾತ್ರಕ್ಕೆ ಕತ್ತರಿಸಿ ಆನಂದಿಸಿ.
  ರವೆ ಕೇಕ್ ರೆಸಿಪಿ

ಟಿಪ್ಪಣಿಗಳು:

 • ಮೊದಲಿಗೆ, ಕೇಕ್ನ ವಿನ್ಯಾಸವನ್ನು ಸುಧಾರಿಸಲು, ನೀವು ½ ಕಪ್ ಮೈದಾವನ್ನು ಸೇರಿಸಬಹುದು ಮತ್ತು ಕೇಕ್ ಬ್ಯಾಟರ್ ಅನ್ನು ಇತರ ಪದಾರ್ಥಗಳೊಂದಿಗೆ ಮಿಶ್ರಣ ಮಾಡಬಹುದು.
 • ಅಲ್ಲದೆ, ಹಾಲು ನಿಧಾನವಾಗಿ ಸೇರಿಸಿ, ಪ್ರತಿ ಬ್ಯಾಟರ್ ವಿಭಿನ್ನವಾಗಿ ಹೀರಿಕೊಳ್ಳುತ್ತದೆ.
 • ಹೆಚ್ಚುವರಿಯಾಗಿ, ದಪ್ಪ ಪ್ಯಾನ್ ಅನ್ನು ಬಳಸಲು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಕೇಕ್ ಸುಡುವ ಸಾಧ್ಯತೆಗಳಿವೆ.
 • ಅಂತಿಮವಾಗಿ, ವಿಶಿಷ್ಟವಾದ ಟೂಟಿ ಫ್ರೂಟಿಯ ಬಣ್ಣದಿಂದ ತಯಾರಿಸಿದಾಗ ಟೂಟಿ ಫ್ರೂಟಿ ರವಾ ಕೇಕ್ ಉತ್ತಮ ರುಚಿ ನೀಡುತ್ತದೆ.