ಮಸಾಲಾ ಪುಲಾವ್ ಪಾಕವಿಧಾನ | ಮಸಾಲೆ ಪುಲಾವ್ | ಮಸಾಲಾ ವೆಜ್ ಪುಲಾವ್ ನ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಇದು ಪರಿಮಳಯುಕ್ತ ಮಸಾಲೆಗಳೊಂದಿಗೆ ಉದ್ದದ ಅಕ್ಕಿಯಿಂದ ಮಾಡಿದ ಸುಲಭ ಮತ್ತು ಸರಳವಾದ ಭಾರತೀಯ ಪಿಲಾಫ್ ಪಾಕವಿಧಾನ. ಇದು ಮಧ್ಯಾಹ್ನದ ಊಟ ಅಥವಾ ಟಿಫಿನ್ ಬಾಕ್ಸ್ ಪಾಕವಿಧಾನವಾಗಿದ್ದು, ಇದನ್ನು ಯಾವುದೇ ಸೈಡ್ ಡಿಶ್ ಇಲ್ಲದೆ ಹಾಗೆಯೇ ನೀಡಬಹುದು. ನಾನು ಸಾಂಪ್ರದಾಯಿಕ ಅಕ್ಕಿ ಆಧಾರಿತ ಪುಲಾವಿನ ಹಾಗೆ ಇಲ್ಲಿ ಯಾವುದೇ ಗಮನಾರ್ಹ ತರಕಾರಿಗಳನ್ನು ಸೇರಿಸಿಲ್ಲ ಆದರೆ ನಿಮ್ಮ ಆಯ್ಕೆಯ ಪ್ರಕಾರ ಸೇರಿಸಬಹುದು.
ದಕ್ಷಿಣ ಭಾರತೀಯಳಾಗಿರುವುದರಿಂದ, ನಾನು ಯಾವಾಗಲೂ ಅಕ್ಕಿ ಆಧಾರಿತ ಪಾಕವಿಧಾನಗಳ ಅಪಾರ ಅಭಿಮಾನಿಯಾಗಿದ್ದೇನೆ. ಮೂಲತಃ ಇದು ನಮ್ಮ ಡೈನಿಂಗ್ ಟೇಬಲ್ ನ ಕಡ್ಡಾಯವಾದ ತಿನಿಸು. ಇದು ಸರಳವಾದ ದಾಲ್ ರೈಸ್, ಲೆಮನ್ ರೈಸ್ ನಿಂದ ಹಿಡಿದು ಮಸಾಲೆ ಸಮೃದ್ಧ ಬಿರಿಯಾನಿ ಪಾಕವಿಧಾನವಾಗಿರಬಹುದು. ಸರಳ ದಾಲ್ ರೈಸ್ ಅಥವಾ ಸಾಂಬಾರ್ ರೈಸ್ ಗೆ ಹೋಲಿಸಿದರೆ ನಾನು ವೈಯಕ್ತಿಕವಾಗಿ ಪುಲಾವ್, ಫ್ರೈಡ್ ರೈಸ್ ನಂತಹ ಪರಿಮಯುಕ್ತ ರೈಸ್ ಅನ್ನು ಇಷ್ಟಪಡುತ್ತೇನೆ. ಆದರೆ, ನನ್ನ ಪತಿ ಅದನ್ನು ಹಳೆಯ ರೀತಿಯಲ್ಲಿ ಇಷ್ಟಪಡುತ್ತಾರೆ. ಅವರು ದಿನನಿತ್ಯದ ಊಟಕ್ಕೆ ಸರಳ, ಸಾರು ಅನ್ನ ಮತ್ತು ತೆಂಗಿನಕಾಯಿ ಹಾಕಿದ ಸಾಂಬಾರ್ ಅನ್ನವನ್ನು ಹೊಂದಲು ಬಯಸುತ್ತಾರೆ. ಆದರೆ ವಾರಾಂತ್ಯದಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ, ಅವರು ಮಸಾಲೆ ರೈಸ್, ಬಿರಿಯಾನಿ ಅಥವಾ ಪುಲಾವ್ ಪಾಕವಿಧಾನವನ್ನು ಇಷ್ಟಪಡುತ್ತಾರೆ. ಆದ್ದರಿಂದ ನಾನು ಸಾಮಾನ್ಯವಾಗಿ ಸರಳ ಅನ್ನವನ್ನು ಮೊದಲು ತಯಾರಿಸುತ್ತೇನೆ, ಮತ್ತು ಅದನ್ನು ಅವರಿಗೆ ಬಡಿಸಿದ ನಂತರ ನನ್ನ ಆಯ್ಕೆಯ ಕೆಲವು ರುಚಿಯ ಅಕ್ಕಿಯನ್ನು ತಯಾರಿಸಲು ಅದೇ ಅನ್ನವನ್ನು ಬಳಸುತ್ತೇನೆ.
ಇದಲ್ಲದೆ, ಮಸಾಲಾ ಪುಲಾವ್ ಪಾಕವಿಧಾನಕ್ಕೆ ಇನ್ನೂ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ಸೇರಿಸಲು ನಾನು ಬಯಸುತ್ತೇನೆ. ಮೊದಲನೆಯದಾಗಿ, ಈ ಪಾಕವಿಧಾನಕ್ಕಾಗಿ ಬಾಸ್ಮತಿ ಅಕ್ಕಿ ಅಥವಾ ಯಾವುದೇ ಉದ್ದದ ಅಕ್ಕಿಯನ್ನು ಬಳಸಲು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ. ನೀವು ಸೋನಾ ಮಸೂರಿಯನ್ನು ಸಹ ಬಳಸಬಹುದು, ಆದರೆ ಬೇರೆ ಯಾವುದೇ ಸಣ್ಣ-ಧಾನ್ಯ ಅಕ್ಕಿಯನ್ನು ಬಳಸುವುದನ್ನು ತಪ್ಪಿಸಿ. ಎರಡನೆಯದಾಗಿ, ಈ ಪಾಕವಿಧಾನಕ್ಕೆ ಹೆಚ್ಚಿನ ತರಕಾರಿಗಳನ್ನು ಸೇರಿಸದಿರಿ. ಮೂಲತಃ ಆಲೂಗಡ್ಡೆ, ಬಟಾಣಿ, ಈರುಳ್ಳಿ ಮತ್ತು ಟೊಮೆಟೊಗಳಂತಹ ಕೆಲವು ಮೂಲ ತರಕಾರಿಗಳನ್ನು ಸೇರಿಸಿ ಅದನ್ನು ವರ್ಣಮಯವಾಗಿಸಿ. ಕೊನೆಯದಾಗಿ, ನನ್ನ ನೆಚ್ಚಿನ ಸಂಯೋಜನೆಯು ಬೂಂದಿ ರಾಯಿತದೊಂದಿಗೆ ತಿನ್ನಬಹುದು, ಆದರೆ ನೀವು ಈರುಳ್ಳಿ, ಟೊಮ್ಯಾಟೊ ಮತ್ತು ಜೀರಿಗೆಯಂತಹ ರಾಯಿತದ ಆಯ್ಕೆಯೊಂದಿಗೆ ಕೂಡ ಇದನ್ನು ಸೇವಿಸಬಹುದು. ಹಾಗೆಯೇ, ನೀವು ಇದನ್ನು ದಾಲ್ ಅಥವಾ ಕರಿಗಳೊಂದಿಗೆ ಕೂಡ ಬಡಿಸಬಹುದು.
ಅಂತಿಮವಾಗಿ, ಮಸಾಲಾ ಪುಲಾವ್ ಪಾಕವಿಧಾನದ ಈ ಪೋಸ್ಟ್‌ನೊಂದಿಗೆ ನನ್ನ ಇತರ ವಿವರವಾದ ಪುಲಾವ್ ಪಾಕವಿಧಾನಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸುವಂತೆ ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ವರ್ಮಿಸೆಲ್ಲಿ ಪುಲಾವ್, ಶಾಹಿ ಪುಲಾವ್, ಪುದಿನ ರೈಸ್, ತೆಂಗಿನಕಾಯಿ ಹಾಲಿನ ಪುಲಾವ್, ಬ್ರಿಂಜಿ ರೈಸ್, ರೈಸ್ ಭಾತ್, ಆಲೂ ಮಟರ್ ಪುಲಾವ್, ನವರತ್ನ ಪುಲಾವ್, ಚನಾ ಪುಲಾವ್, ರಾಜ್ಮಾ ಪುಲಾವ್ ಮುಂತಾದ ಪಾಕವಿಧಾನಗಳನ್ನು ಒಳಗೊಂಡಿದೆ. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಸಂಬಂಧಿತ ಪಾಕವಿಧಾನ ವಿಭಾಗಗಳನ್ನು ನಮೂದಿಸಲು ಬಯಸುತ್ತೇನೆ,
ಮಸಾಲಾ ಪುಲಾವ್ ವೀಡಿಯೊ ಪಾಕವಿಧಾನ:
ಮಸಾಲೆ ವೆಜ್ ಪುಲಾವ್ ಪಾಕವಿಧಾನ ಕಾರ್ಡ್:
ಮಸಾಲಾ ಪುಲಾವ್ ರೆಸಿಪಿ | masala pulao in kannada | ಮಸಾಲೆ ಪುಲಾವ್
ಪದಾರ್ಥಗಳು
- 2 ಟೇಬಲ್ಸ್ಪೂನ್ ತುಪ್ಪ
- 1 ಇಂಚಿನ ದಾಲ್ಚಿನ್ನಿ
- 3 ಏಲಕ್ಕಿ
- 4 ಲವಂಗ
- 1 ಬೇ ಎಲೆ
- ½ ಟೀಸ್ಪೂನ್ ಫೆನ್ನೆಲ್ / ಸೋಂಪು
- 1 ಟೀಸ್ಪೂನ್ ಜೀರಿಗೆ / ಜೀರಾ
- 1 ಈರುಳ್ಳಿ, ಸಣ್ಣಗೆ ಕತ್ತರಿಸಿದ
- 1 ಟೀಸ್ಪೂನ್ ಶುಂಠಿ ಪೇಸ್ಟ್
- 1 ಟೀಸ್ಪೂನ್ ಬೆಳ್ಳುಳ್ಳಿ ಪೇಸ್ಟ್
- 1 ಮೆಣಸಿನಕಾಯಿ, ಸೀಳಿದ
- ½ ಟೀಸ್ಪೂನ್ ಅರಿಶಿನ
- 1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
- 1 ಟೀಸ್ಪೂನ್ ಗರಂ ಮಸಾಲ
- 1 ಟೀಸ್ಪೂನ್ ಕಸೂರಿ ಮೇಥಿ
- 1 ಟೊಮ್ಯಾಟೊ, ಸಣ್ಣಗೆ ಕತ್ತರಿಸಿದ
- 1 ಕ್ಯಾರೆಟ್, ಕತ್ತರಿಸಿದ
- ½ ಆಲೂಗಡ್ಡೆ, ಹೋಳು
- 3 ಟೇಬಲ್ಸ್ಪೂನ್ ಬಟಾಣಿ / ಮಟರ್
- 1 ಕಪ್ ಬಾಸ್ಮತಿ ಅಕ್ಕಿ, 20 ನಿಮಿಷ ನೆನೆಸಿದ
- 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು, ಸಣ್ಣಗೆ ಕತ್ತರಿಸಿದ
- 2 ಕಪ್ ನೀರು
- 1 ಟೀಸ್ಪೂನ್ ಉಪ್ಪು
ಸೂಚನೆಗಳು
- ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ತುಪ್ಪ ಮತ್ತು 1 ಇಂಚಿನ ದಾಲ್ಚಿನ್ನಿ, 3 ಪಾಡ್ ಏಲಕ್ಕಿ, 4 ಲವಂಗ, 1 ಬೇ ಎಲೆ, ½ ಟೀಸ್ಪೂನ್ ಸೋಂಪು ಮತ್ತು 1 ಟೀಸ್ಪೂನ್ ಜೀರಿಗೆ ಹಾಕಿ. ಮಸಾಲೆಗಳು ಪರಿಮಳ ಬರುವವರೆಗೆ ಸಾಟ್ ಮಾಡಿ.
- ಈಗ 1 ಈರುಳ್ಳಿ, 1 ಟೀಸ್ಪೂನ್ ಶುಂಠಿ ಪೇಸ್ಟ್, 1 ಟೀಸ್ಪೂನ್ ಬೆಳ್ಳುಳ್ಳಿ ಪೇಸ್ಟ್ ಮತ್ತು 1 ಮೆಣಸಿನಕಾಯಿ ಸೇರಿಸಿ.
- ಈರುಳ್ಳಿ ಬಣ್ಣವನ್ನು ಸ್ವಲ್ಪ ಬದಲಿಸುವವರೆಗೆ ಚೆನ್ನಾಗಿ ಸಾಟ್ ಮಾಡಿ.
- ಜ್ವಾಲೆಯನ್ನು ಕಡಿಮೆ ಇರಿಸಿ, ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, 1 ಟೀಸ್ಪೂನ್ ಗರಂ ಮಸಾಲ, 1 ಟೀಸ್ಪೂನ್ ಕಸೂರಿ ಮೇಥಿ ಸೇರಿಸಿ.
- ಮಸಾಲೆಗಳು ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
- ಈಗ, 1 ಟೊಮೆಟೊ ಸೇರಿಸಿ ಮತ್ತು ಟೊಮ್ಯಾಟೊ ಮೃದು ಹಾಗೂ ಮೆತ್ತಗಾಗುವವರೆಗೆ ಸಾಟ್ ಮಾಡಿ.
- ಈಗ 1 ಕ್ಯಾರೆಟ್, ½ ಆಲೂಗಡ್ಡೆ ಮತ್ತು 3 ಟೀಸ್ಪೂನ್ ಬಟಾಣಿ ಸೇರಿಸಿ.
- ಒಂದು ನಿಮಿಷ ಅಥವಾ ತರಕಾರಿಗಳು ಮಸಾಲೆಯೊಂದಿಗೆ ಚೆನ್ನಾಗಿ ಮಿಶ್ರಿತವಾಗುವ ತನಕ ಸಾಟ್ ಮಾಡಿ.
- 1 ಕಪ್ ಬಾಸ್ಮತಿ ಅಕ್ಕಿ, 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತು ಒಂದು ನಿಮಿಷ ನಿಧಾನವಾಗಿ ಸಾಟ್ ಮಾಡಿ. ಬಾಸ್ಮತಿ ಅಕ್ಕಿಯನ್ನು 20 ನಿಮಿಷಗಳ ಕಾಲ ನೆನೆಸಲು ಖಚಿತಪಡಿಸಿಕೊಳ್ಳಿ.
- 2 ಕಪ್ ನೀರು ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ.
- ಮುಚ್ಚಿ, 20 ನಿಮಿಷಗಳ ಕಾಲ ಅಥವಾ ಅಕ್ಕಿ ಸಂಪೂರ್ಣವಾಗಿ ಬೇಯುವವರೆಗೆ. ನೀವು ಪರ್ಯಾಯವಾಗಿ, ಮಧ್ಯಮ ಜ್ವಾಲೆಯಲ್ಲಿ ಪ್ರೆಷರ್ ಕುಕ್ಕರ್ ನಲ್ಲಿಟ್ಟು 2 ವಿಶಲ್ ಬರಿಸಬಹುದು.
- ಅಂತಿಮವಾಗಿ, ಬೂಂದಿ ರಾಯಿತಾದೊಂದಿಗೆ ಮಸಾಲಾ ಪುಲಾವ್ ಅನ್ನು ಆನಂದಿಸಿ.
ಹಂತ ಹಂತದ ಫೋಟೋದೊಂದಿಗೆ ಮಸಾಲಾ ಪುಲಾವ್ ಹೇಗೆ ತಯಾರಿಸುವುದು:

ಟಿಪ್ಪಣಿಗಳು:
- ಮೊದಲನೆಯದಾಗಿ, ಉತ್ತಮ ಪರಿಮಳಕ್ಕಾಗಿ ಬಾಸ್ಮತಿ ಅಕ್ಕಿಯನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ.
- ಪೌಷ್ಠಿಕಾಂಶದ ಪುಲಾವ್ ತಯಾರಿಸಲು ನಿಮ್ಮ ಆಯ್ಕೆಯ ತರಕಾರಿಗಳನ್ನು ಸೇರಿಸಿ.
- ಹಾಗೆಯೇ, ನೀವು ಗರಂ ಮಸಾಲಾದ ಬದಲಿಗೆ ಬಿರಿಯಾನಿ ಮಸಾಲವನ್ನು ವ್ಯತ್ಯಾಸಕ್ಕಾಗಿ ಬಳಸಬಹುದು.
- ಅಂತಿಮವಾಗಿ, ಸ್ವಲ್ಪ ಮಸಾಲೆಯುಕ್ತವಾಗಿ ತಯಾರಿಸಿದಾಗ ಮಸಾಲಾ ಪುಲಾವ್ ಪಾಕವಿಧಾನ ಉತ್ತಮ ರುಚಿ ನೀಡುತ್ತದೆ.