ಸೋರೆಕಾಯಿ ದೋಸೆ ರೆಸಿಪಿ | bottle gourd dosa in kannada

0
ಈ ಪೋಸ್ಟ್ ಅನ್ಯ ಭಾಷೆಯಲ್ಲಿ ಉಪಲಬ್ದವಿದೆ ಆಂಗ್ಲ (English), ಮತ್ತು हिन्दी (Hindi)

ಸೋರೆಕಾಯಿ ದೋಸೆ ಪಾಕವಿಧಾನ | ಬಾಟಲ್ ಗೌರ್ಡ್ ದೋಸಾ | ಇನ್ಸ್ಟೆಂಟ್ ಲೌಕಿ ದೋಸಾದ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಸೋರೆಕಾಯಿಯೊಂದಿಗೆ ತಯಾರಿಸಿದ ಗರಿಗರಿಯಾದ ಮತ್ತು ದಿಢೀರ್ ದೋಸಾ ಪಾಕವಿಧಾನವಾಗಿದೆ. ಇದು ಜನಪ್ರಿಯ ಗರಿಗರಿಯಾದ ರವಾ ದೋಸಾ ಪಾಕವಿಧಾನಕ್ಕೆ ಹೋಲಿಕೆಯನ್ನು ಹೊಂದಿದ್ದು, ಅದೇ ಬ್ಯಾಟರ್ ಅನ್ನು ಉಪಯೋಗಿಸಲಾಗಿದೆ ಆದರೆ ಸೋರೆಕಾಯಿಯನ್ನು ಸೇರ್ಪಡೆ ಮಾಡಲಾಗಿದೆ. ಇದು ಸಾಂಪ್ರದಾಯಿಕ ಅಕ್ಕಿ ಮತ್ತು ಉದ್ದಿನ ದೋಸಗೆ ಆದರ್ಶ ಪರ್ಯಾಯವಾಗಿರಬಹುದು ಅಥವಾ ಜಂಕ್ ತಿನ್ನುವ ಮಕ್ಕಳಿಗೆ ಆರೋಗ್ಯಕರ ಪರ್ಯಾಯವಾಗಿರಬಹುದು.
ಸೋರೆಕಾಯಿ ದೋಸೆ

ಸೋರೆಕಾಯಿ ದೋಸೆ ಪಾಕವಿಧಾನ | ಬಾಟಲ್ ಗೌರ್ಡ್ ದೋಸಾ | ಇನ್ಸ್ಟೆಂಟ್ ಲೌಕಿ ದೋಸಾದ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ದೋಸೆ ಪಾಕವಿಧಾನಗಳು ಅಥವಾ ವಿಶೇಷವಾಗಿ ತ್ವರಿತ ದೋಸೆ ಪಾಕವಿಧಾನಗಳು ಯಾವಾಗಲೂ ನಿಮ್ಮ ಪ್ಯಾಂಟ್ರಿಗೆ ಹೊಂದುವ ಸೂಕ್ತ ಪಾಕವಿಧಾನಗಳಾಗಿವೆ. ಇವುಗಳು ಸುಲಭವಾಗಿ ಮತ್ತು ತ್ವರಿತವಾಗಿ ತಯಾರಿಸಲ್ಪಡುವುದು ಮಾತ್ರವಲ್ಲದೇ, ಸಂಕೀರ್ಣ ಹಂತಗಳನ್ನು ಹೊಂದಿರುವ ಸಾಂಪ್ರದಾಯಿಕ ದೋಸೆಗೆ ಹೋಲಿಸಿದರೆ ಟೇಸ್ಟಿ ಮತ್ತು ಆರೋಗ್ಯಕರ ಪರ್ಯಾಯವಾಗಿದೆ. ಅಂತಹ ಒಂದು ಸುಲಭ ಮತ್ತು ಸರಳವಾದ ದಿಢೀರ್ ದೋಸಾ ಪಾಕವಿಧಾನವು ಲೌಕಿ ದೋಸಾ ಅಥವಾ ಸೋರೆಕಾಯಿ ದೋಸಾ ಪಾಕವಿಧಾನವಾಗಿದ್ದು, ಇದು ಆರೋಗ್ಯಕರ ಮತ್ತು ಪರಿಮಳದ ಅಂಶಗಳಿಗೆ ಹೆಸರುವಾಸಿಯಾಗಿದೆ.

ಸರಿ, ನಾನು ವಿವರಿಸುತ್ತಿದ್ದಂತೆ, ಈ ದಿಢೀರ್ ಮತ್ತು ಗರಿಗರಿಯಾದ ದೋಸಾ ಪಾಕವಿಧಾನ ರವಾ ದೋಸಾ ಪಾಕವಿಧಾನ ಅಥವಾ ನನ್ನ ಇತ್ತೀಚಿನ ಆಲೂ ದೋಸಾ ರೆಸಿಪಿಗೆ ಹೋಲುತ್ತದೆ. ಆಲೂ ದೋಸಾದಲ್ಲಿ, ನಾನು ಬೇಯಿಸಿದ ಮತ್ತು ಹಿಸುಕಿದ ಆಲೂಗಡ್ಡೆಗಳನ್ನು ಸೇರಿಸಿ ರವಾ ಮತ್ತು ಅಕ್ಕಿ ಹಿಟ್ಟು ಬ್ಯಾಟರ್ನೊಂದಿಗೆ ಮಿಶ್ರಣ ಮಾಡಿದ್ದೇನೆ. ಈ ರೀತಿ ಇದು ತ್ವರಿತವಾಗಿ ಮಾಡುತ್ತದೆ ಮತ್ತು ಇದಕ್ಕೆ ಫರ್ಮೆಂಟೇಶನ್ ನ ಅಗತ್ಯವಿಲ್ಲ. ಆದಾಗ್ಯೂ, ಅದೇ ದೋಸಾವನ್ನು ತಯಾರಿಸುವ ಇನ್ನೊಂದು ಮಾರ್ಗವಿದೆ. ಇದು ನೆನೆಸುವುದು, ಫರ್ಮೆಂಟೇಶನ್, ರುಬ್ಬುವುದರ ಜೊತೆಗೆ ರಾತ್ರಿಯ ಸಿದ್ಧತೆಗಳನ್ನು ಒಳಗೊಂಡಿದೆ. ಇದು ಸಹ ಟೇಸ್ಟಿ ದೋಸೆ ಯನ್ನು ನೀಡುತ್ತವೆ, ಆದರೆ ಈ ಸುದೀರ್ಘವಾದ ಆವೃತ್ತಿಗೆ ಹೋಲಿಸಿದರೆ ನಾನು ವೈಯಕ್ತಿಕವಾಗಿ ತ್ವರಿತ ಆವೃತ್ತಿಯನ್ನು ಹೊಂದಲು ಬಯಸುತ್ತೇನೆ. ಬೆಳಿಗ್ಗೆ ಉಪಹಾರಕ್ಕಾಗಿ ನೀವು ಹಿಂದಿನ ರಾತ್ರಿ ಯೋಜಿಸದಿದ್ದಾಗ, ಇದು ನಮ್ಮಲ್ಲಿ ಹೆಚ್ಚಿನವರಿಗೆ ಸುಲಭ ಮತ್ತು ಆದರ್ಶ ದೋಸೆಯನ್ನಾಗಿ ಮಾಡುತ್ತದೆ.

ಬಾಟಲ್ ಗೌರ್ಡ್ ದೋಸಾ ರೆಸಿಪಿ ಇದಲ್ಲದೆ, ಸೋರೆಕಾಯಿ ದೋಸೆ ರೆಸಿಪಿಗೆ ಕೆಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲಿಗೆ, ಈ ಪಾಕವಿಧಾನದಲ್ಲಿ, ಸೋರೆಕಾಯಿ ಪೇಸ್ಟ್ನ ಜೊತೆಗೆ ಅಕ್ಕಿ ಹಿಟ್ಟು ಮತ್ತು ರವೆಯನ್ನು ಬಳಸಿದ್ದೇನೆ. ಈ 2 ಹಿಟ್ಟುಗಳು ಗರಿಗರಿಯಾದ ದೋಸೆಗೆ ಸೂಕ್ತವಾಗಿದೆ, ಆದರೆ ನೀವು ಕಡಿಮೆ ಗರಿಗರಿ ಮಾಡಲು ಮೈದಾ ಅಥವಾ ಗೋಧಿ ಹಿಟ್ಟನ್ನು ಸೇರಿಸಬಹುದು. ಎರಡನೆಯದಾಗಿ, ರವಾ ದೋಸಾ ಪಾಕವಿಧಾನದಂತೆಯೇ, ಆ ಹೆಚ್ಚುವರಿ ಗರಿಗರಿಯಾದ ಪಡೆಯಲು ಜ್ವಾಲೆಯನ್ನು ಮಧ್ಯಮದಿಂದ ಕಡಿಮೆ ಇಟ್ಟುಕೊಳ್ಳಬೇಕಾಗುತ್ತದೆ. ಅಲ್ಲದೇ ನಾನ್ ಸ್ಟಿಕ್ ದೋಸಾ ಪ್ಯಾನ್ ಅಥವಾ ತವಾ ಬಳಸಿ ಮತ್ತು ಎರಕಹೊಯ್ದ ಕಬ್ಬಿಣದ ಕಲ್ಲು ಬಳಸುವುದನ್ನು ತಪ್ಪಿಸಿ. ನಾನ್ ಸ್ಟಿಕ್ ಪ್ಯಾನ್ ಗರಿಗರಿಯಾದ ದೋಸೆ ಪಡೆಯಲು ಮತ್ತು ಸುಲಭವಾಗಿ ಅದನ್ನು ತೆಗೆಯಲು ಸಹಾಯ ಮಾಡುತ್ತದೆ. ಕೊನೆಯದಾಗಿ, ಈ ಪೋಸ್ಟ್ನೊಂದಿಗೆ ನಾನು ಮಸಾಲೆಯುಕ್ತ ಕೆಂಪು ಚಟ್ನಿಯನ್ನು ಹಂಚಿಕೊಂಡಿದ್ದೇನೆ, ಇದು ಈ ದೋಸಾಗೆ ಸೂಕ್ತವಾಗಿದೆ. ಆದರೆ ನೀವು ಅದನ್ನು ತೆಂಗಿನಕಾಯಿ ಅಥವಾ ಉಪ್ಪಿನಕಾಯಿ ಜೊತೆಗೆ ಸಹ ಪೂರೈಸಬಹುದು.

ಅಂತಿಮವಾಗಿ, ಸೋರೆಕಾಯಿ ದೋಸೆ ಪಾಕವಿಧಾನದ ಈ ಪೋಸ್ಟ್ನೊಂದಿಗೆ ನನ್ನ ಇತರ ಸಂಬಂಧಿತ ದಕ್ಷಿಣ ಭಾರತೀಯ ದೋಸೆ ಪಾಕವಿಧಾನಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ನನ್ನ ಇತರ ಸಂಬಂಧಿತ ಪಾಕವಿಧಾನಗಳನ್ನು ಸ್ಟಫ್ಡ್ ಡೋಸಾ, ಕೊಕೊನಟ್ ದೋಸಾ, ಆಲೂ ದೋಸಾ, ಕಾರ್ನ್ ಪ್ಯಾನ್ಕೇಕ್, ದೋಸಾ ಬ್ಯಾಟರ್, ಬ್ರೆಡ್ ದೋಸಾ, ತರಕಾರಿ ಪ್ಯಾನ್ಕೇಕ್, ಬೇಸನ್ ದೋಸಾ, ಬನ್ ದೋಸಾ. ಇವುಗಳಿಗೆ ಮತ್ತಷ್ಟು ನಾನು ಕೆಲವು ಹೆಚ್ಚು ಹೆಚ್ಚುವರಿ ಪಾಕವಿಧಾನ ವಿಭಾಗಗಳನ್ನು ಸೇರಿಸಲು ಇಷ್ಟಪಡುತ್ತೇನೆ,

ಸೋರೆಕಾಯಿ ದೋಸೆ ವೀಡಿಯೊ ಪಾಕವಿಧಾನ:

ಸೋರೆಕಾಯಿ ದೋಸೆ ಪಾಕವಿಧಾನ ಕಾರ್ಡ್:

bottle gourd dosa recipe

ಸೋರೆಕಾಯಿ ದೋಸೆ ರೆಸಿಪಿ | bottle gourd dosa in kannada

No ratings yet
ತಯಾರಿ ಸಮಯ: 10 minutes
ಅಡುಗೆ ಸಮಯ: 30 minutes
ನೆನೆಸುವ ಸಮಯ: 10 minutes
ಒಟ್ಟು ಸಮಯ : 50 minutes
ಸೇವೆಗಳು: 20 ದೋಸೆ
AUTHOR: HEBBARS KITCHEN
ಕೋರ್ಸ್: ದೋಸೆ
ಪಾಕಪದ್ಧತಿ: ದಕ್ಷಿಣ ಭಾರತೀಯ
ಕೀವರ್ಡ್: ಸೋರೆಕಾಯಿ ದೋಸೆ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಸೋರೆಕಾಯಿ ದೋಸೆ ಪಾಕವಿಧಾನ | ಬಾಟಲ್ ಗೌರ್ಡ್ ದೋಸಾ | ಇನ್ಸ್ಟೆಂಟ್ ಲೌಕಿ ದೋಸಾ

ಪದಾರ್ಥಗಳು

  • ½ ಬಾಟಲ್ ಗೌರ್ಡ್ / ಲೌಕಿ / ಸೋರೆಕಾಯಿ
  • ಕಪ್ ಅಕ್ಕಿ ಹಿಟ್ಟು
  • ½ ಕಪ್ ರವಾ / ಸೆಮೊಲೀನಾ / ಸೂಜಿ (ಕೋರ್ಸ್)
  • ¾ ಟೀಸ್ಪೂನ್ ಉಪ್ಪು
  • 4 ಕಪ್ ನೀರು
  • 1 ಈರುಳ್ಳಿ (ಸಣ್ಣಗೆ ಕತ್ತರಿಸಿದ)
  • 2 ಮೆಣಸಿನಕಾಯಿ (ಸಣ್ಣಗೆ ಕತ್ತರಿಸಿದ)
  • 1 ಟೀಸ್ಪೂನ್ ಜೀರಿಗೆ
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)
  • ಎಣ್ಣೆ (ರೋಸ್ಟಿಂಗ್ಗಾಗಿ)

ಸೂಚನೆಗಳು

  • ಮೊದಲಿಗೆ, ಸೋರೆಕಾಯಿಯ ಸಿಪ್ಪೆ ತೆಗೆದು ಅದನ್ನು ತುಂಡುಗಳಾಗಿ ಕತ್ತರಿಸಿ. ಬೀಜಗಳನ್ನು ತೆಗೆದುಹಾಕಲು ಖಚಿತಪಡಿಸಿಕೊಳ್ಳಿ.
  • ಸೋರೆಕಾಯಿಯನ್ನು ಮೃದುವಾದ ಪೇಸ್ಟ್ ಗೆ ರುಬ್ಬಿಕೊಳ್ಳಿ.
  • ಸೋರೆಕಾಯಿ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ.
  • 1½ ಕಪ್ ಅಕ್ಕಿ ಹಿಟ್ಟು, ½ ಕಪ್ ರವಾ ಮತ್ತು ¾ ಟೀಸ್ಪೂನ್ ಉಪ್ಪು ಸೇರಿಸಿ.
  • 4 ಕಪ್ ನೀರು ಸುರಿಯಿರಿ ಮತ್ತು ವಿಸ್ಕರ್ ಬಳಸಿ ಮಿಶ್ರಣ ಮಾಡಿ.
  • ಈಗ 1 ಈರುಳ್ಳಿ, 2 ಮೆಣಸಿನಕಾಯಿ, 1 ಟೀಸ್ಪೂನ್ ಜೀರಿಗೆ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸೇರಿಸಿ.
  • ಚೆನ್ನಾಗಿ ಮಿಶ್ರಣ ಮಾಡಿ ರವೆ ನೆನೆಯಲು 10 ನಿಮಿಷಗಳ ಕಾಲ ಹಾಗೆಯೇ ಬಿಡಿ.
  • 10 ನಿಮಿಷಗಳ ನಂತರ, ಬ್ಯಾಟರ್ ನೀರಿನಿಂದ ಕೂಡಿದ್ದನ್ನು ನೀವು ನೋಡಬಹುದಾಗಿದೆ. ಅಗತ್ಯವಿದ್ದರೆ ನೀರನ್ನು ಸೇರಿಸುವ ಮೂಲಕ ಸ್ಥಿರತೆಯನ್ನು ನೀವು ಹೊಂದಿಸಬಹುದು.
  • ಪ್ಯಾನ್ ಸೂಪರ್ ಬಿಸಿಯಾಗಿದ್ದಾಗ, ಪ್ಯಾನ್ ಮೇಲೆ ಬ್ಯಾಟರ್ ಸುರಿಯಿರಿ.
  • 1 ಟೀಸ್ಪೂನ್ ಎಣ್ಣೆಯನ್ನು ಹರಡಿ ಮತ್ತು 2 ನಿಮಿಷಗಳ ಕಾಲ ಅಥವಾ ದೋಸೆ  ಗರಿಗರಿಗುವ ತನಕ ರೋಸ್ಟ್ ಮಾಡಿ.
  • ಅಂತಿಮವಾಗಿ, ಚಟ್ನಿಯೊಂದಿಗೆ ಗರಿಗರಿಯಾದ ಸೋರೆಕಾಯಿ ದೋಸೆ  ಪಾಕವಿಧಾನವನ್ನು ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಬಾಟಲ್ ಗೌರ್ಡ್ ದೋಸಾ ಹೇಗೆ ಮಾಡುವುದು:

  1. ಮೊದಲಿಗೆ, ಸೋರೆಕಾಯಿಯ ಸಿಪ್ಪೆ ತೆಗೆದು ಅದನ್ನು ತುಂಡುಗಳಾಗಿ ಕತ್ತರಿಸಿ. ಬೀಜಗಳನ್ನು ತೆಗೆದುಹಾಕಲು ಖಚಿತಪಡಿಸಿಕೊಳ್ಳಿ.
  2. ಸೋರೆಕಾಯಿಯನ್ನು ಮೃದುವಾದ ಪೇಸ್ಟ್ ಗೆ ರುಬ್ಬಿಕೊಳ್ಳಿ.
  3. ಸೋರೆಕಾಯಿ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ.
  4. 1½ ಕಪ್ ಅಕ್ಕಿ ಹಿಟ್ಟು, ½ ಕಪ್ ರವಾ ಮತ್ತು ¾ ಟೀಸ್ಪೂನ್ ಉಪ್ಪು ಸೇರಿಸಿ.
  5. 4 ಕಪ್ ನೀರು ಸುರಿಯಿರಿ ಮತ್ತು ವಿಸ್ಕರ್ ಬಳಸಿ ಮಿಶ್ರಣ ಮಾಡಿ.
  6. ಈಗ 1 ಈರುಳ್ಳಿ, 2 ಮೆಣಸಿನಕಾಯಿ, 1 ಟೀಸ್ಪೂನ್ ಜೀರಿಗೆ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸೇರಿಸಿ.
  7. ಚೆನ್ನಾಗಿ ಮಿಶ್ರಣ ಮಾಡಿ ರವೆ ನೆನಯಲು 10 ನಿಮಿಷಗಳ ಕಾಲ ಹಾಗೆಯೇ ಬಿಡಿ.

  8. 10 ನಿಮಿಷಗಳ ನಂತರ, ಬ್ಯಾಟರ್ ನೀರಿನಿಂದ ಕೂಡಿದ್ದನ್ನು ನೀವು ನೋಡಬಹುದಾಗಿದೆ. ಅಗತ್ಯವಿದ್ದರೆ ನೀರನ್ನು ಸೇರಿಸುವ ಮೂಲಕ ಸ್ಥಿರತೆಯನ್ನು ನೀವು ಹೊಂದಿಸಬಹುದು.
  9. ಪ್ಯಾನ್ ಸೂಪರ್ ಬಿಸಿಯಾಗಿದ್ದಾಗ, ಪ್ಯಾನ್ ಮೇಲೆ ಬ್ಯಾಟರ್ ಸುರಿಯಿರಿ.
  10. 1 ಟೀಸ್ಪೂನ್ ಎಣ್ಣೆಯನ್ನು ಹರಡಿ ಮತ್ತು 2 ನಿಮಿಷಗಳ ಕಾಲ ಅಥವಾ ದೋಸೆ ಗರಿಗರಿಗುವ ತನಕ ರೋಸ್ಟ್ ಮಾಡಿ.
  11. ಅಂತಿಮವಾಗಿ, ಚಟ್ನಿಯೊಂದಿಗೆ ಗರಿಗರಿಯಾದ ಸೋರೆಕಾಯಿ ದೋಸೆ ಪಾಕವಿಧಾನವನ್ನು ಆನಂದಿಸಿ.
    ಸೋರೆಕಾಯಿ ದೋಸೆ

ಟಿಪ್ಪಣಿಗಳು:

  • ಮೊದಲಿಗೆ, ಸೋರೆಕಾಯಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ, ಇಲ್ಲದಿದ್ದರೆ ಬೇಯಿಸುವುದು ಕಷ್ಟವಾಗುತ್ತದೆ.
  • ಸಹ, ಅಗತ್ಯವಿರುವ ನೀರನ್ನು ಸೇರಿಸುವ ಮೂಲಕ ಬ್ಯಾಟರ್ ನ ಸ್ಥಿರತೆ ಹೊಂದಿಸಿ. ಬ್ಯಾಟರ್ ದಪ್ಪವಾಗಿದ್ದರೆ, ದೋಸಾ ಮೃದುವಾಗಿರುತ್ತದೆ.
  • ಹೆಚ್ಚುವರಿಯಾಗಿ, ಹಿಟ್ಟು ಚೆನ್ನಾಗಿ ಬೈಂಡ್ ಆಗಲು ಬ್ಯಾಟರ್ಗಾಗಿ ಮೈದಾವನ್ನು ಸೇರಿಸಬಹುದು.
  • ಅಂತಿಮವಾಗಿ, ಸ್ಪೈಸಿ ಚಟ್ನಿಯೊಂದಿಗೆ ಬಿಸಿಯಾಗಿ ಸವಿದಾಗ ಗರಿಗರಿಯಾದ ಸೋರೆಕಾಯಿ ದೋಸೆ  ಅದ್ಭುತವಾಗಿರುತ್ತದೆ.
ಈ ಪೋಸ್ಟ್ ಅನ್ಯ ಭಾಷೆಯಲ್ಲಿ ಉಪಲಬ್ದವಿದೆ ಆಂಗ್ಲ (English), ಮತ್ತು हिन्दी (Hindi)