ಬಿರಿಯಾನಿ ರೈಸ್ ಪಾಕವಿಧಾನ ಹೇಗೆ ಮಾಡುವುದು | ಫ್ರೈಡ್ ರೈಸ್ ಮತ್ತು ಪುಲಾವ್ಗೆ ಜಿಗುಟಾಗದ ಅನ್ನ ತಯಾರಿಸುವುದು ಹೇಗೆ ಎಂಬ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ವಿವಿಧ ರೀತಿಯ ರೈಸ್ ಆಧಾರಿತ ಭಾರತೀಯ ಪಾಕವಿಧಾನಗಳಿಗಾಗಿ ಜಿಗುಟಾಗದ, ಉದ್ದ ಅನ್ನ ತಯಾರಿಸಲು ಸುಲಭ ಮತ್ತು ಪರಿಣಾಮಕಾರಿ ಮಾರ್ಗವನ್ನು ತಿಳಿಸುವ ಪಾಕವಿಧಾನವಾಗಿದೆ. ಇದು ವಿವಿಧ ರೀತಿಯ ಬಿರಿಯಾನಿ ಪಾಕವಿಧಾನಗಳಿಗೆ ಸೂಕ್ತವಾಗಿದೆ, ಆದರೆ ನೀವು ಇದನ್ನು ಪುಲಾವ್ ಮತ್ತು ಇಂಡೋ ಚೈನೀಸ್ ಪಾಕವಿಧಾನಗಳಿಗೆ ಕೂಡ ಚೆನ್ನಾಗಿ ಬಳಸಬಹುದು. ಈ ಪಾಕವಿಧಾನದ ಪೋಸ್ಟ್, ಅಕ್ಕಿಯನ್ನು ಅಲ್ ಡೆಂಟೆ ಬೇಯಿಸಲು ಅಥವಾ ಬಹುತೇಕ ಬೇಯಿಸುವ ಅಕ್ಕಿಯ 2 ವಿಧಾನಗಳನ್ನು ತೋರಿಸುತ್ತದೆ.
ನಾನು ಮೊದಲೇ ವಿವರಿಸುತ್ತಿದ್ದಂತೆ, ಈ ಪೋಸ್ಟ್‌ನಲ್ಲಿ ನಾನು ಜಿಗುಟಾಗದ ರೈಸ್ ಅನ್ನು ತಯಾರಿಸಲು 2 ಮಾರ್ಗಗಳನ್ನು ತೋರಿಸಿದ್ದೇನೆ. ನನ್ನ ವೈಯಕ್ತಿಕ ಆಯ್ಕೆ ಮೊದಲನೆಯದು ಅಥವಾ ಕುದಿಯುವ ವಿಧಾನವನ್ನು ಬಳಸುವುದು. ಮೂಲತಃ ಇದು ತ್ವರಿತವಾದದ್ದು, ನೀವು ಹೆಚ್ಚು ನಿಯಂತ್ರಣದಲ್ಲಿರುತ್ತೀರಿ. ಆದಾಗ್ಯೂ, ಎರಡನೆಯದಕ್ಕೆ ಹೋಲಿಸಿದರೆ ಇದಕ್ಕೆ ಕನಿಷ್ಠ 20 ನಿಮಿಷಗಳ ಹೆಚ್ಚುವರಿ ನೆನೆಸುವ ಸಮಯ ಬೇಕಾಗುತ್ತದೆ. ಎರಡನೆಯ ಆಯ್ಕೆಯಲ್ಲಿ, ನಾನು ನೇರವಾಗಿ ತೊಳೆದ ಅಕ್ಕಿಯನ್ನು ತೆಗೆದುಕೊಂಡು ತುಪ್ಪದೊಂದಿಗೆ ಹುರಿದಿದ್ದೇನೆ. ಇದು ಎಲ್ಲಾ ರುಚಿಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅದನ್ನು ಜಿಗುಟಾಗದಂತೆ ಮಾಡುತ್ತದೆ. ಆದಾಗ್ಯೂ, ಇದು ಜಾಸ್ತಿ ಹುರಿಯುವ ಸಾಧ್ಯತೆ ಇದ್ದು, ಅಂತಿಮ ಫಲಿತಾಂಶವನ್ನು ಹಾಳುಮಾಡುತ್ತದೆ. ಅದನ್ನು ಅತಿಯಾಗಿ ಹುರಿದರೆ, ಅದು ತುಂಡಾಗಬಹುದು ಮತ್ತು ನೀವು ಉದ್ದ ಬೇಯಿಸಿದ ಅನ್ನವನ್ನು ಸಾಧಿಸದಿರಬಹುದು. ಆದ್ದರಿಂದ ನಿಮ್ಮ ಆಸಕ್ತಿ ಮತ್ತು ಆದ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಿ.
ಇದಲ್ಲದೆ, ಬಿರಿಯಾನಿ ರೈಸ್ ಪಾಕವಿಧಾನವನ್ನು ಹೇಗೆ ತಯಾರಿಸಬೇಕೆಂಬುದಕ್ಕೆ ಇನ್ನೂ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನುನೀಡಲು ಬಯಸುತ್ತೇನೆ. ಮೊದಲನೆಯದಾಗಿ, ಈ ಪಾಕವಿಧಾನಕ್ಕಾಗಿ ನೀವು ಬಾಸ್ಮತಿ ಅಕ್ಕಿಯನ್ನು ಮಾತ್ರ ಬಳಸಬೇಕು. ಸೋನಾ ಮಸೂರಿ ಅಥವಾ ಪೊನ್ನಿ ರೈಸ್‌ನಂತಹ ಇತರ ಸಣ್ಣ-ಧಾನ್ಯದ ಅಕ್ಕಿಯನ್ನು ಬಳಸುವುದನ್ನು ತಪ್ಪಿಸಿ. ಸಾಮಾನ್ಯವಾಗಿ ಸಣ್ಣ-ಧಾನ್ಯದಲ್ಲಿ ಹೆಚ್ಚು ಗಂಜಿ ಅಂಶ ಹೊಂದಿರುತ್ತದೆ ಮತ್ತು ಅದು ಜಿಗುಟಾಗಿ ಪರಿಣಮಿಸಬಹುದು. ಎರಡನೆಯದಾಗಿ, ಅಕ್ಕಿ ಬೇಯಿಸಿದ ನಂತರ ಅದು ಇನ್ನೂ ಜಾಸ್ತಿ ಬೇಯಿಸುವುದನ್ನು ನಿಲ್ಲಿಸಲು ತಣ್ಣೀರಿನಿಂದ ತೊಳೆಯಬೇಕು. ಹಾಗೆಯೇ, ಅದನ್ನು ತೊಳೆದು ಸಂಪೂರ್ಣವಾಗಿ ಒಣಗಲು, ತಟ್ಟೆಯಲ್ಲಿ ಹರಡಲು ಸೂಚಿಸಲಾಗುತ್ತದೆ. ಕೊನೆಯದಾಗಿ, ಅಕ್ಕಿ ಬೇಯಿಸುವಾಗ ನಾನು ಸೇರಿಸಿದ ಒಣ ಮಸಾಲೆಗಳು ಬಿರಿಯಾನಿಗೆ ಸೇರಿಸುವುದು ಅತ್ಯಗತ್ಯ. ಆದಾಗ್ಯೂ, ಇದು ಪುಲಾವ್ ಮತ್ತು ಫ್ರೈಡ್ ರೈಸ್ ಗೆ ಬಳಸುವುದು ನಿಮ್ಮ ಇಷ್ಟ. ಆದ್ದರಿಂದ ನಿಮ್ಮ ಅಂತಿಮ ಉತ್ಪನ್ನದ ಪ್ರಕಾರ ಮಸಾಲೆಗಳನ್ನು ಸೇರಿಸಿ ಅಥವಾ ಸೇರಿಸದಿರಿ.
ಅಂತಿಮವಾಗಿ, ಬಿರಿಯಾನಿ ರೈಸ್ ಪಾಕವಿಧಾನವನ್ನು ಹೇಗೆ ತಯಾರಿಸಬೇಕೆಂಬುದರ ಈ ಪೋಸ್ಟ್‌ನೊಂದಿಗೆ ನನ್ನ ಇತರ ಅಡುಗೆ ಸಲಹೆಗಳು ತಂತ್ರಗಳು ವಿಧಾನಗಳು ಪಾಕವಿಧಾನಗಳ ಸಂಗ್ರಹವನ್ನು ಭೇಟಿ ಮಾಡಲು ನಾನು ವಿನಂತಿಸುತ್ತೇನೆ. ಇದು ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಮೈದಾ ಹಿಟ್ಟನ್ನು ಮನೆಯಲ್ಲಿ ಹೇಗೆ ತಯಾರಿಸುವುದು, ಬಾಳೆ ಹೂವುಗಳು, ಚೀಸ್ ಅನ್ನು 30 ನಿಮಿಷಗಳಲ್ಲಿ ಹೇಗೆ ತಯಾರಿಸುವುದು, ಕೆನೆಯಿಂದ ಬೆಣ್ಣೆ, ತುಪ್ಪ, ಮಜ್ಜಿಗೆ ಮತ್ತು ವಿಪ್ಡ್ ಕ್ರೀಮ್ ಅನ್ನು ತಯಾರಿಸುವುದು ಹೇಗೆ, ನೀವು ಅಡುಗೆಮನೆಯಲ್ಲಿ ತಪ್ಪು ಮಾಡುತ್ತಿರುವ 5 ವಿಷಯಗಳು ಮತ್ತು ಅದನ್ನು ಹೇಗೆ ಸರಿಪಡಿಸುವುದು, ಎರಕಹೊಯ್ದ ಕಬ್ಬಿಣ / ಬಾಣಲೆ ಪ್ಯಾನ್ ಅನ್ನು ಹೇಗೆ ಸ್ವಚ್ಚಗೊಳಿಸುವುದು ಮತ್ತು ನಿರ್ವಹಿಸುವುದು, ಮನೆಯಲ್ಲಿ ಪನೀರ್ ತಯಾರಿಸುವುದು ಹೇಗೆ, ಟುಟ್ಟಿ ಫ್ರೂಟಿ, ಸಸ್ಯಾಹಾರಿ ಆಹಾರದಲ್ಲಿರುವಾಗ ನಿಮ್ಮ ಅಂಬೆಗಾಲಿಡುವ ಮಗುವಿಗೆ ಹೆಚ್ಚು ಪ್ರೋಟೀನ್ ಪಡೆಯುವುದು ಹೇಗೆ, ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದು ಏಕೆ ಮತ್ತು ಆರೋಗ್ಯಕರ ಆಹಾರ ಸೇವನೆಯೊಂದಿಗೆ ಅದನ್ನು ಹೇಗೆ ನಿಭಾಯಿಸಿ. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಪಾಕವಿಧಾನ ವಿಭಾಗಗಳನ್ನು ನಮೂದಿಸಲು ಬಯಸುತ್ತೇನೆ,
ಬಿರಿಯಾನಿ ರೈಸ್ ಹೇಗೆ ಮಾಡುವುದು ಎಂಬ ಪಾಕವಿಧಾನದ ವಿಡಿಯೋ:
ಬಿರಿಯಾನಿ ರೈಸ್ ರೆಸಿಪಿ ಹೇಗೆ ಮಾಡುವುದು | biriyani rice in kannada
ಪದಾರ್ಥಗಳು
ದಾರಿ 1 ಗಾಗಿ:
- 1 ಕಪ್ ಬಾಸ್ಮತಿ ಅಕ್ಕಿ
- ನೀರು, ತೊಳೆಯಲು ಮತ್ತು ಕುದಿಸಲು
- 1 ಟೀಸ್ಪೂನ್ ಕಾಳು ಮೆಣಸು
- 1 ಸ್ಟಾರ್ ಸೋಂಪು
- ½ ಇಂಚಿನ ದಾಲ್ಚಿನ್ನಿ
- 1 ಕಪ್ಪು ಏಲಕ್ಕಿ
- 4 ಏಲಕ್ಕಿ
- ½ ಟೀಸ್ಪೂನ್ ಲವಂಗ
- 3 ಬೇ ಎಲೆ
- 1 ಟೀಸ್ಪೂನ್ ಉಪ್ಪು
- 1 ಟೀಸ್ಪೂನ್ ನಿಂಬೆ ರಸ
- 1 ಟೀಸ್ಪೂನ್ ತುಪ್ಪ
ದಾರಿ 2 ಗಾಗಿ:
- 1 ಟೀಸ್ಪೂನ್ ತುಪ್ಪ
- 2 ಬೇ ಎಲೆ
- 1 ಟೀಸ್ಪೂನ್ ಕಾಳು ಮೆಣಸು
- 1 ಸ್ಟಾರ್ ಸೋಂಪು
- 5 ಏಲಕ್ಕಿ
- ½ ಟೀಸ್ಪೂನ್ ಲವಂಗ
- ½ ಇಂಚಿನ ದಾಲ್ಚಿನ್ನಿ
- 1 ಕಪ್ಪು ಏಲಕ್ಕಿ
- 1 ಕಪ್ ಬಾಸ್ಮತಿ ಅಕ್ಕಿ
- ನೀರು, ತೊಳೆಯಲು ಮತ್ತು ಕುದಿಸಲು
- 1 ಟೀಸ್ಪೂನ್ ಉಪ್ಪು
- 1 ಟೀಸ್ಪೂನ್ ನಿಂಬೆ ರಸ
ಸೂಚನೆಗಳು
ದಾರಿ 1: ನೆನೆಸುವ ಮತ್ತು ಕುದಿಯುವ ವಿಧಾನ:
- ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 1 ಕಪ್ ಬಾಸ್ಮತಿ ಅಕ್ಕಿ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ.
- 20 ನಿಮಿಷಗಳ ಕಾಲ ಸಾಕಷ್ಟು ನೀರಿನಲ್ಲಿ ನೆನೆಸಿ.
- ದೊಡ್ಡ ಪಾತ್ರೆಯಲ್ಲಿ ಸಾಕಷ್ಟು ನೀರು ತೆಗೆದುಕೊಂಡು 1 ಟೀಸ್ಪೂನ್ ಕಾಳು ಮೆಣಸು, 1 ಸ್ಟಾರ್ ಸೋಂಪು ಮತ್ತು ½ ಇಂಚಿನ ದಾಲ್ಚಿನ್ನಿ ಸೇರಿಸಿ.
- 1 ಪಾಡ್ ಕಪ್ಪು ಏಲಕ್ಕಿ, 4 ಪಾಡ್ ಏಲಕ್ಕಿ, ½ ಟೀಸ್ಪೂನ್ ಲವಂಗ ಮತ್ತು 3 ಬೇ ಎಲೆಗಳನ್ನು ಸೇರಿಸಿ.
- ಈಗ 1 ಟೀಸ್ಪೂನ್ ಉಪ್ಪು, 1 ಟೀಸ್ಪೂನ್ ನಿಂಬೆ ರಸ ಮತ್ತು 1 ಟೀಸ್ಪೂನ್ ತುಪ್ಪ ಸೇರಿಸಿ.
- 2 ನಿಮಿಷಗಳ ಕಾಲ ಕುದಿಸಿ ಅಥವಾ ನೀರನ್ನು ಸುವಾಸನೆ ತುಂಬುವವರೆಗೆ.
- ನೆನೆಸಿದ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಮತ್ತು ಉತ್ತಮ ಮಿಶ್ರಣವನ್ನು ನೀಡಿ.
- 2 ನಿಮಿಷ ಅಥವಾ 90% ಬೇಯುವವರೆಗೆ ಕುದಿಸಿ.
- ಬಾಸ್ಮತಿ ಅಕ್ಕಿಯನ್ನು ಸೋಸಿ, ಅಡುಗೆ ಪ್ರಕ್ರಿಯೆಯನ್ನು ನಿಲ್ಲಿಸಲು ತಣ್ಣೀರಿನಿಂದ ತೊಳೆಯಿರಿ.
- ಅಂತಿಮವಾಗಿ, ಬಾಸ್ಮತಿ ರೈಸ್ ಸಿದ್ಧವಾಗಿದೆ.
ದಾರಿ 2: ಹುರಿಯುವುದು ಮತ್ತು ಕುದಿಸುವುದು:
- ದೊಡ್ಡ ಕಡಾಯಿಯಲ್ಲಿ 1 ಟೀಸ್ಪೂನ್ ತುಪ್ಪ ತೆಗೆದುಕೊಂಡು 2 ಬೇ ಎಲೆ, 1 ಟೀಸ್ಪೂನ್ ಕಾಳು ಮೆಣಸು, 1 ಸ್ಟಾರ್ ಸೋಂಪು ಮತ್ತು 5 ಪಾಡ್ಸ್ ಏಲಕ್ಕಿ ಸೇರಿಸಿ.
- ½ ಟೀಸ್ಪೂನ್ ಲವಂಗ, ½ ಇಂಚಿನ ದಾಲ್ಚಿನ್ನಿ ಮತ್ತು 1 ಪಾಡ್ ಕಪ್ಪು ಏಲಕ್ಕಿ ಕೂಡ ಸೇರಿಸಿ.
- ಮಸಾಲೆಗಳು ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
- ತೊಳೆದ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಕಡಿಮೆ ಉರಿಯಲ್ಲಿ 2 ನಿಮಿಷ ಬೇಯಿಸಿ.
- ಮತ್ತಷ್ಟು ನೀರು, 1 ಟೀಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
- 2 ನಿಮಿಷ ಅಥವಾ 90% ಬೇಯುವವರೆಗೆ ಕುದಿಸಿ.
- ಬಾಸ್ಮತಿ ರೈಸ್ ನ್ನು ಸೋಸಿ ಮತ್ತು ಅಡುಗೆ ಪ್ರಕ್ರಿಯೆಯನ್ನು ನಿಲ್ಲಿಸಲು ತಣ್ಣೀರಿನಿಂದ ತೊಳೆಯಿರಿ.
- ಅಂತಿಮವಾಗಿ, ಬಿರಿಯಾನಿ, ಪುಲಾವ್ ಅಥವಾ ಹುರಿದ ಅಕ್ಕಿ ತಯಾರಿಸಲು, ಬಾಸ್ಮತಿ ರೈಸ್ ಸಿದ್ಧವಾಗಿದೆ.
ಹಂತ ಹಂತದ ಫೋಟೋದೊಂದಿಗೆ ಬಿರಿಯಾನಿ ರೈಸ್ ತಯಾರಿಸುವುದು ಹೇಗೆ:
ದಾರಿ 1: ನೆನೆಸುವ ಮತ್ತು ಕುದಿಯುವ ವಿಧಾನ:
- ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 1 ಕಪ್ ಬಾಸ್ಮತಿ ಅಕ್ಕಿ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ.
- 20 ನಿಮಿಷಗಳ ಕಾಲ ಸಾಕಷ್ಟು ನೀರಿನಲ್ಲಿ ನೆನೆಸಿ.
- ದೊಡ್ಡ ಪಾತ್ರೆಯಲ್ಲಿ ಸಾಕಷ್ಟು ನೀರು ತೆಗೆದುಕೊಂಡು 1 ಟೀಸ್ಪೂನ್ ಕಾಳು ಮೆಣಸು, 1 ಸ್ಟಾರ್ ಸೋಂಪು ಮತ್ತು ½ ಇಂಚಿನ ದಾಲ್ಚಿನ್ನಿ ಸೇರಿಸಿ.
- 1 ಪಾಡ್ ಕಪ್ಪು ಏಲಕ್ಕಿ, 4 ಪಾಡ್ ಏಲಕ್ಕಿ, ½ ಟೀಸ್ಪೂನ್ ಲವಂಗ ಮತ್ತು 3 ಬೇ ಎಲೆಗಳನ್ನು ಸೇರಿಸಿ.
- ಈಗ 1 ಟೀಸ್ಪೂನ್ ಉಪ್ಪು, 1 ಟೀಸ್ಪೂನ್ ನಿಂಬೆ ರಸ ಮತ್ತು 1 ಟೀಸ್ಪೂನ್ ತುಪ್ಪ ಸೇರಿಸಿ.
- 2 ನಿಮಿಷಗಳ ಕಾಲ ಕುದಿಸಿ ಅಥವಾ ನೀರನ್ನು ಸುವಾಸನೆ ತುಂಬುವವರೆಗೆ.
- ನೆನೆಸಿದ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಮತ್ತು ಉತ್ತಮ ಮಿಶ್ರಣವನ್ನು ನೀಡಿ.
- 2 ನಿಮಿಷ ಅಥವಾ 90% ಬೇಯುವವರೆಗೆ ಕುದಿಸಿ.
- ಬಾಸ್ಮತಿ ಅಕ್ಕಿಯನ್ನು ಸೋಸಿ, ಅಡುಗೆ ಪ್ರಕ್ರಿಯೆಯನ್ನು ನಿಲ್ಲಿಸಲು ತಣ್ಣೀರಿನಿಂದ ತೊಳೆಯಿರಿ.
- ಅಂತಿಮವಾಗಿ, ಬಾಸ್ಮತಿ ಅನ್ನ ಸಿದ್ಧವಾಗಿದೆ.
ದಾರಿ 2: ಹುರಿಯುವುದು ಮತ್ತು ಕುದಿಸುವುದು:
- ದೊಡ್ಡ ಕಡಾಯಿಯಲ್ಲಿ 1 ಟೀಸ್ಪೂನ್ ತುಪ್ಪ ತೆಗೆದುಕೊಂಡು 2 ಬೇ ಎಲೆ, 1 ಟೀಸ್ಪೂನ್ ಕಾಳು ಮೆಣಸು, 1 ಸ್ಟಾರ್ ಸೋಂಪು ಮತ್ತು 5 ಪಾಡ್ಸ್ ಏಲಕ್ಕಿ ಸೇರಿಸಿ.
- ½ ಟೀಸ್ಪೂನ್ ಲವಂಗ, ½ ಇಂಚಿನ ದಾಲ್ಚಿನ್ನಿ ಮತ್ತು 1 ಪಾಡ್ ಕಪ್ಪು ಏಲಕ್ಕಿ ಕೂಡ ಸೇರಿಸಿ.
- ಮಸಾಲೆಗಳು ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
- ತೊಳೆದ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಕಡಿಮೆ ಉರಿಯಲ್ಲಿ 2 ನಿಮಿಷ ಬೇಯಿಸಿ.
- ಮತ್ತಷ್ಟು ನೀರು, 1 ಟೀಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
- 2 ನಿಮಿಷ ಅಥವಾ 90% ಬೇಯುವವರೆಗೆ ಕುದಿಸಿ.
- ಬಾಸ್ಮತಿ ಅನ್ನವನ್ನು ಸೋಸಿ ಮತ್ತು ಅಡುಗೆ ಪ್ರಕ್ರಿಯೆಯನ್ನು ನಿಲ್ಲಿಸಲು ತಣ್ಣೀರಿನಿಂದ ತೊಳೆಯಿರಿ.
- ಅಂತಿಮವಾಗಿ, ಬಿರಿಯಾನಿ, ಪುಲಾವ್ ಅಥವಾ ಹುರಿದ ಅಕ್ಕಿ ತಯಾರಿಸಲು, ಬಾಸ್ಮತಿ ಅನ್ನ ಸಿದ್ಧವಾಗಿದೆ.
ಟಿಪ್ಪಣಿಗಳು:
- ಮೊದಲನೆಯದಾಗಿ, ಕೈ ಆಡಿಸುವಾಗ ಅಕ್ಕಿ ಮುರಿಯದಂತೆ ನೋಡಿಕೊಳ್ಳಿ.
- ಅಲ್ಲದೆ, ನಿಂಬೆ ರಸವನ್ನು ಸೇರಿಸುವುದರಿಂದ ಪ್ರಕಾಶಮಾನವಾದ ಬಿಳಿ ಬಣ್ಣದ ಅನ್ನ ಸಿಗುತ್ತದೆ.
- ಹಾಗೆಯೇ, ಮಸಾಲೆಗಳನ್ನು ಸೇರಿಸುವುದರಿಂದ ರೈಸ್ ಗೆ ಉತ್ತಮ ಪರಿಮಳವನ್ನು ನೀಡುತ್ತದೆ.
- ಅಂತಿಮವಾಗಿ, ಉದ್ದವಾದ ಧಾನ್ಯಗಳನ್ನು ಪಡೆಯಲು ಉತ್ತಮ ಗುಣಮಟ್ಟದ ಬಾಸ್ಮತಿ ಅಕ್ಕಿಯನ್ನು ಆಯ್ಕೆ ಮಾಡಲು ಖಚಿತಪಡಿಸಿಕೊಳ್ಳಿ.