ಮಿಲ್ಕ್ಮೇಡ್ ರೆಸಿಪಿ | ಕಂಡೆನ್ಸ್ಡ್ ಮಿಲ್ಕ್ ಪಾಕವಿಧಾನ | 3 ನಿಮಿಷಗಳಲ್ಲಿ ಮನೆಯಲ್ಲಿ ತಯಾರಿಸಿದ ಮಿಲ್ಕ್‌ಮೇಡ್ ನ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಹಾಲಿನ ಪುಡಿಯಿಂದ ತಯಾರಿಸಿದ ಸುಲಭ, ಸರಳ ಹಾಗೂ ಸಿಹಿಗೊಳಿಸಿದ ದಪ್ಪವಾದ ಹಾಲಿನ ಪಾಕವಿಧಾನ. ನಿಮ್ಮ ಕಿಚನ್ ಶೆಲ್ಫ್‌ನಲ್ಲಿ ಹೊಂದಲು ಇದು ಸೂಕ್ತವಾದ ಸಾಮಾಗ್ರಿಯಾಗಿದೆ. ಇದನ್ನು ಹೆಚ್ಚಿನ ಭಾರತೀಯ ಸಿಹಿತಿಂಡಿಗಳಿಗೆ ಬಳಸಬಹುದು. ಮೂಲತಃ ಅಂಗಡಿಯಿಂದ ಖರೀದಿಸುವ ದುಬಾರಿ ಮಿಲ್ಕ್‌ಮೇಡ್ ಬದಲು ಇದೊಂದು ಮಿತವ್ಯಯದ ಪಾಕವಿಧಾನವಾಗಿದೆ.
ನಾನು ಇತ್ತೀಚೆಗೆ ಬಹಳಷ್ಟು ಭಾರತೀಯ ಸಿಹಿತಿಂಡಿಗಳ ಪಾಕವಿಧಾನಗಳನ್ನು ಪೋಸ್ಟ್ ಮಾಡುತ್ತಿದ್ದೇನೆ, ಅದರಲ್ಲಿ ನಾನು ಸಾಮಾನ್ಯವಾಗಿ ಬಳಸುವ ಒಂದು ಸಾಮಾಗ್ರಿ ಎಂದರೆ ಅದು ಮಿಲ್ಕ್ ಮೇಡ್. ತ್ವರಿತ ಮತ್ತು ಸುಲಭವಾದ ಮಿಲ್ಕ್‌ಮೇಡ್ ಪಾಕವಿಧಾನವನ್ನು ತೋರಿಸಲು ನಾನು ಸಾಕಷ್ಟು ಸಂದೇಶಗಳನ್ನು ಪಡೆಯುತ್ತಿದ್ದೇನೆ. ಆದ್ದರಿಂದ ನಾನು ಈ ಪಾಕವಿಧಾನವನ್ನು ವೀಡಿಯೊದೊಂದಿಗೆ ನಿಮ್ಮೊಂದಿಗೆ ಹಂಚಿಕೊಳ್ಳಲು ಯೋಚಿಸಿದೆ. ಆದರೆ ನಾನು ತಯಾರಿಸಿದ ಈ ಮಿಲ್ಕ್ ಮೇಡ್ ಪಾಕವಿಧಾನವು, ಸಾಂಪ್ರದಾಯಿಕವಾಗಿ ತಯಾರಿಸಿದ ಪಾಕವಿಧಾನವಲ್ಲ. ಪೂರ್ಣ ಕೆನೆಯ ಹಾಲನ್ನು ಆವಿಯಾಗುವ ಮೂಲಕ ತಯಾರಿಸುವುದು ಸಾಂಪ್ರದಾಯಿಕ ಮಾರ್ಗವಾಗಿದೆ. ಆವಿಯಾಗುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ, ಹಾಗೂ ಅದು ದಪ್ಪವಾಗುವವರೆಗೆ ಅದನ್ನು ನಿರಂತರವಾಗಿ ಕೈ ಆಡಿಸುವುದು ತುಂಬಾ ಶ್ರಮದ ಕೆಲಸವಾಗಿದೆ. ಆದ್ದರಿಂದ ಹಾಲಿನ ಪುಡಿ, ಸಕ್ಕರೆ ಮತ್ತು ಅಡಿಗೆ ಸೋಡಾದೊಂದಿಗೆ ದಪ್ಪವಾದ ಕಂಡೆನ್ಸ್ಡ್ ಮಿಲ್ಕ್ ಅನ್ನು ತಯಾರಿಸಲು ಶಾರ್ಟ್‌ಕಟ್ ಮಾರ್ಗವನ್ನು ನಾನು ನಿಮಗೆ ತೋರಿಸಿದ್ದೇನೆ. ನೀವು ಇದನ್ನು ಭಾರತೀಯ ಸಿಹಿತಿಂಡಿಗಳಿಗೆ ಅಥವಾ ಕೇಕ್ ಪಾಕವಿಧಾನಗಳಿಗೆ ಚೆನ್ನಾಗಿ ಬಳಸಬಹುದು.
ಇದಲ್ಲದೆ, ಮಿಲ್ಕ್ಮೇಡ್ ಪಾಕವಿಧಾನಕ್ಕೆ ಇನ್ನೂ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳು ಮತ್ತು ವ್ಯತ್ಯಾಸಗಳು. ಮೊದಲನೆಯದಾಗಿ, ದಪ್ಪವಾದ ಕೆನೆಯುಕ್ತ ಕಂಡೆನ್ಸ್ಡ್ ಮಿಲ್ಕ್ ಅನ್ನು ಪಡೆಯಲು ಅತ್ಯುತ್ತಮ ಗುಣಮಟ್ಟದ ಹಾಲಿನ ಪುಡಿಯನ್ನು ಬಳಸಲು ನಾನು ಶಿಫಾರಸು ಮಾಡುತ್ತೇನೆ. ಇಲ್ಲದಿದ್ದರೆ ಅದು ತೆಳ್ಳಗಿನ ಮತ್ತು ನಯವಾದ ಹಾಲಿನೊಂದಿಗೆ ಕೊನೆಗೊಳ್ಳುತ್ತದೆ. ಹಾಗಾಗಿ ಅದರೊಂದಿಗೆ ರಾಜಿ ಮಾಡಿಕೊಳ್ಳಬೇಡಿ. ಎರಡನೆಯದಾಗಿ, ನೊರೆ ಮತ್ತು ಕೆನೆಯುಕ್ತ ಮಿಲ್ಕ್ ಮೇಡ್ ಅನ್ನು ಪಡೆಯಲು ಕಾರ್ನ್‌ಫ್ಲೋರ್ ಮತ್ತು ಅಡಿಗೆ ಸೋಡಾವನ್ನು ಸೇರಿಸುವುದು ಅತ್ಯಾವಶ್ಯಕ. ಆದ್ದರಿಂದ ಇದನ್ನು ತಪ್ಪಿಸಿ ಈ ಪಾಕವಿಧಾನವನ್ನು ಪ್ರಯತ್ನಿಸದರೆ ಯಾವುದೇ ಪ್ರಯೋಜನವಿಲ್ಲ. ಕೊನೆಯದಾಗಿ, ಈ ಪಾಕವಿಧಾನಕ್ಕೆ ಯಾವುದೇ ಸಂರಕ್ಷಕವನ್ನು ಸೇರಿಸಲಾಗಿಲ್ಲ, ಹಾಗಾಗಿ ಅಂಗಡಿಯಲ್ಲಿ ಖರೀದಿಸಿದ ಮಿಲ್ಕ್ ಮೇಡ್ ಗೆ ಹೋಲಿಸಿದರೆ ಇದು ದೀರ್ಘಕಾಲ ಉಳಿಯುವುದಿಲ್ಲ. ಆದರೂ ನೀವು ಇದನ್ನು ರೆಫ್ರಿಜರೇಟರ್‌ನಲ್ಲಿ ಕನಿಷ್ಠ 1 ವಾರಗಳವರೆಗೆ ಗಾಳಿಯಾಡದ ಪಾತ್ರೆಯಲ್ಲಿ ಸಂರಕ್ಷಿಸಬಹುದು.
ಅಂತಿಮವಾಗಿ, ಮಿಲ್ಕ್ಮೇಡ್ ಪಾಕವಿಧಾನದ ಈ ಪೋಸ್ಟ್‌ನೊಂದಿಗೆ ನನ್ನ ಇತರ ಅಡುಗೆ ಸಲಹೆಗಳು ತಂತ್ರಗಳು ವಿಧಾನಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸಲು ನಾನು ವಿನಂತಿಸುತ್ತೇನೆ. ಅವುಗಳು ಯಾವುದೆಂದರೆ, ಚೀಸ್ ಪಾಕವಿಧಾನವು ಕೇವಲ 30 ನಿಮಿಷಗಳಲ್ಲಿ ತಯಾರಿಸಬಹುದು, ಡಯೆಟರಿ ಸಪ್ಲಿಮೆಂಟ್ಸ್: ನೀವು ತಿಳಿದುಕೊಳ್ಳಬೇಕಾದದ್ದು, ಕೆನೆಯಿಂದ ಬೆಣ್ಣೆ, ತುಪ್ಪ, ಮಜ್ಜಿಗೆ ಮತ್ತು ವಿಪ್ಪ್ಡ್ ಕ್ರೀಮ್ ತಯಾರಿಸುವುದು, ಬಾದಮ್ ಪೌಡರ್, ಆಮ್ ಪಾಪಡ್, 5 ವಿಷಯಗಳನ್ನು ನೀವು ಅಡುಗೆ ಮನೆಯಲ್ಲಿ ತಪ್ಪಾಗಿ ಮಾಡುತ್ತಿದ್ದೀರಿ ಮತ್ತು ಅದನ್ನು ಹೇಗೆ ಸರಿಪಡಿಸುವುದು, ಕಬ್ಬಿಣ ಕಲ್ಲು / ಬಾಣಲೆ ಪ್ಯಾನ್ ಅನ್ನು ಹೇಗೆ ಸ್ವಚ್ಛಗೊಳಿಸುವುದು ಮತ್ತು ಕಾಪಾಡುವುದು, ಮನೆಯಲ್ಲಿ ಪನೀರ್ ತಯಾರಿಸುವುದು ಹೇಗೆ, ಪುದೀನ ಎಲೆಯ ಟಾಪ್ 6 ಆರೋಗ್ಯ ಪ್ರಯೋಜನಗಳು, ಟುಟ್ಟಿ ಫ್ರೂಟಿ. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಸಂಬಂಧಿತ ಪಾಕವಿಧಾನ ವಿಭಾಗಗಳನ್ನು ಹೈಲೈಟ್ ಮಾಡಲು ಬಯಸುತ್ತೇನೆ,
ಮಿಲ್ಕ್ಮೇಡ್ ವೀಡಿಯೊ ಪಾಕವಿಧಾನ:
ಕಂಡೆನ್ಸ್ಡ್ ಮಿಲ್ಕ್ ಪಾಕವಿಧಾನ ಕಾರ್ಡ್:
ಮಿಲ್ಕ್ಮೇಡ್ ರೆಸಿಪಿ | milkmaid in kannada | ಕಂಡೆನ್ಸ್ಡ್ ಮಿಲ್ಕ್ ಪಾಕವಿಧಾನ
ಪದಾರ್ಥಗಳು
- 2 ಕಪ್ ಹಾಲಿನ ಪುಡಿ, ಪೂರ್ಣ ಕೆನೆಯುಕ್ತ
- 1 ಟೀಸ್ಪೂನ್ ಕಾರ್ನ್ ಫ್ಲೋರ್
- ¼ ಟೀಸ್ಪೂನ್ ಅಡಿಗೆ ಸೋಡಾ
- 1 ಕಪ್ ಸಕ್ಕರೆ
- 1 ಕಪ್ ಹಾಲು
ಸೂಚನೆಗಳು
- ಮೊದಲನೆಯದಾಗಿ, ಒಂದು ಪಾತ್ರೆಯಲ್ಲಿ 2 ಕಪ್ ಫುಲ್ ಕ್ರೀಮ್ ಪೌಡರ್, 1 ಟೀಸ್ಪೂನ್ ಕಾರ್ನ್ ಫ್ಲೋರ್, 1 ಕಪ್ ಸಕ್ಕರೆ, ¼ ಟೀಸ್ಪೂನ್ ಅಡಿಗೆ ಸೋಡಾ ಮತ್ತು 1 ಕಪ್ ಹಾಲು ತೆಗೆದುಕೊಳ್ಳಿ.
- ಎಲ್ಲವೂ ಸಂಯೋಜನೆ ಆಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಹಾಲಿನ ಮಿಶ್ರಣವನ್ನು ದೊಡ್ಡ ಕಡಾಯಿಗೆ ಸುರಿಯಿರಿ ಮತ್ತು ಕೈ ಆಡಿಸುತ್ತಿರಿ.
- ಜ್ವಾಲೆಯನ್ನು ಮಧ್ಯಮವಾಗಿ ಇರಿಸಿ ಕೈ ಆಡಿಸುತ್ತಿರಿ.
- ಮಿಶ್ರಣವು ಸ್ವಲ್ಪ ದಪ್ಪವಾಗಲು ಪ್ರಾರಂಭವಾಗುತ್ತದೆ.
- 3 ನಿಮಿಷಗಳ ನಂತರ, ಈ ಮಿಶ್ರಣವು ನೊರೆ ಮತ್ತು ರೇಷ್ಮೆಯಂತಹ ನಯವಾದ ವಿನ್ಯಾಸವನ್ನು ಪಡೆಯುತ್ತದೆ.
- ಈಗ ಜ್ವಾಲೆಯನ್ನು ಆಫ್ ಮಾಡಿ ಮತ್ತು ಸಂಪೂರ್ಣವಾಗಿ ತಣ್ಣಗಾಗಿಸಿ. ಮಿಶ್ರಣವು ಸ್ವಲ್ಪ ತೆಳುವಿದ್ದಾಗಲೇ ಜ್ವಾಲೆಯನ್ನು ಆಫ್ ಮಾಡಲು ಖಚಿತಪಡಿಸಿಕೊಳ್ಳಿ. ಏಕೆಂದರೆ ತಣ್ಣಗಾದ ಮೇಲೆ ಅದು ದಪ್ಪವಾಗುವ ಸಾಧ್ಯತೆ ಇರುತ್ತದೆ.
- ಅಂತಿಮವಾಗಿ, ಈ ಕಂಡೆನ್ಸ್ಡ್ ಮಿಲ್ಕ್ ಅಥವಾ ಮಿಲ್ಕ್‌ಮೇಡ್ ಆನಂದಿಸಲು ಸಿದ್ಧವಾಗಿದೆ.
ಹಂತ ಹಂತದ ಫೋಟೊದೊಂದಿಗೆ ಮಿಲ್ಕ್ಮೇಡ್ ಮಾಡುವುದು ಹೇಗೆ:
- ಮೊದಲನೆಯದಾಗಿ, ಒಂದು ಪಾತ್ರೆಯಲ್ಲಿ 2 ಕಪ್ ಫುಲ್ ಕ್ರೀಮ್ ಪೌಡರ್, 1 ಟೀಸ್ಪೂನ್ ಕಾರ್ನ್ ಫ್ಲೋರ್, 1 ಕಪ್ ಸಕ್ಕರೆ, ¼ ಟೀಸ್ಪೂನ್ ಅಡಿಗೆ ಸೋಡಾ ಮತ್ತು 1 ಕಪ್ ಹಾಲು ತೆಗೆದುಕೊಳ್ಳಿ.
- ಎಲ್ಲವೂ ಸಂಯೋಜನೆ ಆಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಹಾಲಿನ ಮಿಶ್ರಣವನ್ನು ದೊಡ್ಡ ಕಡಾಯಿಗೆ ಸುರಿಯಿರಿ ಮತ್ತು ಕೈ ಆಡಿಸುತ್ತಿರಿ.
- ಜ್ವಾಲೆಯನ್ನು ಮಧ್ಯಮವಾಗಿ ಇರಿಸಿ ಕೈ ಆಡಿಸುತ್ತಿರಿ.
- ಮಿಶ್ರಣವು ಸ್ವಲ್ಪ ದಪ್ಪವಾಗಲು ಪ್ರಾರಂಭವಾಗುತ್ತದೆ.
- 3 ನಿಮಿಷಗಳ ನಂತರ, ಈ ಮಿಶ್ರಣವು ನೊರೆ ಮತ್ತು ರೇಷ್ಮೆಯಂತಹ ನಯವಾದ ವಿನ್ಯಾಸವನ್ನು ಪಡೆಯುತ್ತದೆ.
- ಈಗ ಜ್ವಾಲೆಯನ್ನು ಆಫ್ ಮಾಡಿ ಮತ್ತು ಸಂಪೂರ್ಣವಾಗಿ ತಣ್ಣಗಾಗಿಸಿ. ಮಿಶ್ರಣವು ಸ್ವಲ್ಪ ತೆಳುವಿದ್ದಾಗಲೇ ಜ್ವಾಲೆಯನ್ನು ಆಫ್ ಮಾಡಲು ಖಚಿತಪಡಿಸಿಕೊಳ್ಳಿ. ಏಕೆಂದರೆ ತಣ್ಣಗಾದ ಮೇಲೆ ಅದು ದಪ್ಪವಾಗುವ ಸಾಧ್ಯತೆ ಇರುತ್ತದೆ.
- ಅಂತಿಮವಾಗಿ, ಈ ಕಂಡೆನ್ಸ್ಡ್ ಮಿಲ್ಕ್ ಅಥವಾ ಮಿಲ್ಕ್‌ಮೇಡ್ ಆನಂದಿಸಲು ಸಿದ್ಧವಾಗಿದೆ.
ಟಿಪ್ಪಣಿಗಳು:
- ಮೊದಲನೆಯದಾಗಿ, ಉತ್ತಮ ಗುಣಮಟ್ಟದ ಹಾಲಿನ ಪುಡಿಯನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ನೀವು ಕೆಟ್ಟ ವಾಸನೆಯನ್ನು ಪಡೆಯಬಹುದು.
- ಹಾಗೆಯೇ, ಜ್ವಾಲೆಯನ್ನು ಮಧ್ಯಮವಾಗಿ ಇರಿಸಿ, ಕೈಆಡಿಸುತ್ತಿರಿ. ಇಲ್ಲದಿದ್ದರೆ ಹಾಲು ತಳ ಹಿಡಿಯುವ ಎಲ್ಲಾ ಸಾಧ್ಯತಗಳು ಇರುತ್ತವೆ.
- ಅಡಿಗೆ ಸೋಡಾ ಸೇರಿಸುವುದನ್ನು ಬಿಡಬೇಡಿ. ನಯವಾದ ವಿನ್ಯಾಸವನ್ನು ಪಡೆಯಲು ಇದು ಪ್ರಮುಖ ಅಂಶವಾಗಿದೆ.
- ಅಂತಿಮವಾಗಿ, ಕಂಡೆನ್ಸ್ಡ್ ಮಿಲ್ಕ್ ಅಥವಾ ಮಿಲ್ಕ್‌ಮೇಡ್ ಪಾಕವಿಧಾನ ಫ್ರಿಡ್ಜ್ ನಲ್ಲಿಟ್ಟರೆ ಒಂದು ವಾರದವರೆಗೆ ಉತ್ತಮವಾಗಿರುತ್ತದೆ.