ಮೈಸೂರು ಮಸಾಲಾ ದೋಸೆ ರೆಸಿಪಿ | mysore masala dosa in kannada

0

ಮೈಸೂರು ಮಸಾಲಾ ದೋಸೆ ಪಾಕವಿಧಾನ | ಮೈಸೂರು ದೋಸಾ | ಮೈಸೂರು ಮಸಾಲಾ ದೋಸಾದ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಫೆರ್ಮೆಂಟ್ ಮಾಡಿದ ದೋಸಾ ಬ್ಯಾಟರ್ ನಿಂದ ತಯಾರಿಸಲಾದ ತೆಳುವಾದ ಮತ್ತು ಗರಿಗರಿಯಾದ ದೋಸೆಯಾಗಿದ್ದು ಕೆಂಪು ಬೆಳ್ಳುಳ್ಳಿ ಚಟ್ನಿ ಮತ್ತು ಆಲೂಗಡ್ಡೆ ಮಸಾಲಾದಿಂದ ಟಾಪ್ ಮಾಡಲ್ಪಡುತ್ತದೆ. ಇದರ ಗೋಚರತೆ ಮತ್ತು ವಿನ್ಯಾಸವು ವಿಶ್ವ ಪ್ರಸಿದ್ಧ ಮಸಾಲಾ ದೋಸಾವನ್ನು ಹೋಲುತ್ತದೆ. ಆದರೆ ಮುಖ್ಯ ವ್ಯತ್ಯಾಸವೆಂದರೆ ಕೆಂಪು ಬೆಳ್ಳುಳ್ಳಿ ಚಟ್ನಿ ಇದರ ಮೇಲೆ ಹರಡಲಾಗುತ್ತದೆ.
ಮೈಸೂರು ಮಸಾಲಾ ದೋಸಾ ರೆಸಿಪಿ

ಮೈಸೂರು ಮಸಾಲಾ ದೋಸೆ ಪಾಕವಿಧಾನ | ಮೈಸೂರು ದೋಸಾ | ಮೈಸೂರು ಮಸಾಲಾ ದೋಸಾದ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ದೋಸೆ ಪಾಕವಿಧಾನಗಳು ದಕ್ಷಿಣ ಭಾರತೀಯ ಪಾಕಪದ್ಧತಿಗೆ ತುಂಬಾ ಸ್ಥಳೀಯವಾಗಿವೆ. ಆದರೆ ದೋಸಾ ಅಥವಾ ಮಸಾಲಾ ದೋಸಾದ ನಿಖರವಾದ ಮೂಲವು ಇನ್ನೂ ತಿಳಿದಿಲ್ಲ. ಆದರೆ ಜನಪ್ರಿಯ ಸಂಪ್ರದಾಯಿಕ ಮಾಸಾಲಾ ದೋಸೆಯು ಉಡುಪಿ ಮೂಲದ ದೋಸೆ ಪಾಕಪದ್ಧತಿಗೆ ಸೇರಲ್ಪಟ್ಟಿವೆ. ಇಂತಹ ವಿಸ್ತೃತ ವ್ಯತ್ಯಾಸವು ಮೈಸೂರು ದೋಸೆಯಾಗಿದ್ದು ಕೆಂಪು ಬೆಳ್ಳುಳ್ಳಿ ಚಟ್ನಿಯ ಉದಾರ ಬಳಕೆಯನ್ನು ಹೊಂದಿದೆ.

ಮೈಸೂರು ಮಸಾಲಾ ದೋಸೆ ಪಾಕವಿಧಾನದಲ್ಲಿ, ನಾನು ಕೆಂಟ್ ಟರ್ಬೊ ಮಿಕ್ಸರ್ ಮತ್ತು ಗ್ರೈಂಡರ್ ಅನ್ನು ಬಳಸಿದ್ದೇನೆ, ಇದರಲ್ಲಿ ದೋಸಾ ಮಿಕ್ಸ್ ನ ಪ್ರಿಸೆಟ್ ಆಯ್ಕೆ ಇರುತ್ತದೆ. ಆದ್ದರಿಂದ ನಾನು ಸಾಂಪ್ರದಾಯಿಕ ಪಾಕವಿಧಾನಗಳ ಹಾಗೆ ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ನೆನೆಸಿಲ್ಲ. ನೆನೆಸುವ ಮುಖ್ಯ ಕಾರಣವೆಂದರೆ ಅಕ್ಕಿ ಮತ್ತು ಉದ್ದಿನಬೇಳೆಯನ್ನು ಮೃದುಗೊಳಿಸುವುದು, ಹಾಗೂ ಅಂತಿಮವಾಗಿ ರುಬ್ಬುವಾಗ ಇದು ಸಹಾಯ ಮಾಡುತ್ತದೆ. ಆದಾಗ್ಯೂ ಕೆಂಟ್ ಟರ್ಬೊ ಗ್ರೈಂಡರ್ನ ಮೊದಲಿನ ಕಾರ್ಯದಿಂದಾಗಿ, ನೆನೆಸುವ ಹಂತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬಹುದು. ಆದರೆ ನೀವು ಸಾಮಾನ್ಯ ಬ್ಲೆಂಡರ್ ಅಥವಾ ಗ್ರೈಂಡರ್ ಅನ್ನು ಬಳಸುತ್ತಿದ್ದರೆ, ಕನಿಷ್ಠ 4-5 ಗಂಟೆಗಳ ಕಾಲ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಲು ನಾನು ಶಿಫಾರಸು ಮಾಡುತ್ತೇನೆ. ಹೆಚ್ಚುವರಿಯಾಗಿ ನೀವು ದೊಡ್ಡ ಪ್ರಮಾಣದಲ್ಲಿ ಯೋಜಿಸುತ್ತಿದ್ದರೆ ಪ್ರತ್ಯೇಕ ಪಾತ್ರದಲ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಿ.

ಮೈಸೂರು ದೋಸಇದಲ್ಲದೆ ಗರಿಗರಿಯಾದ ಮತ್ತು ಪರಿಪೂರ್ಣ ಮೈಸೂರು ಮಸಾಲಾ ದೋಸೆ ರೆಸಿಪಿಗಾಗಿ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲಿಗೆ, ದೋಸಾ ಬ್ಯಾಟರ್ ಅನ್ನು ಗರಿಗರಿಯಾದಂತೆ ಮಾಡಲು ನಾನು ತೆಳುವಾದ ಅವಲಕ್ಕಿಯನ್ನು ಸೇರಿಸಿದ್ದೇನೆ ಆದರೆ ಅದು ಸಂಪೂರ್ಣವಾಗಿ ನಿಮ್ಮ ಇಚ್ಛೆಯಾಗಿರುತ್ತದೆ. ಎರಡನೆಯದಾಗಿ, ಬ್ಯಾಟರ್ ಅನ್ನು ರುಬ್ಬಿದ ನಂತರ ನೀವು 1-2 ಟೀಸ್ಪೂನ್ ಬಾಂಬೆ ರವೆಯನ್ನು ದೋಸಾ ಬ್ಯಾಟರ್ಗೆ ಸೇರಿಸಬಹುದು. ಇದು ದೋಸಾವನ್ನು ಹೆಚ್ಚು ಗರಿಗರಿಯಾದಂತೆ ಮಾಡಲು ಖಚಿತಪಡಿಸುತ್ತದೆ. ಕೊನೆಯದಾಗಿ, ದೋಸೆಯ ಮೇಲ್ಭಾಗವನ್ನು ಬೇಯಿಸಿದ ನಂತರ ಕೆಂಪು ಚಟ್ನಿ ಅನ್ನು ಅನ್ವಯಿಸಿ, ಇಲ್ಲದಿದ್ದರೆ ದೋಸೆಯು ಗೊಂದಲಮಯವಾಗಿ ತಿರುಗಬಹುದು.

ಅಂತಿಮವಾಗಿ ನನ್ನ ಇತರದಕ್ಷಿಣ ಭಾರತೀಯ ದೋಸೆ ಪಾಕವಿಧಾನಗಳು ಪಾಕವಿಧಾನಗಳ ಸಂಗ್ರಹವನ್ನು ಮೈಸೂರು ಮಸಾಲಾ ದೋಸೆ ಪಾಕವಿಧಾನದೊಂದಿಗೆ ಹೈಲೈಟ್ ಮಾಡಲು ನಾನು ಬಯಸುತ್ತೇನೆ. ಇದು, ರವಾ ಮಸಾಲಾ ದೋಸೆ, ರವಾ ದೋಸೆ, ಪೋಹಾ ದೋಸೆ, ಸ್ಪಾಂಜ್ ದೋಸೆ, ಮೊಸರು ದೋಸೆ, ಸಾಬುದಾನಾ ದೋಸೆ, ಪಾವ್ ಭಾಜಿ ದೋಸೆ, ನೀರ್ ದೋಸೆ, ಬ್ರೆಡ್ ಉತ್ತಪಮ್, ಚೀಸ್ ದೋಸೆ, ಸ್ಪ್ರಿಂಗ್ ದೋಸೆ ಮತ್ತು ಅಪ್ಪಮ್ ರೆಸಿಪಿಯನ್ನು ಒಳಗೊಂಡಿದೆ. ಇದರ ಜೊತೆಗೆ ನನ್ನ ಇತರ ಪಾಕವಿಧಾನ ಸಂಗ್ರಹಣೆಯನ್ನು ಭೇಟಿ ಮಾಡಿ,

ಮೈಸೂರು ಮಸಾಲಾ ದೋಸೆ ವೀಡಿಯೊ ಪಾಕವಿಧಾನ:

Must Read:

ಮೈಸೂರು ಮಸಾಲಾ ದೋಸೆ ಪಾಕವಿಧಾನ ಕಾರ್ಡ್:

mysore masala dosa recipe

ಮೈಸೂರು ಮಸಾಲಾ ದೋಸೆ ರೆಸಿಪಿ | mysore masala dosa in kannada

No ratings yet
ತಯಾರಿ ಸಮಯ: 8 hours
ಅಡುಗೆ ಸಮಯ: 40 minutes
ಒಟ್ಟು ಸಮಯ : 8 hours 40 minutes
ಸೇವೆಗಳು: 20 ದೋಸೆ
AUTHOR: HEBBARS KITCHEN
ಕೋರ್ಸ್: ದೋಸೆ
ಪಾಕಪದ್ಧತಿ: ಕರ್ನಾಟಕ
ಕೀವರ್ಡ್: ಮೈಸೂರು ಮಸಾಲಾ ದೋಸೆ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಮೈಸೂರು ಮಸಾಲಾ ದೋಸೆ ಪಾಕವಿಧಾನ | ಮೈಸೂರು ದೋಸಾ | ಮೈಸೂರು ಮಸಾಲಾ ದೋಸಾ

ಪದಾರ್ಥಗಳು

ಮೈಸೂರು ಮಸಾಲಾ ದೋಸಾ ಬ್ಯಾಟರ್ ಗಾಗಿ:

  • ಕಪ್ ದೋಸೆ ಅಕ್ಕಿ / ಸೋನಾ ಮಸೂರಿ ರೈಸ್
  • ½ ಕಪ್ ಉದ್ದಿನ ಬೇಳೆ
  • 1 ಟೇಬಲ್ಸ್ಪೂನ್ ತೊಗರಿ ಬೇಳೆ
  • 1 ಟೇಬಲ್ಸ್ಪೂನ್ ಕಡ್ಲೆ ಬೇಳೆ
  • ¼ ಟೀಸ್ಪೂನ್ ಮೇಥಿ / ಮೆಂತ್ಯೆ ಬೀಜಗಳು
  • ನೀರು (ನೆನೆಸಿಕೊಳ್ಳಲು)
  • ½ ಕಪ್ ತೆಳುವಾದ ಪೊಹಾ / ಅವಲ್ / ಅವಲಕ್ಕಿ(ತೊಳೆದ)

ಆಲೂ ಭಾಜಿಗಾಗಿ:

  • 2 ಟೀಸ್ಪೂನ್ ಎಣ್ಣೆ
  • 1 ಟೀಸ್ಪೂನ್ ಸಾಸಿವೆ
  • ½ ಟೀಸ್ಪೂನ್ ಜೀರಾ
  • 1 ಟೀಸ್ಪೂನ್ ಕಡ್ಲೆ ಬೇಳೆ
  • ½ ಟೀಸ್ಪೂನ್ ಉದ್ದಿನ ಬೇಳೆ
  • ಚಿಟಿಕೆ ಹಿಂಗ್
  • 1 ಒಣಗಿದ ಕೆಂಪು ಮೆಣಸಿನಕಾಯಿ
  • ಕೆಲವು ಕರಿ ಬೇವಿನ ಎಲೆಗಳು
  • ½ ಈರುಳ್ಳಿ (ಸಣ್ಣಗೆ ಕತ್ತರಿಸಿದ)
  • 1 ಹಸಿರು ಮೆಣಸಿನಕಾಯಿ (ಸಣ್ಣಗೆ ಕತ್ತರಿಸಿದ)
  • 1 ಇಂಚಿನ ಶುಂಠಿ (ಸಣ್ಣಗೆ ಕತ್ತರಿಸಿದ)
  • ½ ಟೀಸ್ಪೂನ್ ಅರಿಶಿನ
  • ½ ಟೀಸ್ಪೂನ್ ಉಪ್ಪು
  • 3 ಆಲೂಗಡ್ಡೆ (ಬೇಯಿಸಿದ ಮತ್ತು ಹಿಸುಕಿದ)
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)
  • 1 ಟೇಬಲ್ಸ್ಪೂನ್ ನಿಂಬೆ ರಸ

ಕೆಂಪು ಚಟ್ನಿಗಾಗಿ:

  • 2 ಟೀಸ್ಪೂನ್ ಎಣ್ಣೆ
  • 2 ಟೇಬಲ್ಸ್ಪೂನ್ ಕಡ್ಲೆ ಬೇಳೆ
  • 1 ಇಂಚಿನ ಶುಂಠಿ (ಕತ್ತರಿಸಿದ)
  • 3 ಬೆಳ್ಳುಳ್ಳಿ (ಕತ್ತರಿಸಿದ)
  • ½ ಈರುಳ್ಳಿ (ಸಣ್ಣಗೆ ಕತ್ತರಿಸಿದ)
  • 3 ಒಣಗಿದ ಕಾಶ್ಮೀರಿ ಕೆಂಪು ಮೆಣಸಿನಕಾಯಿ
  • ¼ ಟೀಸ್ಪೂನ್ ಅರಿಶಿನ / ಹಲ್ಡಿ
  • ½ ಟೀಸ್ಪೂನ್ ಉಪ್ಪು
  • ¼ ಕಪ್ ನೀರು (ರುಬ್ಬಲು)

ಇತರ ಪದಾರ್ಥಗಳು:

  • ½ ಟೀಸ್ಪೂನ್ ಉಪ್ಪು
  • ¼ ಟೀಸ್ಪೂನ್ ಸಕ್ಕರೆ
  • ಬೆಣ್ಣೆ (ರೋಸ್ಟಿಂಗ್ಗಾಗಿ)

ಸೂಚನೆಗಳು

ಮೈಸೂರು ಮಸಾಲಾ ದೋಸಾ ಬ್ಯಾಟರ್ ಪಾಕವಿಧಾನ:

  • ಮೊದಲನೆಯದಾಗಿ, 1½ ಕಪ್ ಅಕ್ಕಿ, ½ ಕಪ್ ಉದ್ದಿನ ಬೇಳೆ, 1 ಟೀಸ್ಪೂನ್ ತೊಗರಿ ಬೇಳೆ, 1 ಟೀಸ್ಪೂನ್ ಕಡ್ಲೆ ಬೇಳೆ ಮತ್ತು ½ ಟೀಸ್ಪೂನ್ ಮೇಥಿಯನ್ನು 5 ಗಂಟೆಗಳ ಕಾಲ ನೆನೆಸಿಡಿ. ನೀವು ಕೆಂಟ್ ಟರ್ಬೊ ಗ್ರೈಂಡರ್ ಮತ್ತು ಬ್ಲೆಂಡರ್ನಲ್ಲಿ ರುಬ್ಬುವಲ್ಲಿದ್ದರೆ ನೆನೆಸುವ ಪ್ರಕ್ರಿಯೆಯನ್ನು ಬಿಟ್ಟುಬಿಡಿ.
  • ನೀರನ್ನು ಹರಿಸಿ ಮತ್ತು ಮಿಕ್ಸರ್ / ಗ್ರೈಂಡರ್ಗೆ ವರ್ಗಾಯಿಸಿ.
  • ½ ಕಪ್ ತೆಳುವಾದ ಪೊಹಾ ಸೇರಿಸಿ. ಸೇರಿಸುವ ಮೊದಲು ತೊಳೆಯುವುದು ಖಚಿತಪಡಿಸಿಕೊಳ್ಳಿ.
  • ಅಗತ್ಯವಿರುವಂತೆ ನೀರನ್ನು ಸೇರಿಸಿ ಉತ್ತಮ ಪೇಸ್ಟ್ಗೆ ರುಬ್ಬಿಕೊಳ್ಳಿ.
  • ದೋಸಾ ಬ್ಯಾಟರ್ ಅನ್ನು ದೊಡ್ಡ ಮಿಶ್ರಣ ಬಟ್ಟಲಿನಲ್ಲಿ ವರ್ಗಾಯಿಸಿ.
  • ಮುಚ್ಚಿ 8-9 ಗಂಟೆಗಳ ಕಾಲ ಬ್ಯಾಟರ್ ಫೆರ್ಮೆಂಟ್ ಆಗಲು ಬಿಡಿ. ನೀವು ತಂಪಾದ ಸ್ಥಳಗಳಲ್ಲಿ ವಾಸವಿದ್ದರೆ, ಪ್ರಿ ಹೀಟೆಡ್ ಓವೆನ್ ನಲ್ಲಿ ಇರಿಸಿ.

ಆಲೂ ಭಾಜಿ ಪಾಕವಿಧಾನ:

  • ಮೊದಲನೆಯದಾಗಿ, ಒಂದು ಕಡೈನಲ್ಲಿ 2 ಟೀಸ್ಪೂನ್ ಎಣ್ಣೆ ಮತ್ತು 1 ಟೀಸ್ಪೂನ್ ಸಾಸಿವೆ, ½ ಟೀಸ್ಪೂನ್ ಜೀರಿಗೆ, 1 ಟೀಸ್ಪೂನ್ ಕಡ್ಲೆ ಬೇಳೆ, ½ ಟೀಸ್ಪೂನ್ ಉದ್ದಿನ ಬೇಳೆ, ಚಿಟಿಕೆ ಹಿಂಗ್, 1 ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿ ಬೇವಿನ ಎಲೆಗಳನ್ನು ಸೇರಿಸಿ.
  • ಸಾಟ್ ಮತ್ತು ಸ್ಪ್ಲಟರ್ ಮಾಡಲು ಮಾಡಲು ಬಿಡಿ.
  • ಈಗ ½ ಈರುಳ್ಳಿ, 1 ಹಸಿರು ಮೆಣಸಿನಕಾಯಿ ಮತ್ತು 1 ಇಂಚಿನ ಶುಂಠಿಯನ್ನು ಸೇರಿಸಿ.
  • ಹಾಗೆಯೇ, ½ ಟೀಸ್ಪೂನ್ ಅರಿಶಿನ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ.
  • ಈಗ 3 ಬೇಯಿಸಿದ ಮತ್ತು ಹಿಸುಕಿದ ಆಲೂಗಡ್ಡೆ ಸೇರಿಸಿ. ಚೆನ್ನಾಗಿ ಸಂಯೋಜಿಸಿ.
  • ಜ್ವಾಲೆಯನ್ನು ಆಫ್ ಮಾಡಿ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು 1 ಟೇಬಲ್ಸ್ಪೂನ್ ನಿಂಬೆ ರಸ ಸೇರಿಸಿ.
  • ಅಂತಿಮವಾಗಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಆಲೂ ಭಾಜಿಯು ಮೈಸೂರು ಮಸಾಲಾ ದೋಸಾ ತಯಾರಿಸಲು ಸಿದ್ಧವಾಗಿದೆ.

ಕೆಂಪು ಚಟ್ನಿ ಪಾಕವಿಧಾನ:

  • ಮೊದಲಿಗೆ, ಗೋಲ್ಡನ್ ಬ್ರೌನ್ ತಿರುಗುವ ತನಕ 2 ಟೀಸ್ಪೂನ್ ಎಣ್ಣೆ ಮತ್ತು 2 ಟೇಬಲ್ಸ್ಪೂನ್ ಕಡ್ಲೆ ಬೇಳೆಯನ್ನು ಸೇರಿಸಿ ಹುರಿಯಿರಿ.
  • 1 ಇಂಚಿನ ಶುಂಠಿ ಸೇರಿಸಿ, 3 ಬೆಳ್ಳುಳ್ಳಿ, ½ ಈರುಳ್ಳಿ ಮತ್ತು ಚೆನ್ನಾಗಿ ಸಾಟ್ ಮಾಡಿ.
  • 3 ಒಣಗಿದ ಕೆಂಪು ಮೆಣಸಿನಕಾಯಿ, ¼ ಟೀಸ್ಪೂನ್ ಅರಿಶಿನ ಮತ್ತು ಸಾಟ್ ಮಾಡಿ.
  • ಮಿಶ್ರಣವನ್ನು ಸಣ್ಣ ಮಿಕ್ಸರ್ ಗೆ ವರ್ಗಾಯಿಸಿ ½ ಟೀಸ್ಪೂನ್ ಉಪ್ಪು ಸೇರಿಸಿ.
  • ¼ ಕಪ್ ನೀರನ್ನು ಸೇರಿಸಿ ಮೃದುವಾದ ಪೇಸ್ಟ್ಗೆ ರುಬ್ಬಿಕೊಳ್ಳಿ.
  • ಅಂತಿಮವಾಗಿ, ಕೆಂಪು ಚುಟ್ನಿ ಮೈಸೂರು ಮಸಾಲಾ ದೋಸಾವನ್ನು ತಯಾರಿಸಲು ಸಿದ್ಧವಾಗಿದೆ.

ಮೈಸೂರು ಮಸಾಲಾ ದೋಸಾ ಪಾಕವಿಧಾನ:

  • ದೋಸಾ ಬ್ಯಾಟರ್ ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿ ಸಣ್ಣ ಬಟ್ಟಲಿನಲ್ಲಿ ಅಗತ್ಯವಾದ ಬ್ಯಾಟರ್ ತೆಗೆದುಕೊಳ್ಳಿ. ಉಳಿದ ಹಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ ಫ್ರಿಡ್ಜ್ ನಲ್ಲಿಡಿ.
  • ಮತ್ತು ಈಗ ½ ಟೀಸ್ಪೂನ್ ಉಪ್ಪು ಮತ್ತು ½ ಟೀಸ್ಪೂನ್ ಸಕ್ಕರೆಯನ್ನು ಬ್ಯಾಟರ್ಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಈಗ ತವಾವನ್ನು ಬಿಸಿ ಮಾಡಿ ಬ್ಯಾಟರ್ ಅನ್ನು ಸುರಿಯಿರಿ. ವೃತ್ತಾಕಾರದಲ್ಲಿ ಹರಡಿ.
  • 1 ಟೀಸ್ಪೂನ್ ಬೆಣ್ಣೆ, 1 ಟೀಸ್ಪೂನ್ ಕೆಂಪು ಚಟ್ನಿಯನ್ನು ದೋಸೆಯ ಮೇಲೆ ಹರಡಿ.
  • ದೋಸಾದ ಒಂದು ಬದಿಯಲ್ಲಿ ಆಲೂಗಡ್ಡೆ ಭಾಜಿ ಸೇರಿಸಿ.
  • 15-30 ಸೆಕೆಂಡುಗಳ ಕಾಲ ದೋಸೆಯನ್ನು ರೋಸ್ಟ್ ಮಾಡಿ ಮತ್ತು ಅರ್ಧ ಅಥವಾ ವೃತ್ತಾಕಾರದಲ್ಲಿ ರೋಲ್ ಮಾಡಿ.
  • ಅಂತಿಮವಾಗಿ, ಬಿಸಿ ಮೈಸೂರು ಮಸಾಲಾ ದೋಸೆ ತೆಂಗಿನ ಚಟ್ನಿ ಮತ್ತು ಸಾಂಬಾರ್ ನೊಂದಿಗೆ ಸೇವಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಮೈಸೂರು ದೋಸೆ ಹೇಗೆ ಮಾಡುವುದು:

ಮೈಸೂರು ಮಸಾಲಾ ದೋಸಾ ಬ್ಯಾಟರ್ ಪಾಕವಿಧಾನ:

  1. ಮೊದಲನೆಯದಾಗಿ, 1½ ಕಪ್ ಅಕ್ಕಿ, ½ ಕಪ್ ಉದ್ದಿನ ಬೇಳೆ, 1 ಟೀಸ್ಪೂನ್ ತೊಗರಿ ಬೇಳೆ, 1 ಟೀಸ್ಪೂನ್ ಕಡ್ಲೆ ಬೇಳೆ ಮತ್ತು ½ ಟೀಸ್ಪೂನ್ ಮೇಥಿಯನ್ನು 5 ಗಂಟೆಗಳ ಕಾಲ ನೆನೆಸಿಡಿ. ನೀವು ಕೆಂಟ್ ಟರ್ಬೊ ಗ್ರೈಂಡರ್ ಮತ್ತು ಬ್ಲೆಂಡರ್ನಲ್ಲಿ ರುಬ್ಬುವಲ್ಲಿದ್ದರೆ ನೆನೆಸುವ ಪ್ರಕ್ರಿಯೆಯನ್ನು ಬಿಟ್ಟುಬಿಡಿ.
  2. ನೀರನ್ನು ಹರಿಸಿ ಮತ್ತು ಮಿಕ್ಸರ್ / ಗ್ರೈಂಡರ್ಗೆ ವರ್ಗಾಯಿಸಿ.
  3. ½ ಕಪ್ ತೆಳುವಾದ ಪೊಹಾ ಸೇರಿಸಿ. ಸೇರಿಸುವ ಮೊದಲು ತೊಳೆಯುವುದು ಖಚಿತಪಡಿಸಿಕೊಳ್ಳಿ.
  4. ಅಗತ್ಯವಿರುವಂತೆ ನೀರನ್ನು ಸೇರಿಸಿ ಉತ್ತಮ ಪೇಸ್ಟ್ಗೆ ರುಬ್ಬಿಕೊಳ್ಳಿ.
  5. ದೋಸಾ ಬ್ಯಾಟರ್ ಅನ್ನು ದೊಡ್ಡ ಮಿಶ್ರಣ ಬಟ್ಟಲಿನಲ್ಲಿ ವರ್ಗಾಯಿಸಿ.
  6. ಮುಚ್ಚಿ 8-9 ಗಂಟೆಗಳ ಕಾಲ ಬ್ಯಾಟರ್ ಫೆರ್ಮೆಂಟ್ ಆಗಲು ಬಿಡಿ. ನೀವು ತಂಪಾದ ಸ್ಥಳಗಳಲ್ಲಿ ವಾಸವಿದ್ದರೆ, ಪ್ರಿ ಹೀಟೆಡ್ ಓವೆನ್ ನಲ್ಲಿ ಇರಿಸಿ.
    ಮೈಸೂರು ಮಸಾಲಾ ದೋಸಾ ರೆಸಿಪಿ

ಆಲೂ ಭಾಜಿ ಪಾಕವಿಧಾನ:

  1. ಮೊದಲನೆಯದಾಗಿ, ಒಂದು ಕಡೈನಲ್ಲಿ 2 ಟೀಸ್ಪೂನ್ ಎಣ್ಣೆ ಮತ್ತು 1 ಟೀಸ್ಪೂನ್ ಸಾಸಿವೆ, ½ ಟೀಸ್ಪೂನ್ ಜೀರಿಗೆ, 1 ಟೀಸ್ಪೂನ್ ಕಡ್ಲೆ ಬೇಳೆ, ½ ಟೀಸ್ಪೂನ್ ಉದ್ದಿನ ಬೇಳೆ, ಚಿಟಿಕೆ ಹಿಂಗ್, 1 ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿ ಬೇವಿನ ಎಲೆಗಳನ್ನು ಸೇರಿಸಿ.
    ಮೈಸೂರು ಮಸಾಲಾ ದೋಸಾ ರೆಸಿಪಿ
  2. ಸಾಟ್ ಮತ್ತು ಸ್ಪ್ಲಟರ್ ಮಾಡಲು ಮಾಡಲು ಬಿಡಿ.
    ಮೈಸೂರು ಮಸಾಲಾ ದೋಸಾ ರೆಸಿಪಿ
  3. ಈಗ ½ ಈರುಳ್ಳಿ, 1 ಹಸಿರು ಮೆಣಸಿನಕಾಯಿ ಮತ್ತು 1 ಇಂಚಿನ ಶುಂಠಿಯನ್ನು ಸೇರಿಸಿ.
    ಮೈಸೂರು ಮಸಾಲಾ ದೋಸಾ ರೆಸಿಪಿ
  4. ಹಾಗೆಯೇ, ½ ಟೀಸ್ಪೂನ್ ಅರಿಶಿನ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ.
    ಮೈಸೂರು ಮಸಾಲಾ ದೋಸಾ ರೆಸಿಪಿ
  5. ಈಗ 3 ಬೇಯಿಸಿದ ಮತ್ತು ಹಿಸುಕಿದ ಆಲೂಗಡ್ಡೆ ಸೇರಿಸಿ. ಚೆನ್ನಾಗಿ ಸಂಯೋಜಿಸಿ.
    ಮೈಸೂರು ಮಸಾಲಾ ದೋಸಾ ರೆಸಿಪಿ
  6. ಜ್ವಾಲೆಯನ್ನು ಆಫ್ ಮಾಡಿ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು 1 ಟೇಬಲ್ಸ್ಪೂನ್ ನಿಂಬೆ ರಸ ಸೇರಿಸಿ.
    ಮೈಸೂರು ಮಸಾಲಾ ದೋಸಾ ರೆಸಿಪಿ
  7. ಅಂತಿಮವಾಗಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಆಲೂ ಭಾಜಿಯು ಮೈಸೂರು ಮಸಾಲಾ ದೋಸಾ ತಯಾರಿಸಲು ಸಿದ್ಧವಾಗಿದೆ.
    ಮೈಸೂರು ಮಸಾಲಾ ದೋಸಾ ರೆಸಿಪಿ

ಕೆಂಪು ಚಟ್ನಿ ಪಾಕವಿಧಾನ:

  1. ಮೊದಲಿಗೆ, ಗೋಲ್ಡನ್ ಬ್ರೌನ್ ತಿರುಗುವ ತನಕ 2 ಟೀಸ್ಪೂನ್ ಎಣ್ಣೆ ಮತ್ತು 2 ಟೇಬಲ್ಸ್ಪೂನ್ ಕಡ್ಲೆ ಬೇಳೆಯನ್ನು ಸೇರಿಸಿ ಹುರಿಯಿರಿ.
  2. 1 ಇಂಚಿನ ಶುಂಠಿ ಸೇರಿಸಿ, 3 ಬೆಳ್ಳುಳ್ಳಿ, ½ ಈರುಳ್ಳಿ ಮತ್ತು ಚೆನ್ನಾಗಿ ಸಾಟ್ ಮಾಡಿ.
  3. 3 ಒಣಗಿದ ಕೆಂಪು ಮೆಣಸಿನಕಾಯಿ, ¼ ಟೀಸ್ಪೂನ್ ಅರಿಶಿನ ಮತ್ತು ಸಾಟ್ ಮಾಡಿ.
  4. ಮಿಶ್ರಣವನ್ನು ಸಣ್ಣ ಮಿಕ್ಸರ್ ಗೆ ವರ್ಗಾಯಿಸಿ ½ ಟೀಸ್ಪೂನ್ ಉಪ್ಪು ಸೇರಿಸಿ.
  5. ¼ ಕಪ್ ನೀರನ್ನು ಸೇರಿಸಿ ಮೃದುವಾದ ಪೇಸ್ಟ್ಗೆ ರುಬ್ಬಿಕೊಳ್ಳಿ.
  6. ಅಂತಿಮವಾಗಿ, ಕೆಂಪು ಚಟ್ನಿ ಮೈಸೂರು ಮಸಾಲಾ ದೋಸಾವನ್ನು ತಯಾರಿಸಲು ಸಿದ್ಧವಾಗಿದೆ.

ಮೈಸೂರು ಮಸಾಲಾ ದೋಸಾ ಪಾಕವಿಧಾನ:

  1. ದೋಸಾ ಬ್ಯಾಟರ್ ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿ ಸಣ್ಣ ಬಟ್ಟಲಿನಲ್ಲಿ ಅಗತ್ಯವಾದ ಬ್ಯಾಟರ್ ತೆಗೆದುಕೊಳ್ಳಿ. ಉಳಿದ ಹಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ ಫ್ರಿಡ್ಜ್ ನಲ್ಲಿಡಿ.
  2. ಮತ್ತು ಈಗ ½ ಟೀಸ್ಪೂನ್ ಉಪ್ಪು ಮತ್ತು ½ ಟೀಸ್ಪೂನ್ ಸಕ್ಕರೆಯನ್ನು ಬ್ಯಾಟರ್ಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  3. ಈಗ ತವಾವನ್ನು ಬಿಸಿ ಮಾಡಿ ಬ್ಯಾಟರ್ ಅನ್ನು ಸುರಿಯಿರಿ. ವೃತ್ತಾಕಾರದಲ್ಲಿ ಹರಡಿ.
  4. 1 ಟೀಸ್ಪೂನ್ ಬೆಣ್ಣೆ, 1 ಟೀಸ್ಪೂನ್ ಕೆಂಪು ಚಟ್ನಿಯನ್ನು ದೋಸೆಯ ಮೇಲೆ ಹರಡಿ.
  5. ದೋಸಾದ ಒಂದು ಬದಿಯಲ್ಲಿ ಆಲೂಗಡ್ಡೆ ಭಾಜಿ ಸೇರಿಸಿ.
  6. 15-30 ಸೆಕೆಂಡುಗಳ ಕಾಲ ದೋಸೆಯನ್ನು ರೋಸ್ಟ್ ಮಾಡಿ ಮತ್ತು ಅರ್ಧ ಅಥವಾ ವೃತ್ತಾಕಾರದಲ್ಲಿ ರೋಲ್ ಮಾಡಿ.
  7. ಅಂತಿಮವಾಗಿ, ಬಿಸಿ ಮೈಸೂರು ಮಸಾಲಾ ದೋಸೆ ತೆಂಗಿನ ಚಟ್ನಿ ಮತ್ತು ಸಾಂಬಾರ್ ನೊಂದಿಗೆ ಸೇವಿಸಿ.

ಟಿಪ್ಪಣಿಗಳು:

  • ಮೊದಲಿಗೆ, ದೋಸಾ ಬ್ಯಾಟರ್ 3 ದಿನಗಳ ನಂತರ ಹುಳಿಯಾಗಿ ತಿರುಗುತ್ತದೆ, ಆದ್ದರಿಂದ ನೀವು ಪನಿಯರಮ್ ತಯಾರಿಸಲು ಉಳಿದ ದೋಸಾ ಬ್ಯಾಟರ್ ಅನ್ನು ಬಳಸಬಹುದು.
  • ಇದರ ಜೊತೆಗೆ, ಈ ದೋಸಾಕ್ಕಾಗಿ ಪ್ಯಾರಾ ಬಾಯಿಲ್ಡ್ ರೈಸ್ ಸೂಟ್ ಆಗುತ್ತದೆ. ಆದಾಗ್ಯೂ, ನೀವು ಸೋನಾ ಮಸೂರಿ ಅಕ್ಕಿ ಕೂಡ ಬಳಸಬಹುದು. ಆದರೆ ಉದ್ದ ಧಾನ್ಯದ ಬಾಸ್ಮತಿ ಅಕ್ಕಿಯೊಂದಿಗೆ ಎಂದಿಗೂ ಪ್ರಯತ್ನಿಸಬೇಡಿ.
  • ಇದಲ್ಲದೆ, ಬೆಣ್ಣೆಯನ್ನು ಸೇರಿಸುವುದು ದೋಸೆಯ ರುಚಿ ಮತ್ತು ಬ್ರೌನಿಂಗ್ ಅನ್ನು ಹೆಚ್ಚಿಸುತ್ತದೆ.
  • ಅಂತಿಮವಾಗಿ, ಮೈಸೂರು ಮಸಾಲಾ ದೋಸೆ ಬ್ಯಾಟರ್ ಗೆ ಸಕ್ಕರೆಯ ಪಿಂಚ್ ಅನ್ನು ಸೇರಿಸುವುದರಿಂದ, ಇದಕ್ಕೆ ಶ್ರೀಮಂತ ಬಣ್ಣವನ್ನು ನೀಡಲು ಸಹಾಯ ಮಾಡುತ್ತದೆ.