ಟೊಮೆಟೊ ಬಾತ್ ರೆಸಿಪಿ | tomato bath in kannada | ಟೊಮೆಟೊ ಪುಲಾವ್

0

ಟೊಮೆಟೊ ಬಾತ್ ಪಾಕವಿಧಾನ | ಟೊಮೆಟೊ ಪುಲಾವ್ ಪಾಕವಿಧಾನ | ಟೊಮೆಟೊ ರೈಸ್ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಇದು ಅಕ್ಕಿ ಮತ್ತು ಟೊಮೆಟೊ ಪರಿಮಳದಿಂದ ತಯಾರಿಸಿದ ಸುಲಭ, ರುಚಿಕರ ಮತ್ತು ಜನಪ್ರಿಯ ದಕ್ಷಿಣ ಭಾರತದ ಟೊಮೆಟೊ ಪುಲಾವ್. ಇದು ಒಂದು ಊಟದ ಪಾಕವಿಧಾನವಾಗಿದೆ ಮತ್ತು ಸಂಪೂರ್ಣ ಊಟಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಮತ್ತು ರುಚಿಗಳನ್ನು ಹೊಂದಿದೆ. ಈ ಪಾಕವಿಧಾನದಲ್ಲಿ, ನಾನು ಅಕ್ಕಿ ಮತ್ತು ತರಕಾರಿಗಳನ್ನು ಬೇಯಿಸಲು ಪ್ರೆಶರ್ ಕುಕ್ಕರ್ ಅನ್ನು ಬಳಸಿದ್ದೇನೆ, ಆದರೆ ಇದನ್ನು ನೀವು ಕುಕ್-ಟಾಪ್ ಕಡಾಯಿಯೊಂದಿಗೆ ಸಹ ತಯಾರಿಸಬಹುದು.
ಟೊಮೆಟೊ ಭಾತ್ ಪಾಕವಿಧಾನ

ಟೊಮೆಟೊ ಬಾತ್ ಪಾಕವಿಧಾನ | ಟೊಮೆಟೊ ಪುಲಾವ್ ಪಾಕವಿಧಾನ | ಟೊಮೆಟೊ ರೈಸ್ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಪುಲಾವ್ ಅಥವಾ ಭಾತ್ ನ ಪಾಕವಿಧಾನಗಳು ದಕ್ಷಿಣ ಭಾರತದಾದ್ಯಂತ ಅಥವಾ ವಿಶೇಷವಾಗಿ ಕರ್ನಾಟಕ ಪಾಕಪದ್ಧತಿಯಲ್ಲಿ ಬಹಳ ಸಾಮಾನ್ಯವಾಗಿದೆ. ಇದು ವಿವಿಧೋದ್ದೇಶ ಪಾಕವಿಧಾನವಾಗಿದೆ ಮತ್ತು ಇದನ್ನು ಮಧ್ಯಾಹ್ನ  ಹಾಗೂ ರಾತ್ರಿಯ ಭೋಜನ ಎರಡಕ್ಕೂ ತಯಾರಿಸಲಾಗುತ್ತದೆ. ಕನ್ನಡ ಪಾಕಪದ್ಧತಿಯಿಂದ ಅಂತಹ ಸರಳ ಮತ್ತು ಸುವಾಸನೆಯ ಬಾತ್ ಎಂದರೆ ಅದು ಟೊಮೆಟೊ ಬಾತ್ ಪಾಕವಿಧಾನ.

ನಾನು ಟೊಮೆಟೊ ರೈಸ್ ಎಂದು ಹೆಸರಿಸಲಾದ ಪ್ರತ್ಯೇಕ ಪಾಕವಿಧಾನವನ್ನು ಅನ್ನು ಪೋಸ್ಟ್ ಮಾಡಿದ್ದೇನೆ, ಇದು ಇದಕ್ಕೆ ಸಮಾನವಾದ ಪಾಕವಿಧಾನವಾಗಿದೆ. ಆದರೂ ಈ ಎರಡರ ನಡುವೆ ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ. ಮೂಲತಃ, ಟೊಮೆಟೊ ರೈಸ್ ನಲ್ಲಿ, ನಾನು ಬೇಯಿಸಿದ ಅನ್ನವನ್ನು ಬಳಸಿದ್ದೇನೆ ಮತ್ತು ಪ್ರತ್ಯೇಕವಾಗಿ ತಯಾರಿಸಿದ ಟೊಮೆಟೊ ಮಸಾಲದೊಂದಿಗೆ ಬೆರೆಸಿದ್ದೇನೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅದೊಂದು ಇನ್ಸ್ಟಂಟ್ ಸ್ಟಿರ್ ಫ್ರೈ ರೆಸಿಪಿ ಆಗಿದೆ. ಅಲ್ಲದೆ, ಹೊಸದಾಗಿ ರುಬ್ಬಿದ ತೆಂಗಿನಕಾಯಿ ಮತ್ತು ಯಾವುದೇ ಮಸಾಲಾವನ್ನು ಸೇರಿಸಿಲ್ಲ. ಆದರೆ ಟೊಮೆಟೊ ಬಾತ್ ನ ಪಾಕವಿಧಾನದಲ್ಲಿ, ನಾನು ಎಲ್ಲಾ  ಪುಲಾವ್ ಪಾಕವಿಧಾನಗಳಂತೆಯೇ ಅಕ್ಕಿ ಮತ್ತು ತರಕಾರಿಗಳನ್ನು ಬೇಯಿಸಲು ಪ್ರೆಶರ್ ಕುಕ್ಕರ್ ಅನ್ನು ಬಳಸಿದ್ದೇನೆ. ತೆಂಗಿನಕಾಯಿ, ಕೊತ್ತಂಬರಿ ಮತ್ತು ಪುದಿನಾ ಎಲೆಗಳ ಸೇರ್ಪಡೆಯೊಂದಿಗೆ, ಅಕ್ಕಿಯ ರುಚಿ ಮತ್ತು ಪರಿಮಳವು ದ್ವಿಗುಣಗೊಂಡಿದೆ.

ಟೊಮೆಟೊ ಪುಲಾವ್ ಪಾಕವಿಧಾನಟೊಮೆಟೊ ಬಾತ್ ಅಥವಾ ಟೊಮೆಟೊ ಪುಲಾವ್ ಪಾಕವಿಧಾನಕ್ಕೆ ಕೆಲವು ಸುಲಭ ಮತ್ತು ಪ್ರಮುಖ ಸಲಹೆಗಳು, ಮತ್ತು ವ್ಯತ್ಯಾಸಗಳು. ಮೊದಲನೆಯದಾಗಿ, ಈ ಟೊಮೆಟೊ ಬಾತ್ ಗೆ ಸರಳವಾದ ಸೋನಾ ಮಸೂರಿ ಅಕ್ಕಿಯನ್ನು ಬಳಸಲು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ. ಬಾಸ್ಮತಿ ಅಕ್ಕಿಯೊಂದಿಗೆ ಈ ಪಾಕವಿಧಾನವನ್ನು ಪ್ರಯತ್ನಿಸಬೇಡಿ ಏಕೆಂದರೆ ನಾವು ಪ್ರೆಶರ್ ಕುಕ್ಕರ್ ಅನ್ನು ಬಳಸುತ್ತಿದ್ದೇವೆ. ಎರಡನೆಯದಾಗಿ, ಟೊಮ್ಯಾಟೊ ಹಣ್ಣಾಗಿ ರಸಭರಿತವಾಗಿರಬೇಕು. ಹುಳಿ ರುಚಿ ಕೊಡುವ ಟೊಮೆಟೊಗಳನ್ನು ಬಳಸುವುದನ್ನು ತಪ್ಪಿಸಿ ಏಕೆಂದರೆ ಅದು ರುಚಿಯನ್ನು ಹಾಳುಮಾಡುತ್ತದೆ. ಯಾವುದೇ ಭಾರತೀಯ ಅಡುಗೆಗೆ ಸೂಕ್ತವಾದ ಟೊಮ್ಯಾಟೊ ರೋಮಾ ಟೊಮ್ಯಾಟೊ, ಹೇಯರಲೂಮ್ ಟೊಮ್ಯಾಟೊ ಅಥವಾ ಚೆರ್ರಿ ಟೊಮ್ಯಾಟೊ. ಕೊನೆಯದಾಗಿ, ಈ ಪುಲಾವ್‌ ಅನ್ನು ತಯಾರಿಸಿ ಸ್ವಲ್ಪ ಹೊತ್ತಿನ ನಂತರ ಸವಿದರೆ ಇದರ ರುಚಿ ಹೆಚ್ಚುತ್ತದೆ. ಆದ್ದರಿಂದ ನೀವು ಈ ಮುಂಜಾನೆ ತಯಾರಿಸಿ ಮಧ್ಯಾಹ್ನದ ಡಬ್ಬಕ್ಕೆ ಅಥವಾ ಮಧ್ಯಾಹ್ನದ ಊಟಕ್ಕೆ ಬಡಿಸಬಹುದು. ರುಚಿಯನ್ನು ಹೆಚ್ಚಿಸಲು ನೀವು ಅದನ್ನು ಸರಳ ಬೂಂದಿ  ರಾಯಿತದೊಂದಿಗೆ ಬಡಿಸಿರಿ.

ಅಂತಿಮವಾಗಿ, ಟೊಮೆಟೊ ಬಾತ್ ನ ಪಾಕವಿಧಾನದ ಈ ಪಾಕವಿಧಾನದೊಂದಿಗೆ ನನ್ನ ಇತರ ಪುಲಾವ್ ಪಾಕವಿಧಾನಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸಲು ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ನನ್ನ ಇತರ ಸಂಬಂಧಿತ ರೈಸ್ ಪಾಕವಿಧಾನಗಳಾದ ಟೊಮೆಟೊ ರೈಸ್, ಟೊಮೆಟೊ ಪುಲಾವ್, ರೈಸ್ ಭಾತ್, ವಾಂಗಿ ಭಾತ್, ಮಸಾಲಾ ಪುಲಾವ್, ವರ್ಮಿಸೆಲ್ಲಿ ಪುಲಾವ್, ಶಾಹಿ ಪುಲಾವ್, ಪುದಿನಾ ರೈಸ್, ತೆಂಗಿನಕಾಯಿ ಹಾಲು ಪುಲಾವ್, ಆಲೂ ಮಟರ್ ಪುಲಾವ್. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಸಂಬಂಧಿತ ರೆಸಿಪಿಗಳನ್ನು ಹೈಲೈಟ್ ಮಾಡಲು ಬಯಸುತ್ತೇನೆ,

ಟೊಮೆಟೊ ಬಾತ್ ವೀಡಿಯೊ ಪಾಕವಿಧಾನ:

Must Read:

ಟೊಮೆಟೊ ಪುಲಾವ್ ಪಾಕವಿಧಾನ ಕಾರ್ಡ್:

tomato bath recipe

ಟೊಮೆಟೊ ಬಾತ್ ರೆಸಿಪಿ | tomato bath in kannada | ಟೊಮೆಟೊ ಪುಲಾವ್

5 from 14 votes
ತಯಾರಿ ಸಮಯ: 5 minutes
ಅಡುಗೆ ಸಮಯ: 20 minutes
ನೆನೆಸುವ ಸಮಯ: 20 minutes
ಒಟ್ಟು ಸಮಯ : 45 minutes
ಸೇವೆಗಳು: 3 ಸೇವೆಗಳು
AUTHOR: HEBBARS KITCHEN
ಕೋರ್ಸ್: ಅನ್ನ - ರೈಸ್
ಪಾಕಪದ್ಧತಿ: ಕರ್ನಾಟಕ
ಕೀವರ್ಡ್: ಟೊಮೆಟೊ ಬಾತ್ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಟೊಮೆಟೊ ಬಾತ್ ಪಾಕವಿಧಾನ | ಟೊಮೆಟೊ ಪುಲಾವ್

ಪದಾರ್ಥಗಳು

ಮಸಾಲೆ ಪೇಸ್ಟ್ಗಾಗಿ:

  • 2 ಟೇಬಲ್ಸ್ಪೂನ್ ತೆಂಗಿನಕಾಯಿ, ತುರಿದ
  • 3 ಒಣಗಿದ ಕೆಂಪು ಮೆಣಸಿನಕಾಯಿ
  • 3 ಲವಂಗ ಬೆಳ್ಳುಳ್ಳಿ
  • 1 ಇಂಚಿನ ಶುಂಠಿ
  • 1 ಟೀಸ್ಪೂನ್ ಬಡೇ ಸೋಂಪು
  • 1 ಟೀಸ್ಪೂನ್ ಜೀರಿಗೆ
  • 1 ಟೇಬಲ್ಸ್ಪೂನ್ ಕೊತ್ತಂಬರಿ ಬೀಜ
  • ¼ ಕಪ್ ನೀರು, ರುಬ್ಬಲು

ರೈಸ್ ಬಾತ್ ಕ್ಕಾಗಿ:

  • 2 ಟೇಬಲ್ಸ್ಪೂನ್ ತುಪ್ಪ / ಬೆಣ್ಣೆ
  • 1 ಬೇ ಎಲೆ
  • 1 ಇಂಚಿನ ದಾಲ್ಚಿನ್ನಿ
  • 4 ಏಲಕ್ಕಿ
  • 1 ಟೀಸ್ಪೂನ್ ಜೀರಿಗೆ
  • ಈರುಳ್ಳಿ, ಉದ್ದವಾಗಿ ಕತ್ತರಿಸಿದ
  • 2 ಟೊಮೆಟೊ, ಸಣ್ಣಗೆ ಕತ್ತರಿಸಿದ
  • 3 ಟೇಬಲ್ಸ್ಪೂನ್ ಬಟಾಣಿ
  • ½ ಕ್ಯಾಪ್ಸಿಕಂ, ಹೋಳಾಗಿ ಕತ್ತರಿಸಿದ
  • ½ ಟೀಸ್ಪೂನ್ ಅರಿಶಿನ
  • ½ ಟೀಸ್ಪೂನ್ ಗರಂ ಮಸಾಲ
  • 1 ಟೀಸ್ಪೂನ್ ಉಪ್ಪು
  • 2 ಕಪ್ ನೀರು
  • 1 ಕಪ್ ಸೋನಾ ಮಸೂರಿ ಅಕ್ಕಿ, 20 ನಿಮಿಷ ನೆನೆಸಿದ
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು, ಸಣ್ಣಗೆ ಕತ್ತರಿಸಿದ

ಸೂಚನೆಗಳು

  • ಮೊದಲನೆಯದಾಗಿ, ಸಣ್ಣ ಮಿಕ್ಸಿ ಜಾರ್ ನಲ್ಲಿ  2 ಟೀಸ್ಪೂನ್ ತೆಂಗಿನಕಾಯಿ, 3 ಒಣಗಿದ ಕೆಂಪು ಮೆಣಸಿನಕಾಯಿ, 3 ಬೆಳ್ಳುಳ್ಳಿ, 1 ಇಂಚು ಶುಂಠಿ, 1 ಟೀಸ್ಪೂನ್ ಬ್ಬಡೇ ಸೋಂಪು, 1 ಟೀಸ್ಪೂನ್ ಜೀರಿಗೆ ಮತ್ತು 1 ಟೀಸ್ಪೂನ್ ಕೊತ್ತಂಬರಿ ಬೀಜಗಳನ್ನು ತೆಗೆದುಕೊಳ್ಳಿ.
  • ¼ ಕಪ್ ನೀರು ಸೇರಿಸಿ ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಪಕ್ಕಕ್ಕೆ ಇರಿಸಿ.
  • ಕುಕ್ಕರ್‌ನಲ್ಲಿ 2 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ 1 ಬೇ ಎಲೆ, 1 ಇಂಚಿನ ದಾಲ್ಚಿನ್ನಿ, 4 ಏಲಕ್ಕಿ, 1 ಟೀಸ್ಪೂನ್ ಜೀರಿಗೆ ಸೇರಿಸಿ.
  • ಮಸಾಲೆಗಳು ಸುವಾಸನೆ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
  • ಈಗ ಇದಕ್ಕೆ ½ ಈರುಳ್ಳಿ ಸೇರಿಸಿ, ಈರುಳ್ಳಿ ಸ್ವಲ್ಪ ಕುಗ್ಗುವವರೆಗೆ ಸಾಟ್ ಮಾಡಿ.
  •  2 ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಸಾಟ್ ಮಾಡಿ.
  • ಈಗ ಮೊದಲೇ ತಯಾರಿಸಿದ ಮಸಾಲಾ ಪೇಸ್ಟ್‌ ಅನ್ನು ಸೇರಿಸಿ 2 ನಿಮಿಷ ಬೇಯಿಸಿ.
  • 3 ಟೀಸ್ಪೂನ್ ಬಟಾಣಿ, ½ ಕ್ಯಾಪ್ಸಿಕಂ, ½ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಗರಂ ಮಸಾಲ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ.
  • ಮಸಾಲೆಗಳು ಪರಿಮಳ ಬರುವವರೆಗೆ ಒಂದು ನಿಮಿಷ ಬೇಯಿಸಿ.
  • 2 ಕಪ್ ನೀರು ಸೇರಿಸಿ ಕುದಿಸಿರಿ.
  • ಈಗ 1 ಕಪ್ ಸೋನಾ ಮಸೂರಿ ಅಕ್ಕಿ, 2 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮೊದಲೇ ಅಕ್ಕಿಯನ್ನು ಕನಿಷ್ಠ 20 ನಿಮಿಷಗಳ ಕಾಲ ನೀರಲ್ಲಿ ನೆನೆಸಲು ಖಚಿತಪಡಿಸಿಕೊಳ್ಳಿ.
  • ಪ್ರೆಷರ್ ಕುಕ್ಕರ್ ನ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2 ಸೀಟಿಗಳಿಗೆ ಬೇಯಿಸಿ, ನೀವು ಕಡೈನಲ್ಲಿ ಮಾಡುತ್ತಿದ್ದರೆ, 20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಮುಚ್ಚಳ ಹಾಕಿ ಬೇಯಿಸಿ.
  • ಅಂತಿಮವಾಗಿ, ಚಟ್ನಿ ಮತ್ತು ರಾಯಿತಾದೊಂದಿಗೆ ಟೊಮೆಟೊ ಬಾತ್ ಅನ್ನು ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಟೊಮೆಟೊ ಬಾತ್ ಮಾಡುವುದು ಹೇಗೆ:

  1. ಮೊದಲನೆಯದಾಗಿ, ಸಣ್ಣ ಮಿಕ್ಸಿ ಜಾರ್ ನಲ್ಲಿ  2 ಟೀಸ್ಪೂನ್ ತೆಂಗಿನಕಾಯಿ, 3 ಒಣಗಿದ ಕೆಂಪು ಮೆಣಸಿನಕಾಯಿ, 3 ಬೆಳ್ಳುಳ್ಳಿ, 1 ಇಂಚು ಶುಂಠಿ, 1 ಟೀಸ್ಪೂನ್ ಬ್ಬಡೇ ಸೋಂಪು, 1 ಟೀಸ್ಪೂನ್ ಜೀರಿಗೆ ಮತ್ತು 1 ಟೀಸ್ಪೂನ್ ಕೊತ್ತಂಬರಿ ಬೀಜಗಳನ್ನು ತೆಗೆದುಕೊಳ್ಳಿ.
  2. ¼ ಕಪ್ ನೀರು ಸೇರಿಸಿ ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಪಕ್ಕಕ್ಕೆ ಇರಿಸಿ.
  3. ಕುಕ್ಕರ್‌ನಲ್ಲಿ 2 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ 1 ಬೇ ಎಲೆ, 1 ಇಂಚಿನ ದಾಲ್ಚಿನ್ನಿ, 4 ಏಲಕ್ಕಿ, 1 ಟೀಸ್ಪೂನ್ ಜೀರಿಗೆ ಸೇರಿಸಿ.
  4. ಮಸಾಲೆಗಳು ಸುವಾಸನೆ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
  5. ಈಗ ಇದಕ್ಕೆ ½ ಈರುಳ್ಳಿ ಸೇರಿಸಿ, ಈರುಳ್ಳಿ ಸ್ವಲ್ಪ ಕುಗ್ಗುವವರೆಗೆ ಸಾಟ್ ಮಾಡಿ.
  6.  2 ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಸಾಟ್ ಮಾಡಿ.
  7. ಈಗ ಮೊದಲೇ ತಯಾರಿಸಿದ ಮಸಾಲಾ ಪೇಸ್ಟ್‌ ಅನ್ನು ಸೇರಿಸಿ 2 ನಿಮಿಷ ಬೇಯಿಸಿ.
  8. 3 ಟೀಸ್ಪೂನ್ ಬಟಾಣಿ, ½ ಕ್ಯಾಪ್ಸಿಕಂ, ½ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಗರಂ ಮಸಾಲ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ.
  9. ಮಸಾಲೆಗಳು ಪರಿಮಳ ಬರುವವರೆಗೆ ಒಂದು ನಿಮಿಷ ಬೇಯಿಸಿ.
  10. 2 ಕಪ್ ನೀರು ಸೇರಿಸಿ ಕುದಿಸಿರಿ.
  11. ಈಗ 1 ಕಪ್ ಸೋನಾ ಮಸೂರಿ ಅಕ್ಕಿ, 2 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮೊದಲೇ ಅಕ್ಕಿಯನ್ನು ಕನಿಷ್ಠ 20 ನಿಮಿಷಗಳ ಕಾಲ ನೀರಲ್ಲಿ ನೆನೆಸಲು ಖಚಿತಪಡಿಸಿಕೊಳ್ಳಿ.
  12.  ಪ್ರೆಷರ್ ಕುಕ್ಕರ್ ನ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2 ಸೀಟಿಗಳಿಗೆ ಬೇಯಿಸಿ, ನೀವು ಕಡೈನಲ್ಲಿ ಮಾಡುತ್ತಿದ್ದರೆ, 20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಮುಚ್ಚಳ ಹಾಕಿ ಬೇಯಿಸಿ.
  13. ಅಂತಿಮವಾಗಿ, ಚಟ್ನಿ ಮತ್ತು ರಾಯಿತಾದೊಂದಿಗೆ ಟೊಮೆಟೊ ಬಾತ್ ಅನ್ನು ಆನಂದಿಸಿ.
    ಟೊಮೆಟೊ ಭಾತ್ ಪಾಕವಿಧಾನ

ಟಿಪ್ಪಣಿಗಳು:

  • ಮೊದಲನೆಯದಾಗಿ, ಮಸಾಲಾ ಪೇಸ್ಟ್ ಸೇರಿಸುವುದು ಅತ್ಯಗತ್ಯ. ಇದು ಬಾತ್ ನ ಪರಿಮಳವನ್ನು ಹೆಚ್ಚಿಸುತ್ತದೆ.
  • ನಿಮ್ಮ ಆಯ್ಕೆಯ ತರಕಾರಿಗಳನ್ನು ನೀವು ಸೇರಿಸಬಹುದು.
  • ಹಾಗೆಯೇ ನೀವು ಟೊಮೆಟೊವನ್ನು ಪ್ಯೂರಿ ಮಾಡಿ ಬಳಸಬಹುದು. ವೈಯಕ್ತಿಕವಾಗಿ ನಾನು ಟೊಮೇಟೊ ಮೆತ್ತಗಾಗುವವರೆಗೆ ಸಾಟ್ ಮಾಡಿ ಬೇಯಿಸಲು ಬಯಸುತ್ತೇನೆ.
  • ಅಂತಿಮವಾಗಿ, ಟೊಮೆಟೊ ಬಾತ್ ನ ಪಾಕವಿಧಾನವು ಸಣ್ಣ ಅಳತೆಯೆ ಅನ್ನದೊಂದಿಗೆ ತಯಾರಿಸಿದಾಗ ಉತ್ತಮ ರುಚಿ ನೀಡುತ್ತದೆ.
5 from 14 votes (14 ratings without comment)