ಮಸಾಲ ದೋಸೆ ಪಾಕವಿಧಾನ | ಗರಿಗರಿಯಾದ ಮಸಾಲೆ ದೋಸೆ | ಕ್ರಿಸ್ಪಿ ಮಸಾಲಾ ದೋಸ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಇದು ಅಕ್ಕಿ ಮತ್ತು ಉದ್ದಿನ ಬೇಳೆಯೊಂದಿಗೆ ತಯಾರಿಸಿದ ಸುಲಭ ಮತ್ತು ಜನಪ್ರಿಯ, ಟೇಸ್ಟಿ, ದಕ್ಷಿಣ ಭಾರತದ ಪ್ರಧಾನ ಉಪಹಾರ ಪಾಕವಿಧಾನ. ಮೂಲತಃ ಇದೊಂದು ಸಾಂಪ್ರದಾಯಿಕ ದೋಸೆ ಪಾಕವಿಧಾನಕ್ಕೆ ವಿಸ್ತರಣೆಯಾಗಿದೆ, ಇಲ್ಲಿ ದೋಸೆಯನ್ನು ಗರಿಗರಿಯಾದ ಮತ್ತು ಆಲೂಗೆಡ್ಡೆ ಮಸಾಲದೊಂದಿಗೆ ತುಂಬಿಸಲಾಗುತ್ತದೆ. ಇದು ಬಹುಶಃ ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯಗಳಲ್ಲಿ ಒಂದಾಗಿದೆ, ಇದನ್ನು ಬೆಳಿಗ್ಗೆ ಉಪಾಹಾರಕ್ಕಾಗಿ ಹಾಗೂ ಸಂಜೆಯ ಲಘು ಆಹಾರವಾಗಿ ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ನೀಡಬಹುದು.
ಪ್ರಸಿದ್ಧ ಮಸಾಲ ದೋಸೆಯ ಮೂಲದ ಬಗ್ಗೆ ಒಂದು ದೊಡ್ಡ ಕಥೆ ಇದೆ. ಭಾರತದ ಸುತ್ತಲೂ ಅನೇಕ ಕಥೆಗಳಿವೆ, ಆದರೆ ವಿಕಿಯ ಪ್ರಕಾರ, ಇದು ನನ್ನ ಸ್ವಂತ ಊರಾದ ಉಡುಪಿಯಿಂದ ಹುಟ್ಟಿಕೊಂಡಿತು. ಇಲ್ಲಿ ನಮ್ಮ ಉಡುಪಿಯಲ್ಲಿ, ದೋಸೆಯನ್ನು ಗರಿಗರಿಯಾಗಿ ಬಡಿಸಲಾಗುತ್ತದೆ. ಉಡುಪಿಯಲ್ಲಿನ ಒಂದು ಸ್ಥಳೀಯ ರೆಸ್ಟೋರೆಂಟ್ ನಲ್ಲಿ ಆಲೂಗೆಡ್ಡೆ ಮಸಾಲೆ ಜೊತೆಗೆ ದೋಸೆಯನ್ನು ನೀಡಲು ಹಾಗೂ ತೆಂಗಿನಕಾಯಿ ಚಟ್ನಿ ಸೇವನೆಯನ್ನು ಕಡಿಮೆ ಮಾಡಲು ಪ್ರಾರಂಭಿಸಿತು. ಆ ದಿನಗಳಲ್ಲಿ, ತೆಂಗಿನಕಾಯಿ ಆಧಾರಿತ ಭಕ್ಷ್ಯಗಳನ್ನು ದುಬಾರಿ ಎಂದು ಪರಿಗಣಿಸಲಾಗುತ್ತಿತ್ತು ಮತ್ತು ದೋಸೆಯನ್ನು ಯಾವುದೇ ಭಕ್ಷ್ಯವಿಲ್ಲದೆ ಸೇವಿಸಲಾಗುವುದಿಲ್ಲ. ಕ್ರಮೇಣ ಸ್ಟಫ್ಡ್ ದೋಸೆಯು ಪ್ರಖ್ಯಾತವಾಗಿ, ವಲಸೆ ಸಮುದಾಯವು ಈ ವೈವಿಧ್ಯತೆಯನ್ನು ಮುಂಬೈಗೆ ತೆಗೆದುಕೊಂಡು ವಿಶಾಲ ಪ್ರೇಕ್ಷಕರಿಗೆ ಹರಡಿತು. ಇದು ಕಾಸ್ಮೋಪಾಲಿಟನ್ ನಗರದಲ್ಲಿ ಉತ್ತಮವಾಗಿ ಸ್ವೀಕರಿಸಲ್ಪಟ್ಟಿತು ಮತ್ತು ಇದು ಈಗ ಜನಪ್ರಿಯ ದೋಸೆ ವೈವಿಧ್ಯಗಳಲ್ಲಿ ಒಂದಾಗಿದೆ.
ಮಸಾಲ ದೋಸೆ ಪಾಕವಿಧಾನದಲ್ಲಿ ನಾನು ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲನೆಯದಾಗಿ, ಗರಿಗರಿಯಾಗಿ ದೋಸೆ ಬರಲು ಫರ್ಮೆಂಟೇಶನ್ ಪ್ರಮುಖ ಮತ್ತು ಮಹತ್ವದ ಅಂಶವಾಗಿದೆ. ದೋಸೆ ಹಿಟ್ಟು ತಯಾರಿಸಿದ ನಂತರ 8-12 ಗಂಟೆಗಳ ಒಳಗೆ ಫರ್ಮೆಂಟೇಶನ್ ಸಂಭವಿಸಬೇಕು. ಇದಲ್ಲದೆ, ನೀವು ತಣ್ಣಗಿರುವ ಸ್ಥಳದಲ್ಲಿದ್ದರೆ, ದೋಸೆ ಹಿಟ್ಟನ್ನು ಫರ್ಮೆಂಟೇಶನ್ ಮಾಡಲು ಪ್ರಿ ಹೀಟೆಡ್ ಓವೆನ್ ನಲ್ಲಿ ಅಥವಾ ಗ್ಯಾಸ್ ಸ್ಟೌವ್ ಬಳಿ ಇಡಬೇಕಾಗುತ್ತದೆ. ಎರಡನೆಯದಾಗಿ, ನೀವು ಗಮನಿಸಿದರೆ, ಅದನ್ನು ಸರಿಯಾಗಿ ಬೆರೆಸಲು ನಾನು ದೋಸೆಯ ಹಿಟ್ಟಿಗೆ ನನ್ನ ಕೈ ಗಳಿಂದ ಮಿಶ್ರಣ ಮಾಡಿದ್ದೇನೆ. ಕೈಗಳು ಇದನ್ನು ಸರಿಯಾಗಿ ಬೆರೆಸಲು ಸಹಾಯ ಮಾಡುತ್ತದೆ, ಹಾಗೆಯೇ ಕೈಯಲ್ಲಿರುವ ಬ್ಯಾಕ್ಟೀರಿಯ ಕೂಡ ದೋಸೆ ಹಿಟ್ಟಿಗೆ ವರ್ಗಾಯಿಸಲಾಗುತ್ತದೆ ಮತ್ತು ಫರ್ಮೆಂಟೇಶನ್ ಗೆ ಸಹಾಯ ಮಾಡುತ್ತದೆ. ಕೊನೆಯದಾಗಿ, ದೋಸೆ ಹಿಟ್ಟಿನ ಕ್ರಿಸ್ಪಿ ನೆಸ್ ಮೂರನೆಯ ಮತ್ತು ನಾಲ್ಕನೇ ದಿನಕ್ಕೆ ಕ್ರಮೇಣ ಕಡಿಮೆಯಾಗುತ್ತದೆ. ಆದ್ದರಿಂದ ಮರುದಿನ ಇದನ್ನು ಮಸಾಲೆ ದೋಸೆಗಾಗಿ ಬಳಸಲು ಮತ್ತು ಇದನ್ನು ಇತರ ಮಾರ್ಪಾಡುಗಳಿಗೆ ಮರುಬಳಕೆ ಮಾಡಲು ನಾನು ಶಿಫಾರಸು ಮಾಡುತ್ತೇನೆ.
ಅಂತಿಮವಾಗಿ, ಮಸಾಲ ದೋಸೆ ಪಾಕವಿಧಾನದ ಈ ಪೋಸ್ಟ್‌ನೊಂದಿಗೆ ನನ್ನ ದಕ್ಷಿಣ ಭಾರತೀಯ ದೋಸೆ ಪಾಕವಿಧಾನಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸುವಂತೆ ನಾನು ವಿನಂತಿಸುತ್ತೇನೆ. ಇದು ಮುಖ್ಯವಾಗಿ ನನ್ನ ಇತರ ವಿವರವಾದ ದೋಸೆ ಪಾಕವಿಧಾನಗಳಾದ ತುಪ್ಪ ದೋಸೆ, ರವ ದೋಸೆ, ರವಾ ಉತ್ತಪಮ್, ವೆಜಿಟಬಲ್ ಉತ್ತಪಮ್, ಮೆಂತೆ ದೋಸೆ, ಗೀ ರೋಸ್ಟ್ ದೋಸೆ, ಪೋಹಾ ಉತ್ತಪಮ್, ಸೆಟ್ ದೋಸೆ, ಓಟ್ಸ್ ದೋಸೆ, ಉತ್ತಪಮ್. ಇವುಗಳಿಗೆ ಮತ್ತಷ್ಟು ನಾನು ನನ್ನ ಇತರ ಸಂಬಂಧಿತ ಪಾಕವಿಧಾನ ವಿಭಾಗಗಳನ್ನು ಹೈಲೈಟ್ ಮಾಡಲು ಬಯಸುತ್ತೇನೆ,
ಮಸಾಲ ದೋಸೆ ವೀಡಿಯೊ ಪಾಕವಿಧಾನ:
ಕ್ರಿಸ್ಪಿ ಮಸಾಲ ದೋಸ ಪಾಕವಿಧಾನ ಕಾರ್ಡ್:
ಮಸಾಲ ದೋಸೆ ರೆಸಿಪಿ | masala dosa in kannada | ಕ್ರಿಸ್ಪಿ ಮಸಾಲ ದೋಸ
ಪದಾರ್ಥಗಳು
ದೋಸೆ ಹಿಟ್ಟಿಗಾಗಿ:
- 3 ಕಪ್ ಸೋನಾ ಮಸೂರಿ ಅಕ್ಕಿ
- ½ ಟೀಸ್ಪೂನ್ ಮೇಥಿ / ಮೆಂತ್ಯ ಬೀಜಗಳು
- ನೀರು, ನೆನೆಸಲು
- 1 ಕಪ್ ಉದ್ದಿನ ಬೇಳೆ
- 2 ಟೇಬಲ್ಸ್ಪೂನ್ ತೊಗರಿ ಬೇಳೆ
- 2 ಟೇಬಲ್ಸ್ಪೂನ್ ಕಡ್ಲೆ ಬೇಳೆ
- 1 ಕಪ್ ಪೋಹಾ / ಅವಲಕ್ಕಿ, ತೊಳೆದ
ಆಲೂ ಭಾಜಿಗಾಗಿ:
- 2 ಟೇಬಲ್ಸ್ಪೂನ್ ಎಣ್ಣೆ
- 1 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆ ಬೇಳೆ
- 1 ಒಣಗಿದ ಕೆಂಪು ಮೆಣಸಿನಕಾಯಿ
- ಕೆಲವು ಕರಿಬೇವಿನ ಎಲೆಗಳು
- ಪಿಂಚ್ ಹಿಂಗ್ / ಅಸಫೊಟಿಡಾ
- 2 ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ
- 1 ಇಂಚಿನ ಶುಂಠಿ, ಸಣ್ಣಗೆ ಕತ್ತರಿಸಿದ
- 1 ಈರುಳ್ಳಿ, ಹೋಳು
- ¼ ಟೀಸ್ಪೂನ್ ಅರಿಶಿನ
- 1 ಟೀಸ್ಪೂನ್ ಉಪ್ಪು
- 3 ಆಲೂಗಡ್ಡೆ, ಬೇಯಿಸಿದ ಮತ್ತು ಹಿಸುಕಿದ
- 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು, ಸಣ್ಣಗೆ ಕತ್ತರಿಸಿ
- 2 ಟೇಬಲ್ಸ್ಪೂನ್ ನಿಂಬೆ ರಸ
ಸೂಚನೆಗಳು
ಮಸಾಲ ದೋಸೆ ಹಿಟ್ಟು ತಯಾರಿಕೆ:
- ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 3 ಕಪ್ ಸೋನಾ ಮಸೂರಿ ಅಕ್ಕಿ ಮತ್ತು ½ ಟೀಸ್ಪೂನ್ ಮೇಥಿ ತೆಗೆದುಕೊಳ್ಳಿ.
- ಚೆನ್ನಾಗಿ ತೊಳೆಯಿರಿ ಮತ್ತು ಸಾಕಷ್ಟು ನೀರಿನಲ್ಲಿ 4 ಗಂಟೆಗಳ ಕಾಲ ನೆನೆಸಿ.
- ಮತ್ತೊಂದು ಬಟ್ಟಲಿನಲ್ಲಿ 1 ಕಪ್ ಉದ್ದಿನ ಬೇಳೆ, 2 ಟೀಸ್ಪೂನ್ ತೊಗರಿ ಬೇಳೆ ಮತ್ತು 2 ಟೀಸ್ಪೂನ್ ಕಡ್ಲೆ ಬೇಳೆ ತೆಗೆದುಕೊಳ್ಳಿ.
- ಚೆನ್ನಾಗಿ ತೊಳೆಯಿರಿ ಮತ್ತು ಸಾಕಷ್ಟು ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿ.
- ಬೇಳೆಗಳನ್ನು 2 ಗಂಟೆಗಳ ಕಾಲ ನೆನೆಸಿದ ನಂತರ, ನೀರು ಸೋಸಿ ಗ್ರೈಂಡರ್ ಗೆ ವರ್ಗಾಯಿಸಿ. ನಿಮ್ಮ ಬಳಿ ಗ್ರೈಂಡರ್ ಇಲ್ಲದಿದ್ದರೆ ಮಿಕ್ಸರ್ ನಲ್ಲಿ ರುಬ್ಬಿಕೊಳ್ಳಬಹುದು.
- ಅಗತ್ಯವಿರುವಂತೆ ನೀರನ್ನು ಸೇರಿಸಿ ಮತ್ತು ನಯವಾದ ಪೇಸ್ಟ್ಗೆ ಮಿಶ್ರಣ ಮಾಡಿ.
- ನಯವಾದ ಹಿಟ್ಟು 40 ನಿಮಿಷಗಳ ನಂತರ ಸಿದ್ಧವಾಗಲಿದೆ.
- ಹಿಟ್ಟನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿ ಪಕ್ಕಕ್ಕೆ ಇರಿಸಿ.
- ಅದೇ ಗ್ರೈಂಡರ್ ನಲ್ಲಿ ನೆನೆಸಿದ ಅಕ್ಕಿ ಮತ್ತು 1 ಕಪ್ ತೊಳೆದ ಅವಲಕ್ಕಿಯನ್ನು ಸೇರಿಸಿ.
- ನಿಧಾನವಾಗಿ ನೀರನ್ನು ಸೇರಿಸಿ, ಒರಟಾದ ಪೇಸ್ಟ್ಗೆ ಮಿಶ್ರಣ ಮಾಡಿ.
- ರುಬ್ಬಿದ ಅಕ್ಕಿ ಹಿಟ್ಟನ್ನು ಬೇಳೆಯ ಹಿಟ್ಟಿಗೆ ವರ್ಗಾಯಿಸಿ.
- ಎಲ್ಲವನ್ನೂ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
- ಕನಿಷ್ಠ 8 ಗಂಟೆಗಳ ಕಾಲ ಅಥವಾ ಹಿಟ್ಟಿನ ಪರಿಮಾಣವು ದ್ವಿಗುಣಗೊಳ್ಳುವವರೆಗೆ ಬೆಚ್ಚಗಿನ ಸ್ಥಳದಲ್ಲಿ ಫರ್ಮೆಂಟೇಶನ್ ಮಾಡಿ. ನೀವು ತಂಪಾದ ವಾತಾವರಣದಲ್ಲಿ ಇದ್ದರೆ, ಫರ್ಮೆಂಟೇಶನ್ ಮಾಡಲು ಬೆಚ್ಚಗಿನ ಓವೆನ್ ನಲ್ಲಿ ಹಿಟ್ಟನ್ನು ಇಡಬಹುದು (ಓವೆನ್ ಅನ್ನು ಸ್ವಲ್ಪ ಬೆಚ್ಚಗಾಗುವವರೆಗೆ ಬಿಸಿ ಮಾಡಿ ನಂತರ ಆಫ್ ಮಾಡಿ)
- ಹಿಟ್ಟು ಚೆನ್ನಾಗಿ ಫೆರ್ಮೆಂಟ್ ಆದ ನಂತರ, ಏರ್ ಪಾಕೆಟ್‌ಗಳಿಗೆ ತೊಂದರೆಯಾಗದಂತೆ ನಿಧಾನವಾಗಿ ಮಿಶ್ರಣ ಮಾಡಿ.
- 4 ಕಪ್ ಫರ್ಮೆಂಟ್ ಬ್ಯಾಟರ್ ಅನ್ನು ಸಣ್ಣ ಬಟ್ಟಲಿಗೆ ವರ್ಗಾಯಿಸಿ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ.
- ಉಪ್ಪು ಸೇರಿಕೊಳ್ಳುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಮಸಾಲ ದೋಸೆ ಹಿಟ್ಟು ಸಿದ್ಧವಾಗಿದೆ. ನಂತರ ಪಕ್ಕಕ್ಕೆ ಇರಿಸಿ.
ಆಲೂ ಭಾಜಿ ತಯಾರಿಕೆ:
- ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದಿನ ಬೇಳೆ, 1 ಟೀಸ್ಪೂನ್ ಕಡ್ಲೆ ಬೇಳೆ, 1 ಒಣಗಿದ ಕೆಂಪು ಮೆಣಸಿನಕಾಯಿ, ಕೆಲವು ಕರಿಬೇವಿನ ಎಲೆಗಳು ಮತ್ತು ಚಿಟಿಕೆ ಹಿಂಗ್ ಬೆರೆಸಿ.
- ಈಗ 2 ಮೆಣಸಿನಕಾಯಿ ಮತ್ತು 1 ಇಂಚಿನ ಶುಂಠಿಯನ್ನು ಸೇರಿಸಿ. ಚೆನ್ನಾಗಿ ಸಾಟ್ ಮಾಡಿ.
- ಇದಕ್ಕೆ 1 ಈರುಳ್ಳಿ ಸೇರಿಸಿ ಮತ್ತು ಈರುಳ್ಳಿ ಸ್ವಲ್ಪ ಕುಗ್ಗುವವರೆಗೆ ಸಾಟ್ ಮಾಡಿ.
- ಮುಂದೆ, ¼ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಸಾಟ್ ಮಾಡಿ.
- ಈಗ ಮ್ಯಾಶ್ ಮಾಡಿದ 3 ಆಲೂಗಡ್ಡೆಯನ್ನು ಬೆರೆಸಿ. ಎಲ್ಲವೂ ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತ ಮಾಡಿಕೊಳ್ಳಿ
- ಜ್ವಾಲೆಯನ್ನು ಆಫ್ ಮಾಡಿ 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು ಮತ್ತು 2 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ.
- ಚೆನ್ನಾಗಿ ಮಿಶ್ರಣ ಮಾಡಿ, ಈಗ ಮಸಾಲ ದೋಸೆಗೆ ಆಲೂ ಭಾಜಿ ಸಿದ್ಧವಾಗಿದೆ. ಪಕ್ಕಕ್ಕೆ ಇರಿಸಿ.
ಮಸಾಲ ದೋಸೆ ತಯಾರಿಕೆ:
- ಮೊದಲನೆಯದಾಗಿ, ಬಿಸಿ ತವಾದಲ್ಲಿ ಲ್ಯಾಡಲ್‌ಫುಲ್ ಬ್ಯಾಟರ್ ಅನ್ನು ಸೇರಿಸಿ.
- ಗರಿಗರಿಯಾದ ದೋಸೆ ಹೊಯ್ಯಲು ಸಾಧ್ಯವಾದಷ್ಟು ತೆಳ್ಳಗೆ ಹರಡಿ.
- 1 ಟೀಸ್ಪೂನ್ ಬೆಣ್ಣೆಯನ್ನು ತೆಗೆದುಕೊಂಡು ಏಕರೂಪವಾಗಿ ಹರಡಿ.
- ಹಾಗೆಯೇ, 2 ಟೀಸ್ಪೂನ್ ತಯಾರಾದ ಆಲೂ ಮಸಾಲವನ್ನು ಮಧ್ಯದಲ್ಲಿ ಇರಿಸಿ.
- ದೋಸೆ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ರೋಸ್ಟ್ ಮಾಡಿ.
- ದೋಸೆಯನ್ನು ನಿಧಾನವಾಗಿ ರೋಲ್ ಮಾಡಿಕೊಳ್ಳಿ.
- ಅಂತಿಮವಾಗಿ, ಮಸಾಲ ದೋಸೆ ಪಾಕವಿಧಾನವು ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಬಡಿಸಲು ಸಿದ್ಧವಾಗಿದೆ.
ಹಂತ ಹಂತದ ಫೋಟೋದೊಂದಿಗೆ ಮಸಾಲ ದೋಸೆ ಮಾಡುವುದು ಹೇಗೆ:
ಮಸಾಲ ದೋಸೆ ಹಿಟ್ಟು ತಯಾರಿಕೆ:
- ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 3 ಕಪ್ ಸೋನಾ ಮಸೂರಿ ಅಕ್ಕಿ ಮತ್ತು ½ ಟೀಸ್ಪೂನ್ ಮೇಥಿ ತೆಗೆದುಕೊಳ್ಳಿ.
- ಚೆನ್ನಾಗಿ ತೊಳೆಯಿರಿ ಮತ್ತು ಸಾಕಷ್ಟು ನೀರಿನಲ್ಲಿ 4 ಗಂಟೆಗಳ ಕಾಲ ನೆನೆಸಿ.
- ಮತ್ತೊಂದು ಬಟ್ಟಲಿನಲ್ಲಿ 1 ಕಪ್ ಉದ್ದಿನ ಬೇಳೆ, 2 ಟೀಸ್ಪೂನ್ ತೊಗರಿ ಬೇಳೆ ಮತ್ತು 2 ಟೀಸ್ಪೂನ್ ಕಡ್ಲೆ ಬೇಳೆ ತೆಗೆದುಕೊಳ್ಳಿ.
- ಚೆನ್ನಾಗಿ ತೊಳೆಯಿರಿ ಮತ್ತು ಸಾಕಷ್ಟು ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿ.
- ಬೇಳೆಗಳನ್ನು 2 ಗಂಟೆಗಳ ಕಾಲ ನೆನೆಸಿದ ನಂತರ, ನೀರು ಸೋಸಿ ಗ್ರೈಂಡರ್ ಗೆ ವರ್ಗಾಯಿಸಿ. ನಿಮ್ಮ ಬಳಿ ಗ್ರೈಂಡರ್ ಇಲ್ಲದಿದ್ದರೆ ಮಿಕ್ಸರ್ ನಲ್ಲಿ ರುಬ್ಬಿಕೊಳ್ಳಬಹುದು.
- ಅಗತ್ಯವಿರುವಂತೆ ನೀರನ್ನು ಸೇರಿಸಿ ಮತ್ತು ನಯವಾದ ಪೇಸ್ಟ್ಗೆ ಮಿಶ್ರಣ ಮಾಡಿ.
- ನಯವಾದ ಹಿಟ್ಟು 40 ನಿಮಿಷಗಳ ನಂತರ ಸಿದ್ಧವಾಗಲಿದೆ.
- ಹಿಟ್ಟನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿ ಪಕ್ಕಕ್ಕೆ ಇರಿಸಿ.
- ಅದೇ ಗ್ರೈಂಡರ್ ನಲ್ಲಿ ನೆನೆಸಿದ ಅಕ್ಕಿ ಮತ್ತು 1 ಕಪ್ ತೊಳೆದ ಅವಲಕ್ಕಿಯನ್ನು ಸೇರಿಸಿ.
- ನಿಧಾನವಾಗಿ ನೀರನ್ನು ಸೇರಿಸಿ, ಒರಟಾದ ಪೇಸ್ಟ್ಗೆಮಿಶ್ರಣ ಮಾಡಿ.
- ರುಬ್ಬಿದ ಅಕ್ಕಿ ಹಿಟ್ಟನ್ನು ಬೇಳೆಯ ಹಿಟ್ಟಿಗೆ ವರ್ಗಾಯಿಸಿ.
- ಎಲ್ಲವನ್ನೂ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
- ಕನಿಷ್ಠ 8 ಗಂಟೆಗಳ ಕಾಲ ಅಥವಾ ಹಿಟ್ಟಿನ ಪರಿಮಾಣವು ದ್ವಿಗುಣಗೊಳ್ಳುವವರೆಗೆ ಬೆಚ್ಚಗಿನ ಸ್ಥಳದಲ್ಲಿ ಫರ್ಮೆಂಟೇಶನ್ ಮಾಡಿ. ನೀವು ತಂಪಾದ ವಾತಾವರಣದಲ್ಲಿ ಇದ್ದರೆ, ಫರ್ಮೆಂಟೇಶನ್ ಮಾಡಲು ಬೆಚ್ಚಗಿನ ಓವೆನ್ ನಲ್ಲಿ ಹಿಟ್ಟನ್ನು ಇಡಬಹುದು (ಓವೆನ್ ಅನ್ನು ಸ್ವಲ್ಪ ಬೆಚ್ಚಗಾಗುವವರೆಗೆ ಬಿಸಿ ಮಾಡಿ ನಂತರ ಆಫ್ ಮಾಡಿ)
- ಹಿಟ್ಟು ಚೆನ್ನಾಗಿ ಫೆರ್ಮೆಂಟ್ ಆದ ನಂತರ, ಏರ್ ಪಾಕೆಟ್‌ಗಳಿಗೆ ತೊಂದರೆಯಾಗದಂತೆ ನಿಧಾನವಾಗಿ ಮಿಶ್ರಣ ಮಾಡಿ.
- 4 ಕಪ್ ಫರ್ಮೆಂಟ್ ಬ್ಯಾಟರ್ ಅನ್ನು ಸಣ್ಣ ಬಟ್ಟಲಿಗೆ ವರ್ಗಾಯಿಸಿ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ.
- ಉಪ್ಪು ಸೇರಿಕೊಳ್ಳುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಮಸಾಲ ದೋಸೆ ಹಿಟ್ಟು ಸಿದ್ಧವಾಗಿದೆ. ನಂತರ ಪಕ್ಕಕ್ಕೆ ಇರಿಸಿ.
ಆಲೂ ಭಾಜಿ ತಯಾರಿಕೆ:
- ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದು ಬೇಳೆ, 1 ಟೀಸ್ಪೂನ್ ಕಡ್ಲೆ ಬೇಳೆ, 1 ಒಣಗಿದ ಕೆಂಪು ಮೆಣಸಿನಕಾಯಿ, ಕೆಲವು ಕರಿಬೇವಿನ ಎಲೆಗಳು ಮತ್ತು ಚಿಟಿಕೆ ಹಿಂಗ್ ಬೆರೆಸಿ.
- ಈಗ 2 ಮೆಣಸಿನಕಾಯಿ ಮತ್ತು 1 ಇಂಚಿನ ಶುಂಠಿಯನ್ನು ಸೇರಿಸಿ. ಚೆನ್ನಾಗಿ ಸಾಟ್ ಮಾಡಿ.
- ಇದಕ್ಕೆ 1 ಈರುಳ್ಳಿ ಸೇರಿಸಿ ಮತ್ತು ಈರುಳ್ಳಿ ಸ್ವಲ್ಪ ಕುಗ್ಗುವವರೆಗೆ ಸಾಟ್ ಮಾಡಿ.
- ಮುಂದೆ, ¼ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಸಾಟ್ ಮಾಡಿ.
- ಈಗ ಮ್ಯಾಶ್ ಮಾಡಿದ 3 ಆಲೂಗಡ್ಡೆಯನ್ನು ಬೆರೆಸಿ. ಎಲ್ಲವೂ ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತ ಮಾಡಿಕೊಳ್ಳಿ
- ಜ್ವಾಲೆಯನ್ನು ಆಫ್ ಮಾಡಿ 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು ಮತ್ತು 2 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ.
- ಚೆನ್ನಾಗಿ ಮಿಶ್ರಣ ಮಾಡಿ, ಈಗ ಮಸಾಲ ದೋಸೆಗೆ ಆಲೂ ಭಾಜಿ ಸಿದ್ಧವಾಗಿದೆ. ಪಕ್ಕಕ್ಕೆ ಇರಿಸಿ.
ಮಸಾಲ ದೋಸೆ ತಯಾರಿಕೆ:
- ಮೊದಲನೆಯದಾಗಿ, ಬಿಸಿ ತವಾದಲ್ಲಿ ಲ್ಯಾಡಲ್‌ಫುಲ್ ಬ್ಯಾಟರ್ ಅನ್ನು ಸೇರಿಸಿ.
- ಗರಿಗರಿಯಾದ ದೋಸೆ ಹೊಯ್ಯಲು ಸಾಧ್ಯವಾದಷ್ಟು ತೆಳ್ಳಗೆ ಹರಡಿ.
- 1 ಟೀಸ್ಪೂನ್ ಬೆಣ್ಣೆಯನ್ನು ತೆಗೆದುಕೊಂಡು ಏಕರೂಪವಾಗಿ ಹರಡಿ.
- ಹಾಗೆಯೇ, 2 ಟೀಸ್ಪೂನ್ ತಯಾರಾದ ಆಲೂ ಮಸಾಲವನ್ನು ಮಧ್ಯದಲ್ಲಿ ಇರಿಸಿ.
- ದೋಸೆ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ರೋಸ್ಟ್ ಮಾಡಿ.
- ದೋಸೆಯನ್ನು ನಿಧಾನವಾಗಿ ರೋಲ್ ಮಾಡಿಕೊಳ್ಳಿ.
- ಅಂತಿಮವಾಗಿ, ಮಸಾಲ ದೋಸೆ ಪಾಕವಿಧಾನವು ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಬಡಿಸಲು ಸಿದ್ಧವಾಗಿದೆ.
ಟಿಪ್ಪಣಿಗಳು:
- ಮೊದಲನೆಯದಾಗಿ, ದೋಸೆ ಹಿಟ್ಟು ಚೆನ್ನಾಗಿ ಫೆರ್ಮೆಂಟ್ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಿ ಇಲ್ಲದಿದ್ದರೆ ದೋಸೆ ಉತ್ತಮವಾಗಿರುವುದಿಲ್ಲ.
- ಹಾಗೆಯೇ, ಆಲೂ ಮಸಾಲೆಯ ಮಸಾಲೆಯುಕ್ತ ಪ್ರಮಾಣವನ್ನು ನಿಮ್ಮ ರುಚಿಗೆ ಹೊಂದಿಸಿ.
- ಗರಿಗರಿಯಾದ ದೋಸೆಗೆ ಕಬ್ಬಿಣದ ತವಾವನ್ನು ಬಳಸಲು ಶಿಫಾರಸು ಮಾಡುತ್ತೇನೆ.
- ಅಂತಿಮವಾಗಿ, ಗರಿಗರಿಯಾದಾಗ ಮಸಾಲ ದೋಸೆ ಪಾಕವಿಧಾನವು ಉತ್ತಮ ರುಚಿ ನೀಡುತ್ತದೆ.