ಕ್ಯಾಬೇಜ್ ರೈಸ್ ಪಾಕವಿಧಾನ | ಎಲೆಕೋಸು ಪುಲಾವ್ ಪಾಕವಿಧಾನ | ಸ್ಪೈಸಿ ಕ್ಯಾಬೇಜ್ ಪುಲಾವ್ನ ವಿವರವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಇದು ಸುಲಭ ಮತ್ತು ಆರೋಗ್ಯಕರ ಊಟದ ಡಬ್ಬದ ಪಾಕವಿಧಾನವಾಗಿದ್ದು ಮುಖ್ಯವಾಗಿ ಬೇಯಿಸಿದ ಅನ್ನ ಮತ್ತು ಸಣ್ಣದಾಗಿ ಕತ್ತರಿಸಿದ ಎಲೆಕೋಸಿನಿಂದ ತಯಾರಿಸಲಾಗುತ್ತದೆ. ನಿಮ್ಮ ಫ್ರಿಜ್ನಲ್ಲಿ ಉಳಿದಿರುವ ಅಣ್ಣ ಮತ್ತು ಎಲೆಕೋಸು ಉಳಿದಿದ್ದರೆ, ಮಸಾಲೆಯುಕ್ತ ಫ್ಲೇವರ್ ನ ಈ ಕ್ಯಾಬೇಜ್ ರೈಸ್ ಪಾಕವಿಧಾನವನ್ನುತಯಾರಿಸಬಹುದು. ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯ ಭೋಜನಕ್ಕೆ ರಾಯಿತಾ ಅಥವಾ ಸಲಾಡ್ ಸಂಯೋಜನೆಯೊಂದಿಗೆ ಬಡಿಸಿದಾಗ ಇದು ಉತ್ತಮ ರುಚಿ ನೀಡುತ್ತದೆ.
ಕ್ಯಾಬೇಜ್ ರೈಸ್ನ ಈ ಪಾಕವಿಧಾನದ ಈ ಪೋಸ್ಟ್ನಲ್ಲಿ, ನನ್ನ ಹಿಂದಿನ ಕಡಲೆಕಾಯಿ ರೈಸ್ ಪಾಕವಿಧಾನಕ್ಕೆ ಹೋಲುತ್ತದೆ. ಈ ರೈಸ್ ಪಾಕವಿಧಾನಕ್ಕೆ, ದಕ್ಷಿಣ ಭಾರತೀಯ ಸ್ಪರ್ಶವನ್ನು ನೀಡುತ್ತದೆ ಮತ್ತು ಆದ್ದರಿಂದ ನಾನು ಈ ಪಾಕವಿಧಾನವನ್ನು ಎಲೆಕೋಸು ಪುಲಾವ್ ಎಂದು ಕರೆಯುತ್ತೇನೆ. ಕ್ಯಾಬೇಜ್ ರೈಸ್ ತಯಾರಿಸುವ ವಿಧಾನವು ಜನಪ್ರಿಯ ಇಂಡೋ ಚೈನೀಸ್ ಫ್ರೈಡ್ ರೈಸ್ ರೆಸಿಪಿಯನ್ನು ಹೋಲುತ್ತದೆ. ವಾಸ್ತವವಾಗಿ, ಅದು ಇಂಡೋ ಚೈನೀಸ್ ರೆಸ್ಟೋರೆಂಟ್ ಮೆನುವಿನಲ್ಲಿ ಕಂಡುಬರುವ ಸಾಮಾನ್ಯ ಪ್ರಭೇದಗಳಲ್ಲಿ ಒಂದಾಗಿದೆ. ಬಹುಶಃ ನಾನು ಅದನ್ನು ಶೀಘ್ರದಲ್ಲೇ ವೀಡಿಯೊದೊಂದಿಗೆ ಬಿಡುಗಡೆ ಮಾಡುತ್ತೇನ. ಆದರೆ ಈ ಪೋಸ್ಟ್ ಸಂಪೂರ್ಣವಾಗಿ ದಕ್ಷಿಣ ಭಾರತದ ರುಚಿಯ ಕ್ಯಾಬೇಜ್ ರೈಸ್ ಪಾಕವಿಧಾನವಾಗಿದೆ.
ಎಲೆಕೋಸು ಪುಲಾವ್ ಪಾಕವಿಧಾನಕ್ಕೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲನೆಯದಾಗಿ, ಈ ಅನ್ನ ಪಾಕವಿಧಾನಕ್ಕಾಗಿ ನೀವು ಯಾವುದೇ ರೀತಿಯ ಎಲೆಕೋಸುಗಳನ್ನು ಬಳಸಬಹುದು. ನಾನು ವೈಯಕ್ತಿಕವಾಗಿ ಹಸಿರು ಮಿಶ್ರಿತ ಎಲೆಕೋಸಿಗೆ ಆದ್ಯತೆ ನೀಡುತ್ತೇನೆ, ಆದರೆ ನೇರಳೆ ಅಥವಾ ಕೆಂಪು ಎಲೆಕೋಸು ಸಹ ಉಪಯೋಗಿಸಬಹುದು. ಎರಡನೆಯದಾಗಿ, ಈ ಪಾಕವಿಧಾನವನ್ನು ತಯಾರಿಸಲು ಡ್ರೈ ಅನ್ನ ಅಥವಾ ಉಳಿದ ಅನ್ನವನ್ನು ಬಳಸಲು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ. ಹೊಸದಾಗಿ ತಯಾರಿಸಿದ ತಾಜಾ ಅನ್ನವು ತೇವಾಂಶವನ್ನು ಹೊಂದಿರಬಹುದು ಮತ್ತು ಆದ್ದರಿಂದ ಅಂತಿಮ ಫಲಿತಾಂಶವು ಜಿಗುಟಾಗಿರಬಹುದು ಮತ್ತು ಮಸಾಲೆ ಮತ್ತು ರುಚಿ ಮಟ್ಟವನ್ನು ಕಡಿಮೆ ಮಾಡಬಹುದು. ಸ್ಪೈಸಿ ಕ್ಯಾಬೇಜ್ ಪುಲಾವ್ ಗಾಗಿ ನೀವು ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಎರಡನ್ನೂ ಬಳಸಬಹುದು. ಕೊನೆಯದಾಗಿ, ಕ್ಯಾಬೇಜ್ ರೈಸ್ ಅನ್ನು ಹಾಗೆಯೇ ಸವಿದಾಗ ಅಥವಾ ರಾಯಿತದೊಂದಿಗೆ ಬಡಿಸಿದಾಗ ಉತ್ತಮ ರುಚಿ ನೀಡುತ್ತದೆ. ಆದರೆ ಕಡಲೆಕಾಯಿ ಚಟ್ನಿ ಅಥವಾ ಮಿರ್ಚಿ ಕಾ ಸಲಾನ್ ಮೇಲೋಗರದೊಂದಿಗೆ ಬಡಿಸಿದಾಗ ಇನ್ನೂ ಅದ್ಭುತ ರುಚಿ ಕೊಡುತ್ತದೆ.
ಅಂತಿಮವಾಗಿ, ಎಲೆಕೋಸು ಪುಲಾವ್ ಪಾಕವಿಧಾನದ ಈ ಪೋಸ್ಟ್ನೊಂದಿಗೆ ನನ್ನ ಇತರ ಭಾರತೀಯ ಅನ್ನದ ಪಾಕವಿಧಾನಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಇದರಲ್ಲಿ ಕ್ಯಾಪ್ಸಿಕಂ ರೈಸ್, ಟೊಮೆಟೊ ಬಿರಿಯಾನಿ, ತೆಂಗಿನಕಾಯಿ ರೈಸ್, ಬಿಸಿ ಬೇಳೆ ಭಾತ್, ಚನಾ ಪುಲಾವ್, ರಾಜಮಾ ರೈಸ್, ಪುಳಿಯೋಧರೈ, ಪುಳಿಹೋರಾ, ಕಾರ್ನ್ ಫ್ರೈಡ್ ರೈಸ್ ಮತ್ತು ಬುರ್ನ್ಟ್ ಗಾರ್ಲಿಕ್ ಫ್ರೈಡ್ ರೈಸ್ ರೆಸಿಪಿ ಮುಂತಾದ ಪಾಕವಿಧಾನಗಳು ಸೇರಿವೆ. ಹೆಚ್ಚುವರಿಯಾಗಿ, ನನ್ನ ಇತರ ರೀತಿಯ ಪಾಕವಿಧಾನಗಳ ಸಂಗ್ರಹಕ್ಕೆ ಭೇಟಿ ನೀಡಿ,
ಕ್ಯಾಬೇಜ್ ರೈಸ್ ವೀಡಿಯೊ ಪಾಕವಿಧಾನ:
ಎಲೆಕೋಸು ಪುಲಾವ್ ಪಾಕವಿಧಾನ ಕಾರ್ಡ್:
ಕ್ಯಾಬೇಜ್ ರೈಸ್ ರೆಸಿಪಿ | cabbage rice in kannada | ಎಲೆಕೋಸು ಪುಲಾವ್
ಪದಾರ್ಥಗಳು
- 3 ಟೀಸ್ಪೂನ್ ಎಣ್ಣೆ
- ¾ ಸಾಸಿವೆ ಬೀಜಗಳು
- 1 ಟೀಸ್ಪೂನ್ ಜೀರಿಗೆ / ಜೀರಾ
- ಕೆಲವು ಕರಿಬೇವಿನ ಎಲೆಗಳು
- 2 ಟೇಬಲ್ಸ್ಪೂನ್ ಕಡಲೆಕಾಯಿ
- 1 ಹಸಿರು ಮೆಣಸಿನಕಾಯಿ, ಸೀಳಿದ
- ½ ಈರುಳ್ಳಿ, ಸಣ್ಣಗೆ ಕತ್ತರಿಸಿದ
- ¼ ಕ್ಯಾರೆಟ್, ತುರಿದ
- 2 ಟೇಬಲ್ಸ್ಪೂನ್ ಕ್ಯಾಪ್ಸಿಕಂ, ಸಣ್ಣಗೆ ಕತ್ತರಿಸಿದ
- 2 ಕಪ್ ಎಲೆಕೋಸು, ಸಣ್ಣಗೆ ಕತ್ತರಿಸಿದ
- ½ ಟೀಸ್ಪೂನ್ ಉಪ್ಪು
- ¼ ಟೀಸ್ಪೂನ್ ಅರಿಶಿನ
- ½ ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
- ½ ಟೀಸ್ಪೂನ್ ಗರಂ ಮಸಾಲ
- 2 ಕಪ್ ಬೇಯಿಸಿದ ಅನ್ನ
- 2 ಟೇಬಲ್ಸ್ಪೂನ್ ತೆಂಗಿನಕಾಯಿ, ತುರಿದ
- ಕೆಲವು ಕೊತ್ತಂಬರಿ ಸೊಪ್ಪು, ಸಣ್ಣಗೆ ಕತ್ತರಿಸಿದ
ಸೂಚನೆಗಳು
- ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆ, ¾ ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಜೀರಿಗೆ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಹಾಕಿ ಬಿಸಿ ಮಾಡಿ.
- ಈಗ ಕಡಿಮೆ ಉರಿಯಲ್ಲಿ 2 ಟೀಸ್ಪೂನ್ ಕಡಲೆಕಾಯಿಯನ್ನು ಕುರುಕಲು ಆಗುವವರೆಗೆ ಹುರಿಯಿರಿ.
- 1 ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ, ಈರುಳ್ಳಿ ಸ್ವಲ್ಪ ಕುಗ್ಗುವವವರೆಗೆ ಸಾಟ್ ಮಾಡಿ.
- ಇದಲ್ಲದೆ, ¼ ತುರಿದ ಕ್ಯಾರೆಟ್ ಮತ್ತು 2 ಟೀಸ್ಪೂನ್ ಕ್ಯಾಪ್ಸಿಕಂ ಸೇರಿಸಿ. ಸಾಟ್ ಮಾಡಿ ಚೆನ್ನಾಗಿ ಬೇಯಿಸಿ.
- ಈಗ 2 ಕಪ್ ನುಣ್ಣಗೆ ಕತ್ತರಿಸಿದ ಎಲೆಕೋಸು, ¼ ಟೀಸ್ಪೂನ್ ಉಪ್ಪು ಸೇರಿಸಿ ಮತ್ತು 3 ನಿಮಿಷ ಅಥವಾ ಚೆನ್ನಾಗಿ ಬೇಯವವರೆಗೆ ಬೇಯಿಸಿ.
- ಈಗ, ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಮೆಣಸಿನ ಪುಡಿ ಮತ್ತು ½ ಟೀಸ್ಪೂನ್ ಗರಂ ಮಸಾಲಾ ಕೂಡ ಸೇರಿಸಿ. ಮಸಾಲೆಗಳು ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
- ಇದಲ್ಲದೆ, 2 ಕಪ್ ಅನ್ನ, ¼ ಟೀಸ್ಪೂನ್ ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.
- ಮುಚ್ಚಿ, 3 ನಿಮಿಷಗಳ ಕಾಲ ಅಥವಾ ಅನ್ನ ಮಸಾಲೆಗಳನ್ನು ಹೀರಿಕೊಳ್ಳುವವರೆಗೆ ಸಿಮ್ಮೆರ್ ನಲ್ಲಿಡಿ.
- ಈಗ 2 ಟೀಸ್ಪೂನ್ ತೆಂಗಿನಕಾಯಿ ತುರಿ ಮತ್ತು ಕೆಲವು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
- ಅಂತಿಮವಾಗಿ, ಕ್ಯಾಬೇಜ್ ರೈಸ್ಅನ್ನು ರಾಯಿತದೊಂದಿಗೆ ಬಡಿಸಿ ಅಥವಾ ನಿಮ್ಮ ಮಕ್ಕಳ ಊಟದ ಡಬ್ಬಕ್ಕೆ ಪ್ಯಾಕ್ ಮಾಡಿ.
ಹಂತ ಹಂತದ ಫೋಟೋದೊಂದಿಗೆ ಕ್ಯಾಬೇಜ್ ರೈಸ್ ತಯಾರಿಸುವುದು ಹೇಗೆ:
- ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆ, ¾ ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಜೀರಿಗೆ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಹಾಕಿ ಬಿಸಿ ಮಾಡಿ.
- ಈಗ ಕಡಿಮೆ ಉರಿಯಲ್ಲಿ 2 ಟೀಸ್ಪೂನ್ ಕಡಲೆಕಾಯಿಯನ್ನು ಕುರುಕಲು ಆಗುವವರೆಗೆ ಹುರಿಯಿರಿ.
- 1 ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ, ಈರುಳ್ಳಿ ಸ್ವಲ್ಪ ಕುಗ್ಗುವವವರೆಗೆ ಸಾಟ್ ಮಾಡಿ.
- ಇದಲ್ಲದೆ, ¼ ತುರಿದ ಕ್ಯಾರೆಟ್ ಮತ್ತು 2 ಟೀಸ್ಪೂನ್ ಕ್ಯಾಪ್ಸಿಕಂ ಸೇರಿಸಿ. ಸಾಟ್ ಮಾಡಿ ಚೆನ್ನಾಗಿ ಬೇಯಿಸಿ.
- ಈಗ 2 ಕಪ್ ನುಣ್ಣಗೆ ಕತ್ತರಿಸಿದ ಎಲೆಕೋಸು, ¼ ಟೀಸ್ಪೂನ್ ಉಪ್ಪು ಸೇರಿಸಿ ಮತ್ತು 3 ನಿಮಿಷ ಅಥವಾ ಚೆನ್ನಾಗಿ ಬೇಯವವರೆಗೆ ಬೇಯಿಸಿ.
- ಈಗ, ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಮೆಣಸಿನ ಪುಡಿ ಮತ್ತು ½ ಟೀಸ್ಪೂನ್ ಗರಂ ಮಸಾಲಾ ಕೂಡ ಸೇರಿಸಿ. ಮಸಾಲೆಗಳು ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
- ಇದಲ್ಲದೆ, 2 ಕಪ್ ಅನ್ನ, ¼ ಟೀಸ್ಪೂನ್ ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.
- ಮುಚ್ಚಿ, 3 ನಿಮಿಷಗಳ ಕಾಲ ಅಥವಾ ಅನ್ನ ಮಸಾಲೆಗಳನ್ನು ಹೀರಿಕೊಳ್ಳುವವರೆಗೆ ಸಿಮ್ಮೆರ್ ನಲ್ಲಿಡಿ.
- ಈಗ 2 ಟೀಸ್ಪೂನ್ ತೆಂಗಿನಕಾಯಿ ತುರಿ ಮತ್ತು ಕೆಲವು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
- ಅಂತಿಮವಾಗಿ, ಸ್ಪೈಸಿ ಕ್ಯಾಬೇಜ್ ಪುಲಾವ್ ರಾಯಿತದೊಂದಿಗೆ ಬಡಿಸಿ ಅಥವಾ ನಿಮ್ಮ ಮಕ್ಕಳ ಊಟದ ಡಬ್ಬಕ್ಕೆ ಪ್ಯಾಕ್ ಮಾಡಿ.
ಟಿಪ್ಪಣಿಗಳು:
- ಮೊದಲನೆಯದಾಗಿ, ಅನ್ನಕ್ಕೆ ಹೆಚ್ಚು ಫ್ಲೇವರ್ ಬರಲು, ಉಳಿದ ಅನ್ನವನ್ನೇ ಬಳಸಿ.
- ರೈಸ್, ರುಚಿಯಾಗಿರಲು ಕಡಲೆಕಾಯಿಯ ಬದಲಿಗೆ ಗೋಡಂಬಿ ಸೇರಿಸಿ.
- ಹೆಚ್ಚುವರಿಯಾಗಿ, ಕ್ಯಾಪ್ಸಿಕಂ ಮತ್ತು ಕ್ಯಾರೆಟ್ ಜೊತೆಗೆ ನಿಮ್ಮ ಆಯ್ಕೆಯ ತರಕಾರಿಗಳನ್ನು ಸೇರಿಸಿ. ಇದು ಹೆಚ್ಚು ಪೌಷ್ಠಿಕಾಂಶವನ್ನು ನೀಡುತ್ತದೆ.
- ಅಂತಿಮವಾಗಿ, ತಾಜಾ ತೆಂಗಿನ ತುರಿಯಿಂದ ಅಲಂಕರಿಸಿದಾಗ ಕ್ಯಾಬೇಜ್ ರೈಸ್ ರುಚಿಯಾಗಿರುತ್ತದೆ.