ಗಟ್ಟೆ ಕಿ ಸಬ್ಜಿ ರೆಸಿಪಿ | gatte ki sabji in kannada | ಬೇಸನ್ ಕೆ ಗಟ್ಟೆ

0

ಗಟ್ಟೆ ಕಿ ಸಬ್ಜಿ ಪಾಕವಿಧಾನ | ಬೇಸನ್ ಕೆ ಗಟ್ಟೆಯ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಒಂದು ಸಾಂಪ್ರದಾಯಿಕ ರಾಜಸ್ಥಾನಿ ಕರಿ ರೆಸಿಪಿಯಾಗಿದ್ದು ಬೇಸನ್ ಸಾಸೇಜ್ಗಳನ್ನು, ಮಸಾಲೆ ಮೊಸರು ಆಧಾರಿತ ಗ್ರೇವಿಯಲ್ಲಿ ಬೇಯಿಸಲ್ಪಡುತ್ತದೆ. ಈ ಪಾಕವಿಧಾನಕ್ಕೆ ಟೊಮೆಟೊ ಈರುಳ್ಳಿ ಆಧಾರಿತ ಗ್ರೇವಿ ಇಲ್ಲದೇ, ಮೊಸರನ್ನು ಬೇಸ್ ನಂತೆ ಬಳಸಲಾಗುತ್ತದೆ. ಆದ್ದರಿಂದ ಇದನ್ನು ಜನಪ್ರಿಯವಾಗಿ ರಾಜಸ್ಥಾನಿ ಗಟ್ಟೆ ಕಿ ಕಡಿ ಪಾಕವಿಧಾನ ಎಂದು ಸಹ ಕರೆಯಲಾಗುತ್ತದೆ.ಗಟ್ಟೆ ಕಿ ಸಬ್ಜಿ ಪಾಕವಿಧಾನ

ಗಟ್ಟೆ ಕಿ ಸಬ್ಜಿ ಪಾಕವಿಧಾನ | ಬೇಸನ್ ಕೆ ಗಟ್ಟೆಯ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ರಾಜಸ್ಥಾನಿ ಮೇಲೋಗರಗಳು ಅದರ ಸರಳತೆಗಾಗಿ ಹೆಸರುವಾಸಿಯಾಗಿವೆ ಮತ್ತು ಸಾಮಾನ್ಯವಾಗಿ ಕಡಿಮೆ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ಬಹುತೇಕ ಮೇಲೋಗರಗಳು ಮೊಸರನ್ನು ಬಳಸುತ್ತದೆ, ಇದು ಅದರ ಬೇಸ್ ಅನ್ನು ರೂಪಿಸುವುದು ಮಾತ್ರವಲ್ಲದೇ, ಅದಕ್ಕೆ ಅಗತ್ಯವಾದ ರುಚಿಯನ್ನು ಒದಗಿಸುತ್ತದೆ. ಇಂತಹ ಸರಳ ಮತ್ತು ಸುಲಭವಾದ ಪಾಕವಿಧಾನವು ಬೇಸನ್ ಡಂಪ್ಲಿಂಗ್ಸ್ ನೊಂದಿಗೆ ಗಟ್ಟೆ ಕಿ ಸಬ್ಜಿ ಪಾಕವಿಧಾನವಾಗಿದೆ.

ರಾಜಸ್ಥಾನದ ಜನಸಂಖ್ಯೆಯು ಅದರ ಪಾಕಪದ್ಧತಿ ಮತ್ತು ಮೇಲೋಗರಗಳಲ್ಲಿ ಬಲವಾದ ಪ್ರಭಾವ ಬೀರುತ್ತದೆ. ಮತ್ತು ಈ ಪಾಕವಿಧಾನದಲ್ಲಿ ಸ್ಪಷ್ಟವಾಗಿ ಇದು ಕಂಡುಬರುತ್ತದೆ, ವಿಶೇಷವಾಗಿ ಬೇಸನ್ ಡಂಪ್ಲಿಂಗ್ಸ್ ಬಳಕೆಯನ್ನು ತರಕಾರಿಗಳ ಪರ್ಯಾಯವಾಗಿ ಬಳಸಲಾಗುತ್ತದೆ. ಗ್ರೇವಿ ಸಾಸ್ ಕೂಡ ಮೊಸರುಗಳಿಂದ ತಯಾರಿಸಲಾಗುತ್ತದೆ, ಇದು ಮೇಲೋಗರಕ್ಕೆ ಹುಳಿಗಳನ್ನು ಒದಗಿಸುವುದು ಮಾತ್ರವಲ್ಲದೇ, ಸ್ಥಿರತೆ ಮತ್ತು ವಿನ್ಯಾಸವನ್ನು ನೀಡುತ್ತದೆ. ಇದಕ್ಕೆ ಕಾರಣ ಸ್ಥಳೀಯವಾಗಿ ಬೆಳೆದ ತಾಜಾ ತರಕಾರಿಗಳು ಮತ್ತು ಹಣ್ಣುಗಲು ಸಿಗದಿರುವುದು. ಆದಾಗ್ಯೂ, ನಗರೀಕರಣದಿಂದಾಗಿ, ಅನೇಕ ಅಧಿಕೃತ ರಾಜಸ್ಥಾನಿ ಪಾಕಪದ್ಧತಿಗಳು ಈರುಳ್ಳಿ ಮತ್ತು ಟೊಮೆಟೊಗಳಂತಹ ತರಕಾರಿಗಳನ್ನು ಸ್ವೀಕರಿಸಿದೆ ಮತ್ತು ಅನೇಕ ಪಾಕವಿಧಾನಗಳಲ್ಲಿ ಅದನ್ನು ಕಾಣಬಹುದಾಗಿದೆ. ಈ ಗಟ್ಟೆ ಕಿ ಸಬ್ಜಿ ಪಾಕವಿಧಾನದಲ್ಲಿ ನಾನು ಟೊಮೆಟೊ ಬಳಸಲಿಲ್ಲ ಮತ್ತು ಈ ಗ್ರೇವಿ ಬೇಸ್ಗೆ ಅಗತ್ಯವಿದ್ದರೆ ಬಳಸಬಹುದಾಗಿದೆ.

ಬೇಸನ್ ಕೆ ಗಟ್ಟೆ ಪಾಕವಿಧಾನಗಟ್ಟೆ ಕಿ ಸಬ್ಜಿ ಪಾಕವಿಧಾನಕ್ಕೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲಿಗೆ, ಬೇಸನ್ ಡಂಪ್ಲಿಂಗ್ಗಳನ್ನು ಮುಂಚಿತವಾಗಿ ಬೇಯಿಸಬಹುದು ಮತ್ತು ಮೇಲೋಗರ ತಯಾರಿಸುವಾಗ ಅದನ್ನು ಗ್ರೇವಿಗೆ ಸೇರಿಸಬಹುದು. ಆದ್ದರಿಂದ ಈ ಮೇಲೋಗರ ತಯಾರಿಸುವ ಸಮಯವನ್ನು ಕಡಿಮೆಗೊಳಿಸುತ್ತದೆ. ಎರಡನೆಯದಾಗಿ, ಕಡಲೆ ಹಿಟ್ಟು ಅಥವಾ ಬೇಸನ್ ಕೆಲವರಿಗೆ ಅಜೀರ್ಣಕ್ಕೆ ಕಾರಣವಾಗಬಹುದು. ಆದ್ದರಿಂದ ಗಟ್ಟೆ ತಯಾರಿಸುವಾಗ ಬೇಸನ್ ಹಿಟ್ಟಿಗೆ ಓಮ ಸೇರಿಸುವ ಮೂಲಕ ಇದನ್ನು ತಪ್ಪಿಸಬಹುದು. ಕೊನೆಯದಾಗಿ, ಬಿಸಿಯಾದ ಸಾಸ್ ಪ್ಯಾನ್ಗೆ ಸೇರಿಸುವ ಮೊದಲು ಮೊಸರನ್ನು ವಿಸ್ಕ್ ಮಾಡಲು ಮರೆಯದಿರಿ. ಇಲದಿದ್ದರೆ ಮೊಸರು ನೀರು ಬೇರೆಯಾಗುವ ಸಾಧ್ಯತೆಗಳಿರುತ್ತವೆ.

ಅಂತಿಮವಾಗಿ, ಗಟ್ಟೆ ಕಿ ಸಬ್ಜಿ ಪಾಕವಿಧಾನದ ಈ ಪೋಸ್ಟ್ನೊಂದಿಗೆ ನನ್ನ ಇತರ ಭಾರತೀಯ ಕರಿ ಮೇಲೋಗರ ಸಬ್ಜಿ ಪಾಕವಿಧಾನಗಳ ಸಂಗ್ರಹವನ್ನು ಭೇಟಿ ಮಾಡಿ. ಇದು ದಹಿ ಪಾಪಡ್, ದಹಿ ಬೈಂಗನ್, ದಹಿ ಆಲೂ, ದಮ್ ಆಲೂ, ರಾಜಸ್ಥಾನಿ ಕಡಿ, ಸೇವ್ ಟಮಾಟರ್ ಕಿ ಸಬ್ಜಿ ಮತ್ತು ಧಾಬಾ ಶೈಲಿ ದಾಲ್ ಗಳಂತಹ ಪಾಕವಿಧಾನಗಳನ್ನು ಒಳಗೊಂಡಿದೆ. ಇದಲ್ಲದೆ, ನನ್ನ ಇತರ ಸಂಬಂಧಿತ ಪಾಕವಿಧಾನಗಳ ಸಂಗ್ರಹಣೆಯನ್ನು ಭೇಟಿ ಮಾಡಿ,

ಗಟ್ಟೆ ಕಿ ಸಬ್ಜಿ ವೀಡಿಯೊ ಪಾಕವಿಧಾನ:

Must Read:

ಗಟ್ಟೆ ಕಿ ಸಬ್ಜಿ ಪಾಕವಿಧಾನ ಕಾರ್ಡ್:

gatte ki sabzi recipe

ಗಟ್ಟೆ ಕಿ ಸಬ್ಜಿ ರೆಸಿಪಿ | gatte ki sabji in kannada | ಬೇಸನ್ ಕೆ ಗಟ್ಟೆ

5 from 14 votes
ತಯಾರಿ ಸಮಯ: 10 minutes
ಅಡುಗೆ ಸಮಯ: 40 minutes
ಒಟ್ಟು ಸಮಯ : 50 minutes
ಸೇವೆಗಳು: 4 ಸೇವೆಗಳು
AUTHOR: HEBBARS KITCHEN
ಕೋರ್ಸ್: ಕರಿ
ಪಾಕಪದ್ಧತಿ: ರಾಜಸ್ಥಾನ
ಕೀವರ್ಡ್: ಗಟ್ಟೆ ಕಿ ಸಬ್ಜಿ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಗಟ್ಟೆ ಕಿ ಸಬ್ಜಿ ಪಾಕವಿಧಾನ | ಬೇಸನ್ ಕೆ ಗಟ್ಟೆ

ಪದಾರ್ಥಗಳು

ಗಟ್ಟೆ / ಕಡಲೆ ಹಿಟ್ಟು ಡಂಪ್ಲಿಂಗ್ಸ್ ಗಾಗಿ:

  • 1 ಕಪ್ ಬೇಸನ್ / ಕಡಲೆ ಹಿಟ್ಟು
  • ½ ಟೀಸ್ಪೂನ್ ಕೊತ್ತಂಬರಿ ಬೀಜಗಳು (ಪುಡಿಮಾಡಿದ)
  • ¼ ಟೀಸ್ಪೂನ್ ಓಮ / ಕ್ಯಾರೊಮ್ ಸೀಡ್ಸ್
  • ¼ ಟೀಸ್ಪೂನ್ ಅರಿಶಿನ
  • ¼ ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
  • ಪಿಂಚ್ ಹಿಂಗ್
  • ¼ ಟೀಸ್ಪೂನ್ ಉಪ್ಪು
  • 2 ಟೇಬಲ್ಸ್ಪೂನ್ ತುಪ್ಪ
  • 2 ಟೇಬಲ್ಸ್ಪೂನ್ ಮೊಸರು / ಯೋಗರ್ಟ್
  • 2 ಟೇಬಲ್ಸ್ಪೂನ್ ನೀರು

ಸಬ್ಜಿಗಾಗಿ:

  • 2 ಟೇಬಲ್ಸ್ಪೂನ್ ಎಣ್ಣೆ
  • 1 ಟೀಸ್ಪೂನ್ ಜೀರಿಗೆ / ಜೀರಾ
  • 1 ಟೀಸ್ಪೂನ್ ಕಸೂರಿ ಮೇಥಿ
  • 1 ಬೇ ಲೀಫ್
  • ½ ಟೀಸ್ಪೂನ್ ಫೆನ್ನೆಲ್
  • ಪಿಂಚ್ ಹಿಂಗ್
  • 1 ಈರುಳ್ಳಿ (ಸಣ್ಣಗೆ ಕತ್ತರಿಸಿದ)
  • 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ¼ ಟೀಸ್ಪೂನ್ ಅರಿಶಿನ
  • 1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
  • ½ ಟೀಸ್ಪೂನ್ ಕೊತ್ತಂಬರಿ ಪೌಡರ್
  • ½ ಟೀಸ್ಪೂನ್ ಜೀರಿಗೆ ಪುಡಿ / ಜೀರಾ ಪೌಡರ್
  • 1 ಕಪ್ ಮೊಸರು / ಯೋಗರ್ಟ್ (ವಿಸ್ಕ್ ಮಾಡಿದ)
  • ½ ಟೀಸ್ಪೂನ್ ಉಪ್ಪು
  • ¼ ಟೀಸ್ಪೂನ್ ಗರಂ ಮಸಾಲಾ
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)

ಸೂಚನೆಗಳು

ಗಟ್ಟೆ / ಕಡಲೆ ಹಿಟ್ಟು ಡಂಪ್ಲಿಂಗ್ ತಯಾರಿಸುವುದು ಹೇಗೆ:

  • ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 1 ಕಪ್ ಬೇಸನ್ ತೆಗೆದುಕೊಳ್ಳಿ.
  • ½ ಟೀಸ್ಪೂನ್ ಕೊತ್ತಂಬರಿ ಬೀಜಗಳು, ¼ ಟೀಸ್ಪೂನ್ ಓಮ, ¼ ಟೀಸ್ಪೂನ್ ಅರಿಶಿನ, ¼ ಟೀಸ್ಪೂನ್ ಕೆಂಪು ಮೆಣಸಿನ ಪುಡಿ, ಪಿಂಚ್ ಹಿಂಗ್, ½ ಟೀಸ್ಪೂನ್ ಉಪ್ಪು, 2 ಟೇಬಲ್ಸ್ಪೂನ್ ತುಪ್ಪ ಮತ್ತು 2 ಟೇಬಲ್ಸ್ಪೂನ್ ಮೊಸರು ಸೇರಿಸಿ.
  • ಹಿಟ್ಟು ತೇವಾಂಶಕ್ಕೆ ತಿರುಗಿಸುತ್ತದೆ ಮತ್ತು ಎಲ್ಲಾ ಮಸಾಲೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
  • ಇದಲ್ಲದೆ, 2 ಟೇಬಲ್ಸ್ಪೂನ್ ನೀರು ಅಥವಾ ಅಗತ್ಯವಿರುವಂತೆ ಸೇರಿಸಿ 5 ನಿಮಿಷಗಳ ಕಾಲ ಹಿಟ್ಟನ್ನು ಬೆರೆಸಿಕೊಳ್ಳಿ.
  • ಮೃದುವಾದ ಮತ್ತು ನಯವಾದ ಹಿಟ್ಟನ್ನು ಬೆರೆಸಿ.
  • ಈಗ ಚೆಂಡು ಗಾತ್ರದ ಹಿಟ್ಟನ್ನು ತೆಗೆದು ಸಿಲಿಂಡರಾಕಾರದ ಲಾಗ್ಗಳನ್ನು ತಯಾರಿಸಿ.
  • ದೊಡ್ಡ ಪಾತ್ರದಲ್ಲಿ 4 ಕಪ್ ನೀರು ತೆಗೆದುಕೊಂಡು ಕುದಿಸಿ.
  • ಒಮ್ಮೆ ನೀರು ಕುದಿಯಲು ಬಂದಾಗ, ತಯಾರಾದ ಬೇಸನ್ ಹಿಟ್ಟನ್ನು ಬಿಡಿ.
  • 10 ನಿಮಿಷಗಳ ಕಾಲ ಕುದಿಸಿ.
  • ಬೇಸನ್ ಹಿಟ್ಟನ್ನು ಬೆಂದಾಗ, ಅದು ತೇಲುತ್ತದೆ.
  • ಗಟ್ಟೆ (ಬೇಯಿಸಿದ ಬೇಸನ್ ಹಿಟ್ಟು) ಅನ್ನು ಪ್ಲೇಟ್ನ ಇಡಿ.
  • ಈಗ ಗಟ್ಟೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ.

ಗಟ್ಟೆ ಕಿ ಸಬ್ಜಿ ಪಾಕವಿಧಾನ:

  • ಮೊದಲಿಗೆ, ಒಂದು ದೊಡ್ಡ ಕಡೈ ನಲ್ಲಿ 2 ಟೇಬಲ್ಸ್ಪೂನ್ ಎಣ್ಣೆ ಬಿಸಿ ಮಾಡಿ ಮತ್ತು 1 ಟೀಸ್ಪೂನ್ ಜೀರಿಗೆ, 1 ಟೀಸ್ಪೂನ್ ಕಸೂರಿ ಮೇಥಿ, 1 ಬೇ ಎಲೆ, ½ ಟೀಸ್ಪೂನ್ ಫೆನ್ನೆಲ್ ಮತ್ತು ಪಿಂಚ್ ಹಿಂಗ್ ಸೇರಿಸಿ.
  • ಇದಲ್ಲದೆ, 1 ಈರುಳ್ಳಿ ಸೇರಿಸಿ ಅದು ಗೋಲ್ಡನ್ ಬ್ರೌನ್ ಆಗುವ ತನಕ ಸಾಟ್ ಮಾಡಿ.
  • ಅಲ್ಲದೆ, 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಚೆನ್ನಾಗಿ ಹುರಿಯಿರಿ.
  • ಜ್ವಾಲೆಯ ಕಡಿಮೆ ಇಟ್ಟು, ¼ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಕೊತ್ತಂಬರಿ ಪುಡಿ ಮತ್ತು ¼ ಟೀಸ್ಪೂನ್ ಜೀರಿಗೆ ಪುಡಿ ಸೇರಿಸಿ.
  • ಮಸಾಲೆಗಳು ಪರಿಮಳ ಬರುವವರೆಗೂ ಕಡಿಮೆ ಜ್ವಾಲೆಯ ಮೇಲೆ ಸಾಟ್ ಮಾಡಿ.
  • ಇದಲ್ಲದೆ, 1 ಕಪ್ ನೀರನ್ನು ಸೇರಿಸಿ. ಬೇಯಿಸಿದ ಡಂಪ್ಲಿಂಗ್ ನ ಉಳಿದ ನೀರನ್ನು ಬಳಸಿ.
  • ಅಲ್ಲದೆ, 1 ಕಪ್ ಮೊಸರು ಸೇರಿಸಿ ಮತ್ತು ಮಿಶ್ರಣವು ಕುದಿಯುವವರೆಗೂ ನಿರಂತರವಾಗಿ ಬೆರೆಸಿ.
  • ಈಗ ಗಟ್ಟೆ (ಕಡಲೆ ಹಿಟ್ಟು ಡಂಪ್ಲಿಂಗ್ಸ್) ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ.
  • ಮುಚ್ಚಿ 10 ನಿಮಿಷಗಳ ಕಾಲ, ಅಥವಾ ಗಟ್ಟೆ ರುಚಿಯನ್ನು ಹೀರಿಕೊಳ್ಳುವವರೆಗೆ ಕುದಿಸಿ. ಅಗತ್ಯವಿರುವಂತೆ ಸ್ಥಿರತೆಯನ್ನು ಹೊಂದಿಸಿ.
  • ಹೆಚ್ಚುವರಿಯಾಗಿ, ¼ ಟೀಸ್ಪೂನ್ ಗರಂ ಮಸಾಲಾ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
  • ಅಂತಿಮವಾಗಿ, ರೋಟಿ, ಫುಲ್ಕಾ ಅಥವಾ ನಾನ್ ನೊಂದಿಗೆ ಗಟ್ಟೆ ಕಿ ಸಬ್ಜಿಯನ್ನು ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತ ಫೋಟೋದೊಂದಿಗೆ ಗಟ್ಟೆ ಕಿ ಸಬ್ಜಿ ಹೇಗೆ ಮಾಡುವುದು:

ಗಟ್ಟೆ / ಕಡಲೆ ಹಿಟ್ಟು ಡಂಪ್ಲಿಂಗ್ ತಯಾರಿಸುವುದು ಹೇಗೆ:

  1. ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 1 ಕಪ್ ಬೇಸನ್ ತೆಗೆದುಕೊಳ್ಳಿ.
  2. ½ ಟೀಸ್ಪೂನ್ ಕೊತ್ತಂಬರಿ ಬೀಜಗಳು, ¼ ಟೀಸ್ಪೂನ್ ಓಮ, ¼ ಟೀಸ್ಪೂನ್ ಅರಿಶಿನ, ¼ ಟೀಸ್ಪೂನ್ ಕೆಂಪು ಮೆಣಸಿನ ಪುಡಿ , ಪಿಂಚ್ ಹಿಂಗ್, ½ ಟೀಸ್ಪೂನ್ ಉಪ್ಪು, 2 ಟೇಬಲ್ಸ್ಪೂನ್ ತುಪ್ಪ ಮತ್ತು 2 ಟೇಬಲ್ಸ್ಪೂನ್ ಮೊಸರು ಸೇರಿಸಿ.
  3. ಹಿಟ್ಟು ತೇವಾಂಶಕ್ಕೆ ತಿರುಗಿಸುತ್ತದೆ ಮತ್ತು ಎಲ್ಲಾ ಮಸಾಲೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
  4. ಇದಲ್ಲದೆ, 2 ಟೇಬಲ್ಸ್ಪೂನ್ ನೀರು ಅಥವಾ ಅಗತ್ಯವಿರುವಂತೆ ಸೇರಿಸಿ 5 ನಿಮಿಷಗಳ ಕಾಲ ಹಿಟ್ಟನ್ನು ಬೆರೆಸಿಕೊಳ್ಳಿ.
  5. ಮೃದುವಾದ ಮತ್ತು ನಯವಾದ ಹಿಟ್ಟನ್ನು ಬೆರೆಸಿ.
  6. ಈಗ ಚೆಂಡು ಗಾತ್ರದ ಹಿಟ್ಟನ್ನು ತೆಗೆದು ಸಿಲಿಂಡರಾಕಾರದ ಲಾಗ್ಗಳನ್ನು ತಯಾರಿಸಿ.
  7. ದೊಡ್ಡ ಪಾತ್ರದಲ್ಲಿ 4 ಕಪ್ ನೀರು ತೆಗೆದುಕೊಂಡು ಕುದಿಸಿ.
  8. ಒಮ್ಮೆ ನೀರು ಕುದಿಯಲು ಬಂದಾಗ, ತಯಾರಾದ ಬೇಸನ್ ಹಿಟ್ಟನ್ನು ಬಿಡಿ.
  9. 10 ನಿಮಿಷಗಳ ಕಾಲ ಕುದಿಸಿ.
  10. ಬೇಸನ್ ಹಿಟ್ಟನ್ನು ಬೆಂದಾಗ, ಅದು ತೇಲುತ್ತದೆ.
  11. ಗಟ್ಟೆ (ಬೇಯಿಸಿದ ಬೇಸನ್ ಹಿಟ್ಟು) ಅನ್ನು ಪ್ಲೇಟ್ನ ಇಡಿ.
  12. ಈಗ ಗಟ್ಟೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ.
    ಗಟ್ಟೆ ಕಿ ಸಬ್ಜಿ ಪಾಕವಿಧಾನ

ಗಟ್ಟೆ ಕಿ ಸಬ್ಜಿ ಪಾಕವಿಧಾನ:

  1. ಮೊದಲಿಗೆ, ಒಂದು ದೊಡ್ಡ ಕಡೈ ನಲ್ಲಿ 2 ಟೇಬಲ್ಸ್ಪೂನ್ ಎಣ್ಣೆ ಬಿಸಿ ಮಾಡಿ ಮತ್ತು 1 ಟೀಸ್ಪೂನ್ ಜೀರಿಗೆ, 1 ಟೀಸ್ಪೂನ್ ಕಸೂರಿ ಮೇಥಿ, 1 ಬೇ ಎಲೆ, ½ ಟೀಸ್ಪೂನ್ ಫೆನ್ನೆಲ್ ಮತ್ತು ಪಿಂಚ್ ಹಿಂಗ್ ಸೇರಿಸಿ.
  2. ಇದಲ್ಲದೆ, 1 ಈರುಳ್ಳಿ ಸೇರಿಸಿ ಅದು ಗೋಲ್ಡನ್ ಬ್ರೌನ್ ಆಗುವ ತನಕ ಸಾಟ್ ಮಾಡಿ.
  3. ಅಲ್ಲದೆ, 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಚೆನ್ನಾಗಿ ಹುರಿಯಿರಿ.
  4. ಜ್ವಾಲೆಯ ಕಡಿಮೆ ಇಟ್ಟು, ¼ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಕೊತ್ತಂಬರಿ ಪುಡಿ ಮತ್ತು ¼ ಟೀಸ್ಪೂನ್ ಜೀರಿಗೆ ಪುಡಿ ಸೇರಿಸಿ.
  5. ಮಸಾಲೆಗಳು ಪರಿಮಳ ಬರುವವರೆಗೂ ಕಡಿಮೆ ಜ್ವಾಲೆಯ ಮೇಲೆ ಸಾಟ್ ಮಾಡಿ.
  6. ಇದಲ್ಲದೆ, 1 ಕಪ್ ನೀರನ್ನು ಸೇರಿಸಿ. ಬೇಯಿಸಿದ ಡಂಪ್ಲಿಂಗ್ ನ ಉಳಿದ ನೀರನ್ನು ಬಳಸಿ.
  7. ಅಲ್ಲದೆ, 1 ಕಪ್ ಮೊಸರು ಸೇರಿಸಿ ಮತ್ತು ಮಿಶ್ರಣವು ಕುದಿಯುವವರೆಗೂ ನಿರಂತರವಾಗಿ ಬೆರೆಸಿ.
  8. ಈಗ ಗಟ್ಟೆ (ಕಡಲೆ ಹಿಟ್ಟು ಡಂಪ್ಲಿಂಗ್ಸ್) ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ.
  9. ಮುಚ್ಚಿ 10 ನಿಮಿಷಗಳ ಕಾಲ, ಅಥವಾ ಗಟ್ಟೆ ರುಚಿಯನ್ನು ಹೀರಿಕೊಳ್ಳುವವರೆಗೆ ಕುದಿಸಿ. ಅಗತ್ಯವಿರುವಂತೆ ಸ್ಥಿರತೆಯನ್ನು ಹೊಂದಿಸಿ.
  10. ಹೆಚ್ಚುವರಿಯಾಗಿ, ¼ ಟೀಸ್ಪೂನ್ ಗರಂ ಮಸಾಲಾ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಬೆರೆಸಿ.
  11. ಅಂತಿಮವಾಗಿ, ರೋಟಿ, ಫುಲ್ಕಾ ಅಥವಾ ನಾನ್ ನೊಂದಿಗೆ ಗಟ್ಟೆ ಕಿ ಸಬ್ಜಿಯನ್ನು ಆನಂದಿಸಿ.

ಟಿಪ್ಪಣಿಗಳು:

  • ಮೊದಲಿಗೆ, ಬೇಸನ್ ಹಿಟ್ಟನ್ನು ಚೆನ್ನಾಗಿ ಬೆರೆಸಿ, ಇಲ್ಲದಿದ್ದರೆ ಗಟ್ಟೆಯು ಗಟ್ಟಿಯಾಗುತ್ತದೆ.
  • ಒಮ್ಮೆ ತಣ್ಣಗಾದ ಮೇಲೆ ಈ ಗ್ರೇವಿ ದಪ್ಪವಾಗುವುದರಿಂದ, ಇದರ ಸ್ಥಿರತೆಯನ್ನು ಸರಿಹೊಂದಿಸಲು ನೀರನ್ನು ಸೇರಿಸಿ.
  • ಹೆಚ್ಚುವರಿಯಾಗಿ, ಮೊಸರು ನೀರು ಬೇರೆಯಾಗುವುದನ್ನು ತಡೆಗಟ್ಟಲು, ಅದು ಕುದಿಯುವವರೆಗೂ ನಿರಂತರವಾಗಿ ಬೆರೆಸಿ.
  • ಅಂತಿಮವಾಗಿ, ಗಟ್ಟೆ ಕಿ ಸಬ್ಜಿ ಮಸಾಲೆಯುಕ್ತವಾಗಿ ತಯಾರಿಸಿದಾಗ ಉತ್ತಮ ರುಚಿ ನೀಡುತ್ತದೆ.
5 from 14 votes (14 ratings without comment)