ಬದನೆಕಾಯಿ ಮಸಾಲ | baingan masala in kannada | ಬೈಂಗನ್ ಮಸಾಲಾ

0

ಬದನೆಕಾಯಿ ಮಸಾಲ ಪಾಕವಿಧಾನ | ಬೈಂಗನ್ ಮಸಾಲಾ | ಬಿಳಿಬದನೆ ಮಸಾಲಾ ಕರಿಯ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಒಂದು ಸ್ಟಫ್ಡ್ ಬದನೆ ಪಾಕವಿಧಾನವಾಗಿದ್ದು, ಕಡಲೆಕಾಯಿ, ತೆಂಗಿನಕಾಯಿ ಮಸಾಲಾ ತುಂಬಿ ನಂತರ ಟೊಮ್ಯಾಟೊ ಮತ್ತು ಈರುಳ್ಳಿ ಸಾಸ್ನಲ್ಲಿ ಬೇಯಿಸಲಾಗುತ್ತದೆ. ಇದು ಅತ್ಯಂತ ಜನಪ್ರಿಯ ಬಿಳಿಬದನೆ ಪಾಕವಿಧಾನವಾಗಿದ್ದು, ರೋಟಿ, ನಾನ್, ಚಪಾತಿ ಮತ್ತು ಜೀರಾ ರೈಸ್ ಜೊತೆ ಬಡಿಸಲಾಗುತ್ತದೆ.
ಬೈಂಗನ್ ಮಸಾಲಾ ಪಾಕವಿಧಾನ

ಬದನೆಕಾಯಿ ಮಸಾಲಾ ಪಾಕವಿಧಾನ | ಬೈಂಗನ್ ಮಸಾಲಾ ರೆಸಿಪಿ | ಬಿಳಿಬದನೆ ಮಸಾಲಾ ಕರಿಯ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಬದನೆಕಾಯಿ ಮಸಾಲ ಒಂದು ಜನಪ್ರಿಯ ಉತ್ತರ ಭಾರತೀಯ ಕರಿ ಪಾಕವಿಧಾನವಾಗಿದ್ದು, ಇದು ಸಾಮಾನ್ಯವಾಗಿ ಕಡಲೆಕಾಯಿ ಮತ್ತು ತೆಂಗಿನಕಾಯಿ ಮಸಾಲಾದಿಂದ ತುಂಬಿರುತ್ತದೆ. ನಂತರ ಈ ಸ್ಟಫ್ಡ್ ಬಿಳಿಬದನೆಯನ್ನು ದಪ್ಪವಾದ ಕರಿ ಸಾಸ್ನಲ್ಲಿ ಬೇಯಿಸಲಾಗುತ್ತದೆ, ಇದು ಬದನೆ ಸ್ಟಫಿಂಗ್ ನೊಂದಿಗೆ ಸಂಯೋಜಿಸಿ ಫ್ಲೇವರ್ ಉಳ್ಳ ಕರಿಯನ್ನು ನೀಡುತ್ತದೆ. ಈ ರೆಸ್ಟೋರೆಂಟ್ ಶೈಲಿ ಬದನೆ ಮೇಲೋಗರವು ಊಟಕ್ಕೆ ಸೈಡ್ಸ್ ನಂತೆ ಮತ್ತು ಪಾಟ್ಲಕ್ ಪಾರ್ಟಿಗೆ ಸಹ ಸೂಕ್ತವಾಗಿದೆ.

ನಾನು ಈಗಾಗಲೇ ಸರಳ ಸ್ಟಫ್ಡ್ ಬದನೆ ಪಾಕವಿಧಾನವನ್ನು ಹಂಚಿಕೊಂಡಿದ್ದೇನೆ, ಇದನ್ನು ಉತ್ತರ ಕರ್ನಾಟಕದ ಎಣ್ಣೆಗಾಯಿ ಪಾಕವಿಧಾನ ಎಂದು ಕರೆಯಲಾಗುತ್ತದೆ. ಆದರೆ ಈ ಬದನೆಕಾಯಿ ಮಸಾಲ ಎಣ್ಣೆಗಾಯಿಗೆ ಒಂದು ವಿಸ್ತರಣೆಯಾಗಿದೆ. ಇದು ಮೂಲಭೂತವಾಗಿ ಅದೇ ಸ್ಟಫಿಂಗ್ ಅನ್ನು ಹೊಂದಿದ್ದು ಟೊಮೆಟೊ ಈರುಳ್ಳಿ ಆಧಾರಿತ ಮೇಲೋಗರದಲ್ಲಿ ಸಿಮ್ಮರ್ ನಲ್ಲಿ ಇಡಲಾಗುತ್ತದೆ. ನಾನು ಗೋಡಂಬಿ ಪೇಸ್ಟ್ ಅಥವಾ ಮೊಸರು ಅಥವಾ ಎರಡನ್ನೂ ಮಿಶ್ರಣ ಮಾಡುವುದರ ಮೂಲಕ ಸಾಸ್ ಅನ್ನು ತಯಾರಿಸುತ್ತೇನೆ, ಆದರೆ ಇಲ್ಲಿ ನಾನು ಅವೆರಡನ್ನೂ ಬಿಟ್ಟುಬಿಟ್ಟಿದ್ದೇನೆ. ನಾನು ವೈಯಕ್ತಿಕವಾಗಿ ಯಾವುದೇ ಕ್ರೀಮಿ ಸಾಸ್ ಇಲ್ಲದೆ ಬಿಳಿಬದನೆ ಮಸಾಲಾ ಪಾಕವಿಧಾನವನ್ನು ಹಾಗೆಯೇ ಇಷ್ಟಪಡುತ್ತೇನೆ. ಆದರೆ ನೀವು ಬಯಸಿದಲ್ಲಿ ಅದನ್ನು ಸೇರಿಸಬಹುದು.

ಬದನೆ ಮಸಾಲಾ ರೆಸಿಪಿ ಇದಲ್ಲದೆ, ಪರಿಪೂರ್ಣ ಮತ್ತು ಟೇಸ್ಟಿ ಬದನೆಕಾಯಿ ಮಸಾಲ ರೆಸಿಪಿಗೆ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲಿಗೆ, ಈ ಸೂತ್ರಕ್ಕಾಗಿ ಸಣ್ಣ ಮತ್ತು ಕೋಮಲ ಬಿಳಿಬದನೆಯನ್ನು ಬಳಸಲು ನಾನು ಶಿಫಾರಸು ಮಾಡುತ್ತೇನೆ. ಮಸಾಲಾವನ್ನು ಚೆನ್ನಾಗಿ ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುವ ಹಾಗೆ ಬದನೆಯನ್ನು ತುಂಡು ಮಾಡದೆ ಸರಿಯಾಗಿ ಕತ್ತರಿಸಲು ಖಚಿತಪಡಿಸಿಕೊಳ್ಳಿ. ನಿಮಗೆ ಮಸಾಲೆಯುಕ್ತ ಕರಿ ಇಷ್ಟವಿಲ್ಲದಿದ್ದರೆ, ಮೆಣಸಿನ ಪುಡಿಯ ಪ್ರಮಾಣವನ್ನು ಕಡಿಮೆ ಮಾಡಿ. ಕೊನೆಯದಾಗಿ, ಕಡಿಮೆ ಜ್ವಾಲೆಯ ಮೇಲೆ ಬದನೆಯನ್ನು ಬೇಯಿಸಿ, ಇಲ್ಲದಿದ್ದರೆ ಬಿಳಿಬದನೆ ಸುಡಬಹುದು ಮತ್ತು ಒಳಗಿನಿಂದ ಬೇಯದೇ ಹಾಗೆ ಉಳಿಯುವ ಸಾಧ್ಯತೆಗಳಿರಬಹದು.

ಅಂತಿಮವಾಗಿ, ನಾನು ಈ ಪೋಸ್ಟ್ನೊಂದಿಗೆ ನನ್ನ ಇತರ ಭಾರತೀಯ ಕರಿ ಮೇಲೋಗರ ಸಬ್ಜಿ ಪಾಕವಿಧಾನಗಳ ಸಂಗ್ರಹಗಳನ್ನು ಪರಿಚಯಿಸಲು ಬಯಸುತ್ತೇನೆ. ಇದು ಮುಖ್ಯವಾಗಿ, ಬಿನ್ಜಾಲ್ ಪಾಕವಿಧಾನ, ಭರ್ವಾ ಕರೇಲಾ, ಮಿರ್ಚಿ ಕಾ ಸಾಲನ್, ಭರ್ವಾ ಭಿಂಡಿ, ಬೈಂಗನ್ ಭಾರ್ತಾ, ವಾಂಗಿ ಭಾತ್ ಪಾಕವಿಧಾನ, ಮತ್ತು ಬಿಳಿಬದನೆ ಸಾಂಬಾರ್ ಅನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ನನ್ನ ಇತರ ಸಂಗ್ರಹಣೆ ಪಾಕವಿಧಾನಗಳನ್ನು ಭೇಟಿ ಮಾಡಿ,

ಬದನೆಕಾಯಿ ಮಸಾಲ ವೀಡಿಯೊ ಪಾಕವಿಧಾನ:

Must Read:

ಬದನೆಕಾಯಿ ಮಸಾಲ ಪಾಕವಿಧಾನ ಕಾರ್ಡ್:

brinjal masala recipe

ಬದನೆಕಾಯಿ ಮಸಾಲ | baingan masala in kannada | ಬೈಂಗನ್ ಮಸಾಲಾ

No ratings yet
ತಯಾರಿ ಸಮಯ: 15 minutes
ಅಡುಗೆ ಸಮಯ: 30 minutes
ಒಟ್ಟು ಸಮಯ : 45 minutes
ಸೇವೆಗಳು: 6 ಸೇವೆಗಳು
AUTHOR: HEBBARS KITCHEN
ಕೋರ್ಸ್: ಕರಿ
ಪಾಕಪದ್ಧತಿ: ಭಾರತೀಯ
ಕೀವರ್ಡ್: ಬದನೆಕಾಯಿ ಮಸಾಲ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಬದನೆಕಾಯಿ ಮಸಾಲ ಪಾಕವಿಧಾನ | ಬೈಂಗನ್ ಮಸಾಲಾ | ಬಿಳಿಬದನೆ ಮಸಾಲಾ ಕರಿ

ಪದಾರ್ಥಗಳು

  • 6 ಸಣ್ಣ ಗಾತ್ರದ ನೇರಳೆ ಬದನೆ / ಬೈಂಗನ್ / ಬಿಳಿಬದನೆ
  • 3 ಟೇಬಲ್ಸ್ಪೂನ್ ಎಣ್ಣೆ
  • ½ ಟೀಸ್ಪೂನ್ ಸಾಸಿವೆ
  • ¼ ಟೀಸ್ಪೂನ್ ಮೇಥಿ / ಮೆಂತ್ಯೆ ಬೀಜಗಳು
  • ಕೆಲವು ಕರಿ ಬೇವಿನ ಎಲೆಗಳು
  • 1 ಈರುಳ್ಳಿ (ಸಣ್ಣಗೆ ಕತ್ತರಿಸಿದ)
  • 1 ಕಪ್ ಹುಣಿಸೇಹಣ್ಣಿನ ಸಾರ
  • ½ ಟೀಸ್ಪೂನ್ ಬೆಲ್ಲ (ಐಚ್ಛಿಕ)
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)

ಈರುಳ್ಳಿ-ಟೊಮೆಟೊ ಪೇಸ್ಟ್ಗಾಗಿ:

  • 2 ಟೀಸ್ಪೂನ್ ಎಣ್ಣೆ
  • 1 ಈರುಳ್ಳಿ (ತೆಳುವಾಗಿ ಸೀಳಿದ)
  • 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ½ ಟೀಸ್ಪೂನ್ ಅರಿಶಿನ ಪೌಡರ್
  • 1 ಟೊಮೆಟೊ (ಸಣ್ಣಗೆ ಕತ್ತರಿಸಿದ)
  • 1 ಟೀಸ್ಪೂನ್ ಕೊತ್ತಂಬರಿ ಪೌಡರ್
  • ¼ ಟೀಸ್ಪೂನ್ ಜೀರಿಗೆ ಪುಡಿ
  • 1 ಟೀಸ್ಪೂನ್ ಕಾಶ್ಮೀರಿ ಮೆಣಸಿನ ಪುಡಿ
  • ½ ಟೀಸ್ಪೂನ್ ಗರಂ ಮಸಾಲಾ ಪೌಡರ್
  • ರುಚಿಗೆ ತಕ್ಕಷ್ಟು ಉಪ್ಪು

ಸ್ಟಫಿಂಗ್ ಗಾಗಿ:

  • 2 ಟೇಬಲ್ಸ್ಪೂನ್ ಎಳ್ಳು / ತಿಲ್
  • ½ ಕಪ್ ತೆಂಗಿನಕಾಯಿ (ತಾಜಾ / ಡೆಸಿಕೇಟೆಡ್ / ಒಣ)
  • ¼ ಕಪ್ ಕಡಲೇಕಾಯಿ (ಹುರಿದ ಮತ್ತು ಸಿಪ್ಪೆ ತೆಗೆದ
  • 1 ಟೀಸ್ಪೂನ್ ಕಾಶ್ಮೀರಿ ಮೆಣಸಿನ ಪುಡಿ
  • ರುಚಿಗೆ ತಕ್ಕಷ್ಟು ಉಪ್ಪು

ಸೂಚನೆಗಳು

ಬದನೆಕಾಯಿಯನ್ನು ಹೇಗೆ ಕತ್ತರಿಸುವುದು:

  • ಮೊದಲಿಗೆ, ಸಣ್ಣ ಮತ್ತು ನವಿರಾದ ಬದನೆಕಾಯಿಯನ್ನು ತೆಗೆದುಕೊಂಡು ಕೆಳಭಾಗದಲ್ಲಿ x ಆಗಿ ಕತ್ತರಿಸಿ.
  • ಅದರಲ್ಲಿ ಯಾವುದೇ ಹುಳುಗಳು ಇಲ್ಲ ಎಂದು ಖಚಿತಪಡಿಸಿಕೊಳ್ಳಿ.
  • ಅವುಗಳನ್ನು ಕಂದು ಬಣ್ಣ ಆಗುವುದನ್ನು ತಡೆಗಟ್ಟಲು ಮತ್ತು ಕಹಿಯನ್ನು ಕಡಿಮೆ ಮಾಡಲು ನೀರಿನಲ್ಲಿ ನೆನೆಸಿಡಿ.

ಈರುಳ್ಳಿ ಟೊಮೆಟೊ ಪೇಸ್ಟ್ ಪಾಕವಿಧಾನ:

  • ಮೊದಲಿಗೆ, ಕಡೈನಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಈರುಳ್ಳಿಯನ್ನು ಸೇರಿಸಿ. ಅದರ ಬಣ್ಣ ಬದಲಾಗುವ ತನಕ ಸಾಟ್ ಮಾಡಿ.
  • ಈಗ 1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಸಾಟ್ ಮಾಡುವುದನ್ನು ಮುಂದುವರಿಸಿರಿ.
  • ಟೊಮೆಟೊಗಳನ್ನು ಸೇರಿಸಿ ಮತ್ತು ಅವುಗಳು ಮೃದು ಮತ್ತು ಮೆತ್ತಗೆ ಆಗುವ ತನಕ ಸಾಟ್ ಮಾಡಿ.
  • ಇದಲ್ಲದೆ, ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಕೊತ್ತಂಬರಿ ಪುಡಿ, ¼ ಟೀಸ್ಪೂನ್ ಜೀರಾ ಪುಡಿ, 1 ಟೀಸ್ಪೂನ್ ಚಿಲ್ಲಿ ಪೌಡರ್, ½ ಟೀಸ್ಪೂನ್ ಗರಮ್ ಮಸಾಲಾ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
  • ಕಡಿಮೆ ಜ್ವಾಲೆಯ ಮೇಲೆ ಒಂದು ನಿಮಿಷಕ್ಕೆ ಸಾಟ್ ಮಾಡಿ.
  • ಒಮ್ಮೆ ಸಂಪೂರ್ಣವಾಗಿ ತಣ್ಣಗಾಗಿಸಿ ಬ್ಲೆಂಡರ್ಗೆ ವರ್ಗಾಯಿಸಿ.
  • ಮತ್ತು ಯಾವುದೇ ಹೆಚ್ಚುವರಿ ನೀರನ್ನು ಸೇರಿಸದೆ ಮೃದುವಾದ ಪೇಸ್ಟ್ಗೆ ರುಬ್ಬಿಕೊಳ್ಳಿ. ಪಕ್ಕಕ್ಕೆ ಇರಿಸಿ.

ಬದನೆಕಾಯಿ ಸ್ಟಫಿಂಗ್ ಪಾಕವಿಧಾನ:

  • ಮೊದಲಿಗೆ, 2 ಟೇಬಲ್ಸ್ಪೂನ್ ಎಳ್ಳು ಬೀಜಗಳನ್ನು ಸ್ವಲ್ಪ ಗೋಲ್ಡನ್ ಆಗುವ ತನಕ ಡ್ರೈ ಹುರಿಯಿರಿ.
  • ಈಗ ½ ಕಪ್ ತೆಂಗಿನಕಾಯಿ ಸೇರಿಸಿ ಮತ್ತು ಕಡಿಮೆ ಜ್ವಾಲೆಯ ಮೇಲೆ ಹುರಿಯಿರಿ.
  • ¼ ಕಪ್ ಹುರಿದ ಕಡಲೇಕಾಯಿ, 1 ಟೀಸ್ಪೂನ್ ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ.
  • ಒಂದು ನಿಮಿಷಕ್ಕೆ ಸಾಟ್ ಮಾಡಿ.
  • ಮತ್ತು ಯಾವುದೇ ನೀರನ್ನು ಸೇರಿಸದೆ ಒರಟಾದ ಪುಡಿಗೆ ರುಬ್ಬಿಕೊಳ್ಳಿ.

ಬದನೆಕಾಯಿ ಮಸಾಲ ಸಿದ್ಧತೆ ರೆಸಿಪಿ:

  • ಮೊದಲಿಗೆ, ಕತ್ತರಿಸಿದ ಬದನೆಕಾಯಿಯನ್ನು ತೆಗೆದುಕೊಳ್ಳಿ ಮತ್ತು ಸಾಧ್ಯವಾದಷ್ಟು ಸಿದ್ಧಪಡಿಸಿದ ಸ್ಟಫಿಂಗ್ ಅನ್ನು ಸ್ಟಫ್ ಮಾಡಿ.
  • ಮತ್ತು 3 ಟೇಬಲ್ಸ್ಪೂನ್ ಎಣ್ಣೆಯೊಂದಿಗೆ ಮಧ್ಯಮ ಜ್ವಾಲೆಯ ಮೇಲೆ ಫ್ರೈ ಮಾಡಿ.
  • ಮುಚ್ಚಿ 2-4 ನಿಮಿಷಗಳ ಕಾಲ ಸಿಮ್ಮರ್ ನಲ್ಲಿಡಿ.
  • ಈಗ ತಿರುಗಿಸಿ ಮತ್ತೆ 2 ನಿಮಿಷಗಳ ಕಾಲ ಮುಚ್ಚಿ ಸಿಮ್ಮರ್ ನಲ್ಲಿಡಿ.
  • ಅರ್ಧ ಬೇಯುವ ತನಕ ಬದನೆಯನ್ನು ಬೇಯಿಸಿ.
  • ನಂತರ, ತೆಗೆದು ಪಕ್ಕಕ್ಕೆ ಇರಿಸಿ.
  • ಈಗ ಅದೇ ಕಡೈನಲ್ಲಿ ಸಾಸಿವೆ ಬೀಜಗಳು, ಮೇಥಿ ಮತ್ತು ಕರಿ ಬೇವಿನ ಎಲೆಗಳನ್ನು ಸೇರಿಸಿ.
  • ಚಟಪಟವಾಗಲು ಬಿಡಿ.
  • ನಂತರ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಸಾಟ್ ಮಾಡಿ.
  • ತಯಾರಾದ ಈರುಳ್ಳಿ-ಟೊಮೆಟೊ ಪೇಸ್ಟ್ ಅನ್ನು ಸಹ ಸೇರಿಸಿ ಮತ್ತು ಸಾಟ್ ಮಾಡುವುದನ್ನು ಮುಂದುವರಿಸಿರಿ.
  • ಪೇಸ್ಟ್ ದಪ್ಪವಾಗಿ ಮತ್ತು ಎಣ್ಣೆಯು ಮಿಶ್ರಣದಿಂದ ಬೇರ್ಪಡಿಸುವ ತನಕ ಬೇಯಿಸಿ.
  • ಇದಲ್ಲದೆ, ಸ್ಟಫ್ಡ್ ಮತ್ತು ಹುರಿದ ಬದನೆಗಳನ್ನು ಇರಿಸಿ.
  • ಮತ್ತು ಹುಣಿಸೇಹಣ್ಣು ನೀರನ್ನು ಸುರಿಯಿರಿ. ಹುಣಿಸೇಹಣ್ಣು ನೀರನ್ನು ತಯಾರಿಸಲು, ಒಂದು ಸಣ್ಣ ಚೆಂಡಿನ ಗಾತ್ರದ ಹುಣಿಸೇಹಣ್ಣನ್ನು 1 ಕಪ್ ಬೆಚ್ಚಗಿನ ನೀರಿನಲ್ಲಿ 30 ನಿಮಿಷಗಳ ಕಾಲ ಇಟ್ಟು ಚೆನ್ನಾಗಿ ಹಿಸುಕಿ.
  • ಪರಿಮಳವನ್ನು ಹೆಚ್ಚಿಸಲು ಬೆಲ್ಲದ ತುಂಡು ಸೇರಿಸಿ.
  • ಬದನೆಯನ್ನು ಮುರಿಯದೆ ನಿಧಾನವಾಗಿ ಮಿಶ್ರಣ ಮಾಡಿ.
  • ಮುಚ್ಚಿ 5 ನಿಮಿಷಗಳ ಕಾಲ ಸಿಮ್ಮರ್ ನಲ್ಲಿಡಿ.
  • ಮಸಾಲಾ ಮತ್ತು ಬದನೆಯನ್ನು ಸುಡುವುದನ್ನು ತಪ್ಪಿಸಲು ಕೈ ಆಡಿಸುತ್ತಾ ಇರಿ.
  • ಬದನೆಕಾಯಿ ಸಂಪೂರ್ಣವಾಗಿ ಬೇಯುವ ತನಕ ಮುಚ್ಚಿ ಬೇಯಿಸಿ.
  • ಅಂತಿಮವಾಗಿ, ಬದನೆಕಾಯಿ ಮಸಾಲಾವನ್ನು, ಚಪಾತಿ ಅಥವಾ ರೋಟಿ ಜೊತೆ ಸೇವಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಬದನೆಕಾಯಿ ಮಸಾಲ ಹೇಗೆ ಮಾಡುವುದು:

ಬದನೆಕಾಯಿಯನ್ನು ಹೇಗೆ ಕತ್ತರಿಸುವುದು:

  1. ಮೊದಲಿಗೆ, ಸಣ್ಣ ಮತ್ತು ನವಿರಾದ ಬದನೆಕಾಯಿಯನ್ನು ತೆಗೆದುಕೊಂಡು ಕೆಳಭಾಗದಲ್ಲಿ x ಆಗಿ ಕತ್ತರಿಸಿ.
  2. ಅದರಲ್ಲಿ ಯಾವುದೇ ಹುಳುಗಳು ಇಲ್ಲ ಎಂದು ಖಚಿತಪಡಿಸಿಕೊಳ್ಳಿ.
  3. ಅವುಗಳನ್ನು ಕಂದು ಬಣ್ಣ ಆಗುವುದನ್ನು ತಡೆಗಟ್ಟಲು ಮತ್ತು ಕಹಿಯನ್ನು ಕಡಿಮೆ ಮಾಡಲು ನೀರಿನಲ್ಲಿ ನೆನೆಸಿಡಿ.
    ಬೈಂಗನ್ ಮಸಾಲಾ ಪಾಕವಿಧಾನ

ಈರುಳ್ಳಿ ಟೊಮೆಟೊ ಪೇಸ್ಟ್ ಪಾಕವಿಧಾನ:

  1. ಮೊದಲಿಗೆ, ಕಡೈನಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಈರುಳ್ಳಿಯನ್ನು ಸೇರಿಸಿ. ಅದರ ಬಣ್ಣ ಬದಲಾಗುವ ತನಕ ಸಾಟ್ ಮಾಡಿ.
  2. ಈಗ 1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಸಾಟ್ ಮಾಡುವುದನ್ನು ಮುಂದುವರಿಸಿರಿ.
  3. ಟೊಮೆಟೊಗಳನ್ನು ಸೇರಿಸಿ ಮತ್ತು ಅವುಗಳು ಮೃದು ಮತ್ತು ಮೆತ್ತಗೆ ಆಗುವ ತನಕ ಸಾಟ್ ಮಾಡಿ.
  4. ಇದಲ್ಲದೆ, ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಕೊತ್ತಂಬರಿ ಪುಡಿ, ¼ ಟೀಸ್ಪೂನ್ ಜೀರಾ ಪುಡಿ, 1 ಟೀಸ್ಪೂನ್ ಚಿಲ್ಲಿ ಪೌಡರ್, ½ ಟೀಸ್ಪೂನ್ ಗರಮ್ ಮಸಾಲಾ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
    ಬೈಂಗನ್ ಮಸಾಲಾ ಪಾಕವಿಧಾನ
  5. ಕಡಿಮೆ ಜ್ವಾಲೆಯ ಮೇಲೆ ಒಂದು ನಿಮಿಷಕ್ಕೆ ಸಾಟ್ ಮಾಡಿ.
    ಬೈಂಗನ್ ಮಸಾಲಾ ಪಾಕವಿಧಾನ
  6. ಒಮ್ಮೆ ಸಂಪೂರ್ಣವಾಗಿ ತಣ್ಣಗಾಗಿಸಿ ಬ್ಲೆಂಡರ್ಗೆ ವರ್ಗಾಯಿಸಿ.
    ಬೈಂಗನ್ ಮಸಾಲಾ ಪಾಕವಿಧಾನ
  7. ಮತ್ತು ಯಾವುದೇ ಹೆಚ್ಚುವರಿ ನೀರನ್ನು ಸೇರಿಸದೆ ಮೃದುವಾದ ಪೇಸ್ಟ್ಗೆ ರುಬ್ಬಿಕೊಳ್ಳಿ. ಪಕ್ಕಕ್ಕೆ ಇರಿಸಿ.
    ಬೈಂಗನ್ ಮಸಾಲಾ ಪಾಕವಿಧಾನ

ಬದನೆಕಾಯಿ ಸ್ಟಫಿಂಗ್ ಪಾಕವಿಧಾನ:

  1. ಮೊದಲಿಗೆ, 2 ಟೇಬಲ್ಸ್ಪೂನ್ ಎಳ್ಳು ಬೀಜಗಳನ್ನು ಸ್ವಲ್ಪ ಗೋಲ್ಡನ್ ಆಗುವ ತನಕ ಡ್ರೈ ಹುರಿಯಿರಿ.
  2. ಈಗ ½ ಕಪ್ ತೆಂಗಿನಕಾಯಿ ಸೇರಿಸಿ ಮತ್ತು ಕಡಿಮೆ ಜ್ವಾಲೆಯ ಮೇಲೆ ಹುರಿಯಿರಿ.
  3. ½ ಕಪ್ ಹುರಿದ ಕಡಲೆಕಾಯಿ, 1 ಟೀಸ್ಪೂನ್ ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ.
  4. ಒಂದು ನಿಮಿಷಕ್ಕೆ ಸಾಟ್ ಮಾಡಿ.
  5. ಮತ್ತು ಯಾವುದೇ ನೀರನ್ನು ಸೇರಿಸದೆ ಒರಟಾದ ಪುಡಿಗೆ ರುಬ್ಬಿಕೊಳ್ಳಿ.

ಬದನೆಕಾಯಿ ಮಸಾಲ ಸಿದ್ಧತೆ ರೆಸಿಪಿ:

  1. ಮೊದಲಿಗೆ, ಕತ್ತರಿಸಿದ ಬದನೆಕಾಯಿಯನ್ನು ತೆಗೆದುಕೊಳ್ಳಿ ಮತ್ತು ಸಾಧ್ಯವಾದಷ್ಟು ಸಿದ್ಧಪಡಿಸಿದ ಸ್ಟಫಿಂಗ್ ಅನ್ನು ಸ್ಟಫ್ ಮಾಡಿ.
  2. ಮತ್ತು 3 ಟೇಬಲ್ಸ್ಪೂನ್ ಎಣ್ಣೆಯೊಂದಿಗೆ ಮಧ್ಯಮ ಜ್ವಾಲೆಯ ಮೇಲೆ ಫ್ರೈ ಮಾಡಿ.
  3. ಮುಚ್ಚಿ 2-4 ನಿಮಿಷಗಳ ಕಾಲ ಸಿಮ್ಮರ್ ನಲ್ಲಿಡಿ.
  4. ಈಗ ತಿರುಗಿಸಿ ಮತ್ತೆ 2 ನಿಮಿಷಗಳ ಕಾಲ ಮುಚ್ಚಿ ಸಿಮ್ಮರ್ ನಲ್ಲಿಡಿ.
    ಬೈಂಗನ್ ಮಸಾಲಾ ಪಾಕವಿಧಾನ
  5. ಅರ್ಧ ಬೇಯುವ ತನಕ ಬದನೆಯನ್ನು ಬೇಯಿಸಿ.
    ಬೈಂಗನ್ ಮಸಾಲಾ ಪಾಕವಿಧಾನ
  6. ನಂತರ, ತೆಗೆದು ಪಕ್ಕಕ್ಕೆ ಇರಿಸಿ.
    ಬೈಂಗನ್ ಮಸಾಲಾ ಪಾಕವಿಧಾನ
  7. ಈಗ ಅದೇ ಕಡೈನಲ್ಲಿ ಸಾಸಿವೆ ಬೀಜಗಳು, ಮೇಥಿ ಮತ್ತು ಕರಿ ಬೇವಿನ ಎಲೆಗಳನ್ನು ಸೇರಿಸಿ.
    ಬೈಂಗನ್ ಮಸಾಲಾ ಪಾಕವಿಧಾನ
  8. ಚಟಪಟವಾಗಲು ಬಿಡಿ.
    ಬೈಂಗನ್ ಮಸಾಲಾ ಪಾಕವಿಧಾನ
  9. ನಂತರ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಸಾಟ್ ಮಾಡಿ.
    ಬೈಂಗನ್ ಮಸಾಲಾ ಪಾಕವಿಧಾನ
  10. ತಯಾರಾದ ಈರುಳ್ಳಿ-ಟೊಮೆಟೊ ಪೇಸ್ಟ್ ಅನ್ನು ಸಹ ಸೇರಿಸಿ ಮತ್ತು ಸಾಟ್ ಮಾಡುವುದನ್ನು ಮುಂದುವರಿಸಿರಿ.
    ಬೈಂಗನ್ ಮಸಾಲಾ ಪಾಕವಿಧಾನ
  11. ಪೇಸ್ಟ್ ದಪ್ಪವಾಗಿ ಮತ್ತು ಎಣ್ಣೆಯು ಮಿಶ್ರಣದಿಂದ ಬೇರ್ಪಡಿಸುವ ತನಕ ಬೇಯಿಸಿ.
    ಬೈಂಗನ್ ಮಸಾಲಾ ಪಾಕವಿಧಾನ
  12. ಇದಲ್ಲದೆ, ಸ್ಟಫ್ಡ್ ಮತ್ತು ಹುರಿದ ಬದನೆಗಳನ್ನು ಇರಿಸಿ.
    ಬೈಂಗನ್ ಮಸಾಲಾ ಪಾಕವಿಧಾನ
  13. ಮತ್ತು ಹುಣಿಸೇಹಣ್ಣು ನೀರನ್ನು ಸುರಿಯಿರಿ. ಹುಣಿಸೇಹಣ್ಣು ನೀರನ್ನು ತಯಾರಿಸಲು, ಒಂದು ಸಣ್ಣ ಚೆಂಡಿನ ಗಾತ್ರದ ಹುಣಿಸೇಹಣ್ಣನ್ನು 1 ಕಪ್ ಬೆಚ್ಚಗಿನ ನೀರಿನಲ್ಲಿ 30 ನಿಮಿಷಗಳ ಕಾಲ ಇಟ್ಟು ಚೆನ್ನಾಗಿ ಹಿಸುಕಿ.
    ಬೈಂಗನ್ ಮಸಾಲಾ ಪಾಕವಿಧಾನ
  14. ಪರಿಮಳವನ್ನು ಹೆಚ್ಚಿಸಲು ಬೆಲ್ಲದ ತುಂಡು ಸೇರಿಸಿ.
    ಬೈಂಗನ್ ಮಸಾಲಾ ಪಾಕವಿಧಾನ
  15. ಬದನೆಯನ್ನು ಮುರಿಯದೆ ನಿಧಾನವಾಗಿ ಮಿಶ್ರಣ ಮಾಡಿ.
    ಬೈಂಗನ್ ಮಸಾಲಾ ಪಾಕವಿಧಾನ
  16. ಮುಚ್ಚಿ 5 ನಿಮಿಷಗಳ ಕಾಲ ಸಿಮ್ಮರ್ ನಲ್ಲಿಡಿ.
    ಬೈಂಗನ್ ಮಸಾಲಾ ಪಾಕವಿಧಾನ
  17. ಮಸಾಲಾ ಮತ್ತು ಬದನೆಯನ್ನು ಸುಡುವುದನ್ನು ತಪ್ಪಿಸಲು ಕೈ ಆಡಿಸುತ್ತಾ ಇರಿ.
    ಬೈಂಗನ್ ಮಸಾಲಾ ಪಾಕವಿಧಾನ
  18. ಬದನೆಕಾಯಿ ಸಂಪೂರ್ಣವಾಗಿ ಬೇಯುವ ತನಕ ಮುಚ್ಚಿ ಬೇಯಿಸಿ.
    ಬೈಂಗನ್ ಮಸಾಲಾ ಪಾಕವಿಧಾನ
  19. ಅಂತಿಮವಾಗಿ, ಬದನೆಕಾಯಿ ಮಸಾಲಾವನ್ನು, ಚಪಾತಿ ಅಥವಾ ರೋಟಿ ಜೊತೆ ಸೇವಿಸಿ.
    ಬೈಂಗನ್ ಮಸಾಲಾ ಪಾಕವಿಧಾನ

ಟಿಪ್ಪಣಿಗಳು:

  • ಮೊದಲಿಗೆ, ಸುಲಭ ಮತ್ತು ಸಮವಾಗಿ ಬೇಯಲು ಸಣ್ಣ ಮತ್ತು ನವಿರಾದ ಬದನೆಯನ್ನು ಬಳಸಿ.
  • ಮತ್ತಷ್ಟು, ನಿಮ್ಮ ಆಯ್ಕೆಯ ಪ್ರಕಾರ ಮಸಾಲೆ ಹೊಂದಿಸಿ.
  • ಬೆಲ್ಲವನ್ನು ಸೇರಿಸುವುದು ಐಚ್ಛಿಕವಾಗಿರುತ್ತದೆ, ಆದರೆ ಇದು ಪರಿಮಳವನ್ನು ಹೆಚ್ಚಿಸುತ್ತದೆ.
  • ಅಂತಿಮವಾಗಿ, ಬದನೆಕಾಯಿ ಮಸಾಲ ತನ್ನ ಎಲ್ಲಾ ಮಸಾಲೆಯನ್ನು ಹೀರಿಕೊಳ್ಳುವುದರಿಂದ ಮರುದಿನ ಚೆನ್ನಾಗಿ ರುಚಿ ನೀಡುತ್ತದೆ.