ಬ್ರಿಂಜಿ ರೈಸ್ ರೆಸಿಪಿ | brinji rice in kannada | ವೆಜ್ ಬ್ರಿಂಜಿ | ಬ್ರಿಂಜಿ ಸದಮ್

0

ಬ್ರಿಂಜಿ ರೈಸ್ ಪಾಕವಿಧಾನ | ವೆಜ್ ಬ್ರಿಂಜಿ | ಬ್ರಿಂಜಿ ಸದಮ್ನ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಜನಪ್ರಿಯ ತಮಿಳು ಪಾಕಪದ್ಧತಿಯ ಅಧಿಕೃತ ಮತ್ತು ಸಾಂಪ್ರದಾಯಿಕ ಅಕ್ಕಿ ಆಧಾರಿತ ಪಾಕವಿಧಾನ. ಇದು ಜೀರ್ಗಾ ಅಕ್ಕಿ, ತೆಂಗಿನ ಹಾಲು, ತರಿಕಾರಿಗಳ ಆಯ್ಕೆ ಮತ್ತು ಮಸಾಲೆಗಳಿಂದ ತಯಾರಿಸಿದ ತಮಿಳುನಾಡಿನಿಂದ ಪ್ರಸಿದ್ಧವಾದ ಒಂದು ಪಾಟ್ ಊಟವಾಗಿದೆ. ಈ ಪಾಕವಿಧಾನವು ಊಟದ ಡಬ್ಬಕ್ಕೆ ನೀಡಲು ಸೂಕ್ತವಾಗಿದೆ. ಹಾಗೆಯೇ, ಹಬ್ಬದ ಆಚರಣೆಗಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ಮಧ್ಯಾಹ್ನ ಊಟಕ್ಕೆ ಮತ್ತು ರಾತ್ರಿಯ ಭೋಜನಕ್ಕೆ ಸಹ ತಯಾರಿಸಬಹುದು.
ಬ್ರಿಂಜಿ ರೈಸ್ ಪಾಕವಿಧಾನ

ಬ್ರಿಂಜಿ ರೈಸ್ ಪಾಕವಿಧಾನ | ವೆಜ್ ಬ್ರಿಂಜಿ | ಬ್ರಿಂಜಿ ಸದಮ್ನ ಹಂತ ಹಂತವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಭಾರತ ಮತ್ತು ಅದರ ಅಕ್ಕಿ ಆಧಾರಿತ ಪಾಕವಿಧಾನಗಳಿಗೆ ಇರುವ ಬಾಂಧವ್ಯ ಅಮೋಘವಾದುದು. ಭಾರತದಾದ್ಯಂತ ಲಭ್ಯವಿರುವ ಅಸಂಖ್ಯಾತ ಅಕ್ಕಿ ಪಾಕವಿಧಾನಗಳಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದು, ಹಾಗೆಯೇ, ಅದು ಅದರ ಭೌಗೋಳಿಕತೆಯೊಂದಿಗೆ ಬದಲಾಗುತ್ತದೆ. ಅಂತಹ ಒಂದು ಬಿರಿಯಾನಿ ಪ್ರಕಾರದ ವ್ಯತ್ಯಾಸವೆಂದರೆ ದಕ್ಷಿಣ ಭಾರತದ ಜನಪ್ರಿಯ ಬ್ರಿಂಜಿ ರೈಸ್ ರೆಸಿಪಿ. ಇದು ಅದರ ಕ್ರೀಮಿ ಮತ್ತು ಮಸಾಲೆಯುಕ್ತ ಫ್ಲೇವರ್ ನ ಸಂಯೋಜನೆಗೆ ಹೆಸರುವಾಸಿಯಾಗಿದೆ.

ನಿಜ ಹೇಳಬೇಕೆಂದರೆ, ಈ ಪಾಕವಿಧಾನದ ಬಗ್ಗೆ ನನಗೆ ಇತ್ತೀಚಿನವರೆಗೂ ತಿಳಿದಿರಲಿಲ್ಲ. ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕಾಗಿ ನನ್ನ ತಮಿಳು ಸ್ನೇಹಿತರೊಬ್ಬರು ನನ್ನನ್ನು ಅವರ ಮನೆಗೆ ಆಹ್ವಾನಿಸಿದ್ದರು. ಅವರು ಮಧ್ಯಾಹ್ನದ ಊಟಕ್ಕೆ ಈ ಬ್ರಿಂಜಿ ರೈಸ್ ಪಾಕವಿಧಾನವನ್ನು ತಯಾರಿಸಿದ್ದರು. ನಾನು ಹೆಸರನ್ನು ಮತ್ತು ಈ ಪಾಕವಿಧಾನವನ್ನು ತಯಾರಿಸಿದ ರೀತಿ ಕೇಳಿ ತುಂಬಾ ಆಶ್ಚರ್ಯಚಕಿತಳಾದೆನು. ಮೂಲತಃ ಇದು ಬಿರಿಯಾನಿ ಮಸಾಲೆಗಳು ಮತ್ತು ತೆಂಗಿನ ಹಾಲಿನಿಂದ ಸಂಯೋಜನೆಯಾಗಿದೆ. ಆದ್ದರಿಂದ ಮಸಾಲೆ ಮತ್ತು ಹಾಲು, ಅನ್ನದೊಂದಿಗೆ ಬೆರೆಸಿದಾಗ, ಇದು ಅದ್ಭುತವಾದ ಒಂದು ಪಾಟ್ ಊಟವಾಗಿ ಕೊನೆಗೊಳ್ಳುತ್ತದೆ. ಈ ಪಾಕವಿಧಾನವನ್ನು ಪರಿಚಯಿಸಿದಾಗಿನಿಂದ, ನನ್ನ ಗಂಡನ ಊಟದ ಡಬ್ಬಕ್ಕಾಗಿ ನಾನು ಈಗಾಗಲೇ ಎರಡು ಬಾರಿ ಮಾಡಿದ್ದೇನೆ. ಈ ಪಾಕವಿಧಾನದ ಉತ್ತಮ ಭಾಗವೆಂದರೆ ಅದರೊಂದಿಗೆ ಬೇರೆ ಯಾವುದೇ ಸೈಡ್ ಡಿಶ್ ನ ಅಗತ್ಯವಿಲ್ಲ. ನೀವು ರಾಯಿತಾದೊಂದಿಗೆ ಇದನ್ನು ತಿನ್ನಬಹುದು, ಆದರೆ ಅದು ಕಡ್ಡಾಯವಲ್ಲ.

ವೆಜ್ ಬ್ರಿಂಜಿಪರಿಪೂರ್ಣ ಬ್ರಿಂಜಿ ರೈಸ್ ಪಾಕವಿಧಾನಕ್ಕಾಗಿ ಕೆಲವು ಸುಲಭ ಹಾಗೂ ಪ್ರಮುಖ ಸಲಹೆಗಳನ್ನು ಸೇರಿಸಲು ಬಯಸುತ್ತೇನೆ. ಮೊದಲನೆಯದಾಗಿ, ನಾನು ಬ್ರಿಂಜಿ ರೈಸ್ ತಯಾರಿಸಲು ಸರಳ ಉದ್ದ ಧಾನ್ಯ ಬಾಸ್ಮತಿ ಅಕ್ಕಿಯನ್ನು ಬಳಸಿದ್ದೇನೆ. ಪರ್ಯಾಯವಾಗಿ, ಅಧಿಕೃತ ತಮಿಳು ಫ್ಲೇವರ್ ಗಾಗಿ ನೀವು ಇದನ್ನು ಜೀರ್ಗಾ ಸಾಂಬಾ ಅಕ್ಕಿಯೊಂದಿಗೆ ತಯಾರಿಸಬಹುದು. ಎರಡನೆಯದಾಗಿ, ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ರುಬ್ಬುವಾಗ, ನಾನು ಕೇವಲ ನೀರಿಗೆ ಸೀಮಿತಗೊಳಿಸಿದ್ದೇನೆ. ನೀವು ರುಬ್ಬುವಾಗ ತುರಿದ ತೆಂಗಿನಕಾಯಿಯನ್ನು ಸಹ ಬಳಸಬಹುದು. ಕೊನೆಯದಾಗಿ, ಈ ಪಾಕವಿಧಾನಕ್ಕೆ ತರಕಾರಿಗಳನ್ನು ಸೇರಿಸುವುದು ಸಂಪೂರ್ಣವಾಗಿ ನಿಮ್ಮ ಆಯ್ಕೆಯಾಗಿದೆ ಮತ್ತು ನಿಮ್ಮ ಅಪೇಕ್ಷಿತ ಫ್ಲೇವರ್ ಗಾಗಿ ತರಕಾರಿಗಳನ್ನು ಆಯ್ಕೆ ಮಾಡಬಹುದು. ಆದರೆ ಆಯ್ಕೆ ಮಾಡುವಾಗ ಅದರಲ್ಲಿ ತರಕಾರಿ ಸಂಖ್ಯೆಯನ್ನು ಮಿತಿಗೊಳಿಸಲು ಖಚಿತಪಡಿಸಿಕೊಳ್ಳಿ.

ಅಂತಿಮವಾಗಿ ನಾನು ಬ್ರಿಂಜಿ ರೈಸ್ ಪಾಕವಿಧಾನದ ಈ ಪೋಸ್ಟ್‌ನೊಂದಿಗೆ ನನ್ನ ಇತರ ಭಾರತೀಯ ಅನ್ನದ ಪಾಕವಿಧಾನಗಳು ಪಾಕವಿಧಾನಗಳ ಸಂಗ್ರಹವನ್ನು ಪರಿಶೀಲಿಸುವಂತೆ ವಿನಂತಿಸುತ್ತೇನೆ. ಪಾಕವಿಧಾನದಲ್ಲಿ ಮುಖ್ಯವಾಗಿ ದಡ್ಡೋಜನಂ, ರೈಸ್ ಭಾತ್, ಚಿಲ್ಲಿ ಗಾರ್ಲಿಕ್ ಫ್ರೈಡ್ ರೈಸ್, ರೈಸ್ ಪಕೋಡ, ಪುಳಿಯೋಗರೆ, ಪುಳಿಯೋಧರೈ, ಚನಾ ಪುಲಾವ್, ಸಬ್ಬಸಿಗೆ ಪುಲಾವ್, ತಿರಂಗಾ ಪುಲಾವ್, ಟೊಮೆಟೊ ರೈಸ್ ಮುಂತಾದ ಪಾಕವಿಧಾನಗಳು ಸೇರಿವೆ. ಇವುಗಳ ಜೊತೆಗೆ, ನನ್ನ ಇತರ ವಿವರವಾದ ಪಾಕವಿಧಾನಗಳ ಸಂಗ್ರಹವನ್ನು ಹೈಲೈಟ್ ಮಾಡಲು ನಾನು ಬಯಸುತ್ತೇನೆ,

ಬ್ರಿಂಜಿ ರೈಸ್ ವೀಡಿಯೊ ಪಾಕವಿಧಾನ:

Must Read:

Must Read:

ವೆಜ್ ಬ್ರಿಂಜಿ ಪಾಕವಿಧಾನ ಕಾರ್ಡ್:

brinji rice recipe

ಬ್ರಿಂಜಿ ರೈಸ್ ರೆಸಿಪಿ | brinji rice in kannada | ವೆಜ್ ಬ್ರಿಂಜಿ | ಬ್ರಿಂಜಿ ಸದಮ್

5 from 14 votes
ತಯಾರಿ ಸಮಯ: 10 minutes
ಅಡುಗೆ ಸಮಯ: 20 minutes
ಒಟ್ಟು ಸಮಯ : 30 minutes
Servings: 3 ಸೇವೆಗಳು
AUTHOR: HEBBARS KITCHEN
Course: ಅನ್ನ - ರೈಸ್
Cuisine: ತಮಿಳು
Keyword: ಬ್ರಿಂಜಿ ರೈಸ್ ರೆಸಿಪಿ
ಪ್ರಿಂಟ್ ರೆಸಿಪಿ ಪಿನ್ ರೆಸಿಪಿ
ಸುಲಭ ಬ್ರಿಂಜಿ ರೈಸ್ ಪಾಕವಿಧಾನ | ವೆಜ್ ಬ್ರಿಂಜಿ | ಬ್ರಿಂಜಿ ಸದಮ್

ಪದಾರ್ಥಗಳು

ಮಸಾಲಾ ಪೇಸ್ಟ್ಗಾಗಿ:

  • 1 ಮುಷ್ಟಿಯಷ್ಟು ಕೊತ್ತಂಬರಿ ಸೊಪ್ಪು
  • 1 ಮುಷ್ಟಿಯಷ್ಟು ಪುದೀನ ಸೊಪ್ಪು
  • 2 ಏಲಕ್ಕಿ
  • 4 ಲವಂಗ
  • ½ ಇಂಚಿನ ದಾಲ್ಚಿನ್ನಿ
  • 1 ಟೀಸ್ಪೂನ್ ಫೆನ್ನೆಲ್ / ಸೋಂಪು
  • 2 ಟೇಬಲ್ಸ್ಪೂನ್ ನೀರು

ಇತರ ಪದಾರ್ಥಗಳು:

  • 2 ಟೇಬಲ್ಸ್ಪೂನ್ ತುಪ್ಪ
  • 1 ಟೇಬಲ್ಸ್ಪೂನ್ ಎಣ್ಣೆ
  • 4 ಬೇ ಎಲೆ / ತೇಜ್ ಪಟ್ಟಾ / ಬ್ರಿಂಜಿ ಇಲೈ
  • 1 ಸ್ಟಾರ್ ಸೋಂಪು
  • 2 ಏಲಕ್ಕಿ
  • 1 ಈರುಳ್ಳಿ, ಹೋಳು
  • 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • 3 ಮೆಣಸಿನಕಾಯಿ, ಸೀಳು
  • 1 ಟೊಮೆಟೊ, ಕತ್ತರಿಸಿದ
  • ½ ಕ್ಯಾರೆಟ್, ಕತ್ತರಿಸಿದ
  • 2 ಟೇಬಲ್ಸ್ಪೂನ್ ಬಟಾಣಿ
  • ½ ಆಲೂಗಡ್ಡೆ , ಹೋಳು ಮಾಡಿದ
  • 7 ಫ್ಲೋರೆಟ್ಸ್ ಹೂಕೋಸು / ಗೋಬಿ
  • 5 ಬೀನ್ಸ್, ಕತ್ತರಿಸಿದ
  • 1 ಟೀಸ್ಪೂನ್ ಉಪ್ಪು
  • ಕೆಲವು ಕರಿಬೇವಿನ ಎಲೆಗಳು
  • 1 ಕಪ್ ನೀರು
  • 1 ಕಪ್ ತೆಂಗಿನ ಹಾಲು
  • 1 ಕಪ್ ಬಾಸ್ಮತಿ ಅಕ್ಕಿ, 20 ನಿಮಿಷ ನೆನೆಸಿ
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು, ಕತ್ತರಿಸಿದ
  • 2 ಟೇಬಲ್ಸ್ಪೂನ್ ಪುದೀನ ಸೊಪ್ಪು, ಕತ್ತರಿಸಿದ

ಸೂಚನೆಗಳು

  • ಮೊದಲನೆಯದಾಗಿ, ಮುಷ್ಟಿಯಷ್ಟು ಕೊತ್ತಂಬರಿ ಸೊಪ್ಪು, ಮುಷ್ಟಿಯಷ್ಟು ಪುದೀನ, 2 ಏಲಕ್ಕಿ, 4 ಲವಂಗ, ½ ಇಂಚಿನ ದಾಲ್ಚಿನ್ನಿ, 1 ಟೀಸ್ಪೂನ್ ಫೆನ್ನೆಲ್ ಅನ್ನು ಬ್ಲೆಂಡರ್ನಲ್ಲಿ ತೆಗೆದುಕೊಂಡು ಮಸಾಲಾ ಪೇಸ್ಟ್ ತಯಾರಿಸಿ.
  • 2 ಟೀಸ್ಪೂನ್ ನೀರನ್ನು ಸೇರಿಸಿ ನಯವಾದ ಪೇಸ್ಟ್ಗೆ ಮಿಶ್ರಣ ಮಾಡಿ.
  • ಈಗ ಕುಕ್ಕರ್‌ನಲ್ಲಿ 2 ಟೀಸ್ಪೂನ್ ತುಪ್ಪ ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ.
  • 4 ಬೇ ಎಲೆ, 1 ಸ್ಟಾರ್ ಸೋಂಪು, 2 ಏಲಕ್ಕಿ ಸೇರಿಸಿ ಪರಿಮಳ ಬರುವವರೆಗೆ ಸಾಟ್ ಮಾಡಿ.
  • ಈಗ, 1 ಈರುಳ್ಳಿ, 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು 3 ಮೆಣಸಿನಕಾಯಿ ಸೇರಿಸಿ. ಚೆನ್ನಾಗಿ ಸಾಟ್ ಮಾಡಿ.
  • 1 ಟೊಮೆಟೊ ಸೇರಿಸಿ, ಅದು ಮೃದು ಮತ್ತು ಮೆತ್ತಗಾಗುವವರೆಗೆ ಸಾಟ್ ಮಾಡಿ.
  • ಈಗ ½ ಕ್ಯಾರೆಟ್, 2 ಟೀಸ್ಪೂನ್ ಬಟಾಣಿ, ½ ಆಲೂಗಡ್ಡೆ, 7 ಫ್ಲೋರೆಟ್ಸ್ ಹೂಕೋಸು, 5 ಬೀನ್ಸ್ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ.
  • ತರಕಾರಿಗಳು ಪರಿಮಳ ಬರುವವರೆಗೆ ಒಂದು ನಿಮಿಷ ಬೇಯಿಸಿ.
  • ಈಗ, ತಯಾರಾದ ಮಸಾಲಾ ಪೇಸ್ಟ್ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ.
  • ಹಸಿ ವಾಸನೆ ಹೋಗುವವರೆಗೆ ಒಂದು ನಿಮಿಷ ಸಾಟ್ ಮಾಡುವುದನ್ನು ಮುಂದುವರಿಸಿ.
  • 1 ಕಪ್ ನೀರು ಮತ್ತು 1 ಕಪ್ ತೆಂಗಿನ ಹಾಲು ಸೇರಿಸಿ. ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿರಿ.
  • 1 ಕಪ್ ಬಾಸ್ಮತಿ ಅಕ್ಕಿ (20 ನಿಮಿಷಗಳ ಕಾಲ ನೆನೆಸಿ) ಸೇರಿಸಿ,  ಉತ್ತಮವಾಗಿ ಬೆರೆಸಿ.
  • 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು ಮತ್ತು 2 ಟೀಸ್ಪೂನ್ ಪುದೀನಾ ಸೊಪ್ಪನ್ನು ಹರಡಿ.
  • ಮುಚ್ಚಿ, ಪ್ರೆಶರ್ ಕುಕ್ಕರ್ ನಲ್ಲಿ ಮಧ್ಯಮ ಜ್ವಾಲೆಯ ಮೇಲೆ 2 ಸೀಟಿಗಳನ್ನು ಬರಿಸಿ.
  • ಅಂತಿಮವಾಗಿ, ಸ್ವಲ್ಪ ತಣ್ಣಗಾಗಿಸಿ ಮತ್ತು ರಾಯಿತಾದೊಂದಿಗೆ ಬ್ರಿಂಜಿ ರೈಸ್ಅನ್ನು ಆನಂದಿಸಿ.
ನೀವು ಈ ಪಾಕವಿಧಾನವನ್ನು ಪ್ರಯತ್ನಿಸಿದ್ದೀರಾ?ಚಿತ್ರವನ್ನು ಕ್ಲಿಕ್ ಮಾಡಿ ಮತ್ತು @hebbars.kitchen ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ #hebbarskitchen ನಮ್ಮನ್ನು ಟ್ಯಾಗ್ ಮಾಡಿ
ನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿನಮ್ಮ ಯೌಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಲು ಹಾಗು ಹೊಸ ವಿಡಿಯೋ ಪಾಕವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಂತ ಹಂತದ ಫೋಟೋದೊಂದಿಗೆ ಬ್ರಿಂಜಿ ರೈಸ್ ತಯಾರಿಸುವುದು ಹೇಗೆ:

  1. ಮೊದಲನೆಯದಾಗಿ, ಮುಷ್ಟಿಯಷ್ಟು ಕೊತ್ತಂಬರಿ ಸೊಪ್ಪು, ಮುಷ್ಟಿಯಷ್ಟು ಪುದೀನ, 2 ಪಾಡ್ ಏಲಕ್ಕಿ, 4 ಲವಂಗ, ½ ಇಂಚಿನ ದಾಲ್ಚಿನ್ನಿ, 1 ಟೀಸ್ಪೂನ್ ಫೆನ್ನೆಲ್ ಅನ್ನು ಬ್ಲೆಂಡರ್ನಲ್ಲಿ ತೆಗೆದುಕೊಂಡು ಮಸಾಲಾ ಪೇಸ್ಟ್ ತಯಾರಿಸಿ.
  2. 2 ಟೀಸ್ಪೂನ್ ನೀರನ್ನು ಸೇರಿಸಿ ನಯವಾದ ಪೇಸ್ಟ್ಗೆ ಮಿಶ್ರಣ ಮಾಡಿ.
  3. ಈಗ ಕುಕ್ಕರ್‌ನಲ್ಲಿ 2 ಟೀಸ್ಪೂನ್ ತುಪ್ಪ ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ.
  4. 4 ಬೇ ಎಲೆ, 1 ಸ್ಟಾರ್ ಸೋಂಪು, 2 ಪಾಡ್ಸ್ ಏಲಕ್ಕಿ ಸೇರಿಸಿ ಪರಿಮಳ ಬರುವವರೆಗೆ ಸಾಟ್ ಮಾಡಿ.
  5. ಈಗ, 1 ಈರುಳ್ಳಿ, 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು 3 ಮೆಣಸಿನಕಾಯಿ ಸೇರಿಸಿ. ಚೆನ್ನಾಗಿ ಸಾಟ್ ಮಾಡಿ.
  6. 1 ಟೊಮೆಟೊ ಸೇರಿಸಿ, ಅದು ಮೃದು ಮತ್ತು ಮೆತ್ತಗಾಗುವವರೆಗೆ ಸಾಟ್ ಮಾಡಿ.
  7. ಈಗ ½ ಕ್ಯಾರೆಟ್, 2 ಟೀಸ್ಪೂನ್ ಬಟಾಣಿ, ½ ಆಲೂಗಡ್ಡೆ, 7 ಫ್ಲೋರೆಟ್ಸ್ ಹೂಕೋಸು, 5 ಬೀನ್ಸ್ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ.
  8. ತರಕಾರಿಗಳು ಪರಿಮಳ ಬರುವವರೆಗೆ ಒಂದು ನಿಮಿಷ ಬೇಯಿಸಿ.
  9. ಈಗ, ತಯಾರಾದ ಮಸಾಲಾ ಪೇಸ್ಟ್ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ.
  10. ಹಸಿ ವಾಸನೆ ಹೋಗುವವರೆಗೆ ಒಂದು ನಿಮಿಷ ಸಾಟ್ ಮಾಡುವುದನ್ನು ಮುಂದುವರಿಸಿ.
  11. 1 ಕಪ್ ನೀರು ಮತ್ತು 1 ಕಪ್ ತೆಂಗಿನ ಹಾಲು ಸೇರಿಸಿ. ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿರಿ.
  12. 1 ಕಪ್ ಬಾಸ್ಮತಿ ಅಕ್ಕಿ (20 ನಿಮಿಷಗಳ ಕಾಲ ನೆನೆಸಿ) ಸೇರಿಸಿ,  ಉತ್ತಮವಾಗಿ ಬೆರೆಸಿ.
  13. 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು ಮತ್ತು 2 ಟೀಸ್ಪೂನ್ ಪುದೀನಾ ಸೊಪ್ಪನ್ನು ಹರಡಿ.
  14. ಮುಚ್ಚಿ, ಪ್ರೆಶರ್ ಕುಕ್ಕರ್ ನಲ್ಲಿ ಮಧ್ಯಮ ಜ್ವಾಲೆಯ ಮೇಲೆ 2 ಸೀಟಿಗಳನ್ನು ಬರಿಸಿ.
  15. ಅಂತಿಮವಾಗಿ, ಸ್ವಲ್ಪ ತಣ್ಣಗಾಗಿಸಿ ಮತ್ತು ರಾಯಿತಾದೊಂದಿಗೆ ಬ್ರಿಂಜಿ ರೈಸ್ಅನ್ನು ಆನಂದಿಸಿ.
    ಬ್ರಿಂಜಿ ರೈಸ್ ಪಾಕವಿಧಾನ

ಟಿಪ್ಪಣಿಗಳು:

  • ಮೊದಲನೆಯದಾಗಿ, ಹಸಿರು ಮೆಣಸಿನಕಾಯಿಗೆ ಬದಲಾಗಿ ನೀವು ಮೆಣಸಿನ ಪುಡಿಯನ್ನು ಸೇರಿಸಿ, ಬೇರೆ ಬಣ್ಣವನ್ನು ಪಡೆಯಬಹುದು.
  • ಅಲ್ಲದೆ, ತೆಂಗಿನ ಹಾಲನ್ನು ಸೇರಿಸುವುದರಿಂದ ಅದರ ಫ್ಲೇವರ್ ಹೆಚ್ಚಾಗುತ್ತದೆ.
  • ಹಾಗೆಯೇ, ನಿಮ್ಮ ಆಯ್ಕೆಯ ತರಕಾರಿಗಳನ್ನು ಸೇರಿಸಿ ಅಥವಾ ಪ್ಲೈನ್ ಬ್ರಿಂಜಿ ರೈಸ್ ತಯಾರಿಸಲು ಅದನ್ನು ಸಂಪೂರ್ಣವಾಗಿ ಬಿಟ್ಟುಬಿಡಿ.
  • ಅಂತಿಮವಾಗಿ, ತಯಾರಿಸಿ, ಕನಿಷ್ಠ ಒಂದು ಗಂಟೆಯ ನಂತರ ಬಡಿಸಿದಾಗ ಬ್ರಿಂಜಿ ರೈಸ್ ರೆಸಿಪಿ ಉತ್ತಮ ರುಚಿ ನೀಡುತ್ತದೆ.
5 from 14 votes (14 ratings without comment)