ಮಶ್ರೂಮ್ ರೈಸ್ ಪಾಕವಿಧಾನ | ಮಶ್ರೂಮ್ ಪುಲಾವ್ | ಅಣಬೆ ಪುಲಾವ್ನ ವಿವರವಾದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಇದು ಸರಳ ಮತ್ತು ಸುಲಭವಾದ ಮಶ್ರೂಮ್ ಫ್ಲೇವರ್ ನ ರೈಸ್ ಪಾಕವಿಧಾನವಾಗಿದೆ. ಇದನ್ನು ಬಾಸ್ಮತಿ ಅಕ್ಕಿ ಮತ್ತು ಭಾರತೀಯ ಮಸಾಲೆಗಳಿಂದ ತಯಾರಿಸಲಾಗುತ್ತದೆ. ಇದು ಊಟದ ಡಬ್ಬದ ಪಾಕವಿಧಾನದ ನೆಚ್ಚಿನ ಮತ್ತು ಜನಪ್ರಿಯ ಆಯ್ಕೆಯಾಗಿದೆ ಮತ್ತು ಬಿಡುವಿಲ್ಲದ ಬೆಳಿಗ್ಗೆಯಲ್ಲಿ ಕ್ಷಣಾರ್ಧದಲ್ಲಿ ತಯಾರಿಸಬಹುದು. ಇದನ್ನು ಸೌತೆಕಾಯಿ ರಾಯಿತಾ ಅಥವಾ ಪುದಿನಾ ರಾಯಿತಾದೊಂದಿಗೆ ಉತ್ತಮವಾಗಿ ನೀಡಬಹುದು. ಹಾಗೆಯೇ, ಯಾವುದೇ ಸೈಡ್ ಡಿಶ್ ಇಲ್ಲದೆ ಕೂಡ ಇದನ್ನು ಸವಿಯಬಹುದು.
ನಾನು ಈವರೆಗೆ ಹಲವಾರು ಅನ್ನ ಪಾಕವಿಧಾನಗಳನ್ನು ನನ್ನ ಬ್ಲಾಗ್‌ನಲ್ಲಿ ಪೋಸ್ಟ್ ಮಾಡಿದ್ದೇನೆ. ಆದರೆ ಈ ಪಾಕವಿಧಾನ ನನ್ನ ಹೊಸ ನೆಚ್ಚಿನ ಪಾಕವಿಧಾನವಾಗಿದೆ. ನನ್ನ ಗಂಡನ ಊಟದ ಡಬ್ಬಕ್ಕಾಗಿ ನಾನು ಪ್ರತಿ ದಿನ ತಯಾರಿಸುವ ಸುಲಭ ಮತ್ತು ಸರಳ ಪಾಕವಿಧಾನಗಳಲ್ಲಿ ಇದು ಒಂದು. ಇದು ಒಂದು ಪಾಟ್ ಊಟವಾಗಿದ್ದು ಇದಕ್ಕೆ ನಿರ್ದಿಷ್ಟವಾಗಿ ಯಾವುದೇ ಹೆಚ್ಚುವರಿ ಸೈಡ್ ಡಿಶ್ ನ ಅಗತ್ಯವಿಲ್ಲ. ಆದರೆ ನನ್ನ ಪತಿ ಇದನ್ನು ಸರಳ ಮೂಂಗ್ ದಾಲ್ ತಡ್ಕಾ ಅಥವಾ ಮಿಕ್ಸ್ ದಾಲ್ ತಡ್ಕಾ ಪಾಕವಿಧಾನಗಳೊಂದಿಗೆ ಇಷ್ಟಪಡುತ್ತಾರೆ. ರೈಸ್ ಒಣಗಿದರೆ ಮಾತ್ರ, ನಿಮಗೆ ಸೈಡ್ ಡಿಶ್ ಬೇಕಾಗಬಹುದು. ರೈಸ್ ನಲ್ಲಿ ತೇವಾಂಶ ಇದ್ದು, ಅದು ನಿಮಗೆ ನುಂಗಲು ಸುಲಭವಾಗಿದ್ದರೆ ನಿಮಗೆ ಯಾವುದೇ ನಿರ್ದಿಷ್ಟ ಸೈಡ್ ಡಿಶ್ ನ ಅಗತ್ಯವಿಲ್ಲ. ಇದಲ್ಲದೆ, ನಾನು ಅಣಬೆಯನ್ನು ಪ್ರತ್ಯೇಕವಾಗಿ ಬೇಯಿಸಿದ್ದೇನೆ, ಅದು ಕೋಮಲವಾಗಿಸುತ್ತದೆ ಮತ್ತು ಈ ಪಾಕವಿಧಾನವನ್ನು ಸಂಪೂರ್ಣ ಒಂದು ಪಾಟ್ ಊಟವಾಗಿಸುತ್ತದೆ.
ಇದಲ್ಲದೆ, ಈ ಮಶ್ರೂಮ್ ರೈಸ್ ರೆಸಿಪಿ ಅಥವಾ ಮಶ್ರೂಮ್ ಪುಲಾವ್‌ಗಾಗಿ ಕೆಲವು ಸುಲಭ ಮತ್ತು ಪ್ರಮುಖ ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲನೆಯದಾಗಿ, ನಾನು ಇದಕ್ಕೆ ಬಾಸ್ಮತಿ ಅಕ್ಕಿಯನ್ನು ಬಳಸಲು ಹೆಚ್ಚು ಶಿಫಾರಸು ಮಾಡುತ್ತೇನೆ ಹೊರತು ಸೋನಾ ಮಸೂರಿ ಅಥವಾ ಯಾವುದೇ ಬೇರೆ ಅಕ್ಕಿ ಅಲ್ಲ. ಇತರ ಅಕ್ಕಿ ಮೆತ್ತಗಾಗಬಹುದು ಮತ್ತು ತಿನ್ನುಲು ಸರಿಯಾಗದೆ ಇರಬಹುದು. ಎರಡನೆಯದಾಗಿ, ಮಶ್ರೂಮ್ ಸ್ಲೈಸ್ ನ ಜೊತೆಗೆ, ಈ ಪಾಕವಿಧಾನವನ್ನು ವಿಸ್ತರಿಸಲು ನೀವು ಇತರ ತರಕಾರಿಗಳನ್ನು ಸೇರಿಸಬಹುದು. ನೀವು ಸಿಹಿ ಕಾರ್ನ್, ಕ್ಯಾಪ್ಸಿಕಂ, ಹಸಿರು ಬಟಾಣಿ ಮತ್ತು ಸಣ್ಣಗೆ ಕತ್ತರಿಸಿದ ಕ್ಯಾರೆಟ್ ನಂತಹ ತರಕಾರಿಗಳನ್ನು ಸೇರಿಸಬಹುದು. ಕೊನೆಯದಾಗಿ, ಈ ರೈಸ್ ಪಾಕವಿಧಾನ ಮರುದಿನ ಬಡಿಸಿದಾಗ ಉತ್ತಮ ರುಚಿ ನೀಡುತ್ತದೆ. ಆದ್ದರಿಂದ ನೀವು ಅದನ್ನು ಮುಂಚಿನ ದಿನ ರಾತ್ರಿಯೇ ತಯಾರಿಸಿ ಮರುದಿನ ಊಟದ ಡಬ್ಬಕ್ಕೆ ಬಡಿಸಬಹುದು ಅಥವಾ ಪ್ಯಾಕ್ ಮಾಡಿಕೊಡಬಹುದು.
ಅಂತಿಮವಾಗಿ, ಮಶ್ರೂಮ್ ರೈಸ್ ರೆಸಿಪಿಯ ಈ ಪೋಸ್ಟ್ನೊಂದಿಗೆ ನನ್ನ ಇತರ ಸಂಬಂಧಿತ ಭಾರತೀಯ ಅನ್ನದ ಪಾಕವಿಧಾನಗಳು ಪಾಕವಿಧಾನಗಳ ಸಂಗ್ರಹಕ್ಕೆ ಭೇಟಿ ನೀಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಇದರಲ್ಲಿ ಚನಾ ರೈಸ್, ಟೊಮೆಟೊ ರೈಸ್ ಪಾಲಕ್ ಖಿಚ್ಡಿ, ಜೀರಾ ರೈಸ್, ಫ್ರೈಡ್ ರೈಸ್, ಮಲಬಾರ್ ಬಿರಿಯಾನಿ, ತಹರಿ ರೈಸ್ ಮತ್ತು ಮೆಕ್ಸಿಕನ್ ರೈಸ್ ಮುಂತಾದ ಪಾಕವಿಧಾನಗಳಿವೆ. ಇದು ಪಾಕವಿಧಾನಗಳ ಸಂಗ್ರಹವನ್ನು ಒಳಗೊಂಡಿದೆ,
ಮಶ್ರೂಮ್ ರೈಸ್ ವೀಡಿಯೊ ಪಾಕವಿಧಾನ:
ಮಶ್ರೂಮ್ ರೈಸ್ ಪಾಕವಿಧಾನ ಕಾರ್ಡ್:
ಮಶ್ರೂಮ್ ರೈಸ್ ರೆಸಿಪಿ | mushroom rice in kannada | ಮಶ್ರೂಮ್ ಪುಲಾವ್
ಪದಾರ್ಥಗಳು
ರೈಸ್ ಗಾಗಿ:
- 6 ಕಪ್ ನೀರು
- 1 ಟೀಸ್ಪೂನ್ ಎಣ್ಣೆ
- ಟೀಸ್ಪೂನ್ ಉಪ್ಪು
- 1 ಕಪ್ ಬಾಸ್ಮತಿ ಅಕ್ಕಿ, 20 ನಿಮಿಷ ನೆನೆಸಿದ
ಮಶ್ರೂಮ್ ಫ್ರೈಡ್ ರೈಸ್ ಗಾಗಿ:
- 6 ಟೀಸ್ಪೂನ್ ಎಣ್ಣೆ
- 250 ಗ್ರಾಂ ಮಶ್ರೂಮ್, ಹೋಳು
- 1 ಮೆಣಸಿನಕಾಯಿ, ಸೀಳಿದ
- 3 ಬೆಳ್ಳುಳ್ಳಿ, ಸಣ್ಣಗೆ ಕತ್ತರಿಸಿದ
- ½ ಈರುಳ್ಳಿ, ಸಣ್ಣಗೆ ಕತ್ತರಿಸಿದ
- 4 ಟೇಬಲ್ಸ್ಪೂನ್ ಸ್ಪ್ರಿಂಗ್ ಈರುಳ್ಳಿ, ಕತ್ತರಿಸಿದ
- ½ ಕ್ಯಾರೆಟ್, ಕತ್ತರಿಸಿದ
- 5 ಬೀನ್ಸ್, ಕತ್ತರಿಸಿದ
- ½ ಕ್ಯಾಪ್ಸಿಕಂ, ಕತ್ತರಿಸಿದ
- 1 ಟೀಸ್ಪೂನ್ ಉಪ್ಪು
- 2 ಟೇಬಲ್ಸ್ಪೂನ್ ಸೋಯಾ ಸಾಸ್
- 1 ಟೇಬಲ್ಸ್ಪೂನ್ ವಿನೆಗರ್
- 1 ಟೀಸ್ಪೂನ್ ಕಾಳು ಮೆಣಸು / ಪೆಪ್ಪರ್, ಪುಡಿಮಾಡಲಾಗಿದೆ
ಸೂಚನೆಗಳು
- ಮೊದಲನೆಯದಾಗಿ, ದೊಡ್ಡ ಪಾತ್ರೆಯಲ್ಲಿ 6 ಕಪ್ ನೀರು, 1 ಟೀಸ್ಪೂನ್ ಎಣ್ಣೆ ಮತ್ತು ½ ಟೀಸ್ಪೂನ್ ಉಪ್ಪು ತೆಗೆದುಕೊಳ್ಳಿ.
- ನೀರನ್ನು ಕುದಿಸಿ.
- ಈಗ, ಬಾಸ್ಮತಿ ಅಕ್ಕಿಯನ್ನು ಸೇರಿಸಿ (20 ನಿಮಿಷ ನೆನೆಸಿದ). ನೀರು ಚೆನ್ನಾಗಿ ಸೋಸುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ನೆನೆಸಿದ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ.
- ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷ ಅಥವಾ ಅಕ್ಕಿ ಸಂಪೂರ್ಣವಾಗಿ ಬೇಯುವವರೆಗೆ ಕುದಿಸಿ.
- ಅಡುಗೆ ಪ್ರಕ್ರಿಯೆಯನ್ನು ನಿಲ್ಲಿಸಲು ಅಕ್ಕಿಯನ್ನು ಸೋಸಿ ತೆಗೆದು, ಅದಕ್ಕೆ1 ಕಪ್ ತಣ್ಣೀರು ಸುರಿಯಿರಿ. ಸಂಪೂರ್ಣವಾಗಿ ತಂಪಾಗಲು ಬಿಡಿ.
- ಈಗ ದೊಡ್ಡ ಕಡಾಯಿಯಲ್ಲಿ 4 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 250 ಗ್ರಾಂ ಅಣಬೆಗಳನ್ನು ಹಾಕಿ.
- ಎಣ್ಣೆಯನ್ನು ಏಕರೂಪವಾಗಿ ಎಲ್ಲಾ ಅಣಬೆಗಳಿಗೆ ಲೇಪಿಸುವಂತೆ, 2 ನಿಮಿಷಗಳ ಕಾಲ ಬೆರೆಸಿ ಫ್ರೈ ಮಾಡಿ,.
- ಸಿಮ್ಮೆರ್ ನಲ್ಲಿಟ್ಟು, 3 ನಿಮಿಷ ಅಥವಾ ಅಣಬೆಗಳನ್ನು ಚೆನ್ನಾಗಿ ಬೇಯುವವರೆಗೆ ಬೇಯಿಸಿ,.
- ಅಣಬೆಗಳನ್ನು ಜಾಸ್ತಿ ಬೇಯಿಸದೆ, ಪಕ್ಕಕ್ಕೆ ಇರಿಸಿ.
- ಅದೇ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ 1 ಮೆಣಸಿನಕಾಯಿ, 3 ಬೆಳ್ಳುಳ್ಳಿ ಸೇರಿಸಿ.
- ಈಗ ½ ಈರುಳ್ಳಿ, 2 ಟೀಸ್ಪೂನ್ ಸ್ಪ್ರಿಂಗ್ ಈರುಳ್ಳಿ ಸೇರಿಸಿ, ಹೆಚ್ಚಿನ ಉರಿಯಲ್ಲಿ ಸಾಟ್ ಮಾಡಿ.
- ½ ಕ್ಯಾರೆಟ್, 5 ಬೀನ್ಸ್, ½ ಕ್ಯಾಪ್ಸಿಕಂ ಸೇರಿಸಿ, ಹೆಚ್ಚಿನ ಜ್ವಾಲೆಯ ಮೇಲೆ ಫ್ರೈ ಮಾಡಿ.
- ತರಕಾರಿಗಳನ್ನು ಜಾಸ್ತಿ ಬೇಯಿಸಬೇಡಿ.
- ಈಗ ಹುರಿದ ಅಣಬೆಗಳು ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ.
- ಮಧ್ಯದಲ್ಲಿ ಜಾಗವನ್ನು ಮಾಡಿ, 2 ಟೀಸ್ಪೂನ್ ಸೋಯಾ ಸಾಸ್ ಮತ್ತು 1 ಟೀಸ್ಪೂನ್ ವಿನೆಗರ್ ಸೇರಿಸಿ.
- ಚೆನ್ನಾಗಿ ಸೇರಿಸಿ, ಹೆಚ್ಚಿನ ಜ್ವಾಲೆಯ ಮೇಲೆ ಫ್ರೈ ಮಾಡಿ.
- ಬೇಯಿಸಿದ ಅನ್ನ, 1 ಟೀಸ್ಪೂನ್ ಕಾಳು ಮೆಣಸು ಪುಡಿ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
- ಅನ್ನ ಮುರಿಯದೆ ನಿಧಾನವಾಗಿ ಮಿಶ್ರಣ ಮಾಡಿ.
- ಅಂತಿಮವಾಗಿ, ಸ್ಪ್ರಿಂಗ್ ಈರುಳ್ಳಿಯಿಂದ ಅಲಂಕರಿಸಿದ ಮಶ್ರೂಮ್ ಫ್ರೈಡ್ ರೈಸ್ ಅನ್ನು ಆನಂದಿಸಿ.
ಹಂತ ಹಂತದ ಫೋಟೋದೊಂದಿಗೆ ಮಶ್ರೂಮ್ ಪುಲಾವ್ ಹೇಗೆ ತಯಾರಿಸುವುದು:

ಟಿಪ್ಪಣಿಗಳು:
- ಮೊದಲನೆಯದಾಗಿ, ಹೆಚ್ಚು ರುಚಿಯಾದ ರೈಸ್ ಗಾಗಿ ಉತ್ತಮ ಗುಣಮಟ್ಟದ ಅಣಬೆಗಳನ್ನು ಬಳಸಿ.
- ಹಾಗೆಯೇ, ಅನ್ನವನ್ನು ಸಂಪೂರ್ಣವಾಗಿ ತಣ್ಣಗಾಗಿಸಲು ಖಚಿತಪಡಿಸಿಕೊಳ್ಳಿ ಅಥವಾ ಫ್ರೈಡ್ ರೈಸ್ ಅನ್ನು ತಯಾರಿಸಲು ಉಳಿಡಿರುವ ಅನ್ನವನ್ನು ಬಳಸಿ.
- ಫ್ರೈಡ್ ರೈಸ್, ಹೆಚ್ಚು ಪೌಷ್ಟಿಕವಾಗಿಸಲು ನಿಮ್ಮ ಆಯ್ಕೆಯ ತರಕಾರಿಗಳನ್ನು ಸೇರಿಸಿ.
- ಇದಲ್ಲದೆ, ತರಕಾರಿಗಳನ್ನು ಅತಿಯಾಗಿ ಬೇಯಿಸದೆ ಬೆರೆಸಿ.
- ಅಂತಿಮವಾಗಿ, ಮಶ್ರೂಮ್ ಫ್ರೈಡ್ ರೈಸ್ ರೆಸಿಪಿ ವಿವಿಧ ತರಕಾರಿಗಳೊಂದಿಗೆ ತಯಾರಿಸಿದಾಗ ಉತ್ತಮ ರುಚಿ ನೀಡುತ್ತದೆ.