ನಮ್ಮ ಇತರ ಭಾಷೆಗಳು

ಇತರ ಭಾಷೆಗಳ ವೆಬ್ಸೈಟ್ ಆಂಗ್ಲ (English) ಮತ್ತು ಹಿಂದಿ (Hindi)

ಅಪ್ಪಲು ಪಾಕವಿಧಾನ | appalu in kannada | ಆಂಧ್ರ ರವಾ ಅಪ್ಪಲು

ಅಪ್ಪಲು ಪಾಕವಿಧಾನ | ಆಂಧ್ರ ರವಾ ಅಪ್ಪಲು | ಸಿಹಿ ರವಾ ಅಪ್ಪಮ್ ನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ರವಾ ಅಥವಾ ಸೂಜಿ ಆಧಾರಿತ ಸಿಹಿತಿಂಡಿಗಳು ಅಥವಾ ಡೆಸರ್ಟ್ ಪಾಕವಿಧಾನಗಳು ಭಾರತದಾದ್ಯಂತ ತುಂಬಾ ಸಾಮಾನ್ಯವಾಗಿದೆ. ಇದು ಮುಖ್ಯವಾಗಿ ರವೆ ಮತ್ತು ಸಕ್ಕರೆ / ಬೆಲ್ಲಗಳ ಸಂಯೋಜನೆಯನ್ನು ಆಧರಿಸಿದೆ, ಇದು ವಿವಿಧ ರೀತಿಯ ಆಕಾರಗಳನ್ನು ಒಳ ಪಟ್ಟಿರುತ್ತವೆ. ಅಂತಹ ಒಂದು ಸರಳ ಮತ್ತು ಸುಲಭವಾದ ರವಾ ಆಂಧ್ರ ಅಪ್ಪಲು ಸ್ವೀಟ್, ರವೆಯಿಂದ ತನ್ನ ಗರಿಗರಿಯಾದ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ ಮತ್ತು ಸೌಮ್ಯವಾದ ಸಿಹಿತಿಂಡಿಗೆ ಹೆಸರುವಾಸಿಯಾಗಿದೆ.

ಸಾಂಬಾರ್ ರೈಸ್ ರೆಸಿಪಿ | sambar rice in kannada | ಸಾಂಬಾರ್ ಸದಮ್

ಸಾಂಬರ್ ರೈಸ್ ರೆಸಿಪಿ | ಸಾಂಬರ್ ಸದಮ್ | ಸಾಂಬರ್ ಅನ್ನ ಮತ್ತು ಮೊಸರನ್ನ ಕಾಂಬೋ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಸಾಂಬಾರ್ ಮಸಾಲಾ ಅಥವಾ ಮಸಾಲೆಗಳ ಸಂಯೋಜನೆಯನ್ನು ತಯಾರಿಸಲಾಗುತ್ತದೆ ಮತ್ತು ಇದನ್ನು ಮಸಾಲೆಯುಕ್ತ ಮತ್ತು ಸುವಾಸನೆ ಉಳ್ಳ ಲೆಂಟಿಲ್ ಸೂಪ್ ತಯಾರಿಸಲು ಬಳಸಲಾಗುತ್ತದೆ. ಇದು ಅಂತಿಮವಾಗಿ ಭೋಜನಕ್ಕೆ ಬಿಸಿ ಮತ್ತು ಬೇಯಿಸಿದ ಅನ್ನದೊಂದಿಗೆ ಮಿಶ್ರಣ ಮಾಡಿ ಬಡಿಸಲಾಗುತ್ತದೆ. ಮೂಲಭೂತವಾಗಿ ಇದು 2 ಹಂತದ ಪ್ರಕ್ರಿಯೆ ಆದರೆ ಸಂಕೀರ್ಣವಾದದ್ದು ಅಲ್ಲ. ಆದರೂ ಇದು ರೈಸ್, ಸಾಂಬಾರ್ ಮಸಾಲೆಗಳು ಮತ್ತು ತರಕಾರಿಗಳೊಂದಿಗೆ ಒಂದು ಪಾಟ್ ಮೀಲ್ ಆಗುತ್ತದೆ.

ಕ್ರಿಸ್ಪಿ ವೆಜ್ ಸ್ಟಾರ್ಟರ್ ರೆಸಿಪಿ | crispy veg starter in kannada

ಕ್ರಿಸ್ಪಿ ವೆಜ್ ಸ್ಟಾರ್ಟರ್ ಪಾಕವಿಧಾನ | ರೆಸ್ಟೋರೆಂಟ್ ಶೈಲಿ ವೆಜ್ ಕ್ರಿಸ್ಪಿ | ವೆಜ್ ಕ್ರಿಸ್ಪಿ ಸ್ಟಾರ್ಟರ್ ನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಎಲ್ಲಾ ವಯಸ್ಸಿನ ಗುಂಪುಗಳಲ್ಲಿ ಸ್ನ್ಯಾಕ್ ಅಥವಾ ಸ್ಟಾರ್ಟರ್ ಪಾಕವಿಧಾನವು ಅತ್ಯಂತ ಬೇಡಿಕೆಯ ಪಾಕವಿಧಾನಗಳಲ್ಲಿ ಒಂದಾಗಿದೆ. ಇದು ಸರಳ ಸಂಜೆಯ ತಿಂಡಿಯಾಗಿರಬಹುದು ಅಥವಾ ಹಬ್ಬಗಳಿರಬಹುದು, ಗರಿಗರಿಯಾದ ಸ್ಟಾರ್ಟರ್ ನ ಬೇಡಿಕೆಯು ಯಾವಾಗಲೂ ಹೆಚ್ಚು. ಅಂತಹ ಒಂದು ಸುಲಭ ಮತ್ತು ಸರಳವಾದ ಸ್ಟಾರ್ಟರ್ ಪಾಕವಿಧಾನವು ಕ್ರಿಸ್ಪಿ ವೆಜ್ ಸ್ಟಾರ್ಟರ್ ಆಗಿದ್ದು, ಕಬಾಬ್ ನ ಆಕಾರ ಮತ್ತು ವಿನ್ಯಾಸವನ್ನು ಹೊಂದಿದೆ ಆದರೆ ವೆಜ್ ಕಟ್ಲೆಟ್ ನ ರುಚಿ ಹೊಂದಿದೆ.

ಆಲೂಗಡ್ಡೆ ಮುರುಕು ರೆಸಿಪಿ | potato murukku in kannada | ಆಲೂ ಚಕ್ಲಿ

ಆಲೂಗಡ್ಡೆ ಮುರುಕು ಪಾಕವಿಧಾನ | ಆಲೂ ಚಕ್ಲಿ ಪಾಕವಿಧಾನ | ಆಲೂ ಕಿ ಚಕ್ಲಿಯ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ನಿರ್ದಿಷ್ಟವಾಗಿ ಚಕ್ಲಿ ಅಥವಾ ಮುರುಕ್ಕು ಪಾಕವಿಧಾನಗಳು ಬಹಳ ಸಾಮಾನ್ಯವಾಗಿದೆ. ಇವುಗಳನ್ನು ಸಾಮಾನ್ಯವಾಗಿ ಅಕ್ಕಿ ಮತ್ತು ಉದ್ದಿನ ಬೇಳೆ ಕಾಂಬೊದಿಂದ ತಯಾರಿಸಲಾಗುತ್ತದೆ ಆದರೆ ವಿವಿಧ ಸುವಾಸನೆಗಳಿಗಾಗಿ ಇತರ ವಿಧದ ಹಿಟ್ಟನ್ನು ಸಹ ಸೇರಿಸಬಹುದು. ಇನ್ನು ತರಕಾರಿ ಪ್ಯೂರೀಯೊಂದಿಗೆ ಸಹ ತಯಾರಿಸಬಹುದು ಮತ್ತು ಆಲೂಗಡ್ಡೆ ಮುರುಕು ಅಥವಾ ಆಲೂ ಕಿ ಚಕ್ಲಿ ಅಂತಹ ಸರಳ ಮತ್ತು ಜನಪ್ರಿಯ ಎಣ್ಣೆಯಲ್ಲಿ ಹುರಿದ ಸ್ನ್ಯಾಕ್ ಪಾಕವಿಧಾನ.

ಅವಲಕ್ಕಿ ರೊಟ್ಟಿ ರೆಸಿಪಿ | avalakki rotti in kannada | ಪೋಹಾ ರೊಟ್ಟಿ

ಅವಲಕ್ಕಿ ರೊಟ್ಟಿ ಪಾಕವಿಧಾನ | ಪೋಹಾ ರೊಟ್ಟಿ | ಅವಲಕ್ಕಿ ಅಕ್ಕಿ ರೊಟ್ಟಿ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಉಪಹಾರ ಪಾಕವಿಧಾನಗಳು ಯಾವಾಗಲೂ ನಮ್ಮಲ್ಲಿ ಬಹುಪಾಲು ದಿನದ ಪ್ರಮುಖ ಊಟಗಳಲ್ಲಿ ಒಂದಾಗಿದೆ. ಇದನ್ನು ತಯಾರಿಸುವುದಕ್ಕಿಂತ ಹೆಚ್ಚಿನ ಸಮಯವನ್ನು ವಿಶ್ಲೇಷಿಸಲು ಮತ್ತು ಏನು ತಯಾರಿಸವುಬೇಕೆಂಬುವುದನ್ನು ಕುರಿತು ಯೋಚಿಸುತ್ತೇವೆ. ನಮ್ಮ ಮುಂಜಾನೆಗೆ ಹೊಸ, ವಿಭಿನ್ನ, ಸುಲಭ ಮತ್ತು ಆರೋಗ್ಯಕರ ಪಾಕವಿಧಾನಗಳನ್ನು ನಾವು ಬಯಸುತ್ತೇವೆ. ಆ ಬೇಡಿಕೆಯನ್ನು ಪೂರೈಸಲು, ನಾನು ಅಕ್ಕಿ ಹಿಟ್ಟು ಮತ್ತು ಪೋಹಾದಿಂದ ತಯಾರಿಸಿದ ಸರಳ ಮತ್ತು ತ್ವರಿತ ಉಪಹಾರ ಪಾಕವಿಧಾನವನ್ನು ಪ್ರಸ್ತುತಪಡಿಸುತ್ತಿದ್ದೇನೆ, ಇದನ್ನು ತೆಂಗಿನ ಚಟ್ನಿಯೊಂದಿಗೆ ಆನಂದಿಸಬಹುದು.

ಕಾರ್ನ್ ಪ್ಯಾನ್ಕೇಕ್ ರೆಸಿಪಿ | corn pancake in kannada

ಕಾರ್ನ್ ಪ್ಯಾನ್ಕೇಕ್ ರೆಸಿಪಿ | ಸ್ವೀಟ್ ಕಾರ್ನ್ ನ್ಯೂಟ್ರಿ ಪ್ಯಾನ್ಕೇಕ್ ಅಥವಾ ರೋಸ್ಟಿ | ವಿಸ್ವೀಟ್ ಕಾರ್ನ್ ಪ್ಯಾನ್ಕೇಕ್ ನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಪ್ಯಾನ್ಕೇಕ್ ಪಾಕವಿಧಾನಗಳು ನಮಗೆ ಬಹುಪಾಲು ಆರೋಗ್ಯಕರ ಮತ್ತು ಸುಲಭ ಉಪಹಾರ ಊಟಗಳಲ್ಲಿ ಒಂದಾಗಿದೆ. ಇದು ಮೂಲಭೂತವಾಗಿ  ದಕ್ಷಿಣ ಭಾರತದ ದೋಸೆ ಅಥವಾ ಉತ್ತಪ್ಪಮ್ ಗೆ  ಸೋದರಸಂಬಂಧಿಯಾಗಿರುತ್ತದೆ, ಆದರೆ ಇದರಲ್ಲಿ ವಿವಿಧ ರೀತಿಯ ತರಕಾರಿಗ ಹಾಗೂ ಹಿಟ್ಟುಗಳ ಸಂಯೋಜನೆಯಿಂದ ತಯಾರಿಸಲಾಗುತ್ತದೆ. ಅಂತಹ ಒಂದು ಸುಲಭ ಮತ್ತು ಸರಳ ಪ್ಯಾನ್ಕೇಕ್ ಪಾಕವಿಧಾನ ಸಿಹಿ ಕಾರ್ನ್ ನ್ಯೂಟ್ರಿ ಪ್ಯಾನ್ಕೇಕ್ ಆಗಿದ್ದು ತನ್ನ ಸರಳತೆ, ರುಚಿ ಮತ್ತು ಆರೋಗ್ಯದ ಅಂಶಗಳಿಗೆ ಹೆಸರುವಾಸಿಯಾಗಿದೆ.

STAY CONNECTED

12,680,889ಅಭಿಮಾನಿಗಳುಇಷ್ಟ
3,357,073ಅನುಯಾಯಿಗಳುಅನುಸರಿಸಿ
6,750,008ಚಂದಾದಾರರುಚಂದಾದಾರರಾಗಬಹುದು