ನಮ್ಮ ಇತರ ಭಾಷೆಗಳು

ಇತರ ಭಾಷೆಗಳ ವೆಬ್ಸೈಟ್ ಆಂಗ್ಲ (English) ಮತ್ತು ಹಿಂದಿ (Hindi)

ಗೋಬಿ ಫ್ರೈಡ್ ರೈಸ್ ರೆಸಿಪಿ | gobi fried rice in kannada

ಗೋಬಿ ಫ್ರೈಡ್ ರೈಸ್ ರೆಸಿಪಿ | ಹೂಕೋಸಿನ ಫ್ರೈಡ್ ರೈಸ್ | ಗೋಬಿ ಮಂಚೂರಿಯನ್ ರೈಸ್ ನ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಭಾರತೀಯ ಬೀದಿ ಆಹಾರ ಪಾಕವಿಧಾನಗಳು ವಿಶೇಷವಾಗಿ ಕಾಸ್ಮೋಪಾಲಿಟನ್ ನಗರಗಳಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಇಲ್ಲಿ 2 ಪಾಕವಿಧಾನಗಳನ್ನು ಸಂಯೋಜಿಸಿ, ಅದನ್ನು ಬೆರೆಸುವ ಮೂಲಕ ಇನ್ನೊಂದು ರುಚಿಕರ ಪಾಕವಿಧಾನವನ್ನು ತಯಾರಿಸಲಾಗಿದೆ. ಅಂತಹ ಒಂದು ಸಮ್ಮಿಳನ ಮತ್ತು ಅನನ್ಯವಾಗಿ ತಯಾರಿಸಲಾದ ಆಹ್ಲಾದಕರ ಪಾಕವಿಧಾನವೇ ಈ ಗೋಬಿ ಫ್ರೈಡ್ ರೈಸ್ ರೆಸಿಪಿಯಾಗಿದ್ದು, ಜನಪ್ರಿಯ ಚಿಕನ್ ಫ್ರೈಡ್ ರೈಸ್ ಅನ್ನು ಹೋಲುತ್ತದೆ.

ವೆಜಿಟೇಬಲ್ ರೈಸ್ ರೆಸಿಪಿ | vegetable rice in kannada | ಮಿಕ್ಸ್ ವೆಜ್ ರೈಸ್

ವೆಜಿಟೇಬಲ್ ರೈಸ್ ಪಾಕವಿಧಾನ | ಮಿಕ್ಸ್ ವೆಜ್ ರೈಸ್ | ಇನ್ಸ್ಟಂಟ್ ಒನ್ ಪಾಟ್ ವೆಜಿಟಬಲ್ ರೈಸ್ ನ ಹಂತ ಹಂತವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಪುಲಾವ್ ಅಥವಾ ರೈಸ್ ಪಾಕವಿಧಾನಗಳು ಅನೇಕ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಊಟ ಡಬ್ಬದ ಪಾಕವಿಧಾನಗಳಾಗಿವೆ. ತರಕಾರಿಗಳು ಅಥವಾ ಇತರ ಸಾಮಗ್ರಿಗಳೊಂದಿಗೆ ತಯಾರಿಸಿದ ಅನೇಕ ಫ್ಲೇವರ್ ಮತ್ತು ಪರಿಮಳಯುಕ್ತ ಭಾರತೀಯ ಪುಲಾವ್ ಪಾಕವಿಧಾನಗಳಿವೆ. ಆದಾಗ್ಯೂ, ಈ ಪಾಕವಿಧಾನ ವಿಶಿಷ್ಟವಾಗಿದೆ ಮತ್ತು ವೆಜಿಟೇಬಲ್ ರೈಸ್ ಪಾಕವಿಧಾನ ಎಂದು ಕರೆಯಲ್ಪಡುವ ಇದು, ತರಕಾರಿ ಹಾಗೂ ಮಸಾಲೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ.

ಇನ್ಸ್ಟಂಟ್ ಬಿರಿಯಾನಿ ರೆಸಿಪಿ | instant biryani in kannada | ವೆಜ್ ಬಿರಿಯಾನಿ

ಇನ್ಸ್ಟಂಟ್ ಬಿರಿಯಾನಿ ಪಾಕವಿಧಾನ | ತ್ವರಿತ ವೆಜ್ ಬಿರಿಯಾನಿ | ಸುಲಭ ವೆಜ್ ಬಿರಿಯಾನಿಯ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ತ್ವರಿತ ಬಿರಿಯಾನಿಯ ಈ ಪಾಕವಿಧಾನವು ವೆಜ್ ಬಿರಿಯಾನಿಯ ಬಗ್ಗೆ ಬಲವಾದ ಹಂಬಲವನ್ನು ಹೊಂದಿರುವವರಿಗೆ ಆದರೆ ಅದನ್ನು ತಯಾರಿಸಲು ಸಮಯ ಇಲ್ಲದವರಿಗೆ ಸೂಕ್ತವಾಗುತ್ತದೆ. ನಿಸ್ಸಂದೇಹವಾಗಿ ರುಚಿಯಲ್ಲಿ, ಸಾಂಪ್ರದಾಯಿಕ ವೆಜ್ ದಮ್ ಬಿರಿಯಾನಿಯ ಎದುರು ಬೇರೆ ಯಾವುದೇ ರೈಸ್ ಪಾಕವಿಧಾನವಿಲ್ಲ. ಆದರೆ ಅದರ ತಯಾರಿಕೆಯು ಸಮಯ ತೆಗೆದುಕೊಳ್ಳುತ್ತದೆ ಮತ್ತು ಆಯಾಸಗೊಳಿಸುತ್ತದೆ. ಇದಕ್ಕೆ ಪರಿಹಾರವೆಂದರೆ ಈ ತ್ವರಿತ ಬಿರಿಯಾನಿ ಪಾಕವಿಧಾನ.

ಕರಿ ಲೀವ್ಸ್ ರೈಸ್ ರೆಸಿಪಿ | curry leaves rice in kannada | ಕರಿಬೇವು...

ಕರಿ ಲೀವ್ಸ್ ರೈಸ್ ಪಾಕವಿಧಾನ | ಕರುವೆಪ್ಪಿಲೈ ಸದಮ್ | ಕರಿಬೇವು ಚಿತ್ರಾನ್ನದ ಹಂತ ಹಂತವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಊಟ ಡಬ್ಬದ ಪಾಕವಿಧಾನಗಳನ್ನು ತಯಾರಿಸಲು ನನಗೆ ಹೆಚ್ಚು ವಿನಂತಿಗಳು ಬರುತ್ತವೆ. ಹೆಚ್ಚಿನ ಓದುಗರು ರುಚಿ ಹಾಗೂ ಪೋಷಕಾಂಶ ಉಳ್ಳ, ಸುಲಭ ಮತ್ತು ತ್ವರಿತವಾದ ಪಾಕವಿಧಾನವನ್ನು ಕೇಳುತ್ತಾರೆ. ಕರಿಬೇವಿನ ಎಲೆಗಳಿಂದ ಮಾಡಿದ ನಮ್ಮದೇ ದಕ್ಷಿಣ ಭಾರತದ ಪಾಕಪದ್ಧತಿಯನ್ನು ಕರಿ ಲೀವ್ಸ್ ರೈಸ್ ಪಾಕವಿಧಾನ ಎಂದು ಕರೆಯಲಾಗುತ್ತದೆ.

ಗೀ ರೈಸ್ ರೆಸಿಪಿ | ghee rice in kannada | ನೈ ಚೊರು |...

ಗೀ ರೈಸ್ ಪಾಕವಿಧಾನ | ನೈ ಚೊರು ಪಾಕವಿಧಾನ | ತುಪ್ಪ ಭಾತ್ ನ ಹಂತ ಹಂತವಾದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಫ್ಲೇವರ್ ಉಳ್ಳ ಅಕ್ಕಿ ಪಾಕವಿಧಾನಗಳು ಭಾರತದಲ್ಲಿ ಬಹಳ ಸಾಮಾನ್ಯವಾಗಿದೆ ಮತ್ತು ಇದನ್ನು ಅನೇಕ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ. ಕೆಲವು ಅಕ್ಕಿ ಪಾಕವಿಧಾನಗಳು ಒಂದು ಪಾಟ್ ಊಟವಾಗಿದ್ದು ಅದಕ್ಕೆ ಯಾವುದೇ ಸೈಡ್ ಡಿಶ್ ನ ಅಗತ್ಯವಿರುವುದಿಲ್ಲ, ಆದರೆ ಕೆಲವು ಫ್ಲೇವರ್ ಉಳ್ಳ ಪಾಕವಿಧಾನಗಳಿಗೆ ಸೈಡ್ ಡಿಶ್ ಬೇಕಾಗಬಹುದು. ಅಂತಹ ಪ್ರಸಿದ್ಧ ದಕ್ಷಿಣ ಭಾರತದ ಫ್ಲೇವರ್ ಉಳ್ಳ ರೈಸ್ ಪಾಕವಿಧಾನವೆಂದರೆ ಅದು ಗೀ ರೈಸ್ ಪಾಕವಿಧಾನ ಅಥವಾ ಹಬ್ಬದ ಸಮಯದಲ್ಲಿ ತಯಾರಿಸುವ ನೈಚೊರು.

ಬಿರಿಯಾನಿ ರೈಸ್ ರೆಸಿಪಿ ಹೇಗೆ ಮಾಡುವುದು | biriyani rice in kannada

ಬಿರಿಯಾನಿ ರೈಸ್ ಪಾಕವಿಧಾನವನ್ನು ಹೇಗೆ ಮಾಡುವುದು | ಫ್ರೈಡ್ ರೈಸ್ ಮತ್ತು ಪುಲಾವ್‌ಗೆ ಜಿಗುಟಾಗದ ಅಕ್ಕಿ ತಯಾರಿಸುವುದು ಹೇಗೆ ಎಂಬ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಅನ್ನ ಬೇಯಿಸುವಿದು ಯಾವುದೇ ಕಲೆ ಅಥವಾ ರಾಕೆಟ್ ವಿಜ್ಞಾನವಲ್ಲ ಮತ್ತು ಇದನ್ನು ಬಹುತೇಕ ಎಲ್ಲರೂ ಬೇಯಿಸಬಹುದು. ಆದಾಗ್ಯೂ, ವಿವಿಧ ರೀತಿಯ ಭಾರತೀಯ ಪಾಕವಿಧಾನಕ್ಕಾಗಿ ಪರಿಪೂರ್ಣವಾದ ಜಿಗುಟಾಗದ ಅನ್ನವನ್ನು ಬೇಯಿಸಲು ನಿಮಗೆ ಹೆಚ್ಚುವರಿ ಶ್ರಮ ಬೇಕಾಗಬಹುದು. ಅಂತಹ ಒಂದು ಜನಪ್ರಿಯ ರೈಸ್ ಆಧಾರಿತ ಪಾಕವಿಧಾನವು ಬಿರಿಯಾನಿಯಾಗಿದ್ದು, ಈ ಜಿಗುಟಾಗದ ಅನ್ನವನ್ನು ಪಡೆಯಲು ಹೆಚ್ಚುವರಿ ಕಾಳಜಿ ಮತ್ತು ಮುನ್ನೆಚ್ಚರಿಕೆ ಅಗತ್ಯವಿದೆ.

STAY CONNECTED

12,680,889ಅಭಿಮಾನಿಗಳುಇಷ್ಟ
3,357,073ಅನುಯಾಯಿಗಳುಅನುಸರಿಸಿ
6,750,008ಚಂದಾದಾರರುಚಂದಾದಾರರಾಗಬಹುದು