ನಮ್ಮ ಇತರ ಭಾಷೆಗಳು

ಇತರ ಭಾಷೆಗಳ ವೆಬ್ಸೈಟ್ ಆಂಗ್ಲ (English) ಮತ್ತು ಹಿಂದಿ (Hindi)

ಕರಾಚಿ ಹಲ್ವಾ ರೆಸಿಪಿ | karachi halwa in kannada | ಕಾರ್ನ್ ಫ್ಲೋರ್...

ಕರಾಚಿ ಹಲ್ವಾ ಪಾಕವಿಧಾನ | ಕಾರ್ನ್ ಫ್ಲೋರ್ ಹಲ್ವಾ | ಬಾಂಬೆ ಕರಾಚಿ ಹಲ್ವಾದ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಹಲ್ವಾ ಪಾಕವಿಧಾನಗಳು ಅತ್ಯಂತ ಜನಪ್ರಿಯವಾಗಿವೆ ಮತ್ತು ಅನೇಕ ಭಾರತೀಯ ಮನೆಗಳಲ್ಲಿ ತಯಾರಿಸಿದ ಸಾಮಾನ್ಯ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ, ಇದನ್ನು ಸೀಸನಲ್ ಹಣ್ಣು ಮತ್ತು ಬೇಳೆಕಾಳುಗಳೊಂದಿಗೆ ತಯಾರಿಸಲಾಗುತ್ತದೆ. ಈ ಪದಾರ್ಥಗಳನ್ನು ಬಳಸುವುದರಿಂದ ಅದು ಚೀವಿ ಮತ್ತು ಮೃದುವಾದ ಸ್ಥಿರತೆಯನ್ನು ನೀಡುತ್ತದೆ. ಆದರೆ ಇದನ್ನು ಬೇರೆ ಬೇರೆ ಹಿಟ್ಟುಗಳಿಂದ ಕೂಡ ತಯಾರಿಸಬಹುದು. ಈ ಕಾರ್ನ್‌ಫ್ಲೋರ್ ಹಲ್ವಾವು ಅಂತಹ ಸುಲಭ ಮತ್ತು ಸರಳವಾದ ಹಲ್ವಾ ಪಾಕವಿಧಾನವಾಗಿದ್ದು ಅದು ಅದರದೇ ಹೊಳಪು ಮತ್ತು ಚೀವಿ ವಿನ್ಯಾಸವನ್ನು ನೀಡುತ್ತದೆ.

ಆಲೂಗೆಡ್ಡೆ ಲಾಲಿಪಾಪ್ ರೆಸಿಪಿ | potato lollipop in kannada

ಆಲೂಗೆಡ್ಡೆ ಲಾಲಿಪಾಪ್ ಪಾಕವಿಧಾನ | ಕ್ರಿಸ್ಪಿ ಆಲೂ ಲಾಲಿಪಾಪ್ | ಪೊಟಾಟೋ ಲಾಲಿಪಾಪ್ ನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಆಲೂಗೆಡ್ಡೆ ಆಧಾರಿತ ತಿಂಡಿಗಳು ಭಾರತದಾದ್ಯಂತ ಬಹಳ ಸಾಮಾನ್ಯವಾಗಿದೆ, ಮತ್ತು ಇದನ್ನು ಅಸಂಖ್ಯಾತ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ, ಇದನ್ನು ಕಟ್ಲೆಟ್ ಅಥವಾ ಪ್ಯಾಟೀಸ್ ಆಗಿ ತಯಾರಿಸಲಾಗುತ್ತದೆ. ಆದರೆ ಇದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಮಾಂಸದ ಪರ್ಯಾಯವಾಗಿ ಅದೇ ರುಚಿಯೂ ಬರುವಂತೆ ತಯಾರಿಸಬಹುದು. ಅಂತಹ ಒಂದು ಮಾಂಸ ಪರ್ಯಾಯವೆಂದರೆ ಆಲೂಗೆಡ್ಡೆ ಲಾಲಿಪಾಪ್ ಪಾಕವಿಧಾನ. ಅದರ ವಿನ್ಯಾಸ, ಗರಿಗರಿಯಾದ, ಮಸಾಲೆ ಹಾಗೂ ಖಾರದ ಸಂಯೋಜನೆಯ ರುಚಿಗೆ ಹೆಸರುವಾಸಿಯಾಗಿದೆ.

ಪ್ರನ್ಹರಾ ರೆಸಿಪಿ | pranhara in kannada | ಬೆಂಗಾಲಿ ಕಚ ಗೊಲ್ಲಾ

ಪ್ರನ್ಹರಾ ಪಾಕವಿಧಾನ | ಬೆಂಗಾಲಿ ಕಚ ಗೊಲ್ಲಾ | ಬಂಗಾಲಿ ಮಿಶ್ಟಿ ಪ್ರನ್ಹರಾದ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಬೆಂಗಾಲಿ ಪಾಕಪದ್ಧತಿಯು ಅದರ ಸಿಹಿ ಪಾಕವಿಧಾನಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚು ಬಳಸುವುದಕ್ಕೆ ಹೆಸರುವಾಸಿಯಾಗಿದೆ. ಅತ್ಯಂತ ಸಾಮಾನ್ಯವಾದ ಸಿಹಿತಿಂಡಿಗಳು ರಸ್ಗುಲ್ಲಾ ಅಥವಾ ರಸ್ಮಲೈ, ಇದನ್ನು ಮತ್ತೆ ಚೆನ್ನಾದಿಂದ ತಯಾರಿಸಲಾಗುತ್ತದೆ, ಆದರೆ ಇಂತಹ ಜನಪ್ರಿಯವಾದವುಗಳಿಗೆ ಸೂಕ್ಷ್ಮ ವ್ಯತ್ಯಾಸವನ್ನು ಪರಿಚಯಿಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಅಂತಹ ಒಂದು ಸರಳ ಮತ್ತು ಸುಲಭವಾದ ಸಿಹಿ ಪಾಕವಿಧಾನವೆಂದರೆ ಪ್ರನ್ಹರಾ ರೆಸಿಪಿ ಅಥವಾ ಬೆಂಗಾಲಿ ಕಚ ಗೊಲ್ಲಾ, ಇದು ರೊಸೊಗುಲ್ಲಾ ಸಿಹಿಗೆ ಹೋಲುತ್ತದೆ.

ರೋಟಿ ಕೆ ಲಡ್ಡು ರೆಸಿಪಿ | roti ke laddu in kannada | ಉಳಿದ...

ರೊಟ್ಟಿ ಕೆ ಲಡ್ಡು ಪಾಕವಿಧಾನ | ಬಸಿ ಚುರ್ಮಾ ಚಪಾತಿ ಲಡೂ | ಉಳಿದ ಚಪಾತಿಯ ಲಾಡುವಿನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಲಾಡೂ ಪಾಕವಿಧಾನಗಳು ಭಾರತದಾದ್ಯಂತ ಬಹಳ ಸಾಮಾನ್ಯವಾಗಿದೆ ಮತ್ತು ಇದನ್ನು ಭಾರತದಾದ್ಯಂತ ಅಸಂಖ್ಯಾತ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ಹಬ್ಬದ ಸಂದರ್ಭಗಳಲ್ಲಿ ಇವುಗಳನ್ನು ಸಾಮಾನ್ಯವಾಗಿ ತಯಾರಿಸಲಾಗುತ್ತದೆ ಮತ್ತು ಬಡಿಸಲಾಗುತ್ತದೆ. ಆದರೆ ದಿನನಿತ್ಯದ ಊಟಕ್ಕೂ ಸಹ ನಾವು ಇದನ್ನು ತಯಾರಿಸಬಹುದು. ಅಂತಹ ಒಂದು ಸರಳ ಮತ್ತು ನವೀನ ಭಾರತೀಯ ಸಿಹಿ ಪಾಕವಿಧಾನವು, ಉಳಿದಿರುವ ರೋಟಿಗಳಿಂದ ತಯಾರಿಸಲಾದ ರೋಟಿ ಕೆ ಲಡ್ಡು ಪಾಕವಿಧಾನ ಅಥವಾ ಬಸಿ ಚುರ್ಮಾ ಚಪಾತಿ ಲಡ್ಡು. ಇದರ ಕುರುಕುಲಾದ ವಿನ್ಯಾಸಕ್ಕೆ ಇದು ಹೆಸರುವಾಸಿಯಾಗಿದೆ.

ಕಾರ್ನ್ ಚೀಸ್ ಬಾಲ್ ರೆಸಿಪಿ | corn cheese balls in kannada

ಕಾರ್ನ್ ಚೀಸ್ ಬಾಲ್ ರೆಸಿಪಿ | ಕ್ರಿಸ್ಪಿ ಕಾರ್ನ್ ಚೀಸ್ ಬಾಲ್ಸ್ | ಸ್ವೀಟ್ ಕಾರ್ನ್ ಮತ್ತು ವೆಜ್ ಚೀಸ್ ಬಾಲ್ಸ್ ನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಚೀಸ್ ಆಧಾರಿತ ಪಾಕವಿಧಾನಗಳು ಮತ್ತು ತಿಂಡಿಗಳು ಭಾರತದಾದ್ಯಂತ ಬಹಳ ಸಾಮಾನ್ಯವಾಗಿದೆ. ಇವುಗಳನ್ನು ಖಾದ್ಯಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಬಳಸಬಹುದು, ಅದು ಖಾದ್ಯಕ್ಕೆ ಕೆನೆ ರುಚಿಯನ್ನು ನೀಡುತ್ತದೆ. ಅಂತಹ ಅತ್ಯಂತ ಜನಪ್ರಿಯವಾದ ಸಾಮಾನ್ಯ ಖಾದ್ಯ ಪಾಕವಿಧಾನವೆಂದರೆ ಕಾರ್ನ್ ಚೀಸ್ ಬಾಲ್ ರೆಸಿಪಿ. ಇಲ್ಲಿ ಹೊರಭಾಗದಲ್ಲಿ ಗರಿಗರಿಯಾದ ವಿನ್ಯಾಸ ಮತ್ತು ಒಳಭಾಗದಲ್ಲಿ ಬಾಯಲ್ಲಿ ನೀರೂರಿಸುವ ರುಚಿಗೆ ಹೆಸರುವಾಸಿಯಾಗಿದೆ.

30 ನಿಮಿಷಗಳಲ್ಲಿ ಚೀಸ್ ರೆಸಿಪಿ | cheese in 30 minutes in kannada

30 ನಿಮಿಷಗಳಲ್ಲಿ ಚೀಸ್ ಪಾಕವಿಧಾನ | ಹೋಂ ಮೇಡ್ ಫ್ರೆಶ್ ಚೀಸ್ | ಮನೆಯಲ್ಲಿ ಮೋಝರೆಲ್ಲಾ ಚೀಸ್ ತಯಾರಿಸುವುದು ಹೇಗೆ ಎಂಬುವುದರ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಪನೀರ್ ಅಥವಾ ಕಾಟೇಜ್ ಚೀಸ್ ಭಾರತದಾದ್ಯಂತ ಬಹಳ ಸಾಮಾನ್ಯವಾದ ಘಟಕಾಂಶವಾಗಿದೆ ಮತ್ತು ಇದನ್ನು ವಿಭಿನ್ನ ಪಾಕವಿಧಾನಗಳಿಗೆ ಬಳಸಲಾಗುತ್ತದೆ. ಇನ್ನೂ ವಿವಿಧ ರೀತಿಯ ಚೀಸ್ ಗಳನ್ನು ವಿವಿಧ ರೀತಿಯ ಭಾರತೀಯ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ. ಹಾಗೂ ಇವುಗಳನ್ನು ಸಾಮಾನ್ಯವಾಗಿ ಅಂಗಡಿಯಲ್ಲಿ ಖರೀದಿಸಲಾಗುತ್ತದೆ. ಅಂತಹ ಒಂದು ಜನಪ್ರಿಯ ಚೀಸ್ ಎಂದರೆ ಅದು ಮೋಝರೆಲ್ಲಾ ಚೀಸ್. ಇದು ವಿವಿಧೋದ್ದೇಶ ಚೀಸ್ ಆಗಿದ್ದು ಅಸಂಖ್ಯಾತ ಪಾಕವಿಧಾನಗಳಲ್ಲಿ ಬಳಸಬಹುದು.

STAY CONNECTED

12,680,889ಅಭಿಮಾನಿಗಳುಇಷ್ಟ
3,357,073ಅನುಯಾಯಿಗಳುಅನುಸರಿಸಿ
6,750,008ಚಂದಾದಾರರುಚಂದಾದಾರರಾಗಬಹುದು