ನಮ್ಮ ಇತರ ಭಾಷೆಗಳು

ಇತರ ಭಾಷೆಗಳ ವೆಬ್ಸೈಟ್ ಆಂಗ್ಲ (English) ಮತ್ತು ಹಿಂದಿ (Hindi)

ಟೊಮೆಟೊ ಬಾತ್ ರೆಸಿಪಿ | tomato bath in kannada | ಟೊಮೆಟೊ ಪುಲಾವ್

ಟೊಮೆಟೊ ಭಾತ್ ಪಾಕವಿಧಾನ | ಟೊಮೆಟೊ ಪುಲಾವ್ ಪಾಕವಿಧಾನ | ಟೊಮೆಟೊ ರೈಸ್ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಪುಲಾವ್ ಅಥವಾ ಭಾತ್ ನ ಪಾಕವಿಧಾನಗಳು ದಕ್ಷಿಣ ಭಾರತದಾದ್ಯಂತ ಅಥವಾ ವಿಶೇಷವಾಗಿ ಕರ್ನಾಟಕ ಪಾಕಪದ್ಧತಿಯಲ್ಲಿ ಬಹಳ ಸಾಮಾನ್ಯವಾಗಿದೆ. ಇದು ವಿವಿಧೋದ್ದೇಶ ಪಾಕವಿಧಾನವಾಗಿದೆ ಮತ್ತು ಇದನ್ನು ಮಧ್ಯಾಹ್ನ  ಹಾಗೂ ರಾತ್ರಿಯ ಭೋಜನ ಎರಡಕ್ಕೂ ತಯಾರಿಸಲಾಗುತ್ತದೆ. ಕನ್ನಡ ಪಾಕಪದ್ಧತಿಯಿಂದ ಅಂತಹ ಸರಳ ಮತ್ತು ಸುವಾಸನೆಯ ಭಾತ್ ಎಂದರೆ ಅದು ಟೊಮೆಟೊ ಭಾತ್ ಪಾಕವಿಧಾನ.

ರುಮಾಲಿ ರೋಟಿ ರೆಸಿಪಿ | rumali roti in kannada | ಮಂಡಾ ರೋಟಿ

ರುಮಾಲಿ ರೋಟಿ ಪಾಕವಿಧಾನ | ಲಂಬೂ ರೋಟಿ | ಮನೆಯಲ್ಲಿ ಹೋಟೆಲ್ ಶೈಲಿಯ ಮಂಡಾ ರೋಟಿಯ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ರೊಟ್ಟಿ ಅಥವಾ ನಾನ್ ಪಾಕವಿಧಾನಗಳು ಭಾರತದಾದ್ಯಂತ ಬಹಳ ಸಾಮಾನ್ಯವಾಗಿದೆ ಮತ್ತು ದಿನನಿತ್ಯದ ಊಟಕ್ಕೆ ಇದು ಅವಶ್ಯಕವಾಗಿದೆ. ಸಾಮಾನ್ಯವಾಗಿ, ಇದನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ ಮತ್ತು ದುಂಡಗಿನ ಆಕಾರದಲ್ಲಿರುತ್ತದೆ, ಆದರೆ ಬೇರೆ ಹಿಟ್ಟಿನಿಂದ ಕೂಡ ತಯಾರಿಸಬಹುದು. ಮೈದಾದಿಂದ ತಯಾರಿಸಿದ ಅಂತಹ ಸುಲಭವಾದ, ಸರಳವಾದ ಭಾರತೀಯ ಫ್ಲಾಟ್‌ಬ್ರೆಡ್ ಪಾಕವಿಧಾನವೆಂದರೆ ರುಮಾಲಿ ರೋಟಿ ಪಾಕವಿಧಾನ, ಇದು ವಿನ್ಯಾಸ ಮತ್ತು ರುಚಿಗೆ ಅತ್ಯಂತ ಹೆಸರುವಾಸಿಯಾಗಿದೆ.

ಪೊಟಾಟೋ ಚಿಪ್ಸ್ ರೆಸಿಪಿ | potato chips in kannada | ಆಲೂಗೆಡ್ಡೆ ಚಿಪ್ಸ್

ಪೊಟಾಟೋ ಚಿಪ್ಸ್ ಪಾಕವಿಧಾನ। ಆಲೂಗೆಡ್ಡೆ ಚಿಪ್ಸ್। ಆಲೂ ಚಿಪ್ಸ್ ಹಂತ ಹಂತವಾಗಿ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಚಿಪ್ಸ್ ಅಥವಾ ಫ್ರೈಸ್ ಪ್ರಪಂಚದಾದ್ಯಂತ ಸಾಮಾನ್ಯ ತಿಂಡಿಯಾಗಿದೆ. ಇದರ ಮಸಾಲೆಯು ಅಗ್ರಸ್ಥಾನದಲ್ಲಿದ್ದು ಇದು  ವ್ಯಾಪಕ ಶ್ರೇಣಿಯನ್ನು ಹೊಂದಿ, ಹೆಚ್ಚುವರಿ ರುಚಿಯನ್ನು ನೀಡುತ್ತದೆ. ಇನ್ನೂ ಮೆಣಸಿನ ಹುಡಿ ಮತ್ತು ಉಪ್ಪು ರುಚಿಯ ಆಲೂಗೆಡ್ಡೆ ಚಿಪ್ಸ್ ಪಾಕವಿಧಾನ ಪ್ರಖ್ಯಾತವಾಗಿದೆ ಮತ್ತು ಕಿರಾಣಿ ಅಂಗಡಿಗೆ ಹೋಗದೆ  ಶೀಘ್ರವಾಗಿ ತಯಾರಿಸಬಹುದಾಗಿದೆ.

ಕಡಿ ಪಕೋಡ ರೆಸಿಪಿ | kadhi pakora in kannada | ಪಂಜಾಬಿ ಕಡಿ

ಕಡಿ ಪಕೋಡ ಪಾಕವಿಧಾನ | ಪಂಜಾಬಿ ಕದಿ ಪಾಕವಿಧಾನ | ಪಕೋಡೆವಾಲಿ ಕಡಿಯ ಹಂತ ಹಂತವಾಗಿ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಬೇಸನ್ ಅಥವಾ ಕಡಲೆ ಹಿಟ್ಟು ಆಧಾರಿತ ಪಾಕವಿಧಾನಗಳು ಭಾರತದಾದ್ಯಂತ ಬಹಳ ಸಾಮಾನ್ಯವಾಗಿದೆ. ಇದನ್ನು ಸಾಮಾನ್ಯವಾಗಿ ವಿವಿಧ ರೀತಿಯ ತಿಂಡಿ ಪಾಕವಿಧಾನಗಳಿಗೆ ಬಳಸಲಾಗುತ್ತದೆ, ಅಲ್ಲಿ ಡೀಪ್-ಫ್ರೈಡ್ ಸ್ನ್ಯಾಕ್ ಗಳಿಗೆ ಬೇಸನ್ ಬ್ಯಾಟರ್ ಅನ್ನು ಬಳಸಲಾಗುತ್ತದೆ. ಆದಾಗ್ಯೂ, ಪಂಜಾಬಿ ಕಡಿ ಪಾಕವಿಧಾನದಂತಹ ಇತರ ಪಾಕವಿಧಾನಗಳಲ್ಲಿಯೂ ಇದನ್ನು ಬಳಸಬಹುದು, ಅಲ್ಲಿ ಕಡಲೆ ಹಿಟ್ಟು ಮತ್ತು ಮೊಸರು ಬೆರೆಸಿ ದಪ್ಪ ಹಾಗೂ ಕೆನೆಯುಕ್ತ ಮೇಲೋಗರವನ್ನು ರೂಪಿಸುತ್ತದೆ.

ಮಿಲ್ಕ್ಮೇಡ್ ರೆಸಿಪಿ | milkmaid in kannada | ಕಂಡೆನ್ಸ್ಡ್ ಮಿಲ್ಕ್ ಪಾಕವಿಧಾನ

ಮಿಲ್ಕ್ಮೇಡ್ ರೆಸಿಪಿ | ಕಂಡೆನ್ಸ್ಡ್ ಮಿಲ್ಕ್ ಪಾಕವಿಧಾನ | 3 ನಿಮಿಷಗಳಲ್ಲಿ ಮನೆಯಲ್ಲಿ ತಯಾರಿಸಿದ ಮಿಲ್ಕ್‌ಮೇಡ್ ನ ಹಂತ ಹಂತವಾಗಿ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಕಂಡೆನ್ಸ್ಡ್ ಮಿಲ್ಕ್ ಅಥವಾ ಮಿಲ್ಕ್‌ಮೇಡ್ ಭಾರತೀಯ ಸಿಹಿತಿಂಡಿಗಳಿಗೆ ಅತ್ಯಗತ್ಯವಾದ ಪಾಕವಿಧಾನವಾಗಿದೆ. ಸಾಮಾನ್ಯವಾಗಿ, ಇದು ಅಂಗಡಿಯಿಂದ ಖರೀದಿಸಲ್ಪಟ್ಟಿದ್ದು, ಇದು ಒಂದೆರಡು ವಾರಗಳವರೆಗೆ ಸುಲಭವಾಗಿ ಉಳಿಯುತ್ತದೆ ಮತ್ತು ಯಾವುದೇ ಸಮಯದಲ್ಲಿ ಬಳಸಬಹುದು. ಆದರೆ ಇವು ತುಂಬಾ ದುಬಾರಿಯಾದ ಕಾರಣ ಇದನ್ನು ಮನೆಯಲ್ಲಿಯೇ ಮಾಡುವುದು ಒಳ್ಳಯದು ಎನಿಸುತ್ತದೆ.

ಕಾಜು ಪಿಸ್ತಾ ರೋಲ್ ರೆಸಿಪಿ | kaju pista roll in kannada  

ಕಾಜು ಪಿಸ್ತಾ ರೋಲ್ ರೆಸಿಪಿ | ಗೋಡಂಬಿ ಪಿಸ್ತಾ ರೋಲ್ | ಕಾಜು ಕತ್ಲಿ ಪಿಸ್ತಾ ರೋಲ್ ನ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಗೋಡಂಬಿ ಮತ್ತು ಪಿಸ್ತಾ ಆಧಾರಿತ ಸಿಹಿ ಪಾಕವಿಧಾನಗಳು ಭಾರತೀಯ ಪಾಕಪದ್ಧತಿಯಲ್ಲಿ ಬಹಳ ಸಾಮಾನ್ಯವಾಗಿದೆ. ಇದನ್ನು ಭಾರತದಾದ್ಯಂತ ಬಳಸಲಾಗುತ್ತದೆ, ಮತ್ತು ಇದು ಬಾಯಲ್ಲಿ ನೀರೂರಿಸುವ ಮತ್ತು ಬಾಯಿಗೆ ಹಾಕಿದರೆ ಕರಗುವ ಪಾಕವಿಧಾನವಾಗಿದೆ. ಕೆನೆಯುಕ್ತ ವಿನ್ಯಾಸಕ್ಕೆ ಹೆಸರುವಾಸಿಯಾದ ಒಂದು ಸುಲಭ ಮತ್ತು ಸರಳ ಗೋಡಂಬಿ ಮತ್ತು ಪಿಸ್ತಾ ಆಧಾರಿತ ಸಿಹಿತಿಂಡಿಯೇ ಗೋಡಂಬಿ ಈ ಪಿಸ್ತಾ ರೋಲ್ ರೆಸಿಪಿ.

STAY CONNECTED

12,680,889ಅಭಿಮಾನಿಗಳುಇಷ್ಟ
3,357,073ಅನುಯಾಯಿಗಳುಅನುಸರಿಸಿ
6,750,008ಚಂದಾದಾರರುಚಂದಾದಾರರಾಗಬಹುದು