ಟೊಮೆಟೊ ಈರುಳ್ಳಿ ಪರಾಟ ಪಾಕವಿಧಾನ | ಪ್ಯಾಜ್ ಟಮಾಟರ್ ಪರಾಟ | ಟಮಾಟರ್ ಪ್ಯಾಜ್ ಪರಾಟದ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಪರಾಟ ಅಥವಾ ಮಸಾಲೆಯುಕ್ತ ಫ್ಲಾಟ್ಬ್ರೆಡ್ಸ್ ಭಾರತದಾದ್ಯಂತ ಜನಪ್ರಿಯ ಊಟದ ಆಯ್ಕೆಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ, ಸ್ಟಫ್ಡ್ ಪರಾಟ ಬೇಯಿಸಿದ ಅಥವಾ ಹಿಸುಕಿದ ತರಕಾರಿಗಳೊಂದಿಗೆ ತಯಾರಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಮೇಲೋಗರದ ಆಯ್ಕೆಯೊಂದಿಗೆ ಬಡಿಸಲಾಗುತ್ತದೆ. ಆದರೆ ಪ್ರತಿ ದಿನ ಬಳಸುವ ಈರುಳ್ಳಿ, ಟೊಮೆಟೊಗಳೊಂದಿಗೆ ಸಹ ಸ್ಟಫಿಂಗ್ ಅನ್ನು ತಯಾರಿಸಬಹದು ಮತ್ತು ಟೊಮೆಟೊ ಈರುಳ್ಳಿ ಪರಾಟ ಅಂತಹ ಒಂದು ಪಾಕವಿಧಾನವಾಗಿದೆ.
ಹಸಿರು ಪಪಾಯದ ರೋಟಿ ಪಾಕವಿಧಾನ | ಪಪೀತ ಕಾ ರೋಟಿ | ಹೃದಯ ಮತ್ತು ಕ್ಯಾನ್ಸರ್ಗಾಗಿ ಆರೋಗ್ಯಕರ ರೋಟಿಯ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಅಕ್ಕಿ ಹಿಟ್ಟಿನ ರೊಟ್ಟಿ ಅಥವಾ ಅಕ್ಕಿ ರೊಟ್ಟಿ ಪಾಕವಿಧಾನಗಳು ದಕ್ಷಿಣ ಭಾರತೀಯ ಉಪಹಾರ ವಿಭಾಗದಲ್ಲಿ ಬಹಳ ಸಾಮಾನ್ಯವಾಗಿದೆ. ಸಾಮಾನ್ಯವಾಗಿ, ಇದನ್ನು ಇನ್ನಷ್ಟು ರುಚಿಕರ ಮಾಡಲು ಅಕ್ಕಿ ಹಿಟ್ಟಿನ ಜೊತೆ ಫ್ಲೇವರ್ ಉಳ್ಳ ಗಿಡಮೂಲಿಕೆಗಳನ್ನು ಮತ್ತು ತರಕಾರಿ ತುರಿಯನ್ನು ಸೇರಿಸಲಾಗುತ್ತದೆ. ಆದರೆ ಅದೇ ರೊಟ್ಟಿಯನ್ನು ಆರೋಗ್ಯಕರ ಮತ್ತು ಪೌಷ್ಟಿಕವಾಗಿ ಮಾಡಲು ಕಚ್ಚಾ ಪಪ್ಪಾಯ ತುರಿ ಸೇರಿಸಿ ಸಹ ವಿಸ್ತರಿಸಬಹುದು.
ಆಲೂ ಪಫ್ ಪಾಕವಿಧಾನ | ಆಲೂ ಪ್ಯಾಟಿಸ್ ಪಫ್ | ಮನೆಯಲ್ಲಿ ಹಾಳೆಗಳನ್ನು ತಯಾರಿಸಿ ಆಲೂಗಡ್ಡೆ ಪ್ಯಾಟೀಸ್ ಮಾಡುವುದು ಹೇಗೆ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಪಫ್ ಪಾಕವಿಧಾನಗಳು ಭಾರತದಾದ್ಯಂತ ಜನಪ್ರಿಯ ಚಹಾ ಸಮಯದ ತಿಂಡಿಗಳಲ್ಲಿ ಒಂದಾಗಿದೆ ಮತ್ತು ಅನೇಕ ಫ್ಲೇವರ್ಸ್ ಗಳಲ್ಲಿ ಸಿಗುತ್ತವೆ. ಇದು ಯಾವಾಗಲೂ ಬೇಕರಿಯಲ್ಲಿ ತಯಾರಿಸಲಾಗುತ್ತದೆ ಮತ್ತು ಮನೆಯಲ್ಲಿ ಸಿದ್ಧಪಡಿಸಾಲು ಬಹಳ ಕಷ್ಟ ಎಂದು ಎಲ್ಲರೂ ಅಂದುಕೊಳ್ಳುತ್ತೇವೆ. ಹಾಗಾಗಿ ಇದನ್ನು ತಪ್ಪು ಎಂದು ಸಾಬೀತುಪಡಿಸಲು, ನಾನು ಅಲೋ ಪ್ಯಾಟಿಸ್ ಪಫ್ ಎಂದು ಕರೆಯಲ್ಪಡುವ ಈ ಸರಳ ಮತ್ತು ಸುಲಭ ಆಲೂಗಡ್ಡೆ ಆಧಾರಿತ ಪಫ್ ಪಾಕವಿಧಾನವನ್ನು ತೋರಿಸುತ್ತಿದ್ದೇನೆ.
ಸ್ಟೀಮ್ ಮಡಿದ ಬನ್ ಪಾಕವಿಧಾನ | ಆಲೂ ಮಸಾಲಾ ಸ್ಟಫ್ಡ್ ಬನ್ಗಳು | ಮೃದುವಾದ ಫ್ಲಫಿ ಸ್ಟೀಮ್ಡ್ ಬನ್ ನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಬ್ರೆಡ್ ಆಧಾರಿತ ಬನ್ ಯಾವಾಗಲೂ ನಮ್ಮಲ್ಲಿ ಹೆಚ್ಚಿನವರಿಗೆ ಸಾಮಾನ್ಯವಾದ ಸ್ನ್ಯಾಕ್ ಮತ್ತು ಇದು ಊಟದ ಜೊತೆಗೆ ಅಥವಾ ಒಂದು ಕಪ್ ಬಿಸಿ ಪಾನೀಯದ ಜೊತೆಗೆ ಬಡಿಸಲಾಗುತ್ತದೆ. ಇವುಗಳು ಸಾಮಾನ್ಯವಾಗಿ ಮೃದುತ್ವ ಮತ್ತು ವಿನ್ಯಾಸವನ್ನು ನೀಡುವ ನಿರ್ದಿಷ್ಟ ತಾಪಮಾನದಲ್ಲಿ ಓವೆನ್ ನಲ್ಲಿ ತಯಾರಿಸಲಾಗುತ್ತದೆ. ಆದರೆ ಇದನ್ನು ಸ್ಟೀಮ್ ಸಹ ಮಾಡಲಾಗುತ್ತದೆ ಮತ್ತು ಆಲೂ ಮಸಾಲಾ ಸ್ಟಫ್ಡ್ ಬನ್ ಅಂತಹ ಒಂದು ಸರಳ ಪಾಕವಿಧಾನ.
ಲಚ್ಚಾ ಪರಾಟ ವೆಜ್ ಫ್ರಾಂಕಿ ರೆಸಿಪಿ | ಲಚ್ಚಾ ಕಾಟಿ ರೋಲ್ | ಲೇಯರ್ಡ್ ಪರಾಟ ರೋಲ್ ನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಕಾಟಿ ರೋಲ್ ಅಥವಾ ಫ್ರಾಂಕಿ ಯಾವಾಗಲೂ ನಗರ ನಿವಾಸಿಗಳ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ. ವಿಶಿಷ್ಟವಾಗಿ ಇದನ್ನು ಗೋಧಿ ಹಿಟ್ಟು ಅಥವಾ ಮೈದಾ ಆಧಾರಿತ ಚಪಾತಿ ಅಥವಾ ರೋಟಿಯೊಂದಿಗೆ ತಯಾರಿಸಲಾಗುತ್ತದೆ, ಆದರೆ ಇತರ ರೂಪಗಳಲ್ಲಿ ಸಹ ಪ್ರಯೋಗಿಸಬಹುದು. ಅಂತಹ ಒಂದು ನವೀನ ಮತ್ತು ಆಸಕ್ತಿದಾಯಕ ಸ್ನ್ಯಾಕ್ ಮೀಲ್ ಈ ಲಚ್ಚಾ ಪರಾಟ ವೆಜ್ ಫ್ರಾಂಕಿ ಪಾಕವಿಧಾನವಾಗಿದ್ದು. ಇದರ ಫ್ಲೇಕಿತನ ಮತ್ತು ಗರಿಗರಿತನಕ್ಕೆ ಹೆಸರುವಾಸಿಯಾಗಿದೆ.
ರವೆ ಕೇಕ್ ರೆಸಿಪಿ | ಕುಕ್ಕರ್ನಲ್ಲಿ ರವಾ ಕೇಕ್ | ಪ್ಯಾನ್ ನಲ್ಲಿ ಮೊಟ್ಟೆಯಿಲ್ಲದ ಸೂಜಿ ಕಾ ಕೇಕ್ ನ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಅಗತ್ಯ ವಿನ್ಯಾಸವನ್ನು ಪಡೆಯಲು ಕೇಕ್ ಪಾಕವಿಧಾನಗಳನ್ನು ಸಾಂಪ್ರದಾಯಿಕವಾಗಿ ಮೈದಾದಿಂದ ತಯಾರಿಸಲಾಗುತ್ತದೆ. ಇದಲ್ಲದೆ, ಈ ಕೇಕ್ಗಳನ್ನು ತಯಾರಿಸಲು ಓವೆನ್ ನಲ್ಲಿ ಬೇಕ್ ಮಾಡಲಾಗುತ್ತದೆ ಮತ್ತು ಇದು ಎಲ್ಲರ ಮನೆಯಲ್ಲಿ ಲಭ್ಯವಿಲ್ಲದಿರಬಹುದು. ಆದ್ದರಿಂದ ಈ ಸೂಜಿ ಕೇಕ್ ಗೆ ಹಲವು ಮಾರ್ಪಾಡುಗಳಿವೆ ಮತ್ತು ಮೊಟ್ಟೆ ಇಲ್ಲದೆ ಪ್ಯಾನ್ ನಲ್ಲಿ ಕೇಕ್ ತಯಾರಿಸವುದು ಅಂತಹ ಒಂದು ಮಾರ್ಪಾಡು.